Tag: ಸಚಿವ ಪ್ರಮೋದ್ ಮಧ್ವರಾಜ್

  • ಭದ್ರತೆ ಕೋರಿ ಸಚಿವ ಪ್ರಮೋದ್ ಮಧ್ವರಾಜ್ ಗೃಹ ಇಲಾಖೆಗೆ ಪತ್ರ

    ಭದ್ರತೆ ಕೋರಿ ಸಚಿವ ಪ್ರಮೋದ್ ಮಧ್ವರಾಜ್ ಗೃಹ ಇಲಾಖೆಗೆ ಪತ್ರ

    ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಹೆಚ್ಚುವರಿ ಭದ್ರತೆ ಕೋರಿ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಹಾಗಾದ್ರೆ ಸಚಿವ ಪ್ರಮೋದ್ ಮಧ್ವರಾಜ್ ಗೆ ಬೆದರಿಕೆ ಇದ್ಯಾ ಎಂಬ ಪ್ರಶ್ನೆ ಎದ್ದಿದೆ.

    ನಗರದಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನಲೆಯಲ್ಲಿ ಕ್ಷೇತ್ರಾದ್ಯಂತ ಪ್ರಚಾರ ಸಭೆಗಳು ಇರುತ್ತದೆ. ಈ ಸಂದರ್ಭದಲ್ಲಿ ಹೆಚ್ಚುವರಿ ಭದ್ರತೆ ನೀಡಬೇಕೆಂದು ಕೋರಿದ್ದೇನೆ. ಗೃಹ ಇಲಾಖೆಯಲ್ಲಿ ಏನು ಬೆಳವಣಿಗೆಯಾಗಿದೆಯೆಂದು ಗೊತ್ತಿಲ್ಲ ಅಂತ ಹೇಳಿದ್ರು.

    ಸಂಭವನೀಯ ಅನಾಹುತ ತಪ್ಪಿಸಲು ಹೆಚ್ಚುವರಿ ಭದ್ರತೆ ಕೋರಿ ಪತ್ರ ಬರೆದಿದ್ದೇನೆ. ಅವಘಡ ಆಗದಿರಲಿ ಎಂದು ಮುನ್ನಚ್ಚರಿಕಾ ದೃಷ್ಟಿಯಿಂದ ಪತ್ರ ಬರೆಯಲಾಗಿದೆ ಅಂದ್ರು.

    ಗೃಹ ಇಲಾಖೆಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭದ್ರತೆ ಕೊಡೋದು ಬಿಡೋದು ಸರ್ಕಾರಕ್ಕೆ ಬಿಟ್ಟದ್ದು. ಯಾವ ಕಾರಣಕ್ಕೆ ಭದ್ರತೆ ಬೇಕು ಅಂತ ಸಚಿವರು ಪತ್ರದಲ್ಲಿ ಯಾವುದೇ ಕಾರಣ ಕೊಟ್ಟಿಲ್ಲ. ಮುನ್ನಚ್ಚೆರಿಕೆಗೆ ಎಂದಷ್ಟೇ ಬರೆದಿದ್ದಾರೆ. ಸಚಿವರಿಗೇನಾದ್ರು ಬೆದರಿಕೆ ಇದ್ಯಾ, ಅಥವಾ ನೂರಾರು ಕೋಟಿ ರೂಪಾಯಿ ಒಡೆಯನಿಗೆ ಏನಾದ್ರು ಆಪತ್ತು ಎದುರಾಗಿದ್ಯಾ ಅನ್ನುವ ಪ್ರಶ್ನೆಗಳನ್ನು ಉಡುಪಿ ಜನತೆ ಕೇಳುತ್ತಿದ್ದಾರೆ. ಬಗ್ಗೆ ಸಚಿವರು ಉತ್ತರ ಕೊಡದೆ ನಕ್ಕು, ಸುಮ್ಮನಾಗಿದ್ದಾರೆ.

  • ಸಚಿವ ಪ್ರಮೋದ್ ಮಧ್ವರಾಜ್ ಪ್ರಚಾರದ ವಾಹನಕ್ಕೆ ಕೈ ಬಂತು ಕೈ!

    ಸಚಿವ ಪ್ರಮೋದ್ ಮಧ್ವರಾಜ್ ಪ್ರಚಾರದ ವಾಹನಕ್ಕೆ ಕೈ ಬಂತು ಕೈ!

    ಉಡುಪಿ: ಚುನಾವಣಾ ಪ್ರಚಾರ ವಾಹನದಲ್ಲಿ ಎಐಸಿಸಿ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾವೊಬ್ಬ ನಾಯಕರ ಭಾವಚಿತ್ರ ಹಾಕದೆ ಪ್ರಚಾರ ವಾಹನ ಸಿದ್ಧಗೊಳಿಸಿದ್ದ ಸಚಿವ ಪ್ರಮೋದ್ ಮಧ್ವರಾಜ್ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದು, ತಮ್ಮ ಪ್ರಚಾರ ವಾಹನದಲ್ಲಿ ಕಾಂಗ್ರೆಸ್ ಪಕ್ಷದ `ಕೈ’ ಚಿನ್ಹೆಯನ್ನು ಅಂಟಿಸಿದ್ದಾರೆ.

    ಕಳೆದ 15 ದಿನದಿಂದ ಮೀನುಗಾರಿಕಾ, ಯುವಜನ ಮತ್ತು ಕ್ರೀಡಾ ಸಚಿವರಾಗಿರುವ ಪ್ರಮೋದ್ ಮಧ್ವರಾಜ್ ತಮ್ಮ ಪಕ್ಷದ ಯಾವುದೇ ಕುರುಹು ಇಲ್ಲದೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಸಿಎಂ ಸಿದ್ದರಾಮಯ್ಯ, ಕೇಂದ್ರ ನಾಯಕರುಗಳಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಪಕ್ಷದ ಚಿನ್ಹೆ ಇಲ್ಲದೆ ಮಧ್ವರಾಜ್ ಪ್ರಚಾರ ವಾಹನವನ್ನು ತನ್ನೊಬ್ಬನದ್ದೇ ಕಟೌಟ್ ಹಾಕಿ ಸಿಂಗಾರ ಮಾಡಿದ್ದರು. ಈ ಬೆಳವಣಿಗೆ ರಾಜ್ಯವ್ಯಾಪಿ ಸುದ್ದಿಯಾಗಿತ್ತು.

    ಸಚಿವರ ಈ ನಡೆ ಪಕ್ಷದ ಹಿರಿಯರ ಕೆಂಗಣ್ಣಿಗೆ ಕಾರಣವಾಗಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿದ್ದ ಸಚಿವರು ಮಧ್ವರಾಜ್ ಅಭಿಮಾನಿಗಳ ಸಂಘ ದ ವತಿಯಿಂದ ವಾಹನ ತಯಾರು ಮಾಡಿರುವುದರಿಂದ ಪಕ್ಷಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದರು. ಆದರೆ ಸಚಿವರ ಈ ಹೇಳಿಕೆಗೆ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರು ಮುನಿಸಿಕೊಂಡಿದ್ದರು. ಪಕ್ಷದ ಹಿರಿಯರಿಗೂ ಪ್ರಮೋದ್ ಮಧ್ವರಾಜ್ ಅವನ ವನ್ ಮ್ಯಾನ್ ಶೋ ಬಗ್ಗೆ ಅಸಮಾಧಾನ ಉಂಟಾಗಿತ್ತು ಎನ್ನಲಾಗಿದೆ.

    ಇದೀಗ ಚುನಾವಣೆಯ ಹೊಸ್ತಿಲಲ್ಲಿ ಗೊಂದಲಗಳನ್ನು ಮೈಮೇಲೆ ಏಳೆದುಕೊಳ್ಳುವುದು ಬೇಡ ಎಂದು ನಿರ್ಧರಿಸಿರುವ ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ನ ಹಸ್ತದ ಚಿನ್ಹೆಯನ್ನು ತಮ್ಮ ಪ್ರಚಾರ ವಾಹನದಲ್ಲಿ ಅಂಟಿಸಿದ್ದಾರೆ. ಪ್ರಚಾರಕ್ಕಾಗಿ ಬಳಕೆ ಮಾಡುತ್ತಿರುವ ಎರಡು ವಾಹನದಲ್ಲಿ ಈಗ ಹಸ್ತದ ಚಿನ್ಹೆ ರಾರಾಜಿಸುತ್ತಿದೆ.

    ವಾಹನಗಳ ಹಿಂದೆ ಮುಂದೆ, ಅಕ್ಕ ಪಕ್ಕ ಹಸ್ತದ ಚಿತ್ರವನ್ನು ಉಡುಪಿ ಪ್ರವಾಸಿ ಮಂದಿರದಲ್ಲಿ ಅಂಟಿಸಿ ವಾಹನಗಳನ್ನು ಪ್ರಚಾರಕ್ಕೆ ಕೊಂಡೊಯ್ಯಲಾಗಿದೆ. ಈ ಮೂಲಕ ಕಾಂಗ್ರೆಸ್ ಹಿರಿಯ ನಾಯಕರು, ಕಾರ್ಯಕರ್ತರು ಮತದಾರರನ್ನು ತೃಪ್ತಿಪಡಿಸಲು ಪ್ರಮೋದ್ ಮಧ್ವರಾಜ್ ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

  • ಬಡವರ ಸಾಲಕ್ಕೆ ಸತಾಯಿಸುವ ಬ್ಯಾಂಕ್ ಅಧಿಕಾರಿಗಳು ಈಗ ಸುಮ್ಮನಿದ್ದಾರೆ ಯಾಕೆ: ಟಿ.ಜೆ ಅಬ್ರಹಂ

    ಬಡವರ ಸಾಲಕ್ಕೆ ಸತಾಯಿಸುವ ಬ್ಯಾಂಕ್ ಅಧಿಕಾರಿಗಳು ಈಗ ಸುಮ್ಮನಿದ್ದಾರೆ ಯಾಕೆ: ಟಿ.ಜೆ ಅಬ್ರಹಂ

    ಉಡುಪಿ: ದಾವೂದ್ ಯಾವತ್ತೂ ನಗು ನಗ್ತಾ ಇರ್ತಾನೆ. ಆತ ಅಳೋದನ್ನು ನಾನು ನೋಡಿಲ್ಲ. ಸಚಿವ ಪ್ರಮೋದ್ ಮಧ್ವರಾಜ್ ಕೂಡಾ ದಾವುದ್ ರೀತಿ ನಗ್ತಾರೆ ಎಂದು ಆರ್‍ಟಿಐ ಹೋರಾಟಗಾರ ಟಿ.ಜೆ ಅಬ್ರಹಂ ಹೇಳಿಕೆ ನೀಡಿದ್ದಾರೆ.

    ಮಲ್ಪೆ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ 1.1 ಕೋಟಿ ರೂಪಾಯಿ ಆಸ್ತಿಪತ್ರ ಅಡವಿಟ್ಟು 193 ಕೋಟಿ ರೂಪಾಯಿ ಸಚಿವರು ಸಾಲ ಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣ ಮಾಡಿದ್ದಾರೆ ಅಂತ ದಾಖಲೆ ಕೊಟ್ಟರೂ ಮಾಧ್ಯಮದ ಮುಂದೆ ನಗ್ತಾರೆ ಅಂತ ಟೀಕಿಸಿದರು.

    ಪ್ರಮೋದ್ ಮಧ್ವರಾಜ್ ಅವರೇ ನೀವು ನಿರಪರಾಧಿ ಎಂದು ದಾಖಲೆ ಬಿಡುಗಡೆ ಮಾಡಿ. ಮುಚ್ಚುಮರೆ ಮಾಡುವುದ್ಯಾಕೆ? ನಾನು ಸವಾಲು ಹಾಕುತ್ತಿದ್ದೇನೆ. ದಾಖಲೆ ಕೊಡಿ ಎಂದು ಒತ್ತಾಯಿಸಿದ್ದಾರೆ. ಸತ್ಯ ಹೊರ ತೆಗೆಯಲು ಹೊರಟರೆ ನಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲು ಹೊರಡ್ತಾರೆ. ನಾನು ಯಾವುದನ್ನೂ ಕೇರ್ ಮಾಡಲ್ಲ ಅಂತ ತಿರುಗೇಟು ನೀಡಿದರು. ಇದನ್ನೂ ಓದಿ: 193 ಕೋಟಿ ರೂ. ವಂಚನೆ: ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದೂರು ದಾಖಲು

    ಸಿಂಡಿಕೇಟ್ ಬ್ಯಾಂಕ್ ಸಚಿವ ಪ್ರಮೋದ್ ಪರವಾಗಿ ನಿಂತಿದೆ. ಬ್ಯಾಂಕ್ ಅಧಿಕಾರಿಗಳು ಕಾನೂನು ಬಾಹಿರವಾಗಿ ಸಾಲ ನೀಡಿದ್ದಾರೆ. ರಾಜ್ಯದಲ್ಲಿ ಸಾಲ ಮಾಡಿ ಸತ್ತಿರೋ ರೈತರು ಎರಡು ಲಕ್ಷಕ್ಕೆ ಹೆಚ್ಚು ಬ್ಯಾಂಕಿಂದ ತೆಗೆದುಕೊಂಡಿಲ್ಲ. ಶ್ರೀಮಂತರಿಗೆ ಕೋಟಿ ಕೋಟಿ, ರೈತರು ಲಕ್ಷ ಸಾಲ ಮಾಡಿದ್ರೆ ಬ್ಯಾಂಕುಗಳು ಬೆನ್ನತ್ತುತ್ತದೆ. ಬಡವರು ಸಾಲ ಪಡೆದರೆ ಸತಾಯಿಸುವ ಬ್ಯಾಂಕ್ ಅಧಿಕಾರಿಗಳು ಈಗ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.

    ಬ್ಯಾಂಕ್ ಡಿಜಿಎಂ ಮಾಧ್ಯಮಗಳ ಮೂಲಕ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಬ್ಯಾಂಕ್ ಮೇಲೆ ಐದು ಕೋಟಿ ರೂ. ಮಾನ ನಷ್ಟ ಮೊಕದ್ದಮೆ ಹಾಕುತ್ತೇನೆ. ಕೇಂದ್ರ ಸರ್ಕಾರ ಸರಿಯಾಗಿಯೇ ತನಿಖೆ ಮಾಡುತ್ತದೆ ಎಂದು ಹೇಳಿದರು.

    ಚುನಾವಣೆಗೂ ಈ ಕೇಸಿಗೂ ಸಂಬಂಧವಿಲ್ಲ. ಯಡಿಯೂರಪ್ಪನವರ ಮೇಲೂ ಕೇಸು ಹಾಕಿದ್ದೇನೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ ಮೇಲೂ ಕೇಸ್ ಇದೆ ಎಂದು ಸ್ಪಷ್ಟನೆ ನೀಡಿದರು.

  • 193 ಕೋಟಿ ರೂ. ವಂಚನೆ: ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದೂರು ದಾಖಲು

    193 ಕೋಟಿ ರೂ. ವಂಚನೆ: ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದೂರು ದಾಖಲು

    ಉಡುಪಿ: ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವಾ ವಿಭಾಗದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಮೇಲೆ ದೂರು ದಾಖಲಾಗಿದೆ.

    ಮಧ್ವರಾಜ್ ಅವರು ಸಿಂಡಿಕೇಟ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ಕೇವಲ 1.01 ಕೋಟಿ ರೂಪಾಯಿ ಮೌಲ್ಯದ ಸೊತ್ತುಗಳ ದಾಖಲೆ ನೀಡಿ 193 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಈ ಅಕ್ರಮಕ್ಕೆ ಬ್ಯಾಂಕ್ ಅಧಿಕಾರಿಗಳು ಕುಮ್ಮಕ್ಕು ನೀಡಿದ್ದಾರೆ. ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವಾ ವಿಭಾಗದಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

    ಕಡಿಮೆ ಮೊತ್ತದ ದಾಖಲೆ ನೀಡಿ ನೂರಾರು ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎಂದು ದೆಹಲಿಯಲ್ಲಿರುವ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಆರ್‍ಟಿಐ ಕಾರ್ಯಕರ್ತ ಟಿ ಜೆ ಆಬ್ರಹಂ ದೂರು ನೀಡಿದ್ದಾರೆ.

    ಈ ಆರೋಪವನ್ನು ಸಚಿವ ಪ್ರಮೋದ್ ಮಧ್ವರಾಜ್ ತಳ್ಳಿ ಹಾಕಿದ್ದಾರೆ. ಈ ಆರೋಪ ನೂರಕ್ಕೆ ನೂರು ಸುಳ್ಳು. ಬ್ಯಾಂಕಿಗೆ ಎಷ್ಟು ಆಸ್ತಿ ಇಡಬೇಕೋ ಅದನ್ನು ಇಟ್ಟಿದ್ದೇನೆ. ನಾನು ಸೂಕ್ತ ದಾಖಲೆ ಕೊಟ್ಟು ಸಾಲ ಪಡೆದಿದ್ದೇನೆ. ಸಿಂಡಿಕೇಟ್ ಬ್ಯಾಂಕ್ ಅವರನ್ನೇ ಬೇಕಾದ್ರೆ ಕೇಳಿ ಎಂದಿದ್ದಾರೆ.

    ಬ್ಯಾಂಕಿನ ಸಾಲ ನಾನು ಕೊಟ್ಟ ಆಸ್ತಿ ಮೇಲೆ ನೀಡಲಾಗಿದೆ. ಸಿಂಡಿಕೇಟ್ ಬ್ಯಾಂಕ್ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಯಾವ ತನಿಖೆ ಬೇಕಾದ್ರೂ ನಡೆಸಬಹುದು. ನನ್ನಿಂದ ಯಾವ ವಂಚನೆಯೂ ಆಗಿಲ್ಲ. ವಂಚನೆ ಮಾಡಿದರೆ ನಾನು ಹೀಗೆ ಎಲ್ಲಾಕಡೆ ಸಂತೋಷದಿಂದ ತಿರುಗುತ್ತಿರಲಿಲ್ಲ. ಸುಳ್ಳು ಆರೋಪವನ್ನು ಮಾಧ್ಯಮ ಮತ್ತು ಜನ ನಂಬುತ್ತಾರೆ ಎಂದರೆ ನಾನು ಹೆಲ್ಪ್ ಲೆಸ್. ಮಲ್ಪೆ ಬ್ಯಾಂಕಲ್ಲಿ ನನ್ನ ಖಾತೆಯಿದೆ. ಯಾರು ಬೇಕಾದ್ರೂ ಪರೀಕ್ಷಿಸಬಹುದು ಎಂದು ಪ್ರಮೋದ್ ಮಧ್ವರಾಜ್ ಸ್ಪಷ್ಟನೆ ಕೊಟ್ಟಿದ್ದಾರೆ.

  • ಬಿಜೆಪಿ ಸೇರಲಿದ್ದಾರೆ ಅನ್ನೋ ಉಹಾಪೋಹಗಳಿಗೆ ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದು ಹೀಗೆ

    ಬಿಜೆಪಿ ಸೇರಲಿದ್ದಾರೆ ಅನ್ನೋ ಉಹಾಪೋಹಗಳಿಗೆ ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದು ಹೀಗೆ

    ಉಡುಪಿ: ನನ್ನನ್ನು ಬಿಟ್ಟುಬಿಡಿ. ಕೈಮುಗಿದು ಶಿರಬಾಗಿ ಕೇಳಿಕೊಳ್ಳುತ್ತೇನೆ. ಕೇಂದ್ರ ಸಚಿವ ಅನಂತ್ ಕುಮಾರ್ ಜೊತೆ ಸೌಜನ್ಯದ ಭೇಟಿ ಮಾಡಿದ್ದೇನೆ. ಗಾಳಕ್ಕೆ ಬಾಯಿ ಹಾಕುವ ಜಾತಿ ನಮ್ಮದಲ್ಲ ಅಂತ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

    ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರಲಿದ್ದಾರೆ ಅನ್ನೋ ಉಹಾಪೋಹಗಳಿಗೆ ಕಡಿವಾಣ ಹಾಕಿದ ಅವರು, ನನ್ನನ್ನು ಬಿಟ್ಟುಬಿಡಿ. ಅನಂತಕುಮಾರ್ ಜೊತೆ ಸೌಜನ್ಯದ ಭೇಟಿ ಮಾಡಿದ್ದೇನೆ. ಒಂದು ವೇಳೆ ನಾನು ಅವರನ್ನು ಭೇಟಿಯಾಗದಿದ್ದರೂ ಅದೊಂದು ಸುದ್ದಿಯಾಗುತ್ತಿತ್ತು. ನಾವಿಬ್ಬರು ಕೋಣೆಯೊಳಗೆ ಕುಳಿತು ಮಾತನಾಡಲಿಲ್ಲ. ಇದಕ್ಕೆ ಅಪಾರ ಅರ್ಥ ಕಲ್ಪಿಸೋದು ಬೇಡ. ಕಾಂಗ್ರೆಸ್ ತೊರೆಯುವ ಪ್ರಸ್ತಾಪ ಇಲ್ಲ. ಈ ಕುರಿತು ಹಲವು ಬಾರಿ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಅಮಿತ್ ಷಾ ಮುಖವನ್ನೇ ನಾನು ನೋಡಿಲ್ಲ. ಯಾವ ಗಾಳವನ್ನು ಯಾರೂ ಹಾಕಿಲ್ಲ. ನಾನು ಕೂಡ ಗಾಳಕ್ಕೆ ಬಾಯಿ ಹಾಕುವ ಜಾತಿಯವನಲ್ಲ ಅಂತ ಸ್ಪಷ್ಟನೆ ನಿಡಿದ್ದಾರೆ.

    ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ ಅನ್ನುವ ಸುದ್ದಿ ಸಾಕಷ್ಟು ದಿನಗಳಿಂದ ಓಡಾಡುತ್ತಿದೆ. ಇದಕ್ಕೆ ಸಾಕ್ಷಿಯಂತೆ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿ ಮಾತನಾಡುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

    ಈ ಫೋಟೋ ರಾಜಕೀಯ ವಲಯದ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಬ್ರಹ್ಮಾವರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಉಡುಪಿಗೆ ಬಂದಿದ್ದ ಅನಂತ್ ಕುಮಾರ್ ಅವರು ಪ್ರವಾಸಿ ಮಂದಿರದಲ್ಲಿ ಕೆಲ ಕಾಲ ಉಳಿದಿದ್ದರು. ಆ ಸಂದರ್ಭದಲ್ಲಿಯೆ ಪ್ರಮೋದ್ ಅವರೂ ಪ್ರವಾಸಿ ಮಂದಿರಕ್ಕೆ ಹೋಗಿ ಅವರನ್ನು ಭೇಟಿ ಮಾಡಿ, ಕೆಲ ಹೊತ್ತು ಮಾತುಕತೆ ನಡೆಸಿದ್ದರು.

    ಈ ಸಂದರ್ಭ ಬಿಜೆಪಿ ಮುಖಂಡ ಆರ್. ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಮತ್ತಿತರರು ಇದ್ದರು. ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಸಂದರ್ಭದಲ್ಲಿ ಈ ಭೇಟಿ ಮತ್ತಷ್ಟು ಮಹತ್ವ ಪಡೆದಿತ್ತು.

  • ಉಡುಪಿ: ಪತ್ನಿಗೆ ನ್ಯಾಯ ದೊರಕಿಸಿ ಎಂದ ಪೇದೆಗೆ ಸಸ್ಪೆಂಡ್ ಭಾಗ್ಯ!

    ಉಡುಪಿ: ಪತ್ನಿಗೆ ನ್ಯಾಯ ದೊರಕಿಸಿ ಎಂದ ಪೇದೆಗೆ ಸಸ್ಪೆಂಡ್ ಭಾಗ್ಯ!

    ಉಡುಪಿ: ಉಡುಪಿಯಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿ ಪ್ರಕಾಶ್ ಅವರ ಗರ್ಭಿಣಿ ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ ಆರೋಪಿ ಕುಮಾರ್ ಗೆ ಪೊಲೀಸರು ಬೆಂಬಲವಾಗಿ ನಿಂತಿರುವ ಆರೋಪ ಕೇಳಿ ಬಂದಿದೆ.

    ನಡೆದಿದ್ದೇನು?:  ಏಪ್ರಿಲ್ 5 ರಂದು ಮಲ್ಪೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕಾಶ್ ಪತ್ನಿ ಜ್ಯೋತಿ ಗರ್ಭಿಣಿಯಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ವೇಳೆ ಮೆಡಿಕಲೊಂದರ ಸಮೀಪದಲ್ಲಿ ಕುಮಾರ್ ಎಂಬ ಯುವಕ ಕಣ್ಣೊಡೆದು ಮೈತಟ್ಟುವ ಮೂಲಕ ಕಿರುಕುಳ ನೀಡಿದ್ದನು. ಇದನ್ನು ಪ್ರಶ್ನಿಸಿದ ಪ್ರಕಾಶ್ ಆತನಿಗೆ ಎರಡೇಟು ಕೊಟ್ಟಿದ್ದರು. ಅಲ್ಲದೇ ಪತ್ನಿಯ ಮೇಲೆ ಕಿರುಕುಳ ನೀಡಿದ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದಾಗ ಪುಂಡಾಟಿಕೆ ಮಾಡಿದ ಯುವಕ ಕುಮಾರ್ ಮೇಲೆ ಕೇಸು ದಾಖಲಿಸದಂತೆ ರಾಜಕೀಯ ನಾಯಕರ ಒತ್ತಡ ತರಲಾಗಿದೆ ಎಂದು ತಿಳಿದು ಬಂದಿದೆ.

    ಆರೋಪಿ ಕುಮಾರ್

    ಕಿರುಕುಳ ನೀಡಿದ ಯುವಕನಿಗೆ ಪೊಲೀಸ್ ಬೆಂಬಲ?: ಆರೋಪಿ ಕುಮಾರ್, ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಫಿಶ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಾ ಇದ್ದಾನೆ. ಮಧ್ವರಾಜ್ ಒಡೆತನದ ರಾಜ್ ಫಿಶ್ ಮಿಲ್ ನೌಕರನಾಗಿರೋ ಕುಮಾರ್ ಘಟನೆಯ ಬಗ್ಗೆ ಸಚಿವರ ಪತ್ನಿ ಬಳಿ ದೂರು ನೀಡಿದ್ದನಂತೆ. ಅಂತೆಯೇ ಪತಿ ಪ್ರಮೋದ್ ಮಧ್ವರಾಜ್ ಗೆ ಪತ್ನಿ ದೂರು ನೀಡಿದ್ದಾರೆ.

    ಪೇದೆ ಸಸ್ಪೆಂಡ್: ಇತ್ತ ತಮ್ಮ ಪತ್ನಿಗೆ ಕಿರುಕುಳ ನೀಡಿದ ಆರೋಪಿ ಕುಮಾರ್ ವಿರುದ್ಧ ಪ್ರಕಾಶ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾದಾಗ ತಾತ್ಕಾಲಿಕವಾಗಿ ಕೆಲಸದಿಂದ ವಜಾ ಮಾಡಿದ್ದಾರೆ. ಮಲ್ಪೆ ಠಾಣೆಯ ಕಾನ್‍ಸ್ಟೇಬಲ್ ಪ್ರಕಾಶ್‍ರನ್ನು ಅಮಾನತು ಮಾಡಿಸಿದ್ದಾರೆ. ಈ ಬಗ್ಗೆ ಪತ್ನಿ ಜ್ಯೋತಿ ಉಡುಪಿ ನಗರ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆದ್ರೆ ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೇಳಿದರೆ ನಮಗೆ ಗೊತ್ತೇ ಇಲ್ಲ. ಏನಿದು ಪ್ರಕರಣ ಅನ್ನೋ ಉತ್ತರ ನೀಡುತ್ತಿದ್ದಾರೆ ಅಂತಾ ಹೇಳಲಾಗಿದೆ.

    ಹಲ್ಲೆ ಸರಿಯಲ್ಲ: ನಮ್ಮ ಕಂಪನಿಯ ಕಾರ್ಮಿಕನ ಮೇಲೆ ಪೇದೆ ಹಲ್ಲೆ ನಡೆಸಿದ್ದು ಸರಿಯಲ್ಲ. ಹಲ್ಲೆಯಿಂದಾಗಿ ಕಂಪನಿಯ ಟ್ರ್ಯಾಕ್ಟರ್ ಚಾಲಕ ಕುಮಾರ್ ಬೆನ್ನು ಮೂಳೆಗೆ ಪೆಟ್ಟಾಗಿದೆ. ಪೊಲೀಸರು ಆ ರೀತಿ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಸಸ್ಪೆಂಡ್ ಮಾಡಿದ ಮೇಲೆ ಪೇದೆ ಪತ್ನಿ ಕಂಪ್ಲೆಂಟ್ ಮಾಡಿರಬಹುದು. ಚಾಲಕ ಕುಮಾರ್ ತಪ್ಪು ಮಾಡಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ನಾವು ನಮ್ಮ ಕಂಪನಿಯಿಂದಲೇ ಆತನ ಪರವಾಗಿ ದೂರು ನೀಡಿದ್ದೇವೆ ಅಂತಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.