Tag: ಸಡನ್ ಬ್ರೇಕ್

  • ರೈಲಿನ ಕೆಳಗೆ ಸಿಲುಕಿದ ವೃದ್ಧ – ಸಾವಿನ ಅಂಚಿನಿಂದ ಪಾರು

    ರೈಲಿನ ಕೆಳಗೆ ಸಿಲುಕಿದ ವೃದ್ಧ – ಸಾವಿನ ಅಂಚಿನಿಂದ ಪಾರು

    ಮುಂಬೈ: ರೈಲ್ವೆ ಹಳಿ ದಾಟುವ ವೇಳೆ ರೈಲಿಗೆ ಸಿಲುಕಿಕೊಳ್ಳುತ್ತಿದ್ದ ವೃದ್ಧನನ್ನು, ಚಾಲಕರು ಸಡನ್ ಬ್ರೇಕ್ ಹಾಕಿ ರಕ್ಷಿಸಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಮುಂಬೈನ ಕಲ್ಯಾಣ ಪ್ರದೇಶದಲ್ಲಿರುವ ರೈಲ್ವೆ ನಿಲ್ದಾಣದ ಫ್ಲಾಟ್‍ಫಾರ್ಮ್ ನಂ.4ರಲ್ಲಿ ಮಧ್ಯಾಹ್ನ 12.45ಕ್ಕೆ ಈ ಘಟನೆ ನಡೆದಿದ್ದು, ಹರಿ ಶಂಕರ್(70) ಎಂಬವರು ರೈಲ್ವೆ ಹಳಿ ದಾಟುವ ವೇಳೆ ರೈಲಿಗೆ ಸಿಲುಕಿದ್ದಾರೆ. ಈ ವೇಳೆ ಚೀಫ್ ಪರ್ಮನೆಂಟ್ ವೇ ಇನ್ಸ್‌ಪೆಕ್ಟರ್‌ ಸಂತೋಷ್ ಕುಮಾರ್, ಲೊಕೊ ಪೈಲಟ್ ಎಸ್.ಕೆ ಪ್ರಧಾನ್ ಮತ್ತು ಸಹಾಯಕ ಲೊಕೊ ಪೈಲಟ್ ರವಿಶಂಕರ್‌ಗೆ  ಕೂಗಿ ಹೇಳುವ ಮೂಲಕ ಎಚ್ಚರಿಸಿದ್ದಾರೆ. ಆಗ ಇಬ್ಬರು ಪೈಲಟ್‍ಗಳು ತಕ್ಷಣ ಬ್ರೇಕ್ ಹಾಕಿ ರೈಲಿನ ಕೆಳಗೆ ಸಿಲುಕಿಕೊಂಡಿದ್ದ ವೃದ್ಧನನ್ನು ಹೊರ ಎಳೆದಿದ್ದಾರೆ.

    ನಂತರ ರೈಲು ಬರುತ್ತಿರುವ ವೇಳೆ ರೈಲ್ವೆ ಹಳಿಯನ್ನು ದಾಟಬಾರದು ಎಂದು ವೃದ್ಧನಿಗೆ ಎಚ್ಚರಿಕೆ ನೀಡಿದ್ದಾರೆ. ವೃದ್ಧನ ಜೀವವನ್ನು ರಕ್ಷಿಸಿದ ಕಾರ್ಯವನ್ನು ಮೆಚ್ಚಿ ಕೇಂದ್ರ ರೈಲ್ವೆಯ ಜನರಲ್ ಮ್ಯಾನೇಜರ್ ಅಲೋಕ್ ಕನ್ಸಾಲ್ ಇಬ್ಬರು ಲೊಕೊ ಪೈಲಟ್‍ಗಳಿಗೆ ಹಾಗೂ ಸಿಪಿಡಬ್ಲೂಐಗೆ ತಲಾ 2,000ರೂ ನಗದನ್ನು ಬಹುಮಾನವಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿ ಕೊಂದ ಪತ್ನಿಯ ಬಂಧನ