Tag: ಸಚಿವರು

  • ನೂತನ ಸಚಿವರಿಗೆ ಆಸಕ್ತಿ ತಕ್ಕಂತೆ ಖಾತೆ ಹಂಚಿಕೆಯಾಗಿರೋದು ಸಂತೋಷ: ಈಶ್ವರಪ್ಪ

    ನೂತನ ಸಚಿವರಿಗೆ ಆಸಕ್ತಿ ತಕ್ಕಂತೆ ಖಾತೆ ಹಂಚಿಕೆಯಾಗಿರೋದು ಸಂತೋಷ: ಈಶ್ವರಪ್ಪ

    ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಸಚಿವರಿಗೆ ಅವರ ಆಸಕ್ತಿಗೆ ತಕ್ಕಂತೆ ಖಾತೆ ಹಂಚಿಕೆ ಮಾಡಿರುವುದು ನಿಜಕ್ಕೂ ಸಂತೋಷವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಜಿಲ್ಲೆಯ ಸಾಗರದಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಪ್ರತಿಭಾವಂತ ನೂತನ ಸಚಿವರು ಅವರಿಗೆ ಸಿಕ್ಕಂತಹ ಖಾತೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಜೊತೆಗೆ ಮುಂಬರುವ 1 ವರ್ಷ 10 ತಿಂಗಳು ರಾಜ್ಯದ ಜನರ ಸೇವೆ ಮಾಡಲು ಒಳ್ಳೆಯ ಅವಕಾಶವಿದ್ದು, ಸಚಿವರುಗಳು ಅದನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

    ಶಿವಮೊಗ್ಗ ಜಿಲ್ಲೆಗೆ ಎರಡು ಪ್ರಮುಖ ಖಾತೆ ಸಿಕ್ಕಿರುವುದು ಜಿಲ್ಲೆಯ ಜನತೆಗೆ ಸಂತೋಷವಾಗಿದೆ. ನನಗೆ ಹಳೆಯ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಮುಂದುವರಿಸಿದ್ದಾರೆ. ನನ್ನ ಅಚ್ಚುಮೆಚ್ಚಿನ ಇಲಾಖೆ ಗ್ರಾಮೀಣಾಭಿವೃದ್ಧಿ ಇಲಾಖೆ ಆಗಿದ್ದು, ಆ ಖಾತೆಯೇ ನನಗೆ ಸಿಕ್ಕಿರುವುದು ಸಂತೋಷವಾಗಿದೆ ಎಂದು ನುಡಿದಿದ್ದಾರೆ.

    ಅರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ದೊರೆತಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಗೃಹ ಖಾತೆ ಎರಡು ಖಾತೆಗಳು ಇಡೀ ರಾಜ್ಯಕ್ಕೆ ಸದುಪಯೋಗ ಆಗುವ ರೀತಿ ಪ್ರಯತ್ನ ಮಾಡುತ್ತೇವೆ. ನಮ್ಮ ಜಿಲ್ಲೆಗೂ ಅದರ ಪೂರ್ಣ ಲಾಭ ಪಡೆದುಕೊಳ್ಳುತ್ತೇವೆ. ಇಡೀ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಹೊಸ ಸಚಿವ ಸಂಪುಟ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ

  • ಬುಧವಾರ ಮಧ್ಯಾಹ್ನ 2:15ಕ್ಕೆ ನೂತನ ಸಚಿವರ ಪ್ರಮಾಣವಚನ- ಯಾರಿಗೆ ಮಂತ್ರಿಗಿರಿ?

    ಬುಧವಾರ ಮಧ್ಯಾಹ್ನ 2:15ಕ್ಕೆ ನೂತನ ಸಚಿವರ ಪ್ರಮಾಣವಚನ- ಯಾರಿಗೆ ಮಂತ್ರಿಗಿರಿ?

    ಬೆಂಗಳೂರು: ಅಂತೂ ಇಂತೂ ಸಂಪುಟ ಯೋಗ ಕೂಡಿ ಬಂದಿದ್ದು, ಬುಧವಾರ ಮಧ್ಯಾಹ್ನ 2:15ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ನೂತನ ಸಚಿವರ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ನಾಳೆ ಮಧ್ಯಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಮುಖ್ಯಕಾರ್ಯದರ್ಶಿಯಿಂದ ಶಿಷ್ಟಾಚಾರ ವಿಭಾಗಕ್ಕೆ ಸಹ ಸಿದ್ಧತೆಗೆ ಸೂಚನೆ ನೀಡಲಾಗಿದೆ.

    ರಾಜ್ಯ ಸರ್ಕಾರ ರಾಜಭವನಕ್ಕೂ ಮಾಹಿತಿ ತಿಳಿಸಿದ್ದು, ಮಧ್ಯಾಹ್ನ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ಬೆಳಗ್ಗೆ 6:10ಕ್ಕೆ ಸಿಎಂ ಬೊಮ್ಮಾಯಿ ದೆಹಲಿಯಿಂದ ಬೆಂಗಳೂರಿಗೆ ಹೊರಡಲಿದ್ದಾರೆ.

    ಮಂತ್ರಿಸ್ಥಾನ ಯಾರಿಗೆ?
    ಬಿ.ಸಿ.ಪಾಟೀಲ್, ಬೈರತಿ ಬಸವರಾಜು, ಎಸ್. ಟಿ.ಸೋಮಶೇಖರ್, ಸುಧಾಕರ್, ಈಶ್ವರಪ್ಪ, ಅಶೋಕ್, ಶ್ರೀರಾಮುಲು, ಅಶ್ವಥ್ ನಾರಾಯಣ್, ಅರವಿಂದ ಲಿಂಬಾವಳಿ, ಶಿವರಾಂ ಹೆಬ್ಬಾರ್  ಅವರಿಗೆ ಮಂತ್ರಿಸ್ಥಾನ ಸಿಗುವುದು ಖಚಿತವಾಗಿದೆ.

  • ಬಿಜೆಪಿಯಲ್ಲಿ ಅಸಮಾಧಾನ ಪ್ರಶ್ನೆಯೇ ಇಲ್ಲ: ಈಶ್ವರಪ್ಪ

    ಬಿಜೆಪಿಯಲ್ಲಿ ಅಸಮಾಧಾನ ಪ್ರಶ್ನೆಯೇ ಇಲ್ಲ: ಈಶ್ವರಪ್ಪ

    – ಬಿಜೆಪಿ ಹಾಲು, ಹೊರಗಿನಿಂದ ಬಂದವರು ಜೇನು
    – ಕಾಂಗ್ರೆಸ್ ಪಕ್ಷವೇ ದೇಶದಲ್ಲಿ ನಾಶವಾಗಿದೆ

    ಬಾಗಲಕೋಟೆ: ಬಿಜೆಪಿಯಲ್ಲಿ ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಾಗಲಕೋಟೆಯಲ್ಲಿ ಹೇಳಿದ್ದಾರೆ.

    ವಲಸಿಗರ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಸಮಾಧಾನ ಏನು ಇಲ್ಲ. ಅದನ್ನು ಕೇಂದ್ರ ನಾಯಕರು ಬಗೆಹರಿಸುತ್ತಾರೆ. ನಮ್ಮ ಪಕ್ಷ ಸ್ವಚ್ಛವಾಗಿದೆ. ನಮ್ಮಲ್ಲಿ ಮುಂಚೆ ಬಂದವರು ಆ ಮೇಲೆ ಬಂದವರು ಎಂಬ ಯಾವುದೇ ಬೇದಭಾವವಿಲ್ಲ. ಒಂದು ವೇಳೆ 17 ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಬರದಿದ್ದರೇ ನಮ್ಮ ಪಕ್ಷ ಸರ್ಕಾರಕ್ಕೆ ಬರುತ್ತಿರಲಿಲ್ಲ ಎಂದಿದ್ದಾರೆ.

    ಬಿಜೆಪಿ ಹಾಲು, ಹೊರಗಿನಿಂದ ಬಂದವರು ಜೇನು, ಎರಡು ಸೇರಿ ಹಾಲು ಜೇನು ಇದ್ದಂತೆ. ಹೇಗೆ ಹಾಲು-ಜೇನು ಸೇರಿದರೆ ಸವಿ ಇರುತ್ತೋ ಅದೇ ರೀತಿ ನಮ್ಮ ಪಕ್ಷ. ಅವರೆಲ್ಲರನ್ನು ತೆಗೆದುಕೊಂಡು ನಮ್ಮ ಪಕ್ಷ ಈ ಮಟ್ಟಿಗೆ ಬೆಳೆದಿದೆ. ಯಾವುದೇ ಕಾರಣಕ್ಕೂ ನಮ್ಮಲ್ಲಿ ಗೊಂದಲಗಳಿಲ್ಲ. ಎಲ್ಲರೂ ಒಟ್ಟಿಗೆ ಇದ್ದೇವೆ. ನಾವೆಲ್ಲರೂ ಪಕ್ಷವನ್ನು ಕಟ್ಟಿಕೊಂಡು ಹೋಗುತ್ತೇವೆ ಎಂಬ ವಿಶ್ವಾಸದ ಮಾತುಗಳನ್ನು ಹಾಡಿದ್ದಾರೆ.

    ಸಿಎಂ ಆಗಿ ಎಂದು ಬೆಂಬಲಿಸಿದವರ ಕುರಿತು ಮಾತನಾಡಿದ ಅವರು, ಯಡಿಯೂರಪ್ಪ ಅವರ ಜೊತೆಗೆ ಬೆಳೆದಿದ್ದೀರಾ, ಅವರ ಬಳಿಕ ನೀವೇ ಸಿಎಂ ಆಗಿ ಎಂದು ಹಲವು ವಿಶ್ವಾಸಿಗಳು ಫೋನ್ ಮಾಡಿ ಕೇಳಿಕೊಂಡರು. ಪಕ್ಷದ ಹಿರಿಯರು, ಹಿಂದುಳಿದ ನಾಯಕರು, ಪಕ್ಷವನ್ನು ಕಟ್ಟಿದ್ದೀರಿ, ನಿಷ್ಠಾವಂತ ಕಾರ್ಯಕರ್ತರು ನೀವು ಮುಖ್ಯಮಂತ್ರಿ ಇಲ್ಲವೇ, ಡಿಸಿಎಂ ಆಗಿ ಎಂದು ಹಲವಾರು ಆಪ್ತರು ನನಗೆ ಫೋನ್ ಮಾಡಿ ಹೇಳುತ್ತಿದ್ದರು. ಸ್ವಾಮೀಜಿಗಳು ಸೇರಿ ಅನೇಕರು ಹೋರಾಟ ಮೆರವಣಿಗೆಗಳನ್ನು ಮಾಡಿದ್ದರು ಅದಕ್ಕೆ ನನಗೆ ಖುಷಿಯಿದೆ ಎಂದಿದ್ದಾರೆ.

    ಬಿಜೆಪಿ ಶ್ರೀರಾಮನ ಆದರ್ಶ ಮತ್ತು ಶ್ರೀಕೃಷ್ಣನ ತಂತ್ರಗಾರಿಕೆಯಿಂದ ಕೂಡಿದೆ. ಇದನ್ನು ನನಗೆ ಅಟಲ್ ಬಿಹಾರಿ ವಾಜಪೇಯಿ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ನಾವು ನಾಲ್ಕೇ ಜನ ಎಂಎಲ್‍ಎ ಗಳಿದ್ದೇವು ನಾನು ರಾಜ್ಯಾಧ್ಯಕ್ಷನಾಗಿದ್ದೆ ಆಗ ಹೇಳಿದ್ದರು. ನಮ್ಮ ಪಕ್ಷ ಒಬ್ಬ ವ್ಯಕ್ತಿ ಮೇಲೆ ನಿಂತಿಲ್ಲ. ಇದು ಸಿದ್ಧಾಂತ, ಆದರ್ಶಗಳ ಮೇಲೆ ನಿಂತಿದೆ. ನಮ್ಮ ಪಕ್ಷದ ಸಿದ್ಧಾಂತಕ್ಕೆ ಬೆಲೆ ಸಿಗಬೇಕೇ ವಿನಃ ವ್ಯಕ್ತಿಗಲ್ಲ. ಈ ದಿಕ್ಕಿನಲ್ಲಿ ತೀರ್ಮಾನಗಳು ಆಗುತ್ತಿದೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

    ಸಿಎಂ ಬದಲಾವಣೆಯನ್ನು ಕುರಿತು ಮಾತನಾಡಿದ ಅವರು, 75 ವರ್ಷ ದಾಟಿದವರಿಗೆ ರಾಜಕೀಯ ಅವಕಾಶಗಳು ಕಮ್ಮಿ ಮಾಡಿ ಯುವಕರಿಗೆ ಹೆಚ್ಚು ಆದ್ಯತೆಯನ್ನು ನೀಡಬೇಕೆಂದು ನಮ್ಮ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ಯುವಕರ ಹೊಸ ಚಿಂತನೆಗಳು ಪಕ್ಷದಲ್ಲಿರಲಿ ಎಂಬ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ. ಒಬ್ಬರ ಕೈಯಲ್ಲಿ ರಾಜ್ಯದ ಆಳ್ವಿಕೆ ಬೇಡವೆಂದು ಈ ನಿರ್ಧಾರ ಎಂದಿದ್ದಾರೆ. ಇದನ್ನೂ ಓದಿ: ಡಿಸಿಎಂ ಪಟ್ಟಕ್ಕಾಗಿ ಮತ್ತೆ ಗಡೇ ದುರ್ಗಾದೇವಿ ಮೊರೆಹೋದ ಶ್ರೀರಾಮುಲು

     

    ಹೊಸ ರೀತಿಯ ಪ್ರಯೋಗಗಳಿಗೆ ಅವಕಾಶಕೊಡಬೇಕು ಎಂದು ನಮ್ಮ ಪಕ್ಷ ಬಂದಿದೆ. ಅದಕ್ಕೆ ನಮ್ಮ ಪಕ್ಷದ ಹಲವಾರು ಜನ ರಾಷ್ಟ್ರೀಯ ಅಧ್ಯಕ್ಷರಾದ್ದಾರೆ. ಕಾಂಗ್ರೆಸ್ ಪಕ್ಷದ ರೀತಿ ಒಂದೇ ಕುಟುಂಬದವರು ಬರಬೇಕು ಎಂಬುದು ಬಿಜೆಪಿಯಲಿಲ್ಲ. ಗಾಂಧಿ ಕುಟುಂಬವೇ ಆಳ್ವಿಕೆಗೆ ಬರುತ್ತಿದ್ದರಿಂದ ಕಾಂಗ್ರೆಸ್ ದೇಶದಲ್ಲಿ ನಾಶವಾಗಿ ಹೋಗಿದೆ. ಅವರನ್ನು ಹುಡುಕಿ ತೆಗೆಯುವ ಪರಿಸ್ಥಿತಿ ಬಂದಿದೆ. ಅದೇ ನಮ್ಮ ಪಕ್ಷದಲ್ಲಿ ವ್ಯಕ್ತಿಗೆ ಪ್ರಾಮುಖ್ಯತೆಯನ್ನು ಕೊಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗೋದು ನನಗೆ ಇಷ್ಟವಿಲ್ಲ: ಜಗದೀಶ್ ಶೆಟ್ಟರ್

    ಯತ್ನಾಳ್ ಅವರ ವಿಚಾರವಾಗಿ ಮಾತನಾಡಿದ ಅವರು, ಅವರ ಅಭಿಪ್ರಾಯಗಳನ್ನು ಪಕ್ಷಕ್ಕೆ ಹೇಳಿಕೊಳ್ಳಬೇಕು. ಅದನ್ನು ಬಿಟ್ಟು ಮಾಧ್ಯಮಕ್ಕೆ ಹೇಳಿಕೊಂಡರೆ ಯಾವುದೇ ಪ್ರಯೋಜನಗಳಿಲ್ಲ. ಆದರೆ ಅವರು ಹಿಂದುತ್ವವಾದಿ, ಒಳ್ಳೆಯ ಕಾರ್ಯಕರ್ತನನ್ನು ಪಕ್ಷ ಕಳೆದುಕೊಳ್ಳಬಾರದು ಎಂದುಕೊಳ್ಳುತ್ತಿದೆ. ಮುಂದೆ ಅವರು ಇದನ್ನು ತಿದ್ದಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜುಗೌಡ, ಕುಮಾರ್ ಬಂಗಾರಪ್ಪಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳ ಆಗ್ರಹ

  • ಪಕ್ಷ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ವಲಸಿಗ ಸಚಿವರು

    ಪಕ್ಷ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ವಲಸಿಗ ಸಚಿವರು

    ಬೆಂಗಳೂರು: ಸಿಎಂ ಯಡಿಯೂರಪ್ಪ ಬದಲಾವಣೆ ಸಂಬಂಧ ಬಿಜೆಪಿ ಹೈಕಮಾಂಡ್ ಹಾಗೂ ಪಕ್ಷ ಕೈ ಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದು ವಲಸಿಗ ಸಚಿವರು ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರಾದ ಬಿ.ಸಿ.ಪಾಟೀಲ್ ಹಾಗೂ ಶಿವರಾಂ ಹೆಬ್ಬಾರ್ ಜಂಟಿ ಹೇಳಿಕೆ ನೀಡಿದ್ದು, ನಾಯಕತ್ವ ಬದಲಾವಣೆ ಎಲ್ಲವೂ ಊಹಾಪೋಹ ಅಷ್ಟೆ. ಊಹಾಪೋಹಗಳಿಗೆ ನಾವು ಉತ್ತರ ಕೊಡುವುದಿಲ್ಲ. ಯಡಿಯೂರಪ್ಪನವರಾಗಲಿ ಹೈಕಮಾಂಡ್ ಆಗಲಿ ಯಾರೂ ನಾಯಕತ್ವ ಬದಲಾವಣೆ ಬಗ್ಗೆ ಎಲ್ಲೂ ಹೇಳಿಲ್ಲ. ನಾವು ಸಚಿವರುಗಳು ಊಟಕ್ಕೆ ಸೇರುತ್ತಿರುತ್ತೇವೆ ನಿನ್ನೆಯು 4-5 ಜನ ಊಟಕ್ಕೆ ಸೇರಿದ್ದೆವು ಎಂದರು.

    ನಾಯಕತ್ವ ಬದಲಾವಣೆ ಇಲ್ಲ ಎಂದು ರಾಜ್ಯಾಧ್ಯಕ್ಷರೇ ಹೇಳಿದ್ದಾರೆ. ಆದ್ದರಿಂದ ನಮಗೆ ಯಾವುದೇ ಗೊಂದಲ ಇಲ್ಲ. ನಾಯಕತ್ವ ಬದಲಾವಣೆಗೆ ಹೈ ಕಮಾಂಡ್ ಮುಂದಾದರೆ ಅದು ಅವರ ತೀರ್ಮಾನ. ನಾವು ಯಡಿಯೂರಪ್ಪ ಹಾಗೂ ಭಾರತೀಯ ಜನತಾಪಾರ್ಟಿಯನ್ನು ನಂಬಿಕೊಂಡು ಬಂದವರು. ಪಕ್ಷಕ್ಕೆ ಬಂದ ಮೇಲೆ ಪಕ್ಷದ ತೀರ್ಮಾನಕ್ಕೆ ಹೈ ಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ. ಸಿಎಂ ಬದಲಾದರೆ ಸಚಿವ ಸ್ಥಾನ ಕೈ ತಪ್ಪುತ್ತೆ ಎಂಬ ಆತಂಕ ನಮಗಿಲ್ಲ ಎಂದು ತಿಳಿಸಿದರು.

    ಮಾಧ್ಯಮಗಳಲ್ಲಿ ಬರುತ್ತಿರುವುದು ಊಹಪೋಹದ ಸುದ್ದಿ. ಅದರ ಬಗ್ಗೆ ನಾವು ಮಾತನಾಡುವುದಿಲ್ಲ. ಸದ್ಯ ಯಾವುದೇ ಬದಲಾವಣೆ ಇಲ್ಲ, ಪಕ್ಷ ಹಾಗೂ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ ಎಂದಿದ್ದಾರೆ. ಈ ಮೂಲಕ ಬದಲಾವಣೆ ಅನಿವಾರ್ಯವಾದರೆ ತಮ್ಮ ಸ್ಥಾನಮಾನ ಉಳಿಸಿಕೊಳ್ಳಲು ಬೇಕಾದ ಸಿದ್ಧತೆಯನ್ನು ವಲಸಿಗ ಸಚಿವರು ಆರಂಭಿಸಿದಂತಿದೆ.

  • ಕರೆ ಸ್ವೀಕರಿಸಿ, ಸಹಾಯ ಮಾಡಲು ಆಗುತ್ತೋ ಇಲ್ವೋ ಅಷ್ಟೇ ಹೇಳಿ- ಸಚಿವರ ವಿರುದ್ಧ ಬಿಜೆಪಿ ಶಾಸಕ ರಾಜೂಗೌಡ ಗರಂ

    ಕರೆ ಸ್ವೀಕರಿಸಿ, ಸಹಾಯ ಮಾಡಲು ಆಗುತ್ತೋ ಇಲ್ವೋ ಅಷ್ಟೇ ಹೇಳಿ- ಸಚಿವರ ವಿರುದ್ಧ ಬಿಜೆಪಿ ಶಾಸಕ ರಾಜೂಗೌಡ ಗರಂ

    ಯಾದಗಿರಿ: ಕೋವಿಡ್ ಉಸ್ತುವಾರಿ ಹೊತ್ತಿರುವ ಸಚಿವರು ದಯವಿಟ್ಟು ನಮ್ಮ ಕರೆ ಸ್ವೀಕರಿಸಿ, ನಮಗೆ ಸಹಾಯ ಮಾಡಲು ಆಗುತ್ತೋ, ಇಲ್ಲವೋ ಅಷ್ಟೇ ಹೇಳಿ ಎಂದು ತಮ್ಮದೇ ಸರ್ಕಾರದ ಸಚಿವರ ವಿರುದ್ಧ ಸುರಪುರ ಬಿಜೆಪಿ ಶಾಸಕ ರಾಜೂಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಕೊಡೆಕಲ್ ಗ್ರಾಮದಲ್ಲಿ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ವಿಚಾರದಲ್ಲಿ ರಾಜ್ಯದ ಸಚಿವರಿಂದ ಮಲತಾಯಿ ಧೋರಣೆ ಆಗುತ್ತಿದೆ. ಸಚಿವರು ಅವರ ಜಿಲ್ಲೆಯ ಸಮಸ್ಯೆ ಮಾತ್ರ ಬಗೆಹರಿಸಿದರೆ, ಶಾಸಕರು ಇರುವ ಜಿಲ್ಲೆಯವರು ಏನು ಮಾಡಬೇಕು? ನಾವು ಅಧಿಕಾರದಲ್ಲಿದ್ದೇವೆ, ಈ ಸಮಯದಲ್ಲಿ ಜನರ ರಕ್ಷಣೆ ಮಾಡಬೇಕು. ಇದು ಇಡೀ ಕರ್ನಾಟಕಕ್ಕೆ ಸರ್ಕಾರ, ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಲ್ಲ. ಎಲ್ಲರೂ ನಾವು ನಂಬರ್ ಒನ್ ಆಗಬೇಕು, ಯಡಿಯೂರಪ್ಪ ಸಿಎಂ ಸ್ಥಾನದಿಂದ ಯಾವಾಗ ಕೆಳಗೆ ಇಳಿಯುತ್ತಾರೋ, ನಾವು ಯಾವಾಗ ಸಿಎಂ ಆಗುತ್ತೇವೋ ಎಂದು ಕನಸು ಕಾಣುತ್ತಿದ್ದಾರೆ. ಸಚಿವರು ಕೇವಲ ಮೀಡಿಯಾ ಮುಂದೆ ಹೇಳಿಕೆ ನೀಡಿ ಸುಮ್ಮನಾಗುತ್ತಿದ್ದಾರೆ, ಎಲ್ಲ ಕಡೆ ಓಡಾಡಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

    ನಮ್ಮ ಮನವಿಗೆ ಸ್ಪಂದಿಸದೆ, ಕಾಟಾಚಾರಕ್ಕೆ ಸಚಿವರಾಗಿರುವವರನ್ನು ಸಿಎಂ ಕಿತ್ತು ಬಿಸಾಕಬೇಕು. ಇಂತಹ ಸಚಿವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಬೇರೆ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ರೆಮ್‍ಡಿಸಿವಿರ್ ಸಿಗುತ್ತಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಸಿಗುತ್ತಿಲ್ಲ. ಇದು ನಮಗೆ ಬಹಳಷ್ಟು ನೋವು ತಂದಿದೆ. ಯಾರು ಒತ್ತಡ ಹಾಕುತ್ತಾರೋ ಅವರಿಗೆ ಮಾತ್ರ ರೆಮ್‍ಡಿಸಿವಿರ್ ಮತ್ತು ಆಕ್ಸಿಜನ್ ಸೀಗುತ್ತಿದೆ. ನಮಗೆ ದಿನ 250 ರೆಮ್‍ಡಿಸಿವಿರ್ ಬೇಕುಮ ಆದರೆ ನೀಡುತ್ತಿರುವುದು ಕೇವಲ 80 ಮಾತ್ರ. ಉಳಿದ ಔಷಧಿಗಾಗಿ ನಾವು ಏನು ಮಾಡಬೇಕು ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

  • ಸಿಎಂ ಬಿಎಸ್‍ವೈ ಸಂಪರ್ಕದಲ್ಲಿದ್ದ ಶಾಸಕ ಆನಂದ ಮಾಮನಿಗೆ ಕೊರೊನಾ

    ಸಿಎಂ ಬಿಎಸ್‍ವೈ ಸಂಪರ್ಕದಲ್ಲಿದ್ದ ಶಾಸಕ ಆನಂದ ಮಾಮನಿಗೆ ಕೊರೊನಾ

    ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೊಂದಿಗೆ ಸಂಪರ್ಕ ಹೊಂದಿದ್ದ ಸವದತ್ತಿ ಶಾಸಕ ಆನಂದ ಮಾಮನಿಗೆ ಕೊರೊನಾ ದೃಢಪಟ್ಟಿದೆ.

    ಉಪಚುನಾವಣಾ ಪ್ರಚಾರಕ್ಕಾಗಿ ಸಿಎಂ ಬಿಎಸ್ ಯಡಿಯೂರಪ್ಪನವರು ಕಳೆದ ನಾಲ್ಕು ದಿನಗಳಿಂದ ಬೆಳಗಾವಿ, ಬಸವ ಕಲ್ಯಾಣ, ಮಸ್ಕಿಗೆ ಪ್ರವಾಸ ಬೆಳೆಸಿದ್ದರು. ಈ ವೇಳೆ ಸಿಎಂ ಬಿಎಸ್‍ವೈರನ್ನು ಭೇಟಿ ಮಾಡಿದ್ದ ಸವದತ್ತಿ ಶಾಸಕ ಆನಂದ ಮಾಮನಿಗೆ ಇಂದು ಕೊರೊನಾ ಪಾಸಿಟಿವ್ ವರದಿ ಬಂದಿದೆ.

    ಸೋಮವಾರದಿಂದ ಜ್ವರದಲ್ಲಿ ಬಳಲುತ್ತಿರುವ ಸಿಎಂ ಬಿಎಸ್‍ವೈ ಮಾತ್ರೆಗಳನ್ನು ಸೇವಿಸಿ ಚುನಾವಣೆ ಪ್ರಚಾರ ನಡೆಸಿದರು. ಈ ವೇಳೆ ಸಿಎಂ ಜೊತೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಹಲವಾರು ಸಚಿವರು ಹಾಗೂ ಶಾಸಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಏಪ್ರಿಲ್ 12ನೇ ರಂದು ಮಸ್ಕಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್‍ಗೆ ಕೊರೊನಾ ಪಾಸಿಟಿವ್ ಆಗಿದ್ದು, ಏಪ್ರಿಲ್ 14 ರಂದು ಬಿಜೆಪಿ ಶಾಸಕ ರಾಜೂಗೌಡ, ಪ್ರೀತಂ ಗೌಡ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು.

    ಸುರಪುರ ಶಾಸಕ ರಾಜೂಗೌಡರವರಿಗೆ ಏಪ್ರಿಲ್ 14ರಂದು ಕೊರೊನಾ ಕಾಣಿಸಿಕೊಂಡಿದ್ದು, ಗೋವಿಂದ ಕಾರಜೋಳರವರಿಗೆ ಏಪ್ರಿಲ್ 10ರಂದು ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಏಪ್ರಿಲ್ 14 ರಂದು ಹಾಸನ ಶಾಸಕ ಪ್ರೀತಂ ಗೌಡಗೆ ಕೊರೊನಾ ಕಾಣಿಸಿಕೊಂಡಿದ್ದು, ಇದೀಗ ಕ್ವಾರಂಟೈನಲ್ಲಿದ್ದಾರೆ.

    ಸದ್ಯ ಸಿಎಂ ಯಡಿಯೂರಪ್ಪನವರಿಗೆ ಇಂದು ಕೊರೊನಾ ದೃಢ ಪಟ್ಟಿರುವುದರಿಂದ ಸಿಎಂ ಜೊತೆ ಸಂಪರ್ಕದಲ್ಲಿದ್ದ ಸಚಿವ ಸುಧಾಕರ್, ಬಸವರಾಜ ಬೊಮ್ಮಾಯಿ, ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಶ್ರೀರಾಮುಲು, ಬಾಲಚಂದ್ರ ಜಾರಕಿ ಹೊಳಿ, ರೇಣುಕಾ ಚಾರ್ಯ, ಪ್ರಭು ಚವ್ಹಾಣ್ ಕೋವಿಡ್ ಪರೀಕ್ಷೆ ಮಾಡಬೇಕಾಗುತ್ತದೆ.

  • ಚಾಕೇನಹಳ್ಳಿ ಸ್ಫೋಟ ಪ್ರಕರಣ- ಸಚಿವ, ಸಂಸದ, ಶಾಸಕರು ಸ್ಥಳಕ್ಕೆ ಭೇಟಿ, ಪರಿಶೀಲನೆ

    ಚಾಕೇನಹಳ್ಳಿ ಸ್ಫೋಟ ಪ್ರಕರಣ- ಸಚಿವ, ಸಂಸದ, ಶಾಸಕರು ಸ್ಥಳಕ್ಕೆ ಭೇಟಿ, ಪರಿಶೀಲನೆ

    – ಘಟನೆಯಲ್ಲಿ ಓರ್ವ ಸಾವು, ಇಬ್ಬರಿಗೆ ತೀವ್ರ ಗಾಯ

    ಹಾಸನ: ಹೊಳೆನರಸೀಪುರದ ಚಾಕೇನಹಳ್ಳಿಯಲ್ಲಿ ಸ್ಪೋಟಕ ದುರ್ಘಟನೆ ಪ್ರಕರಣ ನಡೆದ ಸ್ಥಳಕ್ಕೆ ಇಂದು ಉಸ್ತುವಾರಿ ಸಚಿವ ಗೋಪಾಲಯ್ಯ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಮಾಹಿತಿ ಪಡೆದ ಸಚಿವರು ಹಾಗೂ ಶಾಸಕರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಬರವಸೆ ನೀಡಿದರು.

    ಚಾಕೇನಹಳ್ಳಿಯಲ್ಲಿ ಭಾನುವಾರ ಸ್ಫೋಟಕ ತುಂಬಿದ ಗೋಡೌನ್ ಬಳಿ ಸ್ಫೋಟ ಸಂಭವಿಸಿತ್ತು. ಪ್ರಕರಣದಲ್ಲಿ ಸಂಪತ್ ಸಾವನ್ನಪ್ಪಿ, ನಟರಾಜ್ ಹಾಗೂ ರವಿ ಗಂಭೀರ ಸ್ಥಿತಿ ತಲುಪಿದ್ದಾರೆ. ಇಂದು ಈ ಘಟನಾ ಸ್ಥಳಕ್ಕೆ ಹಾಸನ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸ್ಪೋಟಕ ಗೋಡೌನ್ ದುರ್ಗಾಂಬಾ ಎಂಟರ್ ಪ್ರೈಸಸ್ ಹೆಸರಿನಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.

    ಪರಿಶೀಲನೆ ಬಳಿಕ ಮಾತನಾಡಿದ ಪ್ರಜ್ವಲ್ ರೇವಣ್ಣ, ಸ್ಫೋಟಕದ ಗೋಡೌನ್ ನ್ನು ಬೇರೆಡೆ ಸ್ಥಳಾಂತರಿಸಬೇಕು. ಹೊಲ, ಹಳ್ಳಿ ಸಮೀಪ ಇರುವ ಕಾರಣ ಲೈಸೆನ್ಸ್ ಇದ್ದರೂ ಇಂತಹ ಸ್ಫೋಟಕ ಗೋಡೌನ್ ಇಲ್ಲಿ ಇರುವುದು ಸೂಕ್ತ ಅಲ್ಲ. ಘಟನೆ ಹೇಗೆ ನಡೆದಿದೆ ಎನ್ನುವ ಬಗ್ಗೆ ಈಗಲೇ ಮಾತನಾಡುವುದು ಸೂಕ್ತ ಅಲ್ಲ. ಏನೇ ಆದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಸ್ಫೋಟಕ ಗೋಡೌನ್ ಮಾಲೀಕ ನಾಗೇಶ್ ನಾಪತ್ತೆಯಾಗಿದ್ದಾನೆ ಎಂದು ಸಂಸದ ಪ್ರಜ್ವಲ್ ಹೇಳಿದರು.

    ಇಲ್ಲಿ ಸ್ಫೋಟಕ ಗೋಡೌನ್ ಇರೋದೆ ನನಗೆ ತಿಳಿದಿರಲಿಲ್ಲ. ಕೆಲವಡೆ 30 ಅಡಿ ವರೆಗೆ ರಿಗ್ ತೋಡಿ ಸ್ಫೋಟಕ ಇಡುತ್ತಾರೆ. ಈ ಹಿಂದೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಎಲ್ಲ ಕಲ್ಲು ಕ್ವಾರಿಗಳ ಡ್ರೋನ್ ಸರ್ವೇ ನಡೆಯಬೇಂದು ಪತ್ರ ಕೂಡ ಬರೆದಿದ್ದೇನೆ. ನನ್ನ ಕ್ಷೇತ್ರದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಮೃತರ ಕುಟುಂಬಕ್ಕೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

    ಪ್ರಕರಣದ ನಂತರ ಜಿಲೆಟಿನ್ ಸಂಗ್ರಹ ಗೋಡೌನ್ ಮಾಲೀಕ ನಾಗೇಶ್ ನಾಪತ್ತೆಯಾಗಿದ್ದಾನೆ. ತಮಿಳುನಾಡಿನಿಂದ ಇಲ್ಲಿಗೆ ಸ್ಪೋಟಕ ತರಲಾಗಿದ್ದು, ರಸೀದಿಗಳು ಇವೆ ಎಂದು ಸಚಿವರು ಅಧಿಕೃತ ಹೇಳಿಕೆ ನೀಡಿದ್ದಾರೆ. ಆದರೆ ಡಿಟೋನೇಟರ್ ಸ್ಫೋಟದಿಂದಲೇ ಈಘಟನೆ ನಡೆದಿದ್ದು, ಈ ಸ್ಪೋಟಕಗಳನ್ನು ಸಾಗಿಸುವ ಕ್ರಮದಲ್ಲಿ ತಪ್ಪಾಗಿರೋದು ಕಂಡುಬಂದಿದೆ. ಯಾರೇ ಆದರೂ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.

    ಈ ಸ್ಫೋಟಕ ಗೋಡೌನ್ ಗೆ ಲೈಸೆನ್ಸ್ ಇದ್ದರೂ ಜಿಲೆಟಿನ್ ಸಾಗಿಸುವಾಗ ತೆಗೆದುಕೊಳ್ಳಬೇಕಾದ ಜಾಗ್ರತಾ ಕ್ರಮ ವಹಿಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆಯಲ್ಲಿ ತೀವ್ರಗಾಯಗೊಂಡ ರವಿ ಹಾಗೂ ನಟರಾಜ್ ಕೂಡ ಜೀವನ್ಮರಣ ಹೋರಾಟದಲ್ಲಿದ್ದಾರೆ.

  • ಮುನ್ನೆಚ್ಚರಿಕೆ ಕ್ರಮವಾಗಿ ಕೋರ್ಟ್ ಮೊರೆ ಹೋಗಿದ್ದೇವೆ: ಶಿವರಾಮ್ ಹೆಬ್ಬಾರ್

    ಮುನ್ನೆಚ್ಚರಿಕೆ ಕ್ರಮವಾಗಿ ಕೋರ್ಟ್ ಮೊರೆ ಹೋಗಿದ್ದೇವೆ: ಶಿವರಾಮ್ ಹೆಬ್ಬಾರ್

    ಕಾರವಾರ: ನಾಳೆ ಆಧಾರ ರಹಿತ ಎಂದು ಘೋಷಣೆ ಆದ ಮೇಲೆ ಹೋದ ಮಾನ ಮತ್ತೆ ಬರಲು ಸಾಧ್ಯವಿಲ್ಲ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

    ಮಾಜಿ ಸಚಿವರೊಬ್ಬರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಇದೊಂದು ರಾಜಕೀಯ ಷಡ್ಯಂತ್ರ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಂಡಿದ್ದೇವೆ. ನಾಳೆ ಆಧಾರ ರಹಿತ ಎಂದು ಘೋಷಣೆ ಆದ ಮೇಲೆ ಹೋದ ಮಾನ ಮತ್ತೆ ಬರಲು ಸಾಧ್ಯವಿಲ್ಲ. ಏನು ಬೇಕಾದರೂ ಸಹಿಸಿಕೊಳ್ಳಲು ಸಿದ್ಧವಿದ್ದೇವೆ. ಸೋಲನ್ನು ಸಹಿಸಿಕೊಂಡಿದ್ದೇವೆ. ಈ ರೀತಿಯ ನೈತಿಕ ಅಧಃಪತನವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದು ಹೇಳಿದ್ದಾರೆ.

    ಹಳೆ ಸರ್ಕಾರವನ್ನು ತೆಗೆದು ಹೊಸ ಸರ್ಕಾರ ಬರಲು ಯಾರು ಕಾರಣರಾದರು ಅವರನ್ನೇ ಟಾರ್ಗೆಟ್ ಮಾಡಿದ್ದಾರೆ ಎಂಬ ಅನೇಕ ಮಾಹಿತಿಯಿಂದ ತಿಳಿದುಕೊಂಡು ನಾವು ಈ ಸಿದ್ಧತೆ ಮಾಡಿಕೊಂಡಿದ್ದೇವೆ. ಒಬ್ಬ ವ್ಯಕ್ತಿಯ ಮಾನವೀಯತೆಯನ್ನ, ಗೌರವವನ್ನ ಈ ರೀತಿ ಹರಾಜು ಮಾಡುವುದು ಯಾವ ಪಕ್ಷಕ್ಕೂ ಶೋಭೆ ತರುವುದಿಲ್ಲ. ಇದನ್ನು ಪ್ರಸಾರ ಮಾಡುವ ಮಾಧ್ಯಮಕ್ಕೂ ಶೋಭೆ ತರತಕ್ಕದ್ದಲ್ಲ ಎಂದು ಕಿಡಿಕಾರಿದರು.

  • ವೀಡಿಯೋ ಪ್ರಕರಣ- ಕನಕಪುರ, ಬೆಳಗಾವಿ ಕಡೆಯವರೇ ಇದಕ್ಕೆ ಕಾರಣ ಎಂದ ಯೋಗೇಶ್ವರ್

    ವೀಡಿಯೋ ಪ್ರಕರಣ- ಕನಕಪುರ, ಬೆಳಗಾವಿ ಕಡೆಯವರೇ ಇದಕ್ಕೆ ಕಾರಣ ಎಂದ ಯೋಗೇಶ್ವರ್

    ಬೆಂಗಳೂರು: ಮೈತ್ರಿ ಸರ್ಕಾರ ಕೆಡವಿದ ಹಿನ್ನೆಲೆ ಈ ರೀತಿ ಮಾಡುತ್ತಿದ್ದಾರೆ. ಕನಕಪುರ, ಬೆಳಗಾವಿಯವರೇ ಇದಕ್ಕೆ ಕಾರಣ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಊಹಾಪೋಹಗಳ ಬಗ್ಗೆ ನನಗೆ ಗೊತ್ತಿಲ್ಲ. ಅನಾವಶ್ಯಕವಾಗಿ ಸಂಬಂಧವಿಲ್ಲದ ಪ್ರಶ್ನೆ ಕೇಳಿ ಮುಜುಗರಕ್ಕೀಡು ಮಾಡಬೇಡಿ. ಸರ್ಕಾರ ರಚನೆ ಮಾಡಲು 20 ಜನ ಸಹಕಾರ ಕೊಟ್ಟಿದ್ದಾರೆ. ಇದು ಸಾಮೂಹಿಕ ವಿಚಾರವಲ್ಲ, ವೈಯಕ್ತಿಕ ವಿಚಾರ. ಅವರನ್ನೇ ಕೇಳಬೇಕು. ಅಲ್ಲದೆ ಮಾಜಿ ಸಚಿವರ ವೀಡಿಯೋ ಪ್ರಕರಣದ ಹಿಂದೆ ಕನಕಪುರ, ಬೆಳಗಾವಿಯವರು ಇದ್ದಾರೆ, ಇದಕ್ಕೆ ಅವರೇ ಕಾರಣ ಎಂದು ಹೊಸ ಬಾಂಬ್ ಸಿಡಿಸುವ ಮೂಲಕ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಯಾಗುವಂತೆ ಮಾಡಿದ್ದಾರೆ.

    ಮೈತ್ರಿ ಸರ್ಕಾರ ಕೆಡವಲು ಕಾರಣವಾದ ಹಿನ್ನೆಲೆಯಲ್ಲಿ ಈ ರೀತಿಯ ಷಡ್ಯಂತ್ರ ಮಾಡುತ್ತಿದ್ದಾರೆ ಎಂಬ ಸಚಿವರೊಬ್ಬರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇರಬಹುದು, ಕನಕಪುರದವರು ಹಾಗೂ ಬೆಳಗಾವಿಯವರು ಇದಕ್ಕೆ ಕಾರಣ. ಇದು ರಾಜಕೀಯ ಷಡ್ಯಂತ್ರವಾಗಿದೆ. ಇದನ್ನು ಮಾಡಿದವರು ಯಾರೆಂದು ಮುಂದೆ ಹೇಳುತ್ತೇನೆ. ಮುಂದಿನ ದಿನಗಳಲ್ಲಿ ಅವರು ಅನುಭವಿಸ್ತಾರೆ ಎಂದರು.

  • ನಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡಬೇಡಿ – 6 ಸಚಿವರಿಂದ ಕೋರ್ಟ್‍ಗೆ ಅರ್ಜಿ

    ನಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡಬೇಡಿ – 6 ಸಚಿವರಿಂದ ಕೋರ್ಟ್‍ಗೆ ಅರ್ಜಿ

    ಬೆಂಗಳೂರು: ಮಾಜಿ ಸಚಿವರೊಬ್ಬರ ರಾಸಲೀಲೆ ಸಿಡಿ ಹೊರ ಬರುತ್ತಿದ್ದಂತೆ ಭೀತಿ ಶುರುವಾಗಿದ್ದು, ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ವಲಸೆ ಬಂದ 6 ಜನ ಸಚಿವರು ಕೋರ್ಟ್ ಮೆಟ್ಟಿಲೇರಿದ್ದಾರೆ.

    ತಮ್ಮ ವಿರುದ್ಧ ಮಾಧ್ಯಮಗಳು ವರದಿ ಪ್ರಸಾರ ಮಾಡಬಾರದು ಎಂದು 6 ಜನ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ನಾರಾಯಣಗೌಡ, ಭೈರತಿ ಬಸವರಾಜ್ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕೆಂದು ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಆರು ಸಚಿವರಿಗೆ ಭೀತಿ ಹುಟ್ಟಿರುವುದು ಏಕೆ? ಇದ್ದಕ್ಕಿಂದ್ದಂತೆ ಯಾಕೆ ಕೋರ್ಟ್ ಮೊರೆ ಹೋಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.