Tag: ಸಚಿವರು

  • ಮುನಿರತ್ನ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ರಾ ಡಿಕೆಶಿ?

    ಮುನಿರತ್ನ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ರಾ ಡಿಕೆಶಿ?

    ಬೆಂಗಳೂರು: ರಾಜರಾಜೇಶ್ವರಿ ಶಾಸಕ ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಸಚಿವ ಡಿ.ಕೆ.ಶಿವಕುಮಾರ್ ಹರಿದು ಹಾಕಿದ್ದಾರಾ ಎಂಬ ಪ್ರಶ್ನೆ ಭಾರೀ ಚರ್ಚೆಯಾಗುತ್ತಿದೆ.

    ಸ್ಪೀಕರ್ ರಮೇಶ್ ಕುಮಾರ್ ಅವರ ಕಚೇರಿಗೆ ಒಟ್ಟು 12 ಜನ ಅತೃಪ್ತ ಶಾಸಕರು ರಾಜೀನಾಮೆ ನೀಡಲು ತೆರಳಿದ್ದರು. ರಾಜೀನಾಮೆ ನೀಡುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಪೀಕರ್ ಕಚೇರಿಯನ್ನು ಡಿಕೆ ಶಿವಕುಮಾರ್ ಪ್ರವೇಶಿಸಿದ್ದಾರೆ. ಈ ವೇಳೆ ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದಾರೆ ಎನ್ನಲಾಗಿದೆ.

    ಶಾಸಕರು ರಾಜೀನಾಮೆ ನೀಡಿದ ಬಳಿಕ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಕಾರಿನಲ್ಲಿ ಶಾಸಕರಾದ ಮುನಿರತ್ನ, ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಹಾಗೂ ರಾಮಲಿಂಗಾ ರೆಡ್ಡಿ ಅವರನ್ನು ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಈಗಾಗಲೇ ಮುನಿರತ್ನ ಅವರ ರಾಜೀನಾಮೆಯನ್ನು ತಪ್ಪಿಸಿರುವ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು, ಉಳಿದ ಮೂವರು ಶಾಸಕರ ಮನವೊಲಿಸಿ ರಾಜೀನಾಮೆಯನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

    ರಾಜೀನಾಮೆ ನೀಡಿದವರು ಯಾರ‍್ಯಾರು?:
    ಗೋಕಾಕ್‍ನ ಶಾಸಕ ರಮೇಶ್ ಜಾರಕಿಹೊಳಿ, ಹೀರೆಕೆರೂರಿನ ಬಿ.ಸಿ.ಪಾಟೀಲ್, ಮಸ್ಕಿಯ ಪ್ರತಾಪ್‍ಗೌಡ ಪಾಟೀಲ್, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಅಥಣಿಯ ಮಹೇಶ್ ಕುಮಕಟಳ್ಳಿ, ಕೆ.ಆರ್.ಪೇಟೆಯ ನಾರಾಯಣಗೌಡ, ಜೆಡಿಎಸ್‍ನ ಗೋಪಾಲಯ್ಯ, ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ, ಯಶವಂತಪುರದ ಎಸ್.ಟಿ.ಸೋಮಶೇಖರ್ ಹಾಗೂ ಭೈರತಿ ಬಸವರಾಜು ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ಮಾಜಿ ಅಧ್ಯಕ್ಷ ಹುಣಸೂರು ಶಾಸಕ ವಿಶ್ವನಾಥ್, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ರಾಜೀನಾಮೆ ನೀಡಿದ್ದಾರೆ.

  • ಕಮಿಷನ್ ಪಡೀತಿರಾ? ಡಿಕೆಶಿ ಪ್ರಶ್ನೆಗೆ ಹೌದು ಎಂದ ಅಧಿಕಾರಿ

    ಕಮಿಷನ್ ಪಡೀತಿರಾ? ಡಿಕೆಶಿ ಪ್ರಶ್ನೆಗೆ ಹೌದು ಎಂದ ಅಧಿಕಾರಿ

    – ಸಿ.ಎಸ್.ಶಿವಳ್ಳಿ, ಅವ್ರ ಪತ್ನಿ ಹಸು ಇದ್ದಂಗೆ, ನಾನು ಹಾಗಲ್ಲ
    – ಅಧಿಕಾರಿಗಳಿಗೆ ಸಚಿವರಿಂದ ಕ್ಲಾಸ್

    ಹುಬ್ಬಳ್ಳಿ: ಕಮಿಷನ್ ಪಡೀತಿರಾ ಎಂಬ ಸಚಿವ ಡಿ.ಕೆ.ಶಿವಕುಮಾರ್ ಅವರ ಪ್ರಶ್ನೆಗೆ ಅಧಿಕಾರಿಯೊಬ್ಬರು ಹೌದು ಎಂದು ಉತ್ತರಿಸಿದ ಪ್ರಸಂಗ ಇಂದು ಕುಂದಗೊಳದಲ್ಲಿ ನಡೆಯಿತು.

    ಕುಂದಗೋಳ ತಾಲೂಕಿನ ಸವಾಯಿ ಗಂಧರ್ವ ಭವನದಲ್ಲಿ ಇಂದು ಸಚಿವರು ಹಲವು ಇಲಾಖೆಗಳ ಅಧಿಕಾರಗಳ ಜೊತೆಗೆ ಸಭೆ ನಡೆಸಿದರು. ಈ ವೇಳೆ ಸೂಕ್ತ ಮಾಹಿತಿ ನೀಡದ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು.

    ವಿವಿಧ ಯೋಜನೆಗಳ ಅಡಿ ಸರ್ಕಾರದಿಂದ ಬಡವರಿಗೆ ಮನೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಮನೆ ನಿರ್ಮಾಣ ಮಾಡಿಕೊಡಲು ಅಧಿಕಾರಿಗಳು ಎಷ್ಟು ಕಮಿಷನ್ ಪಡೆಯುತ್ತಾರಾ ಎಂದು ಸಚಿವರು ಕುಂದಗೊಳ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಮೇಟಿ ಅವರಿಗೆ ಪ್ರಶ್ನಿಸಿದರು. ಈ ವೇಳೆ ಅಧಿಕಾರಿ ಮೇಟಿ ಅವರು ಹೌದು ಎಂದು ಉತ್ತರಿಸಿದರು. ನೋಡಿ ನೀವು ಎಷ್ಟು ಹಣ ಪಡೆಯುತ್ತಿರಾ ಎಂಬ ಎಲ್ಲ ರೀತಿಯ ಮಾಹಿತಿಯೂ ನನ್ನ ಬಳಿಯಿದೆ. ಆಡಿಯೋ ಇದೆ, ಪ್ಲೇ ಮಾಡ್ಲಾ ಎಂದು ಸಚಿವರು ಕ್ಲಾಸ್ ತೆಗೆದುಕೊಂಡರು.

    ಜಿಲ್ಲಾ ಪ್ರಗತಿ ಬಗ್ಗೆ ವರದಿ ನೀಡುತ್ತಿದ್ದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೊರವರ್ ಅವರನ್ನು ತಡೆದ ಡಿ.ಕೆ.ಶಿವಕುಮಾರ್ ಅವರು, ನೋಡಪ್ಪಾ ನೀನು ಜಿಲ್ಲಾ ಮಟ್ಟದ ಅಧಿಕಾರಿ ಆಗಿರುವುದಕ್ಕೆ ನಾಲಾಯಕ್. ನಾನು ಇಲ್ಲಿಗೆ ಹೊಸಬ. ಹೀಗಾಗಿ ಎಷ್ಟು ಪಂಚಾಯತ್‍ಗಳಿವೆ. ಯೋಜನೆ ಯಾವುದು ಎಂಬ ಮಾಹಿತಿ ವರದಿ ವಾಚನ ಮಾಡಬೇಕು. ಅದನ್ನು ಬಿಟ್ಟು ಏಕಾಏಕಿ ಯೋಜನೆಗೆ ಖರ್ಚು ಮಾಡಿದ ಹಣದ ಮಾಹಿತಿ ನೀಡುವುದಲ್ಲ ಎಂದು ಗುಡುಗಿದರು.

    ಮಾಜಿ ಸಚಿವ ಸಿ.ಎಸ್.ಶಿವಳ್ಳಿ ಮತ್ತು ಶಾಸಕಿ ಕುಸುಮಾ ಶಿವಳ್ಳಿ ಅವರು ಹಸು ಇದ್ದಂಗೆ. ಆದರೆ ನಾನು ಹಾಗಲ್ಲ. ನನಗೆ ಎಲ್ಲ ರೀತಿ ಲೆಕ್ಕ ನೀಡಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಅಧಿಕಾರಿಗಳು ಸರಿಯಾದ ಮಾಹಿತಿ ಇಟ್ಟುಕೊಂಡು ಮಾತನಾಡಬೇಕು. ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿಯೇ ಸಚಿವನಾಗಿದ್ದೇನೆ. ಎಲ್ಲಾ ಇಲಾಖೆ ಬಗ್ಗೆ ಗೊತ್ತು. ನೀವು ನೀಡುವ ಮಾಹಿತಿ ಕೊರತೆ ಇರಬಾರದು. ಅಧಿಕಾರಿಗಳು ಫಲಾನುಭವಿಗಳ ಅಂಕಿ ಸಂಖ್ಯೆ ಸಹಿತ ಮಾಹಿತಿ ಕೊಡಬೇಕು. ನಾನು ಇಲ್ಲಿ ಹಾರ ತುರಾಯಿ ಹಾರಿಸಿಕೊಂಡು ಜೈಕಾರ ಹಾಕಿಸಿಕೊಂಡು ಊಟ ಮಾಡಿ ಹೋಗುವುದಕ್ಕೆ ಬಂದಿಲ್ಲ. ಎಚ್ಚರಿಕೆಯಿಂದ ಮಾಹಿತಿ ಕೊಡಿ. ಮಾಧ್ಯಮದವರಿದ್ದಾರೆ ಎಂದು ಸಭೆ ಆರಂಭಕ್ಕೂ ಮುನ್ನವೇ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

    ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರಾದ ಯುಟಿ ಖಾದರ್, ಎಂಟಿಬಿ ನಾಗರಾಜ, ಜಯಮಾಲಾ, ಶಾಸಕಿ ಕುಸುಮಾ ಶಿವಳ್ಳಿ ಉಪಸ್ಥಿತರಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಶ್ರೀಲಂಕಾ ಉಗ್ರರ ಜೊತೆಗೆ ನಂಟು ಶಂಕೆ – 9 ಮುಸ್ಲಿಂ ಸಚಿವರು ರಾಜೀನಾಮೆ

    ಶ್ರೀಲಂಕಾ ಉಗ್ರರ ಜೊತೆಗೆ ನಂಟು ಶಂಕೆ – 9 ಮುಸ್ಲಿಂ ಸಚಿವರು ರಾಜೀನಾಮೆ

    ಕೊಲಂಬೋ: ಈಸ್ಟರ್ ಹಬ್ಬದಂದು ಶ್ರೀಲಂಕಾದಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 9 ಮಂದಿ ಮುಸ್ಲಿಂ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಈ ಒಂಬತ್ತು ಜನ ಸಚಿವರು ಈಸ್ಟರ್ ಹಬ್ಬದಂದು ಬಾಂಬ್, ಆತ್ಮಾಹುತಿ ದಾಳಿ ನಡೆಸಿದ ಇಸ್ಲಾಮಿಕ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಮ್ಮ ವಿರುದ್ಧ ಕೇಳಿ ಬಂದ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ರಾಜೀನಾಮೆ ನೀಡಿದ ಸಚಿವರು ಒತ್ತಾಯಿಸಿದ್ದಾರೆ.

    ಸರಣಿ ಬಾಂಬ್ ಸ್ಫೋಟದ ನಡೆಸಿದ ನ್ಯಾಷನಲ್ ಥೌಹೀತ್ ಜಮಾತ್ (ಎನ್‍ಟಿಜೆ) ನಿಷೇಧಿತ ಉಗ್ರ ಸಂಘಟನೆಯೊಂದಿಗೆ 9 ಜನ ಮುಸ್ಲಿಂ ಸಂಪರ್ಕ ಇಟ್ಟುಕೊಂಡಿದ್ದಾರೆ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದೇಶವ್ಯಾಪಿ ಒತ್ತಾಯ ಕೇಳಿ ಬಂದಿತ್ತು.

    ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿರುವ ಬೌದ್ಧ ಧರ್ಮ ಗುರುಗಳು ಸಹ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗುತ್ತಿದ್ದಂತೆ ಆರೋಪ ಎದುರಿಸುತ್ತಿರುವ 9 ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ.

    ಶ್ರೀಲಂಕಾ ಸಂಸತ್ 225 ಸದಸ್ಯ ಬಲ ಹೊಂದಿದ್ದು, 11 ಮುಸ್ಲಿಂ ಸಂಸದರಿದ್ದಾರೆ. ಈ ಪೈಕಿ 9 ಜನ ಕ್ಯಾಬಿನೆಟ್, ರಾಜ್ಯ ಹಾಗೂ ಡೆಪ್ಯುಟಿ ಸಚಿವರಾಗಿ ನೇಮಕಗೊಂಡಿದ್ದರು.

    ಏಪ್ರಿಲ್ 21ರಂದು ನಡೆದ ಬಾಂಬ್ ದಾಳಿಯಲ್ಲಿ ಕನ್ನಡಿಗರು ಸೇರಿದಂತೆ 258 ಜನರು ಪ್ರಾಣ ಕಳೆದುಕೊಂಡಿದ್ದು, ಸುಮಾರು 500 ಜನರು ಗಂಭೀರವಾಗಿ ಗಾಯಗೊಂಡಿದ್ದರು.

  • ಸಭೆಯಲ್ಲಿ ಮೊಬೈಲ್ ಬಳಸ್ಬೇಡಿ: ಸಚಿವರಿಗೆ ಯೋಗಿ ಸೂಚನೆ

    ಸಭೆಯಲ್ಲಿ ಮೊಬೈಲ್ ಬಳಸ್ಬೇಡಿ: ಸಚಿವರಿಗೆ ಯೋಗಿ ಸೂಚನೆ

    – ಕ್ಯಾಬಿನೆಟ್ ಸಭೆಗೂ ಸೂಚನೆ ಅನ್ವಯ

    ಲಕ್ನೋ: ಅಧಿಕೃತ ಸಭೆಯಲ್ಲಿ ಮೊಬೈಲ್ ಫೋನ್ ಬಳಸದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಚಿವರಿಗೆ ಸೂಚನೆ ನೀಡಿದ್ದಾರೆ.

    ಚರ್ಚೆಯಲ್ಲಿ ಸಚಿವರು ಭಾಗಿಯಾಗುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಮೊಬೈಲ್‍ನಿಂದ ಉಂಟಾಗುವ ಅಡಚಣೆ ತಡೆಯುವ ನಿಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಆದೇಶವು ಕ್ಯಾಬಿನೆಟ್ ಸಭೆಗೂ ಅನ್ವಯವಾಗುತ್ತದೆ ಎಂದು ಮುಖ್ಯಮಂತ್ರಿಗಳ ಹಿರಿಯ ಕಾರ್ಯದರ್ಶಿಯೊಬ್ಬರು ತಿಳಿಸಿದ್ದಾರೆ.

    ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರ ಎದುರಿಸುತ್ತಿರುವ ಸವಾಲುಗಳ ಕುರಿತಾದ ಚರ್ಚೆಯಲ್ಲಿ ಸಚಿವರು ಗಮನ ಕೇಂದ್ರಿಕರಿಸಬೇಕು. ಸಭೆ ನಡೆದಾಗ ಮೊಬೈಲ್‍ನಿಂದ ಅಡಚಣೆ ಉಂಟಾಗುತ್ತಿದೆ. ಅಷ್ಟೇ ಅಲ್ಲದೆ ಕೆಲವು ಸಚಿವರು ಸಭೆಯಲ್ಲಿಯೂ ಮೊಬೈಲ್ ಹಿಡಿದುಕೊಂಡು ವಾಟ್ಸಪ್ ಮೆಸೇಜ್ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಅಧಿಕೃತ ಸಭೆಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಮೊಬೈಲ್ ಫೋನ್ ಹ್ಯಾಕ್ ಮಾಡುವ ಮೂಲಕ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ಬಹಿರಂಗವಾಗುತ್ತವೆ ಎಂಬ ಕಾರಣಕ್ಕೂ ಯೋಗಿ ಆದಿತ್ಯನಾಥ್ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೇಳಿ ಬಂದಿದೆ.

    ಈ ಹಿಂದೆ ಸಭೆಗೆ ಮೊಬೈಲ್ ಫೋನ್ ತರಲು ಮಂತ್ರಿಗಳಿಗೆ ಅವಕಾಶವಿತ್ತು. ಆದರೆ ಸೈಲೆಂಟ್ ಮೂಡ್‍ನಲ್ಲಿ ಇಡಬೇಕು, ಇಲ್ಲವೆ ಸ್ವಿಚ್‍ಆಫ್ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಈಗ ಸಭೆಗೂ ಮುನ್ನ ಕೌಂಟರ್ ನಲ್ಲಿ ಮೊಬೈಲ್ ಇಟ್ಟು ಟೋಕನ್ ಪಡೆಯಬೇಕು. ಸಭೆಯ ಬಳಿಕ ಟೋಕನ್ ನೀಡಿ ತಮ್ಮ ತಮ್ಮ ಮೊಬೈಲ್ ಪಡೆಬೇಕು ಎನ್ನುವ ಸೂಚನೆಯನ್ನು ಯೋಗಿ ಆದಿತ್ಯನಾಥ್ ನೀಡಿದ್ದಾರೆ ಎನ್ನಲಾಗಿದೆ.

    ಈ ಸೂಚನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಿಗೆ ನೀಡಿದ್ದರು.

  • ಮೋದಿ ಕ್ಯಾಬಿನೆಟ್‍ನಲ್ಲಿ ಖಾತೆ ಹಂಚಿಕೆ ಸಸ್ಪೆನ್ಸ್- ಇಂದು ಸಂಜೆ ಮೊದಲ ಸಭೆ

    ಮೋದಿ ಕ್ಯಾಬಿನೆಟ್‍ನಲ್ಲಿ ಖಾತೆ ಹಂಚಿಕೆ ಸಸ್ಪೆನ್ಸ್- ಇಂದು ಸಂಜೆ ಮೊದಲ ಸಭೆ

    ನವದೆಹಲಿ: 2ನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿಯವರ ಜೊತೆಗೆ 24 ಮಂದಿ ಸಂಪುಟ ದರ್ಜೆ ಸಚಿವರು, 9 ಮಂದಿ ಸ್ವತಂತ್ರ ಖಾತೆ ರಾಜ್ಯ ಸಚಿವರಾಗಿ, 24 ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡಾ ಪ್ರಮಾಣ ವಚನ ಸ್ವೀಕರಿಸೋ ಮೂಲಕ ಮೋದಿ ಸಂಪುಟ ಸೇರಿದ್ದಾರೆ. ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್ ಸೇರಿದಂತೆ ಹಲವು ಹಳೆಮುಖಗಳನ್ನೂ ಮುಂದುವರಿಸಲಾಗಿದೆ.

    ಆದರೆ ಸುಷ್ಮಾ ಸ್ವರಾಜ್, ಉಮಾಭಾರತಿ, ಸುರೇಶ್ ಪ್ರಭು, ಮೇನಕಾ ಗಾಂಧಿ ಸೇರಿದಂತೆ ಹಿಂದಿನ ಸಂಪುಟದಲ್ಲಿದ್ದ 37 ಮಂದಿಗೆ ಕೊಕ್ ನೀಡಲಾಗಿದೆ. ಜೆಡಿಯುನ ಒಬ್ಬರಿಗೆ ಮಾತ್ರವೇ ಪ್ರಮಾಣವಚನ ಸ್ವೀಕರಿಸಲು ಮೋದಿ ಆಹ್ವಾನ ಬಂದಿದ್ದರಿಂದ, ತಮ್ಮ ಪಕ್ಷದಿಂದ ಯಾರೂ ಪ್ರಮಾಣ ವಚನ ಸ್ವೀಕರಿಸಲ್ಲ ಎಂದು ನಿತೀಶ್ ಕುಮಾರ್ ತಿಳಿಸಿದರು. ಅಲ್ಲದೆ ಒಂದೇ ಸ್ಥಾನ ನೀಡಿರೋ ಬಿಜೆಪಿ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದು, ನಾವು ಎನ್‍ಡಿಎ ಭಾಗಿವಾಗಿಯೇ ಇರುತ್ತೇವೆ ಅಂತಲೂ ಸ್ಪಷ್ಟಪಡಿಸಿದ್ದಾರೆ.

    ಇತ್ತ ಕ್ಯಾಬಿನೆಟ್ ನಲ್ಲಿ ಯಾರು ಯಾರಿಗೆ ಯಾವ್ಯವಾ ಖಾತೆ ನೀಡುತ್ತಾರೆ ಎಂಬ ಕುತೂಹಲವಿದ್ದು, ಸಂಜೆ 5 ಗಂಟೆಗೆ ಹೊಸ ಸರ್ಕಾರದ ಸಂಪುಟ ಸಭೆ ನಡೆಯಲಿದೆ.

  • ಈಗಲೂ ಕಾಲ ಮಿಂಚಿಲ್ಲ, ಜಾರಕಿಹೊಳಿಯನ್ನ ಕರೆದು ಮಾತನಾಡಿ: ಹೊರಟ್ಟಿ

    ಈಗಲೂ ಕಾಲ ಮಿಂಚಿಲ್ಲ, ಜಾರಕಿಹೊಳಿಯನ್ನ ಕರೆದು ಮಾತನಾಡಿ: ಹೊರಟ್ಟಿ

    ಹುಬ್ಬಳ್ಳಿ: ಜೆಡಿಎಸ್ ಹಾಗೂ ಕಾಂಗ್ರೆಸ್ಸಿನವರು ಒಗ್ಗಟ್ಟಿನಿಂದ ಸರ್ಕಾರ ನಡೆಸಿದರೆ ಒಳ್ಳೆಯದು. ಈಗಲೂ ಕಾಲ ಮಿಂಚಿಲ್ಲ ರಮೇಶ ಜಾರಕಿಹೊಳಿಯನ್ನು ಕರೆದು ಮಾತನಾಡಿ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಲಹೆ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈತ್ರಿಯಲ್ಲಿರುವ ಗೊಂದಲಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಸವಾಲಾಗಿ ಸ್ವೀಕರಿಸಿಕೊಂಡು ಬಗೆಹರಿಸಲಿ. ಕೆಲವು ಸಚಿವರು ರಾಜೀನಾಮೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಈ ಮೂಲಕ ಹೊಸಬರಿಗೆ ಅವಕಾಶ ಮಾಡಿಕೊಡಲಿ. ಇಂತಹ ಕ್ಲಿಷ್ಟಕರವಾದ ಸ್ಥಿತಿಯಲ್ಲಿ ಸರ್ಕಾರ ನಡೆಯಬೇಕಾದರೆ ಕೆಲವರು ತ್ಯಾಗ ಮಾಡಲೇಬೇಕು. ಇಲ್ಲದಿದ್ದರೆ ಕಷ್ಟ. ಈಗಲೂ ಕಾಲ ಮಿಂಚಿಲ್ಲ ರಮೇಶ ಜಾರಕಿಹೋಳಿಯನ್ನು ಕರೆದು ಮಾತನಾಡಿ ಎಂದು ಮೈತ್ರಿ ನಾಯಕರಿಗೆ ಕಿವಿ ಮಾತು ಹೇಳಿದರು.

    ಎಲ್ಲರು ಮಂತ್ರಿ ಆಗಬೇಕು ಎನ್ನುವವರೇ, ಇದು ಸಾಧ್ಯವಿಲ್ಲ. ಮೈತ್ರಿಯಲ್ಲಿ ಹೆಚ್ಚುಕಡಿಮೆ ಆಗಿದೆ, ಭಿನ್ನಾಭಿಪ್ರಾಯ ಮರೆತು ಎಲ್ಲರು ಒಗ್ಗಟ್ಟಾಗಬೇಕು. ಮೈತ್ರಿಯಲ್ಲಿ ಅಪಸ್ವರ ಬಾರದಂತೆ ನೋಡಿಕೊಳ್ಳಬೇಕು. ನಾನು ಸಹ ಮಂತ್ರಿಯಾಗಿಲ್ಲ, ನಾನು ಎಲ್ಲಾ ತ್ಯಾಗಕ್ಕೂ ಸಿದ್ಧ. ಸರ್ಕಾರ ಒಳ್ಳೆಯ ರೀತಿಯಲ್ಲಿ ನಡೆಯಬೇಕು, ಅದಕ್ಕಾಗಿ ಉಳಿದವರು ಕೂಡ ತ್ಯಾಗಕ್ಕೆ ಮುಂದಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಬಿಜೆಪಿ ಸರ್ಕಾರ ರಚನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಪರೇಷನ್ ಕಮಲ ಮಾಡಿ ಬಿಜೆಪಿಯವರು ಸರ್ಕಾರ ರಚಿಸುತ್ತಾರೆ ಎನ್ನುವ ನಂಬಿಕೆ ನನಗಿಲ್ಲ. ನನಗೆ ಬಂದ ಮಾಹಿತಿಯ ಪ್ರಕಾರ, ಬಿಜೆಪಿಯವರು ಅತೃಪ್ತ ಶಾಸಕರಿಂದ ರಾಜೀನಾಮೆ ಕೊಡಿಸಿ ರಾಷ್ಟ್ರಪತಿ ಆಡಳಿತ ರಾಜ್ಯದಲ್ಲಿ ತರಲು ಮುಂದಾಗಿದ್ದಾರೆ ಎಂದರು.

    ಚುನಾವಣೆಗೆ ಹೋಗಲು ಬಿಜೆಪಿಯವರು ಸಿದ್ಧತೆ ನಡೆಸಿದ್ದಾರೆ. ಲೋಕಸಭೆಯಲ್ಲಿ ಸಿಕ್ಕ ಗೇಲುವಿನಿಂದ ವಿಧಾನ ಸಭೆ ಚುನಾವಣೆಗೆ ಹೋದರೆ 150 ಸ್ಥಾನಗಳನ್ನ ಸುಲಭವಾಗಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಾರೆಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

  • ಡಿಕೆಶಿಗೆ ನಾನು ಚಾಲೆಂಜ್ ಮಾಡಿಲ್ಲ: ಸತೀಶ್ ಜಾರಕಿಹೊಳಿ

    ಡಿಕೆಶಿಗೆ ನಾನು ಚಾಲೆಂಜ್ ಮಾಡಿಲ್ಲ: ಸತೀಶ್ ಜಾರಕಿಹೊಳಿ

    – ಡಿ.ಕೆ.ಶಿವಕುಮಾರ್ ಕೈಕೆಳಗೆ ಕೆಲಸ ಮಾಡುತ್ತೇವೆ

    ಹುಬ್ಬಳ್ಳಿ: ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ನಾನು ಚಾಲೆಂಜ್ ಮಾಡಿಲ್ಲ. ಅವರು ಪ್ರಚಾರಕ್ಕೆ ಬರಬಾರದು ಅಂತ ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಸಂಶಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರು ನನ್ನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಗಮನಕ್ಕೆ ಬಂದಿತ್ತು. ಅಲ್ಲಿಯೇ ಅದಕ್ಕೆ ಸ್ಪಷ್ಟನೆ ಕೂಡ ನೀಡಿದ್ದೆ. ಈ ಹಿಂದೆ ನಡೆದಿದ್ದನ್ನು ಮರೆತು ಕುಂದಗೋಳ ಉಪ ಚುನಾವಣಾ ಪ್ರಚಾರ ನಡೆಸುತ್ತಿದ್ದೇವೆ. ಈಗ ಅವರ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತಿಳಿಸಿದರು.

    ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಜಂಟಿ ಪ್ರಚಾರ ಕಾರ್ಯಕ್ಕೆ ಹಿಂದೇಟು ಹಾಕುತ್ತಿದ್ದೇನೆ ಅಂತ ಯಾಕೆ ಪ್ರಶ್ನೆ ಕೇಳುತ್ತೀರಿ? ನೀವೇ ಈ ಬಗ್ಗೆ ಉತ್ತರ ನೀಡಬೇಕು. ಒಂದೇ ಪಕ್ಷದಲ್ಲಿ ಇದ್ದೇವೆ, ಒಟ್ಟಾಗಿಯೇ ಹೋಗುತ್ತೇವೆ ಎಂದು ಮಾಧ್ಯಮಗಳ ವಿರುದ್ಧ ಗುಡುಗಿದರು.

    ಕುಂದಗೋಳ ಉಪ ಚುನಾವಣೆ ಉಸ್ತುವಾರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಇಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ನಾಯಕರು ಎನ್ನುವ ಪ್ರಶ್ನೆ ಬರುವುದಿಲ್ಲ. ಅನುಭವ ಹಾಗೂ ಸಾಮಥ್ರ್ಯ ಮುಖ್ಯವಾಗಿ ಬೇಕಾಗುತ್ತದೆ. ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಅನೇಕ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡು ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಪಕ್ಷದ ನಾಯಕರು ಅವರಿಗೆ ಕುಂದಗೋಳ ಕ್ಷೇತ್ರದ ಉಸ್ತುವಾರಿ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಕೈಕೆಳಗೆ ನಾವು ಕೆಲಸ ಮಾಡುತ್ತೇವೆ ಎಂದರು.

  • ಎಚ್.ಡಿ ರೇವಣ್ಣರ ನಿಂಬೆಕಾಯಿ ಜ್ಯೋತಿಷ್ಯವನ್ನು ಡಿಕೆಶಿ ಕಲಿತಿದ್ದಾರೆ: ಆರ್.ಅಶೋಕ್

    ಎಚ್.ಡಿ ರೇವಣ್ಣರ ನಿಂಬೆಕಾಯಿ ಜ್ಯೋತಿಷ್ಯವನ್ನು ಡಿಕೆಶಿ ಕಲಿತಿದ್ದಾರೆ: ಆರ್.ಅಶೋಕ್

    – ಸರ್ಕಾರ ಉರುಳಿಸಲು ಯಾವುದೇ ಪ್ರಯತ್ನ ಮಾಡಲ್ಲ

    ಚಿಕ್ಕಬಳ್ಳಾಪುರ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ನಿಂಬೆಕಾಯಿ ಜ್ಯೋತಿಷ್ಯವನ್ನು ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಲಿತಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಪ್ರಚಾರ ವೇಳೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗುತ್ತದೆ. ಆದರೆ ನಾವು ಯಾವುದೇ ಪ್ರಯತ್ನ ಮಾಡಲ್ಲ. ಚುನಾವಣಾ ಬಳಿಕ ಮೈತ್ರಿ ನಿರ್ಧಾರದ ಬಗ್ಗೆ ತಿಳಿಸುವುದಾಗಿ ಕಾಂಗ್ರೆಸ್‍ನವರೇ ಹೇಳಿದ್ದಾರೆ. ಹೀಗಾಗಿ ಸರ್ಕಾರ ಬಿದ್ದು ಹೋದರೆ ನಮಗೆ ಸಂಬಂಧವಿಲ್ಲ ಎಂದು ಹೇಳಿದರು.

    ಸಂಸದ, ಚಿಕ್ಕಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಎಂದರೆ ಸುಳ್ಳು, ಸುಳ್ಳು ಎಂದರೆ ವೀರಪ್ಪ ಮೊಯ್ಲಿ. ಅವರು ಎಲ್ಲೆಲ್ಲಿ ಕಲ್ಲು ಹಾಕಿದ್ದಾರೋ ಅಲ್ಲಿ ಕೆಟ್ಟದ್ದಾಗಿದೆ ಎಂದು ಲೇವಡಿ ಮಾಡಿದರು.

    ನಾನು ರಾಜ್ಯದಲ್ಲಿ ಚುನಾವಣಾ ಉಸ್ತುವಾರಿಯಾಗಿದ್ದೇನೆ. ಈ ಬಾರಿ ರಾಜ್ಯದ 22 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂದು ಹೈಕಮಾಂಡ್ ಗುರಿ ನೀಡಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ. ಹೀಗಾಗಿ 22 ಸ್ಥಾನ ಗೆಲ್ಲಲು ಸಮಸ್ಯೆಯಿಲ್ಲ. ಸಮ್ಮಿಶ್ರ ಸರ್ಕಾರ ಜಗಳದ ಸರ್ಕಾರವಾಗಿದೆ. ಮಂಡ್ಯ, ತುಮಕೂರು, ಮೈಸೂರಿನಲ್ಲಿ ಎರಡೂ ಪಕ್ಷದವರು ಹೊಡೆದಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಕುತಂತ್ರ ಮಾಡುತ್ತಿದ್ದಾರೆ ಎಂದು ಹೇಳಿದರು.

  • ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿಗಳೇ ನೆಲಸಮ!

    ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿಗಳೇ ನೆಲಸಮ!

    – ವಾಸ್ತುಪ್ರಕಾರ ರೂಂಗಳ ಮಾರ್ಪಾಡು

    ಬೆಂಗಳೂರು: ಪ್ರಚಾರ, ಮತಬೇಟೆ ಎಂದು ಇಡೀ ದೇಶದಲ್ಲಿ ಈಗ ಚುನಾವಣಾ ಜಪ ಶುರುವಾಗಿದೆ. ಈ ಮಧ್ಯೆ ರಾಜ್ಯದ ಸಚಿವರು ಮಾತ್ರ ವಿಧಾನಸೌಧ, ವಿಕಾಸಸೌಧದಲ್ಲಿ ಚೆನ್ನಾಗಿರುವ ಕೊಠಡಿಗಳನ್ನು ಕೆಡವಿ ವಾಸ್ತು ಪ್ರಕಾರ ತಮಗೆ ಬೇಕಾದ ಹಾಗೆ ರಿಪೇರಿ ಮಾಡಿಕೊಳ್ಳುತ್ತಿದ್ದಾರೆ.

    ವಿಕಾಸಸೌಧದಲ್ಲಿ ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿಯ ಕೊಠಡಿಯಲ್ಲಿ ಹೊಸ ರೂಂಗಳ ಸೇರ್ಪಡೆಯ ಕೆಲಸ ಭರದಿಂದ ನಡೆಯುತ್ತಿದೆ. ಅಷ್ಟೇ ಅಲ್ಲದೆ ಪ್ರಭಾವಿ ಸಚಿವರೊಬ್ಬರು ಬೇರೆ ಕೊಠಡಿಯನ್ನು ನೀಡಲಾಗಿದ್ದರೂ ರೂಂ ನಂಬರ್ 338ಕ್ಕೆ ಬೇಡಿಕೆ ಇಟ್ಟು ಆ ರೂಂನ್ನು ವಾಸ್ತುಪ್ರಕಾರ ರಿಪೇರಿ ಮಾಡಿಸಿಕೊಳ್ಳುತ್ತಿದ್ದಾರೆ.

    ವಿಧಾನಸೌಧ ಹಾಗೂ ವಿಕಾಸಸೌಧದ ಕೊಠಡಿಗಳನ್ನು ಯೋಜನಾಬದ್ಧವಾಗಿ ನಿರ್ಮಿಸಲಾಗಿದೆ. ಹೀಗಿದ್ದರೂ ಜನ ಪ್ರತಿನಿಧಿಗಳು ತಮಗೆ ಬೇಕಾದ ರೀತಿ ರೂಂಗಳನ್ನು ಮಾರ್ಪಾಡು ಮಾಡಿಕೊಳ್ಳುತ್ತಿದ್ದಾರೆ. ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತೆ ವರ್ತಿಸುತ್ತಿದ್ದಾರೆ. ಮೊನ್ನೆ ಮೊನ್ನೆ ನವೀಕರಿಸಿರುವ ಕೊಠಡಿಗಳನ್ನು ಮತ್ತೆ ನೆಲಸಮ ಮಾಡಿ ಹೊಸದಾಗಿ ನಿರ್ಮಾಣ ಮಾಡುತ್ತಿದ್ದಾರೆ. ತೆರಿಗೆ ರೂಪದಲ್ಲಿ ನಾವು ಕಟ್ಟಿದ ಹಣವನ್ನು ಜನಪ್ರತಿನಿಧಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ.

    ಒಟ್ಟಿನಲ್ಲಿ ನೀತಿ ಸಹಿತೆ ಜಾರಿಯಾಗಿದ್ದರಿಂದ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿಲ್ಲ. ಇತ್ತ ಸಚಿವರು, ಕೆಲ ಜನ ಪ್ರತಿನಿಧಿಗಳು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಜಮೀರ್ ಅಹ್ಮದ್ ಅವರ ಕಾರ್ಯದರ್ಶಿ ಹಾಗೂ ಪ್ರಭಾವಿ ಸಚಿವರೊಬ್ಬರ ಕೊಠಡಿಯ ಮಾರ್ಪಾಟು ಭರದಿಂದ ಸಾಗಿದೆ. ಜನಪ್ರತಿನಿಧಿಗಳ ಈ ವರ್ತನೆಗೆ ಜನ ಕಿಡಿಕಾರುತ್ತಿದ್ದಾರೆ.

  • ಲೋಕಸಭೆಯಲ್ಲೂ ಜೊತೆಗೆ ಇರ್ತೀರಾ ಬಿಡಿ: ಸಾರಾ ಮಹೇಶ್ ಕಾಲೆಳೆದ ಪ್ರತಾಪ್ ಸಿಂಹ

    ಲೋಕಸಭೆಯಲ್ಲೂ ಜೊತೆಗೆ ಇರ್ತೀರಾ ಬಿಡಿ: ಸಾರಾ ಮಹೇಶ್ ಕಾಲೆಳೆದ ಪ್ರತಾಪ್ ಸಿಂಹ

    ಮೈಸೂರು: ಲೋಕಸಭಾ ಚುನಾವಣೆಯಲ್ಲೂ ನೀವು ಜೊತೆಗೆ ಇರ್ತೀರಾ ಬಿಡಿ ಎಂದು ಸಂಸದ ಪ್ರತಾಪ್ ಸಿಂಹ ಅವರು ಜೆಡಿಎಸ್ ಸಚಿವರ ಕಾಲೆಳೆದಿದ್ದಾರೆ.

    ಮೈಸೂರು ಜಿಲ್ಲಾ ಪಂಚಾಯತ್‍ನಲ್ಲಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದರು, ಇದು ಹಳೇ ದೋಸ್ತಿ. ಈಗ ಮುಂದುವರಿಯುತ್ತಿದೆ ಅಷ್ಟೇ. ಈ ಹಿಂದೆ ಕಯಬಂಳಿ ನಟರಾಜ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಿ, 30 ತಿಂಗಳ ಬಳಿಕ ಅಧಿಕಾರ ಬಿಟ್ಟುಕೊಡುವಂತೆ ತಿಳಿಸಿದ್ದೇವು. ಹೀಗಾಗಿ ನಾಳೆ ಹೊಸಬರನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ ಎಂದರು.

    ಬಿಜೆಪಿಯ ಅಭ್ಯರ್ಥಿ ಯಾರು ಎಂದು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ, ನಾಳೆ… ನಾಳೆ ಬೆಳಗ್ಗೆ ಹೇಳುತ್ತೇವೆ ಎಂದು ಸಂಸದರು ನಗೆ ಹರಿಸಿದರು. ಇದನ್ನು ಓದಿ: ಬಿಜೆಪಿಗೆ ಮಾತು ಕೊಟ್ಟಿದ್ದೇವೆ, ದೋಸ್ತಿ ಕೈಬಿಡುವ ನಿರ್ಧಾರವಿಲ್ಲ: ಸಾರಾ ಮಹೇಶ್

    ಲೋಕಸಭೆಯಲ್ಲಿ ಮೈಸೂರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಇರುತ್ತದೇಯೇ ಎಂದು ಮಾಧ್ಯಮದವರು ಸಚಿವ ಜಿ.ಟಿ.ದೇವೇಗೌಡ ಅವರಿಗೆ ಕೇಳಿದರು. ಈ ವೇಳೆ ಪಕ್ಕದಲ್ಲಿಯೇ ನಿಂತಿದ್ದ ಸಚಿವ ಸಾರಾ ಮಹೇಶ್ ಅವರು, ಈಗ ಜೊತೆಯಾಗಿ ಇರುತ್ತೇವೆ. ಆದರೆ ಲೋಕಸಭೆಯಲ್ಲಿ ವಿರುದ್ಧವಾಗಿಯೇ ಮತ ಕೇಳುತ್ತೇವೆ ಎಂದರು. ಇದಕ್ಕೆ ನಗುತ್ತಲೇ ಪ್ರತ್ಯುತರ ಕೊಟ್ಟ ಸಂಸದ ಲೋಕಸಭೆಯಲ್ಲೂ ಜೊತೆಯಾಗಿಯೇ ಇರ್ತೀರಾ ಬಿಡಿ ಸಚಿವರ ಕಾಲೆಳೆದರು. ಇಬ್ಬರ ಮಧ್ಯ ನಿಂತಿದ್ದ ಸಚಿವ ಜಿ.ಟಿ.ದೇವೇಗೌಡ ಅವರು ಮಾತ್ರ ನಗುತ್ತಲೇ ನಿಂತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv