Tag: ಸಚಿವ ಜಮೀರ್ ಅಹ್ಮದ್ ಖಾನ್

  • ಮನ್ಸೂರ್ ಖಾನ್ ಭಾರತಕ್ಕೆ ಹಿಂದಿರುಗಲೆಂದು ಪ್ರಾರ್ಥಿಸಿ: ಹಜ್ ಯಾತ್ರಿಕರಿಗೆ ಜಮೀರ್ ಮನವಿ

    ಮನ್ಸೂರ್ ಖಾನ್ ಭಾರತಕ್ಕೆ ಹಿಂದಿರುಗಲೆಂದು ಪ್ರಾರ್ಥಿಸಿ: ಹಜ್ ಯಾತ್ರಿಕರಿಗೆ ಜಮೀರ್ ಮನವಿ

    ಬೆಂಗಳೂರು: ಐಎಂಎ ಪ್ರಕರಣ ಆರೋಪಿ ಮನ್ಸೂರ್ ಖಾನ್ ಭಾರತಕ್ಕೆ ಹಿಂದಿರುಗಲಿ ಅಂತ ಪ್ರಾರ್ಥಿಸಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹಜ್ ಯಾತ್ರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ನಾಗವಾರದ ತಿರುಮೇನಹಳ್ಳಿಯ ಹಜ್ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಚಿವರು ಆಗಮಿಸಿದ್ದರು. ಮಾಜಿ ಸಚಿವ ರೋಷನ್ ಬೇಗ್ ಅವರು ಕೂಡ ಆಗಮಿಸಿ, ಕಾರ್ಯಕ್ರಮ ಉದ್ಘಾಟನೆ ಮಾಡಿದರು.

    ಈ ವೇಳೆ ಮಾತನಾಡಿದ ಜಮೀರ್ ಅಹ್ಮದ್ ಖಾನ್ ಅವರು, ಮನ್ಸೂರ್ ಖಾನ್ ನೀವು ಭಾರತಕ್ಕೆ ಬನ್ನಿ. ನಿಮ್ಮ ಜೊತೆ ಸರ್ಕಾರವಿದೆ. ನಾನು ಕೂಡ ನಿಮ್ಮೊಂದಿಗೆ ಇದ್ದೇನೆ. ಅದು ಬಡವರ ಹಣ. ಬಡವರು ಕಷ್ಟು ಪಟ್ಟು ಕೂಡಿಟ್ಟ ಹಣವನ್ನು ನಿಮಗೆ ಕೊಟ್ಟಿದ್ದಾರೆ. ಕೂಡಲೇ ನೀವು ಭಾರತಕ್ಕೆ ಬನ್ನಿ ಎಂದು ಕರೆ ನೀಡಿದರು. ಕಾರ್ಯಕ್ರಮದ ಬಳಿಕ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಅವರು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು.

    ಈ ಮಧ್ಯೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಸಚಿವರು, ಕೇವಲ ರಾಜಕೀಯ ಸುದ್ದಿಗಳನ್ನು ತೋರಿಸುವುದಲ್ಲ ಹಜ್ ಭವನದ ಸಮಸ್ಯೆ, ಭವನಗಳ ಬಗ್ಗೆಯೂ ಸುದ್ದಿ ಮಾಡಿ. ಎಲ್ಲೆಲ್ಲಿ ಸಮಸ್ಯೆ ಇದೆ ಅದನ್ನು ತೋರಿಸಿ. ಅದು ಬಿಟ್ಟು ಕೇವಲ ರಾಜಕೀಯ ಸುದ್ದಿನೇ ತೋರಿಸಬೇಡಿ ಎಂದ ಅವರು, ಸಮ್ಮಿಶ್ರ ಸರ್ಕಾರಕ್ಕೆ ಏನು ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಮುಖ ಸರಿ ಇಲ್ಲದ್ದಕ್ಕೆ ಪತ್ನಿಯೇ ಮೋದಿಯನ್ನು ಬಿಟ್ಟಿದ್ದಾರೆ, ಈಗ ಅವ್ರ ಮುಖ ನೋಡಿ ವೋಟ್ ಹಾಕಬೇಕೇ – ಜಮೀರ್

    ಮುಖ ಸರಿ ಇಲ್ಲದ್ದಕ್ಕೆ ಪತ್ನಿಯೇ ಮೋದಿಯನ್ನು ಬಿಟ್ಟಿದ್ದಾರೆ, ಈಗ ಅವ್ರ ಮುಖ ನೋಡಿ ವೋಟ್ ಹಾಕಬೇಕೇ – ಜಮೀರ್

    ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿ ತಮಗೆ ಮತ ನೀಡಿ ಎಂದು ರಾಜ್ಯ ಬಿಜೆಪಿ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಆದರೆ ಮೋದಿ ಮುಖ ಸರಿ ಇಲ್ಲದ್ದಕ್ಕೆ ಪತ್ನಿಯೇ ಅವರನ್ನು ಬಿಟ್ಟಿದ್ದಾರೆ. ಈಗ ಪತ್ನಿ ಬಿಟ್ಟವರ ಮುಖ ನೋಡಿ ನಾವು ಮತ ನೀಡಬೇಕೇ ಎಂದು ಸಚಿವ ಜಮೀರ್ ಅಹ್ಮದ್‍ಖಾನ್ ಪ್ರಶ್ನೆ ಮಾಡಿದ್ದಾರೆ.

    ಹಾವೇರಿಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ನನ್ನ ಮುಖ ನೋಡಿ ಬೇಡಿ, ಮೋದಿ ಮುಖ ನೋಡಿ ಮತ ನೀಡಿ ಎಂದು ಪ್ರಚಾರ ನಡೆಸುತ್ತಾರೆ. ಅದ್ದರಿಂದ ಅವರು ಬುರ್ಖಾ ಧರಿಸಿ ಪ್ರಚಾರ ನಡೆಸುವುದು ಉತ್ತಮ. ಅಲ್ಲದೇ ಹೆಂಡತಿ ಮುಖ ಸರಿ ಎಂದು ಮೋದಿ ಅವರನ್ನು ಬಿಟ್ಟಿದ್ದಾರೆ. ಅವರ ಮುಖ ನೋಡಿ ನಾವು ಮತ ಹಾಕಬೇಕಾ? ಮೋದಿ ಮುಖ ನೋಡಿ ಮತ ಹಾಕಿ ಎಂದು ಕೇಳಬೇಡಿ. ನಿಮ್ಮ ಸಾಧನೆ ಹೇಳಿಕೊಂಡು ಮತ ಕೇಳಿ ಎಂದರು.

    ಇದೇ ವೇಳೆ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಅವರಿಗೆ ಟಾಂಗ್ ನೀಡಿದ ಜಮೀರ್, ಐದು ವರ್ಷ ಕ್ಷೇತ್ರದ ಎಂಪಿ ಆಗಿದ್ದ ನಿಮ್ಮ ಸಾಧನೆ ಶೂನ್ಯ. ನಿಮ್ಮ ಮುಖ ನೋಡ ಬೇಡಿ ಅಂದರೆ ಬುರ್ಖಾ ಹಾಕಿಕೊಂಡು ಬನ್ನಿ. ಹೊಸ ಬುರ್ಖಾ ನಾನೇ ನೀಡುತ್ತೇನೆ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯರೇ ನಮ್ಮ ಮುಖ್ಯಮಂತ್ರಿ. ಕುಮಾರಸ್ವಾಮಿ ಐದು ವರ್ಷ ಸಿಎಂ ಆಗಿರುತ್ತಾರೆ. ಬಿಜೆಪಿಯವರು ಸರ್ಕಾರ ರಚನೆಗೆ ಪ್ರಯತ್ನ ಮಾಡುತ್ತಿದ್ದು, ಅದು ಯಾವ ಕಾರಣಕ್ಕೂ ಯಶಸ್ವಿ ಆಗಲ್ಲ. ಅಲ್ಲದೇ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

  • ತಿಪ್ಪರಲಾಗ ಹಾಕಿದ್ರೂ ಬಿಎಸ್‍ವೈ ಸಿಎಂ ಮತ್ತೆ ಆಗಲ್ಲ – ಜಮೀರ್ ಅಹ್ಮದ್ ಲೇವಡಿ

    ತಿಪ್ಪರಲಾಗ ಹಾಕಿದ್ರೂ ಬಿಎಸ್‍ವೈ ಸಿಎಂ ಮತ್ತೆ ಆಗಲ್ಲ – ಜಮೀರ್ ಅಹ್ಮದ್ ಲೇವಡಿ

    ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಎಷ್ಟೇ ತಿಪ್ಪರಲಾಗ ಹಾಕಿದ್ರೂ ಮತ್ತೆ ಸಿಎಂ ಆಗಲ್ಲ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಲೇವಡಿ ಮಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಬಿಎಸ್ ಯಡಿಯೂರಪ್ಪ ಭೇಟಿಯನ್ನು ಟೀಕಿಸಿದರು. ಚೆನ್ನಾಗಿದ್ದರೆ ಎಲ್ಲರೂ ಜೊತೆಯಲ್ಲಿರುತ್ತಾರೆ. ಸ್ವಲ್ಪ ಹೆಚ್ಚು ಕಡಿಮೆ ಆದರೆ ಬಿಟ್ಟು ಬಿಡುತ್ತಾರೆ. ಕೆಟ್ಟ ಘಳಿಗೆ ಬಂದಾಗ ಹಿಂದೇಟು ಹಾಕುವುದು ಬಿಜೆಪಿಗೆ ಸಾಮಾನ್ಯವಾಗಿದ್ದು, ಜನಾರ್ದನ ರೆಡ್ಡಿ ಬಿಜೆಪಿಯಲ್ಲೇ ಇದ್ದಾರೆ. ರೆಡ್ಡಿ ಅವರು ತಮ್ಮ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ಬಿಜೆಪಿ ಅಂದರೆ ಯೂ ಟರ್ನ್ ಪಕ್ಷ ಎಂದು ಚಾಟಿ ಬೀಸಿದರು.

    ಇದೇ ವೇಳೆ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುತ್ತದೆ ಎಂದು ಹೇಳಿದ ಜಮೀರ್, ಬಿಎಸ್‍ವೈ ಎಷ್ಟೇ ತಿಪ್ಪರಲಾಗ ಹಾಕಿದರೂ ಏನೂ ಮಾಡಲು ಸಾಧ್ಯವಿಲ್ಲ. ಅವರು ಮತ್ತೆ ಮುಖ್ಯಮಂತ್ರಿ ಆಗಲ್ಲ. ಕಳೆದ ಕೆಲ ತಿಂಗಳುಗಳಿಂದ ಯಡಿಯೂರಪ್ಪ ಅವರು ನಿದ್ದೆ ಮಾಡುತ್ತಿಲ್ಲವಂತೆ. ಮುಖ್ಯಮಂತ್ರಿ ಆದೆ ಎಂದು ಕನಸು ಕಾಣುತ್ತಾರಂತೆ. ಕನಸು ಕಾಣುವುದು ತಪ್ಪಲ್ಲ, ಆದರೆ ಹಗಲುಗನಸು ಕಾಣಬೇಡಿ ಎಂದು ಸಲಹೆ ನೀಡಿದರು.

    ಇದಕ್ಕೂ ಮುನ್ನ ರಾಮಮಂದಿರ ನಿರ್ಮಾಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ಮತ್ತು ಮಸೀದಿ ಎರಡೂ ನಿರ್ಮಾಣವಾಗಲಿ. ಚುನಾವಣೆ ಬಂದಾಗ ಮಾತ್ರ ಇದು ಪ್ರಚಾರದ ವಿಷಯ ಆಗದಿರಲಿ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ನಾಲ್ಕೂವರೆ ವರ್ಷದಲ್ಲಿ ಬಿಜೆಪಿ ಅವರಿಗೆ ನೆನಪಿಗೆ ಬಂದಿಲ್ಲ. ಲೋಕಸಭಾ ಚುನಾವಣೆ ಬಂದರೆ ಮಂದಿರ ನೆನಪಾಗುತ್ತೆ. ಮಂದಿರ ಕಟ್ಟೋಕೆ ಮುಸಲ್ಮಾನರ ವಿರೋಧ ಇಲ್ಲ. ನಮಗೆ ಮಂದಿರವೂ ಆಗಬೇಕು, ಮಸೀದಿಯೂ ನಿರ್ಮಾಣ ಆಗಬೇಕು. ಭಾರತ ಸರ್ವ ಧರ್ಮೀಯರೂ ಸಹೋದರರಂತೆ ಬಾಳುವ ದೇಶ. ವಿಶ್ವದಲ್ಲಿ ಇಂತಹ ಇನ್ನೊಂದು ದೇಶ ನೋಡಿಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

     

  • ಸಿಎಂಗೆ ಯಾರು ಶತ್ರುಗಳಿಲ್ಲ- ಎಚ್‍ಡಿಕೆ ಪರ ಜಮೀರ್ ಬ್ಯಾಟಿಂಗ್

    ಸಿಎಂಗೆ ಯಾರು ಶತ್ರುಗಳಿಲ್ಲ- ಎಚ್‍ಡಿಕೆ ಪರ ಜಮೀರ್ ಬ್ಯಾಟಿಂಗ್

    ದಾವಣಗೆರೆ: ಸಿಎಂ ಕುಮಾರಸ್ವಾಮಿ ಅವರು ಹೆಚ್ಚು ದೇವಾಲಯಕ್ಕೆ ಭೇಟಿ ನೀಡುತ್ತಿರುವುದು ಶತ್ರುಗಳಿಂದ ಅಲ್ಲ ಎಂದು ಆಹಾರ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧಿ ಪಕ್ಷದವರು ಸಿಎಂ ಏನು ಮಾಡಿದರು ಟೀಕೆ ಮಾಡುತ್ತಾರೆ. ಟೀಕೆ ಮಾಡುವುದು ಅವರ ಕೆಲಸವಾಗಿದೆ. ಆದರೆ ನಮ್ಮ ಸರ್ಕಾರ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ತನ್ನ ಕಾರ್ಯಗಳನ್ನು ಮುಂದುವರಿಸುತ್ತದೆ ಎಂದರು.

    ಕುಮಾರಸ್ವಾಮಿ ಅವರು ಸದ್ಯ ಉತ್ತರ ಕರ್ನಾಟಕಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿನ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಅವರಿಗೆ ಯಾವುದೇ ಶತ್ರುಗಳ ಸಮಸ್ಯೆ ಇಲ್ಲ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಜನರು ಟೀಕೆ ಮಾಡುವುದು ಸಾಮಾನ್ಯ. ಕುಮಾರಸ್ವಾಮಿ ಅವರು ಭತ್ತದ ನಾಟಿ ಮಾಡಿದರೂ ಟೀಕೆ ಮಾಡಿದ್ದಾರೆ. ಅದ್ದರಿಂದ ಈ ಕುರಿತು ಹೆಚ್ಚಿನ ಪ್ರಮುಖ್ಯತೆ ನೀಡುವುದು ಅಗತ್ಯವಿಲ್ಲ ಎಂದು ಹೇಳಿದರು.

    ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ವೇಳೆ ಗುಂಡ್ಯ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದ್ದರಿಂದ ಪುತ್ತೂರಿನ ಮಾರ್ಗವಾಗಿ ಬೆಳ್ಳಾರೆ ಮೂಲಕ ಸುತ್ತು ಬಳಸಿ ಕುಮಾರಸ್ವಾಮಿ ಅವರು ಸುಬ್ರಹ್ಮಣ್ಯಕ್ಕೆ ತೆರಳಿದ್ದರು. ಅಲ್ಲದೇ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಟ್ಟ ದೃಷ್ಟಿ ಮತ್ತು ದೋಷ ನಿವಾರಣೆಗಾಗಿ ನಾಗಪೂಜೆ ಪೂಜೆಯಲ್ಲಿ ಭಾಗಿಯಾಗಿದ್ದರು.

    ಸಿಎಂ ಸೋಮವಾರ ಹೊಳೆನರಸೀಪುರದ ಹರದನಹಳ್ಳಿ ದೇವೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಈ ವೇಳೆ ಕುಮಾರಸ್ವಾಮಿ ಅವರು ಕುಟುಂಬ ಸಮೇತ ಪೂಜೆ ಸಲ್ಲಿಸಿತ್ತು. ಅರ್ಚಕರು ಸಿಎಂ ಕುಮಾರಸ್ವಾಮಿ ದಂಪತಿಗೆ ಹೇಳಿದ್ದ ಪ್ರದಕ್ಷಿಣೆ ದಿಕ್ಕನ್ನು ಸಚಿವ ರೇವಣ್ಣ ವಾಸ್ತು ಪ್ರಕಾರ ಬದಲಾಗಬೇಕು ಎಂದು ಹೇಳಿದ್ದರು. ಬಳಿಕ ರೇವಣ್ಣ ಹೇಳಿದಂತೆಯೇ ಕುಮಾರಸ್ವಾಮಿ ದಂಪತಿ ಪ್ರದಕ್ಷಿಣೆ ಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಮೀರ್, ಎಚ್‍ಡಿಕೆ ದೋಸ್ತಿ – ಕಾರ್, ಬಳಿಕ ಸಿಕ್ತು ಬಂಗಲೆ!

    ಜಮೀರ್, ಎಚ್‍ಡಿಕೆ ದೋಸ್ತಿ – ಕಾರ್, ಬಳಿಕ ಸಿಕ್ತು ಬಂಗಲೆ!

    ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಇಷ್ಟದ ಕಾರು ಸಿಕ್ಕ ಬಳಿಕ ಅವರು ಕೋರಿದ್ದ ನಿವಾಸವನ್ನೇ ನೀಡಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ.

    ಕಳೆದ ಕೆಲ ಹಿಂದೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಬೇಡಿಕೆ ಇಟ್ಟು ಪಡೆದಿದ್ದ ಜಮೀರ್, ತಮಗೇ ಸ್ಯಾಂಕಿ ಟ್ಯಾಂಕ್ ಬಳಿಯ ನಂಬರ್ 30 ನಿವಾಸ ಬೇಕೆಂದು ಪಟ್ಟು ಹಿಡಿದ್ದರು. ಆದರೆ ಈ ನಿವಾಸವನ್ನು ಈಗಾಗಲೇ ಸಿಎಂ ಎಚ್‍ಡಿಕೆ, ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರಿಗೆ ನೀಡಿದ್ದರು.

    ಇದರಂತೆ ಜಮೀರ್‍ಗೆ ಜಹಮಹಲ್ 3/ಬಿ ಸರ್ಕಾರಿ ನಿವಾಸ ನೀಡಲಾಗಿತ್ತು. ಆದರೆ ಸದ್ಯ ಜಮೀರ್ ಅವರ ಕೋರಿಕೆ ಮೇಲೆ ಹೆಚ್‍ಡಿಕೆ ಸ್ಯಾಕಿ ರಸ್ತೆಯ ನಂಬರ್ 30 ನಿವಾಸವನ್ನು ನೀಡಲು ಮುಂದಾಗಿದ್ದಾರೆ. ಈ ಕುರಿತು ಸಚಿವ ಜಿಡಿ ದೇವೇಗೌಡ ಅವರ ಬಳಿ ಮಾತನಾಡಿದ್ದು, ಸಿಎಂ ಮನವರಿಗೆ ಜಿಟಿ ದೇಚೇಗೌಡ ಅವರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಈ ಹಿಂದೆ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸ್ಯಾಂಕಿ ರಸ್ತೆಯ ನಂಬರ್ 30 ನಿವಾಸವನ್ನು ಮಾಜಿ ಸಚಿವ ತನ್ವೀರ್ ಸೇಠ್ ಪಡೆದಿದ್ದರು.

    ಇದಕ್ಕೂ ಮೊದಲು ಇಷ್ಟದ ಕಾರು ಕುರಿತು ಪ್ರತಿಕ್ರಿಯೆ ನೀಡಿದ್ದ ಜಮೀರ್, ದೊಡ್ಡ ಕಾರ್ ವಿಚಾರವಾಗಿ ಮಾಧ್ಯಮಗಳು ಪ್ರಕರಣವನ್ನು ದೊಡ್ಡದಾಗಿ ಬಿಂಬಿಸಿದ್ದವು. ಆದರೆ ನಾನು ಹಿಂದಿನ ಸರ್ಕಾರದಲ್ಲಿ ಸುಸಂಬದ್ಧ ಸಿದ್ದರಾಮಯ್ಯ ಬಳಸಿ ಬಿಟ್ಟ ಕಾರ್ ಕೇಳಿದ್ದೇನೆ. ನಾನೇನು ಹೊಸ ಕಾರ್ ಕೇಳಿಲ್ಲ. ಅದೃಷ್ಟದ ಕಾರು ಎಂದು ಸಿದ್ದರಾಮಯ್ಯರ ಕೇಳಿದ್ದೀನಾ ಎಂದು ಪ್ರಶ್ನಿಸಿದ್ದರು.

    https://www.youtube.com/watch?v=IAnDqBlAxkQ