Tag: ಸತೀಶ್ ನಿನಾಸಂ

  • ಮಗಳ ಫೋಟೋ ಹಂಚಿಕೊಂಡು ಅಭಿಮಾನಿಗಳಿ ಶಾಕ್ ಕೊಟ್ಟ ಸತೀಶ್ ನಿನಾಸಂ

    ಮಗಳ ಫೋಟೋ ಹಂಚಿಕೊಂಡು ಅಭಿಮಾನಿಗಳಿ ಶಾಕ್ ಕೊಟ್ಟ ಸತೀಶ್ ನಿನಾಸಂ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸತೀಶ್ ನಿನಾಸಂ ಅವರು ಮೊದಲ ಬಾರಿಗೆ ಅವರ ಮಗಳ ಫೊಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು. ಮುದ್ದು ಮಗಳ ಹೆಸರು ಫೋಟೋವನ್ನು ರಿವೀಲ್ ಮಾಡಿದ್ದಾರೆ.

    ನಿಮಗೆಲ್ಲ ಸಂಕ್ರಾಂತಿ ಶುಭಾಶಯ ಕೋರುತ್ತಿದ್ದಾಳೆ, ನನ್ನ ಮಗಳು “ಮನಸ್ವಿತ”. ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವ ಅವಳ ಮೊದಲ ಫೋಟೋವಾಗಿದೆ. ಅವಳ ಪ್ರೈವೆಸಿಯ ಕಾರಣದಿಂದ ಇದುವರೆಗೆ ನಮ್ಮ ಕುಟುಂಬ, ಯಾವ ಚಿತ್ರಗಳನ್ನು ಹಂಚಿಕೊಂಡಿಲ್ಲ. ಅಭಿಮಾನಿಗಳು ಮತ್ತು ಸ್ನೇಹಿತರು ನನ್ನ ಮಗಳ ಚಿತ್ರ ಹಂಚಿಕೊಳ್ಳುವಂತೆ ಕೇಳಿಕೊಂಡ ಕಾರಣ ಈ ಚಿತ್ರ ಹಾಕುತ್ತಿರುವೆ. ನಮ್ಮ ಕುಟುಂಬದ ಮೇಲೆ ನಿಮ್ಮ ಪ್ರೀತಿ ಹಾರೈಕೆ ಎಂದಿನಂತೆ ಸದಾ ಇರಲಿ. ಇದು ಅವಳ ಮೊದಲ ವರ್ಷ ತೆಗೆದ ಚಿತ್ರ, ಈಗ ಅವಳು 5ತುಂಬಿ 6ರ ಹೆಜ್ಜೆ ಇಡುತ್ತಿದ್ದಾಳೆ. ಧನ್ಯವಾದಗಳೊಂದಿಗೆ, ಸುಪ್ರೀತಾ, ಮನಸ್ವಿತ, ಸತೀಶ್ ಎಂದು ಫೇಸ್ಬುಕ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:  190 ವರ್ಷದ ಆಮೆ- ಗಿನ್ನಿಸ್ ಪುಟಕ್ಕೆ ಸೇರ್ಪಡೆ

    ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ಹಬ್ಬದ ಶುಭಶಯವನ್ನು ಕೋರಿದ್ದಾರೆ. ಕೆಲವು ನಿಮಗೆ ಮದುವೆಯಾಗಿದ್ಯಾ? ಇಷ್ಟು ದೊಡ್ಡ ಮಗಳಿದ್ದಾರ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಸತೀಶ್ ಹಂಚಿಕೊಂಡಿರುವ ಫೋಟೋ ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವಳಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ. ಇದನ್ನೂ ಓದಿ: ನಾನು ಅವನ ಬಗ್ಗೆ ಯೋಚಿಸಿದ್ರೆ, ಅವನಿಗೆ ನನ್ನ ಬಗ್ಗೆಯೇ ಚಿಂತೆ ಜಾಸ್ತಿ: ನಾಗಾರ್ಜುನ್

    ಲೂಸಿಯಾ ಚಿತ್ರ ಸತೀಶ್ ನಿನಾಸಂ ದೊಡ್ಡ ಮಟ್ಟದಲ್ಲಿ ಹಿಟ್ ತಂದುಕೊಟ್ಟಿತ್ತು. ನಂತರ ಅವರ ಲಕ್ಕೆ ಬದಲಾಗಿತ್ತು. ಹಲವು ಆಫರ್‍ಗಳು ಅವರನ್ನು ಹುಡುಕಿಕೊಂಡು ಬಂದವು. 2018ರಲ್ಲಿ ತೆರೆಗೆ ಬಂದ ಅಯೋಗ್ಯ ಸಿನಿಮಾ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸೌಂಡ್ ಮಾಡಿತ್ತು. ಉತ್ತಮವಾದ ನಟನಾ ಕೌಶಲ್ಯದ ಮೂಲಕವಾಗಿ ಅವರು ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

  • ನಿನ್ನೆ ನಾನು ಸುಳ್ಳು ಹೇಳಿದ್ದೆ – ವಿಜಯ್ ನೆನೆದು ಕಣ್ಣೀರಿಟ್ಟ ನಿನಾಸಂ ಸತೀಶ್

    ನಿನ್ನೆ ನಾನು ಸುಳ್ಳು ಹೇಳಿದ್ದೆ – ವಿಜಯ್ ನೆನೆದು ಕಣ್ಣೀರಿಟ್ಟ ನಿನಾಸಂ ಸತೀಶ್

    ಬೆಂಗಳೂರು: ಬೈಕ್ ಅಪಘಾತದಿಂದಾಗಿ ಗಂಭೀರ ಗಾಯಗೊಂಡಿರುವ ನಟ ಸಂಚಾರಿ ವಿಜಯ್ ಅವರನ್ನು ನೆನೆದು ಸ್ಯಾಂಡಲ್‍ವುಡ್ ನಟ ನಿನಾಸಂ ಸತೀಶ್ ಅವರು ಕಣ್ಣೀರಿಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿನಾಸಂ ಸತೀಶ್, ವಿಜಯ್ ಆದಷ್ಟು ಬೇಗ ಗುಣಮುಖರಾಗುತ್ತಾನೆ ಎಂದು ವೈದ್ಯರು ಹೇಳಿರುವುದಾಗಿ ನಾನು ಮಾಧ್ಯಮಗಳೊಂದಿಗೆ ನಿನ್ನೆ ಸುಳ್ಳು ಹೇಳಿದ್ದೆ. ಆದರೆ ಆತನ ಮೆದುಳಿಗೆ ಗಂಭೀರವಾದ ಏಟು ಬಿದ್ದಿದೆ. ಹಾಗಾಗಿ ವೈದ್ಯರು ತೀವ್ರವಾಗಿ ನಿಗವಹಿಸುತ್ತಿದ್ದಾರೆ. ಆತನ ಸ್ಥಿತಿ ತುಂಬಾ ಗಂಭೀರವಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಅವನು ವಾಪಸ್ ಬರುತ್ತಾನೆ ಎಂದು ಕಾಯುತ್ತಿದ್ದೇವೆ. ಆದರೆ ಈ ಪರಿಸ್ಥಿಗೆ ತಲುಪುತ್ತಾನೆ ಎಂದು ಯೋಚಿಸಿರಲಿಲ್ಲ ಎಂದು ಹೇಳಿ ಭಾವುಕರಾದರು. ಇದನ್ನೂ ಓದಿ: ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯವಾಗಿದೆ – ಅಪೋಲೋ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

    ಎಲ್ಲರಿಗೂ ಒಳ್ಳೆಯದಾಗಲಿ ಎಂದು ತುಂಬಾ ಕಷ್ಟಪಡುತ್ತಿದ್ದ. ಬರೀ ಸಿನಿಮಾ ಅಂತ ಅಲ್ಲ ಎಲ್ಲಾ ವಿಷಯಗಳಲ್ಲಿ ಕಷ್ಟ ಪಟ್ಟು ಮೇಲೆ ಬಂದಿದ್ದ. ಮನೆಯಲ್ಲಿ ಕೆಲಸ ಮಾಡಿ ಕಷ್ಟಪಟ್ಟು ಓದಿ ಹಲವು ಸಮಸ್ಯೆಗಳನ್ನು ಅನುಭವಿಸಿ ಮುಂದೆ ಬಂದಂತಹ ಹುಡುಗ ಅವನು. ಇದೀಗ ಈ ರೀತಿ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ನಾವು ಹತ್ತು ಹದಿನೈದು ದಿನಗಳ ಕಾಲ ಒಟ್ಟಿಗೆ ಇದ್ದೇವು. ಇದೀಗ ಅವನನ್ನು ಈ ಪರಿಸ್ಥಿತಿಯಲ್ಲಿ ನೋಡಲು ನನ್ನಿಂದ ಆಗುತ್ತಿಲ್ಲ. ನಾವಿಬ್ಬರು ಜೊತೆಗೆ ಕೊರೊನಾ ಕಷ್ಟಕಾಲದಲ್ಲಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದೆವು, ಇದೀಗ ಅವನ ಈ ಸ್ಥಿತಿಯಿಂದ ಆ ನೋವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ದು:ಖ ತೋಡಿಕೊಂಡರು.

  • ಚಂಬಲ್ ಸಿನಿಮಾ ವಿರುದ್ಧ ಫಿಲಂ ಚೇಂಬರ್‍ಗೆ ಡಿ.ಕೆ ರವಿ ತಾಯಿ ದೂರು

    ಚಂಬಲ್ ಸಿನಿಮಾ ವಿರುದ್ಧ ಫಿಲಂ ಚೇಂಬರ್‍ಗೆ ಡಿ.ಕೆ ರವಿ ತಾಯಿ ದೂರು

    ಬೆಂಗಳೂರು: ಚಂದನವನದಲ್ಲಿ ಕುತೂಹಲ ಹುಟ್ಟು ಹಾಕಿರುವ ನೀನಾಸಂ ಸತೀಶ್ ನಟನೆಯ ‘ಚಂಬಲ್’ ಚಿತ್ರದ ವಿರುದ್ಧ ದಿ. ಐಎಎಸ್ ಅಧಿಕಾರಿ ಡಿ.ಕೆ.ರವಿ ತಾಯಿ ಫಿಲಂ ಚೇಂಬರ್‍ಗೆ ದೂರು ಸಲ್ಲಿಸಿದ್ದಾರೆ.

    ನನ್ನ ಮಗನ ಜೀವನ ಕಥೆಯನ್ನು ಚಂಬಲ್ ಸಿನಿಮಾದಲ್ಲಿ ಬಳಸಲಾಗಿದೆ. ಈ ಕುರಿತು ಕುಟುಂಬದ ಸದಸ್ಯರ ಕಡೆಯಿಂದ ಚಿತ್ರತಂಡ ಯಾವುದೇ ಅನುಮತಿ ಪಡೆದಿಲ್ಲ. ಬಿಡುಗಡೆಗೆ ಮುನ್ನ ನನಗೆ ಸಿನಿಮಾ ತೋರಿಸಬೇಕು. ಒಂದು ವೇಳೆ ಚಿತ್ರದಲ್ಲಿ ಸತ್ಯಕ್ಕೆ ದೂರವಾದ ಅಂಶಗಳಿದ್ರೆ ದೂರು ಕೊಡಲು ಸಿದ್ಧಳಾಗಿದ್ದೇನೆ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ವಾಣಿಜ್ಯ ಮಂಡಳಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಮಾನ್ಯರೇ,
    ದಿವಂಗತ ಡಿ ಕೆ ರವಿ ಅವರ ತಾಯಿ ಗೌರಮ್ಮನಾದ ನಾನು ನಿಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಇತ್ತೀಚೆಗೆ ಬಿಡುಗಡೆಯಾದ ಚಂಬಲ್ ಟ್ರೇಲರ್ ನಲ್ಲಿ ನನ್ನ ಮಗನ ಕಥೆ, ಸಂಭಾಷಣೆ ಹಾಗು ಜೀವನ ಶೈಲಿಯನ್ನು ನಮ್ಮ ಅನುಮತಿ ಇಲ್ಲದೆ ಚಿತ್ರೀಕರಣ ಮಾಡಲಾಗಿದೆ. ಆದ ಕಾರಣ ಈ ಚಿತ್ರ ಬಿಡುಗಡೆಯ ಮುನ್ನ ಒಮ್ಮೆ ವೀಕ್ಷಿಸಲು ಇಚ್ಛಿಸುತ್ತೇನೆ. ಚಿತ್ರದಲ್ಲಿ ಸತ್ಯಕ್ಕೆ ದೂರವಾದ ಅಂಶಗಳಿದ್ದಲ್ಲಿ ಚಿತ್ರಕ್ಕೆ ತಡೆತರುವ ಬಗ್ಗೆ ಮತ್ತು ಸರಿಯಿಲ್ಲದಿದ್ದಲ್ಲಿ ಚಿತ್ರದ ನಿರ್ಮಾಪಕರು (ಎನ್ ದಿನೇಶ್ ರಾಜಕುಮಾರ್ ಮತ್ತು ಮಾಥ್ಯೂ ವರ್ಗಿಸ್) ಹಾಗು ನಿರ್ದೇಶಕರು (ಜೇಕಬ್ ವರ್ಗಿಸ್) ಆದ ಇವರ ವಿರುದ್ಧ ಕಾನೂನು ಕ್ರಮಕೈಗೊಂಡು ಕುಟುಂಬಸ್ಥರಿಗೆ ರಾಯಲ್ಟಿ ಪಾವತಿಸಬೇಕಾಗಿ ಕೋರುತ್ತಿದ್ದೇನೆ.

    ತಮ್ಮ ವಿಶ್ವಾಸಿ,
    ಗೌರಮ್ಮ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv