Tag: ಸಚಿವ ರಹೀಂಖಾನ್

  • ಸಚಿವ ರಹೀಂಖಾನ್‍ಗೆ ‘ಕೈ’ ಕಾರ್ಯಕರ್ತನಿಂದ್ಲೇ ಫುಲ್ ಕ್ಲಾಸ್!

    ಸಚಿವ ರಹೀಂಖಾನ್‍ಗೆ ‘ಕೈ’ ಕಾರ್ಯಕರ್ತನಿಂದ್ಲೇ ಫುಲ್ ಕ್ಲಾಸ್!

    ಬೀದರ್: ಈಶ್ವರ್ ಖಂಡ್ರೆಗೆ ಮತ ಹಾಕಿ ಎಂದ ಸಚಿವ ರಹೀಂಖಾನ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರೇ ಕ್ಲಾಸ್ ತೆಗೆದುಕೊಂಡಿರುವ ಘಟನೆ ನಡೆದಿದೆ.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆಗೆ ಮತ ಹಾಕಿ ಎಂದು ಸಚಿವ ರಹೀಂಖಾನ್ ಕಾರ್ಯಕರ್ತರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಸಚಿವರ ವಿರುದ್ಧ ಅಸಮಾಧಾನ ಸ್ಫೋಟಗೊಂಡಿದ್ದು, ಅಭಿವೃದ್ಧಿ ವಿಷಯಕ್ಕೆ ಕಾರ್ಯಕರ್ತರು ತರಾಟೆ ತೆಗೆದುಕೊಂಡಿದ್ದರು. ಕೊನೆಗೆ ಕಾರ್ಯಕರ್ತ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸಚಿವರು ತಡವರಿಸಿದ್ದಾರೆ.

    ನೀವು ಒಂದು ರೂಪಾಯಿ ಕೆಲಸವನ್ನ ನಮ್ಮ ಗಲ್ಲಿಗೆ ಮಾಡಿದ್ದೀರಾ? ನೀವು ಕಾರ್ಯಕರ್ತರಿಗೆ ಒಂದು ರೂಪಾಯಿ ಮರ್ಯಾದೆ ಕೊಟ್ರೆ ನಾವು ಕೊಡುತ್ತೀವಿ, ಮೊದಲು ನಮ್ಮ ವಾರ್ಡ್ ಗಳಲ್ಲಿ ಕಾಂಗ್ರೆಸ್ 70 ಮತಗಳನ್ನ ಕಾಂಗ್ರೆಸ್ ಪಡಿಯುತ್ತಿತ್ತು. ಆದರೆ ಈಗ 500ಕ್ಕೂ ಹೆಚ್ಚು ಮತಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ನೀವು ಮಾಡಿದ ಅಭಿವೃದ್ಧಿ ಕೆಲಸ ಏನು ಅಂತ ಕಾರ್ಯಕರ್ತನೊಬ್ಬ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  • ನೀರಿನ ಸಮಸ್ಯೆಯಿಂದ ಶಾಲೆಗೆ ಗೈರಾಗುತ್ತಿದ್ದಾರೆ ವಿದ್ಯಾರ್ಥಿಗಳು..!

    ನೀರಿನ ಸಮಸ್ಯೆಯಿಂದ ಶಾಲೆಗೆ ಗೈರಾಗುತ್ತಿದ್ದಾರೆ ವಿದ್ಯಾರ್ಥಿಗಳು..!

    ಬೀದರ್: ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕು ಎಂದು ಸರ್ಕಾರ ಹಲವು ಕಸರತ್ತು ಮಾಡ್ತಿದೆ. ಆದ್ರೆ ಜಿಲ್ಲೆಯಲ್ಲಿ ಮಾತ್ರ ನೀರಿನ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಗೈರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಹೌದು, ಇದಕ್ಕೆ ಕಾರಣ ಕುಡಿಯುವ ನೀರು. ಬೇಸಿಗೆ ಇನ್ನು ದೂರ ಇರುವಾಗಲೇ ಗಡಿ ಜಿಲ್ಲೆಯಲ್ಲಿ ನೀರಿನ ಪಾಲಿಟಿಕ್ಸ್ ಶುರುವಾಗಿದೆ. ಬೀದರ್ ನಗರದಿಂದ 15 ಕಿಲೋ ಮೀಟರ್ ದೂರದಲ್ಲಿರುವ ಖಾಜಾಪೂರ್ ಅಲ್ಪಸಂಖ್ಯಾತ ಕಲ್ಯಾಣ ಸಚಿವ ರಹೀಂಖಾನ್ ಕ್ಷೇತ್ರವಾಗಿದ್ದು, ಇಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಒಂದು ಹನಿ ನೀರಿಗಾಗಿ ಮಹಿಳೆಯರು ಕೂಲಿಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಮಕ್ಕಳು ಶಾಲೆಗೆ ಚಕ್ಕರ್ ಹಾಕಬೇಕಾಗಿದೆ. ನೀರು ಕೊಡುತ್ತೆನೆ ಎಂದು ಚುನಾವಣೆಯ ಟೈಂನಲ್ಲಿ ಕಲರ್ ಕಲರ್ ಕಾಗೆ ಹಾರಿಸಿದ ಮಿನಿಸ್ಟರ್ ಮಾತ್ರ ಇಂದು ಬಿಂದಾಸ್ ಆಗಿದ್ದಾರೆ.

    ಚುನಾವಣೆಯ ಸಮಯದಲ್ಲಿ ನೀರು ಕೊಡ್ತೇನೆ, ಕ್ಷೇತ್ರದ ಸಮಸ್ಯೆಗಳನ್ನು ನಿವಾರಿಸುತ್ತೇನೆ ಅಂತ ರಹೀಂಖಾನ್ ಅವರು ಜನರಿಗೆ ಆಶ್ವಾಸನೆ ಕೊಟ್ಟಿದ್ದರು. ಆದ್ರೆ ಈಗ ಗೆದ್ದು ಮಂತ್ರಿಯಾದ ಬಳಿಕ ರಹೀಂಖಾನ್ ಅವರು ಮಾತ್ರ ಏನೂ ಟೆನ್ಶನ್ ಇಲ್ಲದೇ ಬಿಂದಾಸಾಗಿದ್ದಾರೆ. ಜನರು ನೀರಿಲ್ಲದೆ ಪರದಾಡುತ್ತಿದ್ದರೂ ಅವರ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ದಿನನಿತ್ಯ ಸಾಕಷ್ಟು ದೂರ ಹೋಗಿ ಕುಡಿಯುವ ನೀರನ್ನು ತರುವುದೇ ಈ ಭಾಗದ ಜನರಿಗೆ ಕೆಲಸವಾಗಿ ಬಿಟ್ಟಿದೆ. ಆದ್ದರಿಂದ ಈ ಭಾಗದಲ್ಲಿ ಮಕ್ಕಳು ಶಾಲೆಗೆ ಗೈರಾಗಿ ನೀರು ತರಲು ಕಿಲೋ ಮೀಟರ್‍ಗಟ್ಟಲೆ ಹೋಗುತ್ತಿದ್ದಾರೆ.

    ಪ್ರತಿವರ್ಷ ಸರ್ಕಾರ ಕುಡಿಯೋ ನೀರಿಗೆ ಅಂತಾನೆ ಕೋಟ್ಯಂತರ ರೂಪಾಯಿ ಅನುದಾನ ಕೊಡ್ತಿದೆ. ಆದ್ರೆ ಇಲ್ಲಿಯವರೆಗೆ ಈ ಭಾಗಕ್ಕೆ ಯಾವುದೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹೈರಾಣಾಗಿ ಹೋಗಿದ್ದಾರೆ. ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂಖಾನ್ ಗೆದ್ದು ಮಂತ್ರಿಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದ್ರೆ ಕ್ಷೇತ್ರದ ಜನರು ನೀರಿನ ಸಮಸ್ಯೆಗೆ ಪರಿಹಾರ ಕಾಣದಿರೋದು ಮಾತ್ರ ವಿಪರ್ಯಾಸ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv