Tag: ಸಚಿವ ಕೆ.ಗೋಪಾಲಯ್ಯ

  • ನಾಗಮಂಗಲದಲ್ಲಿ 78 ವಾಣಿಜ್ಯ ಮಳಿಗೆಗಳ ಲೋಕಾರ್ಪಣೆ ಮಾಡಿದ ಸಚಿವ ಕೆ.ಗೋಪಾಲಯ್ಯ

    ನಾಗಮಂಗಲದಲ್ಲಿ 78 ವಾಣಿಜ್ಯ ಮಳಿಗೆಗಳ ಲೋಕಾರ್ಪಣೆ ಮಾಡಿದ ಸಚಿವ ಕೆ.ಗೋಪಾಲಯ್ಯ

    ಮಂಡ್ಯ: ಹತ್ತಣೆ ಹಣಕಾಸು ಯೋಜನೆ ಮತ್ತು ಎಸ್‍ಎಫ್‍ಸಿ ಅನುದಾನಡಿ 3.60 ಕೋಟಿ ರೂ. ವೆಚ್ಚದಲ್ಲಿ ಪುರಸಭೆಯಿಂದ ನಿರ್ಮಾಣ ಮಾಡಿರುವ ವಾಣಿಜ್ಯ ಸಂಕೀರ್ಣಗಳನ್ನು ಪುರಸಭಾ ಆವರಣದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಇಂದು ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಗಮಂಗಲ ಪಟ್ಟಣ ಮತ್ತು ಈ ಭಾಗದ ಸುತ್ತ ಮುತ್ತಲ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 78 ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದ್ದು, ಜನರ ಉಪಯೋಗಕ್ಕೆ ಈ ಮಳಿಗೆಗಳು ದೊರಕುವಂತಾಗಲಿ ಎಂದರು. ಇದನ್ನೂ ಓದಿ: ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ

    ಜಿಲ್ಲೆಯಲ್ಲಿ ದೇವರಾಜು ಅರಸು ವಸತಿ ನಿಲಯ, ಪೊಲೀಸ್ ವಸತಿ ನಿಲಯ ಮತ್ತು ವಾಣಿಜ್ಯ ಸಂಕೀರ್ಣ ಹೀಗೆ ಒಂದೇ ದಿನ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗಿದೆ. ಸಚಿವರಾದ ಡಾ.ಕೆ.ಸಿ.ನಾರಾಯಣ ಗೌಡರು, ಶಾಸಕರಾದ ಸುರೇಶ್ ಗೌಡರು ಮತ್ತು ನಾನು ಮೂವರು ಸೇರಿಕೊಂಡು ಸರ್ಕಾರದ ಅನುದಾನವನ್ನು ತಂದು ಮಂಡ್ಯ ಜಿಲ್ಲೆಯ ಸಮಗ್ರ ಚಿತ್ರಣವನ್ನು ಬದಲಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಎನ್.ಜಿ.ಆಶಾ, ಉಪಾಧ್ಯಕ್ಷ ಜಾಫರ್ ಷರೀಫ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಿ.ಚನ್ನಪ್ಪ, ರಾಜ್ಯ ಪೌರಾಡಳಿತ ನಿರ್ದೇಶಕಿ ಎಂ.ಎಸ್.ಅರ್ಚನಾ, ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವತಿ, ಎಸ್ಪಿ ಎನ್.ಯತೀಶ್ ಇತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವವರನ್ನು ವಾಪಸ್ ಕರೆತರುವ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸುತ್ತೆ: ಪ್ರಹ್ಲಾದ್ ಜೋಶಿ

  • ಹಾಸನಾಂಬ ದರ್ಶನೋತ್ಸವಕ್ಕೆ ಸಾರ್ವಜನಿಕರಿಗೆ ಅವಕಾಶ: ಸಚಿವ ಕೆ.ಗೋಪಾಲಯ್ಯ

    ಹಾಸನಾಂಬ ದರ್ಶನೋತ್ಸವಕ್ಕೆ ಸಾರ್ವಜನಿಕರಿಗೆ ಅವಕಾಶ: ಸಚಿವ ಕೆ.ಗೋಪಾಲಯ್ಯ

    ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವಕ್ಕೆ ಸಾರ್ವಜನಿಕರಿಗೆ ಈ ಬಾರಿಯೂ ಅವಕಾಶ ಕಲ್ಪಿಸಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

    ನಗರದಲ್ಲಿ ಮಂಗಳವಾರ ಸಚಿವ ಕೆ.ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ನಂತರ ಪರಿವೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ನಿಯಂತ್ರಣದಲ್ಲಿದೆ. ಜನರ ಧಾರ್ಮಿಕ ಭಾವನೆಯನ್ನು ಗೌರವಿಸಬೇಕಾಗಿರುವುದರಿಂದ ಈ ಅವಕಾಶ ಕಲ್ಪಿಸಲಾಗಿದೆ. ದೇವಾಲಯದ ಬಾಗಿಲು ತೆರೆಯುವ ದಿನವಾದ ಅ.28 ಹಾಗೂ ಬಾಗಿಲು ಮುಚ್ಚುವ ದಿನವಾದ ನ.6 ರಂದು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 8 ಗಂಟೆವರೆಗೆ ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

    HASANAMBE

    ಹಾಸನಾಂಬ ದರ್ಶನೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು. ಪ್ರತಿಯೊಬ್ಬರೂ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ರಾಗಿಣಿ ಕೇಸ್ ಉಲ್ಲೇಖ, ಆರ್ಯನ್‍ಗೆ ಜಾಮೀನು ನೀಡಿ – ಮುಕುಲ್ ರೊಹ್ಟಗಿ ವಾದ

    ದೇವರ ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು. ಅದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಹೊಂದಿರಬೇಕು ಎಂದು ಹೇಳಿದರು.

    HASANAMBE

    ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ದರ್ಶನಕ್ಕೆ ಅವಕಾಶವಿದೆ. 300 ರೂ. ಹಾಗೂ 1000 ರೂ.ಗೆ ಪಾಸ್‍ಗಳನ್ನು ವಿತರಿಸಲಾಗುವುದು. ಸಾಮಾನ್ಯ ದರ್ಶನಕ್ಕೆ ಸೂಕ್ತ ಮೂಲಸೌಕರ್ಯ ಕಲ್ಪಿಸಲು ಅವಕಾಶ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಇದನ್ನೂ ಓದಿ: JDSಗೆ ಬದ್ದತೆ ಇಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ: ದಿನೇಶ್ ಗುಂಡೂರಾವ್

    ಇದೇ ವೇಳೆ ಶಾಸಕ ಪ್ರೀತಮ್ ಗೌಡ, ನಗರಸಭೆ ಅಧ್ಯಕ್ಷ ಮೋಹನ್, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಹಾಜರಿದ್ದರು.

  • ಚಾಕೇನಹಳ್ಳಿ ಸ್ಫೋಟ ಪ್ರಕರಣ- ಮೃತರ ಕುಟುಂಬಗಳಿಗೆ ಪರಿಹಾರದ ಚೆಕ್ ನೀಡಿದ ಸಚಿವ ಗೋಪಾಲಯ್ಯ

    ಚಾಕೇನಹಳ್ಳಿ ಸ್ಫೋಟ ಪ್ರಕರಣ- ಮೃತರ ಕುಟುಂಬಗಳಿಗೆ ಪರಿಹಾರದ ಚೆಕ್ ನೀಡಿದ ಸಚಿವ ಗೋಪಾಲಯ್ಯ

    ಹಾಸನ: ಜಿಲೆಟಿನ್ ರೀತಿಯ ವಸ್ತು ಸಿಡಿದು ಮೃತಪಟ್ಟ ಮೂವರ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಪರಿಹಾರದ ಚೆಕ್ ವಿತರಿಸಿದರು.

    ಜಿಲೆಟಿನ್ ರೀತಿಯ ಸ್ಫೋಟಕ ಸಿಡಿದು ಮೂವರು ಮೃತಪಟ್ಟಿದ್ದ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಯಲ್ಲಿ ನಡೆದಿತ್ತು. ಈ ವೇಳೆ ಮೂವರು ಸಾವನ್ನಪ್ಪಿದ್ದರು. ಇವರ ಕುಟುಂಬಗಳಿಗೆ ಇದೀಗ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ.ಗಳ ಚೆಕ್‍ನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ವಿತರಿಸಿದರು. ಇದನ್ನೂ ಓದಿ: ಚಾಕೇನಹಳ್ಳಿ ಸ್ಫೋಟ ಪ್ರಕರಣ- ಸಚಿವ, ಸಂಸದ, ಶಾಸಕರು ಸ್ಥಳಕ್ಕೆ ಭೇಟಿ, ಪರಿಶೀಲನೆ

    ನಂತರ ಮಾತನಾಡಿದ ಅವರು, ಮೃತರ ಕುಟುಂಬದ ನಿರ್ವಹಣೆಗಾಗಿ 5 ಲಕ್ಷ ರೂ.ಗಳ ಚಕ್‍ನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿತರಿಸಲಾಗಿದೆ. ಇನ್ನೂ 7.5 ಲಕ್ಷ ರೂ.ಗಳನ್ನು ಗಣಿ ಮಾಲೀಕರಿಂದ ನೀಡಲಾಗುತ್ತದೆ ಎಂದು ತಿಳಿದಿದರು. ಈ ವೇಳೆ ಶಾಸಕ ಬಾಲಕೃಷ್ಣ, ಜಿಲ್ಲಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜ್, ಸಿಇಒ ಪರಮೇಶ್, ಸಚಿವರ ಆಪ್ತ ಕಾರ್ಯದರ್ಶಿ ಕಾಂತರಾಜ್ ಉಪಸ್ಥಿತರಿದ್ದರು.