Tag: ಸತ್ಯ ಧಾರಾವಾಹಿ

  • ನಿಶ್ಚಿತಾರ್ಥದ ಸಂಭ್ರಮದಲ್ಲಿ `ಸತ್ಯ’ ಧಾರಾವಾಹಿ ಹೀರೋ ಸಾಗರ್-ಸಿರಿ

    ನಿಶ್ಚಿತಾರ್ಥದ ಸಂಭ್ರಮದಲ್ಲಿ `ಸತ್ಯ’ ಧಾರಾವಾಹಿ ಹೀರೋ ಸಾಗರ್-ಸಿರಿ

    ಕಿರುತೆರೆಯ ನಂಬರ್ ಒನ್ `ಸತ್ಯ'(Sathya Serial) ಸೀರಿಯಲ್ ಹೀರೋ ತಮ್ಮ ಫೀಮೇಲ್ ಫ್ಯಾನ್ಸ್‌ಗೆ ಹಾರ್ಟ್ ಬ್ರೇಕಿಂಗ್ ಸುದ್ದಿಯೊಂದನ್ನ ಕೊಟ್ಟಿದ್ದಾರೆ. `ಸತ್ಯ’ ಧಾರಾವಾಹಿಯ ಅಮುಲ್ ಬೇಬಿಯಾಗಿ ಮಿಂಚ್ತಿರುವ ಸಾಗರ್(Sagar Gowda) ಇಂದು ಬಹುಕಾಲದ ಗೆಳತಿ ಸಿರಿ ರಾಜು(Siri Raju) ಜೊತೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಏಂಗೇಜ್‌ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Siri ???? (@sirri_raju)

    `ಸತ್ಯ’ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರಧಾರಿಯಾಗಿ ಅಪಾರ ಅಭಿಮಾನಿಗಳ ಮನಗೆದ್ದ ನಟ ಸಾಗರ್ ಗೌಡ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅಮುಲ್ ಬೇಬಿ(Amul Baby) ಎಂದೇ ಫೇಮಸ್ ಆಗಿದ್ದ ನಟ ಇದೀಗ ನಟಿ, ಕಮ್ ಮಾಡೆಲ್ ಸಿರಿ ರಾಜು ಅವರನ್ನು ಮದುವೆಯಾಗುತ್ತಿದ್ದಾರೆ. ಐದು ವರ್ಷಗಳಿಂದ ಸ್ನೇಹಿತರಾಗಿದ್ದ ಈ ಜೋಡಿ ಗುರುಹಿರಿಯರನ್ನ ಒಪ್ಪಿಸಿ ಹೊಸ ಬಾಳಿಗೆ ಕಾಲಿಡುವ ತವಕದಲ್ಲಿದ್ದಾರೆ.

    ಸಾಕಷ್ಟು ಸಮಯದಿಂದ ಸಾಗರ್ ಮತ್ತು ಸಿರಿ ರಾಜು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಸೂಕ್ತ ಸಮಯ ಎಂದೇನಿಸಿ ರೊಮ್ಯಾಂಟಿಕ್ ಶೇರ್ ಮಾಡುವ ಮೂಲಕ ತಾವು ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿಯನ್ನ ಇತ್ತೀಚೆಗಷ್ಟೇ ತಿಳಿಸಿದ್ದರು. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಏಂಗೇಜ್‌ಮೆಂಟ್(Engagement) ಮಾಡಿಕೊಂಡಿದ್ದಾರೆ. ಈ ಸಂಭ್ರಮಕ್ಕೆ ʻಸತ್ಯʼ ಧಾರಾವಾಹಿ ತಂಡ ಕೂಡ ಸಾಕ್ಷಿಯಾಗಿದೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನಿಕ್ಕಿ ಗಲ್ರಾನಿ ದಂಪತಿ

    ಇನ್ನೂ ಸಿರಿ ರಾಜು ಕೂಡ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ವಿಜಯ್ ರಾಘವೇಂದ್ರ(Vijay Raghavendra) ಅಭಿನಯದ ಹೊಸ ಚಿತ್ರದಲ್ಲಿ ಸಿರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಗರ್ ಮತ್ತು ಸಿರಿ, ಈ ತಾರಾ ಜೋಡಿ ಹಸೆಮಣೆ ಏರುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ನಿಶ್ವಿತಾರ್ಥ ಮಾಡಿಕೊಂಡಿರುವ ಈ ಜೋಡಿಗೆ ಫ್ಯಾನ್ಸ್ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಖಾನಾವಳಿ ಚೆನ್ನಿ’ಯಾದ ಅಗ್ನಿಸಾಕ್ಷಿ ಚಂದ್ರಿಕಾ : ವೃತ್ತಿ ರಂಗಭೂಮಿಗೆ ಜಿಗಿದ ‘ಸತ್ಯ’ ನಟಿ

    ‘ಖಾನಾವಳಿ ಚೆನ್ನಿ’ಯಾದ ಅಗ್ನಿಸಾಕ್ಷಿ ಚಂದ್ರಿಕಾ : ವೃತ್ತಿ ರಂಗಭೂಮಿಗೆ ಜಿಗಿದ ‘ಸತ್ಯ’ ನಟಿ

    ವೃತ್ತಿ ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಬಂದವರು ಹೆಚ್ಚು. ಆದರೆ, ಸಿನಿಮಾ ಮತ್ತು ಕಿರುತೆರೆಯಲ್ಲಿ ಪಾಪ್ಯುಲರ್ ಆದವರು ಮತ್ತೆ ವೃತ್ತಿ ರಂಗಭೂಮಿಯತ್ತ ಮುಖವೆತ್ತಿ ಕೂಡ ನೋಡುವುದಿಲ್ಲ. ಆದರೆ, ಅಗ್ನಿಸಾಕ್ಷಿ, ಸತ್ಯ ಸೇರಿದಂತೆ ಹಲವು ಪಾಪ್ಯುಲರ್ ಧಾರಾವಾಹಿಯಲ್ಲಿ ನಟಿಸಿದ ಚಂದ್ರಿಕಾ ಇದೀಗ ವೃತ್ತಿ ರಂಗಭೂಮಿಯತ್ತ ಮುಖ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿರುವ ‘ಖಾನಾವಳಿ ಚೆನ್ನಿ’ ನಾಟಕದಲ್ಲಿ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

    ರಾಣೇಬೆನ್ನೂರು ಮಂಜುನಾಥ ನಾಟ್ಯ ಸಂಘವು ರೋಣ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿರುವ ‘ಖಾನಾವಳಿ ಚೆನ್ನಿ’ ನಾಟಕವು ಜೂನ್ 11 ಮತ್ತು 12 ರಂದು ಎರಡೆರಡು ಪ್ರದರ್ಶನಗಳನ್ನು ಆಯೋಜನೆ ಮಾಡಲಾಗಿದೆ. ಇದು ಈ ನಾಟಕದ ಹಾಸ್ಯ ಪಾತ್ರಧಾರಿ ಶ್ರೀದೇವಿ ಅವರ ಮದುವೆ ಸಹಾರ್ಥವಾಗಿ ನಡೆಯಲಿದೆ. ಹಾಗಾಗಿ ಚಂದ್ರಿಕಾ ಪ್ರಮುಖ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

    ನಾಟಕದ ಕುರಿತು ಮಾತನಾಡಿರುವ ಸಂಘದ ಮಾಲೀಕರಾದ ನಾಗರತ್ನ ಚಿಕ್ಕಮಠ ಮಾತನಾಡಿ, “ಕವಿ ಬಿ.ಆರ್. ಅರಶಿನಗೋಡೆ ಅವರು ಬರೆದಿರುವ ಖಾನಾವಳಿ ಚೆನ್ನಿ ಹೆಸರಾಂತ ಹಾಸ್ಯ ನಾಟಕ. ಈ ನಾಟಕವನ್ನು ರೋಣದಲ್ಲಿ ಆಯೋಜನೆ ಮಾಡಲಾಗಿದೆ. ಖ್ಯಾತ ಧಾರಾವಾಹಿ ಕಲಾವಿದೆ ಚಂದ್ರಿಕಾ ಅವರು ಪ್ರಧಾನ ಪಾತ್ರ ಮಾಡುತ್ತಿದ್ದರೆ, ಜ್ಯೂನಿಯರ್ ಯಶ್ ಕೂಡ ಈ ನಾಟಕದಲ್ಲಿ ಮತ್ತೊಂದು ಪಾತ್ರ ಮಾಡುತ್ತಿದ್ದಾರೆ. ಸಂಘದ ಕಲಾವಿದೆ ಶ್ರೀದೇವಿ ಅವರ ಮದುವೆಗಾಗಿ ಇದನ್ನು ಆಯೋಜನೆ ಮಾಡಲಾಗಿದೆ’ ಎಂದರು.

    ಖಾನಾವಳಿ ಚೆನ್ನಿ ನಾಟಕದಲ್ಲಿ ಹಾಸ್ಯದ ಜೊತೆ ಡಬಲ್ ಮೀನಿಂಗ್ ಡೈಲಾಗ್ ಕೂಡ ಇವೆ. ಚೆನ್ನಿಯ ಪಾತ್ರದ ಸುತ್ತ ಇಡೀ ನಾಟಕ ಕಟ್ಟಲಾಗಿದೆ. ಈಗಾಗಲೇ ಈ ನಾಟಕ ಉತ್ತರ ಕರ್ನಾಟಕದಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡಿದೆ. ಹೆಸರಾಂತ ಕಲಾವಿದೆಯರು ಈಗಾಗಲೇ ಚೆನ್ನಿ ಪಾತ್ರವನ್ನು ಮಾಡಿದ್ದಾರೆ. ಪ್ರತಿ ಪ್ರಯೋಗವೂ ಯಶಸ್ಸು ಕಂಡಿರುವುದು ನಾಟಕದ ಹೆಗ್ಗಳಿಕೆ ಕೂಡ.