Tag: ಸಚಿವೆ ಸುಷ್ಮಾ ಸ್ವರಾಜ್

  • ಆತ್ಮೀಯ ಗೆಳೆಯ ಮೋದಿಗೆ ಶುಭಾಶಯ ತಿಳಿಸಿದ್ರು ಡೊನಾಲ್ಡ್ ಟ್ರಂಪ್

    ಆತ್ಮೀಯ ಗೆಳೆಯ ಮೋದಿಗೆ ಶುಭಾಶಯ ತಿಳಿಸಿದ್ರು ಡೊನಾಲ್ಡ್ ಟ್ರಂಪ್

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವಿಶೇಷ ಒಲವನ್ನು ಹೊರಹಾಕಿ, ಸ್ನೇಹಿತನಿಗೆ ಶುಭಾಶಯ ತಿಳಿಸಿದ್ದಾರೆ.

    ‘ನಾನು ಭಾರತವನ್ನು ಪ್ರೀತಿಸುತ್ತೇನೆ. ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಶುಭಾಶಯಗಳನ್ನು ತಿಳಿಸಿಬಿಡಿ ಅಂತ ಡೊನಾಲ್ಡ್ ಟ್ರಂಪ್ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಹೇಳಿದ್ದಾರೆ.

    ಅಮೆರಿಕಾದಲ್ಲಿ ನಡೆಯುತ್ತಿರುವ ಮಾದಕ ದ್ರವ್ಯದ ವಿರುದ್ಧದ ಜಾಗತಿಕ ಮಟ್ಟದ ಸಭೆಯಲ್ಲಿ ಸಚಿವೆ ಸುಷ್ಮಾ ಸ್ವರಾಜ್ ಭಾಗಿಯಾಗಿದ್ದರು. ಈ ವೇಳೆ ಸುಷ್ಮಾ ಸ್ವರಾಜ್ ಅವರನ್ನು ಅಮೆರಿಕಾದ ರಾಯಭಾರಿ ನಿಕ್ಕಿ ಹಾಲೆ, ಟ್ರಂಪ್ ಅವರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.

     

    ಟ್ರಂಪ್ ಜೊತೆಗೆ ಮಾತು ಪ್ರಾರಂಭಿಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರು ನಿಮಗೆ ಶುಭಾಶಯ ತಿಳಿಸಲು ಹೇಳಿದ್ದಾರೆ ಎಂದು ಸುಷ್ಮಾ ಶುಭಕೊರಿದ್ದೇ ತಡ, ಟ್ರಂಪ್ ಪ್ರತಿಕ್ರಿಯಿಸಿ, ‘ನಾನು ಭಾರತವನ್ನು ಪ್ರೀತಿಸುತ್ತೇನೆ. ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರಿಗೂ ನನ್ನ ಶುಭಾಶಯ ತಿಳಿಸಿ ಎಂದಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರನ್ನು ಡೊನಾಲ್ಡ್ ಟ್ರಂಪ್ ಅವರು ಸ್ನೇಹಿತ ಅಂತ ಕರೆದಿದ್ದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್ ನಂದು ಅಮೆರಿಕಾದ ವೈಟ್ ಹೌಸ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂಡ ಮೋದಿ ನನ್ನ ಆತ್ಮೀಯ ಗೆಳೆಯ ಎಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋದಿಯ ಒಂದು ಫೋನ್ ಕರೆಗೆ ಬಾಂಬ್ ದಾಳಿ ನಿಲ್ಲಿಸಿದ್ದ ಸೌದಿ ದೊರೆ!

    ಮೋದಿಯ ಒಂದು ಫೋನ್ ಕರೆಗೆ ಬಾಂಬ್ ದಾಳಿ ನಿಲ್ಲಿಸಿದ್ದ ಸೌದಿ ದೊರೆ!

    ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿಯವರ ಒಂದು ಫೋನ್ ಕರೆಗೆ ಸ್ಪಂದಿಸಿದ ಸೌದಿ ದೊರೆ, 2015 ರಲ್ಲಿ ಯೆಮನ್ ಮೇಲಿನ ಬಾಂಬ್ ದಾಳಿ ನಿಲ್ಲಿಸಿದ್ದರು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಹೇಳಿದ್ದಾರೆ.

    ಆಸಿಯಾನ್ ಪ್ರವಾಸಿ ಭಾರತೀಯರ ದಿನಾಚರಣೆಯಲ್ಲಿ ಭಾಗವಹಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಈ ಕುರಿತು ಮಾಹಿತಿ ನೀಡಿದರು. ಯೆಮನ್ ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಭಾರತೀಯ ಪ್ರಜೆಗಳನ್ನು ರಕ್ಷಿಸಲು ಕೈಗೊಂಡಿದ್ದ ಆಪರೇಷನ್ `ರಹಾತ್’ ಗೆ ಸೌದಿ ದೊರೆ ಸಹಕಾರ ನೀಡಿದ್ದರು ಎಂದು ತಿಳಿಸಿದ್ದಾರೆ.

    ಯೆಮನ್ ನಲ್ಲಿದ್ದ 4000ಕ್ಕೂ ಹೆಚ್ಚು ಭಾರತೀಯರು ಸಂಕಷ್ಟದಲ್ಲಿ ಸಿಕ್ಕಿದ್ದರು. 2015 ಏಪ್ರಿಲ್ 1 ರಂದು ಆಪರೇಷನ್ ರಹಾತ್ ಎಂಬ ಹೆಸರಿನಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಲು ನಿರ್ಧರಿಸಿತ್ತು.

    ಈ ವೇಳೆ ಸೌದಿ ಯೆಮನ್ ನಲ್ಲಿ ಉಗ್ರರ ವಿರುದ್ಧ ಬಾಂಬ್ ದಾಳಿ ನಡೆಸುತ್ತಿತ್ತು. ಸುಷ್ಮಾ ಅವರ ಸಲಹೆಯಂತೆ ಮೋದಿ ಭಾರತೀಯರ ರಕ್ಷಣೆಗೆ ಕಾರ್ಯಾಚರಣೆ ನಡೆಸಲು ಅನುವಾಗುವಂತೆ ಬಾಂಬ್ ದಾಳಿ ಸ್ಥಗಿತಕ್ಕೆ ಸೌದಿ ದೊರೆಯನ್ನು ಕೋರಿದ್ದರು.

    ಈ ಮನವಿಗೆ ಪ್ರತಿಕ್ರಿಯಿಸಿದ್ದ ಸೌದಿ ದೊರೆ, ಪ್ರಧಾನಿ ಮೋದಿಯವರೊಂದಿಗಿನ ಸ್ನೇಹಕ್ಕೆ ಅವರ ಮನವಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಆದರೆ ಬಾಂಬ್ ದಾಳಿಯನ್ನೂ ಪೂರ್ಣ ನಿಲ್ಲಿಸಲಾಗದು. ಭಾರತೀಯರ ಸುರಕ್ಷಿತ ತೆರವಿಗಾಗಿ ಪ್ರತಿನಿತ್ಯ ಎರಡು ಘಂಟೆಗಳ ಕಾಲ ಬೆಳಗ್ಗೆ 9 ರಿಂದ 11 ರ ವರೆಗೆ ಬಾಂಬ್ ದಾಳಿ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದು ಸುಷ್ಮಾ ಸ್ವರಾಜ್ ಘಟನೆಯನ್ನು ವಿವರಿಸಿದರು.

    ಸೌದಿ ದೊರೆಯ ಭರಸೆಯಂತೆ ಭಾರತೀಯ ಸೇನೆ 2015ರ ಏ.1ರಿಂದ 11 ದಿನಗಳ ಕಾಲ ಸೇನಾ ವಿಮಾನ ನಿಲ್ದಾಣದಿಂದ 4,800ಕ್ಕೂ ಹೆಚ್ಚು ಭಾರತೀಯರು ಮತ್ತು 1,972 ನೆರೆಹೊರೆಯ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ರಕ್ಷಿಸಿ ತವರಿಗೆ ಕರೆತಂದಿತ್ತು. ಈ ಕಾರ್ಯಾಚರಣೆಯನ್ನು ಭಾರತ ವಿದೇಶಾಂಗ ಸಲಹೆಗಾರ, ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಮುಂದಾಳತ್ವದಲ್ಲಿ ನಡೆಯಿತು ಎಂದು ಸುಷ್ಮಾ ಸ್ವರಾಜ್ ಹೇಳಿದರು.

  • ಆಫ್ರಿಕಾದಲ್ಲಿ ಭಾರತೀಯನ ಮೇಲೆ ಹಲ್ಲೆ- ಸಚಿವೆ ಸುಷ್ಮಾ ಸ್ವರಾಜ್ ಸಹಾಯಹಸ್ತ

    ಆಫ್ರಿಕಾದಲ್ಲಿ ಭಾರತೀಯನ ಮೇಲೆ ಹಲ್ಲೆ- ಸಚಿವೆ ಸುಷ್ಮಾ ಸ್ವರಾಜ್ ಸಹಾಯಹಸ್ತ

    ಉಡುಪಿ: ಭಾರತೀಯನ ಮೇಲೆ ಆಫ್ರಿಕಾದ ಮೊಜಾಂಬಿಕ್ ನಲ್ಲಿ ಮಾನಸಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

    ಉಡುಪಿಯ ಸಂತೆಕಟ್ಟೆಯ ಆನಂದ್ ಕೃಷ್ಣ ಸಿಂಗ್ ಎಂಬವರ ಮೇಲೆ ಆಫ್ರಿಕಾದ ಮೋಜಾಂಬಿಕ್‍ನಲ್ಲಿ ಹಲ್ಲೆಯಾಗಿ ಗೃಹ ಬಂಧನಕ್ಕೆ ತಳ್ಳಲಾಗಿದೆ.

    ಆನಂದ್ ಸಿಂಗ್ ಕೆಲಸ ಮಾಡ್ತಿದ್ದ ಅಂಗಡಿಯಲ್ಲಿ ಹಣ ಕಳ್ಳತನವಾಗಿದೆ ಎಂಬ ಕಾರಣಕ್ಕೆ ಆನಂದ್ ಮೇಲೆ ಅಂಗಡಿ ಮಾಲೀಕ ಕಳ್ಳತನದ ಆರೋಪ ಹೊರಿಸಿದ್ದಾರೆ. ಅಲ್ಲದೇ ಮಾಲೀಕ ಮತ್ತು ಅವರ ಮಗ ಮನಸೋ ಇಚ್ಛೆ ಥಳಿಸಿದ್ದಾರೆ. ಇವರ ಹಿಂಸೆಯಿಂದ ಬೇಸತ್ತ ಆನಂದ್ ಅವರ ಸ್ನೇಹಿತರನ್ನು ಫೇಸ್ ಬುಕ್ ಮೂಲಕ ಸಂಪರ್ಕಿಸಿದ್ದಾರೆ.

    ಆನಂದ್ ಕೃಷ್ಣ ಸಿಂಗ್ ಅವರ ಭಾರತದ ಸ್ನೇಹಿತರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದಾರೆ. ಕೂಡಲೇ ಸ್ಪಂದಿಸಿದ ಸಚಿವೆ ಸುಷ್ಮಾ ಸ್ವರಾಜ್ ಆಫ್ರಿಕಾ ರಾಯಭಾರಿ ಜೊತೆ ಮಾತಾಡಿ, ಕೂಡಲೇ ಆನಂದ್ ಅವರನ್ನು ವಾಪಾಸ್ ಕರೆತರುವ ವ್ಯವಸ್ಥೆ ಮಾಡಲು ಆದೇಶಿದ್ದು, ಆನಂದ್ ಸಿಂಗ್ ಇಂದು ಭಾರತಕ್ಕೆ ಬಂದಿಳಿಯುವ ಸಾಧ್ಯತೆ ಇದೆ ಎಂದು ಆನಂದ್ ಗೆಳೆಯರು ಮಾಹಿತಿ ನೀಡಿದ್ದಾರೆ.

    ಆನಂದ್ ಈ ಹಿಂದೆ ಉಡುಪಿಯ ಕೆಲ ಕಡೆಗಳಲ್ಲಿ ಕಬಾಬ್ ಅಂಗಡಿ ನಡೆಸುತ್ತಿದ್ದರು. ಸಂತೆಕಟ್ಟೆಯ ಜಿಮ್ ಗೆ ಬರುತ್ತಿದ್ದರು ಎಂದು ಕೆಲವರು ತಿಳಿಸಿದ್ದಾರೆ. ಆದರೆ ಉಡುಪಿಯಲ್ಲಿ ಎಷ್ಟು ವರ್ಷಗಳಿಂದ ಇದ್ದರು. ಇಲ್ಲಿ ಅವರ ಸಂಬಂಧಿಗಳು ಇದ್ದಾರೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ.

    ಆನಂದ್ ಸಿಂಗ್ ಗೆಳೆಯರು ಆತನ ಮೇಲೆ ನಡೆದ ಹಲ್ಲೆಯ ಫೋಟೋಗಳನ್ನು ಫೇಸ್ ಬುಕ್ ಗೆ ಅಪ್‍ಲೋಡ್ ಮಾಡಿದ್ದಾರೆ.