Tag: ಸಚಿವರ

  • ಸಚಿವ ಡಿಕೆಶಿ ಕಾಲಿಗೆ ಬಿದ್ದ ಸಂಸದ ಪ್ರತಾಪ್ ಸಿಂಹ!

    ಸಚಿವ ಡಿಕೆಶಿ ಕಾಲಿಗೆ ಬಿದ್ದ ಸಂಸದ ಪ್ರತಾಪ್ ಸಿಂಹ!

    ಬೆಂಗಳೂರು: ಸಂಸದ ಪ್ರತಾಪ್ ಸಿಂಹ ಅವರು ಸಚಿವ ಡಿಕೆ ಶಿವಕುಮಾರ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಅಚ್ಚರಿ ಮೂಡಿಸಿದ್ದಾರೆ.

    ಹೌದು. ಇಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು 88ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಸಚಿವರು ಸದಾಶಿವನಗರದಲ್ಲಿರುವ ಎಸ್‍ಎಂಕೆ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಡಿಕೆಶಿ ಅವರು ಎಸ್‍ಎಂಕೆ ನಿವಾಸದತ್ತ ಬರುತ್ತಿದ್ದಂತೆಯೇ ಸಂಸದ ಪ್ರತಾಪ್ ಸಿಂಹ, ಶಿವಕುಮಾರ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

    ಡಿಕೆ ಶಿವಕುಮಾರ್ ಅವರು ಹಿರಿಯ ನಾಯಕರು. ಹಿರಿಯರ ಕಾಲಿಗೆ ಅಡ್ಡ ಬಿದ್ದರೆ ತಪ್ಪು ಏನಿಲ್ಲ ಎಂದು ಪ್ರತಾಪ್ ಸಿಂಹರ ಬೆಂಬಲಿಗರು ಹೇಳಿದ್ದರೂ ರಾಜಕೀಯದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

    ಲೋಕಸಭಾ ಚುನಾವಣೆಯ ಸಮಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮೈಸೂರಿನಿಂದ ವಿಜಯ್ ಶಂಕರ್ ಕಣಕ್ಕೆ ಇಳಿದಿದ್ದರು. ಈ ವೇಳೆ ಸಿದ್ದರಾಮಯ್ಯನವರು ಭರ್ಜರಿಯಾಗಿ ಪ್ರಚಾರ ನಡೆಸಿದ್ದರೆ ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಮೈಸೂರಿನತ್ತ ತಲೆ ಹಾಕಿರಲಿಲ್ಲ. ಈ ವಿಚಾರ ಈಗಲೂ ಚರ್ಚೆ ಆಗುತ್ತಿದೆ. ಈ ಚರ್ಚೆಯ ನಡುವೆಯೇ ಪ್ರತಾಪ್ ಸಿಂಹ, ಡಿಕೆಶಿ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಅಚ್ಚರಿಯ ಸಂಗತಿಯಾಗಿದೆ.

  • ಅಂಬೇಡ್ಕರ್ ಗೆಟಪಲ್ಲೇ ಬಂದು ಪ್ರಮಾಣ ವಚನ ಸ್ವೀಕರಿಸಿದ್ರು!

    ಅಂಬೇಡ್ಕರ್ ಗೆಟಪಲ್ಲೇ ಬಂದು ಪ್ರಮಾಣ ವಚನ ಸ್ವೀಕರಿಸಿದ್ರು!

    ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ನೂತನ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಇಂದು ಹಲವು ವಿಶೇಷಗಳು ಕಂಡುಬಂದವು.

    ಜೆಡಿಎಸ್, ಬಿಎಸ್‍ಪಿ ಹಾಗೂ ಕಾಂಗ್ರೆಸ್ ಮೈತ್ರಿ ಹೊಂದಾಣಿಕೆಯಲ್ಲಿ ಕೊಳ್ಳೆಗಾಲದಿಂದ ಆಯ್ಕೆಯಾದ ಎನ್ ಮಹೇಶ್ ಅವರು ಅಂಬೇಡ್ಕರ್ ಗೆಟಪ್ ನಲ್ಲಿ ಬಂದು ಇಂದಿನ ಸಮಾರಂಭದ ಪ್ರಮುಖ ಹೈಲೆಟ್ ಆಗಿದ್ದಾರೆ.

    ಅಂಬೇಡ್ಕರ್ ಗೆಟಪ್ ನಲ್ಲಿ ಬಂದ ಮಹೇಶ್ ಅವರು ಅಂಬೇಡ್ಕರ್ ಮತ್ತ ಬುದ್ಧನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಎಸ್ ಮಹೇಶ್ ಅವರು ಕೊಳ್ಳೆಗಾಲ ಕ್ಷೇತ್ರದ ಬಿಎಸ್‍ಪಿ ಶಾಸಕರಾಗಿದ್ದು, ಇವರಿಗೆ ಸಚಿವರಾಗುವ ಅವಕಾಶ ಸಿಕ್ಕಿತ್ತು. ಹೀಗಾಗಿ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

    ಪ್ರಮಾಣವಚನಕ್ಕೆ ಆಗಮಿಸಿದ ಶಾಸಕ ಮನಗೂಳಿ ಅವರ ಹೊಸ ಬಟ್ಟೆಯನ್ನು ರಾಜಭವನದೊಳಗೆ ಕೊಂಡೊಯ್ಯಲು ಅವರ ಆಪ್ತ ಸಹಾಯಕ ಪರದಾಡಬೇಕಾಯಿತು.

    ಇನ್ನು ಜೆಡಿಎಸ್ ಶಾಸಕ ಸಾ ರಾ ಮಹೇಶ್ ಅವರ ಪತ್ನಿ ಸಮಾರಂಭ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಆದ್ರೆ, ಪೊಲೀಸರು ಸಾರಾ ಮಹೇಶ್ ಪತ್ನಿಯನ್ನು ತಡೆದು ಪ್ರಮಾಣ ವಚನ ಮುಗಿದಿದೆ. ಯಾವುದೇ ಕಾರಣಕ್ಕೂ ನಿಮ್ಮನ್ನು ಒಳಗೆ ಕಳುಹಿಸುವುದಿಲ್ಲ ಎಂದು ರಾಜಭವನ ಪ್ರವೇಶಕ್ಕೆ ನಿರಾಕರಿಸಿದ್ದಾರೆ. ಈ ವೇಳೆ ಪೊಲೀಸರ ಜೊತೆ ಜಟಾಪಟಿ ನಡೆಸಿ, ಸಾರಾ ಮಹೇಶ್ ಪತ್ನಿ ರಾಜಭವನದೊಳಗೆ ಹೋಗುವಲ್ಲಿ ಯಶಸ್ವಿಯಾದ್ರು.

    ಪ್ರಮಾಣವಚನ ಸಮಾರಂಭಕ್ಕೆ ಕೈ ಮತ್ತು ಜೆಡಿಎಸ್ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಶಾಸಕರು ರಾಜಭವನ ಪ್ರವೇಶಿಸಲು ಹರಸಾಹಸಪಡಬೇಕಾಯಿತು. ಕಾರ್ಯಕ್ರಮದ ಅಧಿಕೃತ ಪಾಸ್ ಇದ್ದರೂ ಜೆಡಿಎಸ್ ಶಾಸಕ ಶರವಣ ರಾಜಭವನಕ್ಕೆ ಹೋಗಲು ಒದ್ದಾಡಿದ್ರು.

    ಪ್ರಮಾಣ ವಚನ ಸಮಾರಂಭ ಆರಂಭವಾಗುತ್ತಿದ್ದಂತೆಯೇ ಪೊಲೀಸರು ಪ್ರವೇಶ ಅನುಮತಿ ನಿರಾಕರಿಸಿದ್ದರು. ಈ ವೇಳೆ ಶಾಸಕರ ಬೆಂಬಲಿಗರು ಹಾಗೂ ಕಾರ್ಯಕರ್ತರು ಪೊಲೀಸರ ಜೊತೆ ಮಾತನ ಚಕಮಕಿ ನಡೆಸಿದ್ರು.