Tag: ಸಚಿವ

  • ಮಂತ್ರಿಯಾಗೋ ಮೊದ್ಲೇ ತಿಮ್ಮಾಪುರ್ ವಿರುದ್ಧ ದೂರು- ರಾಜಭವನದ ಕದ ತಟ್ಟಿದ ಬಿಜೆಪಿ

    ಮಂತ್ರಿಯಾಗೋ ಮೊದ್ಲೇ ತಿಮ್ಮಾಪುರ್ ವಿರುದ್ಧ ದೂರು- ರಾಜಭವನದ ಕದ ತಟ್ಟಿದ ಬಿಜೆಪಿ

    ಬೆಂಗಳೂರು: ಸಚಿವ ಸ್ಥಾನ ಅಲಂಕರಿಸುವ ಮುನ್ನವೇ ಪರಿಷತ್ ಸದಸ್ಯ ಆರ್‍ಬಿ ತಿಮ್ಮಾಪುರ್ ವಿರುದ್ಧ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.

    ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‍ನ ಪರಿಷತ್ ಸದಸ್ಯರ ಪ್ರಾಕ್ಸಿ ಮತದಾನ ರಾಜಭವನದ ಅಂಗಳಕ್ಕೆ ತಲುಪಿದೆ. ಜಗದೀಶ್ ಶೆಟ್ಟರ್ ,ಆರ್ ಅಶೋಕ್ ನೇತೃತ್ವದ ನಿಯೋಗ ರಾಜ್ಯಪಾಲ ವಜುಭಾಯ್ ವಾಲಾ ಅವರನ್ನ ಭೇಟಿಯಾಗಿ ತಿಮ್ಮಾಪುರ್ ಸೇರಿದಂತೆ ಒಟ್ಟು ಎಂಟು ಪರಿಷತ್ ಸದಸ್ಯರ ಅನರ್ಹತೆಗೆ ಒತ್ತಾಯ ಮಾಡಿದೆ. ನಿಯೋಗದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಅರವಿಂದ ಲಿಂಬಾವಳಿ ಭಾಗಿಯಾಗಿದ್ದಾರೆ.

    ಪರಿಷತ್ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಲು ನಿರ್ದೇಶನ ನೀಡಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಅಲ್ಲದೆ ಇವತ್ತು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಆರ್.ಬಿ.ತಿಮ್ಮಾಪುರ್ ಅವರನ್ನ ಸಚಿವ ಸ್ಥಾನಕ್ಕೆ ಪರಿಗಣಿಸಬಾರದು. ಅವರನ್ನ ಅನರ್ಹಗೊಳಿಸಬೇಕು ಅಂತಾ ಬಿಜೆಪಿ ಮನವಿ ಮಾಡಿದೆ.

  • ಡಿವಿಎಸ್ ಕಾರಿಗೆ ಪೊಲೀಸರ ತಡೆ – 200 ಮೀಟರ್ ದೂರದಲ್ಲೇ ಖಾಕಿ ಬ್ರೇಕ್

    ಡಿವಿಎಸ್ ಕಾರಿಗೆ ಪೊಲೀಸರ ತಡೆ – 200 ಮೀಟರ್ ದೂರದಲ್ಲೇ ಖಾಕಿ ಬ್ರೇಕ್

    ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ಬಿಜೆಪಿ ರಾಜಕೀಯ ವ್ಯವಾಹಾರಗಳ ಸಭೆ ಇಂದು ಬೆಳಗ್ಗೆ 8 ಗಂಟೆಗೆ ನಡೆಯಿತು.

    ಬಿಜೆಪಿ ಕಚೇರಿ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸಭೆಗೆ ಆಗಮಿಸಿದ ಕೇಂದ್ರ ಸಚಿವ ಸದಾನಂದಗೌಡರನ್ನು ಪೊಲೀಸರು ಕಾಡು ಮಲ್ಲೇಶ್ವರ ದೇವಸ್ಥಾನದ ಬಳಿಯೆ ಕಾರು ತಡೆದ್ರು.

    ಈ ಹಿನ್ನೆಲೆಯಲ್ಲಿ ಅಲ್ಲಿಂದ ಬಿಜೆಪಿ ಕಚೇರಿವರೆಗೆ ನಡೆದುಕೊಂಡು ಬಂದ ಡಿವಿಎಸ್ ತಮ್ಮ ಕಾರು ತಡೆದದ್ದಕ್ಕೆ, ಕಚೇರಿ ಮುಂಭಾಗದಲ್ಲಿ ಇದ್ದ ಎಸಿಪಿ ಬಡಿಗೇರ್ ರನ್ನು ತರಾಟೆಗೆ ತಗೆದುಕೊಂಡರು. ಕೇಂದ್ರ ಸಚಿವರನ್ನು ಬಿಡುವುದಿಲ್ಲ ಅಂದ್ರೆ ಇದು ಶೇಮ್‍ಲೆಸ್, ಕೇಂದ್ರ ಸಚಿವರ ಜೊತೆ ನಡೆದುಕೊಳ್ಳುವ ಪರಿಯೇ ಎಂದು ಕಿಡಿಕಾರಿದ್ರು.

    ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿಯ ಒಡಕನ್ನು ಸರಿಪಡಿಸ್ತಾ ಇದ್ರೆ ಇತ್ತ ತುಮಕೂರು ಜಿಲ್ಲೆಯಲ್ಲಿ ನ ಬಿಜೆಪಿ ಭಿನ್ನಮತ ಮುಂದುವರೆದಿದೆ. ಮಾಜಿ ಸಚಿವ ಸೊಗಡು ಶಿವಣ್ಣ ಶಾ ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ಭಿನ್ನರಾಗ ಮುಂದುವರೆಸಿದ್ದಾರೆ. ತನಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. ಹಾಗಾಗಿ ಆ ಕಾರ್ಯಕ್ರಮಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಮುಂದಿನ ಬಾರಿ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ. ಅಮಿತ್ ಶಾ ಅವರೇ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಅಮಿತಾ ಶಾ ಅವರಿಗೆ ರಾಜ್ಯವನ್ನು ಹೇಗೆ ನಿಭಾಯಿಸಬೇಕು ಅನ್ನೋದು ಗೊತ್ತಿದೆ. ಹಾಗಾಗಿ ಎಲ್ಲವೂ ಒಳ್ಳೆಯದಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಅವಹೇಳನಕಾರಿ ಹೇಳಿಕೆ- ರೈ ವಿರುದ್ಧ ಬಿಜೆಪಿ ದೂರು

    ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಅವಹೇಳನಕಾರಿ ಹೇಳಿಕೆ- ರೈ ವಿರುದ್ಧ ಬಿಜೆಪಿ ದೂರು

    ಮಂಗಳೂರು: ಕರಾವಳಿಯ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರನ್ನು ಅವಹೇಳನ ಮಾಡಿದ ಸಚಿವ ರಮಾನಾಥ ರೈ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಸ್ಥಳೀಯ ಬಿಜೆಪಿ ಮುಖಂಡ ದಿನೇಶ್ ಅಮ್ಟೂರ್ ಸಚಿವರ ವಿರುದ್ಧ ದೂರು ನೀಡಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಶನಿವಾರ ರಾತ್ರಿ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ರಮಾನಾಥ ರೈ ಅವರು ಜಿಲ್ಲಾ ಎಸ್ಪಿ ಭೂಷಣ್ ಜಿ ಬೊರಸೆಯವರನ್ನು ಪಕ್ಷದ ಕಾರ್ಯಕರ್ತರ ನಡುವೆ ಕೂರಿಸಿ ಪ್ರಭಾಕರ್ ಭಟ್ ಅವರನ್ನು ಬಂಧಿಸುವಂತೆ ಕ್ಲಾಸ್ ತೆಗೆದುಕೊಂಡಿದ್ದರು. ಅಲ್ಲದೇ ಪ್ರಭಾಕರ್ ಭಟ್ ರನ್ನು ಏಕವಚನದಲ್ಲಿ ನಿಂದಿಸಿದ್ದರು. ರೈ ಹೇಳಿಕೆಗೆ ಇದೀಗ ತೀವ್ರ ವಿರೋಧ ಕಂಡುಬಂದಿದ್ದು ಸಚಿವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.

    ಏನಿದು ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಇತ್ತೀಚೆಗೆ ನಡೆದ ಗಲಭೆಯ ಹಿನ್ನಲೆಯಲ್ಲಿ ಉಸ್ತುವಾರಿ ಸಚಿವ ರಮಾನಾಥ ರೈ ಕೊನೆಯ ಗಳಿಗೆಯಲ್ಲಿ ಪೊಲೀಸರ ಮೇಲೆಯೇ ಕಿಡಿಕಾರಿದ್ದರು. ಶನಿವಾರ ರಾತ್ರಿ ಜಿಲ್ಲಾ ಎಸ್‍ಪಿಯನ್ನು ಬಂಟ್ವಾಳ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡ ಸಚಿವ ರೈ ಎಸ್‍ಪಿಯನ್ನು ತರಾಟೆಗೆ ತೆಗೆದುಕೊಂಡು ಯಾರೇ ದೂರು ಕೊಟ್ಟರು ಕ್ರಮಕೈಗೊಳ್ಳಬೇಕು. ಮಾತ್ರವಲ್ಲ ಆಎರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಯಾರೇ ದೂರು ನೀಡಿದರೂ ಪ್ರಕರಕಣ ದಾಖಲಿಸಿಕೊಂಡು ಆತನನ್ನು ಬಂಧಿಸಬೇಕು. ಬಂಧನ ಬಳಿಕ ಆತನ ಪವರ್ ಏನೆಂಬುದು ಗೊತ್ತಾಗುತ್ತದೆ. ಇದೇನು ಮಂಡ್ಯ ಅಲ್ಲ ಇದು ಇಂಡಿಯಾ ಎಂದು ಎಸ್‍ಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಕಲ್ಲಡ್ಕ ಪ್ರಭಾಕರ ಭಟ್ ಆರ್‍ಎಸ್‍ಎಸ್ ಮುಖಂಡರಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಕೋಮು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ದೂರುಗಳು ದಾಖಲಾಗಿತ್ತು. ಆದರೆ ಯಾವುದೇ ಪ್ರಕರಣದಲ್ಲೂ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಬಂಧನವಾಗಿಲ್ಲ. ಇದೀಗ ಮೊನ್ನೆ ನಡೆದ ಗಲಭೆಯಲ್ಲೂ ಭಟ್ ಕೈವಾಡ ಇದೆ ಎಂದು ಸ್ಥಳೀಯರು ಆರೋಪಿಸಿದ್ದು, ದೂರು ದಾಖಲಿಸಲು ಹೋದವರ ದೂರನ್ನು ಪೊಲೀಸರು ಸ್ವೀಕರಿಸಿಲ್ಲ ಅನ್ನುವ ಆರೋಪ ಕೇಳಿಬಂದಿತ್ತು.

    https://www.youtube.com/watch?v=0TjehsPe2VA

  • ಕಲ್ಲಡ್ಕ ಪ್ರಭಾಕರ್ ಭಟ್ ಪುಕ್ಕಲ: ರಮಾನಾಥ ರೈ

    ಕಲ್ಲಡ್ಕ ಪ್ರಭಾಕರ್ ಭಟ್ ಪುಕ್ಕಲ: ರಮಾನಾಥ ರೈ

    ಮಂಗಳೂರು: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಭಟ್ ಒಬ್ಬ ಪುಕ್ಕಲ. ಅವನನು ಅರೆಸ್ಟ್ ಮಾಡಿದ್ರೂ ಏನೂ ಆಗಲ್ಲ ಅಂತಾ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.

    ರಮಾನಾಥ ರೈ ಜಿಲ್ಲಾ ಎಸ್‍ಪಿ ಭೂಷಣ್ ರಾವ್ ಬೋರಸೆಯವರನ್ನು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ವಿಡಿಯೋದಲ್ಲಿ, “ಗಲಾಟೆ ಮಾಡೋದಿಲ್ಲ, ವಯಸ್ಸಾದವರು. ನನಗೆ ಎಲ್ಲಾ ಹಂಡ್ರೆಡ್ ಪರ್ಸೆಂಟ್ ಗೊತ್ತು, ನೀವು ಮನೆಯವರನ್ನು ಕರೆದುಕೊಂಡು ಹೋದ್ರೆ, ಕಾಂಗ್ರೆಸ್‍ನವರನ್ನೂ ಕೂಡ ಕರೆದುಕೊಂಡು ಹೋಗುವುದು. ಇದು ಮಂಡ್ಯ ಅಲ್ಲ ಇಂಡಿಯಾ ಅಂತ. ನೀವು ಮಂಡ್ಯದಿಂದ ಬಂದಿದ್ದೀರಿ, ಇಲ್ಲಿ ವಿಷ್ಯ ಬೇರೇನೇ ಇದೆ” ಅಂತಾ ಹೇಳಿರುವ ದೃಶ್ಯವಿದೆ.

    ನೇತ್ರಾವತಿ ಹೋರಾಟಗಾರರು ಅದು ಮಾಡ್ತಾರೆ, ಇದು ಮಾಡ್ತಾರೆ ಅಂತೀರಿ. ಆದ್ರೆ ಏನೂ ಮಾಡಲ್ಲ, ಪ್ರಭಾಕರ್ ಅರೆಸ್ಟ್ ಮಾಡಿದ್ರೂ ಕೂಡ ಏನೂ ಮಾಡಲ್ಲ, ಇದನ್ನು ನಾನು ಪ್ರಮಾಣಮಾಡಿ ಹೇಳ್ತೀನಿ. ಅವನು ಭಾಷಣ ಮಾಡಿದ್ರೆ ನೀವು ಆತನ ವಿರುದ್ಧ 307 ಕ್ರಿಮಿನಲ್ ಕೇಸ್ ಹಾಕಿ. ಆತ ಹೊರಗೆ ಬಂದ್ರೆ ಹೇಳಿದಾಗೆ ಕೇಳ್ತೀನಿ. ಅವನು ಅಷ್ಟು ದೊಡ್ಡ ವ್ಯಕ್ತಿಯಲ್ಲ, ಎಲೆಕ್ಷನ್ ಟೈಂನಲ್ಲಿ ನಾನು ಅವನನ್ನು ಇಲ್ಲಿಂದ ಓಡಿಸ್ತೀನಿ. ನಾನಲ್ಲ ನಾನಲ್ಲ ಅಂತ ಅವನ ಜೊತೆ ಇದ್ದ ಹುಡುಗ್ರು ಈ ಬಗ್ಗೆ ಜೋಕ್ ಮಾಡಿದ್ರು ಅಂತಾ ಸಚಿವರು ಹೇಳಿದ್ದಾರೆ.

    https://www.youtube.com/watch?v=0TjehsPe2VA