Tag: ಸತೀಶ್ ಜಾರಕಿಹೊಳಿ

  • ಖರ್ಗೆ, ವೇಣುಗೋಪಾಲ್ ಭೇಟಿಯಾದ ಸತೀಶ್ ಜಾರಕಿಹೊಳಿ

    ಖರ್ಗೆ, ವೇಣುಗೋಪಾಲ್ ಭೇಟಿಯಾದ ಸತೀಶ್ ಜಾರಕಿಹೊಳಿ

    – ನಾಳೆ ದೆಹಲಿಗೆ ದಲಿತ ಸಚಿವರ ದಂಡು

    ನವದೆಹಲಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚರ್ಚೆ ತಣ್ಣಗಾಗುವ ಹೊತ್ತಲ್ಲೇ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ.

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge), ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (KC Venugopal) ಅವರನ್ನು ಸತೀಶ್ ಜಾರಕಿಹೊಳಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.ಇದನ್ನೂ ಓದಿ: ನನ್ನ ಮದುವೆಗೆ ದರ್ಶನ್ ಅವ್ರು ಬಂದ್ರೆ ತುಂಬಾ ಸಂತೋಷ: ಡಾಲಿ ಧನಂಜಯ್

    ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ವಿಚಾರದಲ್ಲಿ ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ವರಿಷ್ಠರು ತಾಕೀತು ಮಾಡಿದ ಬೆನ್ನಲ್ಲೇ ವರಿಷ್ಠರನ್ನು ಭೇಟಿಯಾಗಿ ರಾಜ್ಯ ಕಾಂಗ್ರೆಸ್ ಪಕ್ಷದೊಳಗಿನ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಯಾವ ಬೆಳವಣಿಗೆ ನಡೆಯುತ್ತಿದೆ ಎಂದು ವಿವರಿಸಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ಸಿಎಂ ಬದಲಾವಣೆ ಮಾಡುವುದಾದರೆ ದಲಿತ ನಾಯಕರನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಾವೇಶ ನಡೆಸಲು ಅನುಮತಿ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

    ಸತೀಶ್ ಜಾರಕಿಹೊಳಿ ಭೇಟಿ ನಡುವೆ ನಾಳೆ ದೆಹಲಿಗೆ ಗೃಹ ಸಚಿವ ಪರಮೇಶ್ವರ್, ಕೆ.ಎನ್ ರಾಜಣ್ಣ ಮತ್ತು ಹೆಚ್‌ಸಿ ಮಹದೇವಪ್ಪ ಕೂಡಾ ದೆಹಲಿಗೆ ಆಗಮಿಸುತ್ತಿದ್ದು, ಹೈಕಮಾಂಡ್ ನಾಯಕರ ಭೇಟಿಗೆ ಸಮಯ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ರಾಜ್ಯದಲ್ಲಿ ಬಹಿರಂಗ ಹೇಳಿಕೆ ನೀಡುತ್ತಿದ್ದ ದಲಿತ ನಾಯಕರು ಈಗ ದೆಹಲಿ ಮಟ್ಟದಲ್ಲಿ ಹೊಸ ಚರ್ಚೆ ಹುಟ್ಟು ಹಾಕುತ್ತಿದ್ದಾರೆ.ಇದನ್ನೂ ಓದಿ: ವಿಷ್ಣುಪ್ರಿಯ ಟ್ರೈಲರ್‌ನಲ್ಲಿ ಕಂಡಿದ್ದು ನವಿರು ಪ್ರೇಮ ಮಾತ್ರವಲ್ಲ!

  • ಸತೀಶ್‌ ಜಾರಕಿಹೊಳಿ ತಲೆಎಣಿಗೆ ಅಸ್ತ್ರಕ್ಕೆ ಡಿಕೆಶಿ ಕೆಂಡಾಮಂಡಲ

    ಸತೀಶ್‌ ಜಾರಕಿಹೊಳಿ ತಲೆಎಣಿಗೆ ಅಸ್ತ್ರಕ್ಕೆ ಡಿಕೆಶಿ ಕೆಂಡಾಮಂಡಲ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಕಾಂಗ್ರೆಸ್‌ ಪಾಳಯದ ನಾಯಕರ ನಡುವೆ ಗುದ್ದಾಟ ಜೋರಾಗಿದೆ. ಸಚಿವ ಜಾರಕಿಹೊಳಿ ತಲೆಎಣಿಕೆ ಅಸ್ತ್ರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕೆಂಡಾಮಂಡಲರಾಗಿದ್ದಾರೆ.

    ಬೆಂಗಳೂರು ವಿಮಾನ ನಿಲ್ದಾಣದ ಬಳಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ಯಾರು ಏನೇ ಇದ್ದರೂ ಹೈಕಮಾಂಡ್‌ಗೆ ಭೇಟಿಯಾಗಿ ಹೇಳಲಿ. ಈಗಾಗಲೇ ಹೈಕಮಾಂಡ್ ನಾಯಕರು ಎಲ್ಲರಿಗೂ ಹೇಳಿದ್ದಾರೆ‌. ನಮ್ರತೆಯಿಂದ ಹೇಳ್ತಿದ್ದೇನೆ. ಇದು ಕಾರ್ಯಕರ್ತರು, ಮತದಾರರ ಪಕ್ಷ. ಯಾರು ಇರಲಿ, ಇಲ್ಲದೇ ಇರಲಿ ಪಕ್ಷ ಉಳಿಯುತ್ತೆ. ಸ್ವಾತಂತ್ರ್ಯ ಕೊಡಿಸಿದ ಗಾಂಧಿಜೀ ಅಧಿಕಾರ ಪಡೆದ್ರಾ? ಅಂಬೇಡ್ಕರ್ ಅವರು ಅಧಿಕಾರವನ್ನು ನಮಗೆ ಬಿಟ್ಟು ಹೋದರು. ನಾಳೆ ಸುರ್ಜೇವಾಲ ಬೆಳಗಾವಿಗೆ ಬರ್ತಿದ್ದಾರೆ. ಅಲ್ಲಿ ಹೋಗಿ ಮಾತಾಡಲಿ ಎಂದು ತಿಳಿಸಿದ್ದಾರೆ.

    ನಮ್ಮ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರು. ಖರ್ಗೆ ಅವರನ್ನೇ ಇವರು ಪ್ರಶ್ನೆ ಮಾಡ್ತಾರಾ? ಹೀಗೆ ಮಾತಾಡೋದು ಸರಿಯಲ್ಲ. ಯಾವುದಾದರೂ ವಿಚಾರ ಇದ್ದರೆ ನಾನೇ ಕರೆದು ಪ್ರೆಸ್‌ಗೆ ಹೇಳ್ತೀನಿ. ಪಕ್ಷ ಕಟ್ಟುವಂಥದ್ದು ಉಳಿಸಿಕೊಳ್ಳುವುದು ಕಾಪಾಡುವುದು ಎಲ್ಲರಿಗೂ ಪಾಠ ಹೇಳಿದ್ದಾರೆ. ಯಾರೂ ಕೂಡ ಮಾತಾಡಬಾರದು ಎಂದು ಹೇಳಿದ್ದಾರೆ. ನಾಳೆ ಎಐಸಿಸಿ ಸುರ್ಜೆವಾಲಾ ಬೆಳಗಾವಿಗೆ ಬರ್ತಿದ್ದಾರೆ. ಪಾರ್ಟಿ ವಿಚಾರ ಮಾಧ್ಯಮದಲ್ಲಿ ಮಾತಾಡುವುದಲ್ಲ. ಏನೇ ಇದ್ರೂ ರಾಹುಲ್ ಗಾಂಧಿ ಹತ್ರ ಖರ್ಗೆಯವರ ಹತ್ರ ಹೋಗಿ ಮಾತಾಡಲಿ ಎಂದು ಟಾಂಗ್‌ ಕೊಟ್ಟಿದ್ದಾರೆ.

    ನನಗೆ ಏನಾದ್ರೂ ಸ್ಥಾನ ಬೇಕಾದರೆ ನೀವು ಕೊಡಿಸ್ತೀರಾ? ಅವರವರ ಶ್ರಮಕ್ಕೆ ತಕ್ಕ ಸ್ಥಾನ ನಾಯಕರು ಕೊಡ್ತಾರೆ. ಬಹಳ ಶ್ರಮ ಪಟ್ಟು ಡಿಕೆ ಶಿವಕುಮಾರ್ ಪಾರ್ಟಿ ತಂದಿಲ್ಲ. ಕಾರ್ಯಕರ್ತರು ತಂದಿದ್ದು ಪಾರ್ಟಿ. ನಮ್ರತೆಯಿಂದ ಮನವಿ ಮಾಡ್ತೇನೆ. ಕಾಂಗ್ರೆಸ್ ಕಾರ್ಯಕರ್ತರ ಪಕ್ಷ. ಮಹಾತ್ಮಾ ಗಾಂಧಿಯೇ ಎಲ್ಲವನ್ನೂ ತ್ಯಾಗ ಮಾಡಿದರು. ಅವರು ಮನಸ್ಸು ಮಾಡಿದ್ರೆ ಪ್ರಧಾನಿ ಆಗ್ತಿರಲಿಲ್ವಾ ಎಂದು ಪ್ರಶ್ನಿಸಿದ್ದಾರೆ.

    ಪರಮೇಶ್ವರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಮಾಧ್ಯಮಗಳ ಮಾತೆಲ್ಲ ಕೇಳಲು ತಯಾರಿಲ್ಲ. ನಾನಲ್ಲ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರ ಸ್ಪಷ್ಟಪಡಿಸಬೇಕಾಗಿರುವುದು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದನ್ನು ಕೇಳಲಿ. ಇವರು ಪ್ರಶ್ನೆ ಮಾಡ್ತಿರುವುದು ನನ್ನನ್ನಲ್ಲ ಮಲ್ಲಿಕಾರ್ಜುನ ಖರ್ಗೆಯನ್ನು. ಇವರು ಖರ್ಗೆಯವರನ್ನೇ ಪ್ರಶ್ನೆ ಮಾಡ್ತಿದ್ದಾರೆ ಎಂದು ಕೆಂಡಕಾರಿದ್ದಾರೆ.

  • ಕಾಂಗ್ರೆಸ್‌ನಲ್ಲಿ ತಲೆ ಎಣಿಕೆ ಪಾಲಿಟಿಕ್ಸ್ – ಸಿಎಂ ಸ್ಥಾನಕ್ಕಲ್ಲ.. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ?

    ಕಾಂಗ್ರೆಸ್‌ನಲ್ಲಿ ತಲೆ ಎಣಿಕೆ ಪಾಲಿಟಿಕ್ಸ್ – ಸಿಎಂ ಸ್ಥಾನಕ್ಕಲ್ಲ.. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ?

    -ಮುಂದುವರಿದ ಪವರ್‌ವಾರ್ – ಪೂರ್ಣಾವಧಿ ಅಧ್ಯಕ್ಷರ ನೇಮಕಕ್ಕೆ ಸತೀಶ್ ಪಟ್ಟು

    ನವದೆಹಲಿ: ಬಹುಮತ ಪಡೆದು ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲೇ ಕಾಂಗ್ರೆಸ್ ಪಕ್ಷದಲ್ಲಿ (Congress Party) ಪಟ್ಟಕ್ಕಾಗಿ ಫೈಟ್ ಏರ್ಪಟ್ಟಿದೆ. ಪಟ್ಟದ ಅರಸನಿಗಾಗಿ ಸಿಎಂ ಬಳಿಕ ಇದೀಗ ಬೇರೆ ಬೇರೆ ನಾಯಕರ ನಡುವೆ ಚೌಕಾಬಾರ ನಡೆಯುತ್ತಿದೆ. ಒಳಜಗಳಕ್ಕೆ ಮದ್ದರೆಯಲು ಬಂದಿದ್ದ ಸುರ್ಜೇವಾಲ (Randeep Surjewala) ವಾರ್ನಿಂಗ್‌ಗೂ ಜಗ್ಗದ ಕೈ ನಾಯಕರು, ತಮ್ಮ ಮಾತಿನ ವರಸೆ ಮುಂದುವರಿಸಿದ್ದಾರೆ.

    ಸುರ್ಜೆವಾಲಾ ಮೂರು ಬಾರಿ ವಾರ್ನಿಂಗ್ ನೀಡಿದ್ದರೂ ಬಹಿರಂಗ ಹೇಳಿಕೆಗಳು ನಿಂತಿಲ್ಲ. ನಾವಿದ್ದರೆ ತಾನೇ ಪಕ್ಷ… ಜನಸಮುದಾಯ ಇದ್ದರೆ ತಾನೇ ಪಕ್ಷ ಎನ್ನುವ ಮೂಲಕ ಪರಮೇಶ್ವರ್ ಜಾತಿ ಕಾರ್ಡ್ ಪ್ಲೇ ಮಾಡಿದ್ದಾರೆ. ಈ ನಡುವೆ ಸತೀಶ್ ಜಾರಕಿಹೊಳಿ (Satish Jarkiholi), ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

    ಸುರ್ಜೆವಾಲ ಭೇಟಿ ಬಗ್ಗೆ ಮಾತನಾಡಿರುವ ಸತೀಶ್ ಜಾರಕಿಹೊಳಿ, ಡಿಕೆಶಿ (DK Shivakumar) ಮುಂದುವರಿಸೋದು ಹೈಕಮಾಂಡ್‌ಗೆ ಬಿಟ್ಟಿದ್ದು. ಆದ್ರೆ ಆದಷ್ಟು ಬೇಗ ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ ಆಗಬೇಕು. ಇದಕ್ಕಾಗಿ ಶಾಸಕರ ಅಭಿಪ್ರಾಯ ಸಂಗ್ರಹಿಸಬೇಕು. ಸಮಸ್ಯೆ ಇರುವುದನ್ನ ಸರಿಪಡಿಸಬೇಕು ಅಂತ ಹೇಳಿದ್ದಾರೆ. ಇದನ್ನೂ ಓದಿ: ಮಹಾಕುಂಭಮೇಳ: ಸಂಕ್ರಾಂತಿಯಂದು ಸಂಗಮದಲ್ಲಿ ‘ಅಮೃತ ಸ್ನಾನ’ ಮಾಡಿದ 1 ಕೋಟಿ ಭಕ್ತರು

    ಅಧ್ಯಕ್ಷ ಸ್ಥಾನ ಫಸ್ಟ್.. ಪವರ್ ಶೇರ್ ನೆಕ್ಸ್ಟ್‌:
    ಸದ್ಯ ಸಿಎಂ ಸ್ಥಾನಕ್ಕಿಂತಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಫೈಟ್ ಜೋರಾಗಿದೆ. ಏಕೆಂದರೆ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದವರೇ ಮುಂದಿನ ಸಿಎಂ ಎಂಬುದು ಪಕ್ಷದ ನಿಯಮ. ಹೀಗಾಗಿ ಪೂರ್ಣಾವಧಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಪಟ್ಟು ಹಿಡಿದಿರುವ ಸತೀಶ್ ಜಾರಕಿಹೊಳಿ, ಶಾಸಕರ ಅಭಿಪ್ರಾಯ ಸಂಗ್ರಹಿಸಲು ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.

    ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ಸತೀಶ್‌ರನ್ನೇ ಕೇಳಿ, ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಅಂತ ಹೇಳಿ ಜಾರಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ, ಆರ್‌ಎಸ್‌ಎಸ್ ವಶಪಡಿಸಿಕೊಂಡಿರುವ ಭಾರತದ ವಿರುದ್ಧ ಹೋರಾಟ: ರಾಹುಲ್‌ ಗಾಂಧಿ

    ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಾಗಿ ಫೈಟ್ ನಡುವೆ ಡಿಸಿಎಂ ಡಿಕೆ ಶಿವಕುಮಾರ್, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಕ ಖರ್ಗೆ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ನಡುವೆ ಮೈಸೂರಿನಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ – ಹರಿಯಾಣದ ಬಿಜೆಪಿ ಅಧ್ಯಕ್ಷ, ಗಾಯಕನ ವಿರುದ್ಧ ಎಫ್‌ಐಆರ್‌

  • ಡಿನ್ನರ್ ಹೊಸತೇನು ಅಲ್ಲ, ಮುಸುಕಿನ ಗುದ್ದಾಟ ಏನಿಲ್ಲ: ಸಚಿವ ಸತೀಶ್ ಜಾರಕಿಹೊಳಿ

    ಡಿನ್ನರ್ ಹೊಸತೇನು ಅಲ್ಲ, ಮುಸುಕಿನ ಗುದ್ದಾಟ ಏನಿಲ್ಲ: ಸಚಿವ ಸತೀಶ್ ಜಾರಕಿಹೊಳಿ

    ಬೆಂಗಳೂರು: ಡಿನ್ನರ್ ಹೊಸತೇನು ಅಲ್ಲ, ನಮ್ಮಲ್ಲಿ ಮುಸುಕಿನ ಗುದ್ದಾಟ ಎನಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಎಸ್ಸಿ-ಎಸ್ಟಿ ಶಾಸಕರ ಡಿನ್ನರ್ ಮೀಟಿಂಗ್ ಮುಂದೂಡಿಕೆ ವಿಚಾರ, ಯಾರು ಕರೆದಿದ್ರು ಅವರನ್ನೇ ಕೇಳಬೇಕು. ಕರೆದಿದ್ದರೆ ನಾವು ಭಾಗವಹಿಸುತ್ತಿದ್ದೆವು. ಸಭೆಗೆ ನಾವು ಆಹ್ವಾನಿತರಷ್ಟೇ. ಸರಿಯಾದ ಪರ್ಸನ್ ಕೇಳಿದ್ರೆ ಗೊತ್ತಾಗುತ್ತೆ. ಸಭೆಗೆ ನನ್ನನ್ನ ಕರೆದಿದ್ದರು. ಏನು ಚರ್ಚೆಯಾಗ್ತಿತ್ತು ನನಗೆ ಗೊತ್ತಿಲ್ಲ. ಪರಮೇಶ್ವರ್ ಜೊತೆ ನಾನು‌ ಮಾತನಾಡಿಲ್ಲ. ಪಕ್ಷ ಒಂದೇ ಇದೆ. ಎಲ್ಲರೂ ‌ಇದ್ದೇವೆ. ರಾಜಕೀಯ‌ ಮಾಡಬೇಕಾದ್ರೆ ಶಕ್ತಿ ಇಟ್ಕೊಂಡೇ ಬರಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಬೇಜಾರಾಗಲು ಅವ್ರ ಆಸ್ತಿ ಬರೆಸಿಕೊಂಡಿದ್ದೀವಾ? – ಡಿಸಿಎಂ ವಿರುದ್ಧ ರಾಜಣ್ಣ ಅಸಮಾಧಾನ

    ಸಭೆ ಕರೆದವರೂ ಅಲ್ಲ ಡೆಲ್ಲಿಗೆ ಹೋದವರು ಅಲ್ಲ. ಇದರ ಬಗ್ಗೆ ಹೇಳಿದರೆ, ಮತ್ತೇನೋ ಆಗುತ್ತೆ. ಮತ್ತೆ ಯಾವಾಗ ಮಾಡ್ತಾರೆ ಕೇಳ್ತೇವೆ. ಡಿನ್ನರ್ ಹೊಸದೇನು ಅಲ್ಲ. ಮುಸುಕಿನ ಗುದ್ದಾಟ ಏನೂ ಇಲ್ಲ. ಹೈಕಮಾಂಡ್ ಪರ್ಮಿಷನ್ ಹೋಂ ಮಿನಿಸ್ಟರ್ ತೆಗೆದುಕೊಳ್ತಾರೆ. ಆಮೇಲೆ ಸಭೆಯ ಬಗ್ಗೆ ನೋಡೋಣ. ಸಮಸ್ಯೆ ಉದ್ಭವವಾದಾಗ ಕೇಳಬೇಕಲ್ಲ. ಹೈಕಮಾಂಡ್ ಹತ್ತಿರವೇ ಕೇಳೋಣ ಎಂದಿದ್ದಾರೆ.

    ರಾಜಕೀಯದಲ್ಲಿ ಹಿನ್ನಡೆ, ಮುನ್ನಡೆ ಇರುತ್ತೆ. ಫೋನಿನಲ್ಲಿ ಮಾತನಾಡೋಕೇನು ಆಗಲ್ವಾ. ಪಕ್ಷ ಮೇಲಿದೆ ಸಮಸ್ಯೆ ಪರಿಹರಿಸುವ ಶಕ್ತಿ ಅವರಿಗಿದೆ. ನಮ್ಮ ಊಟ ನಮ್ಮದು ಬೇರೆಯವರಿಗೇನು ಸಂಬಂಧ? ಅವರಿಗೇನು ಆತಂಕ? ಪರ್ಮಿಷನ್ ತೆಗೆದುಕೊಂಡು ಮತ್ತೆ ಸಭೆ ಮಾಡಬಹುದು ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಡಿಕೆಶಿ ಸಹನೆಯ ಕಟ್ಟೆ ಒಡೆಯುವ ಕಾಲ ಸನ್ನಿಹಿತವಾಗಿದೆ: ಬೊಮ್ಮಾಯಿ

  • ರಾಜ್ಯದಲ್ಲಿ ಜೋರಾಯ್ತು ಪವರ್‌ ಪಾಲಿʼಟ್ರಿಕ್ಸ್‌ʼ – ಈಗ ಪರಮೇಶ್ವರ್‌ರಿಂದ ಡಿನ್ನರ್‌ ಸಭೆ

    ರಾಜ್ಯದಲ್ಲಿ ಜೋರಾಯ್ತು ಪವರ್‌ ಪಾಲಿʼಟ್ರಿಕ್ಸ್‌ʼ – ಈಗ ಪರಮೇಶ್ವರ್‌ರಿಂದ ಡಿನ್ನರ್‌ ಸಭೆ

    ಬೆಂಗಳೂರು: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಡಿನ್ನರ್‌ ಸಭೆ (Dinner Meeting) ನಡೆಸಿದ ಬೆನ್ನಲ್ಲೇ ಈಗ ಗೃಹ ಸಚಿವ ಪರಮೇಶ್ವರ್‌ (G Parameshwara) ಅವರು ಡಿನ್ನರ್‌ ಸಭೆ ನಡೆಸಲು ಮುಂದಾಗಿದ್ದಾರೆ.

    ಗುರುವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪರಮೇಶ್ವರ್ ಡಿನ್ನರ್ ಆಯೋಜಿಸಿದ್ದಾರೆ. ದಲಿತ ಶಾಸಕರು ಹಾಗೂ ದಲಿತ ಸಚಿವರ ಜೊತೆ ಪರಮೇಶ್ವರ್ ಡಿನ್ನರ್ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: Gold Fraud Case| ಐಶ್ವರ್ಯ ಲಿಂಕ್ ಕೈ ಶಾಸಕನ ಬುಡಕ್ಕೆ – ಬೆನ್ಜ್‌ ಕಾರು ಬಳಸಿದ್ರಾ ವಿನಯ್ ಕುಲಕರ್ಣಿ?

     

    2023 ರ ವಿಧಾನಸಭೆ ಚುನಾವಣೆಯ ಪರಾಜಿತ ದಲಿತ ಅಭ್ಯರ್ಥಿಗಳಿಗೂ ಈ ಭೋಜನ ಕೂಟಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ. ಈ ಡಿನ್ನರ್‌ ಸಭೆಯ ಮೂಲಕ ದಲಿತ ಸಿಎಂ ಕಾರ್ಡ್ ಪ್ಲೇ ಮಾಡಲು ಪರಮೇಶ್ವರ್ ಮುಂದಾದ್ರಾ ಎಂಬ ಪ್ರಶ್ನೆ ಎದ್ದಿದೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ನಾಳೆ ನಾನು ಡಿನ್ನರ್ ಮಾತ್ರ ಕೊಡುತ್ತಿದ್ದೇನೆ. ಡಿನ್ನರ್ ಪಾರ್ಟಿ ಅಲ್ಲ. ಮುಂದೆ ನಾವು ಎಸ್‌ಸಿ, ಎಸ್ಟಿ ಸಮಾವೇಶ ಮಾಡಬೇಕು ಎಂದುಕೊಂಡಿದ್ದೇವೆ. ಅದಕ್ಕಾಗಿ ಎಲ್ಲ ಎಸ್ಸಿ-ಎಸ್ಟಿ ಸಮುದಾಯದ ಸಚಿವರು, ಶಾಸಕರಿಗೆ ಆಹ್ವಾನ ನೀಡಿದ್ದೇವೆ. ಪಕ್ಷದ ವ್ಯಾಪ್ತಿಯಲ್ಲಿಯೇ ಅನುಮತಿ ಪಡೆದು ಸಭೆ ನಡೆಸುತ್ತೇವೆ. ಸಂಜೆ 7 ಗಂಟೆಗೆ ನಡೆಯುವ ಈ ಡಿನ್ನರ್‌ಗೆ ಎಸ್‌ಟಿ, ಎಸ್‌ಟಿ ಬಿಟ್ಟು ಬೇರೆಯವರಿಗೆ ಆಹ್ವಾನ ಇಲ್ಲ. ಹಾಗೆಂದ ಮಾತ್ರಕ್ಕೆ ಬರಬಾರದು ಅಂತ ಇಲ್ಲ. ಹಿಂದೆ ಚಿತ್ರದುರ್ಗದಲ್ಲಿ ಎಸ್‌ಟಿ, ಎಸ್‌ಸಿ ಸಮಾವೇಶ ನಡೆದಿತ್ತು. ಆ ಸಮಾವೇಶದಲ್ಲಿ ಕೆಲವು ನಿರ್ಣಯ ತೆಗೆದುಕೊಂಡಿದ್ದೆವು. ಅದರ ಬಗ್ಗೆಯೂ ನಾಳೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

    ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಜ.2ರ ರಾತ್ರಿ ನಡೆದ ಔತಣ ಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕೆಲವು ಸಚಿವರು ಮತ್ತು ಶಾಸಕರು ಪಾಲ್ಗೊಂಡಿದ್ದರು. ಸಂಪುಟ ಸಭೆಯ ಬಳಿಕ ಸಚಿವರ ಅಧಿಕೃತ ನಿವಾಸದಲ್ಲಿ ಔತಣಕೂಟ ಆಯೋಜಿಸಲಾಗಿತ್ತು.

    ಕೆಪಿಸಿಸಿ ಅಧ್ಯಕ್ಷರ ಸ್ಥಾನದ ಬದಲಾವಣೆ ಹಾಗೂ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಚರ್ಚೆ ನಡುವೆಯೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವಾಗಲೇ ಸಭೆ ನಡೆದಿರುವುದು ಕುತೂಹಲ ಮೂಡಿಸಿತ್ತು. ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿತ್ತು.

    ಡಾ.ಜಿ.ಪರಮೇಶ್ವರ್, ಕೆ.ಎನ್. ರಾಜಣ್ಣ, ಡಾ.ಎಚ್.ಸಿ. ಮಹದೇವಪ್ಪ ಸೇರಿ ಏಳು ಮಂದಿ ಸಚಿವರು ಹಾಜರಿದ್ದರು. ಜತೆಗೆ ಒಟ್ಟು 35 ಮಂದಿ ಶಾಸಕರೂ ಭಾಗವಹಿಸಿದ್ದರು.

    ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭೋಜನಕೂಟಕ್ಕೆ ಆಹ್ವಾನಿಸಿದ್ದಾಗಿ ಸತೀಶ್ ಜಾರಕಿಹೊಳಿ ಕಚೇರಿ ಮೂಲಗಳು ತಿಳಿಸಿದ್ದರೂ ಡಿಕೆಶಿ ವಿದೇಶ ಪ್ರವಾಸದಲ್ಲಿದ್ದಾಗಲೇ ಈ ಔತಣಕೂಟ ನಡೆದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

  • 2028ಕ್ಕೆ ನಾನೇ ಸಿಎಂ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

    2028ಕ್ಕೆ ನಾನೇ ಸಿಎಂ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

    ರಾಯಚೂರು: 2028ಕ್ಕೆ ನಾನೇ ಸಿಎಂ ಅಭ್ಯರ್ಥಿ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

    ರಾಯಚೂರಿನಲ್ಲಿ (Raichur) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಈ ಅವಧಿಗೆ ಸಿಎಂ ಆಗಲು ಬರುವುದಿಲ್ಲ. ಈಗ ಮುಖ್ಯಮಂತ್ರಿಗಳು ಇದ್ದಾರೆ. ಹಾಗಾಗಿ ಅಂತಹ ಅವಶ್ಯಕತೆ ಬರಲ್ಲ. ಮುಂದಿನ ಅವಧಿಗೆ ನಾನು ಸಿಎಂ ಆಕಾಂಕ್ಷಿ, ಸಿಎಂ ಸ್ಥಾನದ ವಿಚಾರಗಳು ಈಗ ಇಲ್ಲ ಎಂದಿದ್ದಾರೆ.

    ಡಿಸಿಎಂ ಡಿ.ಕೆ.ಶಿವಕುಮಾರ್ (D.K Shivakumar) ಅನುಪಸ್ಥಿತಿಯಲ್ಲಿ ರಹಸ್ಯ ಸಭೆ ವಿಚಾರವಾಗಿ, ರಹಸ್ಯ ಸಭೆ ಏನು ಇರಲಿಲ್ಲ. ಎಲ್ಲರೂ ಕೂಡಿಯೇ ಸಭೆ ಮಾಡಿದ್ದೇವೆ. ರಹಸ್ಯ ಸಭೆ ಎನ್ನುವ ಪ್ರಶ್ನೆಯೇ ಇಲ್ಲ. ಅದು ಊಟದ ಸಭೆ ಅಷ್ಟೇ. ಸಭೆಯಲ್ಲಿ ಅಂತಾ ರಾಜಕೀಯ ಚರ್ಚೆ ಯಾವುದು ಆಗಿಲ್ಲ. ಸಂಪುಟ ವಿಸ್ತಾರಣೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ರಾಜ್ಯದಲ್ಲಿ 60% ಕಮಿಷನ್ ಸರ್ಕಾರವಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರೆಲ್ಲ ಆರೋಪ ಮಾಡುತ್ತಾರೆ. ಅದನ್ನು ಸಾಬೀತು ಮಾಡಬೇಕು. ಸುಮ್ಮನೇ ಹೇಳುವುದರಿಂದ ಏನೂ ಆಗುವುದಿಲ್ಲ ಎಂದಿದ್ದಾರೆ.

    ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಒತ್ತಾಯ ವಿಚಾರವಾಗಿ, ಅವರ ಆಪ್ತನ ಹೆಸರು ಇದೆ. ಈಶ್ವರಪ್ಪನದ್ದು ನೇರವಾಗಿ ಪತ್ರದಲ್ಲಿ ಹೆಸರು ಇತ್ತು. ಆಪ್ತರು, ಪಿಎಗಳ ಹೆಸರು ಇದ್ರೆ ಸಚಿವರು ನೇರವಾಗಿ ಹೊಣೆಗಾರರು ಆಗಲ್ಲ. ತನಿಖೆ ನಡೆಯುತ್ತಿದೆ ನಡೆಯಲಿ ಎಂದು ಹೇಳಿದ್ದಾರೆ.

  • ಹಿಂದೂ ಪದ ವಿವಾದ – ಸಚಿವ ಸತೀಶ್ ಜಾರಕಿಹೊಳಿಗೆ ಬಿಗ್ ರಿಲೀಫ್

    ಹಿಂದೂ ಪದ ವಿವಾದ – ಸಚಿವ ಸತೀಶ್ ಜಾರಕಿಹೊಳಿಗೆ ಬಿಗ್ ರಿಲೀಫ್

    – ಹೈಕೋರ್ಟ್‌ನಿಂದ ಮಾನನಷ್ಟ ಮೊಕದ್ದಮೆ ವಜಾ

    ಬೆಂಗಳೂರು: ಹಿಂದೂ ಪದ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್‌ (Karnataka High Court) ವಜಾಗೊಳಿಸಿದೆ.

    ‘ಹಿಂದೂ (Hindu) ಎನ್ನುವುದು ಭಾರತೀಯ ಪದವಲ್ಲ. ಅದು ಪರ್ಷಿಯನ್‌ ನೆಲಕ್ಕೆ ಸೇರಿದ್ದು, ಅದೊಂದು ಅಶ್ಲೀಲ ಪದ’ ಎಂದು ಕಾರ್ಯಕ್ರಮವೊಂದರಲ್ಲಿ ಸತೀಶ್‌ ಜಾರಕಿಹೊಳಿ ಹೇಳಿಕೆ ನೀಡಿದ್ದರು. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಸಂಬಂಧ ಲೋಕೋಪಯೋಗಿ ಸಚಿವ ಜಾರಕಿಹೊಳಿ ವಿರುದ್ಧ ಮಾನನಷ್ಟ ಮೊಕದ್ದಮೆ‌ ದಾಖಲಿಸಲಾಗಿತ್ತು. ಇದನ್ನೂ ಓದಿ: 2024-25ರಲ್ಲಿ 1.4 ಲಕ್ಷ ಕೋಟಿ ಸಾಲ ಮಾಡಿದ್ದೇವೆ, ಬೇರೆ ರಾಜ್ಯಗಳಿಗಿಂತ ನಮ್ಮದು ಕಡಿಮೆ: ಸಿದ್ದರಾಮಯ್ಯ

    ವಿಚಾರಣೆ ನಡೆಸಿದ ಹೈಕೋರ್ಟ್‌ ಪ್ರಕರಣವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಸೋನಿಯಾ ಗಾಂಧಿ ಮನವೊಲಿಸಲು ವಯನಾಡಿಗೆ ನೂರು ಮನೆ: ಈಶ್ವರಪ್ಪ ವ್ಯಂಗ್ಯ

    ಐಪಿಸಿ ಸೆಕ್ಷನ್‌ಗಳಾದ 153 (ಗಲಭೆಗೆ ಪ್ರಚೋದನೆ) ಮತ್ತು 500ರ (ಬೇರೊಬ್ಬರಿಗೆ ಅವಮಾನ ಮಾಡುವುದು) ಅಡಿ ಮೊಕದ್ದಮೆ ದಾಖಲಾಗಿತ್ತು. ಮೊಕದ್ದಮೆ ರದ್ದು ಕೋರಿದ್ದ ಸತೀಶ್‌ ಜಾರಕಿಹೊಳಿ, ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

  • ಸಿಎಂ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಆಗುವ ಆಸೆಯಿದೆ: ಸತೀಶ್ ಜಾರಕಿಹೊಳಿ ಇಂಗಿತ

    ಸಿಎಂ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಆಗುವ ಆಸೆಯಿದೆ: ಸತೀಶ್ ಜಾರಕಿಹೊಳಿ ಇಂಗಿತ

    ಹಾವೇರಿ: ಸಿಎಂ ಆಗಲಿಕ್ಕೆ ಆಸೆ ಇದೆ, ಅಧ್ಯಕ್ಷ ಆಗಲಿಕ್ಕೆ ಆಸೆ ಇದೆ, ಮಂತ್ರಿ ಆಗಲಿಕ್ಕೂ ಆಸೆ ಇದೆ, ಆದ್ರೆ ಅಂತಿಮವಾಗಿ ಪಕ್ಷ ತೀರ್ಮಾನ ಮಾಡಲಿ. ಅದು ಪಕ್ಷದ ತೀರ್ಮಾನವೇ ಅಂತಿಮವಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

    ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿಎಂ ಆಗ್ತಾರೆ ಅಂತ ಹೇಳಿ ಹೆಸರು ಓಡಾಡ್ತು. ಈಗ ಅಧ್ಯಕ್ಷ ಆಗ್ತಾರೆ ಅಂತಾ ಹೆಸರು ಓಡಾಡ್ತಾ ಇದೆ. ನಮ್ಮ ಉತ್ಸಾಹ ಅಷ್ಟೆ. ಅಂತಿಮವಾಗಿ ಪಕ್ಷ ತೀರ್ಮಾನ ಮಾಡಬೇಕು. ನಾವೆಲ್ಲಾ ಕಾದು ನೋಡಬೇಕು ಅಷ್ಟೆ. ಈ ವಿಚಾರವಾಗಿ ನಾನು ಯಾವುದೇ ರೀತಿ ಒತ್ತಡ ಹಾಕಿಲ್ಲ. ಚುನಾವಣೆಯಲ್ಲಿ ಗೆಲ್ಲಿಸಿದ್ದೀವಿ, ತೃಪ್ತಿ ಇದೆ. ಮಂತ್ರಿಯಾಗಿ ಕೆಲಸ ಮಾಡ್ತಾ ಇದ್ದೀವಿ, ತೃಪ್ತಿ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರುವವರ ಬಳಿ ಪ್ರಶ್ನೆ ಕೇಳಿ – ಯತ್ನಾಳ್ ಟಾಂಗ್

    ಅಧ್ಯಕ್ಷ ಹುದ್ದೆ ಅಹಿಂದ ನಾಯಕರಿಗೆ ಕೊಡಬೇಕು ಅಂತಾ ಒತ್ತಾಯ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆದರೆ ಅಂತಿಮವಾಗಿ ವರಿಷ್ಠರು ತೀರ್ಮಾನ ಮಾಡಬೇಕು. ಯಾರಿಗೆ ಕೊಡಬೇಕು? ಯಾಕೆ ಕೊಡಬೇಕು? ಅದರಿಂದ ಆಗುವ ಲಾಭ ಏನು ಎಂಬ ಬಗ್ಗೆ ಇದೆಲ್ಲಾ ಚರ್ಚೆ ಮಾಡಿ ಅಂತಿಮವಾಗಿ ತೀರ್ಮಾನ ಮಾಡುತ್ತಾರೆ. ಈ ಬಾರಿ ಆ ರೀತಿ ಆಗಿಲ್ಲ. ಈ ಬಾರಿ ಪೋರ್ಟ್‌ಪೋಲಿಯೋದಲ್ಲಿ ನಾವೇ ಇದ್ದೇವೆ. ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕಕ್ಕೆ ಒಳ್ಳೆ ಖಾತೆಗಳನ್ನೇ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ಸಮಾವೇಶ ಡಿಸೆಂಬರ್ 5 ಅಥವಾ 8 ಎಂಬುದು ಖಚಿತ ಆಗಿಲ್ಲ. ಹೇಳ್ತಾ ಇದಾರೆ. ಎಲ್ಲಿದೆ ಪತ್ರ? ಯಾರಿಗೆ ಬರೆದರು? ಯಾಕೆ ಬರೆದರು? ಏನು ಆ್ಯಕ್ಷನ್ ತಗೊಂಡ್ರು? ಬೇಕಲ್ಲಾ? ಸುಮ್ಮನೇ ಏನೋ ಒಂದು ವಾಟ್ಸಾಪ್‌ನಲ್ಲಿ ಬಂದರೆ ಇಡೀ ಪಕ್ಷದ ನಿರ್ಧಾರ ಆಗಲ್ಲ. ಸಮಾವೇಶದ ಬಗ್ಗೆ ಅಧ್ಯಕ್ಷರು ಇದಾರೆ, ಸಿಎಂ ಇದಾರೆ ಅವರು ತೀರ್ಮಾನ ಮಾಡ್ತಾರೆ. ಬಣ ಬಡಿದಾಟ ಇದೆ ಅಂತಾ ನಾನು ಹೇಳ್ತಾ ಇರೋದು 10ನೇ ಸಲ. ನಮ್ಮ ಪಕ್ಷದಲ್ಲೂ ಇದೆ, ಬೇರೆ ಪಕ್ಷದಲ್ಲೂ ಬಣ ಬಡಿದಾಟ ಇದೆ. ಬಡಿದಾಟ ಇರೋದೇ ಇದು. ಆದರೆ ಚುನಾವಣೆ ಬಂದಾಗ ಒಂದಾಗ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ ಮಾಡಬೇಕು: ರೇಣುಕಾಚಾರ್ಯ ಆಗ್ರಹ

  • ಇವಿಎಂನಲ್ಲಿ ಅಡ್ಜಸ್ಟ್‌ಮೆಂಟ್‌, Give & Take Policy ಮಾಡ್ತಿದ್ದಾರೆ: ಸತೀಶ್‌ ಜಾರಕಿಹೊಳಿ

    ಇವಿಎಂನಲ್ಲಿ ಅಡ್ಜಸ್ಟ್‌ಮೆಂಟ್‌, Give & Take Policy ಮಾಡ್ತಿದ್ದಾರೆ: ಸತೀಶ್‌ ಜಾರಕಿಹೊಳಿ

    ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿಯವರು (Satish Jarkiholi) ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (Maha Vikas Aghadi) ಒಕ್ಕೂಟಕ್ಕೆ ಸೋಲಾದ ಬೆನ್ನಲ್ಲೇ ಇವಿಎಂ (EVM) ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ.

    ಬೆಳಗಾವಿಯ ಕಾಂಗ್ರೆಸ್ (Congress) ಭವನದಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಮಹಾ ವಿಕಾಸ್ ಅಘಾಡಿಗೆ ಸೋಲಾಗಿದೆ. ಇವಿಎಂ ಮಷೀನ್ ಇರುವವರೆಗೂ ಈ ರೀತಿ ಎಲ್ಲಾ ಆಗುತ್ತದೆ. ಇವಿಎಂ ಬಗ್ಗೆ ಸಾಕಷ್ಟು ಅನುಮಾನ ಇದೆ. ಸಾಕಷ್ಟು ಕಡೆಗಳಲ್ಲಿ ಇವಿಎಂ ಬಗ್ಗೆ ಚರ್ಚೆ ಆಗುತ್ತಿದೆ ಎಂದರು.

    ಒಂದು ಕಡೆ ಕೊಡ್ತಾರೆ, ಇನ್ನೊಂದು ಕಡೆ ಕಸಿದುಕೊಳ್ತಾರೆ. ಜಮ್ಮು ನಮಗೆ ಕೊಟ್ರೂ, ಹರಿಯಾಣವನ್ನು ಬಿಜೆಪಿಯವರು ತೆಗೆದುಕೊಂಡ್ರು. ಈ ರೀತಿ ಗೀವ್ & ಟೆಕ್ ಪಾಲಿಸಿ ಮಾಡ್ತಿದ್ದಾರೆ. ಅವರಿಗೆ ಬೇಕಾದದ್ದನ್ನು ತೆಗೆದುಕೊಳ್ತಾರೆ, ಬೇಡದ್ದನ್ನ ಬಿಡ್ತಾರೆ. ಇವಿಎಂನಲ್ಲೂ ಅಡ್ಜಸ್ಟ್ಮೆಂಟ್ ಇದೆ ಎಂದು ಅವರು ಗಂಭೀರ ಆರೋಪ ಮಾಡಿದರು.

    ಶಿಗ್ಗಾಂವಿಯಲ್ಲಿ ಐದು ಬಾರಿ ಸೋಲಲು ನಾಯಕತ್ವದ ಸಮಸ್ಯೆ ಇತ್ತು. ಹಿಂದೂ ಮುಸ್ಲಿಂ ಅನ್ನೋ ವಿಚಾರ ಅಲ್ಲಿ ಮುಖ್ಯ ಎನಿಸಿತ್ತು. ಶಿವಾನಂದ ಪಾಟೀಲ್, ಮಾನೆಯವರು ಮುನ್ನೆಲೆಗೆ ಬಂದಿದ್ದಕ್ಕೆ ಮುಸ್ಲಿಂ ಅನ್ನೋದನ್ನು ಬಿಟ್ಟು ಕಾಂಗ್ರೆಸ್ ಅಭ್ಯರ್ಥಿ ಎಂಬುದು ಮುಖ್ಯವಾಯ್ತು ಎಂದಿದ್ದಾರೆ.

    ಅಹಿಂದ ವರ್ಗಕ್ಕೆ ನ್ಯಾಯ ಕೊಡಬೇಕು ಎಂದು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದೆವು. ಅಹಿಂದ ವರ್ಗ ಒಂದಾಯಿತು ಇದರಿಂದ ಗೆಲುವಾಗಿದೆ. ಮಾಜಿ ಮುಖ್ಯಮಂತ್ರಿ, ಪ್ರಬಲ ರಾಜಕಾರಣಿ ವಿರುದ್ಧ ಚುನಾವಣೆ ಹೇಗೆ ಮಾಡ್ತಾರೆ ಎಂಬ ಪ್ರಶ್ನೆ ಇತ್ತು. ಕೆಲವು ತಂತ್ರಗಾರಿಕೆ ಮೂಲಕ ನಾವು ಹೇಗೆ ಚುನಾವಣೆ ಮಾಡುತ್ತೆವೆಯೋ ಅದೇ ಮಾದರಿಯಲ್ಲಿ ಚುನಾವಣೆ ಮಾಡಿದ್ದೇವೆ. ಈ ಸಾರಿ ಚುನಾವಣೆಯಿಂದ ಮುಸ್ಲಿಮರಿಗೆ ಟಿಕೆಟ್ ಕೊಟ್ಟರೆ ಗೆಲ್ತಾರೆ ಎಂಬ ಸಂದೇಶ ಹೋಗಿದೆ. ಶಿಗ್ಗಾಂವಿ ಗೆಲವು ನಮಗೆ ಡಬಲ್ ಪ್ರಮೋಷನ್ ಆಗಿದೆ. ಡಿಸಿಎಂ ಸ್ಥಾನ ಇಲ್ಲದೇ ನಾವು ಇಲ್ಲಿ ಗೆಲ್ಲಿಸಿಕೊಟ್ಟಿದ್ದೇವೆ ಎಂದಿದ್ದಾರೆ.

    ರಾಜ್ಯದ ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ (By Election) ಕಾಂಗ್ರೆಸ್ ಗೆಲ್ಲಲು ಅಭಿವೃದ್ಧಿ, ಗ್ಯಾರಂಟಿ ಹಾಗೂ ಕಾರ್ಯಕರ್ತರು ಕಾರಣ. ಶಾಸಕರು, ಸಿಎಂ ಬೆಂಬಲದಿಂದ ಗೆಲ್ಲಲು ಸಾಧ್ಯವಾಗಿದೆ. ಗೆದ್ದ ಅಭ್ಯರ್ಥಿಗಳಿಗೆ, ನಮ್ಮ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

    ಸಿಎಂ ಬದಲಾವಣೆ ವಿಚಾರವಾಗಿ, ಐದು ವರ್ಷ ಅವರೇ ಇರ್ತಾರೆ. ಇನ್ನೂ ವಕ್ಫ್ ವಿಚಾರದಲ್ಲಿ ಜಾಸ್ತಿ ಪರಿಣಾಮ ಆಗಿದ್ದು ಮುಸ್ಲಿಮರಿಗೆ ಎಂದಿದ್ದಾರೆ.

  • ಸತೀಶ್ ಜಾರಕಿಹೊಳಿ ಬೆಂಬಲಿಗನಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್‌ ಪಟ್ಟ

    ಸತೀಶ್ ಜಾರಕಿಹೊಳಿ ಬೆಂಬಲಿಗನಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್‌ ಪಟ್ಟ

    – ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಜಾರಕಿಹೊಳಿ ಬ್ರದರ್ಸ್‌

    ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ (Belagavi DCC Bank) ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಹೊಸಬರಿಗೆ ಅವಕಾಶ ನೀಡಿದ್ದೇವೆ. ಭವಿಷ್ಯದ ದೃಷ್ಟಿಯಿಂದ ಅಳೆದು ತೂಗಿ ಸರ್ವಾನುಮತದಿಂದ ಅಪ್ಪಾಸಾಹೇಬ ಕುಲಗುಡೆ (Appasaheb Kulgude) ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ‌ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

    ನೂತನ ಅಧ್ಯಕ್ಷರ ಆಯ್ಕೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡರ, ಸುಭಾಷ ಢವಳೇಶ್ವರ, ಅರವಿಂದ ಪಾಟೀಲ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ಜಿಲ್ಲಾ ನಾಯಕರು, ನಿರ್ದೇಶಕರು, ಶಾಸಕರು, ಮಾಜಿ ಶಾಸಕರ ಜೊತೆ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ. ರಾಯಬಾಗ ಕ್ಷೇತ್ರದ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೇವೆ. ಅದೇ ರೀತಿ ಉಪಾಧ್ಯಕ್ಷರಾಗಿ ಸುಭಾಷ ಢವಳೇಶ್ವರ ಮುಂದುವರಿಯಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: MUDA Scam | ಬ್ಲ್ಯಾಕ್‌ಮೇಲ್‌ ಆರೋಪ – ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್‌

     

    ತಮ್ಮ ನೇತೃತ್ವದಲ್ಲಿ ನಡೆದ ಸಭೆಗೆ ರಮೇಶ್ ಕತ್ತಿ ಗೈರಾಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ರಮೇಶ ಕತ್ತಿ ಅವರು ಕೂಡ ನೇರವಾಗಿ ಬ್ಯಾಂಕ್ ಸಭೆಗೆ ಬರಲಿದ್ದಾರೆ. ಈ ಆಯ್ಕೆ ಹಿಂದೆ ಯಾವುದೇ ತಂತ್ರಗಾರಿಕೆ ಇಲ್ಲ. ಶಾಂತಿಯಿಂದ ಚುನಾವಣೆ ನಡೆಯಬೇಕು ಎನ್ನುವುದಷ್ಟೇ ನಮ್ಮ ಉದ್ದೇಶವಾಗಿತ್ತು ಎಂದರು.

    ಜಾರಕಿಹೊಳಿ ಮೂವರು ಸಹೋದರರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ವಿಚಾರಕ್ಕೆ ಮೂವರಿಗೂ ಒಬ್ಬೊಬ್ಬರು ಅಭ್ಯರ್ಥಿಗಳು ಇದ್ದರು. ಒಬ್ಬರನ್ನೇ ಆಯ್ಕೆ ಮಾಡಬೇಕಿದ್ದರಿಂದ ಮೂವರು ಒಂದು ಕಡೆ ಸೇರಬೇಕಾಯಿತು ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

    ನೂತನ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ನಿಮ್ಮ ಆಪ್ತರು ಎಂಬ ಪ್ರಶ್ನೆಗೆ ಲಕ್ಷ್ಮಣ ಸವದಿ, ಡಾ.ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಪ್ರಕಾಶ ಹುಕ್ಕೇರಿ ಸೇರಿ ಎಲ್ಲರ ಅಭ್ಯರ್ಥಿ ಅವರು ಎಂದು ಉತ್ತರಿಸಿದರು.