Tag: ಸತ್ಯ

  • ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ

    ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿ ಜನಪ್ರಿಯತೆಯಲ್ಲೂ ಮುಂದಿದೆ. ಸತ್ಯಳ ಧೈರ್ಯ, ಅವಳ ಸಾಹಸಗಾಥೆ, ಹೇರ್ ಸ್ಟೈಲ್, ಅವಳ ಮ್ಯಾನರಿಸಂ ಹೀಗೆ ಸಾಕಷ್ಟು ರೀತಿಯಲ್ಲಿ ಪ್ರೇಕ್ಷಕರು ಸತ್ಯಳನ್ನು ಅನುಕರಿಸುತ್ತಾರೆ. ಆದರೆ, ಇದೇ ಸತ್ಯ  ಇದೀಗ ತಮಿಳಿನ ಖ್ಯಾತ ನಟಿ ನಯನತಾರಾ ಅವರನ್ನು ಫಾಲೋ ಮಾಡಿದ್ದಾರೆ. ಗೌತಮಿಯ ಫೆವರೇಟ್ ನಟಿ ನಯನತಾರಾ ಆಗಿರುವುದರಿಂದ ಅದೇ ರೀತಿಯಲ್ಲಿ ಫೋಟೋ ಶೂಟ್ ಅನ್ನು ಮಾಡಿಸಿಕೊಂಡಿದ್ದಾರೆ.

    ನಯನತಾರಾ ಮದುವೆಯಲ್ಲಿ ವಿಶೇಷ ಕಾಸ್ಟ್ಯೂಮ್ ನಲ್ಲಿ ಕಂಗೊಳಿಸಿದ್ದರು. ಮದುವೆಯಲ್ಲಿ ತೊಟ್ಟಿದ್ದ ಕೆಂಪು ಸೀರೆಗೆ ಅನೇಕರು ಫಿದಾ ಆಗಿದ್ದರು. ಆ ಕಡು ಕೆಂಪು ಬಣ್ಣದ ಸೀರೆಯ ಜೊತೆಗೆ ಹಸಿರು ಬಣ್ಣದ ಜ್ಯುವೆಲರಿ ಕೂಡ ಎಲ್ಲರ ಗಮನ ಸೆಳೆದಿತ್ತು. ಆ ಸೀರೆಯ ಬೆಲೆ ಮತ್ತು ಜ್ಯುವೆಲರಿಯ ಡಿಸೈನ್ ಮೆಚ್ಚುಗೆಗೆ ಪಾತ್ರವಾಗಿತ್ತು. ಹೊಯ್ಸಳ ಕಾಲದ ಲುಕ್ ಹೊಂದಿದ್ದರಿಂದ ಇತಿಹಾಸವನ್ನೂ ಕೆದುಕುವ ಪ್ರಯತ್ನ ಮಾಡಲಾಗಿತ್ತು. ಅದೇ ಸೀರೆಗೆ ಗೌತಮಿ ಫಿದಾ ಆಗಿದ್ದಾರೆ. ಇದನ್ನೂ ಓದಿ: ಮುಗ್ದ ಗಂಡದಿಂದರ ಪಾಲಿಗೆ ಉಡುಗೊರೆಯಾಗಲಿದೆಯಾ ಈ ವೆಡ್ಡಿಂಗ್ ಗಿಫ್ಟ್?

    ಗೌತಮಿ ಕೂಡ ಕಡು ಕೆಂಪು ಬಣ್ಣದ ಸೀರೆ ಮತ್ತು ಹಸಿರು ಬಣ್ಣದ ಜ್ಯುವೆಲರ್ ಹಾಕಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಅವರು ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋಗಳು ಇದೀಗ ಸಖತ್ ವೈರಲ್ ಕೂಡ ಆಗಿದೆ. ಸತ್ಯಳನ್ನು ಫಾಲೋ ಮಾಡುತ್ತಿದ್ದವರು, ಸತ್ಯಳ ನೆಚ್ಚಿನ ನಟಿಯ ಬಗ್ಗೆ ತಿಳಿದುಕೊಂಡು, ಇಬ್ಬರನ್ನೂ ಫಾಲೋ ಮಾಡುವುದಾಗಿ ಕೆಲವರು ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಿಕೆಶಿ ಸತ್ಯ ಹೇಳಿದ್ರೆ ಇಡಿಯವರು ಸಮಾಧಾನ ಆಗ್ತಾರೆ: ಸಿಟಿ ರವಿ

    ಡಿಕೆಶಿ ಸತ್ಯ ಹೇಳಿದ್ರೆ ಇಡಿಯವರು ಸಮಾಧಾನ ಆಗ್ತಾರೆ: ಸಿಟಿ ರವಿ

    – ಭ್ರಷ್ಟಾಚಾರಿಗಳಿಗೆ ಜಾತಿ ಎಂಬುದಿಲ್ಲ

    ಶಿವಮೊಗ್ಗ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇರುವ ಸತ್ಯ ಹೇಳಿದರೆ ಇಡಿಯವರು ಸಮಾಧಾನವಾಗುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

    ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇಡಿ ಅಧಿಕಾರಿಗಳಿಗೆ ಡಿಕೆಶಿ ಅವರಿಂದ ಸಮಗ್ರ ಮಾಹಿತಿ ಸಿಕ್ಕಿಲ್ಲ ಅನಿಸುತ್ತೆ. ಸತ್ಯ ಹೇಳುವುದಕ್ಕೆ ಬಹಳ ಸಮಯ ಬೇಡ, ಬಹಳ ಎಳೆದುಕೊಂಡು ಹೋದರೆ ಒಳ್ಳೆಯದು ಅಲ್ಲ ಎಂದರು.

    ಇಡಿ ತನಿಖೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ನ್ಯಾಯಾಲಯ ವಿಚಾರಣೆಯ ಅವಧಿಯನ್ನು ವಿಸ್ತರಣೆ ಮಾಡಿದೆ. ಇದರಲ್ಲಿ ಬಿಜೆಪಿಯ ಯಾವುದೇ ಹಸ್ತಕ್ಷೇಪ ಇಲ್ಲ. ಇರುವ ಸತ್ಯವನ್ನು ಹೇಳಿದರೆ ಇಡಿಯವರು ಸಮಾಧಾನವಾಗುತ್ತಾರೆ. ಅಲ್ಲದೇ ಇಡಿ ತನಿಖೆ ತಪ್ಪಿಸಿಕೊಂಡು ಮುಂದಿನ ತನಿಖೆಗೆ ಸಿದ್ಧವಾಗಬಹುದು ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.

    ಭ್ರಷ್ಟಾಚಾರಿಗಳಿಗೆ ಜಾತಿ ಎಂಬುದಿಲ್ಲ. ಸಮುದಾಯದ ಹಿತ, ಸಮಾಜದ ಹಿತ ಬಯಸಿ ಕೆಲಸ ಮಾಡಿರುವವರನ್ನು ಜನತೆ ನೇತಾರ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಭಟ್ಟಂಗಿಗಳು ಹೊಗಳುವವರನ್ನು, ದುಡ್ಡು ಇದೆ ಎನ್ನುವ ಕಾರಣಕ್ಕೆ ಭವಿಷ್ಯದಲ್ಲಾಗಲಿ, ವರ್ತಮಾನದಲ್ಲಾಗಲಿ ನೇತಾರ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

  • ಉತ್ತರ ಪತ್ರಿಕೆಯಲ್ಲಿ ಬಾಲಕಿ ಬರೆದಳು ಎಲ್ಲರೂ ಬೆಚ್ಚಿಬೀಳಿಸುವ ಸತ್ಯ

    ಉತ್ತರ ಪತ್ರಿಕೆಯಲ್ಲಿ ಬಾಲಕಿ ಬರೆದಳು ಎಲ್ಲರೂ ಬೆಚ್ಚಿಬೀಳಿಸುವ ಸತ್ಯ

    ಗುರುಗ್ರಾಮ: ಅಪ್ರಾಪ್ತೆಯೊಬ್ಬಳು ತನಗಾಗಿರುವ ಅತ್ಯಾಚಾರದ ಬಗ್ಗೆ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆದು ಎಲ್ಲರನ್ನು ಬೆಚ್ಚಿಬೀಳಿಸಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ

    15 ವರ್ಷದ ಅಪ್ರಾಪ್ತೆಯೊಬ್ಬಳು ತಾನೂ ಅತ್ಯಾಚಾರಕ್ಕೆ ಒಳಗಾಗಿರುವ ಬಗ್ಗೆ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಳು. ಸದ್ಯ ಬಾಲಕಿಗೆ ಆದ ಅನ್ಯಾಯ ಈಗ ಬೆಳಕಿಗೆ ಬಂದಿದ್ದು, ಪೊಲೀಸರು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ.

    ನಾನು ಈಗ 10ನೇ ತರಗತಿ ಓದುತ್ತಿದ್ದೇನೆ. ನನ್ನ ಅಪ್ರಾಪ್ತ ಸಹೋದರ ಹಾಗೂ 23 ವರ್ಷದ ಬಾದಶಾಪುರ ಯುವಕನೊಬ್ಬ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಬಾಲಕಿ ತನ್ನ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆದು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

    ಅಕ್ಟೋಬರ್ 1ರಂದು ಬಾಲಕಿ ತನ್ನ ಮೇಲೆ ಆಗಿರುವ ಅತ್ಯಾಚಾರದ ಬಗ್ಗೆ ಬರೆದಿದ್ದಳು. ಆಗ ಶಾಲೆಯ ಸಿಬ್ಬಂದಿಯವರು ಬಾಲಕಿಯ ಉತ್ತರ ಪತ್ರಿಕೆ ನೋಡಿ ಆಕೆಗೆ ಆಗಿರುವ ಅನ್ಯಾಯವನ್ನು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಪೊಲೀಸರು ಪೋಸ್ಕೋ ಕಾಯ್ದೆ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಅಪ್ರಾಪ್ತ ಬಾಲಕ ಹಾಗೂ ಯುವಕ ಈ ಕೃತ್ಯವೆಸಗಿದ್ದು, ಇಬ್ಬರಲ್ಲಿ ಒಬ್ಬ ಬಾಲಕಿಗೆ ಸಹೋದರ ಆಗಬೇಕು. ಬಾಲಕಿಯ ತಾಯಿ ಹಾಗೂ ಆರೋಪಿಯ ತಾಯಿ ಸಹೋದರಿಯರು ಎಂದು ತಿಳಿದು ಬಂದಿದೆ. ಸದ್ಯ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಎಸಿಪಿ ಶಕುಂತಲಾ ಯಾದವ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಚಿತಾ ರಾಮ್ ಈಗ ಏಪ್ರಿಲ್ ಡಿಸೋಜಾ – ಗುಳಿಕೆನ್ನೆಯಲ್ಲಿ ಅರಳಲಿದೆ ವಸಂತಮಾಸ!

    ರಚಿತಾ ರಾಮ್ ಈಗ ಏಪ್ರಿಲ್ ಡಿಸೋಜಾ – ಗುಳಿಕೆನ್ನೆಯಲ್ಲಿ ಅರಳಲಿದೆ ವಸಂತಮಾಸ!

    ಬೆಂಗಳೂರು: ಸೀರಿಯಲ್ ಗಳಲ್ಲಿ ನಟಿಸುತ್ತಲೇ ಚಿತ್ರರಂಗಕ್ಕೆ ಬಂದು ದರ್ಶನ್ ರಂಥಾ ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸಿದವರು ರಚಿತಾ ರಾಮ್. ಆ ನಂತರದಲ್ಲಿ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿರೋ ರಚಿತಾ ಈ ಕ್ಷಣದಲ್ಲಿಯೂ ಸೀತಾರಾಮ ಕಲ್ಯಾಣ, ಅಯೋಗ್ಯ ಸೇರಿದಂತೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಮಹಿಳಾ ಪ್ರಧಾನ ಚಿತ್ರವೊಂದರಲ್ಲಿ ನಟಿಸಲು ರಚಿತಾ ಒಪ್ಪಿಕೊಂಡಿದ್ದಾರೆ.

    ಈ ವಿಚಾರವನ್ನು ಖುಷಿಯಿಂದಲೇ ರಚಿತಾ ಹೇಳಿಕೊಂಡಿದ್ದಾರೆ. ಇದು 8 ಎಂಎಂ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಸತ್ಯ ನಿರ್ದೇಶನದ ಎರಡನೇ ಚಿತ್ರ. ಒಂದು ಹೆಣ್ಣಿನ ಸುತ್ತಾ ನಡೆಯೋ ಥ್ರಿಲ್ಲರ್ ಕತೆ ಹೊಂದಿರೋ ಈ ಚಿತ್ರದಲ್ಲಿ ರಚಿತಾ ಕೇಂದ್ರ ಬಿಂದುವಾಗಿ ನಟಿಸಲಿದ್ದಾರೆ. ಇದುವರೆಗಿನ ಪಾತ್ರಗಳಿಗಿಂತಲೂ ಚಾಲೆಂಜಿಂಗ್ ಆಗಿರೋ ಈ ಪಾತ್ರವನ್ನು ಬಹಳಷ್ಟು ಇಷ್ಟಪಟ್ಟೇ ಅವರು ಒಪ್ಪಿಕೊಂಡಿದ್ದಾರಂತೆ.

    ಈ ಚಿತ್ರಕ್ಕೆ ಏಪ್ರಿಲ್ ಎಂಬ ಹೆಸರಿಡಲಾಗಿದೆಯಂತೆ. ಏಪ್ರಿಲ್ ತಿಂಗಳಿಗೂ ಈ ಚಿತ್ರಕ್ಕೂ ಏನಾದರೂ ಲಿಂಕಿದೆಯಾ ಅಂತ ನೋಡ ಹೋದರೆ, ಈ ಚಿತ್ರದಲ್ಲಿ ರಚಿತಾ ನಟಿಸಲಿರೋ ಪಾತ್ರದ ಹೆಸರೇ ಏಪ್ರಿಲ್ ಡಿಸೋಜಾ ಎಂಬ ಕುತೂಹಲಕಾರಿ ವಿಚಾರವೂ ಬಯಲಾಗುತ್ತದೆ. ಇನ್ನು ವಸಂತ ಮಾಸದ ಎರಡನೇ ತಿಂಗಳಾದ ಏಪ್ರಿಲ್ ಗೆ ಋತುಮಾನದ ವಿಶೇಷ ಗುಣಗಳೂ ಇರೋದರಿಂದ ಅದನ್ನೇ ಈ ಚಿತ್ರದ ಶೀರ್ಷಿಕೆಯಾಗಿಸಲಾಗಿದೆಯಂತೆ.

    ಇದುವರೆಗೂ ಪಕ್ಕಾ ಕಮರ್ಷಿಯಲ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ರಚಿತಾಗೆ ಈ ಚಿತ್ರ ಹೊಸ ಅನುಭವವಾಗಲಿದೆ. ಇಡೀ ಚಿತ್ರ ಇವರ ಪಾತ್ರದ ಸುತ್ತಲೇ ಸುತ್ತೋದರಿಂದ ಈ ಚಿತ್ರಕ್ಕೆ ರಚಿತಾ ಅವರೇ ಹೀರೋ ಕಮ್ ಹೀರೋಯಿನ್. ಈಗಾಲೇ ಬಿಡುಗಡೆಯಾಗಿರೋ ಫಸ್ಟ್ ಲುಕ್ಕಿನಲ್ಲಿ ರಚಿತಾ ಪಾತ್ರದ ತೂಕದ ಅಂದಾಜು ಸಿಕ್ಕಿದೆ.

  • Exclusive: ಲವ್ ಜಿಹಾದ್ ಕೇಸ್ ನಲ್ಲಿ ಕರ್ನಾಟಕ ಡಿಸಿ ಕುಟುಂಬವೇ ಭಾಗಿ!

    Exclusive: ಲವ್ ಜಿಹಾದ್ ಕೇಸ್ ನಲ್ಲಿ ಕರ್ನಾಟಕ ಡಿಸಿ ಕುಟುಂಬವೇ ಭಾಗಿ!

    ಬೆಂಗಳೂರು: ಲವ್ ಜಿಹಾದ್ ಕೇಸ್ ನಲ್ಲಿ ಕರ್ನಾಟಕ ಡಿಸಿ ಕುಟುಂಬವೇ ಭಾಗಿಯಾಗಿದ್ದು, ಮನೆ ಮೇಲೆ ದಾಳಿ ಮಾಡಿದಾಗ ಸ್ಫೋಟಕ ರಹಸ್ಯ ಹೊರ ಬಂದಿದೆ.

    ಜನವರಿಯಲ್ಲಿ ದಾಖಲಾದ ಕೇರಳ ಯುವತಿಯ ಲವ್ ಜಿಹಾದ್ ಕೇಸ್ ನಲ್ಲಿ ಕಲಬುರುಗಿಯ ಕಮರ್ಷಿಯಲ್ ಟ್ಯಾಕ್ಸ್ ನ ಡಿಸಿ ಇರ್ಷಾದುಲ್ಲಾ ಖಾನ್ ಪತ್ನಿ ಭಾಗಿಯಾಗಿರುವುದು ತಿಳಿದು ಬಂದಿದೆ. ಯುವತಿ ಕೇರಳದ ಕೊಚ್ಚಿಯಿಂದ ಬೆಂಗಳೂರಿಗೆ ಓದಲೆಂದು ಬಂದಿದ್ದಳು. ಆಗ ಬೆಂಗಳೂರಿನ ಬಿಸಿನೆಸ್‍ಮೆನ್ ನಜೀರ್ ಖಾನ್ ಯುವತಿಯನ್ನು ಪ್ರೀತಿಸಿದ್ದನು. ನಂತರ ಆ ಯುವತಿಯ ತಲೆಕೆಡಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದ. ಮತಾಂತರ ಮಾಡಿ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ನಡೆಸಿದ ಬಳಿಕ ನಜೀರ್ ಖಾನ್ ಯುವತಿಯನ್ನು ಡಿಸಿ ಇರ್ಷಾದುಲ್ಲಾ ಖಾನ್ ಮನೆಯಲ್ಲಿ ಇರಿಸಿದ್ದನು.

    ನಜೀರ್ ಯುವತಿಯನ್ನು 15 ದಿನಗಳ ಕಾಲ ಡಿಸಿ ಇರ್ಷಾದುಲ್ಲಾ ಖಾನ್ ಮನೆಯಲ್ಲಿಯೇ ಇರಿಸಿ, ಬಳಿಕ ಆಕೆಯನ್ನು ಸೌದಿಗೆ ಕರೆದುಕೊಂಡು ಹೋಗಿದ್ದನು. ಸೌದಿಯಲ್ಲೂ ಕೂಡ ಯವತಿಯ ಮೇಲೆ ಶೇಖ್ ಗಳಿಂದ ನಿರಂತರ ಅತ್ಯಾಚಾರ ನಡೆದಿದೆ. ಈ ಬಗ್ಗೆ ಯುವತಿ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ನಜೀರ್ ಸೌದಿಯಿಂದ ಬೆಂಗಳೂರಿಗೆ ಮಾರ್ಗ ಮಧ್ಯೆ ಬರುತ್ತಿದ್ದಾಗ ಎನ್‍ಐಎ ತಂಡ ಆತನನ್ನು ಬಂಧಿಸಿ ಯುವತಿ ರಕ್ಷಣೆ ಮಾಡಿ ವಿಚಾರಣೆ ನಡೆಸಿದ್ದಾರೆ.

    ವಿಚಾರಣೆ ನಡೆಸುವಾಗ ಯುವತಿ ಸ್ಫೋಟಕ ಮಾಹಿತಿಯೊಂದನ್ನು ಹೊರ ಹಾಕಿದ್ದು, ಇಡೀ ಲವ್ ಜಿಹಾದ್ ನ ಹಿಂದೆ ಡಿಸಿ ಇರ್ಷಾದುಲ್ಲಾ ಖಾನ್ ಕುಟುಂಬದ ಕೈವಾಡವಿತ್ತು ಎಂದು ತಿಳಿಸಿದ್ದಾಳೆ. ಕೊಚ್ಚಿ ಎನ್‍ಐಎ ಮಾಹಿತಿಯನ್ನು ಆಧರಿಸಿ ಎರಡು ದಿನಗಳ ಹಿಂದೆ ದಾಳಿ ನಡೆಸಿತ್ತು. ದೊಮ್ಮಲೂರು ಬಳಿಯ ಡೈಮಂಡ್ ಡಿಸ್ಟ್ರಿಕ್ಟ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಡಿಸಿ ಇರ್ಷಾದುಲ್ಲಾ ಖಾನ್ ಪತ್ನಿಯ ಅಸಲಿಯತ್ತು ಅನಾವರಣಗೊಂಡಿದೆ. ಡಿಸಿ ಪತ್ನಿಯೇ ಲವ್ ಜಿಹಾದ್ ನ ರೂವಾರಿಯೇ ಎಂದು ಎನ್‍ಐಎ ಮೂಲಗಳು ತಿಳಿಸಿವೆ.

    ಡಿಸಿ ಪತ್ನಿ ಹಿಂದೂ ಯುವತಿಯರ ಹೆಸರಲ್ಲಿ ಫೇಸ್ ಬುಕ್, ಇನ್‍ಸ್ಟಾಗ್ರಾಂ ಖಾತೆ ತೆರೆದಿದ್ದು, ಅಕೌಂಟ್ ಗಳ ಮೂಲಕ ಹಿಂದೂ ಯುವತಿಯರನ್ನು ಸೆಳೆದು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಳು ಎಂಬ ಸತ್ಯ ಬಯಲಿಗೆ ಬಂದಿದೆ. ಸದ್ಯ ಎನ್‍ಐಎ ತಂಡ ಡಿಸಿ ಇರ್ಷಾದುಲ್ಲಾ ಖಾನ್ ಪತ್ನಿಯಿಂದ 8 ಲ್ಯಾಪ್ ಟಾಪ್ ಹಾಗೂ 12 ಮೊಬೈಲ್ ಗಳ ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸುತ್ತಿದ್ದಾರೆ

    ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಡಿಸಿ ಇರ್ಷಾದುಲ್ಲಾ ಖಾನ್, “ಈ ರೀತಿಯ ವಿಚಾರಗಳಿಗೆ ಹೋಗಬೇಡ ಎಂದು ಪತ್ನಿಗೆ ಈ ಹಿಂದೆ ತಿಳಿ ಹೇಳಿದ್ದೇನೆ. ಎನ್‍ಐಎ ತಂಡ ವಿಚಾರಣೆ ನಡೆಸಿದೆ ಹಾಗೂ ಯುವತಿ ನಮ್ಮ ಮನೆಗೆ ಬಂದು ಹೋಗಿದ್ದು ನಿಜ. ನನ್ನ ಪತ್ನಿ ಸಮಾಜ ಸೇವೆಯಲ್ಲಿ ತೊಡಗಿದ್ದು, ಆಕೆಯೇ ಸಹಾಯ ಮಾಡಿರಬಹುದು. ಸದ್ಯ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.

  • ನಿರ್ದೇಶಕ, ನಟ ಸತ್ಯ ನಿಧನಕ್ಕೆ ಕಂಬನಿ ಮಿಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

    ನಿರ್ದೇಶಕ, ನಟ ಸತ್ಯ ನಿಧನಕ್ಕೆ ಕಂಬನಿ ಮಿಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

    ಬೆಂಗಳೂರು: ನಿರ್ದೇಶಕ, ನಟ ಪಿ.ಎನ್ ಸತ್ಯ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಬನಿ ಮಿಡಿದಿದ್ದಾರೆ.

    ಕಳೆದ ಒಂದು ವರ್ಷದಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಸತ್ಯ ಚಿಕಿತ್ಸೆ ಫಲಿಸದೆ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಸುಮಾರು 7.30ಕ್ಕೆ ವಿಧಿವಶರಾಗಿದ್ದಾರೆ. ಇದನ್ನೂ ಓದಿ: ಮೆಜೆಸ್ಟಿಕ್ ಸಿನಿಮಾ ನಿರ್ದೇಶಕ ಪಿ.ಎನ್.ಸತ್ಯ ವಿಧಿವಶ

    ಸದ್ಯ ಬಸವೇಶ್ವರನಗರದ ಸೋದರಿ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ದರ್ಶನ್‍ಗೆ ನಾಯಕ ನಟ ಇಮೇಜ್ ತಂದು ಕೊಟ್ಟಿದ್ದೇ ಈ ಸತ್ಯ.

    ಈ ಬಗ್ಗೆ ದರ್ಶನ್ ಕಂಬನಿ ಮಿಡಿದಿದ್ದು, “ನನ್ನ ಆಪ್ತ ಸ್ನೇಹಿತರಲ್ಲೊಬ್ಬರು, ನನ್ನ `ಮೆಜೆಸ್ಟಿಕ್’ ಚಿತ್ರದ ನಿರ್ದೇಶಕರು ಪಿ.ಎನ್ ಸತ್ಯ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಸತ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ.

    ಮೆಜೆಸ್ಟಿಕ್, ಡಾನ್, ದಾಸ, ಶಾಸ್ತ್ರೀ, ಗೂಳಿ ಸೇರಿದಂತೆ 16 ಚಿತ್ರಗಳನ್ನ ನಿರ್ದೇಶಿಸಿದ್ದ ಸತ್ಯ ಅವರ ಕೊನೆಯ ಚಿತ್ರ ಮರಿ ಟೈಗರ್ ಆಗಿತ್ತು.