Tag: ಸಡಿಲಿಕೆ

  • ಬೆಂಗಳೂರಿನಲ್ಲಿ ಶೇ.30 ರಷ್ಟು ಕಾರ್ಮಿಕರೊಂದಿಗೆ ಗಾರ್ಮೆಂಟ್ಸ್ ಪ್ರಾರಂಭ

    ಬೆಂಗಳೂರಿನಲ್ಲಿ ಶೇ.30 ರಷ್ಟು ಕಾರ್ಮಿಕರೊಂದಿಗೆ ಗಾರ್ಮೆಂಟ್ಸ್ ಪ್ರಾರಂಭ

    ಬೆಂಗಳೂರು: ರಾಜ್ಯ ಸರ್ಕಾರ ಲಾಕ್‍ಡೌನ್ ಸಡಿಲಿಕೆ ಮಾಡಿ ಶೇ.30 ರಷ್ಟು ನೌಕರರನ್ನು ಬಳಸಿಕೊಂಡು ಉತ್ಪಾದನೆ ಶುರು ಮಾಡುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಹುತೇಕ ಗಾರ್ಮೆಂಟ್ಸ್ ಗಳು ಕಾರ್ಯಾರಂಭ ಶುರು ಮಾಡಿಕೊಂಡಿದೆ.

    ಪೀಣ್ಯ ಬಳಿ ಇರುವ ಎಂ ಎಸ್ ಗಾರ್ಮೆಂಟ್ಸ್  ನಲ್ಲಿ ಕೆಲಸ ಮಾಡುವ ನೌಕರರು ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ.  ಒಳ ಹೋಗುವ ಮೊದಲು ಅಲ್ಲಿನ ಸಿಬ್ಬಂದಿ ಪ್ರತಿ ನೌಕರರ ದೇಹದ ಉಷ್ಣಾಂಶವನ್ನು ಪರೀಕ್ಷೆ ಮಾಡಲಾಗುತ್ತದೆ.  ಜೊತೆಗೆ ಸ್ಯಾನಿಟೈಸರ್ ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಗಾರ್ಮೆಂಟ್ಸ್ ಸಿಬ್ಬಂದಿ ಗುಂಪು ಸೇರಬಾರದು ಎಂದು ತಿಳಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಿದ್ದಾರೆ.

    ಗಾರ್ಮೆಂಟ್ಸ್ ಒಳಭಾಗದಲ್ಲೂ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡುತ್ತಿದ್ದಾರೆ.

    ಮಾಲೀಕರಾದ ಮಂಜು ಮಾತಾನಾಡಿ, ಲಾಕ್ ಡೌನ್ ಮತ್ತು ಕೊರೊನಾ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಆಗುತ್ತಿದೆ. ಅದರೂ ಜೀವನ ಮಾಡಬೇಕಾಗಿದೆ. ಸರ್ಕಾರದ ನಿಯಮಗಳ ಪ್ರಕಾರವೇ ನಾವೂ ಉತ್ಪಾದನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅನ್‍ಲಾಕ್‍ಗೂ ಮೊದಲೇ ಕೊವೀಡ್ ನಿಯಮ ಉಲ್ಲಂಘನೆ- ಸೋಂಕು ಹರಡುವ ಭೀತಿ

    ಈ ಗಾರ್ಮೆಂಟ್ಸ್ ನಲ್ಲಿ ಕೋವಿಡ್ ಸಮಯದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಪಿಪಿಇ ಕಿಟ್ ಗಳನ್ನು ತಯಾರಿಸಲಾಗುತ್ತಿದೆ.

  • ದೆಹಲಿ ಕೊರೊನ ಲಾಕ್‍ಡೌನ್‍ನಲ್ಲಿ ಇನ್ನಷ್ಟು ಸಡಿಲಿಕೆ – ಮಾಲ್, ಮೆಟ್ರೋ ಓಪನ್

    ದೆಹಲಿ ಕೊರೊನ ಲಾಕ್‍ಡೌನ್‍ನಲ್ಲಿ ಇನ್ನಷ್ಟು ಸಡಿಲಿಕೆ – ಮಾಲ್, ಮೆಟ್ರೋ ಓಪನ್

    ನವದೆಹಲಿ: ಬೆಸ-ಸಮ ಆಧಾರದ ಮೇಲೆ ಮಾಲ್‍ಗಳು, ಅಂಗಡಿ ಮುಗ್ಗಟ್ಟು, ಮಾರುಕಟ್ಟೆ ಓಪನ್, ದೆಹಲಿ ಸರ್ಕಾರ ಕೊರೊನಾ ಲಾಕ್‍ಡೌನ್ ನಿಂದ ಕೊಂಚ ಮಟ್ಟದ ಬಿಡುಗಡೆಯನ್ನು ನೀಡಲು ಇಂದು ಅನುಮತಿಯನ್ನು ನೀಡಿದೆ.

    ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಕಷ್ಟಕರವಾದ ಪರಿಸ್ಥಿತಿ ಸುಧಾರಿಸುತ್ತಿದೆ ಹೀಗಾಗಿ ಲಾಕ್‍ಡೌನ್ ಮುಂದುವರೆಯುತ್ತದೆ. ಆದರೆ ಕೊಂಚ ಮಟ್ಟಿಗೆ ಸಡಿಲ ಗೊಳಿಸುತ್ತಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ   ಹೇಳಿದ್ದಾರೆ. ಇದನ್ನೂ ಓದಿ: ರೈತರಿಗೆ ಉಚಿತ ಗೊಬ್ಬರ, ಬಿತ್ತನೆ ಬೀಜ ಕೊಡಿ ಸಿಎಂಗೆ ಸಿದ್ದರಾಮಯ್ಯ ಮನವಿ

    * ಮಾಲ್‍ಗಳು ಮತ್ತು ಶಾಪಿಂಗ್ ಕೇಂದ್ರಗಳು ಬೆಸ-ಸಮ ಆಧಾರದ ಮೇಲೆ ತೆರೆಯಲ್ಪಡುತ್ತವೆ. ಒಂದು ದಿನ ಅರ್ಧ ಅಂಗಡಿಗಳು, ಇನ್ನೊಂದು ಅರ್ಧ ಮರುದಿನ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಅಗತ್ಯ ವಸ್ತುಗಳ ಅಂಗಡಿಗಳು ಮತ್ತು ರಸಾಯನಿಕ ಅಂಗಡಿಗಳನ್ನು ಎಲ್ಲಾ ದಿನಗಳಲ್ಲಿ ತೆರೆಯಬಹುದು. ಬೆಸ-ಸಮ ನಿಯಮವು ಅವರಿಗೆ ಅನ್ವಯಿಸುವುದಿಲ್ಲ.ಇದನ್ನೂ ಓದಿ: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಸಾಧ್ಯತೆ

    * ಖಾಸಗಿ ಕಚೇರಿಗಳು ಶೇಕಡಾ 50 ರಷ್ಟು ಉದ್ಯೋಗಿಗಳ ಮಿತಿಯಲ್ಲಿ ಮಾತ್ರ ಕೆಲಸವನ್ನು ಆರಂಭಿಸ ಬಹುದಾಗಿದೆ. ವರ್ಕ್ ಫ್ರಮ್ ಹೋಮ್ ಮಾಡುತ್ತಿರುವವರು ಇದನ್ನು ಮುಂದುವರಿಸಿ. ಸಾರ್ವಜನಿಕ ವಲಯದ ಕಚೇರಿಗಳಲ್ಲಿ ಎ ವರ್ಗ ಉದ್ಯೋಗಿಗಳು ಎಲ್ಲಾ ದಿನಗಳಲ್ಲಿ ಕೆಲಸ ಮಾಡಬಹುದು, ಆದರೆ ಅವರ ಅಡಿಯಲ್ಲಿರುವ ಎಲ್ಲಾ ವರ್ಗಗಳು ಕೇವಲ 50 ಪ್ರತಿಶತದಷ್ಟು ಸಾಮಥ್ರ್ಯದ ಜನರು ಮಾತ್ರ ಕೆಲಸ ಮಾಡಿ. ಮೆಟ್ರೋ ಸಹ ಸೇ.50 ರಷ್ಟು ಆಸನ ಸಾಮಥ್ರ್ಯದಲ್ಲಿ ಚಲಿಸಲಿದೆ.

    ಕೊರೊನಾ ಮೂರಲೇ ಅಲೆಗೆ ನಾವು ಸಾಕಷ್ಟು ಸಿದ್ದತೆಯನ್ನು ಮಾಡುಕೊಳ್ಳುತ್ತಿದ್ದೇವೆ. ನಾವು ಆಮ್ಲಜನಕದ ತೀವ್ರ ಕೊರತೆಯನ್ನು ಎದುರಿಸಿದ್ದೇವೆ. ನಾವು ರಾಷ್ಟ್ರ ರಾಜಧಾನಿಯಲ್ಲಿ ಆಮ್ಲಜನಕದ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದ್ದೇವೆ. ನಾವು ಮೊದಲು ನಮ್ಮದೇ ಆದ ಆಮ್ಲಜಕನ ಘಟವನ್ನು ಹೊಂದಿರದ ಕಾರಣ ನಾವು ಆಮ್ಲಜನಕ ಟ್ಯಾಂಕರ್‍ಗಳನ್ನು ಸಹ ಸಂಗ್ರಹಿಸುತ್ತಿದ್ದೇವೆ. ಅಂತಹ 25 ಟ್ಯಾಂಕರ್‍ಗಳನ್ನು ನಾವು ಖರೀದಿಸುತ್ತಿದ್ದೇವೆ.

    ದೆಹಲಿ ಸರ್ಕಾರದ ಅಂಕಿಅಂಶಗಳ ಪ್ರಕಾರ, ನಗರದಲ್ಲಿ ಶುಕ್ರವಾರ 523 ಹೊಸ ಕೊರೊನಾ ಪ್ರಕರಣಗಳು ಮತ್ತು 50 ಸಾವುನೋವುಗಳು ದಾಖಲಾಗಿವೆ. ಪಾಸಿಟಿವಿಟಿ ರೇಟ್ ಶೇ.0.68ರಷ್ಟಿದೆ. ಕೊರೊನಾದಿಂದ ಹಾನಿಗೊಳಗಾದ ರಾಜ್ಯಗಳಲ್ಲಿ ದೆಹಲಿ ಕೂಡ ಒಂದಾಗಿದೆ ಎಂದರು.

  • ಹುಬ್ಬಳ್ಳಿ ನಗರ ಹೊರತು ಪಡಿಸಿ ಧಾರವಾಡ ಜಿಲ್ಲೆ 4 ದಿನ ಓಪನ್: ಶೆಟ್ಟರ್

    ಹುಬ್ಬಳ್ಳಿ ನಗರ ಹೊರತು ಪಡಿಸಿ ಧಾರವಾಡ ಜಿಲ್ಲೆ 4 ದಿನ ಓಪನ್: ಶೆಟ್ಟರ್

    – 10 ರಿಂದ 6 ಗಂಟೆವರೆಗೆ ಅವಶ್ಯಕ ಅಂಗಡಿಗಳು ಮಾತ್ರ ಓಪನ್

    ಧಾರವಾಡ: ಧಾರವಾಡ ಜಿಲ್ಲೆ ಆರೇಂಜ್ ಜೋನ್‍ನಲ್ಲಿ ಇರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರಕ್ಕೆ ಸದ್ಯ ಯಾವುದೇ ಸಡಿಲಿಕೆಯನ್ನು ನೀಡಲಾಗಿಲ್ಲ. ಧಾರವಾಡಕ್ಕೆ ಷರತ್ತು ಬದ್ಧ ಸಡಿಲಿಕೆ ನೀಡಲಾಗಿದೆ. ಗ್ರಾಮೀಣ ಭಾಗಕ್ಕೆ ಕೂಡಾ ಸಡಿಲಿಕೆ ನೀಡಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಧಾರವಾಡದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಅಗತ್ಯ ಸರಕು ಸಾಗಣೆ, ಉತ್ಪಾದನೆ ಅವಕಾಶ ಕೊಡಲಾಗಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಕಂಟೋನ್ಮೆಂಟ್ ವ್ಯಾಪ್ತಿ ಹೊರಗಿನ ಕೈಗಾರಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಮುಗ್ಗಟ್ಟು ಕಾಯ್ದೆ ಅಡಿ ನೋಂದಾಯಿತ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಧಾರವಾಡ ಗ್ರಾಮೀಣ, ನವಲಗುಂದ, ಅಣ್ಣಿಗೇರಿ, ಅಳ್ನಾವರ, ಕಲಘಟಗಿ ಹಾಗೂ ಕುಂದಗೋಳ ಪಟ್ಟಣಗಳ ಅಂಗಡಿಗಳಿಗೂ ತೆರೆಯಲು ಅವಕಾಶ ನೀಡಲಾಗಿದೆ ಎಂದರು.

    ಹುಬ್ಬಳ್ಳಿಯಲ್ಲಿ ಕಂಟೋನ್ಮೆಂಟ್ ಜೋನ್ ಇದೆ. ಹೀಗಾಗಿ ಹುಬ್ಬಳ್ಳಿ ನಗರದಲ್ಲಿ ಯಾವುದೇ ಅಂಗಡಿ ತೆರೆಯಲು ಅವಕಾಶ ಇಲ್ಲ. ಧಾರವಾಡ ನಗರದಲ್ಲಿ ವಾರದಲ್ಲಿ ನಾಲ್ಕು ದಿನಗಳಾದ ಸೋಮವಾರದಿಂದ ಗುರುವಾರವರೆಗೆ ಅಂಗಡಿ ತೆರೆಯಲು ಅವಕಾಶ ಇದೆ. ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಮಾತ್ರ ಅಂಗಡಿಗಳನ್ನು ತೆರೆಯಬಹುದು. ಯಾವ ಅಂಗಡಿ ತೆರೆಯಬೇಕು ಎಂದು ಡಿಸಿ ಲಿಖಿತ ಆದೇಶ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.

    ಕೈಗಾರಿಕೋದ್ಯಮಿಗಳು ಕಾರ್ಮಿಕರ ಸುರಕ್ಷತೆಗೆ ಒತ್ತು ಕೊಡಬೇಕು. ಶೇಕಡಾ 50ರಷ್ಟು ಕಾರ್ಮಿಕರ ನಿರ್ವಹಣೆ ಮಾಡಬೇಕು. ಜನ ಸಹಕಾರ ಕೊಟ್ಟರೆ ಜಿಲ್ಲೆ ಹಸಿರು ಝೋನ್ ಆಗಲಿದೆ ಎಂದರು. ಈ ಮಧ್ಯೆ ಮದ್ಯ ಮಾರಾಟ ನಿಷೇಧ ಭಗವಂತನ ದಯೆಯಿಂದ ಹಾಗೇ ಮುಂದುವರಿಯಲಿ ಎಂದು ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣವರ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಮಾತು ಹೇಳಿದ್ದಕ್ಕೆ, ನಗುತ್ತಲೇ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಹಾಗೇ ಮಾಡಿದರೆ ಸರ್ಕಾರಕ್ಕೆ 20 ಸಾವಿರ ಕೋಟಿ ನಷ್ಟ ಆಗುತ್ತದೆ ಎಂದರು.

    ಇದೇ ವೇಳೆ ಬೆಳಗಾವಿಯಲ್ಲಿ ಪೊಲೀಸರ ಹಾಗೂ ಸೈನಿಕನ ನಡುವೆ ನಡೆದ ಗಲಾಟೆಯ ಬಗ್ಗೆ ತನಿಖೆ ನಡೆದಿದ್ದು, ನಾವು ಎರಡು ಕಡೆಯ ಮುಖ ನೋಡಬೇಕಾಗಿದೆ ಎಂದರು. ಮಂಡ್ಯದಲ್ಲಿ ವಿಧಾನ ಪರಿಷತ್ ಸದಸ್ಯನ ಪ್ರಕರಣ ಹಾಗೂ ಬೆಳಗಾವಿ ಪ್ರಕರಣ ಎರಡು ಬೇರೆಯಾಗಿದ್ದು, ಎರಡನ್ನು ಒಂದೇ ರೀತಿ ನೋಡಬಾರದು ಎಂದು ಶೆಟ್ಟರ್ ತಿಳಿಸಿದರು.