Tag: ಸಚಿವ ಮುನಿರತ್ನ

  • ಪುನೀತ್‌ ಕೊನೆಕ್ಷಣದಲ್ಲಿ ಪರೀಕ್ಷಿಸಿಕೊಂಡಿದ್ದ ಡಾ. ರಮಣರಾವ್‌ ಕ್ಲಿನಿಕ್‌ಗೆ ಸಚಿವ ಮುನಿರತ್ನ ಭೇಟಿ

    ಪುನೀತ್‌ ಕೊನೆಕ್ಷಣದಲ್ಲಿ ಪರೀಕ್ಷಿಸಿಕೊಂಡಿದ್ದ ಡಾ. ರಮಣರಾವ್‌ ಕ್ಲಿನಿಕ್‌ಗೆ ಸಚಿವ ಮುನಿರತ್ನ ಭೇಟಿ

    ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಕೊನೆಕ್ಷಣದಲ್ಲಿ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ ಆರೋಪ ವ್ಯಕ್ತಪಡಿಸಿ ವೈದ್ಯರ ವಿರುದ್ಧ ಅಭಿಮಾನಿಗಳು ದೂರು ದಾಖಲಿಸಿರುವ ಬೆನ್ನಲ್ಲೇ ಡಾ. ರಮಣರಾವ್‌ ಅವರ ಕ್ಲಿನಿಕ್‌ಗೆ ಸಚಿವ ಮುನಿರತ್ನ ಶನಿವಾರ ಭೇಟಿ ನೀಡಿದ್ದಾರೆ.

    ಸದಾಶಿವನಗರದಲ್ಲಿರುವ ಕ್ಲಿನಿಕ್‌ಗೆ ಭೇಟಿ ನೀಡಿದ ಸಚಿವರು, ವೈದ್ಯರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಸೂಟ್ಕೇಸ್ ತೆಗೆದು ಪರಿಶೀಲಿಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ!

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ಈ ಕ್ಲಿನಿಕ್‌ಗೆ ನಿರಂತರವಾಗಿ ಬರ್ತಾ ಇದ್ದೇನೆ. ವೈದ್ಯರನ್ನು ಸೌಜನ್ಯಯುತವಾಗಿ ಭೇಟಿ ಮಾಡಿದ್ದೇನೆ. ಅವರ ಜೊತೆ ಕೂತು ಮಾತನಾಡಿದ್ದೇನೆ. ಕ್ಲಿನಿಕ್‌ನ ಮುಂದೆ ನಡೆಯುತ್ತಿರುವ ಧರಣಿ ವಿಚಾರ ನನ್ನ ಗಮನಕ್ಕೆ ಬಂದಿದೆ. ವೈದ್ಯರ ಮೇಲೆ ಅನುಮಾನ ಪಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ್ರು: ಜಯಪ್ರದ

    ಡಾ. ರಮಣರಾವ್ ಅವರು 35 ವರ್ಷಗಳಿಂದ ರಾಜಕುಮಾರ್ ಕುಟುಂಬದವರೊಂದಿಗೆ ಇದ್ದಾರೆ. ರಾಜ್ ಕುಟುಂಬದಲ್ಲಿ ಅವರು ಒಬ್ಬರಾಗಿದ್ದಾರೆ. ಇವರ ಮೇಲೆ ಅನುಮಾನ ಬೇಡ. ಅಭಿಮಾನಿಗಳು ದುಃಖ ತಡೆಯಲಾರದೇ ಅಭಿಮಾನದಿಂದ ದೂರು ದಾಖಲಿಸಿರಬಹುದು. ಇವರ ಮೇಲೆ ಅನುಮಾನ ಬೇಡ. ತುಂಬು ಹೃದಯದ ಅಭಿಮಾನ ಕೆಲವೊಮ್ಮೆ ಬೇಸರವಾಗುತ್ತದೆ ಎಂದಿದ್ದಾರೆ.

  • ಪುನೀತ್‍ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು: ಮುನಿರತ್ನ

    ಪುನೀತ್‍ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು: ಮುನಿರತ್ನ

    ಕೋಲಾರ: ಪುನೀತ್ ಒಬ್ಬ ನಾಯಕ ನಟನಲ್ಲದೆ, ಸೇವೆಯಲ್ಲಿ ಅವರ ಕಾರ್ಯ ಶ್ಲಾಘನೀಯವಾದುದು. ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ ಅದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ. ಕೇಂದ್ರ ಸರ್ಕಾರ ಅವರಿಗೆ ಪ್ರಶಸ್ತಿಯನ್ನು ನೀಡಬೇಕು ಎಂದು ತೋಟಗಾರಿಕಾ ಸಚಿವ ಮುನಿರತ್ನ ಆಗ್ರಹಿಸಿದ್ದಾರೆ.

    ಕೋಲಾರದ ಕೋಟಿಲಿಂಗ ದೇಗುಲಕ್ಕೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು. ಇದೇ ವೇಳೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡಿದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಉಪಚುನಾವಣೆ ಸೋಲಿನಿಂದ ತೈಲ ಬೆಲೆ ಇಳಿಕೆಯಾಗಿಲ್ಲ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗಿದ್ದರಿಂದ ಇಷ್ಟು ದಿನ ದುಬಾರಿಯಾಗಿತ್ತು. ಬದಲಿಗೆ ಉಪಚುನಾವಣೆಯಲ್ಲಿ ಸೋತಿದ್ದರಿಂದ ಬೆಲೆ ಇಳಿಕೆಯಾಗಿಲ್ಲ ಎಂದರು. ಇದನ್ನೂ ಓದಿ: ಅಪ್ಪು ಸದಾ ನಮ್ಮ ಹೃದಯದಲ್ಲಿ ನಗುತ್ತಿರುತ್ತಾರೆ – ಪುನೀತ್ ನೆನೆದು ಬಿಕ್ಕಿ, ಬಿಕ್ಕಿ ಅತ್ತ ಸೂರ್ಯ

    ಉಪಚುನಾವಣೆಯ ಸೋಲಿನಿಂದ ಬಿಜೆಪಿಗೆ ಹಿನ್ನಡೆಯಾಗಿಲ್ಲ. ಆದರೆ ಕಳೆದ ಉಪ ಚುನಾವಣೆಯಲ್ಲಿ ಸೋತಿದ್ದನ್ನು ಕಾಂಗ್ರೆಸ್‍ನವರು ಮರೆತಿದ್ದಾರೆ. ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಊಹಾಪೋಹ. ಯೋಗೇಶ್ವರ್ ಅವರನ್ನು ಕಾಂಗ್ರೆಸ್‍ಗೆ ಸೇರಿಸಿಕೊಳ್ಳಲು ಇನ್ನೊಬ್ಬರು ಬಯಸ್ತಿದ್ದಾರೆ. ಆದರೆ ಯೋಗೇಶ್ವರ್ ಬಿಜೆಪಿ ಬಿಡುವುದಿಲ್ಲ. ಅವರಿಗೆ ಸಚಿವ ಸ್ಥಾನ ನೀಡುವುದು ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ಹೇಳಿದರು. ಇದನ್ನೂ ಓದಿ: ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

  • ಯಶವಂತಪುರ RTO ಕಾಂಪ್ಲೆಕ್ಸ್ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲಿಸಿದ ಸಚಿವ ಮುನಿರತ್ನ

    ಯಶವಂತಪುರ RTO ಕಾಂಪ್ಲೆಕ್ಸ್ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲಿಸಿದ ಸಚಿವ ಮುನಿರತ್ನ

    ಬೆಂಗಳೂರು: ಯಶವಂತಪುರ ಆರ್ ಟಿಒ ಕಾಂಪ್ಲೆಕ್ಸ್ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಇಂದು ಜಂಟಿ ತಪಾಸನೆ ನಡೆಸಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ರಸ್ತೆ ಅಗಲೀಕರಣ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಮುನಿರತ್ನ ತಿಳಿಸಿದರು.

    ನಗರದ ಯಶವಂತಪುರ ಆರ್ ಟಿಒ ಕಾಂಪ್ಲೆಕ್ಸ್ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಇಂದು ನಡೆಸಿದ ಜಂಟಿ ತಪಾಸಣೆಯ ಬಳಿಕ ಮಾತನಾಡಿದ ಅವರು, ಈ ಭಾಗದಲ್ಲಿ ರಸ್ತೆ ಅಗಲೀಕರಣ ಮಾಡುವುದರಿಂದ ನಾಗರೀಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಇಲ್ಲಿ ರೈಲ್ವೆ ನಿಲ್ದಾಣ, ಮಾರುಕಟ್ಟೆ ಬರುವ ನಾಗರೀಕರಿಗೆ ಯಾವುದೇ ಸಮಸ್ಯೆ ಆಗದಂತೆ ಸುಗಮ ವಾಹನ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಜೊತೆಗೆ ನೂತನವಾಗಿ 400 ಹಾಸಿಗೆ ಸಾಮರ್ಥ್ಯದ ಕೋವಿಡ್ ಆಸ್ಪತ್ರೆಯನ್ನು ತೆರೆಯಲಾಗುತ್ತಿದ್ದು, ಶೀಘ್ರ ಆಸ್ಪತ್ರೆಯನ್ನು ಉದ್ಘಾಟಿಸಲಾಗುಗುವುದು ಎಂದು ತಿಳಿಸಿದರು.

    ಉನ್ನತ ಶಿಕ್ಷಣ ಸಚಿವರು ಡಾ. ಸಿ.ಎನ್.ಅಶ್ವತ್ಥನಾರಾಯಣ್ ಮಾತನಾಡಿ, ನಗರದಲ್ಲಿ ಯಶವಂತಪುರ ಪ್ರಸಿದ್ಧವಾದ ಸ್ಥಳವಾಗಿದ್ದು, ಈ ಭಾಗದ ನಾಗರೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದ ವಾಹನಗಳ ಚಾಲನೆಗೆ, ರೈಲ್ವೆ ನಿಲ್ದಾಣಕ್ಕೆ ತೆರವಳುವವರಿಗೆ ಯಾವುದೇ ಸಮಸ್ಯೆ ಆಗದಂತೆ ರಸ್ತೆ ಉತ್ತಮವಾಗಿರಲು ಕ್ರಮವಹಿಸಲಾಗುತ್ತಿದ್ದು, ಅದಕ್ಕೆ ನೀಲನಕ್ಷೆಯನ್ನು ಸಿದ್ದಪಡಿಸಿ ಅದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.

    ಮುಖ್ಯ ಆಯುಕ್ತ ಗೌರವ್ ಗುಪ್ತ ರವರು ಮಾತನಾಡಿ, ಯಶವಂತಪುರ ಆರ್ ಟಿಒ ಕಾಂಪ್ಲೆಕ್ಸ್ ಬಳಿ ಎಲ್ಲರಿಗೂ ಅನುಕೂಲ ಮಾಡಿಕೊಡಲು ಕೆಲವು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಯೋಜನೆ ಅನುಷ್ಟಾನಗೊಳಿಸುವ ಸಂಬಂಧ ಅಧಿಕಾರಿಗಳಿಗೆ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿ ಅಂದಾಜು ವೆಚ್ಚದ ಪಟ್ಟಿಯನ್ನು ಸಿದ್ದಪಡಿಸಲು ತಿಳಿಸಲಾಗಿದ್ದು, ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಕ್ಷಿಪ್ರಗತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು. ಇದನ್ನೂ ಓದಿ: ಉಡುಪಿಯ ವಾರಾಂತ್ಯ ಕರ್ಫ್ಯೂ ಬಗ್ಗೆ ಸಿಎಂ ಪುನರ್ ಪರಿಶೀಲಿಸಲಿ- ಸಚಿವ ಕೋಟ

    ತಪಾಸಣೆಯ ವೇಳೆ ವಿಶೇಷ ಆಯುಕ್ತರುಗಳಾದ ಬಸವರಾಜು, ರೆಡ್ಡಿ ಶಂಕರ ಬಾಬು, ಮನೋಜ್ ಜೈನ್, ವಲಯ ಜಂಟಿ ಆಯುಕ್ತರುಗಳಾದ ನಾಗರಾಜ್, ಶಿವಸ್ವಾಮಿ, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಪ್ರಭಾಕರ್, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ವಿದ್ಯಾರ್ಥಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ

  • ಲಾಲ್‍ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಉದ್ಯಾನವನ: ತೋಟಗಾರಿಕೆ ಸಚಿವ ಮುನಿರತ್ನ

    ಲಾಲ್‍ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಉದ್ಯಾನವನ: ತೋಟಗಾರಿಕೆ ಸಚಿವ ಮುನಿರತ್ನ

    ಕೋಲಾರ: ಅಂತರಾಷ್ಟ್ರೀಯ ಮಟ್ಟದಲ್ಲಿ ಹೆರುವಾಸಿಯಾದ ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಮೂರನೇ ದೊಡ್ಡ ಉದ್ಯಾನವನ ಮಾಡುವ ಚಿಂತನೆ ನಡೆಯುತ್ತಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.

    75ನೇ ಸ್ವತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರು ಕಟ್ಟಿದ ಕೆಂಪುತೋಟ 34 ಎಕರೆ ಮತ್ತು ಅದರ ಜೊತೆಗೆ 240 ಎಕರೆ ಲಾಲ್ ಬಾಗ್ ಮತ್ತು ಕಬ್ಬನ್ ಉದ್ಯಾನವನ ಬಿಟ್ಟರೆ ಇದುವರೆಗೂ ಬಹುದೊಡ್ಡ ಉದ್ಯಾನವನ ನಿರ್ಮಾಣವಾಗಿಲ್ಲ. ಸುಮಾರು 300 ರಿಂದ 400 ವರ್ಷಗಳಿಂದ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ನಂತರ ಯಾವುದೇ ಮೂರನೇ ಉದ್ಯಾನವನ ಮಾಡುವ ಚಿಂತನೆ ಮಾಡಿಲ್ಲ. ಇವೆರೆಡು ಉದ್ಯಾನವನವನ್ನು ಬಿಟ್ಟರೆ ಅದಕ್ಕಿಂತ ದೊಡ್ಡ ಉದ್ಯಾನವನವನ್ನು ನಿರ್ಮಾಣ ಮಾಡುವ ಚಿಂತನೆ ನಮ್ಮ ಸರ್ಕಾರದಲ್ಲಿ ನಡೆಯುತ್ತಿದೆ. ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವಂತೆ ಮಾಡಬೇಕು ಎಂಬುದು ನನ್ನ ಉದ್ದೇಶ ಎಂದು ತಿಳಿಸಿದರು.

    ಪ್ರಪಂಚದಲ್ಲಿ ಯಾವುದೇ ದೇಶಕ್ಕೆ ಹೋದ್ರು ಭಾರತ, ಕರ್ನಾಟಕ ಅನ್ನೋದಿಲ್ಲ, ಬೆಂಗಳೂರು ಸಿಲಿಕಾನ್ ಸಿಟಿ ಅಂತ ತನ್ನದೇ ಹೆಸರು ಹೊಂದಿದೆ. ಹಾಗಾಗಿ ಮೂರನೇ ಅತಿ ದೊಡ್ಡ ಉದ್ಯಾನವನ ಮಾಡಬೇಕಾಗಿರೋದು ನಮ್ಮ ಗುರಿಯಾಗಿದೆ. ಕೋಲಾರ ಜಿಲ್ಲೆಯ ಅಭಿವೃದ್ದಿ ನನ್ನ ಮೊದಲ ಧ್ಯೇಯ. ಹಂತ ಹಂತವಾಗಿ ಜಿಲ್ಲೆಯಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಮಂಗಳೂರು ಏರ್ ಪೋರ್ಟ್ ರ್‍ಯಾಪಿಡ್ ಪಿಸಿಆರ್ ಟೆಸ್ಟ್ – ಅನಿವಾಸಿಗಳ ಬೇಡಿಕೆಗೆ ಸ್ಪಂದಿಸಿದ ದ.ಕ. ಡಿಸಿ

    ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ, ಶಾಸಕ ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಗೊವಿಂದರಾಜು, ಜಿಲ್ಲಾಧಿಕಾರಿ ಡಾ. ಅರ್. ಸೆಲ್ವಮಣಿ, ಜಿಲ್ಲಾ ವರಿಷ್ಠಾಧಿಕಾರಿ ಕಿಶೋಬಾಬು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ರು. ಇದನ್ನೂ ಓದಿ: ಮನಸ್ಸಿನಲ್ಲಿ ಸ್ವಾತಂತ್ರ್ಯವಿರಲಿ, ಪದಗಳಲ್ಲಿ ನಂಬಿಕೆಯಿರಲಿ: ಯಶ್