Tag: ಸತ್ಯಶೋಧನಾ ಸಮಿತಿ

  • ನಾಗಮಂಗಲದಲ್ಲಿ ನಿಷೇಧಿತ ಪಿಎಫ್‌ಐ ಸಕ್ರಿಯ, ಆಸ್ತಿ ಮುಟ್ಟುಗೋಲು ಹಾಕಬೇಕು – ಬಿಜೆಪಿ ಸತ್ಯಶೋಧನಾ ವರದಿಯಲ್ಲಿ ಏನಿದೆ?

    ನಾಗಮಂಗಲದಲ್ಲಿ ನಿಷೇಧಿತ ಪಿಎಫ್‌ಐ ಸಕ್ರಿಯ, ಆಸ್ತಿ ಮುಟ್ಟುಗೋಲು ಹಾಕಬೇಕು – ಬಿಜೆಪಿ ಸತ್ಯಶೋಧನಾ ವರದಿಯಲ್ಲಿ ಏನಿದೆ?

    ಬೆಂಗಳೂರು: ನಾಗಮಂಗಲ ಗಲಭೆ (Nagamangala Violence) ಕೇಸ್‌ನಲ್ಲಿ ಬಿಜೆಪಿ (BJP) ರಚಿಸಿದ್ದ ಸತ್ಯಶೋಧನಾ ಸಮಿತಿ ಇಂದು (ಶುಕ್ರವಾರ) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B Y Vijayendra) ಅವರಿಗೆ ವರದಿ ಸಲ್ಲಿಕೆ ಮಾಡಿದೆ. ಮಾಜಿ ಡಿಸಿಎಂ ಅಶ್ವಥ್ ನಾರಾಯಣ (Ashwath Narayan) ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ವರದಿ ಸಲ್ಲಿಕೆ ಮಾಡಿತು.

    ಘಟನೆಗೆ ಪೊಲೀಸರ ವೈಫಲ್ಯ ಕಾರಣ ಮತ್ತು ತುಷ್ಟೀಕರಣ ರಾಜಕೀಯದಿಂದ ಘಟನೆ ಆಗಿದೆ ಎಂದು ವರದಿಯಲ್ಲಿ ಉಲ್ಲೇಖ ಆಗಿದೆ. ಅಲ್ಲದೆ ನಾಗಮಂಗಲ ಗಲಭೆ ಸಂಬಂಧ ಎನ್‌ಐಎ ತನಿಖೆ ನಡೆಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಅಭದ್ರತೆ ಕಾಡ್ತಿರೋದ್ರೀಂದ ವಿಪಕ್ಷ ನಾಯಕರ ಮೇಲೆ ಕೇಸ್ ದಾಖಲು – ವಿಜಯೇಂದ್ರ ಕಿಡಿ

    ಸತ್ಯಶೋಧನಾ ಸಮಿತಿ ವರದಿಯಲ್ಲಿ ಏನಿದೆ?
    * ಘಟನೆಯಲ್ಲಿ ಪೋಲೀಸರ ಸಂಪೂರ್ಣ ವೈಫಲ್ಯ ಇದೆ. ಪೊಲೀಸರ ಕೈಗಳನ್ನು ಸರ್ಕಾರ ಕಟ್ಟಿ ಹಾಕಿದೆ.
    * ಅಮಾಯಕರನ್ನು ಬಂಧನ ಮಾಡಿ ಕೃತ್ಯ ಮಾಡಿರುವವರನ್ನು ಹೊರಗೆ ಬಿಡಲಾಗಿದೆ.
    * ನಿಷೇಧಿತ ಪಿಎಫ್‌ಐ ಸಂಘಟನೆ ನಾಗಮಂಗಲದಲ್ಲಿ ಆಕ್ಟಿವ್ ಆಗಿದೆ. ಇದನ್ನೂ ಓದಿ: ರಹಸ್ಯ ಮಾಹಿತಿ ಸೋರಿಕೆ ಬಗ್ಗೆ ಮಾಹಿತಿ ಕೊಡಿ: ಸರ್ಕಾರಕ್ಕೆ ರಾಜ್ಯಪಾಲರ ಪತ್ರ

    * ನಾಗಮಂಗಲ ಕೇಸ್‌ನಲ್ಲಿ ಒಂದು ಸಮುದಾಯದ ತುಷ್ಟೀಕರಣ ಕೆಲಸಗಳು ಆಗಿವೆ.
    * ನಾಗಮಂಗಲ ಕೇಸ್ ನಲ್ಲಿ ಇಂಟಲಿಜೆನ್ಸ್ ಸಂಪೂರ್ಣ ವಿಫಲವಾಗಿದೆ.
    * ಈ ಸರ್ಕಾರದಲ್ಲಿ ಹಿಂದೂ ವಿರೋಧಿಗಳು, ಹಿಂದೂ ಸಂಸ್ಕೃತಿ ವಿರೋಧಿಗಳಿಗೆ ಸಹಕಾರ ಕೊಡಲಾಗುತ್ತಿದೆ.
    * ಗಲಭೆಯಲ್ಲಿ ಆಸ್ತಿಪಾಸ್ತಿ ನಷ್ಟವಾಗಿರುವವರಿಗೆ 100% ಪರಿಹಾರ ಸರ್ಕಾರ ಕೊಡಬೇಕು. ಇದನ್ನೂ ಓದಿ: 80% ಹಿಂದೂಗಳಿದ್ರೂ ನೆಮ್ಮದಿಯಾಗಿ ಗಣೇಶೋತ್ಸವ ಆಚರಿಸೋಕಾಗ್ತಿಲ್ಲ: ಸಿ.ಟಿ ರವಿ ಆತಂಕ

    * ಘಟನೆಯಲ್ಲಿ ಭಾಗಿಯಾಗಿರುವ ದುಷ್ಟರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು.
    * ನಾಗಮಂಗಲ ಗಲಭೆ ಪ್ರಕರಣವನ್ನು ಎನ್‌ಐಎ (NIA) ತನಿಖೆಗೆ ವಹಿಸಬೇಕು. ಇದನ್ನೂ ಓದಿ: ನಾಗಮಂಗಲ ಗಲಭೆಗೆ ಪೊಲೀಸರ ವೈಫಲ್ಯ ಕಾರಣ: NIA ತನಿಖೆಗೆ ಆಗ್ರಹಿಸಿದ ಅಶ್ವಥ್ ನಾರಾಯಣ

  • ಪೋಸ್ಟ್ ಕೇವಲ ನೆಪ, ಇದು ದಲಿತ ಶಾಸಕರ ವಿರುದ್ಧ ನಡೆದ ವ್ಯವಸ್ಥಿತ ಪಿತೂರಿ – ಇದು ಬಿಜೆಪಿ ಶೋಧಿಸಿದ ಸತ್ಯ

    ಪೋಸ್ಟ್ ಕೇವಲ ನೆಪ, ಇದು ದಲಿತ ಶಾಸಕರ ವಿರುದ್ಧ ನಡೆದ ವ್ಯವಸ್ಥಿತ ಪಿತೂರಿ – ಇದು ಬಿಜೆಪಿ ಶೋಧಿಸಿದ ಸತ್ಯ

    ಬೆಂಗಳೂರು: ನವೀನ್ ನ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಕೇವಲ ನೆಪ ಆಗಿತ್ತು. ಪೋಸ್ಟ್ ನೆಪದಲ್ಲಿ ಮುಸ್ಲಿಂ ಸಮುದಾಯದೊಳಗೆ ಕಿಡಿ‌ ಹತ್ತಿಸಿ ಹಬ್ಬಿಸಿ ಗಲಭೆ ನಡೆಯುವಂತೆ ಸಂಚು ರೂಪಿಸಿಲಾಗಿತ್ತು – ಇದು ಬಿಜೆಪಿ ಶೋಧಿಸಿದ ಸತ್ಯ.

    ದೇವರಜೀವನ ಹಳ್ಳಿ ಮತ್ತು ಕಾಡಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಸಂಬಂಧ ರಾಜ್ಯ ಬಿಜೆಪಿ ಅರವಿಂದ ಲಿಂಬಾವಳಿ, ಮಾಲೀಕಯ್ಯ ಗುತ್ತೇದಾರ್, ಎಂ ಶಂಕರಪ್ಪ, ಪಿ ಸಿ ಮೋಹನ್, ಎ ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ ಅವರಿದ್ದ ಸತ್ಯಶೋಧನಾ ಸಮಿತಿಯನ್ನು ನೇಮಿಸಿತ್ತು.

    ಮೂರು ದಿನಗಳ ಹಿಂದೆ ರಚನೆ ಆಗಿದ್ದ ಸಮಿತಿ ಈಗ ಮಾಹಿತಿಗಳನ್ನು ಕಲೆ ಹಾಕಿ ವರದಿ ತಯಾರಿಸಿದ್ದು ಇಂದು ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಸಲ್ಲಿಸಲಿದೆ.

    ಬಿಜೆಪಿಯ ಸತ್ಯ ಶೋಧನೆ ಏನು?
    ಪ್ರಕರಣದಲ್ಲಿ ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರೇ ಟಾರ್ಗೆಟ್ ಆಗಿದ್ದರು. ಕಾಂಗ್ರೆಸ್‌ನಲ್ಲಿದ್ದರೂ ಅಖಂಡ ಶ್ರೀನಿವಾಸ ಮೂರ್ತಿ ಒಬ್ಬಂಟಿಯಾಗಿದ್ದರು. ಕ್ಷೇತ್ರದಲ್ಲಿ ಅಖಂಡ ಪರ ಯಾವ ಕಾಂಗ್ರೆಸ್ ಮುಖಂಡರು, ನಾಯಕರು ಇರಲಿಲ್ಲ.

    ಮುಂಬರುವ ಬಿಬಿಎಂಪಿ ಚುನಾವಣೆ ಮತ್ತು ವಿಧಾನಸಭೆ ಕ್ಷೇತ್ರಗಳ ಚುನಾವಣೆಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿಗೆ ಬೆಂಬಲಿಸಬಾರದು, ಟಿಕೆಟ್ ಸಿಗದಂತೆ ನೋಡಿಕೊಳ್ಳಬೇಕು. ಟಿಕೆಟ್ ಸಿಕ್ಕಿದ್ದರೂ ಸೋಲಿಸಬೇಕು ಎಂಬ ಉದ್ದೇಶ ಇತ್ತು.

    ನವೀನ್ ನ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಕೇವಲ ನೆಪ ಆಗಿತ್ತು. ಪೋಸ್ಟ್ ನೆಪದಲ್ಲಿ ಮುಸ್ಲಿಂ ಸಮುದಾಯದೊಳಗೆ ಕಿಡಿ‌ ಹತ್ತಿಸಿ ಹಬ್ಬಿಸಿ ಗಲಭೆ ನಡೆಯುವಂತೆ ಸಂಚು ರೂಪಿಸಲಾಗಿತ್ತು. ಪ್ರತಿಭಟನೆ ಉದ್ದೇಶ ಇದ್ದ ಗುಂಪಿಗೆ ಅಖಂಡ ಮೇಲೆ ದಾಳಿ ಮಾಡುವಂತೆ ಪ್ರಚೋದಿಸಲಾಗಿತ್ತು.

    ಗಲಭೆಗೆ ಕಾಂಗ್ರೆಸ್ ಸ್ಥಳೀಯ ಮುಖಂಡರು, ಲೋಕಲ್ ಪಾಲಿಟಿಕ್ಸ್, ಎಸ್‌ಡಿಪಿಐ ಕಾರಣ. ಇದು ದಲಿತ ಶಾಸಕರೊಬ್ಬರ ವಿರುದ್ಧ ನಡೆದ ವ್ಯವಸ್ಥಿತ ರಾಜಕೀಯ ಹುನ್ನಾರ.