Tag: ಸತಾರಾ

  • ಮಹಾರಾಷ್ಟ್ರ ವೈದ್ಯೆ ಆತ್ಮಹತ್ಯೆ ಕೇಸ್ – 5 ತಿಂಗಳಿಂದ ಮಾನಸಿಕವಾಗಿ ಕಿರುಕುಳ ನೀಡಿದ್ದ ಟೆಕ್ಕಿ ಅರೆಸ್ಟ್

    ಮಹಾರಾಷ್ಟ್ರ ವೈದ್ಯೆ ಆತ್ಮಹತ್ಯೆ ಕೇಸ್ – 5 ತಿಂಗಳಿಂದ ಮಾನಸಿಕವಾಗಿ ಕಿರುಕುಳ ನೀಡಿದ್ದ ಟೆಕ್ಕಿ ಅರೆಸ್ಟ್

    ಮುಂಬೈ: ಸತಾರಾದ (Satara) ಉಪಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 5 ತಿಂಗಳಿಂದ ಮಾನಸಿಕವಾಗಿ ಕಿರುಕುಳ ನೀಡಿದ್ದ ಟೆಕ್ಕಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಪ್ರಶಾಂತ್ ಬಂಕರ್ ಎಂದು ಗುರುತಿಸಲಾಗಿದ್ದು, ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದರು. ಮೃತ ವೈದ್ಯೆ ಆತ್ಮಹತ್ಯೆಗೂ ಮುನ್ನ ತನ್ನ ಅಂಗೈಯಲ್ಲಿ, 5 ತಿಂಗಳಿನಿಂದ ಟೆಕ್ಕಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಬರೆದುಕೊಂಡಿದ್ದರು.ಇದನ್ನೂ ಓದಿ: ಪೊಲೀಸ್‌ ಅಧಿಕಾರಿಯಿಂದ 5 ತಿಂಗಳಲ್ಲಿ 4 ಬಾರಿ ರೇಪ್‌ – ಅಂಗೈನಲ್ಲಿ ಡೆತ್‌ ನೋಟ್‌ ಬರೆದು ಮಹಾರಾಷ್ಟ್ರ ವೈದ್ಯೆ ಆತ್ಮಹತ್ಯೆ

    ಇನ್ನೂ ವೈದ್ಯೆಯ ಮೇಲೆ ಹಲವು ಬಾರಿ ಅತ್ಯಾಚಾರ ಮತ್ತು ಕಿರುಕುಳ ನೀಡಿದ್ದ ಆರೋಪ ಹೊತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ ಗೋಪಾಲ್ ಬದ್ನೆ ತಲೆಮರೆಸಿಕೊಂಡಿದ್ದಾನೆ. ಈತನನ್ನು ಬಂಧಿಸಲು ಸತಾರ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ.

    ಈ ನಡುವೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸತಾರಾ ಪೊಲೀಸ್ ವರಿಷ್ಠಾಧಿಕಾರಿ ತುಷಾರ್ ಅವರೊಂದಿಗೆ ಮಾತನಾಡಿ, ಆತ್ಮಹತ್ಯೆ ಪತ್ರದಲ್ಲಿ ಹೆಸರಿಸಲಾದ ಪೊಲೀಸ್ ಇನ್ಸ್‌ಪೆಕ್ಟರ್‌ ಅವರನ್ನು ಅಮಾನತುಗೊಳಿಸಲು ಆದೇಶಿಸಿದ್ದಾರೆ. ಇಬ್ಬರೂ ಆರೋಪಿಗಳ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ತುಷಾರ್ ಸಿಎಂಗೆ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸತಾರಾದ ಉಪ ಜಿಲ್ಲಾಸ್ಪತ್ರೆಯಲ್ಲಿ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಫಾಲ್ಟನ್ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯೆ ತಮ್ಮ ಅಂಗೈಯಲ್ಲಿ ತಮಗಾದ ಕಿರುಕುಳದ ಬಗ್ಗೆ ಬರೆದುಕೊಂಡಿದ್ದಾರೆ. ಎಸ್‌ಐ ಗೋಪಾಲ್ ಬದ್ನೆ ಹಾಗೂ ಟೆಕ್ಕಿ ಪ್ರಶಾಂತ್ ಬಂಕರ್‌ನಿಂದ ತನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ. ಹೀಗಾಗಿ ಪೊಲೀಸರ ನಿರಂತರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ ಎಂದು ಉಲ್ಲೇಖಿಸಿದ್ದರು.

    ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತ ವೈದ್ಯೆ ಕಳೆದ ಕೆಲ ತಿಂಗಳಿನಿಂದ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ನಡುವಿನ ವಿವಾದದಲ್ಲಿ ಸಿಲುಕಿದ್ದರು. ಇದರಿಂದ ವೈದ್ಯೆ ವಿರುದ್ಧ ಇಲಾಖಾ ಹಂತದ ವಿಚಾರಣೆ ಕೂಡ ಆರಂಭಿಸಲಾಗಿತ್ತು. ಈ ಮಧ್ಯೆ ಸಂತ್ರಸ್ತೆ ತಮ್ಮ ಹಿರಿಯ ಅಧಿಕಾರಿಯನ್ನ ಸಂಪರ್ಕಿಸಿ, ತನ್ನ ಮೇಲೆ ಅನ್ಯಾಯವಾಗುತ್ತಿದೆ. ಈ ದೌರ್ಜನ್ಯ ನಿಲ್ಲಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಆದಾಗ್ಯೂ ಕಿರುಕುಳ ಮುಂದುವರಿದ ಹಿನ್ನೆಲೆ ಅಂಗೈನಲ್ಲಿ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು.

    ತನ್ನ ಅಂಗೈಯಲ್ಲಿರುವ ಡೆತ್‌ನೋಟ್ ಅಲ್ಲದೇ, ಸಂತ್ರಸ್ತೆ ಕಳೆದ ಜೂನ್ 19 ರಂದೇ ಫಾಲ್ಟನ್ ಉಪ-ವಿಭಾಗೀಯ ಕಚೇರಿಯ ಡಿಎಸ್ಪಿಗೆ ಬರೆದ ಪತ್ರದಲ್ಲೂ ಇದೇ ರೀತಿಯ ಆರೋಪಗಳನ್ನ ಮಾಡಿದ್ದರಂತೆ. ಫಾಲ್ಟನ್ ಗ್ರಾಮೀಣ ಪೊಲೀಸ್ ಇಲಾಖೆಯ ಎಸ್‌ಐ ಗೋಪಾಲ್ ಬದ್ನೆ, ಉಪ-ವಿಭಾಗೀಯ ಪೊಲೀಸ್ ಇನ್ಸ್‌ಪೆಕ್ಟರ್‌ ಪಾಟೀಲ್ ಮತ್ತು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್‌ ಲಾಡ್‌ಪುತ್ರೆ ವಿರುದ್ಧ ಕಿರುಕುಳದ ಆರೋಪ ಹೊರಿಸಿ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದರು ಎಂದು ವರದಿಯಾಗಿದೆ.

    ನನ್ನ ಸಾವಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ ಗೋಪಾಲ್ ಬದ್ನೆ ಸೇರಿ ಮೂವರು ಕಾರಣ. ಗೋಪಾಲ್ ಬದ್ನೆ ನನ್ನ ಮೇಲೆ ನಾಲ್ಕು ಬಾರಿ ಅತ್ಯಾಚಾರ ಮಾಡಿದ್ದಾರೆ. 5 ತಿಂಗಳಿಗೂ ಹೆಚ್ಚು ಕಾಲ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ’ ಅಂತ ಆರೋಪಿಸಿದ್ದಾರೆ.ಇದನ್ನೂ ಓದಿ: ಆಗ್ರಾ – ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಅಪಘಾತ; ಕೂದಲೆಳೆ ಅಂತರದಲ್ಲಿ ಪಾರದ ಸಚಿವೆ

  • ಬಾಲಕಿಗೆ ಪಾಗಲ್‌ ಪ್ರೇಮಿ ಲವ್‌ ಟಾರ್ಚರ್‌ – ಜನರ ಎದುರೇ ಹುಡುಗಿ ಕುತ್ತಿಗೆಗೆ ಚಾಕು ಹಿಡಿದು ಬೆದರಿಕೆ

    ಬಾಲಕಿಗೆ ಪಾಗಲ್‌ ಪ್ರೇಮಿ ಲವ್‌ ಟಾರ್ಚರ್‌ – ಜನರ ಎದುರೇ ಹುಡುಗಿ ಕುತ್ತಿಗೆಗೆ ಚಾಕು ಹಿಡಿದು ಬೆದರಿಕೆ

    ಮುಂಬೈ: ಇಲ್ಲೊಬ್ಬ ಪಾಗಲ್ ಪ್ರೇಮಿ (Jilted Lover) ಅಪ್ರಾಪ್ತ ಬಾಲಕಿಗೆ ಚಾಕು ತೋರಿಸಿ ಪ್ರೀತಿಸುವಂತೆ ಬೆದರಿಕೆ ಹಾಕಿ, ಹಲ್ಲೆ ಮಾಡಿರುವ ಘಟನೆ ನಡೆದಿದೆ.

    ಮಹಾರಾಷ್ಟ್ರದ (Maharashtra) ಸತಾರಾ (Satara) ನಗರದ ಕರಂಜೆ ಪ್ರದೇಶದ ಶಾಲೆಯಲ್ಲಿ ಅಪ್ರಾಪ್ತ ಬಾಲಕಿ 10ನೇ ತರಗತಿ ಓದುತ್ತಿದ್ದಳು. ಆಕೆಯ ಹಿಂದೆ ಬಿದ್ದಿದ್ದ ಈ ಯುವಕ ಪ್ರೀತಿಸುವಂತೆ ಪೀಡಿಸುತ್ತಿದ್ದ. ಬಾಲಕಿ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಆಕೆಯನ್ನು ತಡೆದು ಪ್ರೀತಿಸುವಂತೆ ಕೇಳಿದ್ದಾನೆ. ಆಕೆ ನಿರಾಕರಿಸಿದ ನಂತರ ಚಾಕು ತೋರಿಸಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಪಾಟ್ನಾ | ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್ ಹತ್ಯೆ – ಇಬ್ಬರು ಆರೋಪಿಗಳ ಮೇಲೆ ಫೈರಿಂಗ್

    ಬಾಲಕಿ ಬೇಡಿಕೊಂಡರೂ ಬಿಡದೆ, ಚಾಕು ತೋರಿಸುವ ವಿಡಿಯೋ ವೈರಲ್ ಆಗಿದೆ. ಬಾಲಕಿ ಪೋಷಕರು ಕೂಡ ಯುವಕನಿಗೆ ಬುದ್ಧಿ ಹೇಳಲು ಯತ್ನಿಸಿದ್ದಾರೆ. ನನ್ನ ಮಗಳನ್ನು ಬಿಡು ಎಂದು ಬೇಡಿಕೊಳ್ಳುತ್ತಿದ್ದರೂ ಯುವಕ ಚಾಕು ಕೈಯಲ್ಲಿ ಹಿಡಿದು ಕೊಲ್ಲುವ ಬೆದರಿಕೆ ಹಾಕಿದ್ದಾನೆ.

    ಇದೇ ವೇಳೆ ಅಲ್ಲೇ ಇದ್ದ ಸ್ಥಳೀಯರೂ ಕೂಡ ಯುವಕನನ್ನು ತಡೆಯಲು ಸಾಕಷ್ಟು ಯತ್ನಿಸಿದ್ದಾರೆ. ಹಿಂದಿನಿಂದ ಬಂದ ಸ್ಥಳೀಯರೊಬ್ಬರೂ ಕೊನೆಗೂ ಆ ಯುವಕನ ಕೈಯಿಂದ ಚಾಕು ಕಸಿದು ಬಾಲಕಿಯನ್ನು ರಕ್ಷಿಸಿದ್ದಾರೆ. ಸ್ಥಳೀಯರ ಚಾಕಚಕ್ಯತೆಯಿಂದ ಬಾಲಕಿ ಪ್ರಾಣ ಉಳಿದಿದೆ. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆ ವಿಮಾನ ದುರಂತ – ಸಾವಿನ ಸಂಖ್ಯೆ 27ಕ್ಕೆ ಏರಿಕೆ

    ಹುಡುಗಿಯನ್ನು ರಕ್ಷಿಸಿದ ನಂತರ ಕೋಪಗೊಂಡ ಜನರ ಗುಂಪು ಪಾಗಲ್‌ ಪ್ರೇಮಿ ಮೇಲೆ ಹಲ್ಲೆ ನಡೆಸಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಜನರಿಂದ ಯುವಕನನ್ನು ರಕ್ಷಿಸಿದರು. ನಂತರ ಆತನನ್ನು ಶಾಹುಪುರಿ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಯಿತು.

  • ಮಹಾರಾಷ್ಟ್ರದ ಸತಾರಾದಲ್ಲಿ ಭೂಕಂಪ – 3.3 ತೀವ್ರತೆ ದಾಖಲು

    ಮುಂಬೈ: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ 3.3 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ.

    ಮಂಗಳವಾರ ಬೆಳಗ್ಗೆ 9.47ರ ಸುಮಾರಿಗೆ 5 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಆದರೆ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಇದು 25 ವರ್ಷಗಳ ದೂರದೃಷ್ಟಿಯ ಬಜೆಟ್‌: ನಿರ್ಮಲಾ ಸೀತಾರಾಮನ್‌

    ಜನವರಿ 17 ರಂದು 30 ನಿಮಿಷಗಳ ಅವಧಿಯಲ್ಲಿ ಈಶಾನ್ಯ ಪ್ರದೇಶದ ಕೆಲವು ಭಾಗಗಳಲ್ಲಿ 3.5 ಮತ್ತು 3.8ರ ತೀವ್ರತೆಯಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದೆ. ಮೊದಲ ಬಾರಿಗೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಮಧ್ಯಾಹ್ನ 2.11ರ ವೇಖೆಗೆ 3.5 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಎರಡನೇ ಬಾರಿಗೆ ಮಣಿಪುರದ ಕಾಂಗ್‌ಪೊಕ್ಪಿ ಪ್ರದೇಶದಲ್ಲಿ ಮಧ್ಯಾಹ್ನ 2.39ಕ್ಕೆ 3.8 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಇದನ್ನೂ ಓದಿ: ವಾಣಿಜ್ಯ LPG ಸಿಲಿಂಡರ್‌ ಬೆಲೆ 91.50 ರೂ. ಇಳಿಕೆ

  • ಅಂತರ್ಜಾತಿ ಮದುವೆಯಾಗಿದ್ದಕ್ಕೆ ಸ್ವಂತ ಮಗಳನ್ನೇ ಕೊಡಲಿಯಿಂದ ಕೊಂದ ತಂದೆ

    ಅಂತರ್ಜಾತಿ ಮದುವೆಯಾಗಿದ್ದಕ್ಕೆ ಸ್ವಂತ ಮಗಳನ್ನೇ ಕೊಡಲಿಯಿಂದ ಕೊಂದ ತಂದೆ

    ಬೆಳಗಾವಿ: ಅಂತರ್ಜಾತಿ ವಿವಾಹವಾಗಿದ್ದಕ್ಕಾಗಿ ತಂದೆಯೋರ್ವ ತನ್ನ 21ರ ಹರೆಯದ ಪುತ್ರಿಯನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಬುಲ್ಡಾನಾ ಜಿಲ್ಲೆಯ ನಿಮ್ಖೆಡಾ ಗ್ರಾಮದಲ್ಲಿ ನಡೆದಿದೆ.

    ಮನೀಷಾ ಹಿಂಗನೆ ಕೊಲೆಯಾದ ದುರ್ದೈವಿ. ಬಾಬು ಶಿವಾರೆ ತನ್ನ ಪುತ್ರಿಯನ್ನು ಬುಧವಾರ ಕೊಡಲಿಯಿಂದ ಕೊಚ್ಚಿ ಹತ್ಯಗೈದಿದ್ದಾನೆ. ಮನೀಷಾ ಬೇರೆ ಜಾತಿಗೆ ಸೇರಿದ ಗಣೇಶ್ ಎಂಬವರನ್ನು ಪ್ರೀತಿಸುತ್ತಿದ್ದರು. ಆದರೆ ಬಾಬು ಮಗಳ ಮದುವೆಯನ್ನು ಏಪ್ರಿಲ್ 20 ರಂದು ಬೇರೊಬ್ಬ ಯುವಕನೊಂದಿಗೆ ನಿಶ್ಚಯ ಮಾಡಿದ್ದರು.

    ಮನೀಷಾ ಮತ್ತು ಗಣೇಶ್ ಮನೆಯಿಂದ ಪರಾರಿಯಾಗಿ ಮಾರ್ಚ್ 23ರಂದು ಮದುವೆಯಾಗಿದ್ದರು. ಕೆಲವು ದಿನಗಳ ಬಳಿಕ ಗ್ರಾಮದಲ್ಲಿ ಎಲ್ಲಾ ಸರಿಯಾಗಿರಬಹುದು ಎಂದು ಭಾವಿಸಿದ ದಂಪತಿ ಗ್ರಾಮಕ್ಕೆ ವಾಪಸಾಗಿದ್ದಾರೆ. ಔಷಧಿಗಳ ಮಾರಾಟ ಪ್ರತಿನಿಧಿಯಾಗಿರುವ ಗಣೇಶ್ ಬುಧವಾರ ಕರ್ತವ್ಯಕ್ಕೆ ತೆರಳಿದ್ದು, ಆತನ ಪೋಷಕರು ಮನೆಯಲ್ಲಿರಲಿಲ್ಲ.

    ಈ ವೇಳೆ ಮಗಳ ಮನೆಗೆ ಬಂದ ಬಾಬು ಮಗಳನ್ನು ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈ ಸಂಬಂಧ ಸತಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಸಾವಿಗೂ ಮುನ್ನ ಯಾರು ನಿನನ್ನನ್ನ ಯಾರು ಕೊಂದಿದ್ದ, ನಿಮ್ಮ ತಂದೇನಾ ಅಂತಾ ಕೇಳಿದ್ದಕ್ಕೆ ಹೌದು ಅಂತಾ ಯುವತಿ ತಲೆ ಅಲ್ಲಾಡಿಸುವ ದೃಶ್ಯ ಎಲ್ಲರ ಮನಕಲಕುವಂತಿತ್ತು.

     

    https://www.youtube.com/watch?v=gbw1Nt1lMhg