Tag: ಸಚಿನ್‌ ಪಾಂಚಾಳ ಕೇಸ್‌

  • ಸಚಿನ್ ಆತ್ಮಹತ್ಯೆ ಕೇಸ್ – ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದವರ ಪೈಕಿ ನಾಲ್ವರು ನಾಪತ್ತೆ

    ಸಚಿನ್ ಆತ್ಮಹತ್ಯೆ ಕೇಸ್ – ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದವರ ಪೈಕಿ ನಾಲ್ವರು ನಾಪತ್ತೆ

    ಬೀದರ್: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ (Sachin Sucide Case) ಸಂಬಂಧಿಸಿದಂತೆ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದ 9 ಜನರ ಪೈಕಿ ನಾಲ್ವರು ನಾಪತ್ತೆಯಾಗಿದ್ದಾರೆ.

    ಈಗಾಗಲೇ ರಾಜು ಕಪನೂರು (Raju Kapnoor) ಸೇರಿದಂತೆ ಘೋರ್ಕನಾಥ್ ಸಜ್ಜನ್, ಆರ್‌ಕೆ ಪಾಟೀಲ್, ನಂದಕುಮಾರ ನಾಗಭುಜಂಗೆ, ಸತೀಶ್ ರತ್ನಾಕರ್ ಎಂಬ ಐವರನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಧೀಶರ ಆದೇಶದಂತೆ ಸದ್ಯ ಐವರು ಸಿಐಡಿ ಕಸ್ಟಡಿಯಲ್ಲಿದ್ದು, ರಾಜು ಕಪನೂರು ಗ್ಯಾಂಗ್‌ನ್ನು ತೀವ್ರ ವಿಚಾರಣೆ ಮಾಡಲಾಗುತ್ತಿದೆ.ಇದನ್ನೂ ಓದಿ: ಆಸ್ತಿಗಾಗಿ ತಂದೆ, ತಾಯಿಯನ್ನು ಹತ್ಯೆಗೈದಿದ್ದ ಪಾಪಿ ಪುತ್ರ ಅರೆಸ್ಟ್

    ಸಿಐಡಿ ತಂಡ ಇಂದು ಬಂಧಿತ ಐವರನ್ನು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ್ದು, ಮಾಧ್ಯಮದವರಿಗೂ ಯಾವುದೇ ಮಾಹಿತಿ ಸಿಗದಂತೆ ವಿಚಾರಣೆ ನಡೆಸಿದ್ದಾರೆ. ಇನ್ನೂ ಹೆಚ್ಚಿನ ವಿಚಾರಣೆಗಾಗಿ ಇಂದು ಅಥವಾ ನಾಳೆ ರಾಜು ಕಪನೂರು ಆ್ಯಂಡ್ ಗ್ಯಾಂಗ್‌ನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ಸಾಧ್ಯತೆಯಿದೆ.

    ವಿಚಾರಣೆಗೆ ಹಾಜರಾಗುವಂತೆ ರೌಡಿಶೀಟರ್ ಪ್ರತಾಪ್ ದೀರ್ ಪಾಟೀಲ್, ಮನೋಜ್ ಸೆರ್ಜಿವಾಲ್, ವಿಕಾಶ್ ಹೆಚ್.ಎಂ, ವಿನಯ್ ಟಿಪಿ ನಾಲ್ವರಿಗೂ ಕೂಡ ಸಿಐಡಿ ನೋಟಿಸ್ ನೀಡಿತ್ತು. ಆದರೆ ವಿಚಾರಣೆಗೆ ಹಾಜರಾಗದೆ ನಾಪತ್ತೆಯಾಗಿರುವ ಹಿನ್ನೆಲೆ ನಾಲ್ವರನ್ನು ಪತ್ತೆಹಚ್ಚುವಲ್ಲಿ ಸಿಐಡಿ ಅಧಿಕಾರಿಗಳು ನಿರತರಾಗಿದ್ದು, ಮಹಾರಾಷ್ಟ್ರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ.ಇದನ್ನೂ ಓದಿ: ಕಾರವಾರ | ಕಾರ್ಖಾನೆಯಲ್ಲಿ ಕ್ಲೋರಿನ್ ಸೋರಿಕೆ – 18 ಕಾರ್ಮಿಕರು ಅಸ್ವಸ್ಥ