ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ (Karnataka Maharshi Valmiki Scheduled Tribe Development Corporation Ltd) ಸಚಿವ ನಾಗೇಂದ್ರ ರಾಜೀನಾಮೆ ಪಡೆಯುವಂತೆ ಸಿಎಂ ಸಿದ್ದರಾಮಯ್ಯರನ್ನ (Siddaramaiah) ಬಿಜೆಪಿ ಆಗ್ರಹ ಮಾಡಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಿಎಂಗೆ ಆಗ್ರಹಿಸಿರುವ ಬಿಜೆಪಿ, ಒಂದು ವೇಳೆ ನಾಗೇಂದ್ರ ರಾಜೀನಾಮೆ ಪಡೆಯದೇ ಹೋದ್ರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆಯನ್ನು ಕೂಡ ನೀಡಿದೆ.
ಸಿಎಂ ಸಿದ್ದರಾಮಯ್ಯ ಅವರೇ, ವಾಲ್ಮೀಕಿ ಸಮುದಾಯಕ್ಕೆ ನಿಮ್ಮ ಸರ್ಕಾರ ಮಾಡಿರುವ ಮಹಾಮೋಸದ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ನಿಮ್ಮಲ್ಲಿ ಅಲ್ಪಸ್ವಲ್ಪವಾದರೂ ನೈತಿಕತೆ ಉಳಿದಿದ್ದರೆ ಇನ್ನಾದರೂ ಸಂಬಂಧಪಟ್ಟ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು.
ತುಮಕೂರು: ಅಯೋಧ್ಯೆಯ (Ayodhya Ram Mandir) ಭಗವಾನ್ ಶ್ರೀ ರಾಮನನ್ನು ಟೂರಿಂಗ್ ಟಾಕೀಸ್ ಗೊಂಬೆ ಎಂದು ಅವಮಾನಿಸಿಯೂ ಸಚಿವ ರಾಜಣ್ಣ (KN Rajanna) ಸಮರ್ಥಿಸಿಕೊಂಡಿದ್ದಾರೆ.
ತುಮಕೂರಿನ (Tumakuru) ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜಣ್ಣ, ನಾನು ರೈತ. ಈ ಹಿಂದೆ ಹೊಲಕ್ಕೆ ಹೋಗುವಾಗ ಹಸುವಿನ ಸಗಣಿ ತೆಗೆದುಕೊಂಡು ಹೋಗುತ್ತಿದ್ದೆ. ಸಗಣಿಯನ್ನೇ ಒಂದು ಮೂರ್ತಿಯನ್ನಾಗಿ ಮಾಡಿ, ಅದಕ್ಕೆ ಗರಿಕೆ ಹುಲ್ಲು ಹಿಟ್ಟು ಪೂಜೆ ಮಾಡ್ತಿದ್ದೆ. ಹಾಗೆಯೇ ಹೊಲದಲ್ಲಿ ಸಿಕ್ಕ ಬೆಣಚು ಕಲ್ಲಿಗೂ ಪೂಜೆ ಮಾಡ್ತಿದ್ವಿ. ಅದು ನಮ್ಮ ನಂಬಿಕೆ. ಬೊಂಬೆಯನ್ನು ದೇವರು ಅಂತ ಹೇಳಿದರೆ ಏನು ತಪ್ಪು. ಬೊಂಬೆಯಲ್ಲಿ ದೈವತ್ವ ಇರುವುದಿಲ್ಲವಾ ಎಂದು ಹೇಳುವ ಮೂಲಕ ಉಲ್ಟಾ ಹೊಡೆದಿದ್ದಾರೆ.
ಬಾಬ್ರಿ ಮಸೀದಿ ಬೀಳಿಸಿದ ಸಂದರ್ಭದಲ್ಲಿ ಟೆಂಟ್ ನಲ್ಲಿ ಎರಡು ಗೊಂಬೆಗಳನ್ನು ಇಟ್ಟು ಇದೇ ಶ್ರೀರಾಮ ಅಂದ್ರು. ಅಲ್ಲಿ ಯಾವುದೇ ಪಾಸಿಟಿವ್ ವೈಬ್ರೇಟ್ ಇರಲಿಲ್ಲ ಅಂತಾ ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಹೇಳಿಯೂ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯವರು ನನ್ನನ್ನ ರಾವಣ ಎಂದಿದ್ದಾರೆ. ನನಗೆ ಬೇಜಾರಿಲ್ಲ, ರಾವಣ ಎಂದು ಅನ್ನಿಸಿಕೊಳ್ಳಲು ನಾನು ಸಿದ್ಧನಿದ್ದೇನೆ ರಾವಣನಂತಹ ದೈವ ಭಕ್ತ ಬೇರೆ ಯಾರೂ ಇರಲಿಲ್ ಎಂದರು. ಇದನ್ನೂ ಓದಿ: ಅಯೋಧ್ಯೆಯ ಬಾಲರಾಮನ ವಿಗ್ರಹದ ವಿಶೇಷತೆ ಏನು..?
ಹಿಂದೆ ಅಣ್ಣ ದೊರೈ ಅವರು ರಾಮಾಯಣಕ್ಕೆ ಬದಲಾಗಿ ರಾವಣಾಯಣ ಅಂತ ನಾಟಕ ಆಡಿದ್ರು. ಈ ನಾಟಕದಲ್ಲಿ ರಾವಣ ಸೀತೆಯ ಮೇಲೆ ಬಲತ್ಕಾರ ಮಾಡುವುದಿಲ್ಲ. ಇದು ರಾವಣನ ದೊಡ್ಡ ಗುಣ ಅಲ್ಲವೇ ಎಂದು ಪ್ರಶ್ನೆ ಮಾಡಿದರು. ನಾನು, ಶ್ರೀರಾಮ ಮತ್ತು ರಾವಣ ಇಬ್ಬರ ಪರನೂ ಇದ್ದೇನೆ. ನನ್ನ ಹೇಳಿಕೆಯನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ. ಈ ಹೇಳಿಕೆಯಿಂದ ನಾನು ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಲಕ್ನೋ: ಉತ್ತರಪ್ರದೇಶದ (Uttarpradesh) ಪಶು ಸಂಗೋಪನಾ ಸಚಿವ ಧರಂಪಾಲ್ ಸಿಂಗ್ ಸೈನಿ (Dharampal Singh Saini ) ಅವರು ರೈಲು ಹತ್ತಲು ತಡವಾಯಿತು ಎಂದು ತಮ್ಮ ಕಾರನ್ನು ನೇರವಾಗಿ ರೈಲ್ವೇ ಪ್ಲಾಟ್‍ಫಾರ್ಮಗೆ ನುಗ್ಗಿಸಿದ ಘಟನೆಯೊಂದು ನಡೆದಿದೆ.
ಸಚಿವರು ತಮ್ಮ ವಿವಿಐಪಿ ಎಸ್‍ಯುವಿ ಕಾರನ್ನು ರೈಲು ನಿಲ್ದಾಣದೊಳಗೆ ಚಲಾಯಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಸಚಿವರ ನಡೆಗೆ ಖಂಡನೆ ವ್ಯಕ್ತವಾಗುತ್ತಿದೆ.
ಸಚಿವರು ಕಾರ್ಯಕ್ರಮವೊಂದರ ನಿಮಿತ್ತ ಲಕ್ನೋದಿಂದ ರೈಲಿನಲ್ಲಿ ಬರೇಲಿಗೆ ಪ್ರಯಾಣ ಬೆಳೆಸಲು ಹೌರಾ ಅಮೃತಸರ ಎಕ್ಸ್ ಪ್ರೆಸ್ ರೈಲನ್ನು ಹಿಡಿಯಬೇಕಿತ್ತು. ಹೀಗಾಗಿ ಅವರು ಚಾರ್‍ಬಾಗ್ ರೈಲು ನಿಲ್ದಾಣದಲ್ಲಿ ಪ್ಲಾಟ್‍ಫಾರ್ಮ್ (Railway Flatform) ಸಂಖ್ಯೆ 4ಕ್ಕೆ ರೈಲು ಆಗಮಿಸುತ್ತದೆ. ಆದರೆ ಅವರು ರೈಲ್ವೇ ಪ್ಲಾಟ್‍ಫಾರ್ಮ್ ಗೆ ಬರೋದು ತಡವಾಗಿತ್ತು. ಈ ಹಿನ್ನೆಲೆಯಲ್ಲಿ ಚಾಲಕ ಕಾರನ್ನು ಅಂಗವಿಕಲರಿಗೆ ಮೀಸಲಿಟ್ಟಿದ್ದ ರ್ಯಾಂಪ್‍ಗೆ ತೆಗೆದುಕೊಂಡು ಹೋಗಿ ಎಸ್ಕಲೇಟರ್ ಮೂಲಕ ನೇರವಾಗಿ ಪ್ಲಾಟ್ ಫಾರ್ಮ್ ಒಳಗೆ ಚಲಾಯಿಸಿದ್ದಾನೆ. ಇದರ ವೀಡಿಯೋ ವೈರಲ್ ಆಗಿದ್ದು, ಈ ರೀತಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಇತ್ತ ವೈರಲ್ ಆದ ವಿಡಿಯೋ ಕುರಿತು ವಿಪಕ್ಷ ನಾಯಕ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿ, ಸಚಿವರು ಪ್ಲಾಟ್ ಫಾರ್ಮ್ ಗೆ ಬುಲ್ಡೋಜರ್ ಕೊಂಡೊಯ್ಯದಿದ್ದಕ್ಕೆ ಜನರು ಅವರಿಗೆ ಕೃತಜ್ಞರಾಗಿರಬೇಕು ಎಂದು ಟೀಕಿಸಿದ್ದಾರೆ. ಇನ್ನು ಘಟನೆಯ ವಿಡಿಯೋವನ್ನು ಕಾಂಗ್ರೆಸ್ ಕೂಡ ಶೇರ್ ಮಾಡಿಕೊಂಡಿದ್ದು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದೆ.
ನನ್ನ ಮನೆಯಲ್ಲೂ ಮೂರ್ನಾಲ್ಕು ಹಸುಗಳಿವೆ. ಈ ಪೈಕಿ ಒಂದು ಹಸು ಸತ್ತಾಗ ಗುಂಡಿ ತೋಡಿ ಹೂಳಲು ತುಂಬಾ ಕಷ್ಟ ಪಡಬೇಕಾಯಿತು. 25 ಮಂದಿ ಬಂದರೂ ಸತ್ತ ಹಸುವಿನ ಮೃತದೇಹ ಎತ್ತಲು ಸಾಧ್ಯವಾಗಲಿಲ್ಲ. ಕೊನೆಗೆ ಜೆಸಿಬಿ ತರಿಸಿ ಮೃತ ಹಸುವನ್ನು ಎತ್ತಿಸಿ ಗುಂಡಿತೋಡಿ ಹೂಳಬೇಕಾಯಿತು. ಹೀಗಾಗಿ ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯಕ್ಕೆ ಅಮುಲ್ ಬಂದಿಲ್ಲ. ಅಮುಲ್ (Amul) ನಿಂದ ನಂದಿನಿಗೆ ತೊಂದರೆ ಆಗಿಲ್ಲ. ಮುಂದಿನ ದಿನಗಳಲ್ಲಿ ಅಮುಲ್ ಬಂದಾಗ ನೋಡೋಣ. ನಂದಿನಿ ಉತ್ಪನ್ನಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳುತ್ತೇವೆ. ಹಸು ದತ್ತು ಯೋಜನೆ ಏನಾಗಿದೆ ಎಂದು ಪರಿಶೀಲಿಸುತ್ತೇವೆ. ಗೋ ಶಾಲೆಗಳ ನಿರ್ವಹಣೆ ಮಾಡಲು ಹಣದ ಕೊರತೆಯಿಲ್ಲ. ಆದರೆ ನಿರ್ವಹಣೆ ಸರಿಯಾಗಿ ಆಗಿಲ್ಲ. ಮುಂದೆ ಎಲ್ಲವನ್ನೂ ಸರಿಪಡಿಸುತ್ತೇವೆ ಎಮದು ಸಚಿವರು ಭರವಸೆ ನೀಡಿದರು.
ಭೋಪಾಲ್: ಮಧ್ಯಪ್ರದೇಶದ (Madhya Pradesh) ಸಚಿವರೊಬ್ಬರು (Minister) ಸಾರ್ವಜನಿಕ ಸಭೆಯೊಂದರಲ್ಲೇ ಕುರ್ತಾ ತೆಗೆದು ಬಾಟಲಿಯ ನೀರಿನಿಂದ ಕೈಗಳನ್ನು ತೊಳೆದುಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಧ್ಯಪ್ರದೇಶದ ಮುಂಗೋಲಿ ಗ್ರಾಮದ ಮೂಲಕ ಬಿಜೆಪಿ ವಿಕಾಸ್ ರಥಯಾತ್ರೆ ವೇಳೆ ಈ ಘಟನೆ ನಡೆದಿದೆ. ಸಾರ್ವಜನಿಕ ಸಭೆಯೊಂದರಲ್ಲಿ ರಾಜ್ಯ ಸಚಿವ ಬ್ರಜೇಂದ್ರ ಸಿಂಗ್ ಯಾದವ್ (Brajendra Singh Yadav) ಮೇಲೆ ಯಾರೋ ತುರುಕೆ ಪುಡಿ ಎರೆಚಿದ್ದಾನೆ. ಈ ವೇಳೆ ತುರಿಕೆ ಎಷ್ಟು ತೀವ್ರವಾಗಿತ್ತೆಂದರೆ ಸಚಿವರು ಕುರ್ತಾ ತೆಗೆದು ಬಾಟಲಿ ನೀರಿನಿಂದ ತೊಳೆಯಬೇಕಾಯಿತು.
ಎರಡು ದಿನಗಳ ಹಿಂದೆ ವಿಕಾಸ ರಥವು ಖಾಂಡ್ವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಂಚರಿಸುತ್ತಿದ್ದಾಗ ಹಾಳಾದ ರಸ್ತೆಯಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಯಾತ್ರೆಯ ನೇತೃತ್ವ ವಹಿಸಿದ್ದ ಸ್ಥಳೀಯ ಬಿಜೆಪಿ ಶಾಸಕ ದೇವೇಂದ್ರ ವರ್ಮಾ ಮತ್ತು ಗ್ರಾಮದ ಮಾಜಿ ಸರಪಂಚ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಪ್ರದೇಶದಲ್ಲಿ ಸರ್ಕಾರವು 3 ಕಿ.ಮೀ ರಸ್ತೆಯನ್ನು ಸಹ ಮಂಜೂರು ಮಾಡಲು ಸಾಧ್ಯವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪೊಲೀಸರು ಅಂತಾ ಹೇಳ್ಕೊಂಡು ಚಿನ್ನದ ಬಿಸ್ಕೆಟ್, ಹಣ ದರೋಡೆ ಮಾಡಿದ್ದ ಆರೋಪಿಗಳು ಅಂದರ್
ನಾವು ಕಾಂಗ್ರೆಸ್ ಅನ್ನು ಕೆಟ್ಟದಾಗಿ ಪರಿಗಣಿಸಿದ್ದೇವೆ. ಆದರೆ ನೀವು (ಬಿಜೆಪಿ) ಕಾಂಗ್ರೆಸ್‍ಗಿಂತ ಕೆಟ್ಟವರು. ನಮಗೆ ಸರಿಯಾದ ರಸ್ತೆಗಳನ್ನು ನೀಡಿ. ಇಲ್ಲದಿದ್ದರೆ ನಾವು ನಿಮಗೆ ಮತ ಹಾಕುವುದಿಲ್ಲ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡ ವೀಡಿಯೋ ವೈರಲ್ ಆಗಿತ್ತು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ಮತ ಹಾಕಬೇಡಿ, ಅದು ನಿಮ್ಮ ಹಕ್ಕು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:ಪ್ರೇಮಿಗಳ ದಿನಾಚರಣೆಗೆ ಹಿಂದೂ ಸಂಘಟನೆಗಳ ಅಡ್ಡಿ ಆತಂಕ – ಬೆಂಗ್ಳೂರು ಪಾರ್ಕ್, ಮಾಲ್‌ಗಳಲ್ಲಿ ಹೈ ಅಲರ್ಟ್
Live Tv
[brid partner=56869869 player=32851 video=960834 autoplay=true]
ವಾಷಿಂಗ್ಟನ್: ಪಾಕಿಸ್ತಾನದ (Pakistan) ನೂತನ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಇಶಾಕ್ ದಾರ್ (Ishaq Dar) ಅವರು ಅಮೆರಿಕಗೆ (America) ಭೇಟಿ ನೀಡಿದ್ದ ಸಂದರ್ಭ ಕೆಲ ಅಪರಿಚಿತ ವ್ಯಕ್ತಿಗಳು ಅವರಿಗೆ ಸುಳ್ಳುಗಾರ, ಕಳ್ಳ ಎಂದು ನಿಂದಿಸಿರುವ ಘಟನೆ ನಡೆದಿದೆ. ಇದರಿಂದ ಸಚಿವರು ಕೂಡಾ ಕಿಡಿಯಾಗಿದ್ದಾರೆ.
ಜಾಗತಿಕ ಸಾಲ ನೀಡುವ ಸಂಸ್ಥೆಗಳೊಂದಿಗೆ ಸಭೆಗಳಲ್ಲಿ ಭಾಗವಹಿಸಲು ಹಾಗೂ ನಗದು ಕೊರತೆ ಮತ್ತು ಪ್ರವಾಹ ಪೀಡಿತ ಪಾಕಿಸ್ತಾನಕ್ಕೆ ಹೆಚ್ಚು ಅಗತ್ಯವಿರುವ ನೆರವು ಪಡೆಯಲು ಇಶಾಕ್ ದಾರ್ ಅವರು ವಾಷಿಂಗ್ಟನ್ ತೆರಳಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ (Airport) ಅವರಿಗೆ ಅವಾಚ್ಯವಾಗಿ ನಿಂದಿಸಿದ ಘಟನೆ ನಡೆದಿದೆ.
ಘಟನೆಯ ವೀಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, ವೀಡಿಯೋದಲ್ಲಿ ಕೆಲ ವ್ಯಕ್ತಿಗಳು ದಾರ್ ಅವರನ್ನು ಚೋರ್ ಚೋರ್ (ಕಳ್ಳ ಕಳ್ಳ) ಎಂದು ಗೇಲಿ ಮಾಡಿರುವುದು ಕಂಡುಬಂದಿದೆ. ಇದರಿಂದ ಕಿಡಿಯಾದ ಸಚಿವರು ಲೇವಡಿ ಮಾಡಿದ ವ್ಯಕ್ತಿಗಳಿಗೆ ಪ್ರತ್ಯುತ್ತರವಾಗಿ, ನೀನು ಸುಳ್ಳುಗಾರ, ಕಳ್ಳ ಎಂದು ಖಾರವಾಗಿ ನುಡಿದಿದ್ದಾರೆ. ಇದನ್ನೂ ಓದಿ: ಜಿನ್‌ಪಿಂಗ್ ವಿರುದ್ಧ ಭುಗಿಲೆದ್ದ ಚೀನಾದ ಜನ – ಅಪರೂಪದಲ್ಲಿ ಕಂಡುಬಂತು ಬ್ಯಾನರ್
72 ವರ್ಷದ ಇಶಾಕ್ ದಾರ್ ಅವರು ಮಿಫ್ತಾ ಇಸ್ಮಾಯಿಲ್ ಅವರ ಬಳಿಕ ಇತ್ತೀಚೆಗೆ ಪಾಕಿಸ್ತಾನದ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡರು. ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವಾರ್ಷಿಕ ಸಭೆಗಳಲ್ಲಿ ಪಾಲ್ಗೊಳ್ಳಲು ಅವರು ಅಮೆರಿಕಗೆ ತೆರಳಿದ್ದರು.
ಲಕ್ನೋ: 2017ರ ಚುನಾವಣೆಯಲ್ಲಿ(Election) ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಉತ್ತರ ಪ್ರದೇಶದ(Uttar Pradesh) ಸಚಿವ ಮಾಯಂಕೇಶ್ವರ್ ಶರಣ್ ಸಿಂಗ್(Mayankeshwar Sharan Singh) ಅವರು ಶನಿವಾರ ಸುಲ್ತಾನ್‌ಪುರದ ನ್ಯಾಯಾಲಯಕ್ಕೆ ಹಾಜರಾಗಿ 500 ರೂ. ದಂಡವನ್ನು ನೀಡಿದ್ದಾರೆ. ಬಳಿಕ ಹೈಕೋರ್ಟ್(High Court) ಅವರ ವಿರುದ್ಧದ ವಿಚಾರಣೆಯನ್ನು ಕೊನೆಗೊಳಿಸಿದೆ.
ತಿಲೋಯ್ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿರುವ ಆರೋಗ್ಯ ಖಾತೆಯ ರಾಜ್ಯ ಸಚಿವ ಶರಣ್ ಸಿಂಗ್ ಅವರು, ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (3) ಸೈಮಾ ಸಿದ್ದಿಕಿ ಜರಾರ್ ಆಲಂ ಅವರ ನ್ಯಾಯಾಲಯಕ್ಕೆ ಹಾಜರಾದರು.
ಶರಣ್ ಸಿಂಗ್ ಅವರು ದಂಡದ ಮೊತ್ತವನ್ನು ಠೇವಣಿ ಮಾಡಿ, ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ಸ್ವೀಕರಿಸಿದ್ದು, ಅವರ ಪ್ರಕರಣದ ವಿಚಾರಣೆಯನ್ನು ಕೊನೆಗೊಳಿಸುವಂತೆ ಆದೇಶ ನೀಡಿದೆ. ಇದನ್ನೂ ಓದಿ: ಎಲಿಜಬೆತ್-II ಅಂತ್ಯಕ್ರಿಯೆ ಹಿನ್ನೆಲೆ ಬ್ರಿಟನ್‍ಗೆ ತೆರಳಿದ ದ್ರೌಪದಿ ಮುರ್ಮು
ಘಟನೆಯೇನು?
2017ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಮೇಥಿ ಜಿಲ್ಲೆಯ ಗೌರಿಗಂಜ್ ಕೊಟ್ವಾಲಿ ಪ್ರದೇಶದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಶರಣ್ ಸಿಂಗ್ ಹಾಗೂ ಅವರ 150 ಅಪರಿಚಿತ ಬೆಂಬಲಿಗರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆಯ ವೇಳೆ ಅವರ ಬೆಂಬಲಿಗರನ್ನು ಪತ್ತೆಹಚ್ಚಲು ಸಾಧ್ಯವಾಗದ ಕಾರಣ ಪೊಲೀಸರು ಶರಣ್ ಸಿಂಗ್ ವಿರುದ್ಧ ಮಾತ್ರವೇ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಇದಾದ ಬಳಿಕ ಹೈಕೋರ್ಟ್ ದಂಡವನ್ನು ಠೇವಣಿ ಮಾಡಿದ ಬಳಿಕ ವಿಚಾರಣೆಯನ್ನು ಕೊನೆಗೊಳಿಸುವಂತೆ ಸಂಬಂಧಪಟ್ಟ ನ್ಯಾಯಾಲಯಕ್ಕೆ ಸೂಚಿಸಿದೆ. ಈ ಆದೇಶಕ್ಕೆ ಅನುಸಾರವಾಗಿ, ಶರಣ್ ಸಿಂಗ್ ಅವರು ಶನಿವಾರ ನ್ಯಾಯಾಲಯಕ್ಕೆ ಹಾಜರಾಗಿ, ಅಲ್ಲಿ 500 ರೂ. ದಂಡವನ್ನು ಠೇವಣಿ ಮಾಡಿದ್ದು, ಬಳಿಕ ಅವರ ವಿರುದ್ಧದ ವಿಚಾರಣೆಯನ್ನು ಕೊನೆಗೊಳಿಸುವಂತೆ ಆದೇಶ ಹೊರಡಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
ಲಕ್ನೋ: ದೇವಾಲಯಗಳ ಬಳಿ ಇರುವ ಮಸೀದಿಗಳನ್ನು (mosques) ಮುಸ್ಲಿಮರು ಸ್ವಯಂಪ್ರೇರಣೆಯಿಂದ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸಚಿವ ಸಂಜಯ್ ನಿಶಾದ್ (Sanjay Nishad) ಹೇಳಿಕೆ ನೀಡಿದ್ದಾರೆ.
ರಾಮ ಮಂದಿರದಂತೆಯೇ (Ram Temple), ಮಸೀದಿಗಳನ್ನು ಸ್ವಯಂಪ್ರೇರಿತವಾಗಿ ಸ್ಥಳಾಂತರಿಸಬೇಕೆಂದು ನಾನು ಬಯಸುತ್ತೇನೆ. ಅಲ್ಲಿ ಯಾವುದೇ ತೊಂದರೆಯಿಲ್ಲದೆ ಮಂದಿರವನ್ನು ನಿರ್ಮಿಸಲಾಗುತ್ತಿದೆ. ಮಸೀದಿಯನ್ನು ಬೇರೆ ಸ್ಥಳದಲ್ಲಿ ನಿರ್ಮಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಯ ಇತರ ಧರ್ಮಗಳು ಅವರು ಎಲ್ಲಿ ಬೇಕಾದರೂ ತಮ್ಮ ಪೂಜಾ ಸ್ಥಳಗಳನ್ನು ನಿರ್ಮಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿ ಜಿಲ್ಲೆಯಲ್ಲಿ 3 ಸ್ಕ್ರ್ಯಾಪಿಂಗ್ ಸೌಲಭ್ಯ : ಗಡ್ಕರಿ
ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಸಚಿವ ನಿಶಾದ್ ಸ್ವಾಗತಿಸಿದ್ದರು. ಭಯೋತ್ಪಾದಕರು ಮತ್ತು ಅಪರಾಧಿಗಳು ಮದರಸಾಗಳೊಂದಿಗೆ ಸಂಪರ್ಕ ಹೊಂದಿರುವುದು ಕಂಡುಬಂದಿದೆ ಎಂದು ಆರೋಪಿಸಿದ್ದರು. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ರಾಜ್ಯವನ್ನು ಗಲಭೆ ಮುಕ್ತಗೊಳಿಸಿದ್ದಾರೆ ಎಂದು ಹೇಳಿದ್ದರು.
ನವದೆಹಲಿ: ಹಬ್ಬ ಹರಿದಿನಗಳಲ್ಲಿ ಮಾಲಿನ್ಯವನ್ನು ತಡೆಗಟ್ಟಲು ಎಲ್ಲಾ ರೀತಿಯ ಪಟಾಕಿ ( Fire Crackers) ಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧವನ್ನು ಜನವರಿ 1 ರವರೆಗೆ ವಿಸ್ತರಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ (Gopal Rai) ಬುಧವಾರ ಘೋಷಿಸಿದ್ದಾರೆ.
दिल्ली में लोगों को प्रदूषण के खतरे से बचाने के लिए पिछले साल की तरह ही इस बार भी सभी तरह के पटाखों के उत्पादन, भंडारण, बिक्री और उपयोग पर पूरी तरह प्रतिबंध लगाया जा रहा है, तांकि लोगों की जिंदगी बचाई जा सके।
ಆನ್‍ಲೈನ್ (Online) ನಲ್ಲಿ ಪಟಾಕಿ ಮಾರಾಟಕ್ಕೂ ನಿಷೇಧವನ್ನು ವಿಸ್ತರಿಸಲಾಗಿದೆ ಎಂದು ರೈ ಟ್ವಿಟ್ ಮಾಡಿದ್ದಾರೆ. ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದ ಜನರ ಜೀವನವನ್ನು ಉಳಿಸಬಹುದು ಎಂದು ಗೋಪಾಲ್ ರೈ ತಿಳಿಸಿದ್ದಾರೆ.
ಕಳೆದ ವರ್ಷ ಕೊರೊನಾ ವೈರಸ್ (Corona Virus) ಮತ್ತು ಹದಗೆಡುತ್ತಿರುವ ಗಾಳಿಯ ಗುಣಮಟ್ಟದಿಂದಾಗಿ ಹಬ್ಬದ ಸೀಸನ್‍ಗೂ ಮುಂಚಿತವಾಗಿ ರಾಷ್ಟ್ರ ರಾಜಧಾನಿಯಲ್ಲಿ “ಗ್ರೀನ್ ಕ್ರ್ಯಾಕರ್ಸ್” ಸೇರಿದಂತೆ ಪಟಾಕಿಗಳನ್ನು ಮಾರಾಟ ಮಾಡುವುದನ್ನು ಮತ್ತು ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ದೆಹಲಿ ಸರ್ಕಾರ ಆದೇಶಿಸಿತ್ತು. ಪಟಾಕಿ ಸಿಡಿಸುವುದರ ವಿರುದ್ಧ ಜಾಗೃತಿ ಮೂಡಿಸಲು ಎಎಪಿ ‘ಪತಾಖೆ ನಹಿ ದಿಯೆ ಜಲಾವೋ’ ಅಭಿಯಾನವನ್ನೂ ಆರಂಭಿಸಿತ್ತು.
Live Tv
[brid partner=56869869 player=32851 video=960834 autoplay=true]
ಬಳ್ಳಾರಿ: ಸಚಿವ ಆನಂದ್ ಸಿಂಗ್ ವಿರುದ್ಧ ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಸೇರಿದಂತೆ ಮಾರೆಪ್ಪಾ ಹಾಗೂ ಹಣಮಂತಪ್ಪ ವಿರುದ್ಧ ಐಪಿಸಿ -504 (ಶಾಂತಿ ಭಂಗ), 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಏನಿದು ಕಿರುಕುಳ..?: ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿರುವ 6ನೇ ವಾರ್ಡಿನಲ್ಲಿರುವ ಸುಣ್ಣದ ಬಟ್ಟೆ ಪ್ರದೇಶದಲ್ಲಿ ಪೊಲಯ್ಯ ಎಂಬ ಕುಟುಂಬ ಹಲವು ವರ್ಷಗಳಿಂದ ವಾಸವಿದೆ. ಆದರೆ ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡಿದ ಸಚಿವರು, ನೀವು ಕಟ್ಟಿರುವ ಮನೆ ಅಕ್ರಮವಾಗಿದೆ. ಇದು ಸರ್ಕಾರಿ ಜಾಗ ಈ ಜಾಗವನ್ನ ನಗರಸಭೆ ವಶಕ್ಕೆ ಪಡೆಯುತ್ತಿದ್ದು, ಈ ಕೂಡಲೇ ಮನೆ ಖಾಲಿ ಮಾಡುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಆನಂದ್ ಸಿಂಗ್ ಹೇಳಿಕೆಯಿಂದ ಮನನೊಂದ ಕುಟುಂಬ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದೆ. ಈ ಹಿಂದೆ ಆನಂದ್ ಸಿಂಗ್ ಜಾಗ ಒತ್ತವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿದ್ದಾರೆ ಎಂದು ಪೊಲಯ್ಯ ಆರೋಪ ಮಾಡಿದ್ದರು. ಅಲ್ಲದೆ ಇದಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಕೂಡ ಬಿಡುಗಡೆ ಮಾಡಿದ್ದರು. ದಾಖಲೆ ಬಿಡುಗಡೆ ಮಾಡಿದಾಗಿನಿಂದ ಆನಂದ್ ಸಿಂಗ್ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲಯ್ಯ ಕುಟುಂಬ ಗಂಭೀರ ಆರೋಪ ಮಾಡಿದೆ.
ಸಚಿವರ ವಿರುದ್ಧ ಆರೋಪ ಮಾಡುತ್ತಿರುವ ಕುಟುಂಬ, ವಿಜಯನಗರ ಎಸ್‍ಪಿ ಕಚೇರಿ ಮುಂದೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದೆ. ಈ ವೇಳೆ ಸ್ಥಳದಲ್ಲೇ ಇದ್ದ ಪೊಲೀಸರು ಕುಟುಂಬವನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಕುಟುಂಬದ ಸದಸ್ಯರನ್ನ ಹೊಸಪೇಟೆ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]