ಸ್ಯಾಂಡಲ್‌ವುಡ್‌ನ ಚೆಂದದ ನಟಿ ನಿಶ್ವಿಕಾ ನಾಯ್ಡು ಬತ್ತಳಿಕೆಯಲ್ಲಿ ಕೈ ತುಂಬಾ ಸಿನಿಮಾಗಳಿವೆ. ಹೊಸ ಬಗೆಯ ಪಾತ್ರಗಳ ಮೂಲಕ ಸೌಂಡ್ ಮಾಡ್ತಿದ್ದಾರೆ. ಸದ್ಯ ನಿಶ್ವಿಕಾ ಗ್ಲಾಮರಸ್ ಆಗಿ ಫೋಟೋಶೂಟ್ ಮಾಡಿಸಿ, ಗಂಡ್ ಹೈಕ್ಳ ನಿದ್ದೆಗೆಡಿಸಿದ್ದಾರೆ.
ಚಂದನವನದ ಮುದ್ದು ಮೊಗದ ಸುಂದರಿ ನಿಶ್ವಿಕಾ, ಚಿರಂಜೀವಿ ಸರ್ಜಾಗೆ ಅಮ್ಮಾ ಐ ಲವ್ ಯೂ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಪರಿಚಿತರಾದರು. ಬಳಿಕ ಪಡ್ಡೆಹುಲಿ, ಜಂಟಲ್‌ಮೆನ್, ಸಖತ್, ಚಿತ್ರಗಳ ಮೂಲಕ ಮೋಡಿ ಮಾಡಿದ್ದರು. ಸದ್ಯ ನಿಶ್ವಿಕಾ ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿದ್ದಾರೆ. ನಯಾ ಲಕ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಂಗನಾ ರಣಾವತ್ ವಿರುದ್ಧ ತಿರುಗಿ ಬಿದ್ದ ಠಾಕ್ರೆ ಅಭಿಮಾನಿಗಳು
ಬ್ಲ್ಯಾಕ್ ಕಲರ್ ಲಾಂಗ್ ಡ್ರೆಸ್‌ನಲ್ಲಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಸಖತ್ ಬೆಡಗಿಯ ಹೊಸ ಲುಕ್ಕಿಗೆ ಪಡ್ಡೆಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಇನ್ನು ನಿಶ್ವಿಕಾ ಬತ್ತಳಿಕೆಯಲ್ಲಿ `ಗಾಳಿಪಟ 2′, `ಗುರು ಶಿಷ್ಯರು’, `ದಿಲ್ ಪಸಂದ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ಒಂದೊಂದೇ ಸಿನಿಮಾಗಳು ತೆರೆಗೆ ಅಪ್ಪಳಿಸಲಿದೆ.
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್‍ರವರ ಮುದ್ದಿನ ಮಗ ವಿಹಾನ್ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ನಟ ದುನಿಯಾ ವಿಜಯ್, ಬುಲೆಟ್ ಪ್ರಕಾಶ್ ಸೇರಿದಂತೆ ಹಲವಾರು ನಟರ ಪುತ್ರರು ಈಗಾಗಲೇ ಸ್ಯಾಂಡಲ್‍ವುಡ್‍ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈ ನಡುವೆ ಇದೀಗ ಈ ಸಾಲಿಗೆ ಗಣೇಶ್ ಪುತ್ರ ವಿಹಾನ್ ಕೂಡ ಸೇರ್ಪಡೆಯಾಗುತ್ತಿದ್ದಾರೆ. ಗಣೇಶ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಖತ್ ಸಿನಿಮಾದಲ್ಲಿ ಗಣೇಶ್‍ರವರ ಚಿಕ್ಕ ವಯಸ್ಸಿನ ಪಾತ್ರದಲ್ಲಿ ವಿಹಾನ್ ಅಭಿನಯಿಸುತ್ತಿದ್ದಾರೆ. ಅಲ್ಲದೇ ಗಾಳಿಪಟ-2 ಸಿನಿಮಾದಲ್ಲಿಯೂ ವಿಹಾನ್ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಶುಕ್ರವಾರ ವಿಹಾನ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿರುವ ಗಣೇಶ್, ಮಗನ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸಖತ್ ಸಿನಿಮಾದ ಪೋಸ್ಟರ್‍ವೊಂದನ್ನು ಶೇರ್ ಮಾಡಿದ್ದಾರೆ. ಜೊತೆಗೆ, ಮೊಳಕೆಯ ಬೆಳೆಯುವ ಸಿರಿಯನು ತೆರೆಯ ಮೇಲೆ ನೀವೇ ನೋಡಿ ಹರಸಿ ಹಾರೈಸಿ ಆಶೀರ್ವದಿಸಿ. ಜ್ಯೂನಿಯರ್ ವಿಹಾನ್ ಗಣೇಶ್ ಸಖತ್ ಸಿನಿಮಾದಲ್ಲಿ ಬಾಲು ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಮಗನೇ ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದಂದು ‘ಸಖತ್’ ಲುಕ್‍ನಲ್ಲಿ ಮಿಂಚಿದ ಗಣೇಶ್
ಈ ಮುನ್ನ ಗಣೇಶ್ ಹಾಗೂ ನಟಿ ರಶ್ಮಿಕಾ ನಟಿಸಿದ್ದ ಚಮಕ್ ಸಿನಿಮಾದಲ್ಲಿ ಮಗಳು ಚಾರಿತ್ರ್ಯರನ್ನು ಗಣೇಶ್ ಪರಿಚಯ ಮಾಡಿಕೊಟ್ಟಿದ್ದರು. ಇದೀಗ ವಿಹಾನ್ ಇದೇ ಮೊದಲ ಬಾರಿಗೆ ಅಪ್ಪನ ಚಿತ್ರಕ್ಕಾಗಿ ಬಣ್ಣಹಚ್ಚಲಿದ್ದಾರೆ. ಇದನ್ನೂ ಓದಿ:ಆಮ್ಲೆಟ್ ಮಾಡೋ ವಿಧಾನ ಹೇಳಿಕೊಟ್ಟ ಗಣೇಶ್ ಮಗಳ ವೀಡಿಯೋ ವೈರಲ್
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟಿರುವ ಗಣೇಶ್‍ರವರು ಕೊರೊನಾ ಹಿನ್ನೆಲೆ ಈ ಬಾರಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಪ್ರತಿವರ್ಷ ಕುಟುಂಬದವರು, ಸ್ನೇಹಿತರು ಹಾಗೂ ಅಭಿಮಾನಿಗಳೊಟ್ಟಿಗೆ ಬಹಳ ಸಡಗರದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳತ್ತಿದ್ದ ಗಣೇಶ್‍ರವರು ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಈ ಬಾರಿ ತಮ್ಮ ಬರ್ತ್‍ಡೇ ವ್ಯರ್ಥ ಮಾಡುವ ಹಣವನ್ನು ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದರು.
ಸದ್ಯ ಬರ್ತ್‍ಡೇ ಸೆಲೆಬ್ರೆಶನ್‍ಗೆ ಬ್ರೇಕ್ ಹಾಕಿರುವುದರ ಹಿನ್ನೆಲೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಗಣೇಶ್ ಫೋಟೋವನ್ನು ಹಂಚಿಕೊಳ್ಳುವುದರ ಮೂಲಕ ವಿಶ್ ಮಾಡುತ್ತಿದ್ದಾರೆ. ಜೊತೆಗೆ ಸೆಲೆಬ್ರೆಟಿಗಳು ಕೂಡ ಗಣೇಶ್‍ರವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ.
ಈ ವಿಶೇಷದಿನದಂದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ‘ಸಖತ್’ ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ. ಪೋಸ್ಟರ್‌ನಲ್ಲಿ ಕೋರ್ಟ್ ಕಟಕಟ್ಟೆಯಲ್ಲಿ ಕನ್ನಡಕ ಹಾಕಿಕೊಂಡು ಅಂದನಂತೆ ಗೋಲ್ಡನ್ ಸ್ಟಾರ್ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾಕ್ಕೆ ನಿರ್ದೇಶಕ ಸಿಂಪಲ್ ಸುನಿ ಆ್ಯಕ್ಷನ್ ಕಟ್ ಹೇಳಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಅಲ್ಲದೇ ಸಿನಿಮಾ ರೈತರು ಕಾದ ಮಳೆ.. ಹೊನ್ನಿನ ನಕ್ಷತ್ರದ ಬೆಳೆ.. ಚೆಲುವಿನ ಹೂ ನ ಪಕಳೆ.. ಕರ್ನಾಟಕದ ಮಾತಿನ ಕಹಳೆ. ಗಣೇಶ್‍ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ಸಖತ್ತಾಗಿರಲಿ ನಿಮ್ಮ ಜೀವನ ಎಂದು ಸಿಂಪಲ್ ಸುನಿ ಟ್ವಿಟ್ಟರ್‌ನಲ್ಲಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲ – ಗಣೇಶ್ ಪತ್ರ
ಮುಂಗಾರು ಮಳೆಯೆಂಬ ಸೂಪರ್ ಹಿಟ್ ಸಿನಿಮಾ ಮೂಲಕ ಸ್ಟಾರ್ ಆಗಿ ಅವತರಿಸಿದ್ದವರು ಗಣೇಶ್. ಆ ಮಹಾ ಗೆಲುವಿನಿಂದ ಗೋಲ್ಡನ್ ಸ್ಟಾರ್ ಎಂದೇ ಖ್ಯಾತರಾದ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಕೊರೊನಾ ದೆಸೆಯಿಂದ ಮಾಮೂಲಿನಂತೆ ಅದನ್ನು ಸೆಲೆಬ್ರೇಟ್ ಮಾಡಲಾಗದಿದ್ದರೂ ಅಭಿಮಾನಿಗಳು ಇದ್ದಲ್ಲಿಂದಲೇ ಶುಭ ಕೋರುತ್ತಿದ್ದಾರೆ. ಇದೇ ಹೊತ್ತಿನಲ್ಲಿ ನಿರ್ದೇಶಕ ಸಿಂಪಲ್ ಸುನಿ ‘ಸಖತ್’ ಆಗಿರೋ ಉಡುಗೊರೆಯನ್ನೇ ನೀಡಿದ್ದಾರೆ.
24 ಕ್ಯಾರೋಟ್ ಚಿನ್ನ
ಪಳ ಪಳ ಹೊಳಿಯೋ smile_u ಸಖತ್.
24 hrs ವಿಭಿನ್ನ
ತಳಮಳಗೊಳಿಸೊ style_u ಸಖತ್.
ಪಟಪಟ-ಪಟಾಕಿನೆ ಫಟ-ಫಟಾ ಫಟಿಂಗನೆ
ಇವ್ನು ಸುಮ್ನೆ ಕೊಡೋ ಚಮಕ್ ಸಖತ್
ಕೊಂಚ ದುಭಾರಿ
ನಗು ಜಂಬುಸಾವಾರಿ.
ಈಗ ನೀವು ನನ್ನ ಜೊತೆ ಹೇಳಿ #HappyBirthdayGanesh@Official_Ganesh
480p motion posterhttps://t.co/jP7kSIVtHA
ಸಿಂಪಲ್ ಸುನಿ ಕೊಟ್ಟಿರೋ ಈ ಉಡುಗೊರೆಯಿಂದ ಗಣೇಶ್ ಮಾತ್ರವಲ್ಲದೇ ಅವರ ಸಮಸ್ತ ಅಭಿಮಾನಿ ಬಳಗವೂ ಥ್ರಿಲ್ ಆಗಿದೆ. ಅಂದಹಾಗೆ ಸಿಂಪಲ್ ಸುನಿ ಗಣೇಶ್ ಹುಟ್ಟುಹಬ್ಬಕ್ಕೆ ಮೋಷನ್ ಪೋಸ್ಟರ್ ಅನ್ನು ಲಾಂಚ್ ಮಾಡಿದ್ದಾರೆ. ಲಾಕ್‍ಡೌನ್ ಚಾಲ್ತಿಯಲ್ಲಿದ್ದಾಗಲೇ ಇದಕ್ಕೆ ತಯಾರಿ ನಡೆಸಿದ್ದ ಸುನಿ ಎಲ್ಲರೂ ಖುಷಿಗೊಳ್ಳುವಂತೆ ರ‍್ಯಾಪ್ ಮೋಷನ್ ಪೋಸ್ಟರ್ ಅನ್ನು ರೂಪಿಸಿದ್ದಾರೆ. ಆ ಮೂಲಕವೇ ಈ ಸಿನಿಮಾದಲ್ಲಿ ಗಣಿ ಅವತಾರ ಡಿಫರೆಂಟಾಗಿರಲಿದೆ ಎಂಬ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ.
ಸಿಂಪಲ್ ಸುನಿ ಬಹು ಹಿಂದಿನಿಂದಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸಿನಿಮಾ ಮಾಡಬೇಕನ್ನೋ ಕನಸು ಕಂಡಿದ್ದವರು. ಈ ಹಿಂದೆ ‘ಚಮಕ್’ ಚಿತ್ರದ ಮೂಲಕ ಅದು ಸಾಕಾರಗೊಂಡಿತ್ತು. ಅದು ಯಶಸ್ಸನ್ನೂ ಕಂಡಿತ್ತು. ಆ ಘಳಿಗೆಯಲ್ಲಿಯೇ ಈ ಜೋಡಿ ಮತ್ತೆ ಒಂದಾಗಿ ಮತ್ತೊಂದು ಮ್ಯಾಜಿಕ್ಕು ಮಾಡೋ ಸೂಚನೆಯೂ ಸಿಕ್ಕಿತ್ತು. ಅದು ಸಿಂಪಲ್ ಸುನಿ ಕಡೆಯಿಂದಲೇ ಜಾಹೀರಾಗಿತ್ತು. ಅದು ಸಖತ್ ಅನ್ನೋ ಸಿನಿಮಾ ಮೂಲಕ ಸಾಕಾರಗೊಂಡಿದೆ.
ಈ ಚಿತ್ರವನ್ನು ಯಶಸ್ವಿ ಯುವ ನಿರ್ದೇಶಕ ಸುಪ್ರೀತ್, ನಿಶಾ ವೆಂಕಟ್ ಕೋನಂಕಿ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳಲಿರೋ ಸಖತ್ ಚಿತ್ರಕ್ಕೆ ಟೈಟಲ್ಲಿಗೆ ತಕ್ಕುದಾದ ಕಥೆಯನ್ನೇ ಸುನಿ ರೆಡಿ ಮಾಡಿಕೊಂಡಿದ್ದಾರಂತೆ. ತಾರಾಗಣವೂ ಸೇರಿದಂತೆ ಪ್ರತಿಯೊಂದನ್ನೂ ಸುನಿ ಪಕ್ಕಾ ಮಾಡಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ಹೊತ್ತಿಗೆಲ್ಲ ಸಖತ್ ಸೊಗಸಾಗಿಯೇ ಸದ್ದು ಮಾಡಿರುತ್ತಿತ್ತು. ಕೊರೊನಾ ಅದಕ್ಕೆ ಬ್ರೇಕು ಹಾಕಿದರೂ ಈ ರ‍್ಯಾಪ್ ಮೋಷನ್ ಪೋಸ್ಟರ್ ಸಖತ್ತಾಗಿಯೇ ಸೌಂಡು ಮಾಡುತ್ತಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗೆ ಈ ರ‍್ಯಾಪ್ ಮೋಷನ್ ಪೋಸ್ಟರ್ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿಸಿದೆ. ಈ ಬಾರಿ ಕೊರೊನಾ ಕಾರಣದಿಂದ ಎಲ್ಲರೂ ಇದ್ದಲ್ಲಿಂದಲೇ ಹಾರೈಸಿ ಅಂತ ಗಣೇಶ್ ಅಭಿಮಾನಿಗಳನ್ನು ಕೇಳಿಕೊಂಡಿದ್ದರು. ಇದೀಗ ಸುನಿ ಬಿಡುಗಡೆ ಮಾಡಿರುವ ಮೋಷನ್ ಪೋಸ್ಟರ್ ಅನ್ನು ಅಭಿಮಾನಿಗಳೆಲ್ಲ ಎಂಜಾಯ್ ಮಾಡ್ತಿದ್ದಾರೆ. ಈ ಮೂಲಕವೇ ತಮ್ಮಿಷ್ಟದ ನಟನನ್ನು ಭಿನ್ನ ಗೆಟಪ್ಪಿನಲ್ಲಿ ಕಣ್ತುಂಬಿಕೊಳ್ಳುವ ಬಯಕೆ ಅಭಿಮಾನಿಗಳೆಲ್ಲರಲ್ಲಿ ತೀವ್ರವಾಗಿದೆ.