Tag: ಸಚಿವ ಪುಟ್ಟರಂಗಣಶೆಟ್ಟಿ

  • ಗಾಲಿ ಜನಾರ್ದನ ರೆಡ್ಡಿ ಓರ್ವ ಅನಾಗರಿಕ: ಸಚಿವ ಪುಟ್ಟರಂಗ ಶೆಟ್ಟಿ ಕಿಡಿ

    ಗಾಲಿ ಜನಾರ್ದನ ರೆಡ್ಡಿ ಓರ್ವ ಅನಾಗರಿಕ: ಸಚಿವ ಪುಟ್ಟರಂಗ ಶೆಟ್ಟಿ ಕಿಡಿ

    ಚಾಮರಾಜನಗರ/ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರನ ಸಾವಿನ ಕುರಿತು ಹೇಳಿಕೆ ನೀಡಿದ್ದ ಗಾಲಿ ಜನಾರ್ದನರೆಡ್ಡಿ ವಿರುದ್ಧ ರಾಜಕೀಯ ನಾಯಕರು ಕಿಡಿಕಾರುತ್ತಿದ್ದಾರೆ. ಈ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು, ಜನಾರ್ದನ ರೆಡ್ಡಿ ಓರ್ವ ಅನಾಗರಿಕ ಎಂದು ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ನನಗೆ ಕೇಡು ಬಯಸಿದ್ದಕ್ಕೆ ಅವನ ಮಗ ಸತ್ತ ಎಂದು ಹೇಳುವ ಜನಾರ್ದನ ರೆಡ್ಡಿ ಅವರಿಗೆ ನಾಗರಿಕತೆಯೇ ಇಲ್ಲ. ಜೈಲಿಗೆ ಹೋಗಲು ಆತ ಮಾಡಿದ ಪಾಪಗಳೇ ಕಾರಣವೇ ಹೊರತು, ಸಿದ್ದರಾಮಯ್ಯ ಅವರು ಅಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಚಪ್ಪಲಿ ಹಾಕೋದ್ದಕ್ಕೂ ಪಿಎ ಇಟ್ಟುಕೊಂಡ ಸಚಿವ ಸಿ.ಪುಟ್ಟರಂಗಶೆಟ್ಟಿ!

    ಬಳ್ಳಾರಿ ಬೌಂಡರಿಯನ್ನು ನಾಶ ಮಾಡಿದ್ದು ಗಾಲಿ ಜನಾರ್ದನ ರೆಡ್ಡಿ. ಹೀಗಿರುವಾಗ ರಾಜಕೀಯದಲ್ಲಿ ವೈಯಕ್ತಿಕ ವಿಚಾರಗಳನ್ನು ಸೇರಿಸಿ, ಟೀಕೆ ಮಾಡಬಾರದು. ಯಾರಾದರು ಮಗ ಸಾಯಲಿ ಎಂದು ಬಯಸುತ್ತಾರಾ? ಜನಾರ್ದನ ರೆಡ್ಡಿಗೆ ನಾಗರಿಕತೆ ಇದ್ದಿದ್ದರೆ ಈ ರೀತಿಯಾಗಿ ಮಾತನಾಡುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಸಿದ್ದರಾಮಯ್ಯಗೆ ಸಿ.ಟಿ.ರವಿ ಟ್ವೀಟ್ ಏಟು:
    ಜನಾರ್ದನ ರೆಡ್ಡಿ ಹೇಳಿಕೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದ ಬಿಜೆಪಿ ಶಾಸಕ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ. ಜನಾರ್ದನ ರೆಡ್ಡಿ ಅವರು ಸಾವಿನ ವಿಷಯದ ಬಗ್ಗೆ ಆಡಿದ ಮಾತು ನಿಜಕ್ಕೂ ಖಂಡನೀಯ. ಯಾವುದೇ ವ್ಯಕ್ತಿಯ ಸಾವು ಚುನಾವಣಾ ರಾಜಕೀಯವನ್ನು ಮೀರಿ ನಿಲ್ಲಬೇಕು. ಈ ವಿಚಾರವನ್ನು ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದು ಅವರ ನೈತಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ ಎಂದು ಟಾಂಗ್ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv