Tag: ಸಚ್ಚಿದಾನಂದ

  • ಕಾಟೇರ ನಿರ್ದೇಶಕನಿಗೆ ಎರಡು ಸಿನಿಮಾಗಳ ಕಾಲ್ ಶೀಟ್ ಕೊಟ್ಟ ದರ್ಶನ್

    ಕಾಟೇರ ನಿರ್ದೇಶಕನಿಗೆ ಎರಡು ಸಿನಿಮಾಗಳ ಕಾಲ್ ಶೀಟ್ ಕೊಟ್ಟ ದರ್ಶನ್

    ಕಾಟೇರ (Katera) ಯಶಸ್ಸಿನ ಬೆನ್ನಲ್ಲೇ ನಟ ದರ್ಶನ್ (Darshan) ಆ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ (Tarun Sudhir)  ಅವರಿಗೆ ಎರಡು ಚಿತ್ರಗಳಿಗೆ ಕಾಲ್ ಶೀಟ್ ನೀಡಿದ್ದಾರೆ. ಎರಡೂ ಸಿನಿಮಾಗಳನ್ನೂ ಪ್ರತಿಷ್ಠಿತ ನಿರ್ಮಾಣ ಸಂಸ‍್ಥೆಗಳೇ ಮಾಡುತ್ತಿವೆ ಎನ್ನುವುದು ವಿಶೇಷ. ದರ್ಶನ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಎರಡೂ ನಿರ್ಮಾಣ ಸಂಸ್ಥೆಗಳು ಆ ಚಿತ್ರಗಳನ್ನು ಘೋಷಣೆ ಮಾಡಿವೆ.

    ಈಗಾಗಲೇ ದರ್ಶನ್ ಗಾಗಿ ಯಜಮಾನ ಮತ್ತು ಕ್ರಾಂತಿ ಚಿತ್ರವನ್ನು ನಿರ್ಮಾಣ ಮಾಡಿರುವ ಮೀಡಿಯಾ ಹೌಸ್ ಸಂಸ್ಥೆ ಅಂದರೆ, ಶೈಲಜಾ ನಾಗ್ (Shailaja Nag) ಮತ್ತು ಬಿ.ಸುರೇಶ್ ಜಂಟಿಯಾಗಿ ಒಂದು ಸಿನಿಮಾ ಮಾಡುತ್ತಿದ್ದು, ಆ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶಕ. ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಈ ಸಿನಿಮಾ ಮೂಡಿ ಬರಲಿದೆ.

    ಮತ್ತೊಂದು ಸಿನಿಮಾ ರಾಜಕಾರಣಿ ಹಾಗೂ ದರ್ಶನ್ ಆಪ್ತ ಸಚ್ಚಿದಾನಂದ (Satchidananda) ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ತರುಣ್ ಸುಧೀರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಘೋಷಣೆ ಕೂಡ ಇಂದು ಆಗಿದೆ. ಈ ಎರಡೂ ಚಿತ್ರಗಳು ಯಾವಾಗ ಬರುತ್ತವೆ ಎನ್ನುವುದು ಇನ್ನೂ ಖಾತರಿ ಆಗಿಲ್ಲ. ಆದರೂ, ಘೋಷಣೆ ಮಾಡಲಾಗಿದೆ.

     

    ಕಾಟೇರ್ ಸಕ್ಸಸ್ ನಂತರ ತರುಣ್ ಸುಧೀರ್ ಮೇಲೆ ನಿರ್ಮಾಪಕರು ಅಪಾರ ನಂಬಿಕೆ ಬಂದಿದೆ. ಕನ್ನಡದಲ್ಲೇ ಕೋಟಿ ಕೋಟಿ ಹಣವನ್ನು ಈ ಸಿನಿಮಾ ಬಾಚಿದೆ. ಹಾಗಾಗಿ ತರುಣ್ ಮೇಲೆ ಹಣ ಹೂಡಲು ನಿರ್ಮಾಪಕರಿಗೆ ಮುಂದೆ ಬಂದಿದ್ದಾರೆ.

  • ಸುಮಲತಾರಿಂದ ಅಂತರ ಕಾಯ್ದುಕೊಂಡ್ರಾ ಆಪ್ತ ಸಚ್ಚಿದಾನಂದ?

    ಸುಮಲತಾರಿಂದ ಅಂತರ ಕಾಯ್ದುಕೊಂಡ್ರಾ ಆಪ್ತ ಸಚ್ಚಿದಾನಂದ?

    – ಡಾ. ಸಿದ್ದರಾಮಯ್ಯ ಬೆಂಬಲಿಗರ ಸಭೆಯಲ್ಲಿ ಭಾಗಿ

    ಮಂಡ್ಯ: ಲೋಕಸಭಾ ಬಿಜೆಪಿ ಟಿಕೆಟ್‌ (Loksabha Ticket) ಆಕಾಂಕ್ಷಿಯಾಗಿರುವ ಸುಮಲತಾ ಅಂಬರೀಶ್‌ (Sumalatha Ambareesh) ಅವರಿಗೆ ಇದೀಗ ಆಪ್ತ ಸಚ್ಚಿದಾನಂದ ಅವರೇ ಶಾಕ್‌ ನೀಡಿದ್ರಾ ಎಂಬ ಪ್ರಶ್ನೆಯೊಂದು ಎದ್ದಿದೆ.

    ಇಂದು ಮಂಡ್ಯದಲ್ಲಿ ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ (Dr. Siddaramaiah) ಬೆಂಬಲಿಗರ ಸಭೆ ನಡೆಯಿತು. ಡಾ.ಸಿದ್ದರಾಮಯ್ಯಗೆ ಬಿಜೆಪಿ ಟಿಕೆಟ್ (Mandya BJP Ticket) ನೀಡುವಂತೆ ಒತ್ತಾಯಿಸಿ ನಡೆದ ಸಭೆಯಲ್ಲಿ ಬಿಜೆಪಿಯ (Loksabha BJP Ticket) ಹಲವು ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಆದರೆ ಸಂಸದೆ ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಅವರು ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಚ್ಚರಿ ಸೃಷ್ಟಿಸಿದರು. ಈ ಮೂಲಕ ಸುಮಲತಾ ಜೊತೆ ಸಚ್ಚಿದಾನಂದ ಅವರು ಅಂತರ ಕಾಯ್ದುಕೊಂಡ್ರಾ ಎಂಬ ಚರ್ಚೆ ಶುರುವಾಗಿದೆ.

    ಸಭೆಯ ಬಳಿಕ ಸಚ್ಚಿದಾನಂದ ಮಾತನಾಡಿ, ಸಿದ್ದರಾಮಣ್ಣ ತ್ಯಾಗಿ. ಎಲ್ಲಾ ಪಕ್ಷದಲ್ಲಿ ಅವರಿಗೆ ಸ್ನೇಹಿತರಿದ್ದರು. ನರೇಂದ್ರ ಮೋದಿ ನಾಯಕತ್ವ ಒಪ್ಪಿ ಅವರು ಬಿಜೆಪಿ ಸೇರಿದರು. 6 ತಿಂಗಳ ಅವಧಿಗೆ ನಡೆದ ಎಂಪಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. ಬಿಜೆಪಿ ಪರವಾಗಿ ಅತಿ ಹೆಚ್ಚು ಮತಗಳಿಸಿದರು. ಕರ್ಣನ ರೀತಿ ಸುಮಲತಾ ಮೇಡಂ ಅವರಿಗೆ ತನ್ನ ಸ್ಥಾನ ತ್ಯಾಗ ಮಾಡಿದರು. ಶ್ರೀರಂಗಪಟ್ಟಣ ಕ್ಷೇತ್ರವನ್ನು ನನಗಾಗಿ ಬಿಟ್ಟುಕೊಟ್ಟರು. ಸಿದ್ದರಾಮಣ್ಣನ ಕೈ ಬಲಪಡಿಸಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ತಾಳ್ಮೆ, ಜಾಣ್ಮೆಯ ನಾಯಕ ಸಿದ್ದರಾಮಯ್ಯ. ಹೀಗಾಗಿ ಸಿದ್ದರಾಮಯ್ಯ ಪರ ನಾವೀರುತ್ತೇವೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ ಎಂದು ಹೇಳಿದರು.

    ಬಿಜೆಪಿ ಟಿಕೆಟ್ ಅಕಾಂಕ್ಷಿ ಡಾ.ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಇಂದು ನನ್ನ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ನನ್ನ ಜನ ನನ್ನ ಕಾರ್ಯಕರ್ತರು ನನ್ನನ್ನು ಗುರುತಿಸಿದ್ದಾರೆ. ನನಗೆ ಟಿಕೆಟ್ ಕೊಡಲು ಅವರೆಲ್ಲರು ಒತ್ತಾಯಿಸಿದ್ದಾರೆ. ನನಗೆ ಅಧಿಕಾರದ ಆಸೆ ಇಲ್ಲ. ಕಾರ್ಯಕರ್ತರು ತೋರಿದ ಪ್ರೀತಿಯ ಅಭಿಮಾನ ನನಗೆ ಸಂತೋಷ ತಂದಿದೆ. ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ಸದೃಢವಾಗಿದೆ, ಅದ್ಭುತ ಶಕ್ತಿ ಹೊಂದಿದೆ. ಕಳೆದ ವಿಧಾನಸಭೆಯಲ್ಲಿ ಬಿಜೆಪಿ ಹೆಚ್ಚಿನ ಮತ ಪಡೆದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ. ಲೋಕಸಭೆಯಲ್ಲಿ ನಮಗೆ ಟಿಕೆಟ್ ಕೊಟ್ರೆ ಗೆಲ್ಲುವ ವಿಶ್ವಾಸ ಇದೆ. ನಮ್ಮನ್ನು ಕಡೆಗಣಿಸುವ ಕೆಲಸ ಆಗಬಾರದು. ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.

    ಸಭೆಯಲ್ಲಿ ಮುಖಂಡರಾದ ಡಾ.ಸಿದ್ದರಾಮಯ್ಯ, ಅಶೋಕ್ ಜಯರಾಂ, ಸ್ವಾಮಿ, ಚಂದಗಾಲು ಶಿವಣ್ಣ ಸೇರಿದಂತೆ ಬಿಜೆಪಿಯ ಹಲವು ಪದಾಧಿಕಾರಿಗಳು ಭಾಗಿಯಾಗಿದ್ದರು. ಸಭೆಯ ಬಳಿಕ ಮಂಡ್ಯ ಬಿಜೆಪಿ ಕಾರ್ಯಕರ್ತರಿಗೆ ಬಾಡೂಟ ಆಯೋಜನೆ ಮಾಡಲಾಯಿತು. ಗೀರೈಸ್, ಮೊಟ್ಟೆ, ಚಿಕನ್ ಚಾಪ್ಸ್, ನಾಟಿ ಕೋಳಿ ಸಾಂಬಾರ್ ಮೆನುವಿನಲ್ಲಿತ್ತು.

  • ಕೊನೆ ಉಸಿರಿರೋವರೆಗೂ ಮಂಡ್ಯದ ಸೊಸೆಯಾಗಿರುವೆ: ಸುಮಲತಾ ಅಂಬರೀಶ್

    ಕೊನೆ ಉಸಿರಿರೋವರೆಗೂ ಮಂಡ್ಯದ ಸೊಸೆಯಾಗಿರುವೆ: ಸುಮಲತಾ ಅಂಬರೀಶ್

    ಮಂಡ್ಯ: ಈ ಮಣ್ಣಿನ ಸೊಸೆಯಾಗಿ ನಾನು ಕೊನೆಯ ಉಸಿರು ಇರುವವರೆಗೆ ಇರುತ್ತೇನೆ. ಮಂಡ್ಯದ ಸೊಸೆಯ ಸ್ಥಾನ ಯಾರಿಂದಲೂ ಕಿತ್ತುಕೊಳ್ಳಲು ಆಗಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ನುಡಿದರು.

    ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸುಮಲತಾ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಮಾಜಿ ಸದಸ್ಯ ಸಚ್ಚಿದಾನಂದರನ್ನು ಅವರು ಇದ್ದ ಪಕ್ಷ ವಜಾ ಮಾಡಿತ್ತು. ವಜಾ ಮಾಡಿದ್ದರೂ ಸಚ್ಚಿ ನನ್ನ ಜೊತೆ ನಿಂತಿದ್ದ. ಆತ ನಮ್ಮ ಮನೆಯ ಮಗ, 20 ವರ್ಷಗಳಿಂದ ಆತನನ್ನು ನೋಡಿಕೊಂಡು ಬಂದಿದ್ದೇನೆ ಎಂದರು.

    ಎಲೆಕ್ಷನ್ ಗೆದ್ದ ದಿನದಿಂದಲೂ ಮಂಡ್ಯದಲ್ಲಿ ರಾಜಕೀಯ ಮಾಡುತ್ತಾರೆ. ನಮಗೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಮಂಡ್ಯ ಜಿಲ್ಲೆಗೂ ಸ್ವಾತಂತ್ರ್ಯ ಬರಬೇಕಿದೆ. ಮಂಡ್ಯದಲ್ಲಿ ಬದಲಾವಣೆಯಾಗಬೇಕಿದೆ. ಕೊರೊನಾ ಸಂದರ್ಭದಲ್ಲಿ ಜನ ಪ್ರಾಣ ಕಳೆದುಕೊಳ್ಳುತ್ತಿದ್ದರು. ಈ ವೇಳೆ ಸಭೆ ಕರೆದರೆ ಗಲಭೆಗಳನ್ನು ಮಾಡುತ್ತಾ ಇದ್ದರು. ಇದಕ್ಕೆಲ್ಲಾ ಫುಲ್‌ಸ್ಟಾಪ್ ಇಡಬೇಕು. ಸಚ್ಚಿ ಅಂತಹವರನ್ನು ಮುಂದೆ ಗೆಲ್ಲಿಸಬೇಕು ಎಂದರು. ಇದನ್ನೂ ಓದಿ: ಟಿಪ್ಪು ಫ್ಲೆಕ್ಸ್ ಹರಿದ ಪ್ರಕರಣ – ಪುನೀತ್ ಕೆರೆಹಳ್ಳಿ ಬಂಧನ

    ನಮ್ಮ ಜಿಲ್ಲೆಯಲ್ಲಿ ಎಲ್ಲಿ ಹೋದರೂ ಜನರು ಅಂಬರೀಶ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಅವರು ಮಾಡಿರುವ ಸೇವೆಗಳೇ ಅಂತಹದ್ದು. ಚುನಾವಣೆ ಸಂದರ್ಭದಲ್ಲಿ ರೈತರು ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಮೈಶುಗರ್ ಅನ್ನು ಪುನರಾರಂಭ ಮಾಡಬೇಕೆಂದು ಕೇಳಿಕೊಂಡಿದ್ದರು. 3 ವರ್ಷದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿರುವುದು ನಿಮ್ಮ ಮುಂದೆಯೇ ಇದೆ. ಕೆಆರ್‌ಎಸ್‌ಗೆ ಅಪಾಯವಾಗುವ ಜಾಗದಲ್ಲಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

    sumalatha ambarish

    ಇದು ಎಷ್ಟೋ ವರ್ಷಗಳ ಹೋರಾಟ. ನಾನು 3 ವರ್ಷದಿಂದ ಸಿಎಂ ಹಾಗೂ ಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಈಗ ಕೊಟ್ಟ ಮಾತನ್ನು ನೆರವೇರಿಸಿರುವ ತೃಪ್ತಿ ನನಗಿದೆ. ಒಂದಷ್ಟು ಜನ ಹೇಳುತ್ತಾರೆ, ರಾಜಕೀಯದಲ್ಲಿ ಏನು ಮಾಡಬೇಕು ಎಂದು ಸಲಹೆ ನೀಡುತ್ತಾರೆ. ನನಗೆ ಬೆಂಬಲ ಕೊಟ್ಟಿರುವವರ ಕೈಯನ್ನು ನಾನು ಬಿಡುವುದಿಲ್ಲ. ಸಚ್ಚಿಯನ್ನು ಸಹ ಕೈ ಬಿಡುವುದಿಲ್ಲ. ಅಂಬರೀಶ್ ಅವರು ಸೀಟ್ ಕೊಡಿ, ಮಂತ್ರಿ ಸ್ಥಾನ ಕೊಡಿ ಎಂದು ಕೇಳಿಲ್ಲ. ಅವರ ದಾರಿಯಲ್ಲಿಯೇ ನಾನು ಕೂಡಾ ನಡೆದುಕೊಂಡು ಹೋಗುತ್ತೇನೆ ಎಂದರು. ಇದನ್ನೂ ಓದಿ: ಗುರುರಾಯರ 351ನೇ ಆರಾಧನೆ – ಅದ್ಧೂರಿಯಾಗಿ ನೆರವೇರಿದ ಮಂತ್ರಾಲಯದ ಮಹಾರಥೋತ್ಸವ

    ಅಭಿಷೇಕ್ ಹಾಗೂ ಸಚ್ಚಿದಾನಂದ ಇವರಿಬ್ಬರಲ್ಲಿ ಯಾರಿಗೆ ಬೆಂಬಲ ಕೊಡುತ್ತೀರಿ ಎಂದು ಕೇಳಿದರೆ, ನಾನು ಸಚ್ಚಿಗೇ ಕೊಡುತ್ತೇನೆ. ಅಭಿಷೇಕ್‌ಗಾಗಿ ನಾನು ಏನನ್ನೂ ಕೇಳುವುದಿಲ್ಲ. ಅಂಬರೀಶ್ ಕುಟುಂಬದಲ್ಲಿ ಕುಟುಂಬ ರಾಜಕೀಯ ಮಾಡುವುದಿಲ್ಲ. ಕುಟುಂಬ ರಾಜಕೀಯ ಮಾಡುವವರು ಇದ್ದಾರೆ, ಅರ‍್ಯಾರು ಎಂಬುದು ಎಲ್ಲರಿಗೂ ಗೊತ್ತು. ಇನ್ನು 7-8 ತಿಂಗಳಿನಲ್ಲಿ ಬದಲಾವಣೆಗೆ ಅವಕಾಶವಿದೆ. ಆ ಬದಲಾವಣೆಗಳನ್ನು ಮಾಡಿ, ಈ ಮಣ್ಣಿನ ಸೊಸೆಯಾಗಿಯೇ ಇರುವೆ ಎಂದು ಹೇಳಿಕೆ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಉಚ್ಛಾಟಿತ ಮುಖಂಡನ ಮನೆಯಲ್ಲಿ ದರ್ಶನ್ ಭೋಜನ

    ಕಾಂಗ್ರೆಸ್ ಉಚ್ಛಾಟಿತ ಮುಖಂಡನ ಮನೆಯಲ್ಲಿ ದರ್ಶನ್ ಭೋಜನ

    ಮಂಡ್ಯ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದ್ದಕ್ಕೆ ಕಾಂಗ್ರೆಸ್ ಮುಖಂಡ, ಹಿಂಡವಾಳು ಸಚ್ಚಿದಾನಂದ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿತ್ತು. ಇದೀಗ ಇಂದು ನಟ ದರ್ಶನ್ ಅವರ ಮನೆಯಲ್ಲಿ ಭೋಜನ ಸೇವಿಸಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಹಿನ್ನೆಲೆ ಹಾಗೂ ಅಂಬರೀಶ್ ಜನ್ಮದಿನದ ಅಂಗವಾಗಿ ಮಂಡ್ಯದಲ್ಲಿ ಅಭಿಮಾನ ಸಮಾವೇಶ ಆಯೋಜನೆಗೊಂಡಿದ್ದು, ಕಾರ್ಯಕ್ರಮಕ್ಕೆ ನಟ ದರ್ಶನ್ ಮಂಡ್ಯಕ್ಕೆ ಆಗಮಿಸಿದ್ದಾರೆ. ಈ ವೇಳೆ ಮಧ್ಯಾಹ್ನದ ಊಟವನ್ನು ಕಾಂಗ್ರೆಸ್ ಉಚ್ಛಾಟಿತ ಮುಖಂಡನ ಸಚ್ಚಿದಾನಂದ ಮನೆಯಲ್ಲಿ ಭರ್ಜರಿ ಬಾಡೂಟ ಸೇವಿಸಿದ್ದಾರೆ. ನಟ ದರ್ಶನ್ ಜೊತೆ ನಟ ಪ್ರೇಮ್, ಸಚ್ಚಿದಾನಂದ ಮತ್ತು ಆಪ್ತರು ಭಾಗಿಯಾಗಿದ್ದರು. ಇದನ್ನೂ ಓದಿ: ನನ್ನಂತೆ ಸುಮಲತಾರಿಗೆ ಬೆಂಬಲಿಸುವ ಕಾರ್ಯಕರ್ತರನ್ನು ಉಚ್ಛಾಟನೆ ಮಾಡಿ ಪಕ್ಷಕ್ಕೆ ಬೀಗ ಹಾಕ್ತೀರಾ: ಸಚ್ಚಿದಾನಂದ ವಾಗ್ದಾಳಿ

    ಸಚ್ಚಿದಾನಂದ ಅವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿಯಾಗಿ ಸುಮಲತಾ ಅಂಬರೀಶ್ ಅವರಿಗೆ ಸಹ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅವರನ್ನು ಉಚ್ಛಾಟನೆ ಮಾಡಿತ್ತು. ನನ್ನಂತಹ ಲಕ್ಷಾಂತರ ಕಾರ್ಯಕರ್ತರು ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುತ್ತಾರೆ. ಅವರನ್ನೂ ಉಚ್ಛಾಟನೆ ಮಾಡಿ ಪಕ್ಷಕ್ಕೆ ಬೀಗ ಜಡಿಯುತ್ತೀರಾ ಎಂದು ಹಿಂಡವಾಳು ಸಚ್ಚಿದಾನಂದ ಅಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ನನ್ನಂತೆ ಸುಮಲತಾರಿಗೆ ಬೆಂಬಲಿಸುವ ಕಾರ್ಯಕರ್ತರನ್ನು ಉಚ್ಛಾಟನೆ ಮಾಡಿ ಪಕ್ಷಕ್ಕೆ ಬೀಗ ಹಾಕ್ತೀರಾ: ಸಚ್ಚಿದಾನಂದ ವಾಗ್ದಾಳಿ

    ನನ್ನಂತೆ ಸುಮಲತಾರಿಗೆ ಬೆಂಬಲಿಸುವ ಕಾರ್ಯಕರ್ತರನ್ನು ಉಚ್ಛಾಟನೆ ಮಾಡಿ ಪಕ್ಷಕ್ಕೆ ಬೀಗ ಹಾಕ್ತೀರಾ: ಸಚ್ಚಿದಾನಂದ ವಾಗ್ದಾಳಿ

    ಮಂಡ್ಯ: ನನ್ನಂತಹ ಲಕ್ಷಾಂತರ ಕಾರ್ಯಕರ್ತರು ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುತ್ತಾರೆ. ಅವರನ್ನೂ ಉಚ್ಛಾಟನೆ ಮಾಡಿ ಪಕ್ಷಕ್ಕೆ ಬೀಗ ಜಡಿಯುತ್ತೀರಾ ಎಂದು ಕಾಂಗ್ರೆಸ್ಸಿನಿಂದ ಅಮಾನತುಗೊಂಡ ಕೆಪಿಸಿಸಿ ಸದಸ್ಯ ಹಿಂಡವಾಳು ಸಚ್ಚಿದಾನಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷದಿಂದ ನನ್ನ ಉಚ್ಛಾಟನೆ ಮಾಡಿರುವುನ್ನು ಸ್ವಾಗತಿಸುತ್ತೇನೆ. ಆದರೆ ಜೆಡಿಎಸ್ ಅವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ಕಗ್ಗೊಲೆ ಮಾಡ್ತಿದ್ದಾರಲ್ಲ ಅವರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತೀರಾ? ಕಾಂಗ್ರೆಸ್ ಕಾರ್ಯಕರ್ತರು ತೊಂದರೆ ಅನುಭವಿಸುತ್ತಿದ್ದಾಗ ಯಾವ ರಾಜ್ಯ ನಾಯಕರು ಸಹಾಯಕ್ಕೆ ಬರುವುದಿಲ್ಲ. ಆದರೆ ಜೆಡಿಎಸ್‍ನವರಿಗೆ ತೊಂದರೆ ಆದರೆ ಅವರ ಕುಟುಂಬವೇ ಬಂದು ಆತ್ಮಸ್ಥೈರ್ಯ ತುಂಬುತ್ತದೆ. ಕಾಂಗ್ರೆಸ್ ಕಾರ್ಯಕರ್ತರು ಅನಾಥರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗೆ ಸುಮಲತಾ ಬಂದಿದ್ದಾರೆ. ಈಗ ಪಕ್ಷಕ್ಕಾಗಿ ಬೇರೆ ಯಾರಿಗೋ ವೋಟ್ ಕೇಳಿ ಮುಂದಿನ ದಿನಗಳಲ್ಲಿ ಯಾವ ಮುಖ ಇಟ್ಟುಕೊಂಡು ನಮಗೆ ವೋಟ್ ಕೇಳೋದು. ನಾನು ಯಾವ ಅಮಾನತಿಗೆ ಬಗ್ಗಲ್ಲ. ನಾನೀಗ ಫ್ರೀ ಬರ್ಡ್ ಸುಮಲತಾ ಪರವಾಗಿ ಇನ್ನು ಹೆಚ್ಚಿನ ಕೆಲಸ ಮಾಡುತ್ತೇನೆ ಎಂದು ಹೇಳಿದರು.

    ಪಕ್ಷ ವಿರೋಧಿ ಕೆಲಸ ಮಾಡುವವರು ರಾಜೀನಾಮೆ ಕೊಟ್ಟು ಹೋಗಲಿ ಎಂಬ ಜಿಲ್ಲಾಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿ, ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್ ಅವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದು ಯಾರು? ಎರಡು ಬಾರಿ ಎಂಎಲ್‍ಸಿ ಟಿಕೆಟ್ ಕೊಡಿಸಿದ್ದು ಯಾರು ಅಂತ ಕೇಳಿ. ಆಗ ನಾಳೆಯಿಂದ ರಾಜೀನಾಮೆ ಪರ್ವ ಆರಂಭವಾಗಿ ಬಿಡುತ್ತೆ. ಆದ್ರೆ ದುಡುಕುವುದು ಬೇಡ ಅಂತ ನಾನೇ ಕಾರ್ಯಕರ್ತರನ್ನ ಸುಮ್ಮನಿರಿಸಿದ್ದೇನೆ. ನಾನು ಗೆಯ್ಯುವ ಎತ್ತು ನನ್ನ ಯಾರ ಬೇಕಾದರು ಗುರುತಿಸುತ್ತಾರೆ. ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಉಚ್ಛಾಟನೆಗೆಲ್ಲ ಹೆದರಿಕೊಳ್ಳುತ್ತೇನೆ ಅಂತ ಅಂದುಕೊಂಡಿದ್ದಾರೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ನನ್ನಂತಹ ಲಕ್ಷಾಂತರ ಜನ ಸುಮಲತಾ ಅಂಬರೀಶ್ ಜೊತೆಗಿದ್ದಾರೆ ಎಂದರು.

  • ಸಂಧಾನಕ್ಕೆ ಬರಬೇಡಿ, ಏನೇ ಆದ್ರೂ ನಾವು ಸುಮಲತಾರನ್ನ ಬೆಂಬಲಿಸುತ್ತೇವೆ: ಕೈ ನಾಯಕ ಸಚ್ಚಿದಾನಂದ

    ಸಂಧಾನಕ್ಕೆ ಬರಬೇಡಿ, ಏನೇ ಆದ್ರೂ ನಾವು ಸುಮಲತಾರನ್ನ ಬೆಂಬಲಿಸುತ್ತೇವೆ: ಕೈ ನಾಯಕ ಸಚ್ಚಿದಾನಂದ

    – ನಾವೇ ಉಳಿಸಬೇಕು, ನಾವೇ ಬೆಳೆಸಬೇಕು
    – ಪಕ್ಷಕ್ಕೆ ಕಾರ್ಯಕರ್ತರ ಬಗ್ಗೆ ಗೌರವ ಇಲ್ಲ

    ಮಂಡ್ಯ: ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರೆಲ್ಲರೂ ಸುಮಲತಾರನ್ನ ಬೆಂಬಲಿಸುತ್ತೇವೆ. ಸಂಧಾನಕ್ಕೆ ಪಕ್ಷದ ವರಿಷ್ಠರು ಯಾರೂ ಜಿಲ್ಲೆಗೆ ಆಗಮಿಸುವುದು ಬೇಡ. ನಿಮ್ಮ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಇಂಡುವಾಳು ಗ್ರಾಮದಲ್ಲಿ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಸುಮಲತಾ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಏನೇ ಆದರೂ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸುಮಲತಾ ಅವರಿಗೆ ಬೆಂಬಲ ನೀಡುತ್ತೇವೆ. ನಿಮ್ಮ ಬಗ್ಗೆ ನಮಗೆ ಅಪಾರವಾದ ಪ್ರೀತಿ ವಿಶ್ವಾಸವಿದೆ, ದಯವಿಟ್ಟು ಸಂಧಾನ ಮಾಡಲು ಮಂಡ್ಯಕ್ಕೆ ಬರಬೇಡಿ. ನಾವು ನಮ್ಮ ನಿರ್ಧಾರ ಬದಲಾಯಿಸುವುದಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ನಾವೇ ಕಟ್ಟಬೇಕು, ನಾವೇ ಉಳಿಸಬೇಕು, ನಾವೇ ಬೆಳೆಸಬೇಕು. ಏನಾದರೂ ಆದ್ರೆ ನಾವೇ ಅನುಭವಿಸಬೇಕು. ದಯಮಾಡಿ ಯಾವುದೇ ರಾಜ್ಯ ನಾಯಕರು ಸಂಧಾನಕ್ಕೆ ಬರಬೇಡಿ. ಬಂದರೂ ಅದರಲ್ಲಿ ನೀವು ಯಶಸ್ವಿಯಾಗಲ್ಲ. ನಾನು ದೊಡ್ಡವನಲ್ಲ, ನನ್ನ ಯಾರೂ ಸಂಧಾನಕ್ಕೆ ಕರೆದು ಮಾತನಾಡ್ತಾರೆ ಎಂದುಕೊಂಡಿಲ್ಲ. ಆದ್ರೆ ದೊಡ್ಡ ನಾಯಕರನ್ನ ಕರೆದು ಮಾತನಾಡಿದರೂ ಅದು ಅಲ್ಲಿನ ಮಾತಿಗಷ್ಟೇ ಸೀಮಿತ ಎಂದಿದ್ದಾರೆ.

    ಯಾವ ಮಂಡ್ಯ ನಾಯಕರು ಇಲ್ಲಿ ಬಂದು ಹೇಳುವುದಿಲ್ಲ. ಯಾಕೆಂದರೆ ನಾಯಕರಿಗೆ ಕಾರ್ಯಕರ್ತರೆ ಮುಖ್ಯ. ಕಾರ್ಯಕರ್ತರೆಲ್ಲರೂ ಈಗ ಸುಮಲತಾ ಪರ ಇರಬೇಕೆಂದು ನಿರ್ಧರಿಸಿದ ಮೇಲೆ ನಾನಾಗಲಿ ನನ್ನ ಮೇಲ್ಮಟ್ಟದವರಾಗಿ ಏನು ಮಾಡಲು ಸಾಧ್ಯವಿಲ್ಲ. ದಯವಿಟ್ಟು ವರಿಷ್ಠರು ಸಂಧಾನಕ್ಕೆ ಬಾರದೇ ಅವರ ಘನತೆಯನ್ನ ಹೆಚ್ಚಿಸಿಕೊಳ್ಳಲಿ. ನಾವು ಸುಮಲತಾ ಪರವಾಗಿ ಇರುತ್ತೇವೆ ಎಂದರು.

    ನಾವು ಪಕ್ಷದ ಬಗೆಗೆ ಗೌರವ ಇಟ್ಟುಕೊಂಡಿರೋರು ಆದ್ರೆ, ಪಕ್ಷದವರಿಗೆ ಕಾರ್ಯಕರ್ತರ ಬಗ್ಗೆ ಗೌರವ ಇಲ್ಲ. ಕಾರ್ಯಕರ್ತರ ಭಾವನೆಗಳನ್ನ ಅರ್ಥ ಮಾಡಿಕೊಳ್ಳದವರೇ ಇರೋದ್ರಿಂದ ನಾವು ಸುಮಲತಾ ಪರ ಇರುತ್ತೇವೆ. ನಾನೊಬ್ಬನೇ ಅಲ್ಲ ಮುಂದೆ ಬಾರದೇ ಇರುವ ಹಲವು ಜನರು ಸುಮಲತಾರನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದರು.

    ನಾವು ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಸಾಧ್ಯತೇ ಇಲ್ಲ. ಜಿಲ್ಲೆಯಲ್ಲಿ ಪಕ್ಷದ ಅಳಿವು ಉಳಿವಿಗಾಗಿ ಅಂಬರೀಶ್ ಸಹ ದುಡಿದಿದ್ದಾರೆ. ಅವರಿಲ್ಲದ ವೇಳೆಯಲ್ಲಿ ನಾವು ಅವರ ಕುಟುಂಬದ ಜೊತೆ ನಿಲ್ಲಬೇಕು. ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿರುವ ಸುಮಲತಾ ಅವರ ಗೆಲುವಿಗೆ ಶ್ರಮ ಹಾಕಬೇಕಿದೆ ಎಂದು ತಿಳಿಸಿದರು.

  • ಪಕ್ಷೇತರರಾಗಿ ಸ್ಪರ್ಧಿಸಿದ್ರೂ ಸುಮಲತಾ ಪರವಾಗಿಯೇ ಕೆಲಸ ಮಾಡ್ತೇವೆ- ಕೆಪಿಸಿಸಿ ಸದಸ್ಯ

    ಪಕ್ಷೇತರರಾಗಿ ಸ್ಪರ್ಧಿಸಿದ್ರೂ ಸುಮಲತಾ ಪರವಾಗಿಯೇ ಕೆಲಸ ಮಾಡ್ತೇವೆ- ಕೆಪಿಸಿಸಿ ಸದಸ್ಯ

    ಮಂಡ್ಯ: ಒಂದು ವೇಳೆ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೇ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ರೆ, ನಾವು ಅವರ ಪರವಾಗಿಯೇ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೈತ್ರಿಯಾದರೂ ಮಂಡ್ಯದಲ್ಲಿ ಮಾತ್ರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸಾಧ್ಯವಿಲ್ಲ ಎಂಬ ಸಂದೇಶವನ್ನು ವರಿಷ್ಠರಿಗೆ ರವಾನಿಸಿದ್ದಾರೆ.

    ಇಂದಿನಿಂದ ಐದು ದಿನಗಳ ಕಾಲ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಪ್ರವಾಸ ಮಾಡಲಿದ್ದು, ಕಾಂಗ್ರೆಸ್ ಮುಖಂಡರು ಮತ್ತು ಅಂಬರೀಶ್ ಅಭಿಮಾನಿಗಳನ್ನು ಭೇಟಿ ಮಾಡಿ ಚುನಾವಣಾ ಸಂಬಂಧ ಮಾತುಕತೆ ನಡೆಸಲಿದ್ದಾರೆ.

    ಮಂಡ್ಯ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿ ಸುಮಲತಾ ಅಂಬರೀಶ್ ಈಗಾಗಲೇ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಮುಖಂಡರ ಭೇಟಿ ಮಾಡಿದ್ದಾರೆ. ಆದರೆ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಮಗ ನಿಖಿಲ್‍ಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಈಗಾಗಲೇ ಮೈತ್ರಿ ಪಕ್ಷದಲ್ಲಿ ತೆರೆಮರೆ ಮಾತುಕತೆ ನಡೆಯುತ್ತಿದೆ.

    ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹಿಂದಿನಿಂದಲೂ ಬದ್ಧ ವೈರಿಗಳಾಗಿದ್ದು, ಸುಮಲತಾ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ರು ಅವರ ಪರ ಚುನಾವಣೆ ಮಾಡಲು ಬಹುತೇಕ ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇಷ್ಟೆಲ್ಲ ಬೆಳವಣಿಗೆ ನಡುವೆ ಸುಮಲತಾ ಅವರು ಇಂದಿನಿಂದ ಐದು ದಿನಗಳ ಮಂಡ್ಯ ಪ್ರವಾಸ ಮಾಡುತ್ತಿದ್ದು ಕುತೂಹಲ ಮೂಡಿಸಿದೆ.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀರಂಗಪಟ್ಟಣದಲ್ಲಿ ರಂಗೇರುತ್ತಿದೆ ಚುನಾವಣೆ ಕಾವು- ಮತದಾರರ ಸೆಳೆಯಲು ಕೈ ನಾಯಕರಿಂದ ಭರ್ಜರಿ ಬಾಡೂಟ

    ಶ್ರೀರಂಗಪಟ್ಟಣದಲ್ಲಿ ರಂಗೇರುತ್ತಿದೆ ಚುನಾವಣೆ ಕಾವು- ಮತದಾರರ ಸೆಳೆಯಲು ಕೈ ನಾಯಕರಿಂದ ಭರ್ಜರಿ ಬಾಡೂಟ

    ಮಂಡ್ಯ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರನ್ನು ಸೆಳೆಯಲು ಮಂಡ್ಯದಲ್ಲಿ ಭರ್ಜರಿ ಬಾಡೂಟದ ವ್ಯವಸ್ಥೆಯನ್ನು ನಾಯಕರು ಜೋರಾಗಿ ಮಾಡುತ್ತಿದ್ದಾರೆ.

    ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಇಂದು ಇಂಡವಾಳು ಗ್ರಾಮದಲ್ಲಿ ಸಾವಿರಾರು ಕಾರ್ಯಕರ್ತರಿಗೆ ಬಾಡೂಟ ಹಾಕಿಸುವ ಮೂಲಕ ಭರ್ಜರಿ ಚುನಾವಣೆ ಪ್ರಚಾರ ಮಾಡಿದ್ರು. ಮೊಟ್ಟೆ, ಚಿಕನ್, ಮಟನ್, ಗೀರೈಸ್ ಸೇರಿದಂತೆ ಬಗೆ ಬಗೆಯ ಭಕ್ಷ್ಯ ಭೋಜನದ ವ್ಯವಸ್ಥೆಯನ್ನು ಕಾರ್ಯಕರ್ತರಿಗೆ ಮಾಡಲಾಗಿತ್ತು.

    ಶ್ರೀರಂಪಟ್ಟಣ ಕ್ಷೇತ್ರದ ಶಾಸಕರಾಗಿರುವ ರಮೇಶ್‍ಬಾಬು ಬಂಡಿಸಿದ್ದೇಗೌಡ ಜೆಡಿಎಸ್‍ನಿಂದ ಈಗಾಗಲೇ ಅಮಾನತ್ತಾಗಿದ್ದಾರೆ. ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಖಚಿತ ಎಂಬ ಮಾತು ಕೇಳಿಬರುತ್ತಿದೆ.

    ಆದ್ರೆ ಎಲ್ಲಾ ಊಹಾಪೋಹವನ್ನು ನಿರಾಕರಿಸುತ್ತಿರುವ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ, ರಮೇಶ್‍ಬಾಬು ಬಂಡಿಸಿದ್ದೇಗೌಡ ಅವರಿಗೆ ಕಾಂಗ್ರೆಸ್‍ನಿಂದ ಎಲ್ಲಾ ರೀತಿಯ ಲೆಕ್ಕ ಚುಕ್ತಾ ಮಾಡಲಾಗಿದೆ. ಅವರಿಗೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡುವುದಿಲ್ಲ. ನಾನೂ ಕೂಡ ಕಾಂಗ್ರೆಸ್ ಪಕ್ಷದ ವರಿಷ್ಠರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಅವರೂ ಕೂಡ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಪ್ರಚಾರ ಶುರು ಮಾಡಿದ್ದೇನೆ ಅಂತಿದ್ದಾರೆ.

    ಪ್ರಚಾರದಲ್ಲಿ ಪಾಲ್ಗೊಂಡು ಭರ್ಜರಿ ಬಾಡೂಟ ಸವಿದ ಕಾರ್ಯಕರ್ತರು ನಮ್ಮ ಸಚ್ಚಿಯಣ್ಣ ಚುನಾವಣೆಯಲ್ಲಿ ಗೆಲ್ಲೋದು ಗ್ಯಾರಂಟಿ ಅಂತಿದ್ದಾರೆ. ಒಟ್ಟಾರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ.