Tag: ಸಚಿವೆ ಉಮಾ ಭಾರತಿ

  • ದೀಪಾವಳಿ ಬಳಿಕ ರಾಮಮಂದಿರ ನಿರ್ಮಾಣ ಕಾರ್ಯಾರಂಭ : ಯೋಗಿ ಆದಿತ್ಯನಾಥ್

    ದೀಪಾವಳಿ ಬಳಿಕ ರಾಮಮಂದಿರ ನಿರ್ಮಾಣ ಕಾರ್ಯಾರಂಭ : ಯೋಗಿ ಆದಿತ್ಯನಾಥ್

    ಲಕ್ನೋ: ರಾಮ ಮಂದಿರ ವಿಚಾರಣೆಗೆ ತ್ವರಿತಗೊಳಿಸುವಂತೆ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜನವರಿಗೆ ಮುಂದೂಡುತ್ತಿದಂತೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡುವಂತೆ ಆಗ್ರಹ ಹೆಚ್ಚಾಗುತ್ತಿದೆ. ಇದೇ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಮಮಂದಿರ ನಿರ್ಮಾಣ ಕಾರ್ಯಾರಂಭದ ಕುರಿತು ಹೇಳಿಕೆ ನೀಡಿದ್ದಾರೆ.

    ರಾಜಸ್ಥಾನದ ಬಿಕಾನೆರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯೋಗಿ ಆದಿತ್ಯನಾಥ್ ಈ ಕುರಿತು ಪರೋಕ್ಷವಾಗಿ ಹೇಳಿಕೆ ಸೂಚನೆ ನೀಡಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದು ಈ ಕುರಿತು ವರದಿ ಮಾಡಿದ್ದು, ಈ ಬಾರಿ ರಾಮನ ಹೆಸರಿನಲ್ಲಿ ದೀಪ ಹಚ್ಚಿ, ರಾಮ ಮಂದಿರದ ಕಾರ್ಯ ಶೀಘ್ರವೇ ಆರಂಭವಾಗಲಿದೆ. ದೀಪಾವಳಿ ಬಳಿಕವೇ ಕಾರ್ಯಾರಂಭವಾಗಲಿದೆ ಎಂದು ಹೇಳಿದ್ದಾರೆ.

    ಇತ್ತ ರಾಮ ಮಂದಿರ ನಿರ್ಮಾಣ ನನ್ನ ಜೀವನದ ಕನಸು ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದು, ರಾಮ ಜನ್ಮಭೂಮಿ ಯಾತ್ರೆಯಲ್ಲಿ ಭಾಗವಹಿಸಿದ್ದು ನನಗೆ ಈಗಲೂ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.

    ರಾಮ ಜನ್ಮ ಭೂಮಿ ಯಾತ್ರೆ ಸಂಬಂಧ ಪ್ರಕರಣದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿ ಹಾಗೂ ನಾನು ಈಗಲೂ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದೇವೆ. ಇದಕ್ಕೆ ನಮಗೆ ಹೆಮ್ಮೆ ಇದೆ. ರಾಮ ಮಂದಿರ ನಿರ್ಮಾಣದ ಕಾರ್ಯಕ್ಕೆ ನಾನು ಏನು ಮಾಡಲು ಸಿದ್ಧ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

    2010ರಲ್ಲಿ ಅಯೋಧ್ಯೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹಾಗೂ ವಿವಾದ ಕುರಿತ ವಿಚಾರಣೆ ಶೀಘ್ರ ಆರಂಭ ಮಾಡುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅ.29 ರಂದು ಜನವರಿಗೆ ಮುಂದೂಡಿತ್ತು.

    ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗಾಯ್, ನ್ಯಾ. ಎಸ್‍ಕೆ ಕೌಲ್, ಕೆಎಂ ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠ ಇಂದು ಅರ್ಜಿಯ ವಿಚಾರಣೆ ನಡೆಸಿ ನಮಗೆ ನಮ್ಮದೇ ಆದ ಆದ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿತ್ತು. ಅಲ್ಲದೇ ಅಯೋಧ್ಯೆ ಬಗ್ಗೆ ಪ್ರತಿನಿತ್ಯ ವಿಚಾರಣೆ ನಡೆಬೇಕೇ? ಬೇಡವೇ ಎನ್ನುವ ಬಗ್ಗೆ ತೀರ್ಮಾನ ಜನವರಿಯಲ್ಲೇ ಕೈಗೊಳ್ಳಬಹುದು ಎಂದು ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv