Tag: ಸತೀಶ ಜಾರಕಿಹೊಳಿ

  • ಆರೋಪ ಮಾಡುವುದೇ ಬಿಜೆಪಿ ಕೆಲಸ: ಸತೀಶ್‌ ಜಾರಕಿಹೊಳಿ

    ಆರೋಪ ಮಾಡುವುದೇ ಬಿಜೆಪಿ ಕೆಲಸ: ಸತೀಶ್‌ ಜಾರಕಿಹೊಳಿ

    ಬೆಳಗಾವಿ: ನಾವು ಲ್ಯಾಪ್‍ಟಾಪ್ ಹಂಚುತ್ತಿಲ್ಲ. ಆರೋಪ ಮಾಡುವುದೇ ಬಿಜೆಪಿ ಕೆಲಸ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಲ್ಯಾಪ್‍ಟಾಪ್ ಹಂಚಲಿದ್ದಾರೆ ಎಂಬ ಮಾಜಿ ಶಾಸಕ ಸಂಜಯ್ ಪಾಟೀಲ್ ಆರೋಪಕ್ಕೆ ಉತ್ತರಿಸಿದರು. ಲ್ಯಾಪ್‍ಟಾಪ್‍ನ್ನು ನಾವು ಹಂಚುತ್ತಿಲ್ಲ. ಆರೋಪ ಮಾಡುವುದೇ ಅವರ ಕೆಲಸವಾಗಿದೆ. ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಏನೂ ಹೇಳದೇ ಅನಾವಶ್ಯಕವಾಗಿ ಏನೋ ಒಂದು ಹೇಳುತ್ತಾರೆ. ಅದು ಅವರ ಚುನಾವಣೆಯ ತಂತ್ರವಾಗಿದೆ. ಆದರೆ, ಜನರು ನಮ್ಮ ಪರವಾಗಿದ್ದಾರೆ. ಅವರ ಮನವೊಲಿಸಿ, ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ವೋಟ್ ಪಡೆಯಬೇಕಿದೆ. ಬಿಜೆಪಿ, ಜೆಡಿಎಸ್ ಸೇರಿ ಎಲ್ಲರಿಗೂ ಫೋನ್ ಮಾಡಿ ನಾವು ಸಂಪರ್ಕಿಸಬಹುದು. ಯಾರು ಯಾರಿಗೆ ಬೇಕಾದರೂ ಫೋನ್ ಮಾಡಬಹುದು. ನಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆದರೆ ಮತದಾರರಿಗೆ ಯಾವುದೇ ಪಕ್ಷದ ಸಂಬಂಧ ಇರೋದಿಲ್ಲ. ಒಳ್ಳೆಯವರು ಯಾರು ಇರುತ್ತಾರೆ ಅವರಿಗೆ ಮತ ಹಾಕುತ್ತಾರೆ. ಈ ನಿಟ್ಟಿನಲ್ಲಿ ಸಂಪರ್ಕ ಯಾಕೆ ಮಾಡಬಾರದು? ಬಿಜೆಪಿ, ಜೆಡಿಎಸ್ ಸೇರಿ ಯಾರಿಗೆ ಬೇಕಾದರೂ ಫೋನ್ ಮಾಡಬಹುದು ತಿರುಗೇಟು ನೀಡಿದರು. ಇದನ್ನೂ ಓದಿ: ಲ್ಯಾಪ್‍ಟಾಪ್ ಹಂಚಿ ಗೆಲ್ಲುವವರು ವಿನ್ನರ್ ಅಲ್ಲ ಕೆಲಸ ಮಾಡಿ ಗೆಲ್ಲುವವರು ವಿಜಯಶಾಲಿಗಳು: ಸಂಜಯ್ ಪಾಟೀಲ್ ವಾಗ್ದಾಳಿ

    ಶಿಕ್ಷಕರು, ಪದವೀಧರರು ಎಂದರೆ ಬಹಳಷ್ಟು ತಿಳುವಳಿಕೆ ಇರುವವರಾಗಿದ್ದಾರೆ. ಶಿಕ್ಷಕರ ಸಂಘಟನೆಗಳ ಜೊತೆಗೆ ನಾವು ಗುರುತಿಸಿಕೊಂಡಿಲ್ಲ. ಆದರೆ ಅಲ್ಲಿ ಇರುವವರು ಸ್ವತಂತ್ರವಾಗಿರುವ ಬಹಳಷ್ಟು ಶಿಕ್ಷಕರಿದ್ದಾರೆ. ಕಾಂಗ್ರೆಸ್ ಪಕ್ಷದ ಬೆಂಬಲಿಗರಿದ್ದಾರೆ. ನಮ್ಮ ಪರವಾಗಿ ಎಲ್ಲರೂ ಬರುತ್ತಾರೆ. ಮತದಾರರ ಮನವೊಲಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಉಕ್ರೇನ್‌ ನಾಗರಿಕನನ್ನು ಕೊಂದ ರಷ್ಯಾ ಸೈನಿಕನಿಗೆ ಜೀವಾವಧಿ ಶಿಕ್ಷೆ

  • ಸಂಕ್ರಾಂತಿಯ `ಕ್ರಾಂತಿ’ ಆದ್ರೆ ನೋಡೋಣ: ಸತೀಶ್ ಜಾರಕಿಹೊಳಿ

    ಸಂಕ್ರಾಂತಿಯ `ಕ್ರಾಂತಿ’ ಆದ್ರೆ ನೋಡೋಣ: ಸತೀಶ್ ಜಾರಕಿಹೊಳಿ

    ಬೆಳಗಾವಿ: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಂಕ್ರಾಂತಿಯ ನಂತರ ಕ್ರಾಂತಿ ನಡೆಯುತ್ತದೆ ಎಂದು ಹೇಳಲಾಗುತ್ತಿದ್ದು, ಕ್ರಾಂತಿ ಆದರೆ ನೋಡೋಣ ಎಂದು ಅರಣ್ಯ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸಂಕ್ರಾಂತಿ ಕ್ರಾಂತಿ ಆದರೆ ನಾವು ಇಲ್ಲೇ ಇರುತ್ತೇವೆ. ದೇಶ, ರಾಜ್ಯ ಹಾಗೂ ನಮ್ಮ ಸರ್ಕಾರ ಇಲ್ಲೇ ಇರುತ್ತದೆ. ಅಲ್ಲಿಯವರೆಗೂ ಕಾದು ನೋಡೋಣ. ಆದರೆ ಆಪರೇಷನ್ ಕಮಲದ ಬಗ್ಗೆ ನನಗೆ ಮಾಹಿತಿ ಇಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದೆಲ್ಲ ಸಾಮಾನ್ಯ ಎಂದರು.

    ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ಭೇಟಿ ನೀಡಿದ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ನನ್ನ ಸಂಪರ್ಕಕ್ಕೆ ಇದೂವರೆಗೂ ರಮೇಶ್ ಜಾರಕಿಹೊಳಿ ಅವರು ಸಿಕ್ಕಿಲ್ಲ. ಆದರೆ ಅವರು ಪಕ್ಷದಲ್ಲೇ ಇರುತ್ತಾರೆ. ದೆಹಲಿಯಿಂದ ಅವರು ವಾಪಸ್ ಆದ ಬಳಿಕ ಕುಳಿತು ಚರ್ಚೆ ಮಾಡುತ್ತೇವೆ. ಸಿದ್ದರಾಮಯ್ಯ ಅವರು ಕೂಡ ಸಂಪರ್ಕ ಮಾಡಲು ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ರಮೇಶ್ ಅವರು ಯಾವಾಗ ಬರುತ್ತಾರೆ ನೋಡಿ ಸಂಪರ್ಕ ಮಾಡುತ್ತೇನೆ ಎಂದರು.

    ವಿರೋಧಿ ಪಕ್ಷಗಳ ಹೇಳಿಕೆಗಳ ಬಗ್ಗೆ ಮಾತನಾಡಿದ ಅವರು, ಸಮ್ಮಿಶ್ರ ರಚನೆಯಾದ ಸಮಯದಿಂದಲೂ ಅವರು ಇದನ್ನೇ ಹೇಳುತ್ತಿದ್ದಾರೆ. ಆದರೆ ಏನು ನಡೆದಿಲ್ಲ. ಇದು ಊಹಾಪೋಹ ಅಷ್ಟೇ, ನಮ್ಮ ಸರ್ಕಾರ ಸುಭದ್ರವಾಗಿದೆ. ಸಮ್ಮಿಶ್ರ ಸರ್ಕಾರ ರಚನೆ ವೇಳೆ ರಾಜಕೀಯ ತಂತ್ರಗಾರಿಕೆ ನಡೆಯುತ್ತದೆ ಆದರೆ ಅದು ಯಶಸ್ವಿಯಾಗುವುದಿಲ್ಲ ಎಂದು ಟೀಕಿಸಿದರು.

    ಇದೇ ವೇಳೆ ಅರಣ್ಯ ಇಲಾಖೆ ಬಗ್ಗೆ ಮಾಹಿತಿ ನೀಡಿದ ಸಚಿವರು, ನಮ್ಮ ಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮ, ಅರಣ್ಯ ಬೆಳೆಸುವುದಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾವುದು. ಆದರೆ ಅದಕ್ಕೆ ಕಾಲಾವಕಾಶ ಬೇಕು. ಕಾನೂನು ಬದ್ಧವಾಗಿ ಹೆಚ್ಚು ಹಕ್ಕು ಪತ್ರಗಳನ್ನ ನೀಡಿದ್ದು, ಈಡೀ ರಾಜ್ಯಾದ್ಯಂತ ಹಕ್ಕು ಪತ್ರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv