Tag: ಸತ್ಯ ಸೀರಿಯಲ್‌

  • ಗೌತಮಿ ದಂಪತಿ ಜೊತೆ ಕುಟುಂಬ ಸಮೇತ ಉಗ್ರಂ ಮಂಜು ಟೆಂಪಲ್ ರನ್

    ಗೌತಮಿ ದಂಪತಿ ಜೊತೆ ಕುಟುಂಬ ಸಮೇತ ಉಗ್ರಂ ಮಂಜು ಟೆಂಪಲ್ ರನ್

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಶೋ ಅದ್ಧೂರಿಯಾಗಿ ತೆರೆಬಿದ್ದಿದೆ. ಶೋ ಮುಗಿದು ಹಲವು ದಿನಗಳು ಕಳೆದಿದೆ. ಹೀಗಿರುವಾಗ ದೊಡ್ಮನೆ ಆಟದ ನಂತರವೂ ಗೌತಮಿ, ಉಗ್ರಂ ಮಂಜು ಗೆಳೆತನ ಮುಂದುವರೆದಿದೆ. ಗೌತಮಿ (Gouthami) ಕುಟುಂಬದಲ್ಲಿ ಮಂಜು ಒಬ್ಬರಾಗಿದ್ದಾರೆ. ಸದ್ಯ ಗೌತಮಿ ದಂಪತಿ ಜೊತೆ ಶ್ರೀ ವನದುರ್ಗಾ ದೇವಾಲಯಕ್ಕೆ (Vanadurga Temple) ಉಗ್ರಂ ಮಂಜು ಕೂಡ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಐಶ್ವರ್ಯ ರೈ ಕಾರಿಗೆ ಬಸ್‌ ಡಿಕ್ಕಿ – ನಟಿ ಸೇಫ್‌

    ಬಿಗ್ ಬಾಸ್‌ನಲ್ಲಿ (Bigg Boss) ಶುರುವಿನಲ್ಲಿ ಗೌತಮಿ, ಮಂಜು ಗೆಳೆತನ ಚೆನ್ನಾಗಿತ್ತು. ಆ ನಂತರ ಗೌತಮಿ ಮತ್ತು ಮಂಜು (Ugramm Manju) ನಡುವೆ ಬಿರುಕು ಮೂಡಿತ್ತು. ಇಬ್ಬರ ಜಿದ್ದಾಜಿದ್ದಿ ಫಿನಾಲೆವರೆಗೂ ಮುಂದುವರೆದಿತ್ತು. ಶೋ ಮುಗಿದ ಬಳಿಕ ಇಬ್ಬರ ನಡುವಿನ ಸ್ನೇಹ ಮತ್ತೆ ಗಟ್ಟಿಯಾಗಿದೆ. ಆಗಾಗ ಗೌತಮಿ ದಂಪತಿಯನ್ನು ಉಗ್ರಂ ಮಂಜು ಭೇಟಿಯಾಗುತ್ತಿರುತ್ತಾರೆ. ಇದನ್ನೂ ಓದಿ:ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ರನ್ಯಾ ರಾವ್‌ ಜಾಮೀನು ಅರ್ಜಿ ಆದೇಶ ಇಂದು

     

    View this post on Instagram

     

    A post shared by Max manju (@maxmanju_official)

    ಗೌತಮಿ ಅವರು ವನದುರ್ಗಾ ದೇವಿಯನ್ನು ಅಪಾರವಾಗಿ ನಂಬುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ವನದುರ್ಗಾ ದೇವಾಲಯ ಇದೆ. ಇಲ್ಲಿಗೆ ಅವರು ಅನೇಕ ಬಾರಿ ಭೇಟಿ ಕೊಟ್ಟಿದ್ದರು. ಈಗ ಮಂಜು ಫ್ಯಾಮಿಲಿ ಹಾಗೂ ಗೌತಮಿ ದಂಪತಿ ಒಟ್ಟಾಗಿ ಈ ದೇವಾಲಯಕ್ಕೆ ತೆರಳಿದ್ದಾರೆ. ಶೋ ಮುಗಿದ ಮೇಲೆಯೂ ಇವರ ಬಾಂಧವ್ಯ ನೋಡಿ ಫ್ಯಾನ್ಸ್‌ ಮೆಚ್ಚುಗೆ ಸೂಚಿಸಿದ್ದಾರೆ.

    ಇನ್ನೂ ‘ಬಿಗ್ ಬಾಸ್’ ಮತ್ತು ‘ಮ್ಯಾಕ್ಸ್’ ಸಿನಿಮಾದ ಸಕ್ಸಸ್ ಬಳಿಕ ಉಗ್ರಂ ಮಂಜು ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗೌತಮಿ ಉತ್ತಮ ಪ್ರಾಜೆಕ್ಟ್‌ಗಳಿಗಾಗಿ ಎದುರು ನೋಡ್ತಿದ್ದಾರೆ.

  • ಹೆಣ್ಣು ಮಗುವನ್ನು ಬರಮಾಡಿಕೊಂಡ ‘ಸತ್ಯ’ ಸೀರಿಯಲ್ ಹೀರೋ

    ಹೆಣ್ಣು ಮಗುವನ್ನು ಬರಮಾಡಿಕೊಂಡ ‘ಸತ್ಯ’ ಸೀರಿಯಲ್ ಹೀರೋ

    ಕಿರುತೆರೆಯ ಜನಪ್ರಿಯ ‘ಸತ್ಯ’ ಸೀರಿಯಲ್ ಹೀರೋ ಸಾಗರ್ ಬಿಳಿಗೌಡ (Sagar Biligowda) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸಾಗರ್ ಪತ್ನಿ ಸಿರಿ ರಾಜು (Siri Raju) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದಾರೆ. ಮಹಾಲಕ್ಷ್ಮಿ ಆಗಮನದ ಕುರಿತು ನಟ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

     

    View this post on Instagram

     

    A post shared by C R Siri (@siri_rajuu_)


    ಹೆಣ್ಣು ಮಗುವಿಗೆ ತಂದೆಯಾಗಿರುವ ಸಂಭ್ರಮದಲ್ಲಿ ನಟ ಸಾಗರ್ ಬಿಳಿ ಗೌಡ. ಸ್ಪೆಷಲ್ ವಿಡಿಯೋ ಮಾಡಿ ನಟಿ ಸಿರಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಅಮಾಯಕ ಗಂಡನಿಗೆ ಯಾಕೆ ಮೋಸ ಮಾಡಿದ್ರಿ ಎಂದವನಿಗೆ ತಕ್ಕ ಉತ್ತರ ಕೊಟ್ಟ ಸಮಂತಾ

    ಕಳೆದ ವರ್ಷ ಜನವರಿ 26ರಂದು ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಸಾಗರ್ ಮತ್ತು ಸಿರಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಗೆ ಸೀರಿಯಲ್‌ ನಟ-ನಟಿಯರು ಆಗಮಿಸಿ ಶುಭಕೋರಿದ್ದರು.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಸತ್ಯ’ ಸೀರಿಯಲ್ ನಟ ಸೀರುಂಡೆ ರಘು

    ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಸತ್ಯ’ ಸೀರಿಯಲ್ ನಟ ಸೀರುಂಡೆ ರಘು

    `ಸತ್ಯ’ (Sathya Serial) ಧಾರಾವಾಹಿ ಮೂಲಕ ಮನೆ ಮಾತಾಗಿರುವ ಸೀರುಂಡೆ ರಘು (Seerunde Raghu) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಸರಳವಾಗಿ ರಂಜಿತಾ (Ranjitha)  ಎಂಬುವವರ ಜೊತೆ ಹೊಸ ಬಾಳಿಗೆ ನಟ ರಘು ಕಾಲಿಟ್ಟಿದ್ದಾರೆ.

    `ಕಾಮಿಡಿ ಕಿಲಾಡಿಗಳು ಸೀಸನ್ 2′ ಮತ್ತು `ಸತ್ಯ’ ಸೀರಿಯಲ್ ಹೀರೋ ಕಾರ್ತಿಕ್ ಮೈದುನನ ಪಾತ್ರದಲ್ಲಿ ರಘು ಪರಿಚಿತರಾಗಿದ್ದಾರೆ. ಕಿರುತೆರೆಯಲ್ಲಿ ಪ್ರೇಕ್ಷಕರಿಗೆ ನಕ್ಕು ನಗಿಸುವ ಮೂಲಕ ಸೀರುಂಡೆ ರಘು ಗಮನ ಸೆಳೆದಿದ್ದರು. ಇದನ್ನೂ ಓದಿ: Exclusive:ಮತ್ತೊಂದು ಮಲ್ಟಿಸ್ಟಾರ್‌ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ

    ರಂಜಿತಾ ಎಂಬುವವರ ಜೊತೆ ನಟ ರಘು ಅವರು ಸರಳವಾಗಿ ಮದುವೆಯಾಗಿದ್ದಾರೆ. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಶೋ ಸ್ಪರ್ಧಿಗಳು, ಕಿರುತೆರೆ ನಟ-ನಟಿಯರು ಸೇರಿದಂತೆ ಹಲವರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ಅಭಿಮಾನಿಗಳ ಕೂಡ ರಘು ದಂಪತಿಗೆ ಶುಭಕೋರಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಸತ್ಯʼ ಸೀರಿಯಲ್ ನಟ ಸಾಗರ್- ಸಿರಿ ರಾಜು

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಸತ್ಯʼ ಸೀರಿಯಲ್ ನಟ ಸಾಗರ್- ಸಿರಿ ರಾಜು

    `ಸತ್ಯ’ ಸೀರಿಯಲ್ (Sathya Serial) ಸಾಗರ್ ಬಿಳಿಗೌಡ (Sagar Biligowda) ಮತ್ತು ನಟಿ ಸಿರಿ ರಾಜು (Siriraju) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆಯ ದಿನವೇ ಕಿರುತೆರೆ ನಟ ಸಾಗರ್ ಬಿಳಿಗೌಡ ಮತ್ತು ಸಿರಿ ಕೂಡ (ಜ.26)ರಂದು ಮದುವೆ (Wedding) ಆಗಿದ್ದಾರೆ.

    ಸಾಗರ್ ಮತ್ತು ಸಿರಿ ರಾಜು ಭೇಟಿ ಅನಿರಿಕ್ಷಿತ ಭೇಟಿಯೇ, ಮದುವೆ ಎಂಬ ಬಂಧದವರೆಗೂ ತಂದು ನಿಲ್ಲಿಸಿದೆ. ಖಾಸಗಿ ವಾಹಿನಿಯ ಇವೆಂಟ್‌ನಲ್ಲಿ ಸಾಗರ್- ಸಿರಿ ಪರಿಚಯವಾಯ್ತು. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್‌ಶಿಪ್‌ಯಿತ್ತು. ಆದರೆ ಮದುವೆ ಆಗುವ ಆಲೋಚನೆ ಇಬ್ಬರಿಗೂ ಇರಲಿಲ್ಲ. ಇದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದೆ. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆಗೆ ಸಾಕ್ಷಿಯಾದ ಸೆಲೆಬ್ರಿಟಿಗಳು

    ಕಳೆದ ತಿಂಗಳು ನವೆಂಬರ್‌ನಲ್ಲಿ ಸಿರಿ ರಾಜು ಮತ್ತು ಸಾಗರ್ ಎಂಗೇಜ್‌ಮೆಂಟ್ ನಡೆದಿತ್ತು. ಇದೀಗ ಜ.26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ  ಗುರುಹಿರಿಯರ ಸಮ್ಮುಖದಲ್ಲಿ ಸಾಗರ್, ನಟಿ ಸಿರಿ ಜೋಡಿ ಮದುವೆಯಾಗಿದ್ದಾರೆ.

    `ಸತ್ಯ’ ಹೀರೋ ಸಾಗರ್ ಮತ್ತು ನಟಿ ಸಿರಿಗೆ ಇದೀಗ ಸೆಲೆಬ್ರಿಟಿ ಸ್ನೇಹಿತರು, ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ `ಸತ್ಯ’ ಸೀರಿಯಲ್ ಖ್ಯಾತಿಯ ಸಾಗರ್- ಸಿರಿ ರಾಜು

    ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ `ಸತ್ಯ’ ಸೀರಿಯಲ್ ಖ್ಯಾತಿಯ ಸಾಗರ್- ಸಿರಿ ರಾಜು

    `ಸತ್ಯ’ ಸೀರಿಯಲ್ (Sathya Serial) ಸಾಗರ್ ಬಿಳಿಗೌಡ (Sagar Biligowda) ಮತ್ತು ಮಾಡೆಲ್ ಕಮ್ ನಟಿ ಸಿರಿ ರಾಜು (Siri Raju) ವೈವಾಹಿಕ ಬದುಕಿಗೆ ಕಾಲಿಡಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಎಂಗೇಜ್‌ಮೆಂಟ್ ಕೂಡ ನೆರವೇರಿತ್ತು. ಇದೀಗ ಮದುವೆಯ (Wedding) ದಿನಾಂಕ ಕೂಡ ಫಿಕ್ಸ್ ಆಗಿದೆ. ಈ ಕುರಿತು ನಟಿ ಸಿರಿ ರಾಜು ಪಬ್ಲಿಕ್ ಟಿವಿ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.

    ಸಾಗರ್ ಮತ್ತು ಸಿರಿ ರಾಜು ಭೇಟಿ ಅನಿರಿಕ್ಷಿತ ಭೇಟಿಯೇ, ಮದುವೆ ಎಂಬ ಬಂಧದವರೆಗೂ ತಂದು ನಿಲ್ಲಿಸಿದೆ. ಖಾಸಗಿ ವಾಹಿನಿಯ ಇವೆಂಟ್‌ನಲ್ಲಿ ಸಾಗರ್-‌ ಸಿರಿ ಪರಿಚಯವಾಯ್ತು. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್‌ಶಿಪ್‌ಯಿತ್ತು. ಆದರೆ ಮದುವೆ ಆಲೋಚನೆ ಇಬ್ಬರಿಗೂ ಇರಲಿಲ್ಲ. ಇದು ಪಕ್ಕಾ ಅರೆಂಜ್ ಮ್ಯಾರೇಜ್ (Arrange Marriage) ಆಗಿದ್ದು, ಗುರುಹಿರಿಯರು ನಿಶ್ಚಿಯಿಸಿದ ಮದುವೆ ಎಂದು ಸಿರಿ ರಾಜು ತಿಳಿಸಿದ್ದಾರೆ.

    ಕಳೆದ ತಿಂಗಳು ನವೆಂಬರ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸಿರಿ ರಾಜು ಮತ್ತು ಸಾಗರ್ ಎಂಗೇಜ್‌ಮೆಂಟ್ (Engagemnet) ನಡೆದಿತ್ತು. ಇದೀಗ ಇದೇ ಜನವರಿ 26ರಂದು ಹಸೆಮಣೆ ಏರಲು ರೆಡಿಯಾಗಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಸಾಗರ್, ಸಿರಿ ಜೋಡಿ ಮದುವೆಯಾಗುತ್ತಿದೆ. ಜ.25ರಂದು ಆರತಕ್ಷತೆ ನಡೆಯಲಿದೆ. ಅದಕ್ಕೂ ಮುನ್ನ ವಿವಾಹ ಪೂರ್ವ ಕಾರ್ಯಗಳು ಜರುಗಲಿದೆ.

    ಸಾಗರ್ ಬಿಳಿಗೌಡ ಮದುವೆಯಾಗುತ್ತಿರುವ ಹುಡುಗಿ ಸಿರಿ ರಾಜು ಕೂಡ ಕಲಾವಿದೆ. ಸಿರಿ ರಾಜು ಉದ್ಯಮಿ ಕೂಡ ಹೌದು. ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಸಿರಿ ರಾಜು ಅಭಿನಯಿಸಿದ್ದಾರೆ. ಸದ್ಯ ವಿಜಯ್ ರಾಘವೇಂದ್ರ (Vijay Raghavendra) ಜೊತೆಗೆ `FIR 6 to 6′ ಸಿನಿಮಾದಲ್ಲಿ ಸಿರಿ ರಾಜು ನಟಿಸಿದ್ದಾರೆ. ಸಾಗರ್ ಬಿಳಿಗೌಡ ಪ್ರಸ್ತುತ `ಸತ್ಯ’ ಸೀರಿಯಲ್‌ನಲ್ಲಿ ನಾಯಕ ನಟನಾಗಿ ಜನಮನ ಗೆದ್ದಿದ್ದಾರೆ. ಇದನ್ನೂ ಓದಿ:ಒಂದೇ ದಿನ ತೆರೆಗೆ ಅಬ್ಬರಿಸುತ್ತಿದೆ ರಣ್‌ಬೀರ್- ಆಲಿಯಾ ಭಟ್ ಸಿನಿಮಾ: ಬಾಕ್ಸಾಫೀಸ್‌ ಫೈಟ್‌

    ಇನ್ನೂ ವೈವಾಹಿಕ ಬದುಕಿಗೆ ಕಾಲಿಡುತ್ತಿರುವ ಸಾಗರ್ ಮತ್ತು ಸಿರಿ ರಾಜುಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಸೆಮಣೆ ಏರಲು ಸಜ್ಜಾದ `ಸತ್ಯ’ ಧಾರಾವಾಹಿ ಹೀರೋ ಸಾಗರ್

    ಹಸೆಮಣೆ ಏರಲು ಸಜ್ಜಾದ `ಸತ್ಯ’ ಧಾರಾವಾಹಿ ಹೀರೋ ಸಾಗರ್

    ಕಿರುತೆರೆಯ ನಂಬರ್ ಒನ್ `ಸತ್ಯ’ (Sathya Serial) ಸೀರಿಯಲ್ ಹೀರೋ ತಮ್ಮ ಫೀಮೇಲ್ ಫ್ಯಾನ್ಸ್‌ಗೆ ಹಾರ್ಟ್ ಬ್ರೇಕಿಂಗ್ ಸುದ್ದಿಯೊಂದನ್ನ ಕೊಟ್ಟಿದ್ದಾರೆ. ʻಸತ್ಯʼ ಧಾರಾವಾಹಿಯ ಅಮುಲ್ ಬೇಬಿಯಾಗಿ ಮಿಂಚ್ತಿರುವ ಸಾಗರ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

     

    View this post on Instagram

     

    A post shared by Siri ???? (@sirri_raju)

    ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರಧಾರಿಯಾಗಿ ಅಪಾರ ಅಭಿಮಾನಿಗಳ ಮನಗೆದ್ದ ನಟ ಸಾಗರ್ ಗೌಡ(Sagar Gowda) ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅಮುಲ್ ಬೇಬಿ ಎಂದೇ ಫೇಮಸ್ ಆಗಿದ್ದ ನಟ ಇದೀಗ ನಟಿ, ಕಮ್ ಮಾಡೆಲ್ ಸಿರಿ ರಾಜು(Siri Raju) ಅವರನ್ನು ಪ್ರೀತಿಸಿ ಮದುವೆಯಾಗುತ್ತಿದ್ದಾರೆ.ಸದ್ಯದಲ್ಲೇ ಬೆಂಗಳೂರಿನಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದು, ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ.

     

    View this post on Instagram

     

    A post shared by Siri ???? (@sirri_raju)

    ಸಾಕಷ್ಟು ಸಮಯದಿಂದ ಸಾಗರ್ ಮತ್ತು ಸಿರಿ ರಾಜು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಸೂಕ್ತ ಸಮಯ ಎಂದೇನಿಸಿ ರೊಮ್ಯಾಂಟಿಕ್ ಶೇರ್ ಮಾಡುವ ಮೂಲಕ ತಾವು ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿಯನ್ನ ತಿಳಿಸಿದ್ದಾರೆ. ಚೆಂದದ ಜೋಡಿಯ ಫೋಟೋ ನೋಡಿ, ಕಲಾವಿದರು, ಆಪ್ತರು, ಅಭಿಮಾನಿಗಳು ಶುಭಹಾರೈಸಿದ್ದಾರೆ. ಇದನ್ನೂ ಓದಿ:ದೊಡ್ಮನೆ ರಣರಂಗ: ರೂಪೇಶ್ ಶೆಟ್ಟಿ ಶರ್ಟ್ ಕಿತ್ತೆಸೆದ ಪ್ರಶಾಂತ್ ಸಂಬರ್ಗಿ

     

    View this post on Instagram

     

    A post shared by Siri ???? (@sirri_raju)

    ಇನ್ನೂ ಸಿರಿ ರಾಜು ಕೂಡ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ವಿಜಯ್ ರಾಘವೇಂದ್ರ ಅಭಿನಯದ ಹೊಸ ಚಿತ್ರದಲ್ಲಿ ಸಿರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಗರ್ ಮತ್ತು ಸಿರಿ, ಈ ತಾರಾ ಜೋಡಿ ಹಸೆಮಣೆ ಏರುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]