Tag: ಸಚಿನ್ ಮೀನಾ

  • ಸಚಿನ್‌ ಜೊತೆ ಮೊದಲ ಮಗುವಿನ ನಿರೀಕ್ಷೆಯಲ್ಲಿ 4 ಮಕ್ಕಳ ತಾಯಿ ಸೀಮಾ ಹೈದರ್

    ಸಚಿನ್‌ ಜೊತೆ ಮೊದಲ ಮಗುವಿನ ನಿರೀಕ್ಷೆಯಲ್ಲಿ 4 ಮಕ್ಕಳ ತಾಯಿ ಸೀಮಾ ಹೈದರ್

    ನೋಯ್ಡಾ: ಭಾರತದ ಪ್ರಿಯತಮ ಸಚಿನ್‌ ಮೀನಾಗೋಸ್ಕರ (Sachin Meena), ಪಾಕಿಸ್ತಾನದಿಂದ (Pakistan) ಅಕ್ರಮವಾಗಿ ಬಂದಿರುವ ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್ (Seema Haider) ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಳೆ.

    ಸಚಿನ್‌ ಹಾಗೂ ಸೀಮಾ ದಂಪತಿ ಸದ್ಯ ಗ್ರೇಟರ್‌ ನೊಯ್ಡಾದಲ್ಲಿ ವಾಸವಾಗಿದ್ದಾರೆ. ಇದೀಗ ಇವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂಬಂಧ ಸ್ವತಃ ಸೀಮಾ ಹೈದರ್‌ ಬಹಿರಂಗಪಡಿಸಿದ್ದಾಳೆ. ಶೀಘ್ರವೇ ನಾನು ತಾಯಿಯಾಗಲಿದ್ದೇನೆ. ಈ ಮೂಲಕ 2024 ರಲ್ಲಿ ಹೊಸ ಸುದ್ದಿಯನ್ನು ಕೊಡಲಿರುವುದಾಗಿ ತಿಳಿಸಿದ್ದಾಳೆ. ಇನ್ನು ಸಚಿನ್ ತಂದೆ ನನ್ನ ಕೈ ನೋಡಿದ್ದು, ಗಂಡು ಮಗುವಿಗೆ ಜನ್ಮ ನೀಡುವುದಾಗಿ ಭವಿಷ್ಯ ನುಡಿದಿದ್ದಾರೆ ಅಂತಾನೂ ಹೇಳಿದ್ದಾಳೆ.

    ಸಚಿನ್‌ ಹುಟ್ಟುಹಬ್ಬ ಕೂಡ ಹತ್ತಿರವಾಗುತ್ತಿದ್ದು, ಕುಟುಂಬಕ್ಕೆ ಹೊಸ ಸದಸ್ಯರು ಬಂದರೆ ಸಂತಸ ಇಮ್ಮಡಿಗೊಳ್ಳುತ್ತದೆ ಎಂದಿದ್ದಾಳೆ. ಇದೇ ವೇಳೆ ಮಾಧ್ಯಮದವರು ಡೆಲಿವರಿ ಯಾವಾಗ ಎಂದು ಕೇಳಿದಾಗ, ಇನ್ನೂ ಸ್ವಲ್ಪ ದಿನ ಕಾಯಬೇಕಾಗುತ್ತದೆ ಎಂದು ಸೀಮಾ ಹೇಳಿದ್ದಾಳೆ. ಇದನ್ನೂ ಓದಿ: ಇಂಡಿಯಾ- ಪಾಕ್ ಗಡಿ ಸೀಮಾ ಹೈದರ್, ಉದ್ದ 5 ಅಡಿ 6 ಇಂಚು- ಉತ್ತರ ಪತ್ರಿಕೆ ಫುಲ್ ವೈರಲ್

    2019ರಲ್ಲಿ ಆನ್‌ಲೈನ್‌ ಗೇಮ್‌ PUBG ಮೂಲಕ ಸೀಮಾ ಹೈದರ್‌ ಹಾಗೂ ಸಚಿನ್‌ ನಡುವೆ ಸ್ನೇಹ ಬೆಳೆದಿದೆ. ಈ ಸ್ನೇಹ ಪ್ರೀತಿಗೆ ತಿರುಗಿದ್ದು, 2023ರ ಮೇ ತಿಂಗಳಲ್ಲಿ ಸೀಮಾ ತನ್ನ ಪ್ರಿಯತಮ ಸಚಿನ್‌ ನನ್ನು ಹುಡುಕಿಕೊಂಡು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಾಳೆ. ಭಾರತಕ್ಕೂ ಬರುವ ಮುನ್ನ ಸೀಮಾ ಹಾಗೂ ಸಚಿನ್‌ ನೇಪಾಳದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ.

    ಸೀಮಾ ಮತ್ತು ಸಚಿನ್ ಅವರನ್ನು ಪಾಕಿಸ್ತಾನಿ ಗೂಢಚಾರಿಕೆ ಎಂದು ಶಂಕಿಸಿ ಉತ್ತರ ಪ್ರದೇಶ ಪೊಲೀಸರು ಕಳೆದ ವರ್ಷ ಜುಲೈನಲ್ಲಿ ಬಂಧಿಸಿದ್ದರು. ಬಳಿಕ ಕೆಲವೊಂದಷ್ಟು ಷರತ್ತಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು. ಇದಾದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕ್ಷಮಾದಾನ ಮನವಿಯನ್ನು ಸಲ್ಲಿಸಿದ್ದಳು. ಅದರಲ್ಲಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ತನ್ನ ಮಕ್ಕಳೊಂದಿಗೆ ವಾಸಿಸಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಳು.

    ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಿವಾಸಿ ಸೀಮಾ, ಪಾಕ್‌ ಪ್ರಜೆ ಗುಲಾಮ್ ಹೈದರ್ ನನ್ನು ವಿವಾಹವಾಗಿದ್ದಳು. 2019 ರವರೆಗೆ ಕರಾಚಿಯಲ್ಲಿ ವಾಸವಾಗಿದ್ದ ದಂಪತಿ ಬಳಿಕ ಪತಿ ಗುಲಾಮ್ ಕೆಲಸದ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದ್ದಾನೆ. ಈ ದಂಪತಿಗೆ ನಾಲ್ಕು ಜನ ಮಕ್ಕಳಿದ್ದು, ಮೊದಲ ಮಗುವಿನ ವಯಸ್ಸು 8 ವರ್ಷವಾಗಿದೆ. ಇದೀಗ ಸೀಮಾ ಮತ್ತೆ ತನ್ನ ಪ್ರಿಯಕರ ಸಚಿನ್‌ ಜೊತೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಳೆ.

  • ‘ರಾ’ ಏಜೆಂಟ್ ಆಗಿ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ‘ಪಾಕ್ ಪ್ರೇಮಿ’ ಸೀಮಾ

    ‘ರಾ’ ಏಜೆಂಟ್ ಆಗಿ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ‘ಪಾಕ್ ಪ್ರೇಮಿ’ ಸೀಮಾ

    ಭಾರತದಲ್ಲಿರುವ ಪ್ರಿಯತಮನಿಗಾಗಿ ನಾಲ್ಕು ಮಕ್ಕಳೊಂದಿಗೆ ಪಾಕ್ ನಿಂದ ಬಂದಿರುವ ಸೀಮಾ ಹೈದರ್ (Seema Haider) ಇದೀಗ ಬಾಲಿವುಡ್ ಪ್ರವೇಶ ಮಾಡಲು ಮುಂದಾಗಿದ್ದಾರೆ. ಕಷ್ಟದಲ್ಲಿರುವ ಸೀಮಾ ದಂಪತಿಗೆ ನೆರವಾಗಲು ಜಾನಿ ಫೈರ್ ಫಾಕ್ಸ್ ನಿರ್ಮಾಣ ಸಂಸ್ಥೆಯು ಸೀಮಾಗೆ ಪಾತ್ರ ನೀಡಲು ಮುಂದಾಗಿದೆ. ಆ ಸಿನಿಮಾದಲ್ಲಿ ಸೀಮಾಗೆ ರಾ ಏಜೆಂಟ್ ಪಾತ್ರವನ್ನು ನೀಡಲಾಗುತ್ತಿದೆ.

    ಜಾನಿ ಫೈರ್ ಫಾಕ್ಸ್ ನಿರ್ಮಾಣ ಸಂಸ್ಥೆಯಿಂದ ತಯಾರಾಗುತ್ತಿರುವ ‘ಎ ಟೈಲರ್ ಮರ್ಡರ್ ಸ್ಟೋರಿ’ ಚಿತ್ರದಲ್ಲಿ ರಾ ಏಜೆಂಟ್ (Raw Agent) ಪಾತ್ರವಿದ್ದು, ಅದನ್ನು ಸೀಮಾ ಹೈದರ್ ಮಾಡಲಿದ್ದಾರೆ ಎಂದು ನಿರ್ಮಾಪಕ ಅಮಿತ್ ಜಾನಿ ಹೇಳಿಕೊಂಡಿದ್ದಾರೆ. ಈಗಾಗಲೇ ಪ್ರೇಮಿಗಳಾದ ಸಚಿನ್ ಮೀನಾ (Sachin Meena) ಮತ್ತು ಸೀಮಾ ಹೈದರ್ ಅವರನ್ನು ಸಂಪರ್ಕಿಸಿದ್ದಾರೆ. ಇದನ್ನೂ ಓದಿ:ಮಗಳು ಐಶ್ವರ್ಯಾ ಚಿತ್ರಕ್ಕೆ ಅರ್ಜುನ್ ಸರ್ಜಾ ಆ್ಯಕ್ಷನ್ ಕಟ್

    ಸಚಿನ್ ಮತ್ತು ಸೀಮಾ ಅವರನ್ನು ಸಂಪರ್ಕಿಸಲಾಗಿದೆ. ಪಾತ್ರದ ಬಗ್ಗೆಯೂ ವಿವರಿಸಿದ್ದೇವೆ. ಅದೊಂದು ಔಪಚಾರಿಕೆ ಭೇಟಿಯಾಗಿತ್ತು. ಪಾತ್ರದ ಕುರಿತಾಗಿ ಆಡಿಷನ್ ಮಾಡುವಂತೆಯೂ ಹೇಳಲಾಗಿದೆ. ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾದ ಶೂಟಿಂಗ್ ಬಹುತೇಕ ಉತ್ತರ ಪ್ರದೇಶದಲ್ಲಿ ನಡೆಯಲಿದೆ ಎಂದಿದ್ದಾರೆ ನಿರ್ಮಾಪಕರು.

     

    ಸೀಮಾ ಭಾರತಕ್ಕೆ ಬಂದಾಗ ಆಕೆಯನ್ನು ಪಾಕಿಸ್ತಾನದ ಐ.ಎಸ್.ಐ ಏಜೆಂಟ್ ಇರಬಹುದು ಎಂದು ಶಂಕಿಸಲಾಗಿತ್ತು. ಈಗಲೂ ಆ ಕುರಿತು ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬಾಲಿವುಡ್ (Bollywood) ಆಕೆಗೆ ನಟಿಸಲು ಅವಕಾಶ ನೀಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಬಂದ ಮಹಿಳೆ ಸೀಮಾಗೆ ಬಾಲಿವುಡ್ ನಿಂದ ಆಫರ್

    ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಬಂದ ಮಹಿಳೆ ಸೀಮಾಗೆ ಬಾಲಿವುಡ್ ನಿಂದ ಆಫರ್

    ಪಬ್‌ಜಿ (PUBG) ಪ್ರಿಯಕರನಿಗಾಗಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿರುವ ಪಾಕಿಸ್ತಾನಿ (Pakistan) ಮಹಿಳೆ ಸೀಮಾ ಹೈದರ್‌ (Seema Haider) ಮತ್ತು ಪ್ರಿಯಕರ ಸಚಿನ್ ಮೀನಾ (Sachin Meena) ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿದ್ದಾರೆ. ತಮಗೆ ಜೀವನ ಮಾಡುವುದಕ್ಕೆ ಆಗುತ್ತಿಲ್ಲವೆಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇದನ್ನು ಕೇಳಿಸಿಕೊಂಡಿರುವ ಬಾಲಿವುಡ್ (Bollywood) ನಿರ್ಮಾಪಕ ಅಮಿತ್ ಜಾನಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಮತ್ತೋರ್ವ ನಟರು ವಾರ್ಷಿಕ 6 ಲಕ್ಷ ರೂಪಾಯಿ ನೀಡಿ ಕೆಲಸ ಕೊಡುವುದಾಗಿ ಹೇಳಿದ್ದಾರೆ.

    ಸೀಮಾ ಹೈದರ್ ಅಕ್ರಮವಾಗಿ ಪ್ರವೇಶ ಮಾಡಿರುವ ವಿಚಾರ ಭಾರೀ ಸುದ್ದಿ ಮಾಡಿದೆ. ಅವರ ಹಿನ್ನೆಲೆಯನ್ನು ಎಲ್ಲಾ ಮೂಲದಿಂದಲೇ ಪತ್ತೆ ಮಾಡಲಾಗುತ್ತಿದೆ. ಜೊತೆಗೆ ಅವರ ಕಾಂಟ್ಯಾಕ್ಟ್ ನಲ್ಲಿ ಇರುವವರನ್ನೂ ವಿಚಾರಣೆ ಮಾಡಲಾಗುತ್ತಿದೆ. ಈ ಮಧ್ಯೆ ಸೀಮಾ ತಾವು ಭಾರತದಲ್ಲೇ ಉಳಿಯಲು ಅವಕಾಶ ನೀಡುವಂತೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ.

    ತಾನು ಎಂದೂ ಕಾಣದ ಪ್ರೀತಿಯನ್ನು ನನ್ನ ಪತಿ ಸಚಿನ್‌ ಮೀನಾ ಹಾಗೂ ಅವರ ತಂದೆ-ತಾಯಿಯಿಂದ ಕಂಡಿದ್ದೇನೆ. ತನ್ನ ನಾಲ್ವರು ಮಕ್ಕಳೊಂದಿಗೆ ಭಾರತದಲ್ಲೇ ಉಳಿಯಲು ಅವಕಾಶ ನೀಡಬೇಕು ಎಂದು ರಾಷ್ಟ್ರಪತಿ ಅವರಿಂದ ಮೌಖಿಕ ವಿಚಾರಣೆಗೆ ಒತ್ತಾಯಿಸಿದ್ದಾರೆ. ಸೀಮಾ ಹೈದರ್‌ ಪರ ವಕೀಲ ಎ.ಪಿ ಸಿಂಗ್‌ ಸಲ್ಲಿಸಿದ 38 ಪುಟಗಳ ಅರ್ಜಿಯಲ್ಲಿ ಅನೇಕ ಬಾಲಿವುಡ್‌ ನಟ-ನಟಿಯರನ್ನ ಉದಾಹರಣೆಯಾಗಿ ನೀಡಿದ್ದಾರೆ. ಇದನ್ನೂ ಓದಿ:ಈ ನಟಿಯರಿಂದ ರಶ್ಮಿಕಾ, ಪೂಜಾ ಹೆಗ್ಡೆ, ಕೃತಿ ಶೆಟ್ಟಿ ಆಫರ್‌ಗೆ ಬಿತ್ತು ಕತ್ತರಿ

    ಭಾರತದ ಸಂಸ್ಕೃತಿಯ ಉದ್ದೇಶ ವಸುದೈವ ಕುಟುಂಬಕಂ (ಜಗತ್ತು ಒಂದೇ ಕುಟುಂಬ) ಎಂಬಂತೆ ತನ್ನನ್ನು ಗಂಡನ ಮನೆಯಲ್ಲೇ ಉಳಿಯಲು ಅವಕಾಶ ಮಾಡಿಕೊಡಬೇಕು. ಸೀಮಾ ಮದುವೆಯಾಗುವುದಕ್ಕೂ ಮುನ್ನವೇ ಸ್ವಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಅರ್ಜಿದಾರರಿಗೆ ಭಾರತಕ್ಕೆ ಬರಲು ವೀಸಾ ಸಿಕ್ಕಿಲ್ಲದಿದ್ದರಿಂದ ನೇಪಾಳ ವೀಸಾ ತೆಗೆದುಕೊಂಡು ಭಾರತಕ್ಕೆ ಬಂದಿದ್ದಾರೆ. ಇಸ್ಲಾಂ ಧರ್ಮವನ್ನ ತೊರೆದಿದ್ದಾರೆ. ಕಠ್ಮಂಡುವಿನ ಪವಿತ್ರ ದೇವಾಲಯ ಭಗವಾನ್ ಪಶುಪತಿ ನಾಥ ಮಂದಿರದಲ್ಲಿ ಹಿಂದೂ ವಿಧಿ ವಿಧಾನಗಳ ಪ್ರಕಾರ ಸಚಿನ್ ಮೀನಾ ಅವರನ್ನ ವಿವಾಹವಾಗಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

     

    ಪ್ರಸಿದ್ಧ ಗಾಯಕ ಅದ್ನಾನ್‌ ಸಾಮಿ (Adnan Sami) ದೇಶದಲ್ಲಿ ದೀರ್ಘಕಾಲ ನೆಲೆಸಿರುವ ಅವರಿಗೆ ಭಾರತದ ಪೌರತ್ವ ನೀಡಲಾಗಿದೆ. ಬಾಲಿವುಡ್‌ ನಟಿ ಆಲಿಯಾ ಭಟ್‌ (Alia Bhatt) ಭಾರತವು ವಿಶ್ವದ ಇತರ ದೇಶಗಳಂತೆ ದ್ವಿಪೌರತ್ವವನ್ನ ನೀಡದ ಕಾರಣ ಭಾರತದಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಬಾಲಿವುಡ್‌ ಸೂಪರ್‌ ಸ್ಟಾರ್‌ ಅಕ್ಷಯ್‌ ಕುಮಾರ್‌ (Akshay Kumar) ಕೆನಡಾ ಪೌರತ್ವವನ್ನ ಪಡೆದು ಭಾರತಲ್ಲಿ ನೆಲೆಸಿದ್ದಾರೆ. ಆದ್ದರಿಂದ ತಮ್ಮನ್ನೂ ಭಾರತಲ್ಲೇ ಉಳಿಯಲು ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]