Tag: ಸತ್ಯರಾಜ್

  • Sikandar: ಸಲ್ಮಾನ್ ಖಾನ್‌ಗೆ ತಮಿಳು ನಟ ಸತ್ಯರಾಜ್ ವಿಲನ್

    Sikandar: ಸಲ್ಮಾನ್ ಖಾನ್‌ಗೆ ತಮಿಳು ನಟ ಸತ್ಯರಾಜ್ ವಿಲನ್

    ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ‘ಸಿಖಂದರ್’ (Sikandar Film) ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ. ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿರುವ ಸಲ್ಮಾನ್‌ಗೆ (Salman Khan) ಯಶಸ್ಸು ಬೇಕಾಗಿದೆ. ಹಾಗಾಗಿ ದಕ್ಷಿಣದ ತಾರೆಯರಿಗೆ ಚಿತ್ರತಂಡ ಮಣೆ ಹಾಕುತ್ತಿದೆ. ಇದೀಗ ಸಲ್ಮಾನ್‌ಗೆ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ.

    ವಿಲನ್ ಖಡಕ್ ಆಗಿ ಇದ್ದರೆ ತಾನೇ ಹೀರೋಗೆ ಬೆಲೆ. ಅದಕ್ಕಾಗಿ ಸಲ್ಮಾನ್ ಖಾನ್ ಎದುರು ಅಬ್ಬರಿಸಲು ‘ಬಾಹುಬಲಿ’ ಖ್ಯಾತಿಯ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಸೂಕ್ತ ಎನಿಸಿ ‘ಸಿಖಂದರ್’ ತಂಡ ಅವರನ್ನು ಸಂಪರ್ಕಿಸಿದೆ. ಪಾತ್ರದ ಬಗ್ಗೆ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ. ಆದರೆ ಚಿತ್ರತಂಡ ಅಧಿಕೃತ ಘೋಷಣೆ ಆಗಬೇಕಿದೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾ

    ‘ಸಿಖಂದರ್’ ಚಿತ್ರವನ್ನು ಎ.ಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್‌ಗೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಖ್ಯಾತ ನಿರ್ಮಾಪಕ ಸಾಜಿದ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

    ಮೊದಲ ಬಾರಿಗೆ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯಾಗಿ ನಟಿಸುತ್ತಿರೋದ್ರಿಂದ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  • Narendra Modi Biopic: ಪಿಎಂ ಪಾತ್ರದಲ್ಲಿ ‘ಬಾಹುಬಲಿ’ ನಟ

    Narendra Modi Biopic: ಪಿಎಂ ಪಾತ್ರದಲ್ಲಿ ‘ಬಾಹುಬಲಿ’ ನಟ

    ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತು ಈಗಾಗಲೇ ಬಯೋಪಿಕ್‌ವೊಂದು ಬಂದಿದೆ. ಆದರೆ ಈಗ ಮತ್ತೊಮ್ಮೆ ಮೋದಿ ಅವರ ಜೀವನ ಕಥೆಯನ್ನು ತೆರೆಯ ಮೇಲೆ ತೋರಿಸಲು ತಯಾರಿ ನಡೆಯುತ್ತಿದೆ. ಪಿಎಂ ನರೇಂದ್ರ ಮೋದಿ ಪಾತ್ರದಲ್ಲಿ ತಮಿಳಿನ ನಟ ಸತ್ಯರಾಜ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಬಾಲಿವುಡ್ ಬಳಿಕ ಸೌತ್‌ನಲ್ಲಿ ಮತ್ತೊಮ್ಮೆ ಸಿನಿಮಾ ಮಾಡಿ ತೋರಿಸಲು ಚಿತ್ರತಂಡ ಸಜ್ಜಾಗಿದ್ದಾರೆ. ಈ ಬಾರಿ ಸಿ.ಎಚ್ ಕ್ರಾಂತಿ ಕುಮಾರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದೆ. ‘ಬಾಹುಬಲಿ’ (Bahubali) ಕಟ್ಟಪ್ಪ ಪಾತ್ರದಲ್ಲಿ ನಟಿಸಿದ್ದ ಸತ್ಯರಾಜ್ (Sathyaraj) ಅವರು ನರೇಂದ್ರ ಮೋದಿ ಪಾತ್ರಕ್ಕೆ ಬಣ್ಣ ಹಚ್ಚಲು ಆಫರ್ ಸಿಕ್ಕಿದೆ ಎನ್ನಲಾಗಿದೆ. ಇದನ್ನೂ ಓದಿ:ಚಂದ್ರಕಾಂತ್, ಪವಿತ್ರಾ ಮದುವೆ ರೂಮರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪುತ್ರ

    ಈಗಾಗಲೇ ಸೌತ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿರುವ ಸತ್ಯರಾಜ್ ಜೊತೆ ಚಿತ್ರತಂಡ ಸಂಪರ್ಕಿಸಿದೆ. ಸಿನಿಮಾ ಬಗ್ಗೆ ಒಂದು ಹಂತದ ಮಾತುಕತೆ ಕೂಡ ನಡೆದಿದೆ. ಆದರೆ ಪಿಎಂ ಪಾತ್ರದಲ್ಲಿ ನಟಿಸಲು ಸತ್ಯರಾಜ್ ಒಪ್ಪಿಗೆ ನೀಡಿದ್ರಾ? ಎಂಬುದು ತಿಳಿದು ಬಂದಿಲ್ಲ. ಸಿನಿಮಾತಂಡದಿಂದ ಅಧಿಕೃತ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ.

    ಪಿಎಂ ಬಯೋಪಿಕ್ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಿದೆ. ಈ ಹಿಂದೆ ಪೆರಿಯಾರ್ ಇವಿ ರಾಮಸ್ವಾಮಿ ಅವರ ಪಾತ್ರವನ್ನು ಮಾಡಿ ಸತ್ಯರಾಜ್ ಸೈ ಎನಿಸಿಕೊಂಡಿದ್ದರು. ಅವರ ನಟನೆಗೆ ತಮಿಳುನಾಡು ಸರ್ಕಾರದ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ಹಾಗಾಗಿ ಪಿಎಂ ಪಾತ್ರಕ್ಕೂ ಇವರೇ ಸೂಕ್ತ ಅಂತ ನೆಟ್ಟಿಗರು ಮಾತನಾಡಿಕೊಳ್ತಿದ್ದಾರೆ.

  • ಬಾಹುಬಲಿ ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್ ಅವರ ತಾಯಿ ನಿಧನ

    ಬಾಹುಬಲಿ ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್ ಅವರ ತಾಯಿ ನಿಧನ

    ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸಿನಿಮಾದಲ್ಲಿ ಕಟ್ಟಪ್ಪ (Kattappa) ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿ, ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ ನಟ ಸತ್ಯರಾಜ್ (Sathyaraj) ಅವರ ತಾಯಿ ನಾಥಂಬಳ್ ಕಾಳಿಂಗರಾಯರ್ (Nanthabal) ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು.

    ನಿನ್ನೆ ಸಂಜೆ 4 ಗಂಟೆಯ ಹೊತ್ತಿಗೆ ನಾಥಂಬಳ್ ಅವರು ಕೊಯಮತ್ತೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ (Passed Away) ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇಂದು ಅವರ ಅಂತ್ಯ ಸಂಸ್ಕಾರ ಕೊಯಮತ್ತೂರಿನಲ್ಲೇ (Coimbatore) ನಡೆಯಲಿದೆ. ನಾಥಂಬಳ್ ಅವರಿಗೆ  ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿದ್ದಾನೆ.

    ತಾಯಿ ನಿಧನರಾದಾಗ ಸತ್ಯರಾಜ್ ಅವರು ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ಶೂಟಿಂಗ್ ನಿಲ್ಲಿಸಿ ತೆರಳಿದ್ದಾರೆ. ಸತ್ಯರಾಜ್ ಅವರ ತಾಯಿಯ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಸತ್ಯರಾಜ್ ಬಹುಭಾಷಾ ನಟನಾಗಿದ್ದರಿಂದ ನಾನಾ ಚಿತ್ರರಂಗಗಳು ಶೋಕ ವ್ಯಕ್ತ ಪಡಿಸಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಾಲಿ ಧನಂಜಯ್ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್

    ಡಾಲಿ ಧನಂಜಯ್ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್

    ಡಾಲಿ ಧನಂಜಯ್ (Dhananjay) ಮತ್ತು ತೆಲುಗಿನ ಸತ್ಯದೇವ್ ಜೊತೆಯಾಗಿ ನಟಿಸುತ್ತಿರುವ, ಪ್ಯಾನ್ ಇಂಡಿಯಾ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಚಿತ್ರಕ್ಕೆ ‘ಜೀಬ್ರಾ’ (Zebra) ಎಂಬ ಹೆಸರನ್ನು ಇಡಲಾಗಿದೆ. ಓಲ್ಡ್ಟೌನ್ ಪಿಕ್ಚರ್ಸ್ ಎಲ್ಎಲ್ಪಿ ಮತ್ತು ಪದ್ಮಜಾ ಫಿಲಂಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಮಲ್ಟಿಸ್ಟಾರರ್ ಚಿತ್ರವನ್ನು ‘ಪೆಂಗ್ವಿನ್’ ಖ್ಯಾತಿಯ ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ 50 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಬಾಕಿ ಉಳಿದಿರುವ ಚಿತ್ರೀಕರಣವನ್ನು ಹೈದರಾಬಾದ್, ಕೊಲ್ಕತ್ತಾ, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

    ‘ಜೀಬ್ರಾ’ ಚಿತ್ರತಂಡಕ್ಕೆ ಇದೀಗ ‘ಕೆಜಿಎಫ್ 1 ಮತ್ತು 2’ ಮುಂತಾದ ಚಿತ್ರಗಳ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಆಗಮನವಾಗಿದೆ. ಇತ್ತೀಚೆಗಷ್ಟೇ ಅಜಯ್ ದೇವಗನ್ ನಿರ್ದೇಶನದ ‘ಭೋಲಾ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ಸಂಯೋಜಿಸಿರುವ ರವಿ ಬಸ್ರೂರು, ಇದೀಗ ಜೀಬ್ರಾ ಚಿತ್ರಕ್ಕೂ ಸಂಗೀತ ಸಂಯೋಜಿಸುತ್ತಿದ್ದಾರೆ.

    ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆಗೆ ಸಾಕ್ಷಿಯಾದ ಸೆಲೆಬ್ರಿಟಿಗಳು

    ಚಿತ್ರತಂಡಕ್ಕೆ  ರವಿ ಬಸ್ರೂರು ಸೇರ್ಪಡೆಯಾಗಿರುವ ವಿಷಯ ಕುರಿತು ಮಾತನಾಡಿರುವ ನಿರ್ಮಾಪಕರಾದ ಬಾಲಸುಂದರಂ ಮತ್ತು ಪದ್ಮಜಾ ರೆಡ್ಡಿ, ‘ರವಿ ಬಸ್ರೂರು ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವು ಈ ಚಿತ್ರದ ಹೈಲೈಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರು ಚಿತ್ರದ ಆತ್ಮವನ್ನು ತಮ್ಮ ಸಂಗೀತದ ಮೂಲಕ ಅದ್ಭುತವಾಗಿ ಎತ್ತಿಹಿಡಿಯಲಿದ್ದಾರೆ’ ಎಂದು ಹೇಳಿದ್ದಾರೆ. ‘ಜೀಬ್ರಾ’ ಚಿತ್ರದಲ್ಲಿ ಧನಂಜಯ ಮತ್ತು ಸತ್ಯದೇವ್ (Satyadev) ಜೊತೆಗೆ ‘ಕಟ್ಟಪ್ಪ’ ಖ್ಯಾತಿಯ ಸತ್ಯರಾಜ್, ಸುನೀಲ್ ಮುಂತಾದವರು ನಟಿಸುತ್ತಿದ್ದಾರೆ. ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣ ಮತ್ತು ಅನಿಲ್ ಕ್ರಿಶ್ ಅವರ ಸಂಕಲನ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

    ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

    ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಅವರು ನಟ ಸತ್ಯರಾಜ್ ನನ್ನ ಲಕ್ಕಿ ಮ್ಯಾಸ್ಕಟ್ ಎಂದು ಹೇಳಿದ್ದಾರೆ.

    ನಗರದಲ್ಲಿ ನಡೆದ ರಾಧೆ ಶ್ಯಾಮ್ ಸಿನಿಮಾದ ಪ್ರೀ-ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ಅವರು, ಸತ್ಯರಾಜ್ ಅವರು ನನ್ನ ಅದೃಷ್ಟದ ಮ್ಯಾಸ್ಕಾಟ್. ಅವರೊಂದಿಗೆ ‘ಮಿರ್ಚಿ’ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ನಂತರ ನಟಿಸಿದ ಬಾಹುಬಲಿ ಸಿನಿಮಾ ಕೂಡ ಬ್ಲಾಕ್ ಬಾಸ್ಟರ್ ಹಿಟ್ ಆಗಿತ್ತು. ‘ರಾಧೆ ಶ್ಯಾಮ್’ ನಮ್ಮಿಬ್ಬರ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಆಗಲಿದೆ ಎಂಬ ವಿಶ್ವಾಸ ನನಗಿದೆ. ಈ ಚಿತ್ರದಲ್ಲಿ ಅವರ ಪಾತ್ರವು ಪವರ್‍ಫುಲ್ ಮತ್ತು ಕುತೂಹಲಕಾರಿಯಾಗಿದೆ ಎಂದರು.

    ‘ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್ 1970ರ ದಶಕದ ಹಸ್ತಸಾಮುದ್ರಿಕ ತಜ್ಞ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಟಲಿ, ಜಾರ್ಜಿಯಾ ಮತ್ತು ಹೈದರಾಬಾದ್‍ನ ವಿವಿಧ ಸ್ಥಳಗಳಲ್ಲಿ ಸಿನಿಮಾ ಶೂಟಿಂಗ್ ಮಾಡಲಾಗಿದೆ. ವಿಶೇಷವೆಂದರೆ ಈ ಚಿತ್ರಕ್ಕೆ ಅಮಿತಾಬ್ ಬಚ್ಚನ್ ಧ್ವನಿ ನೀಡಿದ್ದಾರೆ. ಇದನ್ನೂ ಓದಿ:  ಕಾರ್ ಅಪಘಾತದ ಬಗ್ಗೆ ಹೊಸ ಹಾಡು ರಚಿಸಿದ ಕಚ್ಚಾ ಬಾದಮ್ ಗಾಯಕ ಭುಬನ್

    ಯುವಿ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರವನ್ನು ರೆಡ್ ಜೈಂಟ್ ಮೂವೀಸ್ ಪ್ರಸ್ತುತಪಡಿಸಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಸತ್ಯರಾಜ್ ಮತ್ತು ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

  • ಬಾಹುಬಲಿ ಕಟ್ಟಪ್ಪ ಪಾತ್ರಧಾರಿ ನಟ ಸತ್ಯರಾಜ್‍ಗೆ ಕೊರೊನಾ ಪಾಸಿಟಿವ್

    ಬಾಹುಬಲಿ ಕಟ್ಟಪ್ಪ ಪಾತ್ರಧಾರಿ ನಟ ಸತ್ಯರಾಜ್‍ಗೆ ಕೊರೊನಾ ಪಾಸಿಟಿವ್

    ಚೆನ್ನೈ: ಕಾಲಿವುಡ್ ನಟ ಸತ್ಯರಾಜ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಬಾಹುಬಲಿ ಸಿನಿಮಾದಲ್ಲಿ ಕಟ್ಟಪ್ಪ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಫೇಮಸ್ ಆಗಿದ್ದ ನಟ ಸತ್ಯರಾಜ್ ಅವರು ಕೊರೊನಾ ಪಾಸಿಟವ್ ಬಂದಿದ್ದು, ಇದೀಗ ಅವರನ್ನು ಚೆನ್ನೈನ ಅಮಿಂಜಿಕ್ಕರೈನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೀಘ್ರವೇ ಆಸ್ಪತ್ರೆಯಿಂದ ಅವರ ಹೆಲ್ತ್ ಬುಲೆಟಿನ್ ಹೊರಬೀಳಲಿದೆ. ಇದನ್ನೂ ಓದಿ: ಕುಟುಂಬದೊಂದಿಗೆ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿದ ಯಶ್

    ಮತ್ತೊಂದೆಡೆ ನಿರ್ದೇಶಕ ಪ್ರಿಯದರ್ಶನ್ ಅವರಿಗೂ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಕೊಂಚ ಆರೋಗ್ಯದಲ್ಲಿ ಚೇತರಿಕೆಕಂಡಿದೆ. ಇದನ್ನೂ ಓದಿ: ಪ್ರಿನ್ಸ್ ಮಹೇಶ್ ಬಾಬುಗೆ ಕೊರೊನಾ ಪಾಸಿಟಿವ್

    ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಕೊರೊನಾ ಮೂರನೇ ಅಲೆ ಆರಂಭವಾಗಿದೆ. ಇತ್ತೀಚೆಗಷ್ಟೇ ಟಾಲಿವುಡ್ ನಟ ಮಹೇಶ್ ಬಾಬು, ಸಂಗೀತಾ ಸಂಯೋಜಕ ಥಮನ್ ಮತ್ತು ನಟಿ ತ್ರಿಶಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳಿಗೆ ಕೊರೊನಾ ದೃಢಪಟ್ಟಿದೆ.

  • ಕಟ್ಟಪ್ಪ ಖ್ಯಾತಿಯ ಸತ್ಯರಾಜ್, ಸೂರ್ಯ ಸೇರಿ ತಮಿಳಿನ 8 ಮಂದಿ ನಟರ ವಿರುದ್ಧ ಅರೆಸ್ಟ್ ವಾರೆಂಟ್

    ಕಟ್ಟಪ್ಪ ಖ್ಯಾತಿಯ ಸತ್ಯರಾಜ್, ಸೂರ್ಯ ಸೇರಿ ತಮಿಳಿನ 8 ಮಂದಿ ನಟರ ವಿರುದ್ಧ ಅರೆಸ್ಟ್ ವಾರೆಂಟ್

    ಚೆನ್ನೈ: ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳಿನ ಖ್ಯಾತ ನಟರ ವಿರುದ್ಧ ಊಟಿ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.

    ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್, ಸೂರ್ಯ, ಶರತ್ ಕುಮಾರ್, ಚೆರಣ್, ವಿಜಯಕುಮಾರ್, ವಿವೇಕ್, ಅರುಣ್, ವಿಜಯ್ ಹಾಗೂ ಶ್ರೀಪ್ರಿಯಾ ಮೊದಲಾದವರ ವಿರುದ್ಧ ಕೋರ್ಟ್ ಇಂದು ಅರೆಸ್ಟ್ ವಾರಂಟ್ ಜಾರಿ ಮಾಡಿದೆ.

    ಏನಿದು ಪ್ರಕರಣ?: 2009ರ ಅಕ್ಟೋಬರ್ 7ರಂದು ಚೆನ್ನೈನಲ್ಲಿ ನಡೆದಿದ್ದ ದಕ್ಷಿಣ ಭಾರತ ಸಿನಿಮಾ ನಟರ ಸಂಘದ ಸಭೆಯ ವೇಳೆ ತಮಿಳು ಪತ್ರಿಕೆ ದೈನಿಕದ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿತ್ತು. ಪತ್ರಿಕೆ ತಮಿಳು ಚಿತ್ರರಂಗದ ನಟ-ನಟಿಯರ ಮಾನಹಾನಿ ಮಾಡುವಂತಹ ಲೇಖನಗಳನ್ನು ಪ್ರಕಟಿಸಿತ್ತದೆ ಅಂತಾ ಸಂಘ ಆಕ್ರೋಶ ವ್ಯಕ್ತಪಡಿಸಿತ್ತು. ಈ ಕುರಿತು ಪತ್ರಕರ್ತ ಎಮ್ ರೊಜಾರಿಯೋ ಮರಿಯಾ ಸುಸೈ ಅವರು, ಚಿತ್ರ ನಟರ ಬಗ್ಗೆ ಬರೆದಿದ್ದಕ್ಕೆ ನನ್ನ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಅಂತಾ ಆರೋಪಿಸಿ ಊಟಿ ಮ್ಯಾಜಿಸ್ಟ್ರೇಟ್ ಕೋರ್ಟ್‍ನಲ್ಲಿ ದೂರು ದಾಖಲಿಸಿದ್ದರು.

    ಪ್ರಕರಣದ ಸಂಬಂಧ ನಟ ಸೂರ್ಯ, ಸತ್ಯರಾಜ್, ಶರತ್‍ಕುಮಾರ್, ಸುಪ್ರಿಯಾ, ವಿಜಯ್ ಕುಮಾರ್, ಅರುಣ್ ವಿಜಯ್, ವಿವೇಕ್ ಹಾಗೂ ಚೇರನ್‍ಗೆ ವಿಚಾರಣೆಗೆ ಹಾಜರಾಗುವಂತೆ 2011ರ ಡಿಸೆಂಬರ್ 19ರಂದು ಕೋರ್ಟ್ ಸೂಚಿಸಿತ್ತು. ಆದ್ರೆ ನಟರು ಕೋರ್ಟ್ ಗೆ ಹಾಜರಾಗಲು ನಿರಾಕರಿಸಿದ್ದರು. ಅಲ್ಲದೇ ಕೋರ್ಟ್‍ಗೆ ಹಾಜರಾಗದೇ ನೇರವಾಗಿ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ಕೇಳಿ ಮದ್ರಾಸ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅವರ ಅರ್ಜಿಯನ್ನು ವಜಾ ಮಾಡಿತ್ತು.

    ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಮತ್ತೆ 2017ರ ಮೇ 15ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿತ್ತು. ಆ ಬಾರಿಯೂ ವಿಚಾರಣೆಗೆ ಹಾಜರಾಗದ ತಮಿಳು ನಟರ ವಿರುದ್ಧ ಇದೀಗ ಊಟಿಯ ಮ್ಯಾಜಿಸ್ಟ್ರೇಟ್ ನ್ಯಾ. ಸೆಂತಿಲ್ ಕುಮಾರ್ ರಾಜವೇಲ್ ಅವರು ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದ್ದಾರೆ.

  • ವೈರಲ್ ಆಗಿದೆ ಶಿವಗಾಮಿ, ಕಟ್ಟಪ್ಪ ನಡುವಿನ ರೊಮ್ಯಾನ್ಸ್ ವಿಡಿಯೋ!

    ವೈರಲ್ ಆಗಿದೆ ಶಿವಗಾಮಿ, ಕಟ್ಟಪ್ಪ ನಡುವಿನ ರೊಮ್ಯಾನ್ಸ್ ವಿಡಿಯೋ!

    ಬೆಂಗಳೂರು: ಮಾಹಿಷ್ಮತಿ ಸಾಮ್ರಾಜ್ಯದ ರಾಜಮಾತಾ ಶಿವಗಾಮಿ ಮತ್ತು ಅಂಗರಕ್ಷಕ ಕಟ್ಟಪ್ಪ ನಡುವಿನ ರೊಮ್ಯಾಂಟಿಕ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಹೌದು, ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿ ಪಾತ್ರದಲ್ಲಿ ನಟಿಸಿದ್ದ ನಟಿ ರಮ್ಯಾಕೃಷ್ಣ ಮತ್ತು ಕಟ್ಟಪ್ಪ ಪಾತ್ರ ನಿರ್ವಹಿಸಿದ ಸತ್ಯರಾಜ್ ಇಬ್ಬರೂ ಜಾಹೀರಾತಿನಲ್ಲಿ ಸತಿ-ಪತಿಗಳಾಗಿ ಕಾಣಿಸಿಕೊಂಡಿದ್ದರೆ. ದೃಶ್ಯದಲ್ಲಿ ಇವರಿಬ್ಬರ ಕೋಳಿ ಜಗಳ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

    ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

    ವೀಡಿಯೋ ವೈರಲ್ ಆಗಿದ್ದೇಕೆ?:
    ಇತ್ತೀಚಿಗೆ ತೆರೆಕಂಡ ಬಾಹುಬಲಿ-2 ಸಿನಿಮಾ ಪೌರಾಣಿಕ ಕಥೆಯುಳ್ಳ ಸಿನಿಮಾ. ಚಿತ್ರದಲ್ಲಿ ಕಾಸ್ಟ್ಯೂಮ್ ಎಲ್ಲವೂ ರಾಜಮನೆತನದ ಶೈಲಿಯಲ್ಲಿದೆ. ಅಂತೆಯೇ ಈ ಜಾಹೀರಾತಿನಲ್ಲಿ ರಮ್ಯಾಕೃಷ್ಣ ಮತ್ತು ಸತ್ಯರಾಜ್ ಪೌರಾಣಿಕ ಪಾತ್ರಧಾರಿಗಳ ಉಡುಗೆ-ತೊಡುಗೆ ಕೂಡ ರಾಜಶೈಲಿಯಲ್ಲಿದೆ. ಜಾಹೀರಾತು ಸೆಟ್‍ನ್ನು ಸಹ ಬಾಹುಬಲಿ ಸಿನಿಮಾದ ಸೆಟ್ ಹಾಗೆ ನಿರ್ಮಿಸಿದ್ದರಿಂದ ವೀಡಿಯೋ ವೈರಲ್ ಆಗಿದೆ.

    ಇದೊಂದು ಬಟ್ಟೆ ಜವಳಿ ಶೋರೂಂ ಒಂದರ ಜಾಹೀರಾತಾಗಿದ್ದು, ಕೋಪಗೊಂಡ ಪತ್ನಿಯನ್ನು ಮನವೊಲಿಸಲು ಪತಿ ಸೀರೆ ನೀಡಿ ಇಂಪ್ರೆಸ್ ಮಾಡುವ ವೀಡಿಯೋ ಇದಾಗಿದೆ.

    ಇದನ್ನೂ ಓದಿ: ಪ್ರಭಾಸ್, ರಾಣಾ, ಅನುಷ್ಕಾ, ತಮನ್ನಾ, ರಮ್ಯಕೃಷ್ಣಗೆ ಎಷ್ಟು ಸಂಭಾವನೆ ಸಿಕ್ಕಿದೆ?

    ಇದನ್ನೂ ಓದಿ: ಒಂದು ಸಾವಿರ ಕೋಟಿ ಕ್ಲಬ್ ಸೇರಿದ ಬಾಹುಬಲಿ: ಯಾವ ದಿನ ಎಷ್ಟು ಕೋಟಿ ರೂ. ಕಲೆಕ್ಷನ್ ಆಗಿತ್ತು?

    https://www.youtube.com/watch?v=eowa5h4RqYY

  • ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ ಅನ್ನೋದು ರಿವೀಲ್ ಆಯ್ತು!

    ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ ಅನ್ನೋದು ರಿವೀಲ್ ಆಯ್ತು!

    ಬೆಂಗಳೂರು: ಬಾಹುಬಲಿ-1 ಚಿತ್ರ ರಿಲೀಸ್ ಆದ ಬಳಿಕ `ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು. ಇದೀಗ ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ ಅಂತಾ ಟಾಲಿವುಡ್ ಮೂಲಗಳಿಂದ ತಿಳಿದುಬಂದಿದೆ.

    ಏಪ್ರಿಲ್ 28 ಬಾಹುಬಲಿ-2 ಚಿತ್ರ ಬಿಡುಗಡೆಯಾಗುತ್ತಿದ್ದು, ಈ ಮೊದಲೇ ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಲೀಕ್ ಆಗಿದೆ. ಕಟ್ಟಪ್ಪ ಕೊಂದಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರುವ ಸುದ್ದಿ ಆಂಧ್ರದಲ್ಲಿ ಹರಿದಾಡುತ್ತಿದೆ. ಆದ್ರೆ ಇದು ನಿಜವೋ ಸುಳ್ಳೋ ಎಂಬುವುದು ತಿಳಿದುಬಂದಿಲ್ಲ. ಯಾಕಂದ್ರೆ ಈ ಬಗ್ಗೆ ಚಿತ್ರತಂಡ ಹೇಳಿದ್ದಲ್ಲ. ಗಾಸಿಪ್ ಸುದ್ದಿಯೊಂದು ವೈರಲ್ ಆಗಿದೆ.

    ಬಾಹುಬಲಿಯನ್ನು ಕಟ್ಟಪ್ಪ ಸಾಯಿಸಲು ಕಾರಣ ಶಿವಗಾಮಿ ಕಾರಣವಂತೆ. ಬಾಹುಬಲಿ ವಿರುದ್ಧವಾಗಿ ಶಿವಗಾಮಿಗೆ ಬಲ್ಲಾಳ ದೇವ, ಆತನ ತಂದೆ ಬಿಜ್ಜಲ ದೇವ ಸುಳ್ಳು ಹೇಳುತ್ತಾರಂತೆ. ಅದನ್ನು ನಂಬಿದ ಶಿವಗಾಮಿ, ಬಾಹುಬಲಿಯನ್ನು ಸಾಯಿಸುವಂತೆ ಕಟ್ಟಪ್ಪನಿಗೆ ಆದೇಶಿಸುತ್ತಾರಂತೆ. ಇದೇ ಬಾಹುಬಲಿಯನ್ನು ಕಟ್ಟಪ್ಪ ಸಾಯಿಸಲು ಕಾರಣ ಎಂದು ಹರಿದಾಡುತ್ತಿದೆ.

    ಈ ಹಿಂದೆ ಕಟ್ಟಪ್ಪ ಉತ್ತರಿಸ್ದು ಹೀಗೆ: ಬಾಹುಬಲಿ 1 ಬಿಡುಗಡೆಯ ಬಳಿಕ ಸತ್ಯರಾಜ್ ಗೆ ಅಭಿಮಾನಿಯೊಬ್ಬರು ವೀಡಿಯೋ ಮೂಲಕ `ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ಯಾಕೆ? ಅನ್ನೋ ಪ್ರಶ್ನೆ ಕೇಳಿದ್ದರಂತೆ. ಈ ಪ್ರಶ್ನೆಗೆ ಉತ್ತರಿಸಿದ ಕಟ್ಟಪ್ಪ, `ನಾನು ಎಲ್ಲೇ ಹೋದರೂ ಅಭಿಮಾನಿಗಳು ಈ ಪ್ರಶ್ನೆಯನ್ನು ಕೇಳುತ್ತಾರೆ. ಈ ಪ್ರಶ್ನೆಗೆ ನಾನು ಬೇಸರ ಮಾಡಿಕೊಂಡಿಲ್ಲ. ಅಷ್ಟೇ ಅಲ್ಲದೇ ನನ್ನ ಕುಟುಂಬದವರಿಗೂ ಈ ಪ್ರಶ್ನೆಗೆ ನಾನು ಉತ್ತರಿಸಿಲ್ಲ. ಆದರೆ ಈಗ ನಾನು ಹೇಳುತ್ತೇನೆ. ನಿರ್ದೇಶಕ ರಾಜಮೌಳಿ ಆದೇಶದ ಮೇರೆಗೆ ನಾನು ಬಾಹುಬಲಿಯನ್ನು ಕೊಂದಿದ್ದೇನೆ’ ಅಂತಾ ಹಾಸ್ಯದ ಉತ್ತರ ನೀಡಿದ್ದರು.

    ಇದೇ ಪ್ರಶ್ನೆಯನ್ನು ರಾಜಮೌಳಿ ಅವರಿಗೆ ಕೇಳಿದಾಗ `ಕಟ್ಟಪ್ಪ ನನ್ನ ಮಾತನ್ನು ಮಾತ್ರ ಕೇಳುತ್ತಾನೆ. ಬಾಹುಬಲಿಯನ್ನು ಕೊಲ್ಲಲು ನಾನು ಹೇಳಿದ್ದಕ್ಕೆ ಕಟ್ಟಪ್ಪ ಕೊಂದಿದ್ದಾನೆ’ ಅಂತಾ ಅವರೂ ಫನ್ನಿ ಉತ್ತರ ನೀಡಿದ್ದರು.

    ಒಟ್ಟಿನಲ್ಲಿ ಬಾಹುಬಲಿ 2 ಸಿನಿಮಾ ಕಥೆ ಮತ್ತು ಸನ್ನಿವೇಶಗಳ ದೃಷ್ಟಿಯಲ್ಲಿ `ಬಾಹುಬಲಿ 1’ಕ್ಕಿಂತ ವಿಭಿನ್ನವಾಗಿದೆಯಂತೆ. ಒಟ್ಟಿನಲ್ಲಿ ಬಾಹುಬಲಿಯನ್ನು ಕಟ್ಟಪ್ಪ ಕೊಂದಿರುವುದರ ಹಿಂದಿನ ನಿಜವಾದ ಕಾರಣ ತಿಳಿಯಬೇಕಾದ್ರೆ ಚಿತ್ರ ಬಿಡುಗಡೆವರೆಗೆ ಕಾದುನೋಡಬೇಕು.

    ಇದನ್ನೂ ಓದಿ: ‘ಸಾಹೋರೆ ಬಾಹುಬಲಿ’ ವೀಡಿಯೋ ಸಾಂಗ್ ಪ್ರೋಮೋ ರಿಲೀಸ್

    ಇದನ್ನೂ ಓದಿ: ಬಾಹುಬಲಿ -2 ಹೇಗಿದೆ? ಯುಎಇ ಸೆನ್ಸಾರ್ ಸದಸ್ಯ ಹೇಳಿದ್ದು ಹೀಗೆ

  • ಸತ್ಯರಾಜ್ ಕೇಳಿದ್ದು ವಿಷಾದ, ಕ್ಷಮೆಯಲ್ಲ ಅನ್ನೋ ಮಂದಿಗೆ ವಾಟಾಳ್ ಪ್ರತಿಕ್ರಿಯೆ ನೀಡಿದ್ದು ಹೀಗೆ

    ಸತ್ಯರಾಜ್ ಕೇಳಿದ್ದು ವಿಷಾದ, ಕ್ಷಮೆಯಲ್ಲ ಅನ್ನೋ ಮಂದಿಗೆ ವಾಟಾಳ್ ಪ್ರತಿಕ್ರಿಯೆ ನೀಡಿದ್ದು ಹೀಗೆ

    ಬೆಂಗಳೂರು: ಕ್ಷಮಾಪಣೆ – ವಿಷಾದ ಎನ್ನುವ ಪದಗಳಲ್ಲಿ ವ್ಯತ್ಯಾಸ ಇರ್ಬೋದು. ಆದ್ರೆ ಒಂದು ತೀರ್ಮಾನಕ್ಕೆ ಬಂದು ಸಮಗ್ರ ಕನ್ನಡಿಗರ ಎದುರು ಕ್ಷಮೆಯನ್ನು ಕೇಳ್ತೀನಿ ಅಂತಾ ಆ ಮನುಷ್ಯ ವಿಷಾದ ಅಂತಾ ಮಾಡಿದ್ದಾರೆ. ಹೀಗಾಗಿ ಬಾಹುಬಲಿ ಚಿತ್ರ ರಿಲೀಸ್ ಆಗೋದನ್ನ ತಡೆಯೊಲ್ಲ ಅಂತಾ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಒಂದು ರೂಮಿನಲ್ಲಿ ಕೂತು ಹೇಳಿದ್ರು ಎಲ್ಲಾ ಮಾಧ್ಯಮಗಳಲ್ಲಿ ಸತ್ಯರಾಜ್ ವಿಷಾದಪಡಿಸಿದ್ದಾರೆ. ಕ್ಷಮಾಪಣೆ ಮತ್ತು ವಿಷಾದ ಅದರಲ್ಲಿ ಭಾರೀ ದೊಡ್ಡ ವ್ಯತ್ಯಾಸವೇನಿಲ್ಲ. 30 ವರ್ಷ ಶಾಸನ ಸಭೆಯಲ್ಲಿದ್ದೆ. ಅಲ್ಲಿ ಅನೇಕ ಬಾರಿ ವಿಷಾದ ವ್ಯಕ್ತಪಡಿಸಿದ್ದೇನೆ. ಹೀಗಾಗಿ ವಿಷಾದ ಅನ್ನೋದು ಸಂಸದೀಯ ಭಾಷೆಯಾಗಿದೆ. ಇದನ್ನ ಜಾಸ್ತಿ ಬೆಳೆಸಬಾರದು. ಹೀಗಾಗಿ ಬಾಹುಬಲಿ ಚಿತ್ರವನ್ನ ತಡೆಯೋದಿಲ್ಲ. ಚಿತ್ರ ಹೋಗುತ್ತೆ. ನೀವೂ ಸೇರಿದಂತೆ ಎಲ್ರೂ ಚಿತ್ರ ನೋಡ್ಬೋದು ಅಂತಾ ವಾಟಾಳ್ ಸ್ಪಷ್ಟಪಡಿಸಿದ್ದಾರೆ.

    ನಾನು ಹೇಳಿದ್ದು ತಪ್ಪಾಗಿದ್ರೆ ವಿಷಾದಿಸುತ್ತೇನೆ ಅಂತಾ ಸತ್ಯರಾಜ್ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಹೀಗಾಗಿ ನಮ್ಮ ಒಕ್ಕೂಟ ಒಂದು ತೀರ್ಮಾನಕ್ಕೆ ಬಂದಿದೆ. ಇದನ್ನ ಇಲ್ಲಿಗೆ ಕೈ ಬಿಡುವುದು ಒಳ್ಳೆಯದು. ಜಾಸ್ತಿ ಬೆಳೆಸಿಕೊಂಡು ಹೋಗೋದಕ್ಕಿಂತ ನಮಗೆ ಬೇರೆ ಬೇಕಾದಷ್ಟು ಹೋರಾಟಗಳಿವೆ ಅಂತಾ ಹೇಳಿದ್ರು.

    ಇದನ್ನೂ ಓದಿ: ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಕಟ್ಟಪ್ಪ

    ಸತ್ಯರಾಜ್ ಗೆ ಹೇಳ್ತಾ ಇದ್ದೀನಿ,`ನಿಮ್ದು ಬಾಯಿ, ನಾಯಿ ಭದ್ರ ಇರ್ಬೇಕು. ಇನ್ನು ಮುಂದಕ್ಕೆ ಎಲ್ಲೇ ಮಾತನಾಡ್ವಾಗ್ಲೂ ಯೋಚನೆ ಮಾಡಿ ಮಾತನಾಡಿ. ಇಲ್ಲೆ ಮಾತನಾಡಿದ್ರೂ ನಾನು ತಮಿಳುನಾಡು ಪರ ಅಂತಾ ಹೇಳಿ ನಮ್ಮದೇನೂ ಅಭ್ಯಂತರವಿಲ್ಲ. ಆದ್ರೆ ಕನ್ನಡಿಗರ ಬಗ್ಗೆ ಏನಾದ್ರೂ ಬಾಯ್ಬಿಟ್ಟು ಚಕಾರ ಎತ್ತಿದ್ರೆ ಮುಂದೆ ನೀವು ಯಾವುದೇ ಚಿತ್ರದಲ್ಲಿ ಪಾತ್ರ ಮಾಡಿದ್ರೂ, ಕರ್ನಾಟಕದಲ್ಲಿ ಸಂಪೂರ್ಣವಾಗಿ ಅದರ ಬಿಡುಗಡೆಗೆ ಅವಕಾಶ ಕೊಡಲ್ಲ ಅಂತಾ ವಾಟಾಳ್ ಎಚ್ಚರಿಕೆ ನೀಡಿದರು.

    https://www.youtube.com/watch?v=W4pA8G9kRWQ