Tag: ಸತ್ಯೇಂದರ್ ಜೈನ್

  • ಅಕ್ರಮ ಹಣ ವರ್ಗಾವಣೆ ಪ್ರಕರಣ – ಸತ್ಯೇಂದರ್ ಜೈನ್ ಜಾಮೀನು ಅರ್ಜಿ ವಜಾ

    ಅಕ್ರಮ ಹಣ ವರ್ಗಾವಣೆ ಪ್ರಕರಣ – ಸತ್ಯೇಂದರ್ ಜೈನ್ ಜಾಮೀನು ಅರ್ಜಿ ವಜಾ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆಪ್ (AAP) ಮಾಜಿ ಸಚಿವ ಸತ್ಯೇಂದರ್ ಜೈನ್‌ಗೆ (Satyendar Jain) ದೆಹಲಿ (Delhi) ಹೈಕೋರ್ಟ್ ಗುರುವಾರ ಜಾಮೀನು ನಿರಾಕರಿಸಿದೆ.

    ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕನ ಜಾಮೀನು (Bail) ಅರ್ಜಿಯನ್ನು ಹೈಕೋರ್ಟ್ (High Court) ನ್ಯಾಯಾಧೀಶ ದಿನೇಶ್ ಕುಮಾರ್ ಶರ್ಮ ವಜಾಗೊಳಿಸಿದ್ದಾರೆ. ಇವರೊಂದಿಗೆ ಆರೋಪಿಗಳಾದ ವೈಭವ್ ಜೈನ್ ಮತ್ತು ಅಂಕುಶ್ ಜೈನ್ ಅವರಿಗೂ ಜಾಮೀನು ನಿರಾಕರಿಸಿದೆ. ಈ ಮೂವರು ಆರೋಪಿಗಳು ನ್ಯಾಯಾಲಯ ವಿಧಿಸಿದ ಎರಡು ಷರತ್ತುಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ. ಅವರು ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ನೀಡಿದರೆ ಸಾಕ್ಷ್ಯ ನಾಶಮಾಡಬಹುದು ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಯುಪಿಎಯಿಂದ ನಿರೀಕ್ಷಿಸಿದ್ದೆ, ಬಿಜೆಪಿ ಮುಸ್ಲಿಮರಿಗೆ ಪದ್ಮ ಪ್ರಶಸ್ತಿ ನೀಡಲ್ಲ ಎಂದು ಭಾವಿಸಿದ್ದೆ: ಮೋದಿಗೆ ರಶೀದ್ ಅಹ್ಮದ್ ಖಾದ್ರಿ ಧನ್ಯವಾದ 

    ನಾಲ್ಕು ಕಂಪನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಡಿ 2022ರ ಮೇ 30ರಂದು ಸತ್ಯೇಂದರ್ ಜೈನ್ ಅವರನ್ನು ಬಂಧಿಸಲಾಯಿತು. ಅದೇ ವರ್ಷ ನವೆಂಬರ್ 17ರಲ್ಲಿ ವಿಚಾರಣಾ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬಳಿಕ ಸತ್ಯೇಂದರ್ ಜೈನ್ ಹೈಕೋರ್ಟ್ ಮೊರೆ ಹೋಗಿದ್ದರು. ಇದನ್ನೂ ಓದಿ: ಸುಧಾಮೂರ್ತಿ, ಎಸ್.ಎಲ್ ಭೈರಪ್ಪಗೆ ಪದ್ಮ ಭೂಷಣ ಪ್ರಶಸ್ತಿ ಪ್ರದಾನ 

    ಸಿಬಿಐ 2017ರ ಆಗಸ್ಟ್‌ನಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಒಂದು ವರ್ಷದ ಬಳಿಕ ಸತ್ಯೇಂದರ್ ಜೈನ್, ಅವರ ಪತ್ನಿ ಮತ್ತು ಅವರ ನಾಲ್ವರು ಸಹಚರರ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದೆ. ಈ ಪ್ರಕರಣದ ನಂತರ, ಅಕಿಂಚನ್ ಡೆವಲಪರ್ಸ್ ಪ್ರೈವೆಟ್ ಲಿಮಿಟೆಡ್, ಇಂಡೋ ಮೆಟಲ್ ಇಂಪೆಕ್ಸ್ ಪ್ರೈವೆಟ್ ಲಿಮಿಟೆಡ್, ಪರ್ಯಾಸ್ ಇನ್ಫೋ ಸೊಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್, ಮಂಗಳಾಯತನ್ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್ ಮತ್ತು ಜೆಜೆ ಐಡಿಯಲ್ ಎಸ್ಟೇಟ್ ಪ್ರೈವೆಟ್ ಲಿಮಿಟೆಡ್‌ಗೆ ಸೇರಿದ 4.81 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಇಡಿ ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಇದನ್ನೂ ಓದಿ: ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ಮಾಧ್ಯಮ ನಿಯಂತ್ರಿಸಲು ಸಾಧ್ಯವಿಲ್ಲ: ಕೇಂದ್ರಕ್ಕೆ ಸುಪ್ರೀಂ ತರಾಟೆ

  • ಕೊರೊನಾನಿಂದ ದೆಹಲಿ ಆರೋಗ್ಯ ಸಚಿವರ ಪರಿಸ್ಥಿತಿ ಗಂಭೀರ- ಪ್ಲಾಸ್ಮಾ ಥೆರಪಿಗೆ ನಿರ್ಧಾರ

    ಕೊರೊನಾನಿಂದ ದೆಹಲಿ ಆರೋಗ್ಯ ಸಚಿವರ ಪರಿಸ್ಥಿತಿ ಗಂಭೀರ- ಪ್ಲಾಸ್ಮಾ ಥೆರಪಿಗೆ ನಿರ್ಧಾರ

    ನವದೆಹಲಿ: ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು ಪ್ಲಾಸ್ಮ ಥೆರಪಿ ಮಾಡಲು ನಿರ್ಧರಿಸಲಾಗಿದೆ.

    ದೆಹಲಿ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸತ್ಯೇಂದರ್ ಜೈನ್ ಅವರ ಶ್ವಾಸಕೋಶದಲ್ಲಿ ಸೋಂಕಿನ ಪ್ರಮಾಣ ಏರಿಕೆ ಕಂಡಿದೆ. ಹೀಗಾಗಿ ಇಂದು ತೀವ್ರ ಉಸಿರಾಟದ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಮುಂದುವರಿಸಲಾಗಿತ್ತು.

    ಕುಟುಂಬಸ್ಥರ ಒಪ್ಪಿಗೆ ಬಳಿಕ ಅವರಿಗೆ ಪ್ಲಾಸ್ಮಾ ಥೆರಪಿ ನೀಡಲು ನಿರ್ಧರಿಸಲಾಗಿದೆ. ಸದ್ಯ ಸತ್ಯೇಂದರ್ ಜೈನ್ ಅವರನ್ನು ಸಾಕೇತ್‍ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನಾಳೆ ಅಥವಾ ಮಾಡಿದ್ದು ಪ್ಲಾಸ್ಮಾ ಥೆರಪಿ ನಡೆಸುವ ಸಾಧ್ಯತೆ ಇದೆ.

    ಸತ್ಯೇಂದರ್ ಜೈನ್ ಆರಂಭದಲ್ಲಿ ತೀವ್ರ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಮೊದಲು ಕೊರೊನಾ ಪರೀಕ್ಷೆ ನಡೆಸಿದಾಗ ನೆಗೆಟಿವ್ ವರದಿ ಬಂದಿತ್ತು. ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಿದಾದ ಪಾಸಿಟಿವ್ ವರದಿ ಬಂದಿತ್ತು. ಅವರು ಬಹುಬೇಗ ಗುಣಮುಖರಾಗಲಿ ಎಂದು ಗೃಹ ಸಚಿವ ಅಮಿತ್ ಶಾ, ದೆಹಲಿ ಲೆಫ್ಟಿನೆಂಟ್ ಅನೀಲ್ ಬೈಜಾಲ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾರೈಸಿದ್ದಾರೆ.