Tag: ಸಚಿವ ಮುಕುಟ್ ಬಿಹಾರಿ ವರ್ಮಾ

  • ರಾಮಮಂದಿರ ನಿರ್ಮಾಣ ಖಚಿತ, ಸುಪ್ರೀಂ ಕೋರ್ಟ್ ನಮ್ಮದೇ: ಯುಪಿ ಸಚಿವ

    ರಾಮಮಂದಿರ ನಿರ್ಮಾಣ ಖಚಿತ, ಸುಪ್ರೀಂ ಕೋರ್ಟ್ ನಮ್ಮದೇ: ಯುಪಿ ಸಚಿವ

    ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂತ್ರಿಮಂಡಲದ ಸಚಿವರೊಬ್ಬರು ಅಯೋಧ್ಯೆ ರಾಮಮಂದಿರ ನಿರ್ಮಾಣದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಸಹಕಾರ ಸಚಿವ ಮುಕುಟ್ ಬಿಹಾರಿ ವರ್ಮಾ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ಸುಪ್ರೀಂ ಕೋರ್ಟ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇನ್ನು ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗಲಿದೆ ಎಂದು ಅರಿತ ಸಚಿವರು, ಹೇಳಿಕೆಗೆ ಸ್ಪಷ್ಟನೆ ನೀಡಿದರು.

    ಸಚಿವ ಮುಕುಟ್ ಹೇಳಿದ್ದು ಏನು?
    ಮಾಧ್ಯಮಗಳ ಜೊತೆ ಮಾತನಾಡಿದ ಸಹಕಾರ ಸಚಿವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ. ಅಭಿವೃದ್ಧಿಯ ಉದ್ದೇಶದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಅಯೋಧ್ಯೆದಲ್ಲಿ ರಾಮಮಂದಿರ ನಿರ್ಮಾಣವೇ ನಮ್ಮ ಪ್ರಮುಖ ಗುರಿಯಾಗಿದೆ. ಈ ವಿವಾದವು ಈಗ ನ್ಯಾಯಾಲಯದಲ್ಲಿದ್ದು, ಸುಪ್ರೀಂ ಕೋರ್ಟ್ ನಮ್ಮದೆ. ದೇಶದ ನ್ಯಾಯಾಂಗ, ಆಡಳಿತ, ರಾಷ್ಟ್ರ ಹಾಗೂ ರಾಮ ಮಂದಿರ ನಮಗೆ ಸೇರಿದ್ದು ಎಂದು ಸಚಿವರು ಹೇಳಿದ್ದಾರೆ.

    ತಮ್ಮ ವಿವಾದಾತ್ಮಕ ಹೇಳಿಕೆಯಿಂದ ಎಚ್ಚೆತ್ತುಕೊಂಡ ಸಚಿವರು, ಸುಪ್ರೀಂ ಕೋರ್ಟ್ ನಮ್ಮದೆ ಎಂದರೆ, ಸುಪ್ರೀಂ ಕೋರ್ಟ್ ನಮ್ಮ ಸರ್ಕಾರಕ್ಕೆ ಸೇರಿದೆ ಎಂದರ್ಥವಲ್ಲ. ಅದು ದೇಶದ ಪ್ರತಿಯೊಬ್ಬ ಜನತೆಗೆ ಸೇರಿದೆ ಎನ್ನುವುದಾಗಿ ನಾನು ಹೇಳಿರುವೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv