Tag: ಸಚಿನ್ ಪೈಲೆಟ್

  • ಸಚಿನ್‌ ಪೈಲೆಟ್‌ಗೆ ರಾಹುಲ್‌ ಆರಂಭದಲ್ಲಿ ಮಾತು ಕೊಟ್ಟಿದ್ದರು, ನಂತರ ಏನಾಯ್ತು? – ವೇಣುಗೋಪಾಲ್‌ಗೆ ಉಲ್ಟಾ ಹೊಡೆದ ಡಿಕೆಶಿ

    ಸಚಿನ್‌ ಪೈಲೆಟ್‌ಗೆ ರಾಹುಲ್‌ ಆರಂಭದಲ್ಲಿ ಮಾತು ಕೊಟ್ಟಿದ್ದರು, ನಂತರ ಏನಾಯ್ತು? – ವೇಣುಗೋಪಾಲ್‌ಗೆ ಉಲ್ಟಾ ಹೊಡೆದ ಡಿಕೆಶಿ

    ಬೆಂಗಳೂರು:”ರಾಜಸ್ಥಾನದಲ್ಲಿ ಸಚಿನ್ ಪೈಲೆಟ್‌ (Sachin Pilot) ಅವರಿಗೆ ರಾಹುಲ್‌ ಗಾಂಧಿಯೇ (Rahul Gandhi) ಮಾತು ಕೊಟ್ಟಿದ್ದರು. ಆ ನಂತರ ಏನಾಯಿತು” ಇದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ಗೆ ಕೇಳಿದ ಖಡಕ್‌ ಪ್ರಶ್ನೆ.

    ಬೆಂಗಳೂರಿನಿಂದ ದೆಹಲಿಗೆ ಹೊರಡುವ ಮುನ್ನ ಡಿಕೆ ಶಿವಕುಮಾರ್‌ ಮನವೊಲಿಕೆಗೆ ಮುಂದಾದ ವೇಣುಗೋಪಾಲ್‌ (K. C. Venugopal) 50:50 ಸೂತ್ರಕ್ಕೆ ಒಪ್ಪುವಂತೆ ಮನವಿ ಮಾಡಿದ್ದಾರೆ. ಈ ಸೂತ್ರಕ್ಕೆ ಒಪ್ಪಿಗೆ ನೀಡಿದರೆ ಇಬ್ಬರಿಗೂ ಅನುಕೂಲ, ಪಕ್ಷಕ್ಕೂ ಒಳ್ಳೆದಾಗುತ್ತದೆ. ಹೈಕಮಾಂಡ್‌ ನೀಡಿದ ಈ ಭರವಸೆಯನ್ನು ನೀವು ಒಪ್ಪಿಕೊಳ್ಳಬೇಕು ಎಂದು ಮನವೊಲಿಸುವ ಪ್ರಯತ್ನ ಮಾಡಿದ್ದರು ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ  ತಿಳಿದು ಬಂದಿದೆ.

    ವೇಣುಗೋಪಾಲ್‌ ಮಾತಿಗೆ, ರಾಜಸ್ಥಾನದಲ್ಲಿ (Rajasthan) ಓಡಾಡಿ ಪಕ್ಷ ಸಂಘಟನೆ ಮಾಡಿ ಪಕ್ಷ ಅಧಿಕಾರಕ್ಕೆ ತರಲು ಸಚಿನ್ ಪೈಲೆಟ್ ಕಾರಣ. ಆದರೆ ಹಿರಿತನ ಬೇರೆ ಬೇರೆ ಕಾರಣ ನೀಡಿ ಅಶೋಕ್‌ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ. ಈಗ ನ್ಯಾಯ ಕೇಳುತ್ತಿರುವ ಸಚಿನ್ ಪೈಲೆಟ್ ಅವರನ್ನು ಪಕ್ಷದಿಂದಲೇ ಹೊರಹಾಕುವ ಸಿದ್ದತೆ ನಡೆದಿದೆ. ನನಗೂ ಆ ರೀತಿ ಆಗುವುದಿಲ್ಲ ಎಂದು ಏನು ಗ್ಯಾರಂಟಿ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನೇ ಸಿಎಂ ಆಗ್ಬೇಕು: ಕೆಎನ್‌ ರಾಜಣ್ಣ ಆಗ್ರಹ

    ರಾಹುಲ್ ಗಾಂಧಿಯವರೇ ಮಾತು ಕೊಟ್ಟು ಸಚಿನ್ ಪೈಲೆಟ್‌ ಅವರಿಗೆ ಈ ಸ್ಥಿತಿ ಬಂದಿದೆ. ಇನ್ನು ನನಗೆ ಎರಡೂವರೆ ವರ್ಷದ ನಂತರ ಏನಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಮೊದಲು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ. ಇದಾದ ಬಳಿಕ ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ನೇಮಿಸಲಿ ಎಂದು ವೇಣುಗೋಪಾಲ್‌ ಮಾತಿಗೆ ಡಿಕೆಶಿ ಉಲ್ಟಾ ಹೊಡೆದಿದ್ದಾರೆ. ಡಿಕೆಶಿ ವರಸೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಅಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದು ಹೇಳಿ ವೇಣುಗೋಪಾಲ್‌ ಸುಮ್ಮನಾಗಿದ್ದಾರೆ.

    ರಾಜಸ್ಥಾನದಲ್ಲಿ ಆಗಿದ್ದು ಏನು?
    2018ರ ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಜಯಗಳಿಸಿತ್ತು. ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲೆಟ್‌ ಇಬ್ಬರೂ ಸಿಎಂ ಪಟ್ಟಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಹೈಕಮಾಂಡ್‌ ಅಶೋಕ್‌ ಗೆಹ್ಲೋಟ್‌ ಅವರಿಗೆ ಸಿಎಂ ಸ್ಥಾನ ನೀಡಿತ್ತು. ಈ ವಿಚಾರಕ್ಕೆ ಆರಂಭದಲ್ಲೇ ಬಂಡಾಯ ಎದ್ದಿದ್ದ ಸಚಿನ್‌ ಪೈಲೆಟ್‌ ನಂತರ ಅವರ ಆಪ್ತರಿಗೆ ಮಂತ್ರಿ ಸ್ಥಾನ ನೀಡಿ ಸಮಾಧಾನ ಮಾಡಲಾಗಿತ್ತು. ಈಗ ಇಬ್ಬರ ನಡುವಿನ ತಿಕ್ಕಾಟ ಜೋರಾಗಿದ್ದು  ಬಿಜೆಪಿ ಸಿಎಂ ವಸುಂಧರ ರಾಜೇ ವಿರುದ್ಧ ಭ್ರಷ್ಟಾಚಾರ ಆರೋಪದ ತನಿಖೆ ನಡೆಸದ್ದಕ್ಕೆ ಸಿಟ್ಟಾಗಿ ಸಚಿನ್‌ ಪೈಲಟ್‌  5 ದಿನ ಯಾತ್ರೆ ನಡೆಸಿ ಗೆಹ್ಲೋಟ್‌ ಸರ್ಕಾರದ ವಿರುದ್ಧ  ಕಿಡಿ ಕಾರಿದ್ದರು. ಈಗ 5 ದಿನದ ಯಾತ್ರೆ ನಡೆಸಿದ್ದೇನೆ ತನಿಖೆ ನಡೆಸದೇ ಇದ್ದರೆ ಸರ್ಕಾರ ವಿರುದ್ಧ ರಾಜ್ಯಾಂದತ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

  • ಗೆಹ್ಲೋಟ್ ವಿರುದ್ಧವೇ ಸಚಿನ್ ಪೈಲೆಟ್ ಜನಸಂಘರ್ಷ ಯಾತ್ರೆ

    ಗೆಹ್ಲೋಟ್ ವಿರುದ್ಧವೇ ಸಚಿನ್ ಪೈಲೆಟ್ ಜನಸಂಘರ್ಷ ಯಾತ್ರೆ

    ಜೈಪುರ: ರಾಜಸ್ಥಾನ (Rajasthan) ಕಾಂಗ್ರೆಸ್‌ನಲ್ಲಿ (Congress) ಮಹತ್ವದ ಬೆಳವಣಿಗೆಯೊಂದು ಕಂಡುಬಂದಿದ್ದು, ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ವಿರುದ್ಧ ಬಂಡಾಯವೆದ್ದಿರುವ ಸಚಿನ್ ಪೈಲೆಟ್ (Sachin Pilot) ಇದೀಗ ಭ್ರಷ್ಟಾಚಾರ, ಪ್ರಶ್ನೆ ಪತ್ರಿಕೆ ಲೀಕ್‌ನಂತಹ ಅಂಶಗಳನ್ನು ಮುಂದಿಟ್ಟುಕೊಂಡು ಜನಸಂಘರ್ಷ (Janasangarsha) ಯಾತ್ರೆ ಶುರು ಮಾಡಿದ್ದಾರೆ.

    ಗುರುವಾರ ಈ ಯಾತ್ರೆಯನ್ನು ಕೈಗೊಂಡಿದ್ದು, ಅಜ್ಮೀರ್‌ನಿಂದ (Ajmer) ಜೈಪುರದವರೆಗೂ (Jaipur) ಪಾದಯಾತ್ರೆ ಮಾಡಲಿದ್ದಾರೆ. ಸಚಿನ್ ಪೈಲೆಟ್ ಕೈಗೊಂಡಿರುವ ಈ ಯಾತ್ರೆಯು 2 ದಿನಗಳನ್ನು ಪೂರೈಸಿದೆ. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ಎರಡು ವರ್ಷಗಳಿಂದ ಸಾರ್ವಜನಿಕವಾಗಿ ಕಿತ್ತಾಟ ನಡೆಸುತ್ತಿದ್ದು, ಇದೀಗ ಪೈಲೆಟ್ ಜನಸಂಘರ್ಷ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಶಿವಲಿಂಗದ ವೈಜ್ಞಾನಿಕ ಸಮೀಕ್ಷೆ ನಡೆಸಲು ಹೈಕೋರ್ಟ್ ಆದೇಶ

    2020ರಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗಾಗಿ ಸಚಿನ್ ಪೈಲೆಟ್ ಬಂಡಾಯ ಎಬ್ಬಿಸಿದ್ದರು. ಆದರೆ ಅಶೋಕ್ ಗೆಹ್ಲೋಟ್ ತಮ್ಮ ನಾಯಕತ್ವವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೇ ಸಚಿನ್ ಪೈಲೆಟ್ ಸೇರಿದಂತೆ ಕೆಲವು ನಿಷ್ಠಾವಂತ ನಾಯಕರನ್ನು ರಾಜ್ಯ ಸಚಿವ ಸಂಪುಟದಿಂದ ಹೊರಹಾಕಲಾಯಿತು. ಇದನ್ನೂ ಓದಿ: ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸಿಬಿಐನಿಂದ ಭ್ರಷ್ಟಾಚಾರ ಕೇಸ್ ದಾಖಲು

    ಅಜ್ಮೀರದಿಂದ ಜೈಪುರದವರೆಗೂ ನಡೆಯುವ ಈ ಪಾದಯಾತ್ರೆಯಲ್ಲಿ ಸಚಿನ್ ಪೈಲೆಟ್ ಐದು ದಿನಗಳಲ್ಲಿ 125 ಕೀ.ಮೀ ಪ್ರಯಾಣಿಸಲಿದ್ದಾರೆ ಎನ್ನಲಾಗುತ್ತಿದೆ. ನಾನು ಜನರಿಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದ ಸಚಿನ್ ಪೈಲೆಟ್ ರಾಜಸ್ಥಾನ ಲೋಕಸೇವಾ ಆಯೋಗದ ಸ್ವರೂಪವನ್ನು ಬದಲಾವಣೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ವಿರುದ್ಧದ ಕಿರುಕುಳ ಆರೋಪ – ತನಿಖೆಗೆ ಎಸ್‍ಐಟಿ ರಚನೆ

    ಮುಂದಿನ ಮೂರು ದಿನಗಳಲ್ಲಿ ಪೈಲೆಟ್ ಯಾತ್ರೆ ಜೈಪುರ ತಲುಪಲಿದ್ದು, ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬೆಳವಣಿಗೆ ಹೈಕಮಾಂಡ್‌ಗೆ (High Command) ತಲೆಬಿಸಿ ತಂದಿದ್ದು, ದೆಹಲಿಯಲ್ಲಿ ನಾಯಕರು ಸಭೆ ಸೇರಿ ಚರ್ಚೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಹಿಂಡು ಹಿಂಡಾಗಿ ಹಸುಗಳು – ಭಾರತದ ಭೇಟಿ ಮರೆಯಲಾಗದ ನೆನಪು ಎಂದ ಇಸ್ರೇಲ್ ಅಧಿಕಾರಿ

  • ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಬಳಿ ಶಾಶ್ವತವಾಗಿ ಇರಿಸಲಾಗಿದೆ: ರಾಜಸ್ಥಾನ ಸಿಎಂ

    ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಬಳಿ ಶಾಶ್ವತವಾಗಿ ಇರಿಸಲಾಗಿದೆ: ರಾಜಸ್ಥಾನ ಸಿಎಂ

    ಜೈಪುರ: ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಳಿ ಶಾಶ್ವತವಾಗಿ ಇರಿಸಲಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜೀನಾಮೆ ಶಾಶ್ವತವಾಗಿ ಸೋನಿಯಾ ಗಾಂಧಿಯವರ ಬಳಿ ಇದೆ. ಹೈಕಮಾಂಡ್ ಮುಖ್ಯಮಂತ್ರಿಯನ್ನು ಬದಲಾಯಿಸಲು ನಿರ್ಧರಿಸಿದಾಗ ಯಾರಿಗೂ ಸುಳಿವು ಸಿಗುವುದಿಲ್ಲ. ಜೊತೆಗೆ ಈ ಬಗ್ಗೆ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದರು.

    ಕಾಂಗ್ರೆಸ್ ಹೈಕಮಾಂಡ್‍ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿದೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಗೂ ಮುನ್ನ ಕಾಂಗ್ರೆಸ್ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂಬ ವದಂತಿಗಳಿಗೆ ಗಮನ ಕೊಡಬೇಡಿ. ಇದರಿಂದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಮನವಿ ಮಾಡಿದರು.

    ಕಳೆದ 2-3 ದಿನಗಳಿಂದ ರಾಜಸ್ಥಾನದ ಮುಖ್ಯಮಂತ್ರಿಯನ್ನು ಬದಲಾಯಿಸುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಈ ರೀತಿ ಊಹಾಪೋಹಗಳು ಹರಿದಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಗಲಭೆಯನ್ನು ನಿಯಂತ್ರಿಸುವಲ್ಲಿ ಅಮಿತ್ ಶಾ ಸಂಪೂರ್ಣ ವಿಫಲ: ಶರದ್ ಪವಾರ್

    ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ನಂತರ ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕತ್ವದ ಬದಲಾವಣೆ ಆಗಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇದನ್ನೂ ಓದಿ: ಮುಸ್ಲಿಮರನ್ನು ಕಂಡಾಕ್ಷಣ ಪಾಕಿಸ್ತಾನದವರು, ಉಗ್ರಗಾಮಿಗಳು ಎನ್ನುವುದು ಸರಿಯಲ್ಲ: ಮಾಜಿ‌ ಸಚಿವ ಈಶ್ವರಪ್ಪ

  • ಬಿಜೆಪಿ ಅಧಿಕಾರದಿಂದ ದೇಶದಲ್ಲಿ ಆಕ್ರಮಣಕಾರಿ ರಾಜಕೀಯ: ಸಚಿನ್ ಪೈಲಟ್

    ಬಿಜೆಪಿ ಅಧಿಕಾರದಿಂದ ದೇಶದಲ್ಲಿ ಆಕ್ರಮಣಕಾರಿ ರಾಜಕೀಯ: ಸಚಿನ್ ಪೈಲಟ್

    ಜೈಪುರ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿ ಆಕ್ರಮಣಕಾರಿ ರಾಜಕೀಯ ಪ್ರಾರಂಭವಾಗಿದೆ ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ವಾಗ್ದಾಳಿ ನಡೆಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವವು ವಿಭಿನ್ನ ವಿಚಾರಧಾರೆಗಳು ಮತ್ತು ಚಿಂತನೆಯ ಜನರು ತಮ್ಮದೇ ಆದ ಮಾತುಗಳನ್ನು ಮಾತನಾಡುವ ವೇದಿಕೆಯಾಗಿದೆ. ಇಲ್ಲಿ ಯಾರು ಸರಿ ಮತ್ತು ಯಾರು ತಪ್ಪು ಎಂದು ಸಾರ್ವಜನಿಕರು ನಿರ್ಧರಿಸುತ್ತಾರೆ ಎಂದರು.

    ನಾವು ಪರಸ್ಪರ ವಿರೋಧಿಸುವುದು ಆರೋಗ್ಯಕರ ಸಂಪ್ರದಾಯವಾಗಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ನಾವು ಸುಸಂಸ್ಕೃತ ಭಾಷೆಯನ್ನು ಬಳಸಬೇಕು ಮತ್ತು ರಾಜಕೀಯದಲ್ಲಿ ಹಿಂಸೆಗೆ ಯಾವುದೇ ಸ್ಥಾನವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೇಸರಿ ಪೇಟ, ಕೇಸರಿ ಶಾಲಿನೊಂದಿಗೆ ಕಾಲೇಜಿಗೆ ಬಂದ ಎಂಜಿಎಂ ವಿದ್ಯಾರ್ಥಿಗಳು!

    ರಾಜಸ್ಥಾನದಲ್ಲಿ ಬಾಕಿ ಉಳಿದಿರುವ ರಾಜಕೀಯ ನೇಮಕಾತಿಗಳ ಕುರಿತು ಮಾತನಾಡಿದ ಅವರು, ಎಲ್ಲರಿಗೂ ಮಂತ್ರಿ ಅಥವಾ ಇತರ ದೊಡ್ಡ ಹುದ್ದೆಯನ್ನು ನೀಡಲಾಗುವುದಿಲ್ಲ. ಆದರೆ ಸರ್ಕಾರದಲ್ಲಿ ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬಡವರಿಗೆ ಸಹಾಯ ಮಾಡಬಾರದೇ?- ಮೋದಿಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

    ಇತ್ತೀಚೆಗಿನ ಎರಡು-ಮೂರು ತಿಂಗಳಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಸರಿಯಾದ ದಿಕ್ಕಿನಲ್ಲಿ ಕೆಲವು ಹೆಜ್ಜೆಗಳನ್ನು ಇಟ್ಟಿದ್ದು, 2023ರಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ಮತ್ತೆ ಕಾಂಗ್ರೆಸ್ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದರು.

  • ಸಚಿನ್ ಪೈಲಟ್ ಕುರಿತ ರಾಹುಲ್ ಹೇಳಿಕೆಗೆ ಕಾಂಗ್ರೆಸ್‍ನಲ್ಲಿ ಭಾರೀ ವಿರೋಧ

    ಸಚಿನ್ ಪೈಲಟ್ ಕುರಿತ ರಾಹುಲ್ ಹೇಳಿಕೆಗೆ ಕಾಂಗ್ರೆಸ್‍ನಲ್ಲಿ ಭಾರೀ ವಿರೋಧ

    ನವದೆಹಲಿ: ಸಚಿನ್ ಪೈಲಟ್ ಉದ್ದೇಶಿಸಿ ಹೇಳಿದ್ದಾರೆನ್ನಲಾದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

    ರಾಹುಲ್ ಗಾಂಧಿಯವರು ಪಕ್ಷದ ಯುವ ವಿಭಾಗ ಎನ್‍ಎಸ್‍ಯುಐನ ಸಭೆಯಲ್ಲಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಜನ ಪಕ್ಷ ಬಿಡುವುದರಿಂದ ಯುವಕರ ರಾಜಕೀಯ ಪ್ರವೇಶಕ್ಕೆ ಬಾಗಿಲು ತೆರೆದಂತಾಗುತ್ತದೆ ಎಂದಿದ್ದಾರಂತೆ. ರಾಹುಲ್ ಗಾಂಧಿಯವರು ಸಚಿನ್ ಪೈಲಟ್ ಅವರ ಹೆಸರನ್ನು ಉಲ್ಲೇಖಿಸದೆ ಈ ಹೇಳಿಕೆ ನೀಡಿದ್ದು, ಯಾರಾದರೂ ಪಕ್ಷ ಬಿಡಲು ಇಚ್ಚಿಸಿದರೆ ಬಿಡಲಿ. ಇದರಿಂದಾಗಿ ನಿಮ್ಮಂಥ ಯುವಕರಿಗೆ ಬಾಗಿಲು ತೆರೆದಂತಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

    ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರತಿಕ್ರಿಯೆ ನೀಡಿದ್ದು, ಈ ಪ್ರಸಂಗದ ವಾಸ್ತವತೆ ತಪ್ಪಾಗಿದೆ ಎಂದು ತಿಳಿಸಿದ್ದಾರೆ.

    ಪೈಲಟ್ ಅವರನ್ನು ಇತ್ತೀಚೆಗೆ ರಾಜಸ್ಥಾನದ ಉಪಮುಖ್ಯಮಂತ್ರಿ ಸ್ಥಾನದಿಂದ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ. ಇದಾದ ಬಳಿಕ ಬಿಜೆಪಿ ಸೇರಲಿದ್ದಾರೆ ಎಂಬ ಕುರಿತು ಸಹ ಚರ್ಚೆ ನಡೆದಿತ್ತು. ಆದರೆ ಇದೀಗ ಸ್ವತಃ ಸಚಿನ್ ಪೈಲಟ್ ಪ್ರತಿಕ್ರಿಯೆ ನೀಡಿ, ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಾದ ಬೆನ್ನಲ್ಲೇ ಇಂದು ರಾಜಸ್ಥಾನದ ಪ್ರಬಲ ನಾಯಕ ಪೈಲಟ್ ಅವರನ್ನು ಕಾಂಗ್ರೆಸ್ ಮರಳಿ ಕರೆ ತರುವ ಪ್ರಯತ್ನವನ್ನು ನಡೆಸಿದೆ.

    ಬೆಳವಣಿಗೆ ಕುರಿತು ಇಂದು ಸುರ್ಜೇವಾಲಾ ಅವರು ಪ್ರತಿಕ್ರಿಯಿಸಿ, ಸಚಿನ್ ಪೈಲಟ್ ಅವರಿಗೆ ಬಿಜೆಪಿ ಸೇರುವುದು ಇಷ್ಟವಿಲ್ಲವಾದಲ್ಲಿ ಹರಿಯಾಣದಲ್ಲಿ ಆ ಪಕ್ಷದ ಆತಿಥ್ಯ ಸ್ವೀಕರಿಸುವುದನ್ನು ನಿಲ್ಲಿಸಲಿ. ರಾಜಸ್ಥಾನದಲ್ಲಿನ ತಮ್ಮ ಮನೆ ಹಾಗೂ ಕುಟುಂಬವನ್ನು ಸೇರಲಿ ಎಂದು ತಿಳಿಸಿದ್ದಾರೆ.

    ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಮಾಜಿ ಡಿಸಿಎಂ ಸಚಿನ್ ಪೈಲಟ್, ತಾನು ಈಗಲೂ ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದು, ಬಿಜೆಪಿ ಪಕ್ಷ ಸೇರ್ಪಡೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಅಸಮಾಧಾನ ಹೊಂದಿರುವ ಸಚಿನ್, ಬಿಜೆಪಿ ಸೇರ್ಪಡೆಯಾಗುತ್ತಾರಾ? ಅವರ ಮುಂದಿನ ನಡೆ ಏನು? ಎಂಬ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.

    ಇದೇ ವೇಳೆ ರಾಷ್ಟ್ರೀಯ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿರುವ ಪೈಲಟ್, ತಾವು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ನಾನು ಬಿಜೆಪಿ ಪಕ್ಷಕ್ಕೆ ಸೋಲುಣಿಸಲು ಕಾರ್ಯನಿರ್ವಹಿಸಿದ್ದೆ. ಅಂತಹ ಪಕ್ಷಕ್ಕೆ ಏಕೆ ಸೇರ್ಪಡೆಯಾಗುತ್ತೇನೆ? ಈಗಲೂ ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಕೆಲವರು ಬಿಜೆಪಿ ಸೇರುತ್ತಿರುವ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಪಕ್ಷದ ವರಿಷ್ಠರಿಗೆ ನನ್ನ ಮೇಲಿನ ನಂಬಿಕೆ ಕಡಿಮೆ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಪೈಲಟ್ ತಿಳಿಸಿದ್ದಾರೆ.