Tag: ಸತೀಶ್ ಜಾರಕಿಹೋಳಿ

  • ರಮೇಶ್ ಜಾರಕಿಹೊಳಿಗೆ ಸರ್ಕಾರ ಉರುಳಿಸುವ ಶಕ್ತಿ ಇದೆ – ಸತೀಶ್ ಜಾರಕಿಹೊಳಿ

    ರಮೇಶ್ ಜಾರಕಿಹೊಳಿಗೆ ಸರ್ಕಾರ ಉರುಳಿಸುವ ಶಕ್ತಿ ಇದೆ – ಸತೀಶ್ ಜಾರಕಿಹೊಳಿ

    ಬೆಳಗಾವಿ: ರಾಜ್ಯದಲ್ಲಿ ರಮೇಶ್ ಜಾರಕಿಹೊಳಿಗೆ (Ramesh Jarkiholi) ಸರ್ಕಾರ ಉರುಳಿಸುವ ಶಕ್ತಿಯಿದೆ. ಅವರು ಇನ್ನೊಮ್ಮೆ ಸರ್ಕಾರ (Government) ಉರುಳಿಸುವ ಪ್ರಯತ್ನ ಮಾಡಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ ಎಂದು ಸಹೋದರ ಹಾಗೂ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಅವರು ಕಾಲೆಳೆದಿದ್ದಾರೆ.

    ಗೋಕಾಕ್ ನಗರದಲ್ಲಿ ನಡೆದ ಉಪ್ಪಾರ ಸಮಾಜದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾರಕಿಹೊಳಿ ಸಹೋದರಿಗೆ ಸರ್ಕಾರ ಉರುಳಿಸುವ ಶಕ್ತಿಯಿದೆ ಎಂದು ಹೇಳ್ತಾರೆ. ರಾಜ್ಯ ರಾಜಕಾರಣದಲ್ಲಿ ನಾಲ್ವರು ಸಹೋದರರಿದ್ದೇವೆ. ನಾಲ್ವರು ಒಂದೇ ಎಂದು ಭಾವಿಸಬಾರದು. ನಾಲ್ವರು ಸಹೋದರರ ಕೆಲಸವೂ ಬೇರೆ-ಬೇರೆ ಇದೆ. ಯಾರನ್ನೂ ಗೊಂದಲ ಮಾಡಿಕೊಳ್ಳಬಾರದು ಎಂದರು. ಇದನ್ನೂ ಓದಿ:  ಕನ್ನಡದ ನಟ ಪ್ರತಾಪ್ ನಾರಾಯಣ ಇದೀಗ ಪ್ರಗ್ನೆಂಟ್: ಹೊಸ ದುನಿಯಾದ ವಿಚಿತ್ರ ಸುದ್ದಿ

    ನಮ್ಮಲ್ಲಿ ಸರ್ಕಾರ ಉರುಳಿಸುವ ಶಕ್ತಿ ರಮೇಶ್ ಜಾರಕಿಹೊಳಿ (Ramesh Jarakiholi) ಮಾತ್ರ ಇದೆ. ಉಳಿದ ನಾಲ್ವರು ಸಹೋದರರು ಸರ್ಕಾರ ಉರುಳಿಸುವುದರ ಭಾಗವಾಗುವುದಿಲ್ಲ. ರಮೇಶ್ ಜಾರಕಿಹೊಳಿಗೆ ಮಾತ್ರ ಸರ್ಕಾರ ಉರಳಿಸುವ ಶಕ್ತಿ ಇದೆ. ಅವರು ಇನ್ನೊಮ್ಮೆ ಸರ್ಕಾರ ಉರಳಿಸುವ ಪ್ರಯತ್ನ ಮಾಡಲೆಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • KPCC ಸಭೆಗೆ ಶಾಸಕಿ ಹೆಬ್ಬಾಳ್ಕರ್, ನಿಂಬಾಳ್ಕರ್ ಗೈರು

    KPCC ಸಭೆಗೆ ಶಾಸಕಿ ಹೆಬ್ಬಾಳ್ಕರ್, ನಿಂಬಾಳ್ಕರ್ ಗೈರು

    ಬೆಳಗಾವಿ: ವಾಯುವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆದ ಸಭೆಗೆ ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅಂಜಲಿ ನಿಂಬಾಳ್ಕರ್ ಗೈರಾಗಿದ್ದಾರೆ.

    ನಗರದ ಸಂಕಂ ಹೋಟೆಲ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ್, ವೀರಕುಮಾರ್ ಪಾಟೀಲ್ ಹಾಜರಾಗಿದ್ದು, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಹಾಗೂ ಮಹಾಂತೇಶ ಕೌಜಲಗಿ ಗೈರಾಗಿದ್ದಾರೆ. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಬಣ ಇಲ್ಲ, ಹೈಕಮಾಂಡ್‌ ಹೇಳಿದ್ದೇ ಅಂತಿಮ: ಪರಿಷತ್‌ ಟಿಕೆಟ್‌ ಬಗ್ಗೆ ಡಿಕೆಶಿ ಮಾತು

    ಕಾಂಗ್ರೆಸ್ ಪಕ್ಷದಲ್ಲೂ ಬಣ ರಾಜಕೀಯ ಶುರುವಾಗಿರುವ ಅನುಮಾನ ಮೂಡುತ್ತಿದೆ. ಇನ್ನೂ ಕಾಂಗ್ರೆಸ್ ಪಕ್ಷದಿಂದ ಮೇ 25ಕ್ಕೆ ನಾಮಪತ್ರ ಸಲ್ಲಿಕೆಗೆ ನಿರ್ಧರಿಸಲಾಗಿದೆ. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ, ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನಿಲ್ ಸಂಕ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇದನ್ನೂ ಓದಿ: ಸದ್ಗುರು ಜೊತೆ ಮಂಡಿ ನೋವಿನ ಬಗ್ಗೆ ಹೇಳಿಕೊಂಡ ಸಿಎಂ

    ಇನ್ನು ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಳ್ಳುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಆಹ್ವಾನ ನೀಡಲಾಗುತ್ತದೆ. ಇಂದಿನ ಸಭೆಯಲ್ಲಿ ಮತದಾರರನ್ನು ಸೆಳೆಯಲು ಏನೆಲ್ಲಾ ರೂಪು ರೇಷೆಗಳನ್ನು ಸಿದ್ಧಪಡಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಯಿತು.

  • PSI ಹಗರಣ CBI ತನಿಖೆಗೆ ಒಪ್ಪಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹ

    PSI ಹಗರಣ CBI ತನಿಖೆಗೆ ಒಪ್ಪಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹ

    ಬೆಳಗಾವಿ: PSI ಹಗರಣದಲ್ಲಿ ರಾಜಕಾರಣಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವುದು ಕಂಡುಬಂದಿದೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.

    PSI SCAM

    ಇಲ್ಲಿನ ಗೋಕಾಕ್‌ ನಗರದ ಹಿಲ್ಲ್ ಗಾರ್ಡನ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಹಗರಣದಲ್ಲಿ ಸಚಿವರು, ಶಾಸಕರ ಹೆಸರು ಕೇಳಿಬಂದಿದೆ. ನೆನ್ನೆಯಷ್ಟೇ ಮಾಜಿ ಸಿಎಂ ಪುತ್ರನ ಹೆಸರೂ ಕೇಳಿ ಬಂದಿದೆ. ಪೊಲೀಸರೂ ಭಾಗಿಯಾಗಿರುವ ಈ ಪ್ರಕರಣದಲ್ಲಿ ಸರ್ಕಾರ ಪೊಲೀಸರಿಂದಲೇ ತನಿಖೆ ನಡೆಸುವುದು ಎಷ್ಟರಮಟ್ಟಿಗೆ ಸೂಕ್ತ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣಗೂ PSI ಅಕ್ರಮಕ್ಕೂ ಸಂಬಂಧವಿಲ್ಲ: ಮುನಿರತ್ನ

    ಒಂದೇ ಕೇಂದ್ರದಲ್ಲಿ ಪರಿಕ್ಷೆ ಬರೆದ ಅತಿಹೆಚ್ಚು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಈಗಾಗಲೇ ಬ್ಲೂಟೂತ್ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ಬಯಲಾಗಿದೆ. ಇದೆಲ್ಲವನ್ನು ಪ್ರಾಮಾಣಿಕವಾಗಿ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಸೂಕ್ತ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    Divya hagaragi (2)

    ಇದೇ ವೇಳೆ ದಿವ್ಯಾ ಹಾಗರಗಿಯನ್ನು ಕಾಂಗ್ರೆಸ್‌ನವರು ಮುಚ್ಚಿಡಲು ಆಕೆ ಸಣ್ಣ ಮಗು ಅಲ್ಲ. ಬಿಜೆಪಿ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮರಾಠಾ ಸಮುದಾಯದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ಬೇಕು: ಅನಿಲ್ ಬೆನಕೆ

    ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೇ 7, 8ರಂದು ಬೆಳಗಾವಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಾನೂ ಅವರೊಂದಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು.

    Siddaramaiah

    ಇದರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೇ 7ರಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿ ನಗರ ಕಾಂಗ್ರೆಸ್ ಭವನದಲ್ಲಿ ವಿಧಾನ ಪರಿಷತ್ ನೈರುತ್ಯ ಪದವೀಧರರ ಕ್ಷೇತ್ರದಿಂದ ಚುನಾವಣೆ ಕುರಿತು ಸಭೆ ನಡೆಸಲಿದ್ದಾರೆ. ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

  • ನಮ್ಮ ಪಾರ್ಟಿಗೆ ಸಿದ್ಧಾಂತವಿದೆ, ಬೇರೆಯವರಂತೆ ಮಾಡಲ್ಲ-ಸತೀಶ್ ಜಾರಕಿಹೊಳಿ

    ನಮ್ಮ ಪಾರ್ಟಿಗೆ ಸಿದ್ಧಾಂತವಿದೆ, ಬೇರೆಯವರಂತೆ ಮಾಡಲ್ಲ-ಸತೀಶ್ ಜಾರಕಿಹೊಳಿ

    ಬೆಳಗಾವಿ: ಕಾಂಗ್ರೆಸ್ ಮಹಾಪಾಲಿಕೆ ಚುನಾವಣೆಯನ್ನ ಪಾರ್ಟಿಯ ಚಿಹ್ನೆಯನ್ನ ಆಧಾರಿಸಿ ಎದುರಿಸಬೇಕೋ, ಬೇಡವೋ ಎಂಬುದರ ಬಗ್ಗೆ  ನಿರ್ಣಯ ಕೈಗೊಂಡಿಲ್ಲವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಶುಕ್ರವಾರದಂದು ಬೆಳಗಾವಿಯಲ್ಲಿ ಮಾತನಾಡಿದ ಅವರು, ಶೇ7.5 ರಷ್ಟು ಮೀಸಲಾತಿಯನ್ನ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾತಿಯನ್ನ ನೀಡಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿದ್ದೇವೆ. ಸಿಎಂ ಬೊಮ್ಮಾಯಿ ಅವರಿಂದ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಅಲ್ಲದೇ ಇದಕ್ಕೆ ಸ್ವಲ್ಪ ಸಮಯ ನೀಡಬೇಕಾಗುತ್ತದೆ. ಅವರು ಅಧ್ಯಯನ ಮಾಡಿ ಕ್ರಮಕೈಗೊಳ್ಳಲಿ. ಯಾವುದೇ ಸರ್ಕಾರವಿದ್ಧರೂ ಇಚ್ಛಾಶಕ್ತಿಯ ಅಭಾವದಿಂದ ಬೇಡಿಕೆ ಈಡೇರಿಲ್ಲ. ಬಿಜೆಪಿ ಸರ್ಕಾರವಾದರೂ ಈಡೇರಿಸುತ್ತದೆಯೇ ಎಂಬುದನ್ನ ಕಾಯ್ದು ನೋಡಬೇಕಿದೆ ಎಂದಿದ್ದಾರೆ. ಇದನ್ನೂ ಓದಿ: ವಧು, ವರರಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಹಾಸ್ಯ ನಟ

    ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯನ್ನ ಪಕ್ಷದ ಚಿಹ್ನೆಯ ಮೇಲೆ ನಡೆಸಬೇಕೋ ಬೇಡವೋ ಎಂಬುದರ ಬಗ್ಗೆ ಅಂತಿಮವಾಗಿ ತೀರ್ಮಾನಿಸಿಲ್ಲ. ಬೇರೆಯವರಂತೆ ನಾವೂ ಮಾಡಲ್ಲ ನಮ್ಮ ಪಾರ್ಟಿಗೂ ತನ್ನದೇಯಾದ ಸಿದ್ಧಾಂತವಿದೆ ಎಂದರು. ಇದನ್ನೂ ಓದಿ: ಬೆಣ್ಣೆ ನಗರಿಯಲ್ಲಿ ಕಲಬೆರಕೆ ಬೆಣ್ಣೆ ಮಾರಾಟ ದಂಧೆ- ಓರ್ವ ಅರೆಸ್ಟ್

    ಬೆಳಗಾವಿ ಮತ್ತು ಹುಬ್ಬಳ್ಳಿ ಸೇರಿದಂತೆ ಎಲ್ಲೆಡೆ ಸಮಿತಿಯನ್ನ ನೇಮಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಒಳ್ಳೆಯ ಕೆಲಸ ಮಾಡಿದ್ದು, ನಮಗೆ ಜನ ಬೆಂಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ – ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ಜಾರಕಿಹೊಳಿ ರಾಜೀನಾಮೆ

    ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ – ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ಜಾರಕಿಹೊಳಿ ರಾಜೀನಾಮೆ

    ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಶಾಸಕ ಸತೀಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ.

    ಸತೀಶ್ ಜಾರಕಿಹೊಳಿ ಇ-ಮೇಲ್ ಮೂಲಕ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರವಾನಿಸಿದ್ದಾರೆ. ಇವರು ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.

    ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಯಮಕನಮರಡಿ ಮತ್ತು ಮೈಸೂರನಲ್ಲಿ ಜಾರಕಿಹೊಳಿ ಬೆಂಬಲಿಗರು ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಇತ್ತ ಜಾರಕಿಹೊಳಿ ಬೆಂಬಲಿಗರಾಗಿರುವ ಜಿಲ್ಲಾಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

    ಈ ಹಿಂದೆ ಕೂಡ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗಲಿಲ್ಲ, ಅವರ ಕುಟುಂಬದ ಸಹೋದರನಿಗೆ ಸಚಿವ ಸ್ಥಾನ ದೊರೆತಿತ್ತು. ಈಗಲೂ ಕೂಡ ಸಚಿವ ಸ್ಥಾನ ಕೈ ತಪ್ಪಿದೆ ಎಂದು ಬೆಂಬಲಿಗರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಎಂಡಿ ಲಕ್ಷ್ಮಿನಾರಾಯಣ್‍ಗೆ ಟಿಕೆಟ್- ಸಿಎಂ ವಿರುದ್ಧ ಸತೀಶ್ ಜಾರಕಿಹೋಳಿ ಗರಂ

    ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಎಂಡಿ ಲಕ್ಷ್ಮಿನಾರಾಯಣ್‍ಗೆ ಟಿಕೆಟ್- ಸಿಎಂ ವಿರುದ್ಧ ಸತೀಶ್ ಜಾರಕಿಹೋಳಿ ಗರಂ

    ಬೆಳಗಾವಿ: ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿವಾದದಿಂದ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೋಳಿ ನಡುವೆ ಮತ್ತೊಂದು ಸುತ್ತಿನ ಮುನಿಸಿಗೆ ಕಾರಣವಾಗುವ ಸಾಧ್ಯತೆ ಇದೆ.

    ಕೆಪಿಸಿಸಿ ಹಿಂದುಳಿದ ಘಟಕದ ಅಧ್ಯಕ್ಷ ಹಾಲಿ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿ ನಾರಾಯಣ್ ಈ ವಿವಾದದ ಮೂಲ. ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 35 ಸಾವಿರ ನೇಕಾರ ಸಮುದಾಯದ ಮತದಾರರಿದ್ದಾರೆ. ಆದ್ದರಿಂದ ನೇಕಾರ ಸಮುದಾಯದ ಲಕ್ಷ್ಮಿನಾರಾಯಣ್‍ಗೆ ಬೆಳಗಾವಿ ದಕ್ಷಿಣ ಟಿಕೆಟ್ ಎಂದು ಸಿಎಂ ಘೋಷಿಸಿದ್ದಾರೆ. ಇದು ಜಿಲ್ಲೆಯ ಪ್ರಭಾವಿ ನಾಯಕ ಸತೀಶ್ ಜಾರಕಿಹೋಳಿ ಕಣ್ಣು ಕೆಂಪಾಗಿಸಿದೆ.

    ಜಿಲ್ಲಾ ಮುಖಂಡರ ಅನುಮತಿ ಪಡೆಯದೆ ತುಮಕೂರಿನ ಲಕ್ಷ್ಮಿನಾರಾಯಣ್ ಹೆಸರನ್ನು ಸಿಎಂ ಘೋಷಿಸಿದ್ದು ಹೇಗೆ? ಎಂದು ಸತೀಶ್ ಜಾರಕಿಹೋಳಿ ಸಿಟ್ಟಾಗಿದ್ದು, ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದು ಹೇಗೆ ಟಿಕೆಟ್ ಕೊಟ್ಟು ಸಿಎಂ ಗೆಲ್ಲಿಸ್ತಾರೆ ನೋಡೋಣ ಎಂದಿದ್ದಾರೆ.

    ಅಲ್ಲದೆ ಇವರೊಬ್ಬರೆನಾ ಹಿಂದುಳಿದ ವರ್ಗದ ನಾಯಕ? ನಾನು ನೋಡ್ತೀನಿ ಎಂದು ಅಸಮಧಾನ ಹೊರಹಾಕಿದ್ದಾರೆ. ರಾಜ್ಯ ನಾಯಕರ ಬಳಿಯೂ ಅಸಮಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.