Tag: ಸಚಿನ್‌ ಧನ್‌ಪಾಲ್‌

  • ಮತ್ತೆ ಕನ್ನಡದ ಹಾಡಿಗೆ ಸೊಂಟ ಬಳುಕಿಸಿದ ಡಿಂಗರ್ ಬಿಲ್ಲಿ ಸನ್ನಿ

    ಮತ್ತೆ ಕನ್ನಡದ ಹಾಡಿಗೆ ಸೊಂಟ ಬಳುಕಿಸಿದ ಡಿಂಗರ್ ಬಿಲ್ಲಿ ಸನ್ನಿ

    ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ಈಗಾಗಲೇ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಸೊಂಟ ಬಳುಕಿಸಿದ್ದಾರೆ. ಇದೀಗ `ಡಿಂಗರ್ ಬಿಲ್ಲಿ’ಯಾಗಿ ಕನ್ನಡದ ಹಾಡಿಗೆ ಸೇಸಮ್ಮ ಭರ್ಜರಿ ಸ್ಟೆಪ್ ಹಾಕಿದ್ದಾರೆ.

    ಶಿವಾನಂದ್ ಎಸ್‌ ನಿರ್ಮಾಣದ `ಚಾಂಪಿಯನ್’ ಸಿನಿಮಾದ ಸ್ಪೆಷಲ್ ಹಾಡಿಗೆ ಡಿಂಗರ್ ಬಿಲ್ಲಿಯಾಗಿ ಸನ್ನಿ ಮೋಡಿ ಮಾಡಿದ್ದಾರೆ. `ಡಿಂಗರ್ ಬಿಲ್ಲಿ ಆರು ಮೊಳದ ಸ್ಯಾರಿ ಉಟ್ಟಿದ್ದಿ’ ಶಿವು ಬೇರ್ಗಿ ಬರೆದಿರುವ ಸಾಹಿತ್ಯಕ್ಕೆ ಸನ್ನಿ ಜಬರ್‌ದಸ್ತ್ ಆಗಿ ಕುಣಿದಿದ್ದಾರೆ. ಇನ್ನು ಈ ಹಾಡಿನ ಬಿಡುಗಡೆಗಾಗಿ ಬೆಂಗಳೂರಿಗೆ ಸನ್ನಿ ಲಿಯೋನ್ ಬಂದಿದ್ದರು.

    ಶಿವರಾಜ್ ಶಿಂಧೆ ನಿರ್ದೇಶನದ `ಚಾಂಪಿಯನ್’ ಚಿತ್ರದಲ್ಲಿ ನಾಯಕ ಸಚಿನ್ ಧನಪಾಲ್‌ಗೆ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಚಾಂಪಿಯನ್ ಎಂಬ ಭಿನ್ನ ಸಿನಿಮಾ ಕಥೆಯಲ್ಲಿ ಸನ್ನಿ ಲಿಯೋನ್ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿಮಾಗೆ ಮತ್ತಷ್ಟು ಮೆರುಗು ಹೆಚ್ಚಿಸಿದ್ದಾರೆ. ಇದನ್ನೂ ಓದಿ: ಡಾಕ್ಟರ್‌ಗೆ ಡಿಗ್ರಿ ಕೊಟ್ಟವರು ಯಾರು – ಚೇತನಾ ರಾಜ್ ಸಾವಿಗೆ ಮರುಕ ವ್ಯಕ್ತಪಡಿಸಿದ ರಾಖಿ

    ಈಗಾಗಲೇ ಕನ್ನಡದ ಲವ್ ಯೂ ಆಲಿಯಾ, ಡಿಕೆ ಸಿನಿಮಾದಲ್ಲಿ ಸನ್ನಿ ಸೊಂಟ ಬಳುಕಿಸಿದ್ದರು. ಇದೀಗ ಮತ್ತೆ ಸೇಸಮ್ಮ ಚಾಂಪಿಯನ್ ಚಿತ್ರಕ್ಕೆ ಸಾಥ್ ಕೊಡುವ ಮೂಲಕ ಡಿಂಗರ್ ಬಿಲ್ಲಿಯಾಗಿ ಮೋಡಿ ಮಾಡ್ತಿದ್ದಾರೆ. ಸದ್ಯ ರಿಲೀಸ್‌ ಆಗಿರುವ ಡಿಂಗರ್‌ ಬಿಲ್ಲಿ ಹಾಡಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.