Tag: ಸತೀಂದ್ರ ಕುಮಾರ್ ಖೋಸ್ಲಾ

  • ‘ಶೋಲೆ’ ನಟ ಸತೀಂದ್ರ ಕುಮಾರ್ ಹೃದಯಾಘಾತದಿಂದ ನಿಧನ

    ‘ಶೋಲೆ’ ನಟ ಸತೀಂದ್ರ ಕುಮಾರ್ ಹೃದಯಾಘಾತದಿಂದ ನಿಧನ

    ಬಾಲಿವುಡ್ (Bollywood) ಹಿರಿಯ ನಟ ಸತೀಂದ್ರ ಕುಮಾರ್ ಖೋಸ್ಲಾ (Satinder Kumar Khosla) ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ. ಮುಂಬೈನ ಕೋಕಿಲಾಲ್ ಆಸ್ಪತ್ರೆಯಲ್ಲಿ ಸತೀಂದ್ರ ಅವರನ್ನ ದಾಖಲಿಸಿದ್ದು, ತೀವ್ರ ಹೃದಯಾಘಾತದಿಂದ ಸೆ.12ರಂದು ಸಂಜೆ ನಿಧನರಾಗಿದ್ದಾರೆ.

    ಹಿಂದಿ ಸಿನಿಮಾರಂಗದಲ್ಲಿ 80ರ ದಶಕದ ಪ್ರತಿಭಾನ್ವಿತ ನಟನಾಗಿ ಮಿಂಚಿದ್ದರು. ‘ಶೋಲೆ’ (Sholay) ಸಿನಿಮಾದಲ್ಲಿ ಬೀರ್‌ಬಲ್ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಇದೀಗ ಹಿರಿಯ ನಟನ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:Gowri: ಇಂದ್ರಜಿತ್ ಲಂಕೇಶ್ ಸಿನಿಮಾದಲ್ಲಿ‌ ಚಂದು ಗೌಡ ವಿಲನ್

    ನಟ ಸತೀಂದ್ರ ಅವರ ಅಂತ್ಯಕ್ರಿಯೆ ಮುಂಬೈನಲ್ಲಿ ಇಂದು (ಸೆ.13) ನಡೆಯಲಿದೆ. ಅವರ ಹಠಾತ್ ನಿಧನ ಕುಟುಂಬಕ್ಕೆ, ಆಪ್ತರಿಗೆ ಶಾಕ್ ಕೊಟ್ಟಿದೆ.

    ಹಿಂದಿ, ಪಂಜಾಬಿ, ಮರಾಠಿ, ಭೋಜಪುರಿ ಭಾಷೆ ಸೇರಿದಂತೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಗೆ ಬಗೆಯ ಪಾತ್ರಗಳ ಮೂಲಕ ಸತೀಂದ್ರ ಕುಮಾರ್ ಖೋಸ್ಲಾ ರಂಜಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]