Tag: ಸಚಿವ ಸಾ.ರಾ.ಮಹೇಶ್

  • ಜೆಡಿಎಸ್ ಉಳಿಸಲು ನಿಖಿಲ್‍ಗೆ ಟಿಕೆಟ್: ಸಚಿವ ಸಾರಾ ಮಹೇಶ್

    ಜೆಡಿಎಸ್ ಉಳಿಸಲು ನಿಖಿಲ್‍ಗೆ ಟಿಕೆಟ್: ಸಚಿವ ಸಾರಾ ಮಹೇಶ್

    ಚಾಮರಾಜನಗರ: ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳಸಿದ್ದು ವರಿಷ್ಠರಾದ ಹೆಚ್.ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿ. ಇದೀಗ ಅವರು ಜೆಡಿಎಸ್ ಪಕ್ಷನ್ನು ಉಳಿಸಿಲು ನಿಖಿಲ್‍ಗೆ ಟಿಕೆಟ್ ನೀಡುತ್ತಿದ್ದಾರೆ. ಇದನ್ನು ಕುಟುಂಬ ರಾಜಕೀಯ ಎಂದು ಹೇಳುವ ಅವಶ್ಯಕತೆ ಇಲ್ಲ ಎಂದು ಸಚಿವ ಸಾ.ರಾ.ಮಹೇಶ್ ಸಮರ್ಥನೆ ಮಾಡಿಕೊಂಡಿದ್ದಾರೆ.

    ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಆಗಬೇಕು ಎಂದು ಆಸೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಅವರನ್ನು ಮೈತ್ರಿ ಪಕ್ಷದಿಂದ ಕಣಕ್ಕೆ ಇಳಿಸಲಾಗುತ್ತಿದೆ. ನಿಖಿಲ್ ಜೆಡಿಎಸ್ ಪಕ್ಷವನ್ನು ಉಳಿಸುವ ದೃಷ್ಟಿಯಿಂದ ಅವರಿಗೆ ಟಿಕೆಟ್ ನೀಡಲಾಗುತ್ತಿದೆ. ಇದಕ್ಕೆ ಹಾಲಿ ಸಂಸದ ಶಿವರಾಮೇಗೌಡರ ಒಪ್ಪಿಗೆಯೂ ಸಹ ಇದೆ ಎಂದರು.

    ಸಾಮಾಜಿಕ ಜಾಲ ತಾಣದಲ್ಲಿ ನಡೆಯುತ್ತಿರುವ ಅಭಿಯಾನ ಕೆಲವರ ಪಿತೂರಿಯಿಂದ ನಡೆಯುತ್ತಿದ್ದು, ಇದರ ಹಿಂದೆ ಯಾರಿದ್ದಾರೆ ಎನ್ನುವುದು ನಮಗೆ ತಿಳಿದಿದೆ ಎಂದರು. ಅಲ್ಲದೇ ಹೆಚ್.ಡಿ ದೇವೇಗೌಡರನ್ನು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಕರೆತರಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಕ್ಕಿ ಡ್ರಾ ಮೂಲಕ ಸೀರೆ ಆಯ್ಕೆಯೆಂದು ಗೊತ್ತಿರ್ತಿದ್ರೆ ಬರ್ತಾನೆ ಇರಲಿಲ್ಲ- ಸಚಿವರ ವಿರುದ್ಧ ಮಹಿಳೆಯರು ಗರಂ

    ಲಕ್ಕಿ ಡ್ರಾ ಮೂಲಕ ಸೀರೆ ಆಯ್ಕೆಯೆಂದು ಗೊತ್ತಿರ್ತಿದ್ರೆ ಬರ್ತಾನೆ ಇರಲಿಲ್ಲ- ಸಚಿವರ ವಿರುದ್ಧ ಮಹಿಳೆಯರು ಗರಂ

    ಬೆಂಗಳೂರು: ಕಡಿಮೆ ದರದಲ್ಲಿ ಮೈಸೂರು ಸಿಲ್ಕ್ ಸೀರೆ ಸಿಗುತ್ತೆ ಅಂತ ಬಂದಿದ್ದ ಮಹಿಳೆಯೊಬ್ಬರು ಸಚಿವ ಸಾ.ರಾ ಮಹೇಶ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೊದಲೇ ಲಕ್ಕಿ ಡ್ರಾ ಮೂಲಕ ಸೀರೆ ಆಯ್ಕೆ ಮಾಡುವುದು ಅಂತಾ ಗೊತ್ತಿರುತ್ತಿದ್ದರೆ ಬರುತ್ತಾನೆ ಇರಲಿಲ್ಲ ಅಂತ ಸಚಿವರ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

    ನಾಲ್ಕೂವರೆ ಸಾವಿರಕ್ಕೆ ಹೆಸರುವಾಸಿಯಾಗಿದ್ದ ಮೈಸೂರು ಸಿಲ್ಕ್ ಸೀರೆ ಕೊಡುತ್ತಾರೆ ಅಂತಾ ಗೌರಿ ಹಬ್ಬದ ತಯಾರಿಯನ್ನೂ ಬಿಟ್ಟು ಬಹುತೇಕ ಮಹಿಳೆಯರು ಎಫ್‍ಕೆಸಿಸಿಐ ಮಳಿಗೆ ಇಂದು ಬಂದಿದ್ದರು. ಹೀಗಾಗಿ ಕೆ.ಜಿ ರೋಡ್‍ನಲ್ಲಿರೋ ಎಫ್‍ಕೆಸಿಸಿಐ ಮುಂದೆ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದರು. ಸೀರೆಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯರನ್ನು ಸಂಭಾಳಿಸಲು ಎಫ್‍ಕೆಸಿಸಿಐ ಅಧಿಕಾರಿಗಳು ಪೊಲೀಸ್ ಭದ್ರತೆಯನ್ನು ಪಡೆದುಕೊಂಡಿದ್ದಾರೆ.

    ಮಹಿಳೆಯರನ್ನು ಕ್ಯೂನಲ್ಲಿ ನಿಲ್ಲಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನೂಕುನುಗ್ಗಲಿನ ಕ್ಯೂನಲ್ಲಿ ನಿಂತು ಲಕ್ಕಿ ಡ್ರಾನಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಹಾಕಿದ್ದಾರೆ. ಕೇವಲ ಒಂದೂವರೆ ಸಾವಿರ ಜನ ಮಹಿಳೆಯರಿಗೆ ಮಾತ್ರ ಸಿಗುತ್ತದೆ ಎನ್ನುವ ಮಾಹಿತಿ ಗೊತ್ತಾಗುತ್ತಿದ್ದಂತೆ ಮಹಿಳೆಯರು ಸಚಿವರ ವಿರುದ್ಧ ಗರಂ ಆಗಿದ್ದಾರೆ.

    `ರಿಯಾಯಿತಿ ದರದಲ್ಲಿ ಸೀರೆ ನೀಡುವುದಾಗಿ ಸಚಿವರು ಹೇಳಿದ್ದರು. ಆದರೆ ಈಗ ಲಕ್ಕಿ ಡ್ರಾ ಅಂತಾ ಹೇಳುತ್ತಿದ್ದಾರೆ. ಇಷ್ಟು ಜನರಿದ್ದಾರೆ. ನಮಗೆ ಸೀರೆ ಸಿಗುವುದೇ ಡೌಟ್ ಅಂತಾ ಮಹಿಳೆಯರು ಸಚಿವರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv