Tag: ಸಚಿವ

  • ಬೆಲ್ಲದ್‍ಗೆ ತಪ್ಪಿದ ಸಚಿವ ಸ್ಥಾನ – ಅವಳಿ ನಗರದಲ್ಲಿ ಆಕ್ರೋಶ

    ಬೆಲ್ಲದ್‍ಗೆ ತಪ್ಪಿದ ಸಚಿವ ಸ್ಥಾನ – ಅವಳಿ ನಗರದಲ್ಲಿ ಆಕ್ರೋಶ

    ಧಾರವಾಡ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಶಾಸಕರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಧಾರವಾಡ ನಗರದ ಜುಬ್ಲಿ ವೃತ್ತದಲ್ಲಿ ಏಕಾಏಕಿ ರಸ್ತೆ ತಡೆಮಾಡಿದ ಕಾರ್ಯಕರ್ತರು, ಬೆಲ್ಲದ್ ಪರ ಘೋಷಣೆ ಕೂಗಿದರು. ಮತ್ತೊಂದು ಕಡೆ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿರುವ ನವನಗರದಲ್ಲಿ ಬೆಲ್ಲದ ಬೆಂಬಲಿಗರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಬಿಎಸ್ ಯಡಿಯೂರಪ್ಪ ಭಾವಚಿತ್ರದ ಮೇಲೆ ಧಿಕ್ಕಾರ ಎಂದು ಬರೆದು ಆಕ್ರೋಶ ವ್ಯಕ್ತ ಪಡಿಸಿದರು.

    ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಬೆಲ್ಲದ್ ಬೆಂಬಲಿಗರು, ಅವರ ಭಾವಚಿತ್ರ ಹಿಡಿದು ಸಚಿವ ಸ್ಥಾನಕ್ಕೆ ಆಗ್ರಹಿಸಿದರು. ಅಲ್ಲದೇ ಸಿಎಂ ರೆಸ್‍ನಲ್ಲಿದ್ದ ಬೆಲ್ಲದ್‍ಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

    ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ಸಿ.ಪಿ ಯೋಗೇಶ್ವರ್, ಆರ್ ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಇವರುಗಳ ಹೆಸರನ್ನು ಈ ಬಾರಿ ಕೈ ಬಿಡಲಾಗಿದೆ.

  • ಅಧಿಕಾರ ಸಿಕ್ಕಾಗ ಮಾತ್ರವಲ್ಲ, ಅಧಿಕಾರ ಕಳೆದುಕೊಂಡಾಗಲೂ ಜನ ನನ್ನೊಂದಿಗಿದ್ದಾರೆ: ಡಿವಿಎಸ್

    ಅಧಿಕಾರ ಸಿಕ್ಕಾಗ ಮಾತ್ರವಲ್ಲ, ಅಧಿಕಾರ ಕಳೆದುಕೊಂಡಾಗಲೂ ಜನ ನನ್ನೊಂದಿಗಿದ್ದಾರೆ: ಡಿವಿಎಸ್

    ಚಿಕ್ಕಬಳ್ಳಾಪುರ: ಪಕ್ಷದ ಅಧ್ಯಕ್ಷರ ಸೂಚನೆ ಮೇರೆಗೆ ನಾನು ರಾಜೀನಾಮೆ ನೀಡಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು ಸಂತೋಷದಿಂದಲೇ ಇದ್ದೇನೆ. ಅಧಿಕಾರ ಸಿಕ್ಕಾಗ ಮಾತ್ರವಲ್ಲ, ಅಧಿಕಾರ ಕಳೆದುಕೊಂಡಾಗಲೂ ಜನ ನನ್ನೊಂದಿಗೆ ಇದ್ದಾರೆ. ಜನರ ಈ ಪ್ರೀತಿಗೆ ನಾನು ಚಿರರುಣಿ ಎಂದು ನಿರ್ಗಮಿತ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.

    ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇಂದು ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಮಾತನಾಡಿದ ಡಿವಿಎಸ್, ಜನರು ನನ್ನ ಮೇಲೆ ಇಟ್ಟಿರುವ ಅಪಾರ ಪ್ರೀತಿಗೆ ನಾನು ಯಾವತ್ತು ಚಿರರುಣಿ. ರಾಜ್ಯ ರಾಜಕಾರಣದ ಬಗ್ಗೆ ಈಗಲೇ ನಾನು ಏನು ಹೇಳಲಾಗುವುದಿಲ್ಲ. ಪಕ್ಷ ನೀಡುವ ಜವಾಬ್ದಾರಿ ಮತ್ತು ಸೂಚನೆ ಮೆರೆಗೆ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಬೇರೆ ಹುದ್ದೆಯ ಬಗ್ಗೆ ಮಾತನಾಡಲು ನಿರಾಕರಿಸಿದರು. ಇದನ್ನೂ ಓದಿ: ಸಿಎಂ ಆಗಿ ಕಟೀಲಿಗೆ ಬಂದಿದ್ದ ಡಿವಿಎಸ್ – 9 ವರ್ಷಗಳ ಬಳಿಕ ಅದೇ ದಿನ ರಾಜೀನಾಮೆ

    ಸದಾನಂದಗೌಡರ ಆಗಮನದ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೆಂಗಳೂರು ಉತ್ತರ ತಾಲೂಕಿನ ಡಿವಿಎಸ್ ಬೆಂಬಲಿಗರು ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಆಗಮಿಸಿ ಡಿವಿಎಸ್‍ಗೆ ಆತ್ಮಸ್ಥರ್ಯ ತುಂಬುವ ಕೆಲಸ ಮಾಡಿದರು. ವಿಮಾನ ನಿಲ್ದಾಣದಲ್ಲಿ ಕ್ಕಿಕ್ಕಿರಿದು ತುಂಬಿದ್ದ ಡಿವಿಎಸ್ ಬೆಂಬಲಿಗರು ಮುಂದಿನ ಸಿಎಂ ಸದಾನಂದಗೌಡ, ಜೈ ಎನ್ನುವ ಮೂಲಕ ಡಿವಿಎಸ್ ಅವರಿಗೆ ಜೈಕಾರ ಹಾಕಿದರು.

  • ಸುಳ್ಯದ ಅಟ್ಲೂರಿನಲ್ಲಿ 200 ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಿದ ಅಂಗಾರ

    ಸುಳ್ಯದ ಅಟ್ಲೂರಿನಲ್ಲಿ 200 ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಿದ ಅಂಗಾರ

    ಮಂಗಳೂರು: ಕೊರೊನಾ ಸಂಕಷ್ಟದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಮುಳ್ಯ ಅಟ್ಲೂರ್ ಮತ್ತು ಪ್ರಣವ್ ಫೌಂಡೇಶನ್ ಇವರ ಸಹಭಾಗಿತ್ವದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮುಳ್ಯ 6ನೇ ವಾರ್ಡ್‍ನ ಬಿಪಿಎಲ್ ಕಾರ್ಡ್‍ದಾರರಿಗೆ ಮೀನುಗಾರಿಕೆ ಬಂದರು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಫುಡ್ ಕಿಟ್ ವಿತರಣೆ ಮಾಡಿದರು.

    ಮುಳ್ಯ ಭಜನಾ ಮಂದಿರ ಆವರಣದಲ್ಲಿ ಫುಡ್ ಕಿಟ್ ವಿತರಣೆಗೆ ಅಂಗಾರ ಅವರು ಚಾಲನೆ ನೀಡಿದರು. ಸಚಿವರಿಗೆ ಗ್ರಾಮಸ್ಥರಿಂದ ಸನ್ಮಾನ ನಡೆದ ನಂತರ ಸಾಂಕೇತಿಕವಾಗಿ 10 ಜನರಿಗೆ ಕಿಟ್ ನೀಡಲಾಯಿತು. ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಅಜ್ಜಾವರ ಗ್ರಾ.ಪಂ ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಸದಸ್ಯೆ ರತ್ನಾವತಿ, ದೇವಪ್ಪಗೌಡ ಮುಳ್ಯ, ರುದ್ರಪ್ಪ ಗೌಡ, ಮನ್ಮಥ ಗೌಡ ಮುಳ್ಯ, ತಾರನಾಥ ಅತ್ಯಡ್ಕ, ಸುಳ್ಯ ಸಿ ಎ ಬ್ಯಾಂಕ್ ನಿರ್ದೇಶಕ ವಾಸುದೇವ ನಾಯಕ್, ಗುರುದತ್ ನಾಯಕ್, ಕಿಟ್ಟಣ್ಣ ರೈ ಮೇನಾಲ, ಪ್ರಭೋದ್ ಶೆಟ್ಟಿ ಮೇನಾಲ, ಸುನೀಲ್ ರೈ ಮೇನಾಲ, ಊರವರು ಭಾಗವಸಿದ್ದರು. ಇದನ್ನೂ ಓದಿ: ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಸುಳ್ಯ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ ಸ್ವಾಗತಿಸಿ, ನಾಗರಾಜ್ ಮುಳ್ಯ ವಂದಿಸಿದರು. ವಾರ್ಡ್ ವ್ಯಾಪ್ತಿಯ 200 ಕುಟುಂಬಗಳಿಗೆ ತಲಾ ಸಾವಿರದ ನೂರು ರೂ. ಮೌಲ್ಯದ ಆಹಾರದ ಕಿಟ್‍ನ್ನು ವಿತರಿಸಲಾಯಿತು.

     

  • ಸಿಎಂ ಪುತ್ರನ ಹೆಸರಲ್ಲಿ ರಾಮುಲು PA ಡೀಲ್..? – 3 ಆಡಿಯೋದಲ್ಲಿ 5 ಕೋಟಿಗೆ ಡಿಮ್ಯಾಂಡ್

    ಸಿಎಂ ಪುತ್ರನ ಹೆಸರಲ್ಲಿ ರಾಮುಲು PA ಡೀಲ್..? – 3 ಆಡಿಯೋದಲ್ಲಿ 5 ಕೋಟಿಗೆ ಡಿಮ್ಯಾಂಡ್

    – ಕೋಟಿ ಡೀಲ್‍ಗೆ ನೂರು ರೂಪಾಯಿ ಕೋಡ್‍ವರ್ಡ್
    – ಪ್ರಭಾವಿಗಳ ಒತ್ತಡಕ್ಕೆ ಮಣಿದ್ರಾ ಸಿಸಿಬಿ ಪೊಲೀಸರು..?
    – ನಂಗೆ ಗೊತ್ತಿಲ್ಲದೆ ಅರೆಸ್ಟ್ ಮಾಡಿದ್ದು ಸರೀನಾ ಅಂದ್ರು ರಾಮುಲು..?

    ಬೆಂಗಳೂರು: ಸಿಎಂ ಪುತ್ರ ವಿಜಯೇಂದ್ರ ಹಾಗೂ ಮೂವರು ಸಚಿವರ ಹೆಸರೇಳಿಕೊಂಡು ಗುತ್ತಿಗೆ, ವರ್ಗಾವಣೆ, ಕೆಲಸದ ಆಮಿಷವೊಡ್ಡಿ ಕೋಟಿ ಕೋಟಿ ದೋಖಾ ಮಾಡಿದರೂ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಆಪ್ತ ಸಹಾಯಕ ಬಚಾವ್ ಆಗಿದ್ದಾರೆ.

    ನೀರಾವರಿ ಇಲಾಖೆ ಸಬ್ ಕಾಂಟ್ರಾಕ್ಟ್ ನೀಡೋ ವಿಚಾರದಲ್ಲಿ ಮೂವರು ಗುತ್ತಿಗೆದಾರರೊಂದಿಗೆ ಸಚಿವ ಶ್ರೀರಾಮುಲು ಪಿಎ ರಾಜಣ್ಣ ಮಾತನಾಡಿದ್ದಾರೆ ಎನ್ನಲಾಗಿದ್ದು, ಅದರಲ್ಲಿ ಸಿಎಂ ಪುತ್ರ ವಿಜಯೇಂದ್ರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಅಂತ ಗೊತ್ತಾಗಿದೆ. 3 ಆಡಿಯೋದಲ್ಲಿ ಸುಮಾರು 5 ಕೋಟಿವರೆಗೆ ಪ್ರಸ್ತಾಪಿಸಿದ್ದಾರೆ. ಡೀಲ್ ಓಕೆಯಾದ್ರೆ ವಿಜಯೇಂದ್ರ ಹತ್ತಿರ ಮಾತನಾಡಿ ಸಹಿ ಹಾಕಿಸಿಕೊಡೋದಾಗಿಯೂ ರಾಮುಲು ಪಿಎ ಆಶ್ವಾಸನೆ ಕೊಟ್ಟಿದ್ದಾರೆ ಅಂತ ಹೇಳಲಾಗಿದೆ.

    ಸಿಎಂ ಪುತ್ರ ವಿಜಯೇಂದ್ರ ದೂರು ಕೊಟ್ಟಿದ್ಯಾಕೆ…?:
    * ಆಡಿಯೋ 1 – ಗುತ್ತಿಗೆದಾರನ ಬಳಿ 1 ಕೋಟಿ ಹಣಕ್ಕೆ ಬೇಡಿಕೆ!
    (1 ಕೋಟಿಗೆ 100 ರೂ. ಅಂತ ಕೋಡ್ ವರ್ಡ್)
    * ಆಡಿಯೋ 2 – ಗುತ್ತಿಗೆದಾರನ ಬಳಿ 3 ಕೋಟಿ ಹಣಕ್ಕೆ ಡಿಮ್ಯಾಂಡ್!
    (3 ಕೋಟಿಗೆ 300 ರೂ. ಅಂತ ಕೋಡ್ ವರ್ಡ್)
    * ಆಡಿಯೋ 3 – 75 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ!
    (75 ಲಕ್ಷಕ್ಕೆ 75 ರೂಪಾಯಿ ಅಂತ ಕೋಡ್ ವರ್ಡ್…..)

    ಪೊಲೀಸ್ ಫ್ರೆಶರ್: ಸಚಿವ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಕೇಸಲ್ಲಿ ಸಿಸಿಬಿ ಪೊಲೀಸರು ಒತ್ತಡಕ್ಕೆ ಒಳಗಾದ್ರಾ ಅನ್ನೋ ಸಂಶಯ ವ್ಯಕ್ತವಾಗಿದೆ. ಸಿಎಂ ಪುತ್ರ ವಿಜಯೇಂದ್ರ ದೂರು ಕೊಟ್ಟರೂ, ಕೇವಲ ವಿಚಾರಣೆಯನ್ನಷ್ಟೇ ನಡೆಸಿ, ಬಂಧನ ಮಾಡದೆ ರಾಮುಲು ಆಪ್ತನನ್ನು ಬಿಟ್ಟು ಕಳುಹಿಸಿದ್ದಾರೆ. ಬೆಳಗ್ಗೆಯಿಂದ ಪೊಲೀಸರ ಮೇಲೆ ರಾಮುಲು ಒತ್ತಡ ಹೇರಿದ್ದರಿಂದ ಯಾವುದೇ ಎಫ್‍ಐಆರ್ ಹಾಕದೆ ಧ್ವನಿ ಮಾದರಿ ಸಂಗ್ರಹ, ವಾಟ್ಸಪ್ ಚಾಟ್, ಡೀಲ್ ಆಡಿಯೋವನ್ನು ಪಡೆದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟು ಕಳುಹಿಸಿದ್ದಾರೆ. ಸಾಮಾನ್ಯರ ಮೇಲೆ ದೂರು ಬಂದಿದ್ದರೆ, ಸಿಸಿಬಿ ಪೊಲೀಸರು ಹೀಗೆಯೇ ವರ್ತಿಸುತ್ತಿದ್ದಾರಾ..? ಪ್ರಭಾವಿಗಳ ಕೇಸ್ ಅಂತ ಪೊಲೀಸರು ಬೇಕಾಬಿಟ್ಟಿಯಾಗಿ ವರ್ತಿಸಿದ್ರಾ ಅನ್ನೋ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ವಿಜಯೇಂದ್ರನೇ ಡಿ ಪ್ಯಾಕ್ಟರ್ ಸಿಎಂ, ಯಡಿಯೂರಪ್ಪ ಡಿ ಜೀರೋ ಸಿಎಂ: ಸಿದ್ದರಾಮಯ್ಯ

    ಸಿಸಿಬಿ ಪೊಲೀಸರು ಎಡವಿದ್ದೆಲ್ಲಿ….?
    ಸೈಬರ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ವೇಳೆ ಎಡವಟ್ಟು ಮಾಡಿದ್ದಾರೆ. ರಾಮುಲು ಆಪ್ತನ ವಿರುದ್ಧ ಸಿಸಿಬಿ ಹಾಕಿರೋದು 2 ಸೆಕ್ಷನ್ ಅಷ್ಟೇ. ಐಟಿ ಆಕ್ಟ್ ಸೆಕ್ಷನ್ 66 ಮತ್ತು ಐಪಿಸಿ ಸೆಕ್ಷನ್ 420 ಅಡಿ ಎಫ್‍ಐಆರ್ ದಾಖಲಿಸಲಾಗಿದೆ. ಐಟಿ ಆಕ್ಟ್ 66- ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಬಿಡುಗಡೆ ಮಾಡಲಾಗಿದೆ. ಐಪಿಸಿ 420- ವಂಚನೆ ಆರೋಪ(ವಿಜಯೇಂದ್ರ ತನಗೆ ಆಗಿರೋ ವಂಚನೆ ಉಲ್ಲೇಖಿಸಿಲ್ಲ). ಎಫ್‍ಐಆರ್ ಪ್ರಾಥಮಿಕ ಸಾರಂಶದಲ್ಲಿ ಹೆಸರಷ್ಟೇ ಬಳಕೆ ಮಾಡಲಾಗಿದೆ.

    ಇತ್ತ ತಮ್ಮ ಆಪ್ತ ಸಹಾಯಕ ರಾಜಣ್ಣ ಕೋಟಿ ಕೋಟಿ ಡೀಲ್ ಮಾಡಿ ವಂಚನೆ ಎಸಗಿದ್ದಾನೆ ಅನ್ನೋ ಆರೋಪಕ್ಕಿಂತ ವಿಜಯೇಂದ್ರ ತಮಗೆ ನೆಪಮಾತ್ರಕ್ಕೂ ಮಾಹಿತಿ ಕೊಟ್ಟಿಲ್ಲ ಅಂತ ಸಚಿವ ಶ್ರೀರಾಮುಲು ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ. ಆಪ್ತ ರಾಜಣ್ಣನನ್ನು ಸಿಸಿಬಿಯವರು ಎತ್ತಾಕಿಕೊಂಡು ಹೋದ್ರು ಎಂಬ ಸುದ್ದಿ ಕೇಳಿ, ಆಪ್ತರ ಬಳಿ ವಿಜಯೇಂದ್ರ ಬಗ್ಗೆ ರಾಮುಲು ಕೂಗಾಡಿದ್ರಂತೆ. ನನಗೆ ಹೇಳಿದ್ರೆ ಆಗ್ತಿರಲಿಲ್ವಾ..? ನಾನು ಸರಿ ಮಾಡ್ತಿರಲಿಲ್ವಾ..? ನನಗೆ ಕೆಟ್ಟ ಹೆಸರು ತರಬೇಕು ಅಂತಾನೆ ಹೀಗೆ ಮಾಡಿದಂತಿದೆ. ನಾನು ವಿಜಯೇಂದ್ರರನ್ನು ಭೇಟಿ ಮಾಡಲ್ಲ, ಅದೇನಾಗುತ್ತೋ ಆಗ್ಲಿ ಅಂತಾ ಗರಂ ಆಗಿದ್ರು ಎನ್ನಲಾಗಿದೆ.

    ಇಡೀ ರಾತ್ರಿ ಸಚಿವ ರಾಮುಲು ನಿದ್ದೆ ಕೂಡ ಮಾಡಿರಲಿಲ್ಲ ಅಂತಾ ತಿಳಿದುಬಂದಿದೆ. ಬೆಳಗ್ಗೆ ರಾಮುಲು ಆಡಿದ ಮಾತುಗಳಲ್ಲೂ ಇದೇ ಧ್ವನಿಸ್ತಾ ಇತ್ತು. ತಪ್ಪು ಯಾರು ಮಾಡಿದ್ರು ತಪ್ಪು.. ತನಿಖೆ ನಡೀತಿದೆ ಅಂದ್ರು. ಹಿರಿಯ ಮಂತ್ರಿಯಾಗಿ ತಮಗೆ ಈ ವಿಚಾರದಲ್ಲಿ ಅವಮಾನವಾಗಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ರು. ಇದಾದ ಕೂಡಲೇ ಸಿಎಂ ಭೇಟಿ ಮಾಡಿ ರಾಜಣ್ಣನ ಬಿಡುಗಡೆಗೆ ಒತ್ತಡ ಹೇರಿದ್ರು. ಕೆಲವೇ ಕ್ಷಣಗಳಲ್ಲಿ ಆರೋಪಿ ರಾಜಣ್ಣನನ್ನು ಸಿಸಿಬಿ ಬಿಟ್ಟು ಕಳಿಸಿದ್ದು ಕಾಕತಾಳಿಯ.

    ಟ್ವೀಟ್ ಸಮರ: ಸಿಎಂ ಪುತ್ರ ವಿಜಯೇಂದ್ರ ಹಾಗೂ ರಾಮುಲು ಆಪ್ತ ಸಹಾಯಕ ರಾಜಣ್ಣ ಮಧ್ಯೆ ಟ್ವೀಟ್ ಸಮರ ನಡೆದಿದೆ. ರಾಮುಲು ಪಿಎ ವಿರುದ್ಧ ದೂರು ನೀಡಿದ್ದನ್ನು ವಿಜಯೇಂದ್ರ ಸಮರ್ಥಿಸಿಕೊಂಡಿದ್ದಾರೆ. ಹಾಗೆಯೇ ರಾಮುಲು ಆಪ್ತ ಸಹಾಯಕ, ಆರೋಪಿ ರಾಜಣ್ಣ ನಾನು ತಪ್ಪೇ ಮಾಡಿಲ್ಲ. ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಎಂದಿದ್ದಾರೆ. ವಿಜಯೇಂದ್ರ ಕರೆದು ಮಾತನಾಡಬಹುದಿತ್ತು ಅಂತಲೂ ಬೇಸರಿಸಿಕೊಂಡಿದ್ದಾರೆ. ಅಂದ ಹಾಗೇ ಬಳ್ಳಾರಿ ಮೂಲದ ರಾಜಣ್ಣ ಕಳೆದ 20 ವರ್ಷದಿಂದ ರಾಮುಲು-ಜನಾರ್ದನರೆಡ್ಡಿ ಬಲಗೈ ಬಂಟರಾಗಿದ್ದರು.

    ಸಚಿವ ರಾಮುಲು ಪಿಎ ರಾಜಣ್ಣ ವಿರುದ್ಧದ ಡೀಲ್ ಆರೋಪ, ಬಂಧನ ಬಿಡುಗಡೆ ಪ್ರಹಸನ.. ಸಹಜವಾಗಿಯೇ ವಿಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರಂತೂ ಸಿಎಂ ಕುಟುಂಬದ ವಿರುದ್ಧ, ಸಚಿವ ರಾಮುಲು ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ, ರಾಮುಲು ಪಿಎ, ವಿಜಯೇಂದ್ರ ಬಗ್ಗೆ ಮಾತನಾಡೋದು ನನ್ನ ಲೆವೆಲ್ ಅಲ್ಲ ಎನ್ನುತ್ತಾ ಜಾರಿಕೊಂಡಿದ್ದಾರೆ. ಇನ್ನೂ ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿಕಾಡಿರೋ ಮಾಜಿ ಸಚಿವ ರೇವಣ್ಣ, ಡಿನೋಟಿಫಿಕೇಶನ್ ಮುಖ್ಯಮಂತ್ರಿ ಯಡಿಯೂರಪ್ಪಗೆ ದೇವರೇ ಶಿಕ್ಷೆ ಕೊಡೋ ಕಾಲ ಬರುತ್ತೆ ಅಂತಾ ಶಪಿಸಿದ್ದಾರೆ.

  • ಪಂತರಪಾಳ್ಯದಲ್ಲಿ 200 ಹಾಸಿಗೆಗಳ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗೆ ಸೋಮಣ್ಣ ಭೂಮಿಪೂಜೆ

    ಪಂತರಪಾಳ್ಯದಲ್ಲಿ 200 ಹಾಸಿಗೆಗಳ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗೆ ಸೋಮಣ್ಣ ಭೂಮಿಪೂಜೆ

    ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡಿನ ಪಂತರಪಾಳ್ಯದಲ್ಲಿ ಸರ್ಕಾರಿ ಆಸ್ಪತ್ರೆ ಕಟ್ಟಡಕ್ಕೆ ವಸತಿ ಸಚಿವ ವಿ.ಸೋಮಣ್ಣ ಇಂದು ಭೂಮಿಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.

    ಈ ಆಸ್ಪತ್ರೆಯು 2.47 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿದ್ದು, ನಾಲ್ಕು ಮಹಡಿಗಳ ಈ ಸುಸಜ್ಜಿತ ಆಸ್ಪತ್ರೆಯ ನೆಲ ಮಹಡಿಯಲ್ಲಿ ತುರ್ತು ವಿಭಾಗ, ಮೈನರ್ ಒಟಿ ಹಾಗೂ ರೆಡಿಯಾಲಜಿ ವಿಭಾಗ ಇರಲಿದೆ. ಮೊದಲನೇ ಮಹಡಿಯಲ್ಲಿ ಶಸ್ತ್ತ ಚಿಕಿತ್ಸಾ ಕೊಠಡಿ ಸೇರಿದಂತೆ ಮತ್ತಿತರ ಪ್ರಮುಖ ಸೌಲಭ್ಯಗಳಿರುತ್ತವೆ. ಎರಡನೆ ಮಹಡಿ ಐಸಿಯು ಹಾಸಿಗೆಗಳನ್ನು ಒಳಗೊಂಡಿರುತ್ತದೆ, ಮೂರು ಹಾಗೂ ನಾಲ್ಕನೆ ಮಹಡಿಗಳಲ್ಲಿ ತಲಾ 100 ಹಾಸಿಗೆಗಳ ಪ್ರತ್ಯೇಕ ಕೊಠಡಿಗಳು ಸಿದ್ಧವಾಗಲಿದ್ದು, ಈ ಭಾಗದ ಪ್ರತಿಷ್ಟಿತ ಸರ್ಕಾರಿ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಈ ಸಂದರ್ಭದಲ್ಲಿ ಸಚಿವ ವಿ.ಸೋಮಣ್ಣ ಹೇಳಿದರು.

    ಕಾರ್ಯಕ್ರಮದಲ್ಲಿ ನಗರಪಾಲಿಕೆಯ ಮಾಜಿ ಸದಸ್ಯರಾದ ಸವಿತಾ ಕೃಷ್ಣ, ಶಕುಂತಲ ದೊಡ್ಡಲಕ್ಕಪ್ಪ, ರಾಜೇಶ್ವರಿ ಬೆಳಗೋಡು ಮುಂತಾದವರು ಭಾಗವಹಿಸಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಎರಡು ಡೆಲ್ಟಾ ಪ್ಲಸ್ ಕೇಸ್ ದಾಖಲು – ಸುಧಾಕರ್

  • ಜೂನ್ 14ರ ನಂತ್ರವೂ ಒಂದು ವಾರ ಹಾಸನದಲ್ಲಿ ಲಾಕ್‍ಡೌನ್ ಮುಂದುವರಿಕೆ: ಗೋಪಾಲಯ್ಯ

    ಜೂನ್ 14ರ ನಂತ್ರವೂ ಒಂದು ವಾರ ಹಾಸನದಲ್ಲಿ ಲಾಕ್‍ಡೌನ್ ಮುಂದುವರಿಕೆ: ಗೋಪಾಲಯ್ಯ

    ಹಾಸನ: ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗದ ಹಿನ್ನೆಲೆಯಲ್ಲಿ ಮತ್ತೊಂದು ವಾರ ಲಾಕ್‍ಡೌನ್ ಮುಂದುವಡಿiಸುತ್ತೇವೆಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹೇಳಿದ್ದಾರೆ.

    ಹಾಸನದಲ್ಲಿ ಸಿಎಂ ವಿಸಿ ಬಳಿಕ ಮಾತನಾಡಿದ ಅವರು, ಪ್ರತಿವಾರ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ, ಮುಂದಿನ ವಾರದೊಳಗೆ ಬಹಳಷ್ಟು ಕಡಿಮೆಯಾಗಲಿದೆ. 23 ಹಳ್ಳಿಗಳಲ್ಲಿ ಪಾಸಿಟಿವ್ ಗಳ ಸಂಖ್ಯೆ ಹೆಚ್ಚಾಗಿದೆ. ವೈದ್ಯರ ನಡೆ ಹಳ್ಳಿಯ ಕಡೆ ಎರಡನೇ ಸುತ್ತು ಆರಂಭ ಮಾಡಿದ್ದೇವೆ. ಸೋಂಕಿತರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಚಿಕಿತ್ಸೆ ಪಡೆಯಬೇಕೆಂದರು.

    ನಾಳೆ ಸಿಎಂ ಯಡಿಯೂರಪ್ಪ ಹಾಸನ ಜಿಲ್ಲೆಗೆ ಆಗಮಿಸಲಿದ್ದು, ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ವಿವರಿಸುತ್ತೇವೆ. ಈಗ ಇರುವ ಲಾಕ್ ಡೌನ್ ನನ್ನು ಜೂ. 14 ರ ಬಳಿಕವೂ ಒಂದು ವಾರ ವಿಸ್ತರಣೆ ಮಾಡುತ್ತೇವೆ ಎಂದು ತಿಳಿಸಿದ್ರು. ಇದನ್ನೂ ಓದಿ: 8 ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಸಭೆ – ಏನು ಚರ್ಚೆ ನಡೆಯಿತು?

    ಹಾಸನದಲ್ಲಿ ಈ ಹಿಂದೆ ವಾರದಲ್ಲಿ ಮೂರು ದಿನ, ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯವಸ್ತು ಖರೀದಿಸಲು ಅವಕಾಶ ನೀಡಲಾಗಿದ್ದು, ಉಳಿದ ನಾಲ್ಕುದಿನ ಸಂಪೂರ್ಣ ಲಾಕ್‍ಡೌನ್ ಘೋಷಿಸಲಾಗಿತ್ತು.

  • ಸಚಿವ ಸುಧಾಕರ್‌ಗೆ ಬೈದು ನಿಂದಿಸಿದ ಇಬ್ಬರು ಜೈಲುಪಾಲು..!

    ಸಚಿವ ಸುಧಾಕರ್‌ಗೆ ಬೈದು ನಿಂದಿಸಿದ ಇಬ್ಬರು ಜೈಲುಪಾಲು..!

    ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಸುಧಾಕರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಇಬ್ಬರು ಜೈಲುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ ಗಣೇಶ್ ಹಾಗೂ ಶಶಿಕುಮಾರ್ ಬಂಧಿತರು. ಕಳೆದ 2 ದಿನಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಂತಾಮಣಿ ಮೂಲದ 24 ವರ್ಷದ ಅನುಪಮಾ ಎಂಬ 8 ತಿಂಗಳ ಗರ್ಭಿಣಿ ಕೋವಿಡ್ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆಕೆಯ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಸರ್ಕಾರ, ಸಚಿವ ಸುಧಾಕರ್ ಹಾಗೂ ವೈದ್ಯರ ವಿರುದ್ಧ ಅವಾಚ್ಯ ಪದಗಳನ್ನ ಬಳಸಿ ಆಕ್ರೋಶ ಹೊರಹಾಕಿದ್ರು.

    ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಚಿವರು ಸಹ ಮುಜುಗರ ಅನುಭವಿಸುವಂತಾಗಿತ್ತು. ಮತ್ತೆ ಆಕ್ರೋಶಿತರು ಸಹ ಸಭ್ಯತೆಯ ಎಲ್ಲೆ ಮೀರಿ ಪದ ಬಳಕೆ ಮಾಡಿದ್ರು. ಹೀಗಾಗಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಅಂದು ಕೋವಿಡ್ ಆಸ್ಪತ್ರೆ ಬಳಿ ಕರ್ತವ್ಯನಿರತರಾಗಿದ್ದ ಎಎಸ್‍ಐ ಮುರುಳಿ ಈ ಸಂಬಂಧ ಕರ್ತವ್ಯಕ್ಕೆ ಅಡ್ಡಿ, ಮಾಸ್ಕ್ ಧರಿಸದೆ, ಸಾಮಾಜಿಕ ಅಂತ ಕಾಯ್ದುಕೊಳ್ಳದೇ, ಸಚಿವ ಸುಧಾಕರ್ ರವರ ವಿರುದ್ಧ ಜೋರು ಧ್ವನಿಯಲ್ಲಿ ನಿಂದಿಸಿದ್ರು. ಹೀಗಾಗಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ರು.

    ದೂರಿನನ್ವಯ ಸದ್ಯ ಮೃತಳ ತಂದೆ ಗಣೇಶ್, ಹಾಗೂ ಸಹೋದರ ಶಶಿಕುಮಾರ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ. ಆದೆ ಇದ್ರಲ್ಲಿ ಶಶಿಕುಮಾರ್ ಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಲಾಗಿದೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

  • ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಳ- ಆತಂಕದಿಂದ್ಲೇ ಸುಧಾಕರ್ ಮನವಿ

    ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಳ- ಆತಂಕದಿಂದ್ಲೇ ಸುಧಾಕರ್ ಮನವಿ

    – ಲಸಿಕೆ ಪಡೆದುಕೊಳ್ಳುವಂತೆ ಸಚಿವರು ಮನವಿ

    ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಾಗ್ಪುರವನ್ನು ಒಂದು ವಾರಗಳ ಕಾಲ ಲಾಕ್‍ಡೌನ್ ಮಾಡಲಾಗಿದೆ. ಈ ಬೆನ್ನಲ್ಲೇ ಸಚಿವ ಸುಧಾಕರ್ ಅವರು ರಾಜ್ಯದ ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಚಿವರು, ನೆರೆಯ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 13,000ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದು ನನ್ನನ್ನು ಚಿಂತೆಗೀಡುಮಾಡಿದೆ. ಇದನ್ನು ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಿ, ಹಬ್ಬ-ಹರಿದಿನಗಳು, ಸಭೆ-ಸಮಾರಂಭಗಳು ಏನೇ ಇದ್ದರೂ ಮಾಸ್ಕ್ ಧರಿಸಿವುದು, ಭೌತಿಕ ಅಂತರವನ್ನು ತಪ್ಪದೇ ಪಾಲಿಸಬೇಕು. ಜನಸಂದಣಿಯಿಂದ ದೂರವಿರಬೇಕು ಎಂದು ತಿಳಿಸಿದ್ದಾರೆ.

    ಕೆಲ ಖಾಸಗಿ ಶಾಲೆಗಳು ಸರ್ಕಾರದ ಅನುಮತಿ ಇಲ್ಲದಿದ್ದರೂ 1-6ನೇ ತರಗತಿಯ ಮಕ್ಕಳಿಗೆ ಶಾಲೆ ಪುನರಾರಂಭಿಸಿರುವುದರ ಬಗ್ಗೆ ದೂರು ಬಂದಿವೆ. ನಿಯಮ ಉಲ್ಲಂಘಿಸಿ ತರಗತಿಗಳನ್ನು ಪುನರಾರಂಭಿಸಿರುವ ಶಾಲೆಗಳ ವಿರುದ್ಧ ಪರವಾನಗಿ ರದ್ದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:

    60 ವರ್ಷ ಮೇಲ್ಪಟ್ಟವರು, 45 ವರ್ಷ ಮೇಲ್ಪಟ್ಟು ಸಹ-ಅಸ್ವಸ್ಥತೆ ಹೊಂದಿರುವವರು ತಪ್ಪದೇ ಆದಷ್ಟು ಬೇಗ ಕೊರೊನಾ ಲಸಿಕೆ ಪಡೆಯಬೇಕೆಂದು ಕೋರುತ್ತೇನೆ. ನಮ್ಮ ಮನೆಗಳಲ್ಲಿ, ಬಂಧು-ಬಳಗದಲ್ಲಿ, ಸ್ನೇಹಿತರಲ್ಲಿ, ನೆರೆಹೊರೆಗಳಲ್ಲಿ ಕೊರೊನಾ ಲಸಿಕೆ ಪಡೆಯಲು ಅರ್ಹ ವ್ಯಕ್ತಿಗಳಿದ್ದರೆ ಅವರಿಗೆ ಲಸಿಕೆ ಪಡೆಯುವಂತೆ ಅರಿವು ಮೂಡಿಸಿ, ಸ್ಫೂರ್ತಿ ತುಂಬೋಣ ಎಂದು ಸಚಿವರು ಕರೆ ನೀಡಿದ್ದಾರೆ.

    ಒಟ್ಟಿನಲ್ಲಿ ರಾಜ್ಯಕ್ಕೆ 2ನೇ ಅಲೆ ಕೊರೊನಾ ಆತಂಕ ಶುರುವಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಸೋಂಕಿಂದ ಕರ್ನಾಟಕಕ್ಕೆ ಢವಢವ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸುಧಾಕರ್ ಅವರು ಖುದ್ದು ಟ್ವೀಟ್ ಮಾಡಿ ಆತಂಕ ಹೊರಹಾಕಿದ್ದಾರೆ.

  • ನನ್ನದು ಅಂತಹ ಯಾವುದೇ ಸಿಡಿಗಳು ಇಲ್ಲ- ನಗೆ ಚಟಾಕಿ ಹಾರಿಸಿದ್ರು ಮಾಧುಸ್ವಾಮಿ

    ನನ್ನದು ಅಂತಹ ಯಾವುದೇ ಸಿಡಿಗಳು ಇಲ್ಲ- ನಗೆ ಚಟಾಕಿ ಹಾರಿಸಿದ್ರು ಮಾಧುಸ್ವಾಮಿ

    ದಾವಣಗೆರೆ: ಮಾಜಿ ಸಚಿವರ ಸಿಡಿ ಪ್ರಕರಣದಲ್ಲಿ ನೈತಿಕತೆ ಬಗ್ಗೆ ಹೆಚ್ಚು ಆದ್ಯತೆ ಕೊಡಬೇಕಾಗುತ್ತದೆ. ನಾನು ಈ ಪ್ರಕರಣಕ್ಕೆ ಉತ್ತರಿಸಿದರೂ ಒಂದು ಮಾತು ಬರುತ್ತದೆ, ಉತ್ತರಿಸುತ್ತಿದ್ದರೂ ಒಂದು ಮಾತು ಬರುತ್ತದೆ. ನನ್ನದು ಅಂತಹ ಯಾವುದೇ ಸಿಡಿಗಳು ಇಲ್ಲ ಎಂದು ಸಚಿವ ಮಾಧುಸ್ವಾಮಿ ನಗೆ ಚಟಾಕಿ ಹಾರಿಸಿದರು.

    ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಗುರುಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವರ ವಿಚಾರದಲ್ಲಿ ತಪ್ಪು ಸರಿ ಎಂಬುದನ್ನ ಕೋರ್ಟ್ ಹೇಳುತ್ತದೆ. ಆದರೆ ಅಷ್ಟರಲ್ಲಿ ಅವರ ತೇಜೋವಧೆ ಆಗಿ ಹೋಗಿರುತ್ತದೆ. ಈ ಕಾರಣಕ್ಕಾಗಿಯೇ ಕೆಲ ಸಚಿವರು ಕೋರ್ಟ್ ಮೊರೆ ಹೋಗಿ ಮಾಧ್ಯಮಗಳಲ್ಲಿ ಪ್ರಸಾರ ಆಗದಂತೆ ತಡೆ ತರುತ್ತಿದ್ದಾರೆ ಎಂದರು.

    ತೇಜೋವಧೆ ತಡೆಯಲು ಇಂತಹ ಪ್ರಯತ್ನ ನಡೆದಿದೆ. ಮಾಜಿ ಸಚಿವರ ವಿಚಾರದಲ್ಲಿ ಸಂತ್ರಸ್ತೆ ಬಂದು ದೂರು ನೀಡಿಲ್ಲ ಎಂಬುದು ಚರ್ಚೆ ಆಗುತ್ತದೆ. ಯಾವುದೇ ಆರೋಪ ಇದ್ದರೆ ಅದರ ಬಗ್ಗೆ ಬೇಕಾದವರು ದೂರು ಸಲ್ಲಿಸಬಹುದು ಎಂದು ಈ ಹಿಂದೆ ಸುಪ್ರೀಂಕೋರ್ಟ್ ತೀರ್ಪು ಬಂದಿದೆ. ಅದನ್ನ ಬಳಕೆ ಮಾಡಿಕೊಂಡು ಮೂರನೇ ವ್ಯಕ್ತಿಗಳು ದೂರು ನೀಡುತ್ತಿದ್ದಾರೆ. ಇಲ್ಲವಾದ್ರೆ ಪ್ರಕರಣಕ್ಕೆ ಸಂಬಂಧಿಸಿವರು ಮಾತ್ರ ದೂರು ನೀಡಬೇಕು ಎಂದು ಹೇಳಿದರು.

    25ಕ್ಕೂ ಹೆಚ್ಚು ಸಚಿವರು ಕೋರ್ಟ್ ಮೊರೆ ಹೋಗುತ್ತಿದ್ದಾರೆ ಎಂಬ ವಿಚಾರದ ಕುರಿತು ನನಗೆ ಗೊತ್ತಿಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.

  • ಸಾಹುಕಾರನ ರಾಸಲೀಲೆ ಔಟ್- ಸಂತ್ರಸ್ತೆಯ ಹೇಳಿಕೆಯ ನಂತ್ರವಷ್ಟೇ ಎಫ್‍ಐಆರ್

    ಸಾಹುಕಾರನ ರಾಸಲೀಲೆ ಔಟ್- ಸಂತ್ರಸ್ತೆಯ ಹೇಳಿಕೆಯ ನಂತ್ರವಷ್ಟೇ ಎಫ್‍ಐಆರ್

    ಬೆಂಗಳೂರು: ಸಾಹುಕಾರ ರಮೇಶ್ ಜಾರಕಿಹೊಳಿ ರಾಸಲೀಲೆ ಸಂಬಂಧ ಪೊಲೀಸರು ಇನ್ನೂ ಎಫ್‍ಐಆರ್ ದಾಖಲಿಸಿಲ್ಲ.

    ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಂಬಂಧ ಈಗಾಗಲೇ ದೂರು ಸಲ್ಲಿಕೆಯಾಗಿದೆ. ಕೆಪಿಟಿಸಿಎಲ್‍ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ಸಂತ್ರಸ್ಥ ಯುವತಿಯನ್ನು ಕಾಮಕ್ರಿಯೆಗೆ ಬಳಸಿಕೊಂಡಿರುವುದಾಗಿ ದೂರು ಕೊಡಲಾಗಿದೆ. ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ಮೇರೆಗೆ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ. ಆದರೆ ಪೊಲೀಸರು ಇನ್ನೂ ಎಫ್‍ಐಆರ್ ದಾಖಲಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಅನುಚೇತ್, ಸಂತ್ರಸ್ತೆಯ ಹೇಳಿಕೆ ಪಡೆದ ಮೇಲಷ್ಟೇ ಎಫ್‍ಐಆರ್ ದಾಖಲಿಸುವುದಾಗಿ ತಿಳಿಸಿದ್ದಾರೆ.

    ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಭೇಟಿ ಬಳಿಕ ಮಾತನಾಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಇದು ತುಂಬಾ ಸೂಕ್ಷ್ಮವಾದ ವಿಚಾರ ಆಗಿರುವ ಕಾರಣ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಂತ್ರಸ್ತೆಗೆ ಭಾರೀ ಪ್ರಮಾಣದಲ್ಲಿ ಬೆದರಿಕೆ ಕರೆಗಳು ಬರುತ್ತಿವೆ. ಒಂದೆರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಬಳಿಕ ಬೆದರಿಕೆ ಕರೆಗಳು ಬರುತ್ತಿವೆ. ಹೀಗಾಗಿ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಕ್ರಮ ಕೈಗೊಳ್ಳುವ ಭರವಸೆ ಇದೆ. ಆಯುಕ್ತರನ್ನು ಭೇಟಿ ಮಾಡಿದ ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತಿಳಿಸಿದ್ದಾರೆ. ಹೀಗಾಗಿ ದೂರು ನೀಡಲು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳುತ್ತಿದ್ದೇನೆ ಎಂದು ಹೇಳಿದ್ದರು.

    ಕುಟುಂಬದ ಸದಸ್ಯರೊಬ್ಬರು ಆಗಮಿಸಿ ಸೋಮವಾರ ನನಗೆ ಸಿಡಿ ನೀಡಿದರು. ಕಿರು ಚಿತ್ರ ನಿರ್ಮಾಣಕ್ಕೆಂದು ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದಾಗ ಕೆಪಿಟಿಸಿಎಲ್‍ನಲ್ಲಿ ಕೆಲಸ ನೀಡುವುದಾಗಿ ಹೇಳಿಕೆ ನೀಡಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಹಲವು ಪ್ರಕರಣಗಳಲ್ಲಿ ನನಗೆ ತುಂಬಾ ನೋವು ಕೊಟ್ಟಿದ್ದಾರೆ. ನನ್ನಿಂದ ಅವರ ವಿರುದ್ಧ ಹೋರಾಟ ಮಾಡಲು ಆಗುತ್ತಿಲ್ಲ. ನ್ಯಾಯ ಕೊಡಿಸಿ ಎಂದು ನನ್ನ ಬಳಿ ಮನವಿ ಮಾಡಿದರು. ನಾನು ನಮ್ಮ ವಕೀಲರ ಜೊತೆ ಚರ್ಚೆ ನಡೆಸಿ, ಇದೀಗ ದೂರು ನೀಡಲು ಬಂದಿದ್ದೇನೆ ಎಂದು ದಿನೇಶ್ ತಿಳಿಸಿದ್ದರು.