Tag: ಸಣ್ಣ ನೀರಾವರಿ

  • ತುಮಕೂರು| ಕಚೇರಿಯಲ್ಲಿರುವಾಗಲೇ ಅಧಿಕಾರಿಗಳನ್ನು ಕೂಡಿ ಹಾಕಿದ ಅಟೆಂಡರ್

    ತುಮಕೂರು| ಕಚೇರಿಯಲ್ಲಿರುವಾಗಲೇ ಅಧಿಕಾರಿಗಳನ್ನು ಕೂಡಿ ಹಾಕಿದ ಅಟೆಂಡರ್

    ತುಮಕೂರು: ಸಣ್ಣ ನೀರಾವರಿ ಇಲಾಖೆಯ (Minor Irrigation Department) ಅಧಿಕಾರಿಗಳು ಮತ್ತು ನೌಕರರ ಮಧ್ಯದ ಜಗಳ ಬೀದಿಗೆ ಬಂದಿದ್ದು, ಅಧಿಕಾರಿಗಳು ಕಚೇರಿ ಒಳಗಡೆ ಇರುವಾಗಲೇ ಅಟೆಂಡರ್ (Attendent) ಕಚೇರಿಗೆ ಬೀಗ ಹಾಕಿ ಪರಾರಿಯಾದ ಪ್ರಸಂಗ ತುಮಕೂರಿನಲ್ಲಿ (Tumakuru) ನಡೆದಿದೆ.

    ತುಮಕೂರು ನಗರದ ವಿದ್ಯಾನಗರದಲ್ಲಿರುವ ಇಲಾಖೆಯ ಕಚೇರಿಗೆ ಮಂಗಳವಾರ ಸಂಜೆ 4:50ರ ವೇಳೆಗೆ ಅಟೆಂಡರ್ ಕೆ.ಎಂ.ಅಜಾಜ್ ಪಾಷ ಬೀಗ ಹಾಕಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಪ್ಪೇಸ್ವಾಮಿ, ಇಬ್ಬರು ಎಂಜಿನಿಯರ್ ಸೇರಿ 7 ಜನ ಸಿಬ್ಬಂದಿ ಕಚೇರಿ ಒಳಗೆ ಇದ್ದರು. ಇದನ್ನೂ ಓದಿ: 7 ವಾರಗಳ ಬಳಿಕ ಸರ್ಜರಿ ಮಾಡಿಸದೇ ದರ್ಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಎಂಜಿನಿಯರ್ ತಿಪ್ಪೇಸ್ವಾಮಿ 112ಕ್ಕೆ ಕರೆ ಮಾಡಿದ ತಕ್ಷಣ ಪೊಲೀಸರು ಕಚೇರಿ ಬಳಿಗೆ ಬಂದರು. ಅಜಾಜ್ ಪಾಷಗೆ ಪೊಲೀಸರು ಕರೆ ಮಾಡಿ ಕಚೇರಿಗೆ ಕರೆಸಿಕೊಂಡು, 5:30ಕ್ಕೆ ಬೀಗ ತೆಗೆಸಿದ್ದಾರೆ. ಅಧಿಕಾರಿಗಳು ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಬದಲಾವಣೆಯಾಗಿಲ್ಲ. ಪದೇ ಪದೇ ಅವಮಾನ ಮಾಡುತ್ತಾರೆ’ ಎಂದು ಬೇಸತ್ತು ಹೀಗೆ ಮಾಡಿದ್ದೇನೆ ಎಂದು ಪಾಷಾ ದೂರಿದ್ದಾರೆ. ಇದನ್ನೂ ಓದಿ: ಅವರು ತೆರಿಗೆ ವಿಧಿಸಿದ್ರೆ ನಾವು ಅವರ ಮೇಲೆ ಅಷ್ಟೇ ತೆರಿಗೆ ಹಾಕ್ತೀವಿ: ಭಾರತಕ್ಕೆ ಟ್ರಂಪ್‌ ಸಂದೇಶ

  • ಸಣ್ಣ ನೀರಾವರಿ, ಜಲಸಂಪನ್ಮೂಲ ಇಲಾಖೆಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಸಣ್ಣ ನೀರಾವರಿ, ಜಲಸಂಪನ್ಮೂಲ ಇಲಾಖೆಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ರಾಜ್ಯ ಬಾಜೆಟ್‍ನಲ್ಲಿ ಜಲಸಂಪನ್ಮೂಲ ಇಲಾಖೆಗೆ ಹಾಗೂ ಸಣ್ಣ ನೀರಾವರಿಗೆ ಸಿಕ್ಕ ಸನುದಾನವೆಷ್ಟು, ಘೋಷಣೆಗಳೇನು ಎಂಬ ಮಾಹಿತಿ ಇಲ್ಲಿದೆ.

    ಸಣ್ಣ ನೀರಾವರಿ ಇಲಾಖೆಗೆ ಒಟ್ಟು ಅನುದಾನ – 2099 ಕೋಟಿ ರೂ.

    – ಕೆರೆಗಳ ಹೂಳೆತ್ತಲು ಕೆರೆ ಸಂಜೀವಿನಿ ಯೋಜನೆ – 100 ಕೋಟಿ ರೂ.
    – ಪಶ್ಚಿಮ ವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ- 100 ಕೋಟಿ ರೂ.
    – ಅಂತರ್ಜಲ ತೀವ್ರವಾಗಿ ಕುಸಿದಿರುವ ಬೀದರ್, ಚಾಮರಾಜನಗರ, ಹಾವೇರಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಚೆಕ್ ಡ್ಯಾಮ್ ನಿರ್ಮಾಣ- 50 ಕೋಟಿ ರೂ.ವೆಚ್ಚ
    – ಕಲಬುರಗಿಯ ಅಳಂದ ತಾಲೂಕಿನಲ್ಲಿ ಅಂತರ್ಜಲ ಅಭಿವೃದ್ಧಿಪಡಿಸುವ ವಿಶೇಷ ಯೋಜನೆ

    ಜಲಸಂಪನ್ಮೂಲ ಇಲಾಖೆಗೆ ಒಟ್ಟು ಅನುದಾನ – 15,929 ಕೋಟಿ ರೂ

    * 6 ಸಾವಿರ ಕೋಟಿ ರೂ. ಮೊತ್ತದಲ್ಲಿ ಕೆಳಕಂಡ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶ
    – ನಾರಾಯಣಪುರ ಎಡದಂಡೆ ಕಾಲುವೆ ಜಾಲದ ಆಧುನೀಕರಣ ಯೋಜನೆಯಡಿ ಎಸ್‍ಸಿಎಡಿಎ ಬೇಸ್ಡ್ ಆಟೋಮೇಷನ್ ಅನುಷ್ಠಾನ.
    – ಕೆಂಪೇವಾಡ ಏತ ನೀರಾವರಿ ಯೋಜನೆ.
    – ಹಗರಿಬೊಮ್ಮನಹಳ್ಳಿಯ ಚಿಲವಾರ ಬಂಡಿ ಏತ ನೀರಾವರಿ ಯೋಜನೆ.
    – ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ.
    – ಹನಗೋಡು ಸರಣಿ ನಾಲೆಗಳ ಆಧುನೀಕರಣ.
    – ಎತ್ತಿನಹೊಳೆ ಯೋಜನೆಯಡಿ, ಭೈರಗೊಂಡ್ಲು ಜಲಾಶಯ ನಿರ್ಮಾಣ, ಕಾಲುವೆ ಕಾಮಗಾರಿ ಆರಂಭ.
    – 68,264 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ.
    – 35 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹೊಲಗಾಲುವೆ ನಿರ್ಮಾಣ.
    – 12,500 ಹೆಕ್ಟೇರ್ ಪ್ರದೇಶದ ಸವಳು- ಜವಳು ಭೂಮಿ ಅಭಿವೃದ್ಧಿ
    – 28 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬಸಿಗಾಲುವೆ ನಿರ್ಮಾಣ.

    * ಕಾವೇರಿ ಕೊಳ್ಳದಲ್ಲಿ 374 ಕಿಮೀ ನಾಲೆ ಅಭಿವೃದ್ಧಿ – 509 ಕೋಟಿ ರೂ.
    * ಹಾರಂಗಿ ಎಡದಂಡೆ ನಾಲೆಯ ಸರಪಳಿ 27.083 ಕಿ.ಮೀ ನಿಂದ 149.38 ಕಿ.ಮೀ ವರೆಗಿನ ಆಧುನೀಕರಣ.
    * ಕಣ್ವ ನಾಲೆಗಳ ಆಧುನೀಕರಣ.
    * ಕೆಆರ್‍ಎಸ್ ಯೋಜನೆಯ ಆರ್‍ಬಿಎಲ್‍ಎಲ್ ಆಧುನೀಕರಣ.
    * ಮಾರ್ಕೋನಹಳ್ಳಿ ಎಡ, ಬಲದಂಡೆ ನಾಲೆ ಆಧುನೀಕರಣ.
    * ಹಾರೋಹಳ್ಳಿ ಮೇಲ್ಮಟ್ಟದ ನಾಲೆ ಆಧುನೀಕರಣ.
    * ತೀವ್ರ ಬರಗಾಲ ಎದುರಿಸುತ್ತಿರುವ ಪ್ರದೇಶಗಳಲ್ಲಿ ಮೋಡಬಿತ್ತನೆ- 30 ಕೋಟಿ ರೂ.