Tag: ಸತೀಶ್ ನೀನಾಸಂ

  • ‘ಗೋದ್ರಾ’ಗಾಗಿ ಬಂದ ಕಾಲಿವುಡ್ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಕೆ.ಪಿ!

    ‘ಗೋದ್ರಾ’ಗಾಗಿ ಬಂದ ಕಾಲಿವುಡ್ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಕೆ.ಪಿ!

    ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಅಭಿನಯದ ‘ಗೋದ್ರಾ’ ಚಿತ್ರ ದಿನದಿಂದ ದಿನಕ್ಕೆ ಸಖತ್ ಕ್ಯೂರಿಯಾಸಿಟಿ ಮೂಡಿಸುತ್ತಿದೆ. ಟೀಸರ್ ಮೂಲಕ ಸಂಚಲನ ಸೃಷ್ಟಿಸಿರುವ ಈ ಚಿತ್ರ ನೈಜ ಘಟನೆಯಾಧಾರಿತ ಸ್ಟೋರಿ ಲೈನ್ ಒಳಗೊಂಡಿದೆ. ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಕೆ.ಪಿ ಗೋದ್ರಾ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿದ್ದು, ಸ್ವತಃ ಚಿತ್ರದ ನಿರ್ದೇಶಕ ಕೆ.ಎಸ್.ನಂದೀಶ್ ಇದನ್ನು ಸ್ಪಷ್ಟ ಪಡಿಸಿದ್ದಾರೆ.

    ಭೋದಾಯ್ ಎರಿ ಭೂದಿ ಮಾರಿ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಖ್ಯಾತಿ ಗಳಿಸಿರುವ ಕೆ.ಪಿ ಕಾಲಿವುಡ್ ನಲ್ಲಿ ಹೆಸರುವಾಸಿ. ಇದೀಗ ಕನ್ನಡದ ‘ಗೋದ್ರಾ’ ಚಿತ್ರಕ್ಕೆ ಇವ್ರು ಹಿನ್ನೆಲೆ ಸಂಗೀತ ನೀಡಲು ಒಪ್ಪಿಕೊಂಡಿದ್ದು, ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗುವಂತೆ ಮಾಡಿದೆ. ಚಿತ್ರವನ್ನು ಒಮ್ಮೆ ನೋಡಿ ಹಿನ್ನೆಲೆ ಸಂಗೀತ ನೀಡಲು ಒಪ್ಪಿಕೊಂಡಿದ್ದು, ಈಗಾಗಲೇ ಕೆಲಸವನ್ನು ಆರಂಭಿಸಿದ್ದಾರೆ ಕೆ.ಪಿ. ಇಂಟ್ರಸ್ಟಿಂಗ್ ಸಂಗತಿಯಂದ್ರೆ ಈ ಚಿತ್ರಕ್ಕೆ ಕೆ.ಪಿ ಸೇರಿ ನಾಲ್ಕು ಜನ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಜ್ಯೂಡಾ ಸ್ಯಾಂಡಿ, ನವೀನ್ ಸಜ್ಜು, ಟೋನಿ ಜೋಸೆಫ್ ಮೂವರು ಸಂಗೀತ ನಿರ್ದೇಶಕರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದು, ಇದೀಗ ಕೆ.ಪಿ ಚಿತ್ರದ ಹಿನ್ನೆಲೆ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

    ಚಿತ್ರದಲ್ಲಿ ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಪತ್ರಿಕೋಧ್ಯಮ ವಿದ್ಯಾರ್ಥಿಯಾಗಿ ಬಣ್ಣ ಹಚ್ಚಿದ್ದಾರೆ. ಸಮಾಜದಲ್ಲಿ ನಡೆಯುವ ಶೋಷಣೆಯ ವಿರುದ್ಧ ಹೋರಾಡುವ ಹೋರಾಟಗಾರನಾಗಿ ಸತೀಶ್ ತೆರೆ ಮೇಲೆ ಕಾಣಸಿಗಲಿದ್ದಾರೆ. ಕೆ. ಎಸ್. ನಂದೀಶ್ ಗೋದ್ರಾ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ಧಾರೆ. ಜಾಕೋಬ್ ಫಿಲಮ್ಸ್, ಲೀಡರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗಿದೆ. ಅಚ್ಯುತ್ ಕುಮಾರ್, ವಸಿಷ್ಠ ಎನ್ ಸಿಂಹ, ರಕ್ಷಾ ಸೋಮಶೇಖರ್ ಚಿತ್ರದ ಮುಖ್ಯ ತಾರಾಬಳಗದಲ್ಲಿದ್ದಾರೆ.

  • ಗಮನ ಸೆಳೆಯುತ್ತಿದೆ ‘ಗೋದ್ರಾ’ ಮೋಷನ್ ಪೋಸ್ಟರ್

    ಗಮನ ಸೆಳೆಯುತ್ತಿದೆ ‘ಗೋದ್ರಾ’ ಮೋಷನ್ ಪೋಸ್ಟರ್

    ನೀನಾಸಂ ಸತೀಶ್ ನಟನೆಯ ಅಯೋಗ್ಯ ಸಿನಿಮಾ ಇತ್ತೀಚೆಗೆ ಯಶಸ್ವಿ ನೂರು ದಿನಗಳ ಪ್ರದರ್ಶನ ಕಂಡಿತ್ತು. ಅದಾದ ನಂತರ ಸತೀಶ್ ಒಪ್ಪಿಕೊಂಡು ಮಾಡುತ್ತಿರುವ ಸಿನಿಮಾ ‘ಗೋದ್ರಾ’. ಗೋದ್ರಾ ಎಂದಾಕ್ಷಣಾ ಎಲ್ಲರಿಗೂ ಗುಜರಾತ್ ಹತ್ಯಾಕಾಂಡ ಕಣ್ಣ ಮುಂದೆ ಬರುತ್ತೆ. ಆದ್ರೆ ಆ ದುರಂತಕ್ಕೂ ಸಿನಿಮಾಕ್ಕೂ ಯಾವುದೇ ಸಂಬಂಧ ಇಲ್ಲ. ಸಿನಿಮಾ ಟೈಟಲ್ ನಿಂದಷ್ಟೇ ಅಲ್ಲ ‘ಇದು ಎಂದೂ ಮುಗಿಯದ ಯುದ್ಧ’ ಎಂಬ ಸಬ್ ಟೈಟಲ್ ನಿಂದ ಕೂಡ ಸಿನಿರಸಿಕರ ಕುತೂಹಲ ಹೆಚ್ಚಿಸಿದೆ.

    ಸದ್ಯ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಉದ್ದನೆಯ ದಾಡಿ ಬಿಟ್ಟಿರುವ ಸತೀಶ್ ನೀನಾಸಂ ಅವತಾರ ಕುತೂಹಲವನ್ನು ಹುಟ್ಟುಹಾಕಿದೆ. ಅಚ್ಯುತ ಕುಮಾರ್, ವಸಿಷ್ಠ ಸಿಂಹ, ಶ್ರದ್ಧಾ ಶ್ರೀನಾಥ್ ಮೋಷನ್ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಮೋಷನ್ ಪೋಸ್ಟರ್ ಬಿಟ್ಟು ಗಮನ ಸೆಳೆದ ಚಿತ್ರತಂಡ ಇದೇ ತಿಂಗಳ 17 ರಂದು ಟೀಸರ್ ಬಿಡಲು ರೆಡಿಯಾಗಿದೆ.

    ನೀನಾಸಂ ಸತೀಶ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದ್ರೆ ಸದ್ಯ ನಟಿಸುತ್ತಿರುವ ‘ಗೋದ್ರಾ’ ಸಿನಿಮಾ ಸತೀಶ್ ಅವರ ಬಿಗ್ ಬಜೆಟ್ ಚಿತ್ರವಾಗಿದೆ. ವ್ಯವಸ್ಥೆಯಲ್ಲಿ ನಡೆಯುವ ಶೋಷಣೆ ವಿರುದ್ಧ ಬಂಡೆದ್ದು ಹೋರಾಟಗಾರನಾದವನ ಕಥೆಯನ್ನು ‘ಗೋದ್ರಾ’ದಲ್ಲಿ ಹೇಳಲಾಗಿದೆ. ಈ ಸಿನಿಮಾ ಮೇಲೆ ಸತೀಶ್‍ಗೆ ಬಹಳ ನಿರೀಕ್ಷೆ ಇದೆಯಂತೆ.

    ಜಾಕೋಬ್ ಫಿಲ್‍ಂ ಮತ್ತು ಲೀಡರ್ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್ ನಿರ್ಮಾಣ ಮಾಡುತ್ತಿದ್ದು, ಕೆ.ಎಸ್.ನಂದೀಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

  • ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರ ನೋವು ಆಲಿಸಿದ ನೀನಾಸಂ ಸತೀಶ್

    ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರ ನೋವು ಆಲಿಸಿದ ನೀನಾಸಂ ಸತೀಶ್

    ಗದಗ: ಈ ಬಾರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಪ್ರವಾಹ ತತ್ತರಿಸಿವೆ. ರಕ್ಕಸ ಪ್ರವಾಹದಲ್ಲಿ ಜೀವವನ್ನೇ ಉಳಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ತಲುಪಿದ ಜನರ ಬದುಕು ಅಕ್ಷರಶಃ ಅಂಧಕಾರವಾಗಿದೆ. ಬದುಕಿನ ಬಂಡಿಗೆ ಆಸರೆಯಾಗಿದ್ದ ಜಮೀನು, ತೋಟ, ಜಾನುವಾರುಗಳು ಎಲ್ಲವನ್ನು ನದಿ ಆಹುತಿ ತೆಗೆದುಕೊಂಡಿದೆ. ಪ್ರವಾಹ ತಗ್ಗಿದ್ದು ನಿರಾಶ್ರಿತರು ಗ್ರಾಮಗಳತ್ತ ತೆರಳುತ್ತಿದ್ದು, ತಮ್ಮ ಮನೆಯ ಸ್ಥಿತಿಯನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ನಿರಾಶ್ರಿತರ ಸಹಾಯಕ್ಕೆ ಇಡೀ ಕರುನಾಡು ಮುಂದಾಗಿದೆ. ಸ್ಟಾರ್ ಕಲಾವಿದರು ಸಹ ತಮ್ಮ ಶಕ್ತಿಗನುಗುಣವಾಗಿ ಸಹಾಯ ಹಸ್ತ ಚಾಚುತ್ತಿದ್ದಾರೆ. ಇಂದು ಲೂಸಿಯಾ ಖ್ಯಾತಿಯ ನಟ ನೀನಾಸಂ ಸತೀಶ್ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಸಂತ್ರಸ್ತರ ನೋವು ಆಲಿಸಿದರು.

    ಗದಗ ಜಿಲ್ಲೆಯ ಹೊಳೆ ಹೊನ್ನೂರು ಗ್ರಾಮಕ್ಕೆ ಸತೀಶ್ ಮತ್ತು ಅವರ ತಂಡ ಭೇಟಿ ನೀಡಿತ್ತು. ಗ್ರಾಮದ ಪ್ರತಿ ಮನೆಗಳಿಗೂ ತೆರಳಿದ್ದ ಸತೀಶ್ ಎಲ್ಲರ ನೋವನ್ನು ಆಲಿಸಿ, ಪ್ರವಾಹ ಪರಿಣಾಮವನ್ನು ಅರಿತರು. ಹಾಗೆಯೇ ಕೆಲ ದಿನಬಳಕೆ ವಸ್ತುಗಳನ್ನು ನೀಡಿ ನಿರಾಶ್ರಿತರಿಗೆ ಸಹಾಯವಾದರು. ಪ್ರತಿ ಮನೆಗೆ ಭೇಟಿ ನೀಡಿದ ಸತೀಶ್ ತಾವು ಅದೇ ಗ್ರಾಮದ ನಿವಾಸಿ ಎಂಬಂತೆ ಗ್ರಾಮಸ್ಥರೊಂದಿಗೆ ಬೆರೆತಿದ್ದರು.

    ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ಅಭಿನಯ ಚಕ್ರವರ್ತಿ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಹಲವು ಕಲಾವಿದರ ಪ್ರವಾಹ ಪೀಡಿತರ ಕಣ್ಣೀರು ಒರೆಸುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ರಾಜ್ಯದ ಮಠಗಳು, ದೇವಸ್ಥಾನ, ಸಂಘ ಸಂಸ್ಥೆಗಳು ಸಹ ನಿರಾಶ್ರಿತರ ಸಹಾಯಕ್ಕೆ ಮುಂದಾಗಿವೆ.

  • ನಿಮ್ಮ ಸೇವೆ ಬರೀ ಕರ್ನಾಟಕವಲ್ಲ, ದೇಶಕ್ಕೆ ಅವಶ್ಯಕತೆಯಿದೆ: ಸತೀಶ್ ನೀನಾಸಂ ಬೇಸರ

    ನಿಮ್ಮ ಸೇವೆ ಬರೀ ಕರ್ನಾಟಕವಲ್ಲ, ದೇಶಕ್ಕೆ ಅವಶ್ಯಕತೆಯಿದೆ: ಸತೀಶ್ ನೀನಾಸಂ ಬೇಸರ

    ಬೆಂಗಳೂರು: ದಕ್ಷ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಸಾಕಷ್ಟು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ನಟ ಸತೀಶ್ ನೀನಾಸಂ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 5 ವರ್ಷದಲ್ಲಿ ನಾನು ತೆಗೆದುಕೊಂಡಿದ್ದು 21 ರಜೆ ಮಾತ್ರ: ಅಣ್ಣಾಮಲೈ

    ನಟ ಸತೀಶ್ ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾಮಲೈ ರಾಜೀನಾಮೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. “ಕರ್ನಾಟಕ ಕಂಡ ಒಬ್ಬ ನಿಷ್ಟಾವಂತ ಅಧಿಕಾರಿ ಅಣ್ಣಾಮಲೈ ರಾಜೀನಾಮೆ ನೀಡಿರುವುದು ಒಬ್ಬ ಪ್ರಜೆಯಾಗಿ ಬೇಸರವಾಗಿದೆ. ನಿಮ್ಮಂತಹ ಅಧಿಕಾರಿಗಳ ಸೇವೆ ಬರೀ ಕರ್ನಾಟಕವಲ್ಲ ದೇಶಕ್ಕೆ ಅವಶ್ಯಕತೆಯಿದೆ. ಆದರೂ ನಿಮ್ಮ ವೈಯಕ್ತಿಕ ನಿರ್ಧಾರಗಳು ಅಷ್ಟೇ ಮುಖ್ಯ. ನಿಮ್ಮ ಜೀವನ ಸುಖವಾಗಿರಲಿ, ಶುಭಾಶಯಗಳು ಥ್ಯಾಂಕ್ಯು ಸರ್” ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ: ಅಭಿಮಾನಿಗಳಿಗೆ ಅಣ್ಣಾಮಲೈ ಭಾವನಾತ್ಮಕ ಪತ್ರ

    ಅಣ್ಣಾಮಲೈ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ನೀಲಮಣಿ ರಾಜು ಅವರು ರಾಜ್ಯ ಗೃಹ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ರವಾನಿಸಿ, ಬಳಿಕ ಅದು ಗೃಹ ಕಾರ್ಯದರ್ಶಿ ಹೋಗುತ್ತದೆ. ಅಂತಿಮವಾಗಿ ಕೇಂದ್ರ ಯುಪಿಎಸ್ಸಿಗೆ ತಲುಪಿದ ಬಳಿಕ ರಾಜೀನಾಮೆ ಅಂಗಿಕಾರವಾಗುತ್ತದೆ.

  • ಸಂತೆ ನೋಡಲು ಬಂದ ದಾರಿಹೋಕ ‘ಕಳೆದೇ ಹೋದ’- ಭಾವನಾ ಲೋಕಕ್ಕೆ ಕರೆದೊಯ್ಯುತ್ತೆ ಚಂಬಲ್ ಹಾಡು

    ಸಂತೆ ನೋಡಲು ಬಂದ ದಾರಿಹೋಕ ‘ಕಳೆದೇ ಹೋದ’- ಭಾವನಾ ಲೋಕಕ್ಕೆ ಕರೆದೊಯ್ಯುತ್ತೆ ಚಂಬಲ್ ಹಾಡು

    – ಬದುಕನ್ನ ಅರಿಸುತ್ತ ಬಂದವ ತನ್ನಲ್ಲಿಯೇ ಕಳೆದು ಹೋದ

    ಬೆಂಗಳೂರು: ಚಂಬಲ್ ನಟ ನೀನಾಸಂ ಸತೀಶ್ ಚಂದನವನದ ಬಹುನಿರೀಕ್ಷಿತ ಚಿತ್ರ. ಇಂದು ಚಂಬಲ್ ಸಿನಿಮಾದ ಕಳೆದೇ ಹೋದೆ ನಾನು’ ಲಿರಿಕಲ್ ಹಾಡು ಸಂಜೆ ಬಿಡುಗಡೆಯಾಗಿದ್ದು, ಭಾವನಾ ಜೀವಿಗಳನ್ನು ಮಾಯಾ ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದೆ.

    ‘ಕಳೆದೇ ಹೋದೇ ನಾನು’ ಹಾಡಿನ ಸಾಹಿತ್ಯದ ಪ್ರತಿ ಸಾಲು ವಿಶೇಷ ಅರ್ಥವನ್ನು ಒಳಗೊಂಡಿದೆ. ದಕ್ಷ ಅಧಿಕಾರಿಯಾಗಿ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದು, ಪ್ರಾಮಾಣಿಕತೆಗೆ ಯಾವೆಲ್ಲ ತೊಂದರೆಗಳು ಎದುರಾಗುತ್ತದೆ. ತನಗೆ ಎದುರಾದ ತೊಂದರೆಗಳನ್ನು ನಾಯಕ ನಟ ಹೇಗೆ ಎದುರಿಸುತ್ತಾನೆ ಎನ್ನುವುದು ಚಿತ್ರ ಬಿಡುಗಡೆಯಾದಾಗ ಉತ್ತರ ಸಿಗುತ್ತದೆ. ಈ ವೇಳೆ ನಾಯಕನ ಮನಸ್ಥಿತಿ ಹೇಗಿರುತ್ತೆ ಎಂಬುದನ್ನು ಪದಪುಂಜಗಳಲ್ಲಿ ಹೇಳುವಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಯಶಸ್ವಿಯಾಗಿದ್ದಾರೆ. ತಮ್ಮ ಹಾಡುಗಳ ಮೂಲಕ ಭಾವನಾರಹಿತ ಜೀವಿಯನ್ನು ಭಾವನಾ ಲೋಕಕ್ಕೆ ಕರೆದೊಯ್ಯುವಲ್ಲಿ ಕಾಯ್ಕಿಣಿ ಅವರ ಲೇಖನಿ ಏಣಿಯಾಗಿ ಬದಲಾಗಿದೆ.

    ಜಯಂತ್ ಕಾಯ್ಕಿಣಿ ಅವರ ಪದಪುಂಜಗಳಿಗೆ ಪೂರ್ಣಚಂದ್ರ ತೇಜಸ್ವಿ ಅವರ ಕೋಮಲ ಸಂಗೀತದಲ್ಲಿ ಉದಿತ್ ಹರಿತಾಸ್ ತಮ್ಮ ಕಂಠದ ಮೂಲಕ ಜೀವವನ್ನು ನೀಡಿದ್ದಾರೆ. ನೀನಾಸಂ ಸತೀಶ್ ಗೆ ಜೊತೆಯಾಗಿ ಸೋನುಗೌಡ ಕಾಣಿಸಿಕೊಂಡಿದ್ದು, ಸಾಮಾಜಿಕ ಕಥೆಯೊಂದನ್ನು ನಿರ್ದೇಶಕರು ಥ್ರಿಲ್ಲರ್ ವಿಧಾನದಲ್ಲಿ ಹೇಳಲು ಹೊರಟಿರುವ ಸುಳಿವು ಸಿಕ್ಕಿದೆ.

    ನೈಜ ಘಟನೆಯ ಆಧಾರಿತ ಸಿನಿಮಾ ಎಂದು ಚಿತ್ರದ ಟ್ರೇಲರ್ ಹೇಳಿತ್ತು. ಐಎಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನೀನಾಸಂ ಸತೀಶ್ ತಾನು ಕೇವಲ ಹಾಸ್ಯ ಪಾತ್ರಗಳಿಗೆ ಸೀಮಿತ ಅಲ್ಲ ಎಂಬುದನ್ನು ಚಂಬಲ್ ಟ್ರೇಲರ್ ಮೂಲಕ ಹೇಳಿದ್ದಾರೆ. ವಿಭಿನ್ನ ಅನ್ನೋದಕ್ಕಿಂತ ಸಿನಿಮಾ ಯಾರ ಜೀವನಾಧರಿತ ಕಥೆ ಎಂಬುದನ್ನು ಚಿತ್ರ ಸ್ಪಷ್ಟಪಡಿಸಿಲ್ಲ. ಕೇವಲ ಓರ್ವ ಐಎಎಸ್ ಅಧಿಕಾರಿಯ ಜೀವನದ ಎಳೆಯ ಮೇಲೆ ಸಿನಿಮಾ ಮಾಡಲಾಗಿದೆ ಎಂಬುದನ್ನ ಹೇಳಿಕೊಂಡಿದೆ. ಇನ್ನು ಟ್ರೇಲರ್ ನೋಡಿದ ಜನರು ಮಾತ್ರ ಇದು ದಕ್ಷ ಅಧಿಕಾರಿ ಡಿ.ಕೆ.ರವಿ ಅವರ ಕಥೆ ಅಂತಾನೇ ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಚಂಬಲ್’ನಲ್ಲಿ ಅಡಗಿದ್ಯಾ ಡಿ.ಕೆ.ರವಿ ಸಾವಿನ ರಹಸ್ಯ – ಸತೀಶ್ ನೀನಾಸಂ ಹೇಳಿದ್ದೇನು?

    ‘ಚಂಬಲ್’ನಲ್ಲಿ ಅಡಗಿದ್ಯಾ ಡಿ.ಕೆ.ರವಿ ಸಾವಿನ ರಹಸ್ಯ – ಸತೀಶ್ ನೀನಾಸಂ ಹೇಳಿದ್ದೇನು?

    ಬೆಂಗಳೂರು: ನಟ ಸತೀಶ್ ನೀನಾಸಂ ಅಭಿನಯದ ‘ಚಂಬಲ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಇದು ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಜೀವನದ ಕಥೆ ಆಧಾರಿತ ಸಿನಿಮಾವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಟ ಸತೀಶ್ ನೀನಾಸಂ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಸತೀಶ್ ನೀನಾಸಂ, ‘ಚಂಬಲ್’ ಸಿನಿಮಾ ಒಬ್ಬ ಐಎಎಸ್ ದಕ್ಷ ಅಧಿಕಾರಿ ಕಥೆಯಾಗಿದೆ. ನಾನು ಈ ಸಿನಿಮಾದಲ್ಲಿ ಸುಭಾಶ್ ಎಂಬ ಪಾತ್ರ ಮಾಡುತ್ತಿದ್ದೇನೆ. ನಾನು ಮಾಡಿದ ಸಿನಿಮಾದಲ್ಲಿ ನನಗೆ ಶಿಕ್ಷಣ ಇರುತ್ತಿರಲಿಲ್ಲ. ಆದರೆ ಈ ಸಿನಿಮಾದಲ್ಲಿ ಒಳ್ಳೆಯ ಶಿಕ್ಷಣ ಇದ್ದು, ಐಎಎಸ್ ಅಧಿಕಾರಿಯಾಗಿದ್ದೇನೆ. ನಾನು ಎಸ್‍ಎಸ್‍ಎಲ್‍ಸಿ ಮಾಡಿ, ಡಿಪ್ಲೋಮಾ ಮಾಡಿದ್ದೇನೆ. ಆದರೆ ಈ ಸಿನಿಮಾದಲ್ಲಿ ನಾನು ಓದಿರುವುದಕ್ಕೂ, ಇದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಎಂದು ತಿಳಿಸಿದ್ರು.

    ಚಿತ್ರದ ಕಥೆಗಾಗಿ ಕೆಲವು ಅಧಿಕಾರಿಗಳಿಂದ ಸ್ಪೂರ್ತಿ ಪಡೆದುಕೊಂಡಿದ್ದೇವೆ. ಆದರೆ ಯಾರು ಏನು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದು ಒಬ್ಬ ಐಎಎಸ್ ಅಧಿಕಾರಿಯ ಕಥೆಯಾಗಿದೆ. ನಮ್ಮಲ್ಲಿ ಒಳ್ಳೆಯ ಅಧಿಕಾರಿಗಳಿದ್ದು, ಕೆಲಸ ಮಾಡಿದ್ದಾರೆ. ಆದ್ದರಿಂದ ಈ ಸಿನಿಮಾ ಮಾಡಿದ್ದೇವೆ. ಲೂಸಿಯಾ ನಂತರ ಇದು ಒಂದೊಂದು ಅದ್ಭುತವಾದ ಸಿನಿಮಾವಾಗಿದೆ. ನಾವು ಕಾಣುವ ಸತ್ಯಕ್ಕಿಂತ, ನೀವು ಕಾಣುವ ಸತ್ಯವೇ ಮುಖ್ಯವಾಗಿದೆ. ಟ್ರೇಲರ್ ನೋಡಿ, ಬಳಿಕ ಸಿನಿಮಾ ನೋಡಿ ಎಂದು ಸತೀಶ್ ಹೇಳಿದ್ದಾರೆ.

    ಚಂಬಲ್ ಅನ್ನೋ ಹೆಸರಿನ ಸುತ್ತಾ ನಾನಾ ನಿಗೂಢಗಳು ಅಡಗಿಕೊಂಡಿವೆ. ಒಂದಷ್ಟು ಕ್ರೈಮುಗಳ ಸರಣಿಯೂ ಕಣ್ಮುಂದೆ ಸುಳಿದಾಡುತ್ತೆ. ಅದೇ ಹೆಸರನ್ನು ಶೀರ್ಷಿಕೆಯಾಗಿಸಿಕೊಂಡಿರೋ ಚಂಬಲ್ ಚಿತ್ರದ ಬಗ್ಗೆ ನಾನಾ ಕುತೂಹಲಗಳಿವೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಚಿತ್ರದ ಟೃಲರ್ ಬಿಡುಗಡೆ ಮಾಡಿದ್ದಾರೆ.

    ಸತೀಶ್ ನೀನಾಸಂ ಈ ಚಿತ್ರದಲ್ಲಿ ಭ್ರಷ್ಟಾಚಾರಿಗಳನ್ನ ಕಂಡ್ರೆ ಬೆಂಕಿಯುಂಡೆಯಂತಾಡೋ ಖಡಕ್ ಅಧಿಕಾರಿಯಾಗಿ ನಟಿಸಿರೋದರ ಸುಳಿವೂ ಕೂಡಾ ಸಿಕ್ಕಿದೆ. ಪ್ರತೀ ಹಂತದಲ್ಲಿಯೂ ಪ್ರೇಕ್ಷಕರನ್ನ ನಿಗಿ ನಿಗಿಸೋ ಕ್ಯೂರಿಯಾಸಿಟಿಯ ಕೆಂಡದ ಮೇಲೆ ತಂದು ಕೂರಿಸುವಂತೆ ಇಡೀ ಚಿತ್ರ ಮೂಡಿ ಬಂದಿದೆ ಎಂಬುದಕ್ಕೆ ಈ ಟ್ರೇಲರ್ ಸಾಕ್ಷಿಯೊದಗಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv