Tag: ಸಕ್ಕರೆ

  • ಮೋದಿಗೆ ಬೆಲ್ಲದ ಉಡುಗೊರೆ ನೀಡಿ ಮುಖದಲ್ಲಿ ಮಂದಹಾಸ ತರಿಸಿದ ಸಂಸದೆ ಸುಮಲತಾ

    ಮೋದಿಗೆ ಬೆಲ್ಲದ ಉಡುಗೊರೆ ನೀಡಿ ಮುಖದಲ್ಲಿ ಮಂದಹಾಸ ತರಿಸಿದ ಸಂಸದೆ ಸುಮಲತಾ

    ನ್ನಡದ ಹಿರಿಯ ನಟಿ, ಮಂಡ್ಯ (Mandya) ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ (Sumalata Ambarish), ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಉಡುಗೊರೆಯಾಗಿ ಬೆಲ್ಲ (Organic Jaggery) ನೀಡಿದರು. ಇಂದು ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿಗೆ ಉಡುಗೊರೆಯಾಗಿ ಬೆಲ್ಲ ನೀಡಿದಾಗ, ಪ್ರಧಾನಿ ಮುಖದಲ್ಲಿ ಮಂದಹಾಸವಿತ್ತು. ಅಲ್ಲದೇ, ಪಕ್ಕದಲ್ಲೇ ಇದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಕ್ಷಣ ಹೊತ್ತು ಉಡುಗೊರೆ ಬಗ್ಗೆ ವಿವರಿಸಿದ್ದು ವಿಶೇಷವಾಗಿತ್ತು.

    ಈ ಕುರಿತಾಗಿ ಸುಮಲತಾ ಅಂಬರೀಶ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ, ‘ನನ್ನ ಸ್ವಾಭಿಮಾನಿ ಮಂಡ್ಯ ಕ್ಷೇತ್ರದಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಗೆ, ಮಂಡ್ಯದ ಗುರುತಾಗಿರುವ ‘ಬೆಲ್ಲ’ವನ್ನು ಉಡುಗೊರೆಯಾಗಿ ನೀಡಿದೆ. ಮಾನ್ಯ ಪ್ರಧಾನ ಮಂತ್ರಿಗಳು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಈ ನೆಲದ ಅಸ್ಮಿತೆಯಾಗಿರುವ ಬೆಲ್ಲದ ಉಡುಗೊರೆಯನ್ನು ಸ್ವೀಕರಿಸಿದ್ದು ಸಂಭ್ರಮ ತಂದಿದೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಲಿಂಗಭೈರವಿ ದೇವಿಯ ಮೋರೆ ಹೋದ ಸಮಂತಾ

    ಮಂಡ್ಯ ಸಕ್ಕರೆ ಮತ್ತು ಬೆಲ್ಲದ ನಾಡು. ಕಬ್ಬು ಈ ಭಾಗದ ಪ್ರಮುಖ ಬೆಳೆಯೂ ಹೌದು. ಸುಮಲತಾ ಸಂಸದೆಯಾದ ನಂತರ ಮಂಡ್ಯದಲ್ಲಿ ತಯಾರಾಗುವ ಬೆಲ್ಲದ ಬಗ್ಗೆ ಸಂಸತ್ತಿನಲ್ಲೂ ಮಾತನಾಡಿದ್ದರು. ಬೆಲ್ಲದ ಹಿರಿಮೆಯನ್ನು ಎತ್ತಿ ಹಿಡಿದಿದ್ದರು. ಅಲ್ಲದೇ, ಸಾವಯವ ಬೆಲ್ಲಕ್ಕೆ ಬೆಂಬಲ ಬೆಲೆ ಘೋಷಿಸಿಬೇಕೆಂದು ಸಂಸತ್ತಿನಲ್ಲಿ ಮನವಿ ಕೂಡ ಮಾಡಿದ್ದರು. ಕಬ್ಬು ಬೆಳೆಗಾರರ ಅನೇಕ ಹೋರಾಟಗಳಲ್ಲಿ ಭಾಗಿಯಾದವರು. ಹಾಗಾಗಿ ರೈತರ ಪರವಾಗಿ ಬೆಲ್ಲವನ್ನು ಪ್ರಧಾನಿಗೆ ನೀಡಿದ್ದಾರೆ.

    ಪ್ರಧಾನಿಗೆ ಇಂದು ನೀಡಿದ ಉಡುಗೊರೆಯಲ್ಲಿ ಬೆಲ್ಲದುಡುಗೊರೆ ವಿಶೇಷವಾಗಿತ್ತು. ಅಲಂಕೃತ ಬುಟ್ಟಿಯಲ್ಲಿ ಬೆಲ್ಲದ ಚೌಕಾಕೃತಿಯ ತುಂಡುಗಳನ್ನು ಹಾಕಿ, ಸಾವಯವಬೆಲ್ಲವನ್ನೂ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದರು. ಈ ಬೆಲ್ಲದ ಕುರಿತು ಕೆಲ ಹೊತ್ತು ಮಾತೂ ಆಡಿದರು. ಈ ಸಂದರ್ಭದಲ್ಲಿ ಅಭಿಮಾನಿಗಳಿಂದ ಜೋರಾದ ಚಪ್ಪಾಳೆ ಕೂಡ ಕೇಳಿ ಬಂತು.

     

  • ನಿರಾಣಿ ಬೆಂಬಲಿಗರಿಂದ ಮುಂದುವರಿದ ಗಿಫ್ಟ್ ಪಾಲಿಟಿಕ್ಸ್- ಸಕ್ಕರೆ ತಿರಸ್ಕರಿಸಿದ ಮತ್ತೊಬ್ಬ ವ್ಯಕ್ತಿ!

    ನಿರಾಣಿ ಬೆಂಬಲಿಗರಿಂದ ಮುಂದುವರಿದ ಗಿಫ್ಟ್ ಪಾಲಿಟಿಕ್ಸ್- ಸಕ್ಕರೆ ತಿರಸ್ಕರಿಸಿದ ಮತ್ತೊಬ್ಬ ವ್ಯಕ್ತಿ!

    ಬಾಗಲಕೋಟೆ: ಸಚಿವ ಮುರಗೇಶ್ ನಿರಾಣಿ (Murugesh Nirani) ಬೆಂಬಲಿಗರಿಂದ ಗಿಫ್ಟ್ ಪಾಲಿಟಿಕ್ಸ್ ಮುಂದುವರಿದಿದೆ. ಮಹಿಳೆ ಸಕ್ಕರೆ ವಾಪಸ್ ಮಾಡಿದ ಸುದ್ದಿಯ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವೀಡಿಯೋ ವೈರಲ್ ಆಗಿದೆ.

    ಹೌದು. ಬೀಳಗಿ ವಿಧಾನಾಸಭಾ ಕ್ಷೇತ್ರದ ಉದಗಟ್ಟಿ ಗ್ರಾಮದಲ್ಲಿ ರಾತ್ರಿ ಹೊತ್ತು ಸಕ್ಕರೆ ಪ್ಯಾಕೆಟ್ ಹಂಚುತ್ತಿರುವ ವೀಡಿಯೋ ವೈರಲ್ ಆಗಿದೆ. ಸಚಿವರ ಬೆಂಬಲಿಗರು ಮನೆಮನೆಗಳಿಗೆ ತೆರಳಿ ಸಕ್ಕರೆ ಪ್ಯಾಕೆಟ್ (Sugar Packet) ವಿತರಿಸುತ್ತಿರುವುದು ಬಯಲಾಗಿದೆ. ಸದ್ಯ ಗಿಫ್ಟ್ ಪಾಲಿಟಿಕ್ಸ್ ಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಸಚಿವ ಮುರುಗೇಶ್ ನಿರಾಣಿ ಬೆಂಬಲಿಗರು ಹಂಚಿದ ಸಕ್ಕರೆ ತಿರಸ್ಕರಿಸಿದ ಮಹಿಳೆಗೆ ಭಾರೀ ಬೆಂಬಲ

    ಏನಿದು ಘಟನೆ..?: ಕೆಲ ದಿನಗಳ ಹಿಂದೆ ಗಲಗಲಿ ಗ್ರಾಮದಲ್ಲಿ ಸಕ್ಕರೆ ಪ್ಯಾಕೆಟ್ ಹಂಚಿಕೆ ವೇಳೆ ಮಹಿಳೆಯೊಬ್ಬರು ಸಕ್ಕರೆಯನ್ನ ತಿರಸ್ಕರಿಸಿದ್ದರು. ಈ ಘಟನೆ ಬೆನ್ನಲ್ಲೇ ಮತ್ತೆ ಸಕ್ಕರೆ ಹಂಚಿಕೆ ಮುಂದುವರಿದಿದೆ. ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಮತ್ತೊಬ್ಬರು ಸಕ್ಕರೆ ಪ್ಯಾಕೆಟ್ ತಿರಸ್ಕರಿಸಿದ್ದಾರೆ. ಶುಕ್ರವಾರ ರಾತ್ರಿ ನಾರಾಯಣ ಉಪ್ಪಾರ ಮನೆ ಹೊರಗಡೆ ನಿರಾಣಿ ಬೆಂಬಲಿಗರು ಸಕ್ಕರೆ ಪ್ಯಾಕೆಟ್ ಇಟ್ಟು ಹೋಗಿದ್ದಾರೆ.

    ಉಪ್ಪಾರ ಅವರು ತಡರಾತ್ರಿ ಎದ್ದು ಬಂದು ಹೊರಗಡೆ ನೋಡಿದಾಗ ಸಕ್ಕರೆ ಪ್ಯಾಕೆಟ್ ಇರುವುದು ಬೆಳಕಿಗೆ ಬಂದಿದೆ. ನಾವು ಮನೆಯಲ್ಲಿ ಇಲ್ಲದ ವೇಳೆ ಯಾರೋ ಬಂದು ಇಟ್ಟಿದ್ದಾರೆ ನಮಗೆ ಸಕ್ಕರೆ ಬೇಕಾಗಿಲ್ಲ. ಪ್ರತಿ ತಿಂಗಳು ಕೊಡಬೇಕಾಗಿತ್ತಲ್ಲ. ಈಗ ಬಂದ ಯಾಕೆ ಸಕ್ಕರೆ ಕೊಡುತ್ತಿದ್ದಾರೆ. ನಮಗೆ ನಿರಾಣಿಯವರ ಐದು ಕೆಜಿ ಸಕ್ಕರೆ ಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಚಿವ ಮುರುಗೇಶ್ ನಿರಾಣಿ ಬೆಂಬಲಿಗರು ಹಂಚಿದ ಸಕ್ಕರೆ ತಿರಸ್ಕರಿಸಿದ ಮಹಿಳೆಗೆ ಭಾರೀ ಬೆಂಬಲ

    ಸಚಿವ ಮುರುಗೇಶ್ ನಿರಾಣಿ ಬೆಂಬಲಿಗರು ಹಂಚಿದ ಸಕ್ಕರೆ ತಿರಸ್ಕರಿಸಿದ ಮಹಿಳೆಗೆ ಭಾರೀ ಬೆಂಬಲ

    ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ (Murugesh Nirani) ಹಂಚಿದ ಸಕ್ಕರೆಯನ್ನು ಮಹಿಳೆಯೊಬ್ಬರು ತಿರಸ್ಕರಿಸಿದ ಪ್ರಸಂಗವೊಂದು ನಡೆದಿದೆ.

    ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದ ಗಲಗಲಿಯಲ್ಲಿ ಸಕ್ಕರೆ ಚೀಲ (Sugar Packet) ತಿರಸ್ಕರಿಸಿದ ಮಹಿಳೆ ವೀಡಿಯೋ ಇದೀಗ ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್ ಆಗಿದೆ.

    ಏಮಿದು ಘಟನೆ..? ಸಚಿವ ನಿರಾಣಿ ಬೆಂಬಲಿಗರು ಮನೆ ಮನೆಗೂ ಸಕ್ಕರೆ ಹಂಚುತ್ತಿದ್ದರು. ಅಂತೆಯೇ ಗಲಿಗಲಿಯ ಮನೆಯೊಂದಕ್ಕೆ ಸಕ್ಕರೆ ಚೀಲ ಹಂಚಿದ ವೇಳೆ ಮಹಿಳೆ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಕೊನೆಗೆ ಬೆಂಬಲಿಗರು ಒತ್ತಾಯವಾಗಿ ಸಕ್ಕರೆ ಚೀಲ ಮನೆಯೊಳಗೆ ಹೋಗಿ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸೇರಿದ್ರೆ 50 ಸಾವಿರ ಲೀಡ್‌ನಲ್ಲಿ ಗೆಲ್ತೀನಿ – ಶಾಸಕ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್

    ಒತ್ತಾಯಪೂರ್ವಕವಾಗಿ ನೀಡಿದ ಸಕ್ಕರೆ ಚೀಲವನ್ನು ಮಹಿಳೆ ಬಾಗಿಲು ಹೊರಗೆ ಇಟ್ಟರು. ಈ ದೃಶ್ಯವೆಲ್ಲಾ ವೀಡಿಯೋದಲ್ಲಿ ಸೆರೆಯಾಗಿದೆ. ಮಹಿಳೆಯರ ವರ್ತನೆ ಬೆಂಬಲಿಸಿ ವೀಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪ ಹೆಗಡೆ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಮಹಿಳೆಯರ ವರ್ತನೆಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

    ಈ ತಾಯಿಗಿರುವ ನಿಯತ್ತಿಗೆ ಜನತೆಯಿಂದ ಧನ್ಯವಾದಗಳು. ಆಸೆ, ಆಮಿಷಗಳಿಗೆ ಬಲಿಯಾಗದೆ ಪ್ರಬುದ್ಧತೆ ತೋರುವ ಇಂತಹ ಜನರಿಂದ ಮಾತ್ರ. ಪ್ರಜಾಪ್ರಭುತ್ವ ಉಳಿಯಲು ಸಾಧ್ಯ, ಇಂತಹ ಆಲೋಚನೆ ಎಲ್ಲ ಮತದಾರರಿಗೂ ಬರಬೇಕಿದೆ ಎಂದು ವೀಡಿಯೋ ಜೊತೆಗೆ ಪೋಸ್ಟ್ ಕೂಡ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರತಿ ಟನ್ ಕಬ್ಬಿಗೆ 3600 ರೂ. MSP ನಿಗದಿ ಪಡಿಸಿ

    ಪ್ರತಿ ಟನ್ ಕಬ್ಬಿಗೆ 3600 ರೂ. MSP ನಿಗದಿ ಪಡಿಸಿ

    ಕಲಬುರಗಿ: ಆಳಂದ ತಾಲೂಕಿನ ಭೂಸನೂರ ಸಕ್ಕರೆ ಕಾರ್ಖಾನೆಯವರು(Sugar Factory) ಪ್ರತಿ ಟನ್‍ಗೆ 3,600 ರೂ. ಕನಿಷ್ಠ ಬೆಂಬಲ ಬೆಲೆ(MSP) ನಿಗದಿ ಮಾಡಿ 15 ದಿನಗಳೊಳಗಾಗಿ ಕಬ್ಬು ಕ್ರಷಿಂಗ್ ಪ್ರಾರಂಭಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ರೈತರು ಎಲ್ಲ ಸೇರಿ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟ್ ಹಾಗೂ ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ಥಂಬೆ ಎಚ್ಚರಿಕೆ ನೀಡಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಸನೂರ ಸಕ್ಕರೆ ಕಾರ್ಖಾನೆ ಬಂದ್ ಆಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈಗ ಸಣ್ಣ ಹಾಗೂ ದೊಡ್ಡ ರೈತರ ಜಮೀನಿನಲ್ಲಿ ಕಬ್ಬು ಈಗಾಗಲೇ ಬೆಳೆ ಬೆಳೆದು ನಿಂತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಕಬ್ಬು ಬೆಳೆದು ನಿಂತಿದೆ. ಇದಕ್ಕಾಗಿ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‍ಗೆ 2,400 ರೂ. ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ರೈತರಿಗೆ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ಪಾಲನೆ ಪೋಷಣೆ ಹಾಗೂ ಶಾಲಾ ಶುಲ್ಕ ಹೀಗೆ ಇನ್ನಿತರ ಖರ್ಚುಗಳನ್ನು ಸರಿದೂಗಿಸಲು ಆಗುವುದಿಲ್ಲ. ಹೀಗಾಗಿ ಕೂಡಲೇ ಎಂಎಸ್‍ಪಿ ಬೆಲೆಯನ್ನು 3,600 ರೂ. ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕೆಜಿಎಫ್‌ ಮ್ಯೂಸಿಕ್‌ ಬಳಕೆ – ಕಾಂಗ್ರೆಸ್‌ ಟ್ವಿಟ್ಟರ್‌ ಖಾತೆ ಬ್ಲಾಕ್‌ ಮಾಡುವಂತೆ ಕೋರ್ಟ್‌ ಆದೇಶ

    ಈಗ ರೇಣುಕಾ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‍ಗೆ 2,700 ರೂ. ದರ ನೀಡುತ್ತಿದ್ದು, ಆದರೆ ಭೂಸನೂರ ಸಕ್ಕರೆ ಕಾರ್ಖಾನೆಯವರು 3,600 ರೂ. ಎಎಸ್‍ಪಿ ನಿಗದಿ ಮಾಡಿ ಪ್ರಾರಂಭಿಸಬೇಕು. ಈಗಾಗಲೇ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಸಿಯಲ್ಲಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ತೊಗರಿ, ಸೋಯಾಬಿನ್, ಹೆಸರು, ಉದ್ದು ನಾಶವಾಗಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ದೂರಿದರು.

    ಪ್ರಮುಖರಾದ ಉಮಾಪತಿ ಪಾಟೀಲ್, ವಿಜಯಕುಮಾರ ಹತ್ತರಕಿ, ಮಂಜು ಸಿ.ಕೆ., ರಮೆಶ ರಾಗಿ, ಸುನಿಲ್‌ ಕುಮಾರ ಮಠಪತಿ, ಶರಣಯ್ಯ ಸ್ವಾಮಿ ಮಠ, ಸಿದ್ದು ವೇದಶೆಟ್ಟಿ ಇತರರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಕ್ಕರೆ ರಫ್ತಿನ ಮೇಲಿನ ನಿರ್ಬಂಧ ಇನ್ನೊಂದು ವರ್ಷ ವಿಸ್ತರಣೆ

    ಸಕ್ಕರೆ ರಫ್ತಿನ ಮೇಲಿನ ನಿರ್ಬಂಧ ಇನ್ನೊಂದು ವರ್ಷ ವಿಸ್ತರಣೆ

    ನವದೆಹಲಿ: ಭಾರತವು (India) ಸಕ್ಕರೆ (Sugar) ರಫ್ತಿನ (Exports) ಮೇಲಿನ ನಿರ್ಬಂಧಗಳನ್ನು (Restriction) 2023ರ ಅ.31 ರವರೆಗೆ ವಿಸ್ತರಿಸಿದೆ ಎಂದು ಡೈರಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್‍ ಅಧಿಸೂಚನೆ ನೀಡಿದೆ.

    ಆರಂಭದಲ್ಲಿ, ಈ ವರ್ಷದ ಜೂನ್ 1 ರಿಂದ ಅಕ್ಟೋಬರ್ 31 ರವರೆಗೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆದರೆ ಸಿಎಕ್ಸ್‌ಎಲ್ ಹಾಗೂ ಟಿಆರ್‌ಕ್ಯೂ ಕೋಟಾದ ಅಡಿಯಲ್ಲಿ ಯುರೋಪಿಯನ್ ಯೂನಿಯನ್‌ಗೆ ಸಕ್ಕರೆಯ ಈ ನಿರ್ಬಂಧವು ಅನ್ವಯಿಸುವುದಿಲ್ಲ ಎಂದು ಡಿಜಿಎಫ್‍ಟಿ ಸೂಚಿಸಿದೆ.

    ಇನ್ನೆರಡೂ ದಿನಗಳಲ್ಲಿ ರಫ್ತು ನಿರ್ಬಂಧ ಮುಗಿಯುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಮತ್ತೆ ತೆಗೆದುಕೊಂಡಿರುವ ಸರ್ಕಾರ ರಫ್ತಿಗೆ ಸಂಬಂಧಿಸಿದ ಇಲಾಖೆಯಿಂದ ಕಡ್ಡಾಯ ಅನುಮತಿಯಂತಹ ಇತರ ಷರತ್ತುಗಳು ಬದಲಾಗದೇ ಉಳಿಯುತ್ತವೆ ಎಂದು ತಿಳಿಸಿದೆ. ಇದನ್ನೂ ಓದಿ: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತ – ಬಿಜೆಪಿಯಿಂದಲ್ಲ: ಮುತಾಲಿಕ್

    ನಿರ್ಬಂಧವನ್ನು ವಿಧಿಸುವಾಗ ಭಾರತದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನು ಲಭ್ಯತೆಯಿದೆಯೇ ಎಂಬುದರ ಕುರಿತಾಗಿ ಖಚಿತಪಡಿಸಿಕೊಳ್ಳಲು ಸರ್ಕಾರ ಬಯಸಿದೆ ಮತ್ತು ದೇಶೀಯ ಪೂರೈಕೆಯ ಹಿತಾಸಕ್ತಿಗಳನ್ನು ಕಾಪಾಡಲು ರಫ್ತು ನಿರ್ಬಂಧವನ್ನು ಸಂಪೂರ್ಣವಾಗಿ ವಿಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: `ಆಪರೇಷನ್ ಕಮಲ’ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಿ- ಸುಪ್ರೀಂಗೆ ಡಿಕೆಶಿ ಮನವಿ

    Live Tv
    [brid partner=56869869 player=32851 video=960834 autoplay=true]

  • ಮಾರುಕಟ್ಟೆಗಳಲ್ಲಿ ಸಕ್ಕರೆಗಾಗಿ ರಷ್ಯನ್ನರ ಕಿತ್ತಾಟ- ವೀಡಿಯೋ ವೈರಲ್‌

    ಮಾರುಕಟ್ಟೆಗಳಲ್ಲಿ ಸಕ್ಕರೆಗಾಗಿ ರಷ್ಯನ್ನರ ಕಿತ್ತಾಟ- ವೀಡಿಯೋ ವೈರಲ್‌

    ಮಾಸ್ಕೋ: ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವುದು ರಷ್ಯಾದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದೆ. ರಷ್ಯಾದ ಸೂಪರ್‌ ಮಾರುಕಟ್ಟೆಗಳಲ್ಲಿ ಸಕ್ಕರೆಗಾಗಿ ಜನರು ಪರಸ್ಪರ ಕಿತ್ತಾಡುತ್ತಿರುವ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ.

    ಉಕ್ರೇನ್‌ ವಿರುದ್ಧದ ಯುದ್ಧದ ಪರಿಣಾಮ ಆರ್ಥಿಕ ಕುಸಿತದಿಂದಾಗಿ ದೇಶದ ಕೆಲವು ಮಳಿಗೆಗಳು ಪ್ರತಿ ಗ್ರಾಹಕನಿಗೆ 10 ಕೆ.ಜಿ. ಸಕ್ಕರೆ ಕೊಳ್ಳಲು ಮಿತಿಯನ್ನು ವಿಧಿಸಿವೆ. 2015ರ ನಂತರ ರಷ್ಯಾದಲ್ಲಿ ವಾರ್ಷಿಕ ಹಣದುಬ್ಬರವು ಗರಿಷ್ಠ ಮಟ್ಟವನ್ನು ತಲುಪಿರುವುದರಿಂದ ಸಕ್ಕರೆಯ ಬೆಲೆ ಗಗನಕ್ಕೇರಿದೆ. ಇದನ್ನೂ ಓದಿ: ಆರ್ಥಿಕ ಅವನತಿಯತ್ತ ಶ್ರೀಲಂಕಾ – ಸಕ್ಕರೆ, ಬೇಳೆಗೆ ಚಿನ್ನದ ಬೆಲೆ, 1 ಟೀಗೆ 100 ರೂ.

    ಶಾಪ್‌ಗಳಲ್ಲಿ ಗುಂಪುಗೂಡಿರುವ ಜನರು, ಸಕ್ಕರೆ ಪೊಟ್ಟಣಗಳಿಗಾಗಿ ಪರಸ್ಪರ ಕಿತ್ತಾಡುತ್ತಿರುವುದು ಹಾಗೂ ಒಬ್ಬರ ಮೇಲೊಬ್ಬರು ಮುಗಿಬಿದ್ದು ಪೊಟ್ಟಣಗಳನ್ನು ತೆಗೆದುಕೊಳ್ಳುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧ ನಡೆಸುತ್ತಿರುವುದರಿಂದ ಸಾಮಾನ್ಯ ಜನತೆ ಎದುರಿಸುತ್ತಿರುವ ತೊಂದರೆಯನ್ನು ಈ ವೀಡಿಯೋ ಪ್ರತಿಬಿಂಬಿಸಿದೆ.

    ರಷ್ಯಾದ ಸರ್ಕಾರಿ ಅಧಿಕಾರಿಗಳು, ಸಕ್ಕರೆ ಕೊರತೆ ಇಲ್ಲ ಎಂದು ಹೇಳಿದ್ದಾರೆ. ಗ್ರಾಹಕರು ಅಂಗಡಿಗಳಲ್ಲಿ ಖರೀದಿಸುವ ಭೀತಿಯಿಂದ ಬಿಕ್ಕಟ್ಟು ಹುಟ್ಟುತ್ತಿದೆ ಎಂದು ತಿಳಿಸಿದ್ದಾರೆ. ಆದರೂ ಸರ್ಕಾರವು ದೇಶದಿಂದ ಸಕ್ಕರೆ ರಫ್ತಿನ ಮೇಲೆ ತಾತ್ಕಾಲಿಕ ನಿಷೇಧ ವಿಧಿಸಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧದ ನಡುವೆಯೇ ಸುದ್ದಿಯಾಗ್ತಿದ್ದಾರೆ ಪುಟಿನ್‌ ಗರ್ಲ್‌ಫ್ರೆಂಡ್‌- ಯಾರೀಕೆ?

    ಸಕ್ಕರೆಯ ಬೆಲೆಯು ಶೇ.31ರಷ್ಟು ಹೆಚ್ಚಾಗಿದೆ. ಆದರೆ ಪಾಶ್ಚಿಮಾತ್ಯ ನಿರ್ಬಂಧಗಳಿಂದಾಗಿ ಇತರೆ ಉತ್ಪನ್ನಗಳು ಸಹ ದುಬಾರಿಯಾಗಿವೆ. ಕಾರುಗಳು, ಗೃಹೋಪಯೋಗಿ ವಸ್ತುಗಳು ಮತ್ತು ಟಿ.ವಿ ಮೊದಲಾದ ವಿದೇಶದಿಂದ ಆಮದು ಮಾಡುತ್ತಿದ್ದ ಸರಕುಗಳ ಕೊರತೆ ಉಂಟಾಗಿದೆ. ಬೆಲೆಗಳು ದೇಶದಾದ್ಯಂತ ಏರುತ್ತಿರುವುದರಿಂದ ನಾಗರಿಕರು ಇದರ ಎದುರಿಸುತ್ತಿದ್ದಾರೆ.

  • ಕಬ್ಬಿನ ಬಿಲ್ ಪಾವತಿ ಸಕ್ಕರೆ ಕಾರ್ಖಾನೆಗಳಿಗೆ ಮೂರು ದಿನಗಳ ಗಡುವು: ಮುನೇನಕೊಪ್ಪ

    ಕಬ್ಬಿನ ಬಿಲ್ ಪಾವತಿ ಸಕ್ಕರೆ ಕಾರ್ಖಾನೆಗಳಿಗೆ ಮೂರು ದಿನಗಳ ಗಡುವು: ಮುನೇನಕೊಪ್ಪ

    ಹುಬ್ಬಳ್ಳಿ: ರೈತರ ಕಬ್ಬಿನ ಬಿಲ್ ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಮೂರು ದಿನಗಳ ಗಡುವು ನೀಡಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಖಾತೆ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದ ರೈತರು ಭಯ ಪಡುವ ಅವಶ್ಯಕತೆ ಇಲ್ಲ. ಈಗಾಗಲೇ ರಾಜ್ಯದ ಸಕ್ಕರೆ ಕಾರ್ಖಾನೆಗಳೊಂದಿಗೆ ಮೀಟಿಂಗ್ ಮಾಡಲಾಗಿದೆ. ಅವರಿಗೆ ಕಬ್ಬಿನ ಬಾಕಿ ಬಿಲ್ ನೀಡುವಂತೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ. ಏಳು ಸಕ್ಕರೆ ಕಾರ್ಖಾನೆಗಳು ಬಿಲ್ ಬಾಕಿ ಉಳಿಸಿಕೊಂಡಿವೆ. ಅದನ್ನು ಮೂರು ದಿನದಲ್ಲೇ ಪಾವತಿ ಮಾಡಲು ಹೇಳಿದ್ದೇನೆ ಎಂದರು. ಇದನ್ನೂ ಓದಿ: ರೈತರಿಗೆ ದಾಖಲೆ ನೀಡಲು ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ತರಾಟೆ- ಸೂ….ಮಕ್ಕಳು ಎಂದ ರಮೇಶ್ ಕುಮಾರ್

    ರಾಜ್ಯ ಸರ್ಕಾರ ರೈತರ ಪರವಾಗಿ ಇದೆ. ರೈತರ ಏಳಿಗೆ ನಮಗೆ ಶ್ರೀರಕ್ಷೆ ಆಗಿದೆ. ಅದಕ್ಕಾಗಿ ರೈತರು ಆತಂಕಕ್ಕೆ ಒಳಗಾಗಬಾರದು. ಪಕ್ಷಪಾತ ಮಾಡದೇ ಅಂಕಿ ಸಂಖ್ಯೆಯ ದಾಖಲೆ ನೀಡಿದ್ದೇನೆ. ಯಾರೇ ಸಕ್ಕರೆ ಬಿಲ್ ಉಳಿಸಿಕೊಂಡಿದ್ದರು ತಕ್ಷಣವೇ ಪಾವತಿಗೆ ಸೂಚನೆ ನೀಡಿದ್ದೇನೆ ಎಂದು ನುಡಿದರು. ಇದನ್ನೂ ಓದಿ: ಹಾನಗಲ್, ಸಿಂದಗಿ ಉಪ ಚುನಾವಣೆಗೆ ನಾಳೆ ಅಭ್ಯರ್ಥಿಗಳ ಆಯ್ಕೆ: ಈಶ್ವರಪ್ಪ

  • ಮಂಡ್ಯದಿಂದ ಕಬ್ಬು ಸಂಶೋಧನಾ ಸಂಸ್ಥೆ ಸ್ಥಳಾಂತರ – ಸರ್ಕಾರದ ನಡೆಗೆ ರೈತರ ಆಕ್ರೋಶ

    ಮಂಡ್ಯದಿಂದ ಕಬ್ಬು ಸಂಶೋಧನಾ ಸಂಸ್ಥೆ ಸ್ಥಳಾಂತರ – ಸರ್ಕಾರದ ನಡೆಗೆ ರೈತರ ಆಕ್ರೋಶ

    ಮಂಡ್ಯ: ಸಕ್ಕರೆ ನಾಡು ಮಂಡ್ಯ ಮೈಶುಗರ್ ಕಾರ್ಖಾನೆ ಸದ್ಯ ಸ್ಥಗಿತಗೊಂಡಿದ್ದು, ಸರ್ಕಾರ ಮಾತ್ರ ಮತ್ತೆ ಕಾರ್ಖಾನೆ ಆರಂಭಿಸಲು ಮೀನಾಮೇಷ ಎಣಿಸುತ್ತಿದ್ದೆ. ಇದೀಗ ಮಂಡ್ಯದ ಕಬ್ಬು ಸಂಶೋಧನಾ ಕೇಂದ್ರ ಹಾಗೂ ಬೆಂಗಳೂರಿನ ಆಯುಕ್ತರ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

    ಮಂಡ್ಯ ರೈತರ ಜೀವನಾಡಿಯಾಗಿರುವ ಮೈಶುಗರ್ ಕಾರ್ಖಾನೆ ಸ್ಥಬ್ಧಗೊಂಡು ಹಲವು ವರ್ಷಗಳೇ ಕಳೆದಿದೆ. ಮತ್ತೆ ಕಾರ್ಖಾನೆ ಪುನರಾರಂಭಿಸುವಂತೆ ರೈತರು, ಜಿಲ್ಲೆಯ ಜನರು ಹೋರಾಟವನ್ನು ಮಾಡ್ತಾನೆ ಇದ್ದಾರೆ. ಆದರು ರಾಜ್ಯ ಸರ್ಕಾರ ಮಾತ್ರ ಕಾರ್ಖಾನೆ ಆರಂಭಿಸುವ ಬಗ್ಗೆ ಚಿಂತನೆ ನಡೆಸದೆ ಮೀನಾಮೇಷ ಎಣಿಸುತ್ತಿದೆ. ಈ ಹೊತ್ತಲ್ಲೇ ಮಂಡ್ಯದಲ್ಲಿರುವ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಸಂಸ್ಥೆ ಹಾಗೂ ಬೆಂಗಳೂರಿನಲ್ಲಿರುವ ಸಂಸ್ಥೆಯ ಆಯುಕ್ತರ ಕಚೇರಿಯನ್ನು ಕುಂದಾನಗರಿ ಬೆಳಗಾವಿಗೆ ಸ್ಥಳಾಂತರಿಸಲು ಮುಂದಾಗಿದೆ. ಸರ್ಕಾರದ ಈ ತೀರ್ಮಾನ ಇದೀಗ ಮಂಡ್ಯ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಯಾವುದೇ ಕಾರಣಕ್ಕೂ ಸಂಶೋಧನಾ ಸಂಸ್ಥೆ ಸ್ಥಳಾಂತರಿಸದೆ ಯಥಾಸ್ಥಿತಿ ಮುಂದುವರಿಸಬೇಕು ಎಂದು ಮಂಡ್ಯ ರೈತ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ. ಇದನ್ನೂ ಓದಿ: ರಾತ್ರಿಯಾಗ್ತಿದ್ದಂತೆ ರಸ್ತೆಗಿಳಿಯೋ ಮೊಸಳೆ – ಜನರಲ್ಲಿ ಆತಂಕ

    ಕಬ್ಬು ಸಂಶೋಧನಾ ಸಂಸ್ಥೆ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕಲ್ಪನೆಯಂತೆ ಕಳೆದು ಹದಿನೈದು ವರ್ಷದ ಹಿಂದೆ ಪ್ರಾರಂಭಿಸುವ ಮೂಲಕ ಕಬ್ಬಿನ ಹಲವಾರು ತಳಿಗಳನ್ನು ರೈತರಿಗೆ ಪರಿಚಯಿಸಲಾಗಿದೆ. ಈ ಕೇಂದ್ರದಿಂದ ಮಂಡ್ಯವಲ್ಲದೇ ಹಳೆ ಮೈಸೂರು ಭಾಗದ ರೈತರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಆದರೆ ಇದೀಗ ಸ್ಥಳಾಂತರಿಸಿದ್ರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಲಿದ್ದು, ಸಂಶೋಧನಾ ಸಂಸ್ಥೆ ಉಳಿವಿಗಾಗಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ಕೊಟ್ಟಿರುವ ರೈತರು, ಸದನದಲ್ಲಿ ಜಿಲ್ಲೆಯ ಶಾಸಕರು ಧ್ವನಿ ಎತ್ತದಿದ್ದರೆ ಅವರಿಗು ಘೇರಾವ್ ಹಾಕುತ್ತೇವೆ ಎನ್ನುತ್ತಿದ್ದಾರೆ. ಮೈಶುಗರ್ ಕಾರ್ಖಾನೆ ಸ್ಥಗಿತದಿಂದ ಈಗಾಗಲೇ ಕಂಗಾಲಾಗಿರುವ ಜಿಲ್ಲೆಯ ರೈತರಿಗೆ, ಕಬ್ಬು ಸಂಶೋಧನಾ ಸಂಸ್ಥೆ ಸ್ಥಳಾಂತರಗೊಳ್ಳುವ ವಿಚಾರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ವಾಕ್ಸಿನ್ ಪಡೆದ 953 ಜನರಿಗೆ ಮತ್ತೆ ವಕ್ಕರಿಸಿದ ಕೊರೊನಾ

  • ಸುಮಲತಾ Vs ಕುಮಾರಸ್ವಾಮಿ – ಮೈ ಶುಗರ್ ವಿವಾದ ಈಗ ಎದ್ದಿದ್ದು ಯಾಕೆ?

    ಸುಮಲತಾ Vs ಕುಮಾರಸ್ವಾಮಿ – ಮೈ ಶುಗರ್ ವಿವಾದ ಈಗ ಎದ್ದಿದ್ದು ಯಾಕೆ?

    ಬೆಂಗಳೂರು: ರಾಜ್ಯದಲ್ಲಿರುವ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಯಾದ ಮಂಡ್ಯದ ಮೈ ಶುಗರ್ ವಿಚಾರದಲ್ಲಿ ವಿವಾದ ಎದ್ದಿದೆ. ಇದನ್ನು ಖಾಸಗೀಕರಣ ಮಾಡಲು ಸರ್ಕಾರ ಹೊರಟಿದೆ ಎಂಬ ಕೂಗೆದ್ದಿದೆ.

    1933ರಲ್ಲಿ ಮಂಡ್ಯದಲ್ಲಿ ಮೈ ಶುಗರ್ ಕಾರ್ಖಾನೆ ಆರಂಭಗೊಂಡಿದ್ದು ಮಂಡ್ಯ ಭಾಗದ ಜೀವನಾಡಿಯಾಗಿತ್ತು. ಮೊದಲ 50 ವರ್ಷ ಲಾಭದಾಯಕವಾಗಿದ್ದರೆ ನಂತರ ಕೆಟ್ಟ ಆಡಳಿತದಿಂದ ನಷ್ಟ. ಪುನಶ್ಚೇತನಕ್ಕಾಗಿ 2004ರಿಂದ ಈವರೆಗೆ 504 ಕೋಟಿ ಅನುದಾನ ನೀಡಲಾಗಿದೆ. ಇದನ್ನೂ ಓದಿ: ಆಡಿಯೋ, ವೀಡಿಯೋ, ಫೋನ್ ಟ್ಯಾಪಿಂಗ್ ಕುಮಾರಸ್ವಾಮಿಗೆ ಅಭ್ಯಾಸ ಆಗಿದೆ: ಸುಮಲತಾ

     

    ಸರ್ಕಾರದಿಂದ ಕೋಟಿ ಕೋಟಿ ಸುರಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಸಂಪೂರ್ಣ ಬಂದ್ ಆಗಿದೆ, ಈಗ ಖಾಸಗಿಯವರಿಗೆ 40 ವರ್ಷ ಗುತ್ತಿಗೆ ನೀಡಲು ಸರ್ಕಾರ ಪ್ಲಾನ್ ಮಾಡಿದೆ. 2021-22ರ ಸಾಲಿನ ಹಂಗಾಮಿನಿಂದ ಗುತ್ತಿಗೆ ನೀಡಲು ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ.

    ಸರ್ಕಾರದ ನಿಲುವಿಗೆ ರೈತರು, ಹೋರಾಟಗಾರರ ತೀವ್ರ ವಿರೋಧ ವ್ಯಕ್ತವಾಗಿದೆ. ಖಾಸಗೀಕರಣಕ್ಕೆ ಕುಮಾರಸ್ವಾಮಿ ವಿರೋಧ, ಸಿಎಂಗೆ ಮನವಿ ಮಾಡಿದ್ದರೆ ಸರ್ಕಾರವೇ ಆಗಲಿ, ಖಾಸಗಿಯೇ ಆಗಲಿ ಒಟ್ಟಿನಲ್ಲಿ ಕಾರ್ಖಾನೆ ಆರಂಭವಾಗಬೇಕು ಎನ್ನುವುದು ಸುಮಲತಾ ಅವರ ಮನವಿ.

  • ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ – ಮುರುಗೇಶ್ ನಿರಾಣಿ

    ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ – ಮುರುಗೇಶ್ ನಿರಾಣಿ

    ಹುಬ್ಬಳ್ಳಿ: ಕಲಘಟಗಿ ತಾಲೂಕಿನ ರೈತರು ಸಹಕಾರ ಕೊಟ್ಟು ಒಪ್ಪುವುದಾದರೆ ಒಂದೂವರೆ ವರ್ಷದಲ್ಲಿ ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡುತ್ತೇನೆ. ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವಲ್ಲಿ ನನ್ನದು ಯಾವುದೇ ಸ್ವಾರ್ಥವಿಲ್ಲ ಉದ್ಯೋಗ ಬೇರೆ ರಾಜಕಾರಣ ಬೇರೆ, ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಹೇಳಿದ್ದಾರೆ.

    ನಗರದ ಹನ್ನೆರಡು ಮಠದಲ್ಲಿ ತಾಲೂಕಿನ ರೈತರ ಸಭೆಯಲ್ಲಿ ಮಾತನಾಡಿದ ನಿರಾಣಿ, ತಾಲೂಕಿನ ರೈತರು ಷೇರು ಸಂಗ್ರಹಿಸಿ ಉಳಿದ ಎಷ್ಟೇ ಹಣ ಖರ್ಚಾದರೂ ನಾನು ಸ್ವಂತ ದುಡ್ಡು ಹಾಕಿ ಸಕ್ಕರೆ ಕಾರ್ಖಾನೆ ಸ್ಥಾಪಿಸುತ್ತೇನೆ. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಮಾಡುವುದರಿಂದ ಇಲ್ಲಿನ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಸಾಕಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕೊಟ್ಟಂತಾಗುತ್ತದೆ. 12,200 ಎಕರೆ ಕಬ್ಬು ಕಲಘಟಗಿಯಲ್ಲಿ ಬೆಳೆಯುತ್ತಿದೆ ಒಂದು ತಿಂಗಳು ಸಮಯ ತೆಗೆದುಕೊಳ್ಳಿ ಒಂದು ಉತ್ತಮ ನಿರ್ಧಾರಕ್ಕೆ ಬನ್ನಿ ಆದಷ್ಟು ಬೇಗ ಸಕ್ಕರೆ ಕಾರ್ಖಾನೆ ಗುದ್ದಲಿ ಪೂಜೆ ಮಾಡಲು ಮುಂದಾಗೋಣ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮೊದಲ ಪ್ರಯತ್ನ- ಹುಬ್ಬಳ್ಳಿಯಲ್ಲಿ 2 ರೂ.ಗೆ ಸಿಗುತ್ತೆ ಸರ್ಜಿಕಲ್ ಮಾಸ್ಕ್!

    ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವಲ್ಲಿ ನನ್ನದು ಯಾವುದೇ ಸ್ವಾರ್ಥವಿಲ್ಲ. ಉದ್ಯೋಗ ಬೇರೆ ರಾಜಕಾರಣ ಬೇರೆ ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ ನಿಮಗೆ ತಿಳಿದವರಿಗೆ ಮತಹಾಕಿ ಯಾವುದೇ ಪಕ್ಷ ಬೇಧವಿಲ್ಲದೆ ತಾಲೂಕಿನ ರೈತರು ಕಾರ್ಖಾನೆ ಸ್ಥಾಪಿಸುವಲ್ಲಿ ಸರ್ಕಾರದೊಂದಿಗೆ ಸಹಕಾರ ನೀಡಬೇಕು. ಆಗ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಶಾಸಕ ಸಿಎಂ ನಿಂಬಣ್ಣವರ್ ಮುಂದಾಳತ್ವದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡೋಣ ನನ್ನ ಒಡೆತನದಲ್ಲಿ 9 ಸಕ್ಕರೆ ಕಾರ್ಖಾನೆಗಳಿದ್ದು ಭಾರತ ದೇಶದಲ್ಲಿ 2ನೇ ಸ್ಥಾನ ನಮಗೆ ಲಭಿಸಿದೆ ಎಂದು ಅಭಿಪ್ರಾಯಪಟ್ಟರು.

    ಮನಸಿದ್ದರೆ ಮಾರ್ಗ ಮೊದಲು ಸಕ್ಕರೆ ಕಾರ್ಖಾನೆ ಮಾಡುವ ಸಂದರ್ಭದಲ್ಲಿ ಮನೆಯ ಕುಟುಂಬಸ್ಥರ ವಿರೋಧ ವ್ಯಕ್ತಪಡಿಸಿ ಮನೆಯಿಂದ ಹೊರ ಹಾಕಿದರು. ಆದರೆ ಛಲಬಿಡದೆ ಎಲ್ಲ ರೈತರ ಸಹಕಾರದೊಂದಿಗೆ ಕಾರ್ಖಾನೆ ಸ್ಥಾಪಿಸಿದ ನಂತರ ದಿನಗಳಲ್ಲಿ ಉತ್ತರ ಕರ್ನಾಟಕ ಅಷ್ಟೇ ಅಲ್ಲದೆ ಮೈಸೂರು ಭಾಗದಲ್ಲಿ ಕೂಡ ನನ್ನದೇ ಒಡೆತನದ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಉತ್ತರ ಕರ್ನಾಟಕದವರು ಯಾವುದು ಕಡಿಮೆ ಇಲ್ಲ ಎಂಬ ಹೆಗ್ಗಳಿಕೆ ಗಳಿಸಿದೆ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ ಸೌಹಾರ್ದ ಬ್ಯಾಂಕ್ ಸಿಮೆಂಟ್ ಫ್ಯಾಕ್ಟರಿ ಹಾಗೂ ನಿರಾಣಿ ಉದ್ದಿಮೆ ಸಂಸ್ಥೆ ಸೇರಿದಂತೆ ಸುಮಾರು 72 ಸಾವಿರ ಜನರಿಗೆ ಉದ್ಯೋಗವನ್ನು ನೀಡಿದ್ದೇನೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮದುವೆ ದಿಬ್ಬಣ ಹೊರಟಿದ್ದ ಟಾಟಾ ಏಸ್ ಪೊಲೀಸರ ವಶಕ್ಕೆ

    ನಂತರ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ್ ಲಿಂಬಿಕಾಯಿ, ಕಚ್ಚಾವಸ್ತು ಭೂಮಿ, ನೀರು, ವಾಹನ ಸೌಕರ್ಯ, ಕೆಲಸ ಮಾಡುವ ಪರಿಣಿತ ನೌಕರರು ಇದ್ದರೆ ಮಾತ್ರ ಉದ್ಯಮವನ್ನು ಪ್ರಾರಂಭ ಮಾಡಲು ಸಾಧ್ಯವಾಗುತ್ತದೆ. ಒಬ್ಬ ಮನುಷ್ಯ ಜೀವಿತಾವಧಿಯಲ್ಲಿ ಏನು ಸಾಧಿಸಬೇಕು ಎಂಬುದನ್ನು ನಿರಾಣಿ ಅವರು ಉದ್ಯಮದ ಮೂಲಕ ಸಾಧಿಸಿ ತೋರಿಸಿದ್ದಾರೆ ಎಂದರು.

    ಶಾಸಕ ನಿಂಬಣ್ಣವರ್ ಮಾತನಾಡಿ ಮತಕ್ಷೇತ್ರದ ದೀರ್ಘಕಾಲದ ಬೇಡಿಕೆ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕೆಂಬುದು, ಈ ಕನಸು ಈಗ ಸಾಕಾರಗೊಳ್ಳಲಿದೆ. ತಾಲೂಕಿನ ರೈತರು ಸಹಕಾರ ಅಗತ್ಯವಾಗಿದೆ ಇದರಿಂದ ತಾಲೂಕಿನ ರೈತರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಯಾಗುತ್ತದೆ. ನನ್ನ ಅವಧಿ ಮುಗಿಯುವುದರೊಳಗೆ ಮತಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಬೇಕು ಎಂಬುದು ನನ್ನ ಆಶಯ ಎಂದು ನುಡಿದರು.

    ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಶೆರೆವಾಡ, ನಿಂಗಪ್ಪ ಸುತ್ತುಗಟ್ಟಿ, ಗೀತಾ ಮರಲಿಂಗಣ್ಣವರ, ಚಂದ್ರಗೌಡ ಪಾಟೀಲ್, ನರೇಶ್ ಮಲ್ನಾಡ, ಸೋಮು ಕೂಪ್ಪದ, ಮಹಾಂತೇಶ್ ಹೆಂಬ್ಲಿ, ಎಸ್ ಎಂ ಚಿಕ್ಕಣ್ಣವರ, ವಿ.ಎಸ್ ಪಾಟೀಲ್ ಸೇರಿದಂತೆ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.