Tag: ಸಚಿವ ರಾಮಾನಾಥ್ ರೈ

  • ಮುಸಲ್ಮಾನರಿಗಾದರೂ ವಿಧೇಯರಾಗಿ, 5 ಬಾರಿ ನಮಾಜ್ ಶುರುಮಾಡಿ: ರೈಗೆ ಜಗ್ಗೇಶ್ ಟಾಂಗ್

    ಮುಸಲ್ಮಾನರಿಗಾದರೂ ವಿಧೇಯರಾಗಿ, 5 ಬಾರಿ ನಮಾಜ್ ಶುರುಮಾಡಿ: ರೈಗೆ ಜಗ್ಗೇಶ್ ಟಾಂಗ್

    ಬೆಂಗಳೂರು: ಅರಣ್ಯ ಸಚಿವ ರಮಾನಾಥ ರೈ ಅವರು ತಾನು ಆರು ಬಾರಿ ಶಾಸಕನಾಗಿ ಗೆದ್ದು ಬರಲು ಆಗಲು ಮುಸ್ಲಿಂ ಮತಗಳೇ ಕಾರಣ ಎಂಬ ಹೇಳಿಕೆಗೆ ನಟ ಜಗ್ಗೇಶ್ ಖಾರವಾಗಿ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.

    ನಟ ಜಗ್ಗೇಶ್ ಅವರು ತಮ್ಮ ಟ್ವೀಟ್ ನಲ್ಲಿ ದಯಮಾಡಿ ಈಗಲೇ ಮುಲ್ಲಾ ಕರೆಸಿ ಕತ್ನ (ಸುನ್ನತ್) ಮಾಡಿಸಿಕೊಂಡು ಮುಸಲ್ಮಾನರಿಗಾದರೂ ವಿಧೇಯರಾಗಿ, 5 ಬಾರಿ ನಮಾಜ್ ಶುರುಮಾಡಿ. ಯಾವುದೇ ಕಾರಣಕ್ಕೂ ಹಿಂದೂಗಳ ಮತ ಕೇಳಬೇಡಿ. ನಿಮ್ಮ ಹೆಸರು ರಸತ್ತುಲ್ಲಾ ಅಂತ ಬದಲಾಯಿಸಿಕೊಂಡು ಚೆನ್ನಾಗಿ ಬಾಳಿ ಎಂದು ನೇರವಾಗಿ ಟಾಂಗ್ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ನಟ ಜಗ್ಗೇಶ್ ಅವರ ಟ್ವೀಟ್ ವೈರಲ್ ಆಗಿದ್ದು, ಹಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ಮರುಟ್ವೀಟ್ ಮಾಡಿದ್ದಾರೆ.

    ಗುರುವಾರ ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಮಾನಾಥ ರೈ, ತಾನು ಇವತ್ತು ಅಲ್ಲಾಹುವಿನ ಕೃಪೆಯಿಂದ ಬಂಟ್ವಾಳ ಕ್ಷೇತ್ರದಲ್ಲಿ ನನಗೆ ಆರು ಬಾರಿ ಶಾಸಕನಾಗಲು ಸಾಧ್ಯವಾಗಿದೆ. ಅದಕ್ಕೆ ಮುಸ್ಲಿಂ ಸಮುದಾಯದ ಜಾತ್ಯತೀತ ನಿಲುವು ಕಾರಣ. ತಮ್ಮ ಸಮುದಾಯದ ವ್ಯಕ್ತಿ ಕಣಕ್ಕೆ ನಿಂತಿದ್ದಾರೆಂದು ಹತ್ತು-ಹದಿನೈದು ಸಾವಿರ ಮಂದಿ ಮತ ಹಾಕುತ್ತಿದ್ದರೆ, ಈ ರಮಾನಾಥ ರೈ ಯಾವತ್ತೋ ಮಾಜಿಯಾಗುತ್ತಿದ್ದ. ಯಾವುದೇ ಧರ್ಮ, ಜಾತಿ ಮಿತಿಗೆ ಒಳಗಾಗದೇ ನೀವು ಮತ ಹಾಕುತ್ತಿದ್ದೀರಿ. ನಿಮ್ಮ ಋಣ ತೀರಿಸಲು ನನಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಹೇಳಿದ್ದರು.

    https://www.youtube.com/watch?v=97cOqz8ZXGs