Tag: ಸಂಸ್ಥೆ

  • ಬೀದಿನಾಯಿಗಳಿಗೆ ಊಟ ನೀಡಿ ಮಾನವೀಯತೆ ಮೆರೆದ ಪ್ರಾಣಿಪ್ರೀಯರು

    ಬೀದಿನಾಯಿಗಳಿಗೆ ಊಟ ನೀಡಿ ಮಾನವೀಯತೆ ಮೆರೆದ ಪ್ರಾಣಿಪ್ರೀಯರು

    ಬೆಂಗಳೂರು: ಕೊರೊನಾ ಸಂಕಷ್ಟದಿಂದಾಗಿ ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ಇರುವಾಗ ಇಲ್ಲೊಂದು ಸಂಸ್ಥೆಯ ಪ್ರಾಣಿ ಪ್ರೀಯರು ಬೀದಿ ನಾಯಿಗಳಿಗೆ ಊಟವನ್ನು ನೀಡುತ್ತಾ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ.

    ಲಾಕ್‍ಡೌನ್‍ ಎಫೆಕ್ಟ್ ನಿಂದಾಗಿ, ಆಹಾರಕ್ಕಾಗಿ ಪ್ರಾಣಿ, ಪಕ್ಷಿಗಳು ಪರದಾಡುವಂತಾಗಿದೆ. ತುತ್ತು ಅನ್ನ, ಬೊಗಸೆ ನೀರಿಗಾಗಿ ಬೀದಿ ನಾಯಿಗಳು, ಪಕ್ಷಿಗಳು ಅಲೆದಾಡುತ್ತಿವೆ. ಬೀದಿನಾಯಿಗಳಿಗೆ ಊಟ ಹಾಕೋರು ಇಲ್ಲ. ಇದನ್ನ ಅರಿತ ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆ, ನಗರದ ಹಲವು ಭಾಗಗಳಿಗೆ ತೆರಳಿ ಬೀದಿ ನಾಯಿಗಳಿಗೆ ಊಟ ನೀಡುತ್ತಿದ್ದಾರೆ.

    ನಗರದ ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ ಸೇರಿದಂತೆ ಹಲವೆಡೆ ಪ್ರತಿದಿನ 150ಕ್ಯೂ ಹೆಚ್ಚು ಬೀದಿ ನಾಯಿಗಳಿಗೆ ಮೂರು ಹೊತ್ತಿನ ಊಟ ನೀಡುತ್ತಿದ್ದಾರೆ. ಜೊತೆಗೆ ಪುಟ್ಟ ಪುಟ್ಟ ನಾಯಿ ಮರಿಗಳಿಗೂ ಊಟ ವಿತರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಡಿ ಬಾಸ್ ಮನವಿಗೆ ಭರ್ಜರಿ ಪ್ರತಿಕ್ರಿಯೆ-2 ದಿನದಲ್ಲಿ 25 ಲಕ್ಷ ಸಂಗ್ರಹ

    ಮನುಷ್ಯರಿಗೆ ಊಟ ಸಿಗುತ್ತದೆ. ಆದರೆ ಬೀದಿ ನಾಯಿಗಳು ಊಟ ಸಿಗದೇ ಪರದಾಡುತ್ತಿವೆ. ಅದರಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಕೈಗಾರಿಕೆಗಳು ಆರಂಭವಾಗದೇ ಇರೋದ್ರಿಂದ ಹಸಿವಿನಿಂದ ಸಾಯುತ್ತಿವೆ. ಹೀಗಾಗಿ ಪ್ರಾಣಿಗಳಿಗೆ ಆಹಾರವನ್ನು ನೀಡುತ್ತಿದ್ದೇವೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆಯ ಅಧ್ಯಕ್ಷ, ಅಭಿಷೇಕ್ ಹೇಳಿದ್ದಾರೆ.

  • ಮಿಮಿಕ್ರಿ ಮಾಡಿಯೇ 70 ಕೋಟಿ ಲೂಟಿ- ಪತ್ನಿಗೆ ಬಿಡಿಗಾಸು, ಪ್ರೇಯಸಿಗೆ ಕೋಟಿ ಕೋಟಿ..!

    ಮಿಮಿಕ್ರಿ ಮಾಡಿಯೇ 70 ಕೋಟಿ ಲೂಟಿ- ಪತ್ನಿಗೆ ಬಿಡಿಗಾಸು, ಪ್ರೇಯಸಿಗೆ ಕೋಟಿ ಕೋಟಿ..!

    ಬೆಂಗಳೂರು: ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಮಾಲೀಕನಿಗೆ ಕೋಟಿ ಕೋಟಿ ವಂಚನೆ ಮಾಡಿ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ನೂರಾರು ಬ್ರಾಂಚ್‍ಗಳನ್ನು ಹೊಂದಿರುವ ಮಣಿಪಾಲ್ ಗ್ರೂಪ್‍ನಲ್ಲಿ ಇಂಥದ್ದೊಂದು ವಂಚನೆ ನಡೆದಿದೆ. ಸಂದೀಪ್ ಗುರುರಾಜ್ ಕಂಪನಿಯ ಹೈ ಸೆಕ್ಯೂರಿಟಿ ಬೇಧಿಸಿ ಕೋಟ್ಯಂತರ ರೂ. ವಂಚನೆ ಮಾಡಿದ ವ್ಯಕ್ತಿ. ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯ ಜೆ.ಡಬ್ಲ್ಯು ಮೆರಿಯಟ್‍ನಲ್ಲಿರುವ ಮಣಿಪಾಲ್ ಇಂಟಿಗ್ರೇಟೆಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಡಿಜಿಎಂ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ಕಂಪನಿಯ ಹಣದ ಮೇಲೆ ಕಣ್ಣು ಬಿದ್ದಿತ್ತು. ಆದರೆ ಹಣ ಹೊಡೆಯೋದು ಅಷ್ಟು ಸುಲಭವಾಗಿರಲಿಲ್ಲ.

    ಮಣಿಪಾಲ್ ಗ್ರೂಪ್‍ನ ಎಲ್ಲಾ ಹಣದ ವ್ಯವಹಾರಗಳು ನಡೆಯೋದು ಆಫ್ರಿಕಾ ದೇಶದ ಮಾರಿಷೆಸ್‍ನಲ್ಲಿ. ಅಲ್ಲಿನ ಬ್ಯಾಂಕ್‍ನಲ್ಲಿ ಯಾವುದೇ ಹಣ ವರ್ಗಾವಣೆ ಮಾಡಬೇಕಾದ್ರೂ ಮಣಿಪಾಲ್ ಎಂ.ಡಿ ರಂಜಿತ್ ಪೈ ವಾಯ್ಸ್ ಕೋಡ್ ಮ್ಯಾಚ್ ಆಗಬೇಕು. ವಾಯ್ಸ್ ಕೊಡ್ ಮ್ಯಾಚ್ ಆದಲ್ಲಿ ಮಾತ್ರ ಹಣ ವರ್ಗಾವಣೆ ಮಾಡಬಹುದು. ಈ ವಿಚಾರ ತಿಳಿದ ಡಿಜಿಎಂ ಸಂದೀಪ್ ಗುರುರಾಜ್, ವರ್ಷಗಳ ಕಾಲ ರಂಜಿತ್ ಪೈರವರ ವಾಯ್ಸ್ ಮಿಮಿಕ್ರಿ ಮಾಡೋದು ಕಲೀತಿದ್ದ. ಇದನ್ನೇ ಬಳಸಿಕೊಂಡು, ಇಂಡಿಯಾದಲ್ಲಿ ಹತ್ತು ಕೋಟಿ, ವಿದೇಶಗಳಲ್ಲಿ 60 ಕೋಟಿ ಸೇರಿದಂತೆ 70 ಕೋಟಿ ಹಣ ಹಣವನ್ನು ಅಕ್ರಮವಾಗಿ ಟಾನ್ಸ್ ಫರ್ ಮಾಡಿದ್ದನು.

    ಅಸಲಿಗೆ ಡಿಜಿಎಂ ಸಂದೀಪ್ ಗುರುರಾಜ್‍ಗೆ ಈ ರೀತಿಯ ಐಡಿಯಾ ಬಂದಿದ್ದು, ಅದೇ ಕಂಪನಿಯಲ್ಲಿ ಎಚ್‍ಆರ್ ಆಗಿ ಕೆಲಸ ಮಾಡ್ತಿದ್ದ ಅಮೃತಾಳ ಮೋಹದಿಂದ. ಅಮೃತಾಳಿಗೆ ಹಣದ ಆಸೆ ತೋರಿಸಿದ ಡಿಜಿಎಂ, ಮಾರಿಷಸ್‍ನಲ್ಲಿದ್ದ ಹೈ ಸೆಕ್ಯೂರಿಟಿ ಬ್ಯಾಂಕ್ ನಿಂದ ಮಾಲೀಕನ ವಾಯ್ಸ್, ಕೋಡ್ ವರ್ಡ್ಸ್ ಬಳಸಿ, ಹಂತ ಹಂತವಾಗಿ ಕೋಟಿ ಕೋಟಿ ಹಣವನ್ನು ಟಾನ್ಸ್‍ಫರ್ ಮಾಡಿಕೊಂಡಿದ್ದಾನೆ. ಅದರಲ್ಲಿ 52 ಕೋಟಿಯಷ್ಟು ಹಣವನ್ನು ಅಮೃತಾಳ ಅಕೌಂಟ್‍ಗೆ ಹಾಕಿದ್ರೆ, ತನ್ನ ಪತ್ನಿಯ ಅಕೌಂಟ್‍ಗೆ ಎಂಟು ಕೋಟಿ ಹಣ ವರ್ಗಾವಣೆ ಮಾಡಿದ್ದ. ಕೊನೆಗೆ ಇನ್ನು ಹತ್ತು ಕೋಟಿ ಹಣ ಟಾನ್ಸ್ ಫರ್ ಮಾಡುವ ವೇಳೆ ಮಾರಿಷಸ್ ಬ್ಯಾಂಕ್ ಅಧಿಕಾರಿಗಳಿಗೆ ಡೌಟ್ ಬಂದು ಎಂಡಿ ರಂಜಿತ್ ಪೈ ಗಮನಕ್ಕೆ ತಂದ ವೇಳೆ ಡಿಜಿಎಂ ಸಂದೀಪ್ ಗುರುರಾಜ್‍ನ ಅಸಲಿ ಮುಖವಾಡ ಬಯಲಾಗಿದೆ.

    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು, ಪ್ರಮುಖ ಆರೋಪಿ ಡಿಜಿಎಂ ಸಂದೀಪ್ ಗುರುರಾಜ್, ಪತ್ನಿ ಚಾರು ಸ್ನೀತಾ, ಪ್ರೇಯಸಿ ಅಮೃತಾ ಮತ್ತು ಆಕೆಯ ತಾಯಿ ಮೀರಾ ಚಂಗಪ್ಪರನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬೆಂಗ್ಳೂರಲ್ಲಿ ಮನೆ ಖರೀದಿ ಮಾಡ್ತೀರಾ? ಯಾವ ಪ್ರದೇಶದಲ್ಲಿ ಡಬಲ್ ಬೆಡ್ ರೂಂಗೆ ಎಷ್ಟು ಲಕ್ಷ? ಇಲ್ಲಿದೆ ಮಾಹಿತಿ

    ಬೆಂಗ್ಳೂರಲ್ಲಿ ಮನೆ ಖರೀದಿ ಮಾಡ್ತೀರಾ? ಯಾವ ಪ್ರದೇಶದಲ್ಲಿ ಡಬಲ್ ಬೆಡ್ ರೂಂಗೆ ಎಷ್ಟು ಲಕ್ಷ? ಇಲ್ಲಿದೆ ಮಾಹಿತಿ

    ಬೆಂಗಳೂರು: ರಾಜಧಾನಿಯಲ್ಲಿ ಮನೆ ಖರೀದಿಸುವುದೇ ದೊಡ್ಡ ಕಷ್ಟ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ದರ ನಿಗದಿಯಾಗಿದೆ. ಹೀಗಾಗಿ ಯಾವ ಪ್ರದೇಶದಲ್ಲಿ ಎಷ್ಟು ರೂ. ದರ ಇದೆ ಎನ್ನುವ ಮಾಹಿತಿಯನ್ನು ಮನೆ ಖರೀದಿಸುವ ಜನ ಹುಡುಕುತ್ತಿರುತ್ತಾರೆ.

    ದೇಶದ ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ಮಾಹಿತಿ datalabs.proptiger.ಯಾವ ಪ್ರದೇಶದಲ್ಲಿ ಎಷ್ಟು ದರ ಇದೆ ಎನ್ನುವುದನ್ನು ಅಂದಾಜಿಸಿದೆ. ಇದರಲ್ಲಿ ಸಿಂಗಲ್ ಬೆಡ್ ರೂಂ, ಡಬ್ಬಲ್ ಬೆಡ್ ರೂಂ ಹಾಗೂ ತ್ರಿಬ್ಬಲ್ ಬೆಡ್ ರೂಂ ಮನೆಗಳ ದರವನ್ನು ಪ್ರಕಟಿಸಿದೆ.

    50 ಲಕ್ಷ ರೂಪಾಯಿ, 50 ರಿಂದ 75 ಲಕ್ಷ ರೂಪಾಯಿಯೊಳಗಿನ ಮನೆಗಳು ಹಾಗೂ 75 ಲಕ್ಷ ರೂಪಾಯಿಗಿಂತ ಹೆಚ್ಚಿರುವ ಮನೆಗಳು ಎಂದು ವಿಂಗಡಿಸಿ ಈ ಮಾಹಿತಿಯನ್ನು ಪ್ರಕಟಿಸಿದೆ.

    ಯಾವ ಪ್ರದೇಶದಲ್ಲಿ ಎಷ್ಟು?
    ಚಂದಾಪುರ ಏರಿಯಾದ 1 ಬೆಡ್ ರೂಂನ 970 ಚದರ ಅಡಿಯಲ್ಲಿನ ಮನೆಯ ಪ್ರತಿ ಅಡಿಗೆ 2,550 ರೂಪಾಯಿಯಂತೆ ಅಂದಾಜು 24.76 ಲಕ್ಷ ರೂಪಾಯಿ ಇದ್ದರೆ, ಎಲೆಕ್ಟ್ರಾನಿಕ್ ಸಿಟಿ ಪೇಸ್ 1 ರಲ್ಲಿ 1 ಬೆಡ್ ರೂಂನ 990 ಚದರ ಅಡಿ ಮನೆಯ ಪ್ರತಿ ಅಡಿಗೆ 3,400 ರೂಪಾಯಿಯಂತೆ ಅಂದಾಜು 33.66 ಲಕ್ಷ ರೂಪಾಯಿ ನಿಗದಿಯಾಗಿದೆ.

    ಎಲೆಕ್ಟ್ರಾನಿಕ್ ಸಿಟಿ ಪೇಸ್ 2 ರಲ್ಲಿ 1 ಬೆಡ್ ರೂಂನ 1,030 ಚದರ ಅಡಿ ಮನೆಯ ಪ್ರತಿ ಅಡಿಗೆ 3,600 ರೂಪಾಯಿಯಂತೆ, ಅಂದಾಜು 37.08 ಲಕ್ಷ ರೂಪಾಯಿ ಆಗಲಿದೆ. ಗೊಟ್ಟಿಗೆರೆಯಲ್ಲಿ 2 ಬೆಡ್ ರೂಂನ 1,140 ಚದರ ಅಡಿ ಮನೆಯ ಪ್ರತಿ ಅಡಿಗೆ 3,450 ರೂಪಾಯಿಯಂತೆ ಅಂದಾಜು 39.33 ಲಕ್ಷ ರೂಪಾಯಿ ಆಗಲಿದೆ.

    ಜಕ್ಕೂರು ಪ್ರದೇಶದಲ್ಲಿ 2 ಬೆಡ್ ರೂಂನ 1,110 ಚದರ ಅಡಿ ಮನೆಯ ಪ್ರತಿ ಅಡಿಗೆ 3,900 ರೂಪಾಯಿಯಂತೆ ಅಂದಾಜು 43.29 ಲಕ್ಷ ರೂಪಾಯಿ ಆಗಲಿದೆ. ನಾಗರಭಾವಿ ಪ್ರದೇಶದಲ್ಲಿ 1 ಬೆಡ್ ರೂಂನ 930 ಚದರ ಅಡಿ ಮನೆಯ ಪ್ರತಿ ಅಡಿಗೆ 4,450 ರೂಪಾಯಿಯಂತೆ ಅಂದಾಜು 41.38 ಲಕ್ಷ ರೂಪಾಯಿ ನಿಗದಿಯಾಗಿದೆ

    ಸರ್ಜಾಪುರ ಪ್ರದೇಶದಲ್ಲಿ 1 ಬೆಡ್ ರೂಂನ 1,050 ಚದರ ಅಡಿ ಮನೆಯ ಪ್ರತಿ ಅಡಿಗೆ 3,050 ರೂಪಾಯಿಯಂತೆ ಅಂದಾಜು 32.02 ಲಕ್ಷ ರೂಪಾಯಿ ಆಗಲಿದ್ದು, ಥಣಿಸಂದ್ರ ಪ್ರದೇಶದಲ್ಲಿ 1 ಬೆಡ್ ರೂಂನ 1,020 ಚದರ ಅಡಿ ಮನೆಯ ಪ್ರತಿ ಅಡಿಗೆ 4,300 ರೂಪಾಯಿಯಂತೆ ಅಂದಾಜು 43.86 ಲಕ್ಷ ರೂಪಾಯಿ ಆಗಲಿದೆ.

    ವರ್ತೂರು ಪ್ರದೇಶದಲ್ಲಿ 1 ಬೆಡ್ ರೂಂನ 1,040 ಚದರ ಅಡಿ ಮನೆಯ ಪ್ರತಿ ಅಡಿಗೆ 3,900 ರೂಪಾಯಿಯಂತೆ ಅಂದಾಜು 40.56 ಲಕ್ಷ ರೂಪಾಯಿ ಆಗಲಿದ್ದು, ಯಲಹಂಕ ಪ್ರದೇಶದಲ್ಲಿ 1 ಬೆಡ್ ರೂಂನ 970 ಚದರ ಅಡಿ ಮನೆಯ ಪ್ರತಿ ಅಡಿಗೆ 4,250 ರೂಪಾಯಿಯಂತೆ ಅಂದಾಜು 41.22 ಲಕ್ಷ ರೂಪಾಯಿ ನಿಗದಿಯಾಗಿದೆ.

    50 ರಿಂದ 75 ಲಕ್ಷ ರೂ.:
    ಥಣಿಸಂದ್ರ ಮುಖ್ಯ ರಸ್ತೆ ಕಣ್ಣೂರಿನ ಪ್ರದೇಶದಲ್ಲಿ 2 ಬೆಡ್ ರೂಂನ 1,350 ಚದರ ಅಡಿ ಮನೆಯ ಪ್ರತಿ ಅಡಿಗೆ 4,550 ರೂಪಾಯಿಯಂತೆ ಅಂದಾಜು 61.42 ಲಕ್ಷ ರೂಪಾಯಿ ಆದರೆ, ಕೆಂಗೇರಿ ಪ್ರದೇಶದಲ್ಲಿ 2 ಬೆಡ್ ರೂಂನ 1,440 ಚದರ ಅಡಿ ಮನೆಯ ಪ್ರತಿ ಅಡಿಗೆ 4,050 ರೂಪಾಯಿಯಂತೆ ಅಂದಾಜು 58.32 ಲಕ್ಷ ರೂಪಾಯಿ ನಿಗದಿಯಾಗಿದೆ.

    ಕೆ.ಆರ್.ಪುರಂ ಪ್ರದೇಶದಲ್ಲಿ 2 ಬೆಡ್ ರೂಂನ 1,320 ಚದರ ಅಡಿ ಮನೆಯ ಪ್ರತಿ ಅಡಿಗೆ 4,550 ರೂಪಾಯಿಯಂತೆ ಅಂದಾಜು 60.06 ಲಕ್ಷ ರೂಪಾಯಿ ನಿಗದಿಯಾಗಿದ್ದರೆ, ಸುಬ್ರಹ್ಮಣ್ಯಪುರ ಪ್ರದೇಶದಲ್ಲಿ 2 ಬೆಡ್ ರೂಂನ 1,260 ಚದರ ಅಡಿ ಮನೆಯ ಪ್ರತಿ ಅಡಿಗೆ 5,100 ರೂಪಾಯಿಯಂತೆ ಅಂದಾಜು 64.26 ಲಕ್ಷ ರೂಪಾಯಿ ಆಗಲಿದೆ.

    ವೈಟ್‍ಫೀಲ್ಡ್‍ನ ಹೋಪ್ ಫಾರ್ಮ್ ಜಂಕ್ಷನ್ ಪ್ರದೇಶದಲ್ಲಿ 2 ಬೆಡ್ ರೂಂನ 1,350 ಚದರ ಅಡಿ ಮನೆಯ ಪ್ರತಿ ಅಡಿಗೆ 4,450 ರೂಪಾಯಿಯಂತೆ ಅಂದಾಜು 60.07 ಲಕ್ಷ ರೂಪಾಯಿ ಆಗಲಿದೆ.

    75 ಲಕ್ಷ ರೂ. ಮೇಲ್ಪಟ್ಟು ಎಲ್ಲಿ ಮನೆ ಸಿಗುತ್ತೆ?
    ಹೆಣ್ಣೂರು ಮುಖ್ಯ ರಸ್ತೆಯ ಅಂಗಾಲಾಪುರ ಪ್ರದೇಶದಲ್ಲಿ 3 ಬೆಡ್ ರೂಂನ 2,020 ಚದರ ಅಡಿ ಮನೆಯ ಪ್ರತಿ ಅಡಿಗೆ 6,400 ರೂಪಾಯಿಯಂತೆ ಅಂದಾಜು 129.28 ಲಕ್ಷ ರೂಪಾಯಿ ಆಗಲಿದೆ. ಹೊಸ ರೋಡ್ ಪ್ರದೇಶದಲ್ಲಿ 2 ಬೆಡ್ ರೂಂನ 1,770 ಚದರ ಅಡಿ ಮನೆಯ ಪ್ರತಿ ಅಡಿಗೆ 5,500 ರೂಪಾಯಿಯಂತೆ ಅಂದಾಜು 93.35 ಲಕ್ಷ ರೂಪಾಯಿ ಆಗಲಿದೆ.

    ಕಲ್ಯಾಣ ನಗರ ಪ್ರದೇಶದಲ್ಲಿ 2 ಬೆಡ್ ರೂಂನ 1,870 ಚದರ ಅಡಿ ಮನೆಯ ಪ್ರತಿ ಅಡಿಗೆ 6,400 ರೂಪಾಯಿಯಂತೆ ಅಂದಾಜು 119.68 ಲಕ್ಷ ರೂಪಾಯಿ ಆಗಲಿದೆ. ಕುಮಾರಸ್ವಾಮಿ ಲೇಔಟ್ ಪ್ರದೇಶದಲ್ಲಿ 2 ಬೆಡ್ ರೂಂನ 1,990 ಚದರ ಅಡಿ ಮನೆಯ ಪ್ರತಿ ಅಡಿಗೆ 6,650 ರೂಪಾಯಿಯಂತೆ ಅಂದಾಜು 132.33 ಲಕ್ಷ ರೂಪಾಯಿ ಆಗಲಿದೆ.

    ಮಾರತಹಳ್ಳಿ ಪ್ರದೇಶದಲ್ಲಿ 3 ಬೆಡ್ ರೂಂನ 2,440 ಚದರ ಅಡಿ ಮನೆಯ ಪ್ರತಿ ಅಡಿಗೆ 7,350 ರೂಪಾಯಿಯಂತೆ ಅಂದಾಜು 179.34 ಲಕ್ಷ ರೂಪಾಯಿ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಾನುವಾರು ಸಾಗಿಸುತ್ತಿದ್ದ ಐವರ ಬಂಧನ

    ಜಾನುವಾರು ಸಾಗಿಸುತ್ತಿದ್ದ ಐವರ ಬಂಧನ

    ಬೆಂಗಳೂರು: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಐವರನ್ನು ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಐವರು ಆರೋಪಿಗಳು ಅಕ್ರಮವಾಗಿ ಆನೇಕಲ್ ನ ಚಂದಾಪುರ ಸಂತೆಯಿಂದ ತಮಿಳುನಾಡಿಗೆ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಖಚಿತ ಮಾಹಿತಿ ಪಡೆದ ಕೌ ಕ್ಯಾನ್ ಪೌಂಡೇಶನ್ ಸಂಸ್ಥೆಯ ರಮಣ್ ಎಂಬವರ ನೇತೃತ್ವದ ತಂಡವು, ಅತ್ತಿಬೆಲೆಯ ಟೋಲ್ ಗೇಟ್ ಬಳಿ ವಾಹನವನ್ನು ತಡೆದು ಪರಿಶೀಲನೆ ನಡೆಸಿದೆ.

    ಈ ವೇಳೆ ವಾಹನದಲ್ಲಿ ಅಕ್ರಮವಾಗಿ 7 ಎತ್ತುಗಳು ಹಾಗೂ 21 ಸೀಮೆಹಸುವಿನ ಕರುಗಳನ್ನು ಕಂಡುಬಂದಿದ್ದು, ಕೂಡಲೇ ವಾಹನದಲ್ಲಿದ್ದ ಐವರನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಸಂಘಟನೆಯು ವಶಪಡಿಸಿಕೊಂಡ ಜಾನುವಾರುಗಳನ್ನು ಆದಿಚುಂಚನಗಿರಿ ಮಠದ ಗೋಶಾಲೆಗೆ ಕಳುಹಿಸಿಕೊಟ್ಟಿದ್ದಾರೆ.

    ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಯಾವ ಸ್ವಾರ್ಥವೂ ಇಲ್ಲದೆ ಬೀದಿನಾಯಿಗಳ ಸಂರಕ್ಷಣೆ ಮಾಡ್ತಿದೆ `ಲವ್ ಫಾರ್ ಫರ್ಗಟನ್’ ಸಂಸ್ಥೆ

    ಯಾವ ಸ್ವಾರ್ಥವೂ ಇಲ್ಲದೆ ಬೀದಿನಾಯಿಗಳ ಸಂರಕ್ಷಣೆ ಮಾಡ್ತಿದೆ `ಲವ್ ಫಾರ್ ಫರ್ಗಟನ್’ ಸಂಸ್ಥೆ

    ಬೆಂಗಳೂರು: ಬೀದಿ ನಾಯಿ ಅಂದರೆ ಸಾಕು ಜನರಿಗೆ ಕಚ್ಚುತ್ತೆ, ಗಲೀಜು ಅಂತಾ ದೂರ ಹೋಗುತ್ತಾರೆ. ಆದರೆ ಬೀದಿ ನಾಯಿಗಳ ಸಂರಕ್ಷಣೆಗಾಗಿಯೇ ಒಂದು ಸಂಸ್ಥೆಯನ್ನು ಸ್ಥಾಪಿಸಿ ಅವುಗಳನ್ನು ರಕ್ಷಿಸುತ್ತಿದ್ದಾರೆ.

    ಬೆಂಗಳೂರಿನ ಜೆಪಿನಗರದಲ್ಲಿ ಲವ್ ಫಾರ್ ಫರ್ಗಟನ್ ಎನ್ನುವ ಸಂಸ್ಥೆ ಇದೆ. ಕಳೆದ ಒಂದು ವರ್ಷದಿಂದ ಸುಕನ್ಯ ಮತ್ತು ಅವರ ತಂಡ ಈ ಸಂಸ್ಥೆಯನ್ನು ಸ್ಥಾಪಿಸಿ ಬೀದಿ ನಾಯಿಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಹಸಿವಿನಿಂದ, ಅನಾರೋಗ್ಯದಿಂದ ಮತ್ತು ಅಪಘಾತವಾದ ಬೀದಿನಾಯಿಗಳಿಗೆ ಚಿಕಿತ್ಸೆ ಕೊಡಿಸಿ, ತಮ್ಮ ಶೇಲ್ಟರ್ನಲ್ಲಿ ರಕ್ಷಣೆ ನೀಡುತ್ತಿದ್ದಾರೆ. ಅವುಗಳು ಸಂಪೂರ್ಣವಾಗಿ ಚೇತರಿಸಿಕೊಂಡ ಮೇಲೆ ಅವುಗಳ ಮೂಲ ಸ್ಥಳಕ್ಕೆ ಬಿಟ್ಟುಬರುತ್ತಾರೆ.

    ಒಂದು ವರ್ಷದಲ್ಲಿ ಸುಮಾರು 150 ಕ್ಕೂ ಹೆಚ್ಚು ಬೀದಿ ನಾಯಿಗಳ ರಕ್ಷಣೆ ಮಾಡಿದ್ದೇವೆ. ನಮ್ಮ ದೊಡ್ಡಮ್ಮನಿಂದ ಉತ್ತೇಜನ ಪಡೆದು ಈ ಕೆಲಸ ಮಾಡುತ್ತಿದ್ದಾನೆ. ಅನಾರೋಗ್ಯದಿಂದ ನರಳುವ ಬೀದಿನಾಯಿಗಳಿಗಾಗಿಯೇ ಶೇಲ್ಟರ್ ನಿರ್ಮಿಸಿದ್ದೇವೆ. ಈಗ ಸುಮಾರು 25 ಕ್ಕೂ ಹೆಚ್ಚಿನ ನಾಯಿಗಳು ಇಲ್ಲಿವೆ. ನಿಮ್ಮ ಏರಿಯಾಗಳಲ್ಲಿ ಅನಾರೋಗ್ಯ ಪೀಡಿತ ನಾಯಿಗಳ ಕಂಡರೆ ನಮಗೆ ತಿಳಿಸಿ ನಾವು ಅವುಗಳ ಕೇರ್ ತಗೋತ್ತೀವೆ ಎಂದು ಟ್ರೇಸ್ಟಿ ಸುಕನ್ಯಾ ಹೇಳಿದರು.

    ಯಾವ ಸ್ವಾರ್ಥವೂ ಇಲ್ಲದೆ ತಮ್ಮ ಸಂಪಾದನೆಯಲ್ಲವನು ಇತಂಹ ಬೀದಿನಾಯಿಗಳ ರಕ್ಷಣೆಗೆ ಬಳಸುತ್ತಿರುವ ಸುಕನ್ಯಾ ಮತ್ತು ಅವರ ತಂಡಕ್ಕೆ ಧನ್ಯವಾದಗಳು.