Tag: ಸಚಿವ ಎಚ್.ಡಿ.ರೇವಣ್ಣ

  • ರಾಜ್ಯದಲ್ಲಿ ಹೈಡ್ರಾಮ – ಯಾವುದೇ ಚಿಂತೆಯಿಲ್ಲದೇ ವಿದೇಶಕ್ಕೆ ಹಾರಿದ ರೇವಣ್ಣ

    ರಾಜ್ಯದಲ್ಲಿ ಹೈಡ್ರಾಮ – ಯಾವುದೇ ಚಿಂತೆಯಿಲ್ಲದೇ ವಿದೇಶಕ್ಕೆ ಹಾರಿದ ರೇವಣ್ಣ

    ಬೆಂಗಳೂರು: ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯದಿಂದಾಗಿ ರಾಜ್ಯದಲ್ಲಿ ಸರ್ಕಾರ ಇದೆಯೇ ಇಲ್ಲವೇ ಎನ್ನುವ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ. ಈ ಮಧ್ಯೆ ಸೂಪರ್ ಸಿಎಂ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ.

    ಸಹೋದರ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಗಂಡಾಂತರ ಎದುರಾಗಿದ್ದಕ್ಕೆ ಸಚಿವರು ಯಾವುದೇ ರೀತಿಯ ಟೆನ್ಶನ್ ತಗೆದುಕೊಂಡಿಲ್ಲ. ರಾಜಕೀಯ ಜಂಜಾಟವೇ ಬೇಡ ಅಂತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವ ರೇವಣ್ಣ ಅವರು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಸಚಿವರು ಒಂದು ವಾರ ಕಾಲ ಅಲ್ಲಿ ಅಧ್ಯಯನ ನಡೆಸಿ ಮರಳಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ.

    ವಿದೇಶಕ್ಕೆ ಹಾರಿದ್ದನ್ನು ಕಂಡು ಸರ್ಕಾರ ಉಳಿಯುತ್ತೆ ಅಂತಾ ಯಾರಾದ್ರೂ ರೇವಣ್ಣಗೆ ಜ್ಯೋತಿಷ್ಯ ಹೇಳಿದ್ರಾ? ಹೆಚ್‍ಡಿ ರೇವಣ್ಣಗೆ ಸರ್ಕಾರ ಬೀಳಲ್ಲ ಎನ್ನುವ ಅಚಲ ನಂಬಿಕೆ ಬಂದುಬಿಟ್ಟಿದ್ಯಾ ಎನ್ನುವ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಕುಮಾರಸ್ವಾಮಿ ಆದೇಶಕ್ಕೆ ತಡೆತಂದ ಸೂಪರ್ ಸಿಎಂ ರೇವಣ್ಣ!

    ಸಿಎಂ ಕುಮಾರಸ್ವಾಮಿ ಆದೇಶಕ್ಕೆ ತಡೆತಂದ ಸೂಪರ್ ಸಿಎಂ ರೇವಣ್ಣ!

    ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮತ್ತೆ ಸೂಪರ್ ಸಿಎಂ ಎಂಬುದನ್ನು ಸಾಬೀತುಪಡಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಮೋಹನ್ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆದೇಶ ಹೊರಡಿಸಿದ್ದರು. ಆದರೆ ಈ ಆದೇಶಕ್ಕೆ ಸಚಿವ ರೇವಣ್ಣ ಅವರು ತಡೆಯಾಜ್ಞೆ ನೀಡಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯರು ಆರೋಪಿಸಿದ್ದಾರೆ.

    ಏನಿದು ಪ್ರಕರಣ?:
    ಯಂಟಗಾನಹಳ್ಳಿ ಗ್ರಾಮ ಪಿಡಿಓ ಮೋಹನ್ ಕುಮಾರ್ ವಿರುದ್ಧ ಕರ್ತವ್ಯಲೋಪ ಹಾಗೂ ಸರ್ವಾಧಿಕಾರಿ ಧೋರಣೆ ಆರೋಪ ಕೇಳಿಬಂದಿತ್ತು. ಈ ಸಂಬಂಧ ಗ್ರಾಮ ಪಂಚಾಯತಿ ಸದಸ್ಯರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೂರು ನೀಡಿ, ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಸಿಎಂ ಕುಮಾರಸ್ವಾಮಿ ಅವರು ಮೋಹನ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದರು. ಆದರೆ ಮೋಹನ್ ಕುಮಾರ್ ಸಚಿವ ರೇವಣ್ಣ ಅವರ ಸಹಾಯ ಪಡೆದು ವರ್ಗಾವಣೆಗೆ ತಡೆ ತಂದಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯರು ಆರೋಪಿಸಿದ್ದಾರೆ.

    ಮೋಹನ್ ಕುಮಾರ್ ಅವರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ನಾವು ಕರೆ ಮಾಡಿದರೆ ಫೋನ್ ಅಟೆಂಡ್ ಮಾಡಲ್ಲ. ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಜಾರಿಗೆ ತರುವುದಿಲ್ಲ. ನಮಗೆ ಇಷ್ಟ ಬಂದ ನಿರ್ಣಯಗಳನ್ನು ಮಾತ್ರ ಜಾರಿಗೆ ತರುತ್ತಾರೆ. ಹೀಗೆ ಏಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರೆ ಯಾವುದೇ ಪ್ರಕ್ರಿಯೆ ನೀಡುವುದಿಲ್ಲ ಎಂದು ಸದಸ್ಯರು ದೂರಿದರು.

    ಮೋಹನ್ ಕುಮಾರ್ ವರ್ಗಾವಣೆಗೆ ತಡೆ ಬಿದ್ದಿದ್ದರಿಂದ ಯಂಟಗಾನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು, ಪಂಚಾಯತಿಯ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಸಚಿವ ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿ, ಮೋಹನ್ ಕುಮಾರ್ ಅವರನ್ನು ವರ್ಗಾವಣೆ ಮಾಡಲೇಬೇಕು ಎಂದು ಪಟ್ಟು ಹಿಡಿದು ಪ್ರತಿಭಟಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪರಮೇಶ್ವರ್ ಪರ ಬ್ಯಾಟ್ ಬೀಸಿದ್ದ ರೇವಣ್ಣಗೆ ಠಕ್ಕರ್ ಕೊಟ್ಟ ಖರ್ಗೆ

    ಪರಮೇಶ್ವರ್ ಪರ ಬ್ಯಾಟ್ ಬೀಸಿದ್ದ ರೇವಣ್ಣಗೆ ಠಕ್ಕರ್ ಕೊಟ್ಟ ಖರ್ಗೆ

    – ರಮೇಶ್ ಜಾರಕಿಹೊಳಿ ಪಕ್ಷ ಬಿಡಲ್ಲ
    – ಲೋಕಸಭಾ ಚುನಾವಣೆಗೂ ಮುನ್ನ ಅಧಿಕಾರ ಹಿಡಿಯಲು ರಾಜ್ಯ ಬಿಜೆಪಿ ಪ್ಲಾನ್

    ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಬಾಯಿ ಮಾತಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಬಗ್ಗೆ ದಯೆ ತೋರಿಸೋದು ಪ್ರಯೋಜನಕ್ಕೆ ಬರಲ್ಲ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟಾಂಗ್ ಕೊಟ್ಟಿದ್ದಾರೆ.

    ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರಿಂದ ಗೃಹ ಖಾತೆ ವಾಪಸ್ ಪಡೆದಿದ್ದ ವಿಚಾರವಾಗಿ ಹೇಳಿಕೆ ನೀಡಿದ್ದ ಎಚ್.ಡಿ.ರೇವಣ್ಣ ಅವರ ವಿರುದ್ಧ ಕಿಡಿಕಾರಿದರು. ಯಾರಿಗೆ ಯಾವ ಖಾತೆ ಅಂತ ಕಾಂಗ್ರೆಸ್‍ನ ನಾಯಕರು ವಿಚಾರ ಮಾಡಿಯೇ ನಿರ್ಧಾರ ಕೈಗೊಳ್ಳುತ್ತಾರೆ. ಒಬ್ಬರ ಮೇಲೆ ಮತ್ತೊಬ್ಬರು ಬಾಯಿ ಮಾತಲ್ಲಿ ಸಿಂಪತಿ ತೋರಿಸುವುದು ಪ್ರಯೋಜನಕ್ಕೆ ಬರಲ್ಲ ಎಂದು ಸಚಿವ ರೇವಣ್ಣಗೆ ಠಕ್ಕರ್ ಕೊಟ್ಟರು.

    ದಲಿತರಿಗೆ ಸಿಎಂ ಸ್ಥಾನ ಕೊಡುವ ವಿಚಾರದ ಬಗ್ಗೆ ಮಾತಾಡಿದ ಖರ್ಗೆ ಅವರು, ಐವತ್ತು ವರ್ಷಗಳಿಂದ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಅಂತ ಕೇಳುತ್ತಾ ಬಂದಿದ್ದೇವೆ. ಇದನ್ನು ಮಾಧ್ಯಮಗಳ ಮುಂದೆ ಮಾತಾಡಿದರೆ ಬಗೆಹರಿಯಲ್ಲ. ಈ ಬಗ್ಗೆ ನಾನು ಮಾತಾಡಲ್ಲ ಎಂದರು. ಇದನ್ನು ಓದಿ: ರಮೇಶ್ ಜಾರಕಿಹೊಳಿ ಪಕ್ಷ ಬಿಡುವ ಸುಳಿವು ಕೊಟ್ರಾ ಮಾಜಿ ಸಿಎಂ

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಡುವಷ್ಟು ಕೆಟ್ಟ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅವರು ನಮ್ಮ ಪಕ್ಷದಲ್ಲಿ 25 ವರ್ಷ ಕಾರ್ಯನಿರ್ವಹಿಸಿದ್ದಾರೆ. ಪಕ್ಷವೂ ಅವರಿಗೆ ಸಾಕಷ್ಟು ಅವಕಾಶ ನೀಡಿದೆ ಎಂದು ಸ್ಪಷ್ಟನೆ ನೀಡಿದ ಅವರು, ರಾಜ್ಯ ಬಿಜೆಪಿ ನಾಯಕರು ಲೋಕಸಭಾ ಚುನಾವಣೆಗೂ ಮುನ್ನ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನ ಫಲಿಸುವುದಿಲ್ಲ ಎಂದು ವ್ಯಂಗ್ಯವಾಡಿದರು.

    ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರವಾಗಿ ಮಾತನಾಡಿದ ಖರ್ಗೆ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಜೆಡಿಎಸ್‍ನವರು 12 ಸೀಟು ಕೇಳಿದ್ದಾರೆ ಎಂದು ನಾವು ಮಾತನಾಡುವುದು ಸರಿಯಲ್ಲ. ಅವರ ನಿಲುವನ್ನು ಅವರು ತಿಳಿಸಿದ್ದಾರೆ, ಅದರಲ್ಲಿ ಯಾವುದೇ ತಪ್ಪಿಲ್ಲ. ಚರ್ಚೆ ನಡೆದ ಬಳಿಕ ಯಾರಿಗೆ ಎಷ್ಟು ಸೀಟು ಎನ್ನವುದು ಹೊರ ಬೀಳುತ್ತದೆ ಎಂದು ತಿಳಿಸಿದರು.

    ಮಹಾಘಟಬಂಧನ್ ವಿಚಾರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಅವರು ಮಾತುಕತೆ ನಡೆಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮಹಾಘಟಬಂಧನ್ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದ ಅವರು, ದೇಶದ ಜನತೆಗೆ ಹೊಸ ವರ್ಷಕ್ಕೆ ಶುಭ ಕೋರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಚ್‍ಡಿಕೆ ಬಳಿ ನೋಟ್ ಮುದ್ರಣ ಮಾಡೋ ಯಂತ್ರ ಇದೆಯೇ – ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ರೇವಣ್ಣ ವ್ಯಂಗ್ಯ

    ಎಚ್‍ಡಿಕೆ ಬಳಿ ನೋಟ್ ಮುದ್ರಣ ಮಾಡೋ ಯಂತ್ರ ಇದೆಯೇ – ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ರೇವಣ್ಣ ವ್ಯಂಗ್ಯ

    ಮಂಡ್ಯ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಏನ್ ಪ್ರಿಂಟ್ ಮಾಡುವ ಮಿಷನ್ ಇಟ್ಟಿದ್ದಾರಾ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು, ಕಬ್ಬು ಬೆಳೆಗಾರರ ಹೋರಾಟದ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದಾರೆ.

    ನಗರದಲ್ಲಿ ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟದ ಕುರಿತು ಮಾತನಾಡಿದ ಅವರು, ಎಲ್ಲದಕ್ಕೂ ಸಿಎಂ ಕುಮಾರಸ್ವಾಮಿ ಅವರನ್ನೇ ಹಿಡಿದುಕೊಂಡರೆ ಹೇಗೆ? ಕಬ್ಬು ಬೆಳೆಗಾರರಿಗೆ ಸಮಸ್ಯೆ ಇರುವುದು ರಾಷ್ಟ್ರಕ್ಕೆ ಗೊತ್ತಿದೆ. ರೈತರನ್ನು ಸಂಕಷ್ಟಕ್ಕೆ ಬಿಡಬಾರದು ಹಾಗೇ ಕಾರ್ಖಾನೆಗಳ ಬಗ್ಗೆ ಕೂಡ ಯೋಚಿಸಬೇಕು. ಪ್ರತಿಭಟನಕಾರರು ಕಾರ್ಖಾನೆ ಸುಡುವುದು, ಕಬ್ಬು ಪೂರೈಕೆ ತಡೆಯುವುದು ಸರಿಯಲ್ಲ ಎಂದು ಸಚಿವರು ಹೇಳಿದರು.

    ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡುವ ಕುರಿತು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕು. ಈ ಪ್ರತಿಭಟನೆ ಹಿಂದೆ ಯಾರು ಇದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಎಲ್ಲದಕ್ಕೂ ರಾಜ್ಯ ಸರ್ಕಾರವನ್ನು ದೂರುವುದು ಸರಿಯಲ್ಲ. ರಾಜ್ಯ ಸರ್ಕಾರದ ಬಳಿ ನೋಟ್ ಮುದ್ರಣ ಮಾಡುವ ಯಂತ್ರ ಇದೆಯೇ ಎಂದು ರೇವಣ್ಣ ಪ್ರಶ್ನೆ ಮಾಡಿದರು. ಇದನ್ನು ಓದಿ: ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ- ಪ್ರತಿಭಟನಾ ನಿರತ ಮಹಿಳೆಗೆ ಏಕವಚನದಲ್ಲಿ ಸಿಎಂ ಕಿಡಿ

    ಇದೇ ವೇಳೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಸಿಎಂ ಆಗಬೇಕು ಎನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಯಾರು ಸಿಎಂ ಆಗಬೇಕು ಎನ್ನುವುದು ನನಗೆ ಸಂಬಂಧವಿಲ್ಲದ ವಿಚಾರ. ಅದು ಏನಿದ್ದರೂ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಇದು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ ಎಂದ ಸಚಿವರು, ನಾನು ಶಾಸಕ ಶ್ರೀರಾಮುಲು ಬಗ್ಗೆ ಮಾತನಾಡಲ್ಲ. ಅವರೊಬ್ಬ ದೊಡ್ಡ ನಾಯಕರು ಎಂದು ವ್ಯಂಗ್ಯವಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಒಂದೇ ಕ್ವಾಟರ್ ಕುಡಿರೀಪ್ಪಾ- ಕುಡುಕರಲ್ಲಿ ಶಾಸಕ ಶಿವಲಿಂಗೇಗೌಡ ಮನವಿ

    ಒಂದೇ ಕ್ವಾಟರ್ ಕುಡಿರೀಪ್ಪಾ- ಕುಡುಕರಲ್ಲಿ ಶಾಸಕ ಶಿವಲಿಂಗೇಗೌಡ ಮನವಿ

    -ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದ್ದು ಮಾಡಿದ ಎಣ್ಣೆ ಮ್ಯಾಟರ್

    ಹಾಸನ: ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂದು ಎಣ್ಣೆ ವಿಚಾರವಾಗಿಯೇ ಹೆಚ್ಚು ಸಮಯ ಚರ್ಚೆಯಾಯಿತು. ಶಾಸಕರು ಸೇರಿದಂತೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಮದ್ಯದ ಕುರಿತು ಮಾತನಾಡಿ, ಸಭೆಯನ್ನು ನಗೆಯಲ್ಲಿ ತೇಲಾಡಿಸಿದ್ರು.

    ಮೊದಲಿಗೆ ಮದ್ಯದ ವಿಚಾರ ಪ್ರಸ್ತಾಪಿಸಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು, ಗ್ರಾಮಗಳಲ್ಲಿ ರೈತರಿಗೆ ಎಣ್ಣೆ ಸಾಲ ಸಿಗುತ್ತಿದೆ. ಒಂದು ಕ್ವಾಟರ್ ಕುಡಿಯುವವನು, ಸಾಲ ಸಿಗುತ್ತೆ ಅಂತಾ ಆರು-ಏಳು ಕ್ವಾಟರ್ ಕುಡಿತ್ತಿದ್ದಾನೆ. ದಯವಿಟ್ಟು ಒಂದು ಕ್ವಾಟರ್ ಮಾತ್ರ ಕುಡಿಯುವ ರೀತಿ ಮಾಡ್ರಪ್ಪ ಎಂದು ಹೇಳಿದರು. ಅವರ ಮಾತಿನ ಧಾಟಿ ಸಭೆಯಲ್ಲಿ ನಗುವಿಗೆ ಕಾರಣವಾಯಿತು.

    ಮನೆಯಲ್ಲಿ ಪತ್ನಿ, ಮಕ್ಕಳ ಬಗ್ಗೆ ಚಿಂತೆ ಮಾಡುವುದಿಲ್ಲ. ಎಮ್ಮೆ ಮಾರಿಕೊಳ್ಳುವ ಪರಿಸ್ಥಿತಿ ಬರುತ್ತಿದೆ ಎಂದು ಶಾಸಕರು ಮಾತು ಮುಗಿಸಿದರು. ಇದಕ್ಕೆ ದನಿಗೂಡಿಸಿದ ಚನ್ನರಾಯಪಟ್ಟಣ ಶಾಸಕ ಸಿ.ಎನ್.ಬಾಲಕೃಷ್ಣ ಮದ್ಯದ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ನೀರನ್ನು ಮಾರಾಟ ಮಾಡುತ್ತಿದ್ದಾರೆ. ಮತ್ತಿನ ಅಮಲಿನಲ್ಲಿ ಕೆಲವರು ಅದನ್ನೇ ಕುಡಿಯುತ್ತಾರೆ. ಅಧಿಕಾರಿಗಳು ಚೆನ್ನಾಗಿ ಡ್ರೆಸ್ ಹಾಕಿಕೊಂಡು ಬರುತ್ತಾರೆ. ಕೆಲಸ ಮಾತ್ರ ಮಾಡುವುದಿಲ್ಲ ಎಂದು ಅಸಮಧಾನ ಹೊರಹಾಕಿದರು.

     

    ಇದೇ ವಿಚಾರಕ್ಕೆ ದನಿಗೂಡಿಸಿದ ಹಾಸನ ಶಾಸಕ ಪ್ರೀತಮ್ ಗೌಡ ಅವರು, ನಗರದ ಭಾಗಗಳಲ್ಲಿ ಬೆಳಗ್ಗೆಯೇ ಮದ್ಯದಂಗಡಿ ಓಪನ್ ಆಗುತ್ತಿವೆ. ದಯವಿಟ್ಟು 11 ಗಂಟೆಯ ನಂತರ ಎಣ್ಣೆ ಮಾರಾಟ ಮಾಡಬೇಕು ಅಂತಾ ಸಮಯ ನಿಗಧಿಪಡಿಸಿ ಎಂದು ಸಚಿವರಿಗೆ ಮನವಿ ಮಾಡಿಕೊಂಡರು.

    ಶಾಸಕರ ಮಾತನ್ನು ಆಲಿಸಿದ ಸಚಿವ ಎಚ್.ಡಿ.ರೇವಣ್ಣ ಅವರು ಕೂಡ, ಕುಡುಕರ ಸಮಸ್ಯೆಗಳ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕುಡಿದು ಮನೆಗೆ ಬಂದು ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ ಮಾಡುತ್ತಾರೆ. ಈ ರೀತಿ ಕುಡಿದು ಓಡಾಡುವರ ಮೇಲೆ ಒಂದರೆಡು ಕೇಸ್ ಹಾಕಿ ಬುದ್ಧಿ ಕಲಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಕುಡಿದು ಬೈಕ್ ಓಡಿಸುತ್ತಾರೆ. ಒಂದು ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡರೆ ಪರಿಹಾರದ ಹಣ ಕೂಡ ಸಿಗಲ್ಲ. ಈ ಕುರಿತು ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯ ಹೆದ್ದಾರಿಗೂ ಇನ್ಮುಂದೆ ಟೋಲ್ ಕಟ್ಟಬೇಕು!- 1 ಕಿ.ಮೀಗೆ ಎಷ್ಟು ರೂ. ಟೋಲ್?

    ರಾಜ್ಯ ಹೆದ್ದಾರಿಗೂ ಇನ್ಮುಂದೆ ಟೋಲ್ ಕಟ್ಟಬೇಕು!- 1 ಕಿ.ಮೀಗೆ ಎಷ್ಟು ರೂ. ಟೋಲ್?

    ಬೆಂಗಳೂರು: ಈ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಟೋಲ್ ಶುಲ್ಕ ಪಾವತಿ ಮಾಡಬೇಕಿತ್ತು. ಆದರೆ ಇನ್ನುಮುಂದೆ ರಾಜ್ಯ ಹೆದ್ದಾರಿಗೂ ಟೋಲ್ ವಿಧಿಸುವ ಮೂಲಕ, ರಾಜ್ಯ ಸರ್ಕಾರ ಹೊಸ ಆದಾಯದ ಮೂಲವನ್ನು ಹುಡುಕಿಕೊಳ್ಳಲು ಮುಂದಾಗಿದೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು, ಬಿಓಟಿ (ಬಿಲ್ಡ್- ಆಪರೇಟ್- ಟ್ರಾನ್ಸ್‌ಫರ್‌) ಆಧಾರದಲ್ಲಿ ಹೆದ್ದಾರಿ ಅಭಿವೃದ್ಧಿ ಪಡಿಸಿರುವುದರಿಂದ ಟೋಲ್ ಸಂಗ್ರಹ ಅನಿವಾರ್ಯವಾಗಿದೆ. ಹೀಗಾಗಿ ಪ್ರತಿ ವರ್ಷ ಶೇ.10 ರಷ್ಟು ಟೋಲ್ ಶುಲ್ಕ ಹೆಚ್ಚಳ ಮಾಡಬೇಕು ಎನ್ನುವ ವಿಚಾರ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.  ಇದನ್ನು ಓದಿ: ಫಸ್ಟ್ ಟೈಂ ರಾಜ್ಯ ಹೆದ್ದಾರಿಗೂ ಟೋಲ್- ಸಮ್ಮಿಶ್ರ ಸರ್ಕಾರದ ಪ್ರಯೋಗಕ್ಕೆ ಜನಾಕ್ರೋಶ

    ರಾಜ್ಯ ಹೆದ್ದಾರಿಗಳಿಗೆ ಟೋಲ್ ವಿಧಿಸಲು 2010ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಿರ್ಧಾರ ಆಗಿದೆ. ಈ ನಿಟ್ಟಿನಲ್ಲಿ 17 ಟೆಂಡರ್ ಕರೆಯಲಾಗಿದ್ದು, ಅದರಲ್ಲಿ 5 ಟೆಂಡರ್ ನೀಡಲಾಗಿದೆ. ಮೊದಲ ವರ್ಷ ಶೇ.10, ಎರಡನೇ ವರ್ಷ ಶೇ.20 ಹಾಗೂ ಮೂರನೇ ಅವಧಿಗೆ ಶೇ.30 ದರ ಹೆಚ್ಚಳವಾಗಲಿದೆ. 2015ರಲ್ಲಿ ಟೋಲ್ ಸಂಗ್ರಹಕ್ಕೆ ನಿಯಮಾವಳಿ ರಚಿಸಲಾಗಿದ್ದು, 2017ರಲ್ಲಿಯೇ ಟೆಂಡರ್ ಕರೆಯಲಾಗಿತ್ತು ಎಂದ ಸಚಿವರು, ವಿಶ್ವ ಬ್ಯಾಂಕ್ ಮತ್ತು ಎಡಿಬಿ ಬ್ಯಾಂಕ್ ಅನುದಾನ ಅಡಿಯಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.

    ಎಲ್ಲೆಲ್ಲಿ ಟೋಲ್ ಸಂಗ್ರಹ:
    ಈಗಾಗಲೇ ಪಡುಬಿದ್ರೆ- ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಎರಡು ದಿನಗಳಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಹೊಸಕೋಟೆ – ಚಿಂತಾಮಣಿ- 58, ತುಮಕೂರು-ಪಾವಗಡ, ಮುದುಗಲ್-ತಾವರೆಗೇರಾ ರಾಜ್ಯ ಹೆದ್ದಾರಿ ಟೋಲ್ ಸಂಗ್ರಹಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ ಬಾಕಿ ಇರುವ ಬೇರೆ ಬೇರೆ ಮಾರ್ಗಗಳಲ್ಲಿ ಯೋಜನೆ ಅನುಷ್ಠಾನ ಹಂತದಲ್ಲಿದೆ. ಕೋಟಲ್ ಸಂಗ್ರಹಕ್ಕೆ ಕೆಶಿಪ್ ಮತ್ತು ಕೆಆರ್ ಡಿಸಿಎಲ್ ಸಂಸ್ಥೆಗಳು ಕಾಮಗಾರಿ ನಡೆಸಿವೆ. 3 ವರ್ಷಗಳ ಅವಧಿಗೆ ಟೆಂಡರ್ ನೀಡಲಾಗಿದೆ ಎಂದು ಹೇಳಿದರು.

    ಕಿಮೀಗೆ ಎಷ್ಟು?
    ಪ್ರಸ್ತಾವಿತ 17 ರಾಜ್ಯ ಹೆದ್ದಾರಿಗಳಲ್ಲಿ ಕಾರ್, ಜೀಪ್, ವ್ಯಾನ್ ಮತ್ತಿತರ ಲಘು ಮೋಟಾರು ವಾಹನಗಳಿಗೆ ಪ್ರತಿ ಕಿಮೀಗೆ 58 ಪೈಸೆ, ಕಡಿಮೆ ಭಾರ ಹೊರುವ ಭಾರೀ ವಾಹನಗಳಿಗೆ 86 ಪೈಸೆ, ಬಸ್ ಮತ್ತು ಟ್ರಕ್‍ಗೆ 1.73 ರೂ., ನಿಗದಿಪಡಿಸಲಾಗಿದೆ. ಮಲ್ಟಿ ಎಕ್ಸೆಲ್, ಅರ್ಥ್ ಮೂವಿಂಗ್ ಮಷಿನರಿ ಮತ್ತು 3ರಿಂದ 6 ಎಕ್ಸೆಲ್ ವಾಹನಗಳಿಗೆ 2.57 ರೂ. ಹಾಗೂ ಭಾರೀ ವಾಹನ ಮತ್ತು ಸೆವೆನ್ ಎಕ್ಸಲ್ ಗಿಂತ ಅಧಿಕ ಭಾರದ ವಾಹನಗಳಿಗೆ 3.45 ರೂ.ದಂತೆ ಶುಲ್ಕ ಸಂಗ್ರಹಿಸಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉದ್ಘಾಟನೆಗೆ ಮುಂಚೆಯೇ ರೇವಣ್ಣ ಕ್ಷೇತ್ರದಲ್ಲಿ ಸತತ ಮೂರನೇ ಬಾರಿ ಕುಸಿದ ಮೇಲ್ಸೇತುವೆ!

    ಉದ್ಘಾಟನೆಗೆ ಮುಂಚೆಯೇ ರೇವಣ್ಣ ಕ್ಷೇತ್ರದಲ್ಲಿ ಸತತ ಮೂರನೇ ಬಾರಿ ಕುಸಿದ ಮೇಲ್ಸೇತುವೆ!

    ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ಬಳಿ ಸತತ ಮೂರನೇ ಬಾರಿ ರೈಲ್ವೇ ಮೇಲ್ಸೇತುವೆ ಕುಸಿದಿದೆ.

    ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 40 ಕೋಟಿ ರೂ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಿದ್ದು, ಉದ್ಘಾಟನೆಗೂ ಮುನ್ನ ಈ ರೇಲ್ವೇ ಮೇಲ್ಸೇತುವೆ ಪದೇ ಪದೇ ಕುಸಿಯುತ್ತಿದೆ. ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಸೇತುವೆ ಆಗಾಗ್ಗೆ ಕುಸಿಯುತ್ತಿದೆ ಅಂತ ಸ್ಥಳೀಯರು ಹಾಗೂ ಪ್ರಯಾಣಿಕರು ಆರೋಪಿಸುತ್ತಿದ್ದಾರೆ.

    ನೂತನ ಫ್ಲೈಓವರ್ ಇದಾಗಿದ್ದು, ಕೆಲ ತಿಂಗಳ ಹಿಂದೆ ರೈಲ್ವೇ ಮೇಲ್ಸೇತುವೆ ತಡೆಗೋಡೆ ಒಂದು ಬಾರಿ ಮೊದಲೇ ಕುಸಿದು ಬಿದ್ದಿತ್ತು. ನಂತರ ಅದರ ಪಕ್ಕದ ಎಡಭಾಗದಲ್ಲಿ ಕಳೆದ ಜುಲೈ ತಿಂಗಳಿನಲ್ಲಿ 2ನೇ ಬಾರಿಗೆ ಕುಸಿದಿತ್ತು. ಇದರಿಂದಾಗಿ ಸ್ಥಳೀಯರು ಮತ್ತು ಪ್ರಯಾಣಿಕರು ಹೆಚ್ಚಿನ ಆತಂಕಪಟ್ಟಿದ್ದರು.

    ಸೇತುವೆಯ ಗೋಡೆಗಳು ಕುಸಿತವಾಗಿದ್ದು, ಸಾರ್ವಜನಿಕರಿಗೆ ಕಾಣಬಾರದೆಂದು ಟಾರ್ಪಲ್ ಅಳವಡಿಕೆ ಮಾಡಲಾಗಿತ್ತು. ಉದ್ಘಾಟನೆಗೂ ಮುನ್ನವೇ ಮೇಲ್ಸೇತುವೆ ಕುಸಿತಕೊಂಡಿದ್ದು ಕಳಪೆ ಕಾಮಾಗಾರಿಗೆ ಉದಾಹರಣೆಯಾಗಿದೆ. ಇನ್ನು ಗೋಡೆ ಕುಸಿತದ ವೇಳೆಯಲ್ಲಿ ಯಾವುದೇ ವಾಹನಗಳು ಚಲಿಸುತ್ತಿರಲಿಲ್ಲ. ಹಾಗಾಗಿ ಅನಾಹುತವೊಂದು ತಪ್ಪಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=hcPdS2X3dPI

  • ಮಹಾಮಳೆಯಿಂದ ಲೋಕೋಪಯೋಗಿ ಇಲಾಖೆಗೆ 430.89 ಕೋಟಿ ನಷ್ಟ- ಎಲ್ಲೆಲ್ಲಿ ಎಷ್ಟು?

    ಮಹಾಮಳೆಯಿಂದ ಲೋಕೋಪಯೋಗಿ ಇಲಾಖೆಗೆ 430.89 ಕೋಟಿ ನಷ್ಟ- ಎಲ್ಲೆಲ್ಲಿ ಎಷ್ಟು?

    ಬೆಂಗಳೂರು: ಮಹಾಮಳೆಗೆ ರಾಜ್ಯದಲ್ಲಿ ಭಾರೀ ನಷ್ಟವಾಗಿದ್ದು, ದಕ್ಷಿಣ ವಲಯ, ಉತ್ತರ ವಲಯ ಹಾಗೂ ಈಶಾನ್ಯ ವಲಯಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಒಟ್ಟು 430.89 ಕೋಟಿ ರೂ. ನಷ್ಟವಾಗಿದೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ಎಲ್ಲೆಲ್ಲಿ ಎಷ್ಟು ನಷ್ಟ?
    ದಕ್ಷಿಣ ವಲಯ ಜಿಲ್ಲೆಗಳಾದ ದಕ್ಷಿಣಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಉಡುಪಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರುಗಳಲ್ಲಿ ಒಟ್ಟು 365.95 ಕೋಟಿ ರೂ. ನಷ್ಟವಾಗಿದೆ. ಉತ್ತರ ವಲಯದ ಬೆಳಗಾವಿ, ಧಾರವಾಡ, ದಾವಣಗೆರೆ, ಚಿತ್ರದುರ್ಗ ಉತ್ತರ ಕನ್ನಡ ಜಿಲ್ಲೆಗಳಲ್ಲಿ 60.83 ಕೋಟಿ ರೂ., ಈಶಾನ್ಯ ವಲಯದ ಕಲಬುರಗಿ, ಬೀದರ್, ಬಳ್ಳಾರಿ, ಕೊಪ್ಪಳ, 5.10 ಕೋಟಿ ರೂ. ಹಾನಿಯಾಗಿದೆ ಎಂದು ಸಚಿವರು ಅಂಕಿ-ಅಂಶಗಳ ಮೂಲಕ ವಿವರಿಸಿದರು.

    ರಾಜ್ಯದಲ್ಲಿ ಒಟ್ಟು 538 ಸೇತುವೆಗಳು ನಾಶವಾಗಿದ್ದು, 78.49 ಕೋಟಿ ರೂ. ಹಾನಿಹಾಗಿದೆ. ಇನ್ನು ಕಟ್ಟಡ 34 ಕಟ್ಟಗಳು ಹಾನಿಯಾಗಿದ್ದು, ಇದರಿಂದ 5.48 ಕೋಟಿ ರೂ. ನಷ್ಟವಾಗಿದೆ. ಜೊತೆಗೆ 110 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಹಾಗೂ 1550.48 ಕಿ.ಮೀ. ರಾಜ್ಯ ಹೆದ್ದಾರಿ ಹಾಳಾಗಿದೆ ಎಂದರು.

    ಮಳೆ ನಿಲ್ಲುವವರೆಗೂ ದುರಸ್ತಿ ಕಾರ್ಯ ಪ್ರಾರಂಭಿಸುವುದು ಕಷ್ಟ. ಈಗಾಗಲೇ 25 ಜೆಸಿಬಿಗಳು ನಿರಂತರವಾಗಿ ಕೆಲಸ ಮಾಡುತ್ತಿವೆ. ಆದರೆ ಗುಡ್ಡ ಕುಸಿತ ಹೆಚ್ಚಾಗುತ್ತಿದೆ. ಸಕಲೇಶಪುರದ ಬಳಿ ಅರ್ಧಗುಡ್ಡ ರಸ್ತೆಗೆ ಬಿದ್ದಿದೆ. ರಸ್ತೆ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಲು 60 ಕೋಟಿ ರೂ. ಬೇಕಾಗುತ್ತದೆ. ಇದರಿಂದ ಮಣ್ಣು ತೆರವು ಕಾರ್ಯ ಬಿಟ್ಟು ಪರ್ಯಾಯ ಮಾರ್ಗ ನಿರ್ಮಿಸುವ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

    ಶಿರಾಡಿ ಘಾಟ್ ರಸ್ತೆ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆಗೆ ಮಾತನಾಡಿರುವೆ. ಒಟ್ಟು 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾಲುವೆ ಹಾಗೂ ರಸ್ತೆ ನಿರ್ಮಾಣ ಮಾಡುವ ಉದ್ದೇಶವಿದೆ. ಈ ಕುರಿತು ಕೇಂದ್ರ ಸರ್ಕಾರದ ಜೊತೆಗೆ ಮಾತನಾಡುವಂತೆ ಹಾಸನ ಹಾಗೂ ಮಂಗಳೂರು ಸಂಸದರಿಗೆ ನಾನು ಮನವಿ ಮಾಡಲಿರುವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಮಾರಸ್ವಾಮಿ ದಂಪತಿಯ ಪ್ರದಕ್ಷಿಣೆ ದಿಕ್ಕನ್ನೇ ಬದಲಿಸಿದ ರೇವಣ್ಣ!

    ಕುಮಾರಸ್ವಾಮಿ ದಂಪತಿಯ ಪ್ರದಕ್ಷಿಣೆ ದಿಕ್ಕನ್ನೇ ಬದಲಿಸಿದ ರೇವಣ್ಣ!

    ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ವಾಸ್ತು ನಂಬಿಕೆ ಅತಿಯಾಗಿ ಮುಂದುವರಿದಿದ್ದು, ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಂಪತಿಯ ಪ್ರದಕ್ಷಿಣೆ ದಿಕ್ಕನ್ನೇ ಬದಲಿಸಿದ್ದಾರೆ.

    ಜಿಲ್ಲೆಯ ಹೊಳೆನರಸೀಪುರದ ಹರದನಹಳ್ಳಿ ದೇವೇಶ್ವರ ದೇವಾಲಯಕ್ಕೆ ಕುಟುಂಬ ಸಮೇತ ಪೂಜೆ ಸಲ್ಲಿಸಿದರು. ಆದರೆ ಅರ್ಚಕರು ಸಿಎಂ ಕುಮಾರಸ್ವಾಮಿ ದಂಪತಿಗೆ ಹೇಳಿದ್ದ ಪ್ರದಕ್ಷಿಣೆ ದಿಕ್ಕನ್ನು ಸಚಿವ ರೇವಣ್ಣ ವಾಸ್ತು ಪ್ರಕಾರ ದಿಕ್ಕು ಬದಲಾಗಬೇಕು ಎಂದು ಹೇಳಿದ್ದರು. ಬಳಿಕ ರೇವಣ್ಣ ಹೇಳಿದಂತೆಯೇ ಕುಮಾರಸ್ವಾಮಿ ದಂಪತಿ ಪ್ರದಕ್ಷಿಣೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಪೂಜೆ ಹೇಗೆ ಮಾಡಬೇಕು ಅಂತಾ ಅರ್ಚಕರಿಗೂ ಪೂಜೆ ಪಾಠ ಮಾಡಿದ್ದಾರೆ.

    ಈ ಮಧ್ಯೆ, ಹಾಸನ ಲೋಕಸಭೆ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಬೇಕೋ, ಬೇಡವೋ ಎನ್ನುವುದನ್ನು ಚರ್ಚೆ ಮಾಡುತ್ತೇವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು. ಇತ್ತ ಕುಮಾರಸ್ವಾಮಿಯವರು ಅಗತ್ಯಬಿದ್ದರೆ ಪ್ರಜ್ವಲ್ ಸ್ಪರ್ಧೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

    https://youtu.be/tsooli2UbGo

    ಈ ಹಿಂದೆಯೂ ಹಾಸನದ ಜಿಲ್ಲಾಸ್ಪತ್ರೆ ಸಮೀಪದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡ ಶಂಕು ಸ್ಥಾಪನೆಗೆ ಸಚಿವ ರೇವಣ್ಣ ಆಗಮಿಸಿದ್ದರು. ಈ ವೇಳೆ ಪ್ರಾರಂಭವಾಗಿದ್ದ ಪೂಜೆ ತಡೆದು, ದಿಕ್ಕು ಬದಲಿಸುವಂತೆ ಅರ್ಚಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ವಾಸ್ತು ಪ್ರಕಾರ ನೀವು ಪೂಜೆ ಮಾಡುತ್ತಿಲ್ಲ ಎಂದು, ತಾವೇ ಮುಂದೆ ನಿಂತು ಪೂಜೆ ಮಾಡಿಸಲು ಮುಂದಾದ ಸಚಿವರು, “ರೀ ನೀರು ಮೊದಲು ಹಾಕಿ, ನೀವು ನಮ್ಮ ತಲೆ ಬಿಸಿ ಮಾಡಬೇಡಿ” ಎಂದು ಅರ್ಚಕ ರವಿ ಅವರ ವಿರುದ್ಧ ರೇಗಾಡಿದ್ದರು.