Tag: ಸಚಿವರು

  • ಶಿಕ್ಷಣ ಸಚಿವರ ಜಿಲ್ಲೆಯಲ್ಲಿ ಅಕ್ರಮ ಪುಸ್ತಕ ಮಾರಾಟಜಾಲ ಪತ್ತೆ

    ಶಿಕ್ಷಣ ಸಚಿವರ ಜಿಲ್ಲೆಯಲ್ಲಿ ಅಕ್ರಮ ಪುಸ್ತಕ ಮಾರಾಟಜಾಲ ಪತ್ತೆ

    ಚಾಮರಾಜನಗರ: ಸರ್ಕಾರಿ ಶಾಲೆಗಳ ಪಠ್ಯಪುಸ್ತಗಳನ್ನು ಅಕ್ರಮವಾಗಿ ಮಾರಾಟ ಮಾಡುವ ದಂಧೆ ಶಿಕ್ಷಣ ಸಚಿವ ಎನ್.ಮಹೇಶ್ ರವರ ತವರು ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹನೂರು ಶಿಕ್ಷಣ ವಲಯ ಕಚೇರಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.

    ರಾಜ್ಯದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪಠ್ಯ ಪುಸ್ತಕಗಳ ಅಭಾವ ಉಂಟಾಗಿದೆ. ಆದರೆ ಕೊಳ್ಳೇಗಾಲ ತಾಲೂಕಿನ ಹನೂರು ಶಿಕ್ಷಣ ವಲಯ ಕಚೇರಿಯಲ್ಲಿ ಹಣದ ಆಸೆಗೆ ಶಿಕ್ಷಣ ಸಂಯೋಜಕ ಮಹದೇವಶೆಟ್ಟಿ ಅಕ್ರಮವಾಗಿ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಹನೂರು ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ವಿತರಣೆ ಮಾಡಲು ಗೋದಾಮಿನಲ್ಲಿ ಸಂಗ್ರಹಿಸಿರುವ ಪಠ್ಯ ಪುಸ್ತಗಳನ್ನು ಖಾಸಗಿ ಶಾಲೆ ಹಾಗೂ ಅರೆ ಸರ್ಕಾರಿ ಶಾಲೆಗಳ ಪೋಷಕರಿಗೆ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಇದಕ್ಕೂ ಮುಂದೆ ಹೋಗಿರುವ ಅಧಿಕಾರಿಗಳು ಪುಸ್ತಕಗಳನ್ನು ಖಾಸಗಿ ಪುಸ್ತಕ ಮಳಿಗೆಗಳಿಗೂ ಸಹ ಕಡಿಮೆ ಬೆಲೆಯಲ್ಲಿ ಮಾರಾಟಮಾಡುತ್ತಿದ್ದಾರೆ.

    ಒಂದು ಕಡೆ ಸರ್ಕಾರಿ ಶಾಲೆಯ ಮಕ್ಕಳು ನಮಗೆ ಇನ್ನೂ ಪುಸ್ತಕಗಳೇ ಬಂದಿಲ್ಲ ಎನ್ನುತ್ತಿದ್ದರೆ, ಇನ್ನೊಂದೆಡೆ ಅಕ್ರಮವಾಗಿ ಪಠ್ಯ ಪುಸ್ತಕಗಳು ಮಾರಾಟವಾಗುತ್ತಿವೆ. ಕೂಡಲೇ ಶಿಕ್ಷಣ ಇಲಾಖೆ ಎಚ್ಚೆತ್ತು, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಗೊಳ್ಳಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಷಾಢ ಬಳಿಕ ಸಂಪುಟ ವಿಸ್ತರಣೆ ಹಿನ್ನೆಲೆ- ಕಾಂಗ್ರೆಸ್‍ನಲ್ಲಿ ತೀವ್ರಗೊಂಡ ಲಾಬಿ

    ಆಷಾಢ ಬಳಿಕ ಸಂಪುಟ ವಿಸ್ತರಣೆ ಹಿನ್ನೆಲೆ- ಕಾಂಗ್ರೆಸ್‍ನಲ್ಲಿ ತೀವ್ರಗೊಂಡ ಲಾಬಿ

    ಬೆಂಗಳೂರು: ಆಷಾಢ ಮುಗಿಯೋದು ಹತ್ತಿರವಾಗುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕರು ಫುಲ್ ಆಕ್ಟಿವ್ ಆಗಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಗಳು ಹೈಕಮಾಂಡ್ ಭೇಟಿ ಮಾಡಲು ದೆಹಲಿ ಕಡೆ ಪ್ರಯಾಣ ಬೆಳೆಸಿದ್ದಾರೆ.

    ಸಚಿವ ರಮೇಶ್ ಜಾರಕಿಹೋಳಿ ನೇತೃತ್ವದಲ್ಲಿ ಎಂಟು ಜನ ಶಾಸಕರು ಹೈಕಮಾಂಡ್ ಭೇಟಿಗೆ ದೆಹಲಿ ತೆರಳಿದ್ದಾರೆ. ಆಷಾಢ ಬಳಿಕ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕ ಮಾಡಲಾಗುತ್ತೆ ಅಂಥ ಹೈಕಮಾಂಡ್ ಹೇಳಿತ್ತು. ಹೀಗಾಗಿ ಆಷಾಢ ಮುಗಿಯೊಕೆ ಇನ್ನು ಒಂದು ವಾರ ಬಾಕಿ ಇರುವಾಗಲೇ ಶಾಸಕರು ಕಸರತ್ತು ಆರಂಭಿಸಿದ್ದಾರೆ.

    ಸಚಿವ ರಮೇಶ್ ಜಾರಕೀಹೊಳಿ, ಎಂಬಿ ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಬಿ.ನಾಗೇಂದ್ರ, ನಾರಯಣ್ ರಾವ್ ರಹೀಂ ಖಾನ್ ಸೇರಿದಂತೆ ಒಟ್ಟು ಎಂಟು ಜನ ಶಾಸಕರು ಇಂದು ರಾಜ್ಯ ಚುನಾವಣಾ ಉಸ್ತುವಾರಿ ಕೆ.ವೇಣುಗೋಪಾಲ್ ಭೇಟಿಯಾಗಲಿದ್ದಾರೆ. ಜೊತೆಗೆ ಹೈಕಮಾಂಡ್ ಭೇಟಿಗೂ ಪ್ರಯತ್ನಿಸಲಿದ್ದು, ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಹಾಗೂ ಪ್ರಮುಖ ನಿಗಮ ಮಂಡಳಿ ನೀಡುವಂತೆ ಒತ್ತಾಯಿಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಗ್ರಹಣ ಎಫೆಕ್ಟ್ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ

    ಗ್ರಹಣ ಎಫೆಕ್ಟ್ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ

    ಬೆಂಗಳೂರು: ವಾರಾಂತ್ಯ ಬಂದರೆ ಬೆಂಗಳೂರಿನ ರಸ್ತೆಗಳಲ್ಲಿ ಜಾಸ್ತಿ ಜನಸಂದಣಿ ಇರುತ್ತದೆ. ಆದರೆ ಶುಕ್ರವಾರ ಸಂಜೆ ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಗರದ ರಸ್ತೆಗಳು ಖಾಲಿ ಖಾಲಿಯಾಗಿದೆ.

    ಹಲವು ಅಂಗಡಿಗಳು ಮುಚ್ಚಿದ್ದು, ಟ್ರಾಫಿಕ್ ಜಾಮ್ ನ ಸಂಕಷ್ಟಕ್ಕೆ ಗ್ರಹಣದಿಂದ ತಾತ್ಕಾಲಿಕ ಮುಕ್ತಿ ಸಿಕ್ಕಿದೆ. ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.

    ದೇವಾಲಯಗಳು ಇರುವ ಕಡೆ ಸ್ವಲ್ಪ ಟ್ರಾಫಿಕ್ ಹೆಚ್ಚಾಗಿದೆ. ರಸ್ತೆಯಲ್ಲಿ ಸರತಿ ಸಾಲು ಉದ್ದವಾಗಿದ್ದರಿಂದ ಸಂಚಾರದಲ್ಲಿ ಸ್ವಲ್ಪ ವ್ಯತ್ಯಯವಾಗುತ್ತಿದೆ.

    ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಬಹುತೇಕ ಸಚಿವರು ಯಾರೂ ಶಕ್ತಿ ಸೌಧಕ್ಕೆ ಬಂದಿರಲಿಲ್ಲ. ಹಲವು ಸಚಿವರ ಕೊಠಡಿಗಳು ಬಂದ್ ಆಗಿತ್ತು. ವಿಧಾನಸೌಧದ ಮೊಗಸಾಲೆ, ಕಾರಿಡಾರ್ ಗಳೂ ಕೂಡ ಖಾಲಿ ಖಾಲಿಯಾಗಿವೆ.

  • ಮುಜರಾಯಿ ಇಲಾಖೆಗೆ ಇಬ್ಬಿಬ್ರು ಮಿನಿಸ್ಟರ್- ಇಲ್ಲಿ ಇವ್ರದ್ದೇ ಹವಾ!

    ಮುಜರಾಯಿ ಇಲಾಖೆಗೆ ಇಬ್ಬಿಬ್ರು ಮಿನಿಸ್ಟರ್- ಇಲ್ಲಿ ಇವ್ರದ್ದೇ ಹವಾ!

    ಬೆಂಗಳೂರು: ಮುಜರಾಯಿ ಇಲಾಖೆಯಲ್ಲಿ ಈಗ ಇಬ್ಬರು ಮಿನಿಸ್ಟರ್. ಕೆಲವೊಮ್ಮೆ ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಗೆ ನಮ್ ಮಿನಿಸ್ಟರ್ ಯಾರಪ್ಪ ಅನ್ನೋ ಕನ್‍ಫ್ಯೂಶನ್ ಶುರುವಾಗಿದೆ ಎಂದು ಹೇಳಲಾಗುತ್ತಿದೆ.

    ಹೌದು. ಸಚಿವ ರಾಜಶೇಖರ್ ಪಾಟೀಲ್ ಅವರಿಗಿಂತ ಮುಜರಾಯಿ ಇಲಾಖೆಯ ಬಗ್ಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರಂತೆ. ಅಷ್ಟೇ ಅಲ್ಲದೇ ಎಚ್.ಡಿ.ರೇವಣ್ಣ ಮುಜರಾಯಿ ಸಚಿವರಗಿಂತ ಮೊದಲೇ ಅಧಿಕಾರಿಗಳ ಅನೌಪಚಾರಿಕ ಮೀಟಿಂಗ್ ಬೇರೆ ಮಾಡಿದ್ದಾರಂತೆ. ಎಲ್ಲಾ ದೇವಾಲಯದ ಆದಾಯದ ವಿವರ, ಅಲ್ಲಿನ ಅರ್ಚಕರಿಗೆ ಕೊಡುತ್ತಿರುವ ವೇತನದ ಬಗ್ಗೆ ಲಿಸ್ಟ್ ತರುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.

    ಎಲ್ಲ ನಾಯಕರಿಗಿಂತ ಸ್ವಲ್ಪ ಹೆಚ್ಚು ದೈವ ಭಕ್ತರಾಗಿರುವ ರೇವಣ್ಣ, ಕೆಲ ಆಪ್ತ ಮುಜರಾಯಿ ಅರ್ಚಕರ ವೇತನ ಹೆಚ್ಚಿಸಲು ಜೊತೆಗೆ ಹಾಸನ ಕಡೆಯ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಪಡೆಯೋಕೆ ಹೀಗೆಲ್ಲ ಕೆಲಸ ಮಾಡುತ್ತಿದ್ದಾರೆ ಅನ್ನೋ ಗುಸು ಗುಸು ಸುದ್ದಿಯೂ ಹರಿದಾಡುತ್ತಿದೆ. ಎಲ್ಲರ ಲಿಸ್ಟ್ ಹಿಡ್ಕೊಂಡು ಬನ್ನಿ ಮತ್ತೆ ಸಭೆ ಮಾಡ್ತೀನಿ ಅಂತಾ ಅಧಿಕಾರಿಗಳಿಗೆ ಎಚ್.ಡಿ.ರೇವಣ್ಣ ಸೂಚನೆ ನೀಡಿದ್ದಾರೆ ಅಂತ ಮುಜರಾಯಿ ಉನ್ನತ ಇಲಾಖೆಯ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

  • ಹೊಸ ಕಾರು ಖರೀದಿಗೆ ಅರ್ಜಿ ಹಾಕಿದ್ದ ನೂತನ ಸಚಿವರು, ಅಧಿಕಾರಿಗಳಿಗೆ ಶಾಕ್ ಕೊಟ್ಟ ಸಿಎಂ

    ಹೊಸ ಕಾರು ಖರೀದಿಗೆ ಅರ್ಜಿ ಹಾಕಿದ್ದ ನೂತನ ಸಚಿವರು, ಅಧಿಕಾರಿಗಳಿಗೆ ಶಾಕ್ ಕೊಟ್ಟ ಸಿಎಂ

    ಬೆಂಗಳೂರು: ಹೊಸ ಕಾರು ಖರೀದಿಗೆ ಅರ್ಜಿ ಹಾಕಿದ್ದ ನೂತನ ಸಚಿವರು ಮತ್ತು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಖಡಕ್ ಸೂಚನೆ ಕೊಟ್ಟಿದ್ದಾರೆ.

    ಹೊಸ ಕಾರು ಖರೀದಿಗೆ ಕೋರಿ ಮುಖ್ಯ ಕಾರ್ಯದರ್ಶಿ ಕಚೇರಿಗೆ ಸಚಿವರು, ಅಧಿಕಾರಿಗಳು ಸೇರಿದಂತೆ 11 ಅರ್ಜಿ ಬಂದಿದ್ದವು. ಆದರೆ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಸಿಎಂ ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ 11 ಅರ್ಜಿಗಳು ವಾಪಸ್ ಆಗಿದೆ.

    ಮುಖ್ಯ ಕಾರ್ಯದರ್ಶಿ ಕಚೇರಿಗೆ ಆರು ಮಂದಿ ಸಚಿವರು ಮತ್ತು 5 ಮಂದಿ ಅಧಿಕಾರಿಗಳಿಂದ ಹೊಸ ಕಾರಿಗಾಗಿ ಅರ್ಜಿ ಬಂದಿದ್ದವು. ಈ ವರ್ಷ ಅನಗತ್ಯ ವೆಚ್ಚಕ್ಕಾಗಿ ಹಣ ನೀಡದಂತೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದರು.

    ಸಚಿವಾರದ ಕೆಜೆ ಜಾರ್ಜ್, ಡಿ.ಕೆ.ಶಿವಕುಮಾರ್, ಜಯಮಾಲಾ, ಪ್ರಿಯಾಂಕ ಖರ್ಗೆ, ಶಿವಾನಂದ ಪಾಟೀಲ್ ಮತ್ತು ಖಾದರ್ ಹೊಸ ಕಾರ್ ನೀಡುವಂತೆ ಅರ್ಜಿ ಸಲ್ಲಿಸಿದರು. ಅನುಮತಿ ಸಿಗದ ಹಿನ್ನೆಲೆಯಲ್ಲಿ ಸಚಿವರ ಕಾರು ಖರೀದಿ ಅರ್ಜಿಗಳು ವಾಪಸ್ ಮಾಡಲಾಗಿದೆ ಎನ್ನಲಾಗಿದೆ.

  • ನಮ್ಮ ಪಕ್ಷದಲ್ಲಿ ಅಸಮಾಧಾನ ಇಲ್ಲ, ಕಾಂಗ್ರೆಸ್‍ನಲ್ಲಿದೆ: ಸಿಎಂ ಎಚ್‍ಡಿಕೆ

    ನಮ್ಮ ಪಕ್ಷದಲ್ಲಿ ಅಸಮಾಧಾನ ಇಲ್ಲ, ಕಾಂಗ್ರೆಸ್‍ನಲ್ಲಿದೆ: ಸಿಎಂ ಎಚ್‍ಡಿಕೆ

    ಬೆಂಗಳೂರು: ನಮ್ಮ ಪಕ್ಷದಲ್ಲಿ ಅಂತಹ ದೊಡ್ಡ ಅಸಮಾಧಾನ ಏನು ಇಲ್ಲ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಹೆಚ್ ವಿಶ್ವನಾಥ್ ಸಚಿವ ಸ್ಥಾನಕ್ಕಾಗಿ ಅಸಮಾಧಾನಗೊಂಡಿಲ್ಲ. ಬೆಳಿಗ್ಗೆ ನನ್ನ ಜೊತೆಯೇ ತಿಂಡಿ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಕೆಲವರಲ್ಲಿ ಅಸಮಾಧಾನ ಇದೆ ಅದನ್ನು ಸರಿಪಡಿಸುವ ಕೆಲಸ ಮಾಡ್ತಿದ್ದೇನೆ ಎಂದು ತಿಳಿಸಿದರು.

    ಕಾಂಗ್ರೆಸ್ ನಲ್ಲಿ ಸಚಿವಾಕಾಂಕ್ಷಿಗಳಾಗಿದ್ದವರಲ್ಲಿ ಕೆಲವರು ಆಕ್ರೋಶ ಅಸಮಾಧಾನ ವ್ಯಕ್ತಪಡಿಸುತ್ತಿರುವುದನ್ನು ಸರಿಪಡಿಸುವುದು ನನ್ನ ಕೈಯಲ್ಲಿ ಇಲ್ಲ, ಕಾಂಗ್ರೆಸ್ ನಾಯಕರುಗಳು ಕ್ರಮ ತೆಗೆದುಕೊಳ್ಳಬೇಕು ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸರ್ಕಾರ ಇರುವುದರಿಂದ ನಮ್ಮ ಮೇಲೂ ಜವಾಬ್ದಾರಿ ಇದೆ ಎಂದು ಹೇಳಿದರು.

    ವೈಯಕ್ತಿಕವಾಗಿ ನೇರವಾಗಿ ಸಂಬಂಧ ಇಲ್ಲದಿದ್ದರೂ ಸರ್ಕಾರ ಸಧೃಡವಾಗಿ ಇರವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೂ ಇದೆ. ಅಸಮಾಧಾನಗೊಂಡಿರುವ ಕಾಂಗ್ರೆಸ್ ನಾಯಕರುಗಳ ಆಕ್ರೋಶಕ್ಕೆ ಕಾರಣವನ್ನು ಗ್ರಹಿಸಿದ್ದೇನೆ. ದೆಹಲಿಯ ಕೇಂದ್ರ ನಾಯಕರುಗಳಿಗೆ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡುತ್ತೇವೆ. ಎಲ್ಲಿ ಎಡವಿದ್ದೇವೆ ಎಂದು ತಿಳಿದು ಸರಿಪಡಿಸಿಕೊಂಡಾಗ ಸರ್ಕಾರ ಸುಸೂತ್ರವಾಗಿ ನಡೆಯುವ ಅವಕಾಶ ಇರುತ್ತದೆ ಎಂದು ಇದೇ ವೇಳೆ ತಿಳಿಸಿದರು.

     

  • ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಪ್ರಕಾಶ್ ರೈ

    ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಪ್ರಕಾಶ್ ರೈ

    ಬೆಂಗಳೂರು: ಎಲ್ಲಿಯ ತನಕ ಜನರನ್ನು ಮೂರ್ಖರನ್ನಾಗಿ ಮಾಡುತ್ತಿರುತ್ತೀರಿ? ಯಾವಾಗ ಆಡಳಿತ ನಡೆಸುತ್ತೀರಿ ಎಂದು ಪ್ರಶ್ನೆ ಮಾಡಿ ನಟ ಪ್ರಕಾಶ್ ರೈ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಮ್ಮಿಶ್ರ ಸರ್ಕಾರ ರಚನೆ ಆದ ಮೇಲೆ ಸಚಿವಾಕಾಂಕ್ಷಿಗಳಲ್ಲಿ ಭುಗಿಲೆದ್ದಿರುವ ಆಕ್ರೋಶದ ಹಿನ್ನೆಲೆಯಲ್ಲಿ ಟ್ವೀಟಿಸಿರುವ ಅವರು ಬಿಜೆಪಿ ಅಧಿಕಾರ ಮತ್ತು ಹಣದಿಂದ ಸರ್ಕಾರ ರಚಿಸಲು ಲಾಬಿ ನಡೆಸಿತು. ಆದರೆ ಕಾಂಗ್ರೆಸ್ ಜೆಡಿಎಸ್ ನಾಯಕರುಗಳು ಖಾತೆಗಳಿಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಹಣ ಅಥವಾ ಮಂತ್ರಿಗಿರಿಗಾಗಿ ನೀವು ಈಗಾಗಲೇ ಮಾರಾಟವಾಗಿದ್ದೀರಿ ಎಂದು ಪ್ರಕಾಶ್ ರೈ ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಕುಮಾರಸ್ವಾಮಿ ಮತ್ತು ಪರಮೇಶ್ವರ್ ಅವರು ಮುಖ್ಯಮಂತ್ರಿ ಉಪಮುಖ್ಯಮಂತ್ರಿಯಾಗಿ ಮೇ 23 ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಇದಾದ ಬಳಿಕ ಜೂನ್ 6 ರಂದು 25 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ ಖಾತೆ ಹಂಚಿಕೆಯಾಗಿಲ್ಲ.

  • ಇಂದು ಎಚ್‍ಡಿಕೆಯಿಂದ ರಾಜ್ಯಪಾಲರ ಭೇಟಿ

    ಇಂದು ಎಚ್‍ಡಿಕೆಯಿಂದ ರಾಜ್ಯಪಾಲರ ಭೇಟಿ

    ಬೆಂಗಳೂರು: ಸಚಿವರ ಖಾತೆ ಹಂಚಿಕೆ ಇನ್ನು ಮುಗಿಯದ ಕಗ್ಗಂಟಾಗಿದ್ದು, ಇಂದು ಸಚಿವರ ಪ್ರಮಾಣ ವಚನಕ್ಕೆ ಟೈಮ್ ಫಿಕ್ಸ್ ಆಗಲಿದೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದು, ಮಧ್ಯಾಹ್ನದ ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಕುಮಾರಸ್ವಾಮಿ ಅವರು ಭೇಟಿ ಮಾಡಲಿದ್ದಾರೆ. ಈ ವೇಳೆ ಸಚಿವರ ಪ್ರಮಾಣಕ್ಕೆ ಸಮಯ ಕೇಳಲಿದ್ದಾರೆ.

    ರಾಜ್ಯಪಾಲರನ್ನು ಭೇಟಿ ಮಾಡಿದಾಗ ಸಚಿವರ ಪಟ್ಟಿ ರಾಜ್ಯಪಾಲರಿಗೆ ನೀಡುವ ಸಾಧ್ಯತೆ ಇದೆ. ಇನ್ನು ಭಾನುವಾರ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಿಗದಿಯಾಗುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಇತರೆ ನಾಯಕರುಗಳು ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.  ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ- ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಖಡಕ್ ಸೂಚನೆ!

    ಮಾತುಕತೆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ಮಾಡುವ ಸಾಧ್ಯತೆ ಇದೆ. ಬಹುತೇಕ ಭಾನುವಾರ ಸಂಪುಟ ವಿಸ್ತರಣೆ ಖಚಿತವಾಗಿದ್ದು, ಜೆಡಿಎಸ್-ಕಾಂಗ್ರೆಸ್‍ಗೆ ಯಾವ್ಯಾವ ಖಾತೆ ಯಾರಿಗೆ?. ಯಾರು ಯಾರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸಿಎಂ ನಿವಾಸಕ್ಕೆ ಡಿಜಿಪಿ ನೀಲಮಣಿ ರಾಜು ಭೇಟಿ – ಖಡಕ್ ಸೂಚನೆ ಕೊಟ್ಟ ಎಚ್‍ಡಿಕೆ

  • ಪಿಎಸ್‍ಐಗೆ ಧಮ್ಕಿ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಸಚಿವರ ಪಿಎ!

    ಪಿಎಸ್‍ಐಗೆ ಧಮ್ಕಿ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಸಚಿವರ ಪಿಎ!

    ಬಳ್ಳಾರಿ: ಪಿಎಸ್‍ಐ ಒಬ್ಬರಿಗೆ ಮುಜರಾಯಿ ಸಚಿವರ ಪಿಎ ಅವಾಚ್ಯ ಶಬ್ಧಗಳಿಂದ ನಿಂದಿಸಿ ಧಮ್ಕಿ ಹಾಕಿದ ಘಟನೆ ನಡೆದಿದೆ. ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿಯವರ ಪಿಎ ಸಾಲಿಮಠ, ಕೊಟ್ಟೂರಿನ ಪಿಎಸ್‍ಐ ತಿಮ್ಮಣ್ಣ ಎಂಬವರಿಗೆ ಧಮ್ಕಿ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

    ಕೂಡ್ಲಿಗಿ ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ನಡೆದ ಕೊಟ್ಟೂರಿನ ಗುರುಬಸವೇಶ್ವರ ರಥ ಲೋಕಾರ್ಪಣೆ ಸಮಾರಂಭದಲ್ಲಿ ವೇದಿಕೆ ಹತ್ತುವ ವೇಳೆಯಲ್ಲಿ ಸಚಿವರ ಪಿಎ ಪೊಲೀಸ್ ಅಧಿಕಾರಿಗೆ ನಿಂದನೆ ಮಾಡಿದ್ದಾರೆ. ವೇದಿಕೆಯ ಮೇಲೆ ಸಾಕಷ್ಟು ಅತಿಥಿಗಳಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸಚಿವರ ಪಿಎ ಎಂದು ತಿಳಿಯದೇ ವೇದಿಕೆ ಹತ್ತಲು ಬಿಡಲಿಲ್ಲ. ಈ ವೇಳೆ ಸಚಿವರ ಪಿಎ ಪಿಎಸ್‍ಐ ಗೆ ನಿಂದಿಸಿದರು. ನಂತರ ವೇದಿಕೆ ಬಳಿಯಿದ್ದ ಜನರು ಇಬ್ಬರನ್ನೂ ಸಮಾಧಾನಪಡಿಸಿ ಪಿಎಯನ್ನು ವೇದಿಕೆ ಹತ್ತಿಸಿದ ನಂತರ ಪರಿಸ್ಥಿತಿ ತಿಳಿಗೊಂಡಿತು.

    ಕಳೆದ ವರ್ಷ ರಥೋತ್ಸವದ ವೇಳೆ ಮಗುಚಿ ಬಿದ್ದಿದ್ದ ಕೊಟ್ಟೂರಿನ ಶ್ರೀ ಗುರು ಬಸವೇಶ್ವರ ರಥವನ್ನು ನೂತನವಾಗಿ ರಚಿಸಲಾಗಿದೆ. 2 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಈ ರಥವನ್ನು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಹಾಗೂ ಉಜ್ಜಯಿನಿ ಶ್ರೀ ಸಿದ್ಧಲಿಂಗ ಶಿವಾರ್ಚಾರ್ಯ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿದ್ದಾರೆ.

    ಕೊಟ್ಟೂರಿನಲ್ಲಿ ನೂತನವಾಗಿ ನಿರ್ಮಿಸಿದ ರಥ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟನೆ ಮಾಡಿದ ಗಣ್ಯರು, ವರ್ಷದೊಳಗೆ ನೂತನ ರಥ ನಿರ್ಮಾಣಕ್ಕೆ ನೆರವು ನೀಡಿದ ಸರ್ಕಾರ ಹಾಗೂ ಭಕ್ತರನ್ನು ಸ್ಮರಿಸಿದರು.

       

  • ಚಿನ್ನದ್ದೋ, ಬ್ರಿಟಾನಿಯಾ ಬಿಸ್ಕಟ್ಟೋ ಯಾವುದರ ಬಗ್ಗೆ ನನಗೆ ಗೊತ್ತಿಲ್ಲ: ಆರ್.ವಿ.ದೇಶಪಾಂಡೆ

    ಚಿನ್ನದ್ದೋ, ಬ್ರಿಟಾನಿಯಾ ಬಿಸ್ಕಟ್ಟೋ ಯಾವುದರ ಬಗ್ಗೆ ನನಗೆ ಗೊತ್ತಿಲ್ಲ: ಆರ್.ವಿ.ದೇಶಪಾಂಡೆ

    ಧಾರವಾಡ: ವಿಧಾನಸೌಧ ವಜ್ರಮಹೋತ್ಸವದ ಕಾರ್ಯಕ್ರಮ ಬಹಳ ಸರಳವಾಗಿ ಮಾಡುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಸಹ ಕಾರ್ಯಕ್ರಮದ ಬಜೆಟ್ ಕಡಿಮೆ ಮಾಡಿದ್ದಾರೆ. ವಜ್ರಮಹೋತ್ಸವದಲ್ಲಿ ಚಿನ್ನದ ಬಿಸ್ಕಟ್ ನೀಡುತ್ತಾರೋ ಅಥವಾ ಬ್ರಿಟಾನಿಯಾ ಬಿಸ್ಕಟ್ ನೀಡುತ್ತಾರೋ ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಚಿವ ಆರ್‍ವಿ ದೇಶಪಾಂಡೆ ತಿಳಿಸಿದ್ದಾರೆ.

    ರಾಜ್ಯ ಸರ್ಕಾರ ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ ಹಮ್ಮಿಕೊಂಡಿದೆ. ಈ ಹಿನ್ನೆಲೆ ನಗರದ ಹೊರವಯದಲ್ಲಿರುವ ಕೃಷಿ ವಿವಿ ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಸರ್ಕಾರದ 4 ಜನ ಸಚಿವರು ಇಂದು ಪೂರ್ವಭಾವಿ ಸಿದ್ಧತೆಗಳನ್ನ ಪರಿಶೀಲನೆ ನಡೆಸಿ, ಈ ವೇಳೆ ವಾರ್ತಾ ಇಲಾಖೆಯ ಪ್ರಚಾರ ವಾಹನಕ್ಕೆ ಆರ್ ದೇಶಪಾಂಡೆ, ವಿನಯ್ ಕುಲಕರ್ಣಿ, ಎಚ್‍ಕೆ ಪಾಟೀಲ್ ಹಾಗೂ ರುದ್ರಪ್ಪ ಲಮಾಣಿ ಚಾಲನೆ ನೀಡಿದ್ದಾರೆ.

    ಈ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲರಿಗೂ ಆಮಂತ್ರಣ ನೀಡಿದ್ದೇವೆ. ಇನ್ನು ಕಾರ್ಯಕ್ರಮಕ್ಕೆ ಎಷ್ಟು ವೆಚ್ಚ ಎಂದು ವಿರೋಧ ಪಕ್ಷದ ನಾಯಕರು ಪ್ರಶ್ನಿಸುತ್ತಿದ್ದಾರೆ. ಅವರು ಇಲ್ಲೆ ಬಂದು ನೋಡಿ ಮಾತನಾಡಲಿ ಎಂದು ಹೇಳಿದರು. ಇನ್ನು ಎಲ್ಲ ಪಕ್ಷಗಳು ಚುನಾವಣೆ ದೃಷ್ಟಿ ಇಟ್ಟುಕೊಂಡೇ ಕಾರ್ಯಕ್ರಮ ಮಾಡುತ್ತಾರೆ. ಗುಜರಾತ್ ನಲ್ಲಿ ಅಲ್ಲಿಯ ಸರ್ಕಾರ ಮಾಡಿಲ್ಲವೇ ? ಇನ್ನು ಗುಜರಾತ್ ಸರ್ಕಾರ ರೈತರಿಗೆ 3 ಶೇಕಡಾ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಆದರೆ ನಮ್ಮ ಸರ್ಕಾರ ರೈತರಿಗೆ ಬಡ್ಡಿ 3 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ನೀಡುತ್ತಿದೆ. ಪ್ರಧಾನಿ ಮೋದಿ ಟೀಕೆ ಟಿಪ್ಪಣಿ ಮಾಡ್ತಾರೆ ಅದು ಪ್ರಚಾರವಲ್ಲವೇ ಎಂದು ಪ್ರಶ್ನಿಸಿದರು.