Tag: ಸಚಿವ. ಸೋಮಶೇಖರ್

  • ಮಗಳ ಮೇಲೆ ಅತ್ಯಾಚಾರ ಮಾಡಿದವನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ: ಸೋಮಶೇಖರ್

    ಮಗಳ ಮೇಲೆ ಅತ್ಯಾಚಾರ ಮಾಡಿದವನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ: ಸೋಮಶೇಖರ್

    ಮಂಡ್ಯ: ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕೆಜಿಎಫ್ ಬಾಬುಗೆ ಎಂಎಲ್‍ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಗಂಭೀರ ಆರೋಪ ಮಾಡಿದ್ದಾರೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ಬಾಬು ಹೆಂಡತಿ, ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಾಬು ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ಠಾಣೆಯೊಂದರಲ್ಲಿ ಎಫ್‍ಐಆರ್ ದಾಖಲಾಗಿದೆ. ಇಂತಹವರಿಗೆ ಕಾಂಗ್ರೆಸ್‍ನವರು ಟಿಕೆಟ್ ಕೊಟ್ಟಿದ್ದಾರೆ. ಇಂತಹ ಪ್ರಕರಣಗಳನ್ನು ನೋಡಿ ಕೊಟ್ಟಿದ್ದಾರೋ ಏನೋ ಗೊತ್ತಿಲ್ಲ. ಅತ್ಯಾಚಾರ ಮಾಡಿದ್ದಾರೆ ಎಂಬುವುದಕ್ಕೆ ಎಫ್‍ಐಆರ್ ದಾಖಲಾಗಿರುವುದು ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬರೋಬ್ಬರಿ 1,743 ಕೋಟಿ ಆಸ್ತಿ ಹೊಂದಿರುವ ಶ್ರೀಮಂತ ರಾಜಕಾರಣಿ ಕಣಕ್ಕೆ – ಕೆಜಿಎಫ್‌ ಬಾಬು ಆಸ್ತಿ ಎಷ್ಟಿದೆ?

    ಡಿಸೆಂಬರ್ 2 ಅಥವಾ 3 ಬೆಂಗಳೂರಿನ ಎಲ್ಲಾ ಶಾಸಕರು, ಸಚಿವರು ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ನಾನು ಹೇಳಿರುವುದು ಯಾವುದು ಸುಳ್ಳಲ್ಲ, ಎಲ್ಲಾ ನಿಜ. ಡೆವಲಪರ್ಸ್ ಯಾರು ಎಷ್ಟು ರೂಪಾಯಿ ಕೊಟ್ಟಿದ್ದಾರೆ ಎಂದು ನಮ್ಮ ಬಳಿ ಸಾಕ್ಷ್ಯಗಳಿದೆ. ಆತ 1,700 ಕೋಟಿಯನ್ನು ಡಿಕ್ಲೇರ್ ಮಾಡಿದ್ದಾನೆ. ಡಿಸಿಪಿಗೆ ಫೋನ್ ಮಾಡಿ ಅವನ ಹಿನ್ನೆಲೆಯನ್ನು ತೆಗೆದುಕೊಂಡಿದ್ದೇನೆ. ಇದನ್ನೂ ಓದಿ: ಪುನೀತ್ ಅಗಲಿ ಇಂದಿಗೆ ಒಂದು ತಿಂಗಳು – ದೊಡ್ಮನೆಯಲ್ಲಿ ವಿಶೇಷ ಪೂಜೆ

    1,700 ಕೋಟಿ ಅಫಿಶಿಯಲ್ ಆಗಿ ತೋರಿಸಿದ್ದಾನೆ, ಅದರ ಎರಡರಷ್ಟು ಇದೆ. ಆತನ ಮೇಲೆ 40 ಕೇಸ್‍ಗಳಷ್ಟು ಎಫ್‍ಐಆರ್ ಇದೆ. 5 ಕೋಟಿಯಿಂದ 60 ಕೋಟಿವರೆಗೂ ಆತ ಫ್ರಾಡ್ ಮಾಡಿದ್ದಾನೆ. ಅವನನ್ನು 3 ಮೂರು ತಿಂಗಳು ಗಡಿಪಾರು ಮಾಡಿ, ಜೈಲಿನಲ್ಲೂ ಇಟ್ಟಿದ್ದೇವು ಎಂದು ಡಿಸಿಪಿ ಹೇಳಿದ್ದಾರೆ. ಇಂತಹವನನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಡಿದೆ. ಈ ಕೇಸ್‍ಗಳನ್ನು ನೋಡಿ ನನಗೆ ಗಾಬರಿಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.


    Minister Somashekar, KGF Babu, Congress, MLC Election, Mandya

  • ಸಿಎಂ ಬಿಎಸ್‍ವೈ ಮಾತು ಉಳಿಸಿಕೊಂಡಿದ್ದಾರೆ, ಅವ್ರು ಮಾತು ತಪ್ಪಲ್ಲ: ಎಸ್.ಟಿ.ಸೋಮಶೇಖರ್

    ಸಿಎಂ ಬಿಎಸ್‍ವೈ ಮಾತು ಉಳಿಸಿಕೊಂಡಿದ್ದಾರೆ, ಅವ್ರು ಮಾತು ತಪ್ಪಲ್ಲ: ಎಸ್.ಟಿ.ಸೋಮಶೇಖರ್

    – ‘ಸಿ.ಟಿ.ರವಿಗೆ ಎಂ.ಎಲ್.ಸಿ ಮಾಡಿಸಿ ಅಂತ ಬೆಳಗ್ಗಿಂದ ಫೋನು’

    ಚಿಕ್ಕಮಗಳೂರು: ಇದೇ ತಿಂಗಳ 19ರಂದು ನಡೆಯೋ ಎಂ.ಎಲ್.ಸಿ. ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಹಾಗೂ ಫಲಿತಾಂಶದ ಬಗ್ಗೆ ಬಿಜೆಪಿಯವರಿಗೆ ಮೊದಲೇ ತಿಳಿದು ಈಗಿನ ಆಂತರಿಕ ಬೇಗುದಿಗೆ ಕಾರಣವಾಗಿದೆಯಾ ಎಂಬ ಅನುಮಾನ ಮೂಡಿದೆ. ಏಕೆಂದರೆ, ಇಂದು ನಗರದ ಡಿಸಿಸಿ ಬ್ಯಾಂಕ್‍ನಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ ಮಾತು ಎಲ್ಲಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಉಪಚುನಾವಣೆಯಲ್ಲಿ ಸೋತ ಆರ್.ಶಂಕರ್, ಎಂ.ಟಿ.ಬಿ.ನಾಗರಾಜ್ ಹಾಗೂ ವಿಶ್ವನಾಥ್ ಎಂ.ಎಲ್.ಸಿ. ಆಗಿ ಸಚಿವರಾಗ್ತಾರಾ ಎಂಬ ಅನುಮಾನ ಮೂಡಿದೆ.

    ಬಿಜೆಪಿಗೆ ನಾಯಕರಿಗೆ ಇದರ ಮುನ್ಸೂಚನೆ ಸಿಕ್ಕಿಯೇ ಸಭೆಗಳು ಆರಂಭವಾಗಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ. ಏಕೆಂದರೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ಹೇಳಿಕೆ ಮೇಲಿನ ಎಲ್ಲದಕ್ಕೂ ಸಾಮಿಪ್ಯವಿರುವಂತ್ತಿದೆ. ಸಿಎಂ ನಮ್ಮೆಲ್ಲರನ್ನೂ ಶಾಸಕರು, ಸಚಿವರು ಮಾಡಿದ್ದಾರೆ. ಅವರು ಮಾತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಎಲ್ಲರಿಗೂ ಅವಕಾಶ ಮಾಡಿ ಕೊಡ್ತೀನಿ ಎಂದಿದ್ದರು. ಅವರು ಮಾತಿಗೆ ತಪ್ಪಲ್ಲ ಎಂದಿರೋದು ಸೋತ ಮೂವರು ಎಂ.ಎಲ್.ಸಿ. ಮೂಲಕ ಮಿನಿಸ್ಟರ್ ಆಗುತ್ತಾರಾ ಎಂದು ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗಿ ಈ ಬೆಳಣಿಗೆ ನಡೆದಿರುವಂತಿದೆ.

    ಸಿ.ಟಿ.ರವಿಗೆ ಬೆಳಗ್ಗಿಂದ ಫೋನು: ಈಗ ಎಂ.ಎಲ್.ಸಿ. ಚುನಾವಣೆ ನಡೆಯುತ್ತಿದೆ. ಎರಡು ರಾಜ್ಯ ಸಭೆ ಸೇರಿ 9 ಎಂ.ಎಲ್.ಸಿ. ಬಿಜೆಪಿಗೆ ಲಭ್ಯವಾಗಲಿದೆ. ಜಾತಿ ಸಮುದಾಯ ಹಾಗೂ ಪಕ್ಷಕ್ಕೆ ದುಡಿದವರು, ಶಾಸಕರು, ಸಂಸದರಿಂದ ಕೇಳುತ್ತಿದ್ದಾರೆ. ಇದರಲ್ಲಿ ರಾಜಕೀಯ ಇಲ್ಲ. ಈ ರೀತಿ ಎಲ್ಲಾ ಪಕ್ಷದಲ್ಲೂ ಕೇಳುತ್ತಾರೆ. ಸಿ.ಟಿ.ರವಿಗೆ ಬೆಳಗ್ಗಿಂದಲೂ ಫೋನ್ ಬರುತ್ತಿದೆ. ನಮ್ಮನ್ನು ಸಿಎಂ ಬಳಿ ಕರೆದುಕೊಂಡು ಹೋಗಿ, ಎಂ.ಎಲ್.ಸಿ ಹಾಗೂ ರಾಜ್ಯ ಸಭೆ ಸದಸ್ಯರನ್ನಾಗಿ ಮಾಡಿ ಎಂದು ಎಲ್ಲರೂ ಫೋನ್ ಮಾಡುತ್ತಿದ್ದಾರೆ. ಎಲ್ಲರಿಗೂ ಕೇಳಲು ರೈಟ್ಸ್ ಇದೆ ಎಂದಿದ್ದಾರೆ.

    ಯಾರಿಂದ ರಾಜ್ಯಕ್ಕೆ ಒಳ್ಳೆಯದ್ದೋ ಅವರಿಗೆ ರೆಕಮೆಂಡ್: ಇದೇ ವೇಳೆ ಸೋಮಶೇಖರ್ ಜೊತೆಗಿದ್ದ ಸಚಿವ ಸಿ.ಟಿ.ರವಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಇನ್ನೊಂದು ವಾರದಲ್ಲಿ ಕೋರ್ ಕಮಿಟಿ ಸಭೆ ಕರೆಯಬಹುದು. ಕೋರ್ ಕಮಿಟಿಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಯಾವ್ಯಾವ ಹೆಸರು ಬಂದಿದೆ ಎಲ್ಲವನ್ನೂ ಚರ್ಚೆ ಮಾಡುತ್ತೇವೆ. ಸಮಾಜಕ್ಕೆ-ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ಯಾರಿಂದ ಒಳ್ಳೆದಾಗುತ್ತೋ ಅವರಿಗೆ ಕೊಡ್ಬೇಕು ಅನ್ನೋದು ನಮ್ಮ ರೆಕಮೆಂಟ್ ಎಂದಿದ್ದಾರೆ. ಇನ್ನು, ಶಾಸಕರು ಸಭೆ ಸೇರಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಊಟಕ್ಕೆ ಸೇರಿದ್ವಿ ಎಂದು ಅವರೇ ಹೇಳಿದ್ದಾರೆ. ಊಟಕ್ಕೆ ಸೇರೋದು ತಪ್ಪಲ್ಲ. ಆದ್ರೆ, ಪಕ್ಷವನ್ನ ಬಲಗೊಳಿಸಬೇಕೋ ವಿನಃ ಯಾರೂ ದುರ್ಬಲಗೊಳಿಸಬಾರದು ಎಂದಿದ್ದಾರೆ.

  • ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದೆ, ಸಿಎಂ ಕೊಟ್ಟ ಮಾತಿಗೆ ನಡೆದುಕೊಳ್ಳೋ ವ್ಯಕ್ತಿ: ಸೋಮಶೇಖರ್

    ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದೆ, ಸಿಎಂ ಕೊಟ್ಟ ಮಾತಿಗೆ ನಡೆದುಕೊಳ್ಳೋ ವ್ಯಕ್ತಿ: ಸೋಮಶೇಖರ್

    ಶಿವಮೊಗ್ಗ: ಬಿಜೆಪಿಯಲ್ಲಿ ಯಾವುದೇ ರೀತಿಯ ಬಂಡಾಯವೂ ಇಲ್ಲ, ಭಿನ್ನಮತವೂ ಇಲ್ಲ. ಗುಂಪುಗಾರಿಕೆಯೂ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

    ಶಿವಮೊಗ್ಗಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, 9 ವಿಧಾನಪರಿಷತ್ ಹಾಗೂ 4 ರಾಜ್ಯಸಭಾ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಹಜವಾಗಿಯೇ ವಿವಿಧ ಸಮಾಜದವರು ತಮಗೆ ಟಿಕೆಟ್ ಕೊಡಿ ಎಂದು ಒತ್ತಡ ಮತ್ತು ಮನವಿ ಮಾಡುತ್ತಿದ್ದಾರೆಯೇ ವಿನಃ ಇದೇನೂ ಹೊಸದಲ್ಲ ಎಂದಿದ್ದಾರೆ.

    ಟಿವಿಯಲ್ಲಿ ಬರುತ್ತಿರುವ ಸಭೆಯ ದೃಶ್ಯಗಳು ತುಂಬಾ ಹಳೆಯದಾಗಿದೆ. ಹಾಗಾಗಿ ಯಾವ ಗುಂಪುಗಾರಿಕೆಯೂ ಬಿಜೆಪಿಯಲ್ಲಿ ಇಲ್ಲ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ನಮಗೆ ಮಾತು ಕೊಟ್ಟಂತೆ ಸಚಿವ ಸ್ಥಾನ ನೀಡಿದ್ದಾರೆ. ನಾವು ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತಿದ್ದೇವೆ ಮತ್ತು ನಮ್ಮ ಜೊತೆನಲ್ಲಿ ಬಿಜೆಪಿ ಸೇರಿದ ಇನ್ನುಳಿದ ಮೂವರು ಅರ್ಹ ಶಾಸಕರಿಗೂ ಕೂಡ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.