ಚಿತ್ರದುರ್ಗ: ಮನೆಗೆ ಫೋನ್ ಕರೆ ಮಾಡಿದ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ವಸತಿ ಶಾಲೆಯ ಶಿಕ್ಷಕ ವೀರೇಶ್ ಹಿರೇಮಠನನ್ನು ಬಂಧಿಸಿದ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.
ವಿಡಿಯೋ ವೈರಲ್ ಆದ ಬಳಿಕ ನಾಪತ್ತೆಯಾಗಿದ್ದ ವೀರೇಶ್‌ನನ್ನು ಪೊಲೀಸರು ಕಲಬುರಗಿಯಲ್ಲಿ ಬಂಧಿಸಿದ್ದರು.
ತಡರಾತ್ರಿ ಆರೋಪಿಯನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ನ್ಯಾಯಾಧೀಶರು 2 ದಿನ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ವೀರೇಶ್‌ನನ್ನು ಚಿತ್ರದುರ್ಗ ಜೈಲಿಗೆ ಕಳುಹಿಸಿದ್ದಾರೆ.
ಏನಿದು ಪ್ರಕರಣ?
ಗುರು ತಿಪ್ಪೇಸ್ವಾಮಿ ದೇವಸ್ಥಾನದ ಅಧೀನದ ವೇದ ಅಧ್ಯಯನ ಶಾಲೆಯ ಶಿಕ್ಷಕ ವೀರೇಶ್ ಹಿರೇಮಠ್ ವಿದ್ಯಾರ್ಥಿಯನ್ನು ನೆಲಕ್ಕೆ ತಳ್ಳಿ ಎಲ್ಲೆಂದರಲ್ಲಿ ಮನಬಂದಂತೆ ಒದ್ದಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಲಕ್ನೋ: ಉತ್ತರ ಪ್ರದೇಶ (Uttar Pradesh) ಮಾಧ್ಯಮಿಕ ಸಂಸ್ಕೃತ (Sanskrit) ಶಿಕ್ಷಾ ಪರಿಷತ್ತು ಮಂಡಳಿ ನಡೆಸಿದ ಪರೀಕ್ಷೆಯಲ್ಲಿ 13,738 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಮೊಹಮ್ಮದ್ ಇರ್ಫಾನ್ ಅಗ್ರ ಸ್ಥಾನ ಪಡೆದು ಅಭೂತಪೂರ್ವ ಸಾಧನೆ (Achievement) ಮಾಡಿದ್ದಾನೆ.
ಈತ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯವನಾಗಿದ್ದು, ಸಂಪೂರ್ಣಾನಂದ ಸಂಸ್ಕೃತ ಸರ್ಕಾರಿ ಶಾಲೆಯಲ್ಲಿ (Sampoornananda Sanskrit Government School) ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ ಸಂಸ್ಕೃತ ಪರೀಕ್ಷೆಯಲ್ಲಿ 82.71% ಅಂಕ ಪಡೆದು ಮೊದಲನೇ ಸ್ಥಾನ ಪಡೆದಿದ್ದಾನೆ. ಈತ ಇಸ್ಲಾಂ (Islam) ಧರ್ಮಕ್ಕೆ ಸೇರಿದವನಾಗಿದ್ದು, ತಂದೆ ಸಲಾಲುದ್ದೀನ್ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಾರೆ. ಮಗನ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಜ್ಜಿ ಗೆದ್ದಿದ್ದ ತೆಲಂಗಾಣದ ಮೇದಕ್ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಲೋಕಸಭೆಗೆ ಸ್ಪರ್ಧೆ?
ಪುತ್ರನ ಸಾಧನೆ ಬಗ್ಗೆ ಮಾತನಾಡಿದ ಅವರು, ಮಗನ ಸಾಧನೆ ತುಂಬಾ ಸಂತೋಷ ತಂದಿದೆ. ನಾನು ದಿನಗೂಲಿ ಕಾರ್ಮಿಕನಾಗಿರುವುದರಿಂದ ಮಗನನ್ನು ಉನ್ನತ ಶಾಲೆಯಲ್ಲಿ ಕಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಸಂಪೂರ್ಣಾನಂದ ಸಂಸ್ಕೃತ ಶಾಲೆಗೆ ಸೇರಿಸಿದ್ದೆ. ಆ ಶಾಲೆಯಲ್ಲಿ ಸಂಸ್ಕೃತ ಕಡ್ಡಾಯ ವಿಷಯವಾಗಿದ್ದರಿಂದ ನನ್ನ ಮಗ ಅದನ್ನು ಇಷ್ಟಪಟ್ಟು ಕಲಿತ. ಈಗ ಅವನಿಗೆ ಸಂಸ್ಕೃತದಲ್ಲಿ ಬರೆಯಲು ಹಾಗೂ ಮಾತನಾಡಲು ಬರುತ್ತದೆ. ಅವನ ಮುಂದಿನ ಆಸೆಯಂತೆ ಸಂಸ್ಕೃತದಲ್ಲಿ ಶಾಸ್ತ್ರಿ (ಬಿಎ ಸಮಾನ) ಹಾಗೂ ಆಚಾರ್ಯ (ಎಂಎ ಸಮಾನ) ಓದಿಸುತ್ತೇನೆ. ಮುಂದೆ ಅವನು ಸಂಸ್ಕೃತ ಉಪನ್ಯಾಸಕನಾಗಬೇಕು ಎಂಬ ಆಸೆ ಹೊಂದಿದ್ದಾನೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿದ್ಯುತ್ ಕಡಿತ : ಮಂದ ಬೆಳಕಿನಲ್ಲೇ ಭಾಷಣ ಮಾಡಿದ ರಾಷ್ಟ್ರಪತಿ ಮುರ್ಮು
ಲಕ್ನೋ: ‘ಅಲ್ಲಾ’ (Allah) ಎಂಬ ಪದ ಭಾರತದ ಪ್ರಾಚೀನ ಭಾಷೆಯಾದ ಸಂಸ್ಕೃತದಿಂದ (Sanskrit) ಬಂದಿದೆ ಎಂದು ವಾರಣಾಸಿಯ (Varanasi) ಗೋವರ್ಧನ ಪುರಿ ಮಠದ ಮುಖ್ಯಸ್ಥರಾದ ನಿಶ್ಚಲಾನಂದ ಸರಸ್ವತಿ (Shankaracharya Nischalanand Saraswati) ಹೇಳಿಕೆ ನೀಡಿದ್ದಾರೆ.
ಅಲ್ಲಾ ಎಂಬ ಪದ ಹೆಣ್ತನದ ಶಕ್ತಿಯನ್ನು ಸೂಚಿಸುತ್ತದೆ. ಈ ಪದವನ್ನು ದುರ್ಗಾ ದೇವಿಯನ್ನು ಪ್ರಾರ್ಥಿಸಲು ಬಳಸಲಾಗುತ್ತದೆ. ಜಗತ್ತಿನಲ್ಲಿ ಇರುವುದು ಕೇವಲ ಒಂದೇ ಧರ್ಮ. ಅದು ಹಿಂದೂ ಸನಾತನ ಧರ್ಮ. ಉಳಿದ ಎಲ್ಲಾ ಧರ್ಮಗಳು ಕೇವಲ ಪಂಗಡಗಳು. ಧರ್ಮದ ಬಗ್ಗೆ ಪ್ರಶ್ನೆಯನ್ನು ಎತ್ತುವವರು ಮೊದಲು ಸಂಸ್ಕೃತ ವ್ಯಾಕರಣವನ್ನು ಕಲಿತುಕೊಳ್ಳಿ ಎಂದು ಹೇಳಿದರು. ಇದನ್ನೂ ಓದಿ: ದೆಹಲಿ ಪಾಲಿಕೆಯಲ್ಲಿ ಹೈಡ್ರಾಮಾ – ಪರಸ್ಪರ ಹೊಡೆದಾಡಿಕೊಂಡ ಬಿಜೆಪಿ, ಆಪ್ ಸದಸ್ಯರು
‘ಅಲ್ಲಾ’ ಮತ್ತು ‘ಓಂ’ ಪದಗಳೆರಡೂ ಒಂದೇ ಎಂಬ ಮೌಲಾನಾ ಸೈಯದ್ ಅರ್ಷದ್ ಮದನಿಯವರ ಹೇಳಿಕೆಯನ್ನು ಟೀಕಿಸಿದ ನಿಶ್ಚಲಾನಂದ ಸರಸ್ವತಿ, ಬೇರೆ ಧರ್ಮದ ಗ್ರಂಥಗಳ ವಿರುದ್ಧ ಮಾತನಾಡುವ ಧೈರ್ಯ ಯಾರಿಗೂ ಇಲ್ಲ. ರಾಮಚರಿತಮಾನಸಗಳನ್ನು ಪ್ರಶ್ನಿಸುವವರು ಚಾಣಕ್ಯ ನೀತಿಯನ್ನು ಓದಬೇಕು ಎಂದರು.
ಪಂಡಿತ್ ಧೀರೇಂದ್ರ ಶಾಸ್ತ್ರಿ ಅವರನ್ನು ಹಾಡಿ ಹೊಗಳಿದ ಅವರು, ಶಾಸ್ತ್ರಿ ಅವರು ಅಲೆದಾಡುತ್ತಿರುವ ಹಿಂದೂಗಳನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. ದೇವರ ಹೆಸರನ್ನು ತೆಗೆದುಕೊಂಡು ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು ಎಂದಿಗೂ ತಾವು ಪವಾಡಗಳನ್ನು ಮಾಡಿರುವುದಾಗಿ ಹೇಳಿಕೊಂಡಿಲ್ಲ. ಅವರು ಹೇಳಿರುವ ಎಲ್ಲಾ ವಿಚಾರಗಳೂ ನಿಜವಾಗಿದೆ. ಇದಕ್ಕೆಲ್ಲಾ ಕಾರಣ ಭಗವಾನ್ ಹನುಮಂತನ ಶಕ್ತಿ ಎಂದರು. ಇದನ್ನೂ ಓದಿ: ಭ್ರಷ್ಟಾಚಾರ ಆರೋಪ – ಪಂಜಾಬ್ ಆಪ್ ಶಾಸಕ ಬಂಧನ
LIVE TV
[brid partner=56869869 player=32851 video=960834 autoplay=true]
ಮುಂಬೈ: ಸಂಸ್ಕೃತ (Sanskrit) ಏಕೆ ಭಾರತದ ಅಧಿಕೃತ ಭಾಷೆಯಾಗಬಾರದು? 1949 ರ ಮಾಧ್ಯಮ ವರದಿಗಳ ಪ್ರಕಾರ, ಸಂವಿಧಾನ ಶಿಲ್ಪಿ ಮತ್ತು ಖ್ಯಾತ ನ್ಯಾಯಶಾಸ್ತ್ರಜ್ಞ ಬಿ.ಆರ್.ಅಂಬೇಡ್ಕರ್ (BR Ambedkar) ಅವರು ಕೂಡ ಇದನ್ನು ಪ್ರಸ್ತಾಪಿಸಿದ್ದರು ಎಂದು ಸುಪ್ರೀಂ ಕೋರ್ಟ್‌ನ (Supreme Court) ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ (S.A.Bobde) ಹೇಳಿದ್ದಾರೆ.
ಉಚ್ಚ ನ್ಯಾಯಾಲಯದ ಮಟ್ಟದಲ್ಲಿ ಇಂಗ್ಲಿಷ್ ಇಂಗ್ಲಿಷ್ ಅಧಿಕೃತ ಭಾಷೆಯಾಗಿದೆ. ಆದರೂ ಅನೇಕ ಹೈಕೋರ್ಟ್‌ಗಳು ಪ್ರಾದೇಶಿಕ ಭಾಷೆಗಳಲ್ಲಿ ಅರ್ಜಿಗಳು ಮತ್ತು ದಾಖಲೆಗಳನ್ನು ಸಹ ಅನುಮತಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಮಸ್ಯೆಯು (ಅಧಿಕೃತ ಭಾಷೆ) ಬಗೆಹರಿಯದೆ ಉಳಿಯಬೇಕು ಎಂದು ನಾನು ಭಾವಿಸುವುದಿಲ್ಲ. ಇದು 1949 ರಿಂದ ಇತ್ಯರ್ಥವಾಗದೆ ಉಳಿದಿದೆ. ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ತಪ್ಪು ಸಂವಹನವಾಗುವ ಗಂಭೀರ ಅಪಾಯಗಳಿವೆ ಎಂದು ಎಚ್ಚರಿಸಿದ್ದಾರೆ.
1949ರ ಸೆಪ್ಟೆಂಬರ್ 11 ರಲ್ಲಿ ಪತ್ರಿಕೆಗಳು, ಡಾ ಅಂಬೇಡ್ಕರ್ ಅವರು ಸಂಸ್ಕೃತವನ್ನು ಭಾರತ ಒಕ್ಕೂಟದ ಅಧಿಕೃತ ಭಾಷೆಯನ್ನಾಗಿ ಮಾಡುವ ಕ್ರಮವನ್ನು ಪ್ರಾರಂಭಿಸಿದರು ಎಂದು ವರದಿ ಮಾಡಿದೆ. ನಮ್ಮ ಬಹಳಷ್ಟು ಭಾಷೆಗಳಲ್ಲಿ ಸಂಸ್ಕೃತ ಶಬ್ದ ಸಂಪತ್ತಿದೆ. ಅಂಬೇಡ್ಕರ್ ಅವರು ಪ್ರಸ್ತಾಪಿಸಿದಂತೆ ಸಂಸ್ಕೃತ ಅಧಿಕೃತ ಭಾಷೆಯಾಗದಿರಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ʼGo First’ಗೆ 10 ಲಕ್ಷ ದಂಡ
ಸಂಸ್ಕೃತ ಯಾವುದೇ ಧರ್ಮವನ್ನು ಪರಿಚಯಿಸುವುದಿಲ್ಲ. ಭಾಷೆಗಳಿಗೆ ಯಾವುದೇ ಧರ್ಮದೊಂದಿಗೆ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಆದರೆ ತತ್ವಶಾಸ್ತ್ರ, ಕಾನೂನು, ವಿಜ್ಞಾನ, ಸಾಹಿತ್ಯ, ವಾಸ್ತುಶಿಲ್ಪ, ಖಗೋಳಶಾಸ್ತ್ರ ಇತ್ಯಾದಿ ವಿಷಗಳೊಂದಿಗೆ ಭಾಷೆ ಸಂಬಂಧವನ್ನು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.
ಸಂಸ್ಕೃತ ಭಾಷೆಯು ದಕ್ಷಿಣ ಅಥವಾ ಉತ್ತರ ಭಾರತಕ್ಕೆ ಸೇರಿಲ್ಲ. ಇದು ಜಾತ್ಯತೀತ ಬಳಕೆಗೆ ಸಂಪೂರ್ಣವಾಗಿ ಸಮರ್ಥವಾಗಿದೆ. ಈ ಭಾಷೆ ಕಂಪ್ಯೂಟರ್‌ಗಳಿಗೆ ಹೆಚ್ಚು ಸೂಕ್ತವಾದದ್ದು ಎಂದು ನಾಸಾ ವಿಜ್ಞಾನಿಯೊಬ್ಬರು ಕಂಡುಕೊಂಡಿದ್ದಾರೆ. ಆ ವಿಜ್ಞಾನಿ ‘ಸಂಸ್ಕೃತ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಜ್ಞಾನ ಪ್ರಾತಿನಿಧ್ಯ’ ಎಂಬ ಲೇಖನವನ್ನು ಬರೆದಿದ್ದಾರೆ. ಸಾಧ್ಯವಾದಷ್ಟು ಕಡಿಮೆ ಪದಗಳಲ್ಲಿ ಸಂದೇಶಗಳನ್ನು ಸಂವಹನ ಮಾಡಲು ಸಂಸ್ಕೃತವನ್ನು ಬಳಸಬಹುದು ಎಂದು ಅವರು ಅದರಲ್ಲಿ ಉಲ್ಲೇಖಿಸಿದ್ದಾರೆಂದು ಹೇಳಿದ್ದಾರೆ.
ಸಮೀಕ್ಷೆಯೊಂದನ್ನು ಉಲ್ಲೇಖಿಸಿ ಮಾತನಾಡಿದ ಬೋಬ್ಡೆ, ಶೇ.43.63 ರಷ್ಟು ನಾಗರಿಕರು ಹಿಂದಿ ಮಾತನಾಡುತ್ತಾರೆ. ಆದರೆ ಕೇವಲ ಶೇ.6ರಷ್ಟು ಜನರು ಇಂಗ್ಲಿಷ್ ಮಾತನಾಡುತ್ತಾರೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಶೇ.3 ಕ್ಕೆ ಇಳಿಯುತ್ತದೆ. ಶೇ.41 ರಷ್ಟು ಶ್ರೀಮಂತರು ಇಂಗ್ಲಿಷ್ ಮಾತನಾಡುತ್ತಾರೆ. ಆದರೆ ಬಡವರಲ್ಲಿ ಇದು ಕೇವಲ ಶೇ.2ಕ್ಕೆ ಇಳಿಯುತ್ತದೆ. ಸಂಸ್ಕೃತವು ಪ್ರಾಯಶಃ ನಮ್ಮ ಪ್ರಾದೇಶಿಕ ಭಾಷೆಗಳೊಂದಿಗೆ ಸಹ ಅಸ್ತಿತ್ವದಲ್ಲಿರಬಹುದಾದ ಏಕೈಕ ಭಾಷೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಇದೇ ವೇಳೆ ಭಾರತ ಸಂವಿಧಾನದ 8ನೇ ಅನುಸೂಚಿಯನ್ನೂ ಉಲ್ಲೇಖಿಸಿದರು. ಇದನ್ನೂ ಓದಿ: ಜೆಎನ್‌ಯು, ಜಾಮಿಯಾ ಬಳಿಕ ದೆಹಲಿ ವಿವಿಗೆ ಕಾಲಿಟ್ಟ ಮೋದಿ ಸಾಕ್ಷ್ಯಚಿತ್ರ ವಿವಾದ
Live Tv
[brid partner=56869869 player=32851 video=960834 autoplay=true]
ತಿರುನಂತಪುರಂ: ರಾಜಕೀಯ ಪಕ್ಷಗಳಿಂದ (Political Parties) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೇಸರೀಕರಣ, ಜಾತೀಯತೆಯ ಪ್ರಭಾವ ಹೆಚ್ಚಾಗುತ್ತಿದೆ ಎನ್ನುವ ಆರೋಪಗಳ ನಡುವೆಯೂ ಕೇರಳದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯೊಂದು (Islamic Education Institute) ಸಾಮರಸ್ಯ ಬೆಸೆಯಲು ಮುಂದಾಗಿದೆ. ಧರ್ಮಗಳ ಬಗ್ಗೆ ಜಾಗೃತಿ ಮೂಡಿಸಲು ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಲ್ಲಿ ತನ್ನ ವಿದ್ಯಾರ್ಥಿಗಳಿಗೆ ಅರೇಬಿಕ್, ಕುರಾನ್ ಜೊತೆಗೆ ಸಂಸ್ಕೃತ ಶ್ಲೋಕ (Teaching Sanskrit) ಹಾಗೂ ಭಗವದ್ಗೀತೆಗಳನ್ನೂ (BhagavadGita) ಕಲಿಸಿಕೊಡುತ್ತಿದೆ.
ಹೌದು. ಬಿಳಿ ನಿಲುವಂಗಿ, ಶಿರವಸ್ತ್ರ ವಿದ್ಯಾರ್ಥಿಗಳು (Students) ಹಿಂದೂ ಗುರುಗಳಿಂದ ಕಲಿತ ಸಂಸ್ಕೃತ ಶ್ಲೋಕ ಹಾಗೂ ಮಂತ್ರ ಪಠಣ ಮಾಡುವುತ್ತಿರುವ ದೃಶ್ಯ ಕೇರಳದ ತ್ರಿಶೂರ್ ಜಿಲ್ಲೆಯ ಇಸ್ಲಾಮಿಕ ಶಿಕ್ಷಣ ಸಂಸ್ಥೆಯಲ್ಲಿ ಕಂಡುಬಂದಿದೆ. ಗುರುಗಳು ಹೇಳುತ್ತಿದ್ದಂತೆ ವಿದ್ಯಾರ್ಥಿಯೊಬ್ಬರು `ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈಶ್ರೀ ಗುರವೇ ನಮಃ’ ಶ್ಲೋಕವನ್ನು ಪಠಿಸಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ವಿಭಿನ್ನ ಶ್ಲೋಕವನ್ನು (Slokas) ಪಠಿಸಿದ್ದಾರೆ, ಗುರುಗಳು ಇದನ್ನು ಪ್ರಸಂಶಿಸಿದ್ದಾರೆ. ಶಿಕ್ಷಣ ಕೇಂದ್ರದ ಈ ನಡೆಗೆ ಈಗ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅಕಾಡೆಮಿ ಆಫ್ ಷರಿಯಾ ಮತ್ತು ಅಡ್ವಾನ್ಸ್ಡ್ ಸ್ಟಡೀಸ್ (ASAS) ಪ್ರಾಂಶುಪಾಲ ಓಂಪಿಲ್ಲಿ ಮುಹಮ್ಮದ್ ಫೈಝಿ, ವಿದ್ಯಾರ್ಥಿಗಳಲ್ಲಿ ಇತರ ಧರ್ಮಗಳ ಬಗ್ಗೆ ಜ್ಞಾನ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಸಂಸ್ಕೃತ, ಉಪನಿಷತ್ತುಗಳು, ಪುರಾಣ ಇತ್ಯಾದಿಗಳನ್ನು ಕಲಿಸಲಾಗುತ್ತಿದೆ. ಅವರು ಇತರ ಧರ್ಮಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ನಾವು ಭಾವಿಸಿದ್ದೇವೆ. ಅದಕ್ಕಾಗಿ ಸಂಸ್ಕೃತದ ಜೊತೆಗೆ ಉಪನಿಷತ್ತುಗಳು, ಶಾಸ್ತ್ರ, ವೇದಾಂತಗಳ ಅಧ್ಯಯನಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ಚಾಲೆಂಜ್ ಹಾಕಿ ಠಾಣೆ ಪಕ್ಕದಲ್ಲೇ ಸರಗಳ್ಳತನ- ಇಬ್ಬರು ಅರೆಸ್ಟ್
10ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ 8 ವರ್ಷಗಳ ಅವಧಿಯಲ್ಲಿ ಭಗವದ್ಗೀತೆ, ಉಪನಿಷತ್ತುಗಳು, ಮಹಾಭಾರತ, ರಾಮಾಯಣದ ಪ್ರಮುಖ ಆಯ್ದ ಭಾಗಗಳನ್ನು ಸಂಸ್ಕೃತದಲ್ಲಿ ಕಲಿಸಲಾಗುತ್ತದೆ. ಇದು ಕ್ಯಾಲಿಕಟ್ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾಗಿರುವುದರಿಂದ ಪದವಿ ಕೋರ್ಸ್‌ಗಳ ಜೊತೆಗೆ ಉರ್ದು, ಇಂಗ್ಲಿಷ್, ಇತರ ಭಾಷೆಗಳನ್ನು ಕಲಿಸಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.
ಶೈಕ್ಷಣಿಕ ಕೆಲಸಗಳ ಜವಾಬ್ದಾರಿ ದೊಡ್ಡ ಹೊರೆ. ಹಾಗಾಗಿ ನಾವು ಅದನ್ನು ಕಟ್ಟುನಿಟ್ಟಾಗಿ ನಿಭಾಯಿಸುವ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಇಲ್ಲಿಗೆ ಬರೋದಕ್ಕೂ ಮುನ್ನವೇ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಹೀನಾಯ ಸೋಲಿಗೆ ಇದೇ ಕಾರಣ – ಪಾಕ್ ತಜ್ಞರ ವಿಶ್ಲೇಷಣೆ
ಆರಂಭದಲ್ಲಿ ಅರೇಬಿಕ್‌ನಂತೆಯೇ ಸಂಸ್ಕೃತ ಕಲಿಯುವುದು ಕಷ್ಟಕರವಾಗಿತ್ತು. ಆದರೆ ನಿರಂತರವಾಗಿ ಅಧ್ಯಯನ ಮತ್ತು ಅಭ್ಯಾಸದಿಂದ ಸುಲಭವಾಗುತ್ತದೆ. ಇದೀಗ ವಿದ್ಯಾರ್ಥಿಗಳೇ ಹೆಚ್ಚು ಉತ್ಸುಕರಾಗಿದ್ದಾರೆ. ನಿಯಮಿತ ತರಗತಿಗಳು ಮತ್ತು ಪರೀಕ್ಷೆಗಳೂ ಕಲಿಕೆಗೆ ಸಹಾಯಕವಾಗಿದೆ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕ್ರಿಕೆಟ್ (Cricket) ಆಟದಲ್ಲಿ ಇಂಗ್ಲಿಷ್, ಕನ್ನಡ, ಹಿಂದಿಯಲ್ಲಿ ಕಾಮಿಂಟ್ರಿ ಕೇಳಿರ್ತೀರಿ. ಆದರೆ ಬೆಂಗಳೂರಿನಲ್ಲಿ ಕನ್ನಡಿಗರೊಬ್ಬರು ಸಂಸ್ಕೃತದಲ್ಲಿ ಕಾಮೆಂಟ್ರಿ ಕೊಟ್ಟು ವೈರಲ್ ಆಗಿದ್ದಾರೆ. ಇಷ್ಟು ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಗಲ್ಲಿ ಕ್ರಿಕೆಟ್ ನ ಸಂಸ್ಕೃತ ಕಾಮೆಂಟರಿ (Sanksrit Comentary) ಗೆ ಮೆಚ್ಚುಗೆ ವ್ಯಕ್ತಪಡಿಸಿ ರೀ ಟ್ವೀಟ್ ಮಾಡಿದ್ದಾರೆ.
ಹೌದು. ಒಂದೇ ಒಂದು ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬೆಂಗಳೂರಿನ ಗಿರಿನಗರದಲ್ಲಿರುವ ಸಂಸ್ಕೃತ ವಠಾರ, ಅಂದರೆ ಸಂಸ್ಕೃತ ಭಾರತೀ ಆವರಣದಲ್ಲಿ ಸಂಸ್ಕೃತವೇ ವ್ಯಾವಹಾರಿಕ ಭಾಷೆ. ಅಲ್ಲಿನ ವಿದ್ಯಾರ್ಥಿಗಳು ಕ್ರಿಕೆಟ್ ಆಡುವಾಗ ಸಂಸ್ಕೃತ ವಿದ್ವಾಂಸರಾದ ಲಕ್ಷ್ಮೀನಾರಾಯಣ್ ಸಂಸ್ಕೃತದಲ್ಲಿ ಕಾಮೆಂಟರಿ ಮಾಡಿದ್ರು. ಆ ವೀಡಿಯೋವನ್ನ ಸಂಸ್ಕೃತ ಮತ್ತು ಕ್ರಿಕೆಟ್ ಎಂದು ಟ್ವೀಟ್ ಮಾಡಿದ್ರು. ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದಕ್ಕೆ ಇನ್ನೊಂದು ಪ್ರಮುಖ ಕಾರಣ ಅಂದ್ರೆ ಪ್ರಧಾನಿ ನರೇಂದ್ರ ಮೋದಿ (Narendra Modi). ಮೋದಿಯರು ಈ ವೀಡಿಯೋ ರೀಟ್ವಿಟ್ ಮಾಡಿದ್ದರ ಪರಿಣಾಮ ಲಕ್ಷಾಂತರ ಮಂದಿ ವೀಡಿಯೋ ನೋಡಿ ಶೇರ್ ಮಾಡಿದ್ದಾರೆ.
— LAKSHMI NARAYANA B.S (BHUVANAKOTE) (@chidsamskritam) October 2, 2022
ಪ್ರಧಾನಿ ಮೋದಿ ಸಂಸ್ಕೃತ ಕ್ರಿಕೆಟ್ ಕಾಮೆಂಟರಿಯನ್ನ ರಿಟ್ವೀಟ್ ಮಾಡಿದ ನಂತರ ದೇಶಾದ್ಯಂತ ಪ್ರಶಂಸೆ ಮಹಾಪೂರವೇ ಹರಿದು ಬರ್ತಿದೆ. ಕ್ರಿಕೆಟ್ ಕಾಮೆಂಟರಿ ಮಾಡಿದ ಸಂಸ್ಕೃತ ಪಂಡಿತ ಲಕ್ಷ್ಮೀ ನಾರಾಯಣ ಎಂಬವರು ಪಬ್ಲಿಕ್ ಟಿವಿ ಜೊತೆ ಮುಕ್ತವಾಗಿ ಮಾತನಾಡಿ ಖುಷಿ ವ್ಯಕ್ತಪಡಿಸಿದ್ರು. ಸಂಸ್ಕೃತ ಭಾರತೀ ಆವರಣದಲ್ಲಿ ಸಂಸ್ಕೃತವೇ ವ್ಯಾವಹಾರಿಕ ಭಾಷೆ. ಇಲ್ಲಿ ನಿತ್ಯ ಕ್ರಿಕೆಟ್ ಆಡೋ ವಠಾರದ ಹುಡುಗರನ್ನ ನೋಡಿ ಸಂಸ್ಕೃತದಲ್ಲೇ ಕಾಮೆಂಟರಿ ಮಾಡಿದರೆ ಹೇಗೆ ಅಂತ ಮಾಡಿದ್ವಿ ಎಂದು ಹೇಳಿದ್ದಾರೆ.
This is heartening to see…Congrats to those undertaking this effort.
ಈ ಸಂಸ್ಕೃತದ ಕಾಮೆಂಟರಿ ವೀಡಿಯೋ ಟ್ವೀಟ್ ಮಾಡಿದ್ದನ್ನ ಪ್ರಧಾನಿ ಗುರುತಿಸಿ ರಿಟ್ವೀಟ್ ಮಾಡಿದ ನಂತರ ಈಗ ದೇಶದ ದಿಗ್ಗಜ ಕ್ರಿಕೆಟರ್ ಗಳಿಂದಲೂ ಸಂಸ್ಕೃತ ಕಾಮೆಂಟರಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಯ ಪ್ರಧಾನಿ ರಿಟ್ವೀಟ್ ದೇಶದ ಮೂಲ ಭಾಷೆ ಸಂಸ್ಕೃತಕ್ಕೆ ಸಿಕ್ಕ ಜಯ ಎಂದು ಅಲ್ಲಿನ ವಿದ್ಯಾರ್ಥಿಗಳು ಸಹ ಖುಷಿಯಲ್ಲಿದ್ದಾರೆ.
ಡೆಹ್ರಾಡೂನ್: ಉತ್ತರಾಖಂಡ ಸರ್ಕಾರವು ರಾಜ್ಯದ 13 ಜಿಲ್ಲೆಗಳಲ್ಲಿ ತಲಾ ಒಂದು ಸಂಸ್ಕೃತ ಮಾತನಾಡುವ ಗ್ರಾಮವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.
ಈ ಮೂಲಕ ಸಂಸ್ಕೃತವನ್ನು ಉತ್ತೇಜಿಸಲು ಈ ಪ್ರಮಾಣದಲ್ಲಿ ಉಪಕ್ರಮವನ್ನು ಪ್ರಾರಂಭಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡವಾಗಿದೆ. ಸಂಸ್ಕೃತವು ಉತ್ತರಾಖಂಡದ ಎರಡನೇ ಅಧಿಕೃತ ಭಾಷೆಯಾಗಿದೆ.
ಗ್ರಾಮಗಳ ನಿವಾಸಿಗಳಿಗೆ ಪ್ರಾಚೀನ ಭಾರತೀಯ ಭಾಷೆಯನ್ನು ದೈನಂದಿನ ಸಂವಹನ ಮಾಧ್ಯಮವಾಗಿ ಬಳಸಲು ತಜ್ಞರಿಂದ ತರಬೇತಿ ನೀಡಲಾಗುವುದು ಮತ್ತು ಸಂಸ್ಕೃತ ಶಿಕ್ಷಕರನ್ನು ಕಳುಹಿಸಲಾಗುವುದು ಎಂದು ಉತ್ತರಾಖಂಡದ ಸಂಸ್ಕೃತ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಹೇಳಿದ್ದಾರೆ.
ಸಂಸ್ಕೃತ ಗ್ರಾಮ ಎಂದು ಕರೆಯಲ್ಪಡುವ ಹಳ್ಳಿಗಳು ಪ್ರಾಚೀನ ಭಾರತೀಯ ಸಂಸ್ಕೃತಿಯ ಕೇಂದ್ರವಾಗುತ್ತವೆ. ಯುವ ಪೀಳಿಗೆ ತನ್ನ ಪೂರ್ವಜರ ಭಾಷೆಯಲ್ಲಿ ಮಾತನಾಡುವಂತಿರಬೇಕು. ಯುವ ಪೀಳಿಗೆಯನ್ನು ಅದರ ಬೇರುಗಳಿಗೆ ಹತ್ತಿರಕ್ಕೆ ಕೊಂಡೊಯ್ಯುವುದರ ಜೊತೆಗೆ, ಈ ಗ್ರಾಮಗಳು ದೇಶಾದ್ಯಂತ ಮತ್ತು ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಭಾರತದ ಪ್ರಾಚೀನ ಸಂಸ್ಕೃತಿಯ ಪರಿಚಯಿಸಲಿದೆ ಎಂದು ತಿಳಿಸಿದರು.
ತಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಸ್ಕೃತ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಕಲ್ಪನೆಯನ್ನು ಮೊದಲು ರೂಪಿಸಲಾಯಿತು. ಆದರೆ ಯೋಜನೆಯು ಪ್ರಾರಂಭವಾಗಿರಲಿಲ್ಲ. ಈ ಹಿಂದೆ ಬಾಗೇಶ್ವರ ಮತ್ತು ಚಮೋಲಿ ಜಿಲ್ಲೆಯ ಎರಡು ಕಡೆ ಪ್ರಾಯೋಗಿಕವಾಗಿ ಜಾರಿಯಾಗಿತ್ತು. ಈಗ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಲು ಸರ್ಕಾರ ಮುಂದಾಗಿದೆ.
ಪ್ರಸ್ತುತ ಭಾರತದಲ್ಲೇ ಸಂಸ್ಕೃತದಲ್ಲೇ ಸಂವಹನ ನಡೆಸುವ ಏಕೈಕ ಗ್ರಾಮ ಕರ್ನಾಟಕದಲ್ಲಿದೆ. ಶಿವಮೊಗ್ಗದ ನಗರದಿಂದ 10 ಕಿಲೋಮೀಟರ್ ದೂರದಲ್ಲಿರುವ ಮತ್ತೂರು ಗ್ರಾಮದಲ್ಲಿ ಸಂಸ್ಕೃತದಲ್ಲಿ ಸಂವಹನ ನಡೆಯುತ್ತಿದೆ.
Live Tv
[brid partner=56869869 player=32851 video=960834 autoplay=true]
ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ದೃಶ್ಯಗಳಿರುವ ವೀಡಿಯೋ ವೈರಲ್ ಆಗಿತ್ತು. ಪರಿಣಾಮವಾಗಿ ಡೀನ್ ಎ.ರತ್ನವೇಲ್ ಅವರನ್ನು ಪದಚ್ಯುತಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು.
ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಇತ್ತೀಚೆಗೆ, ವೈದ್ಯಕೀಯ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ʼಹಿಪೊಕ್ರೆಟಿಕ್ ಪ್ರಮಾಣʼಕ್ಕೆ ಬದಲಾಗಿ ‘ಚರಕ ಶಪಥ’ವನ್ನು ನೀಡುವಂತೆ ಸೂಚಿಸಿತ್ತು. ಬಿಜೆಪಿ ನೇತೃತ್ವದ ಸರ್ಕಾರದ ಹಿಂದುತ್ವದ ಅಜೆಂಡಾದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಕ್ಷೇಪಗಳು ಸಹ ವ್ಯಕ್ತವಾಗಿದ್ದವು.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ಚರಕ ಶಪಥ ಐಚ್ಛಿಕವಾದದ್ದು. ʻಚರಕ ಶಪಥʼ ಪ್ರಮಾಣ ವಚನಕ್ಕೆ ವೈದ್ಯಕೀಯ ವಿದ್ಯಾರ್ಥಿಗಳನ್ನು ಬಲವಂತಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಚರಕ ಶಪಥವು ಪುರಾತನ ವೈದ್ಯಕೀಯ ಪದ್ಧತಿಗಳ ಆಯುರ್ವೇದ ಗ್ರಂಥಗಳಲ್ಲಿ ಒಂದಾದ ‘ಚರಕ ಸಂಹಿತಾ’ದಿಂದ ಬಂದಿದೆ. ಹಿಪೊಕ್ರೆಟಿಕ್ ಪ್ರಮಾಣವು ಗ್ರೀಕ್ ವೈದ್ಯಕೀಯ ಪಠ್ಯದ ಮೂಲದ್ದಾಗಿದೆ. ಇದನ್ನೂ ಓದಿ: ಎರಡೂವರೆ ಗಂಟೆ ಸಭೆ – ರಾಜ್ಯದಲ್ಲೂ ಯುವ ಮುಖಗಳಿಗೆ ಮಣೆ?
ನಿನ್ನೆಯಷ್ಟೇ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಹೆಚ್ಚು ಟ್ರೋಲ್ ಆಗಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್, ಇವತ್ತು ರಾಷ್ಟ್ರ ಭಾಷೆಯ ಕಾರಣಕ್ಕಾಗಿ ಮತ್ತೆ ಸುದ್ದಿಯಾಗಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ‘ಹಿಂದಿ ರಾಷ್ಟ್ರ ಭಾಷೆ’ ಎಂದು ಹೇಳಿ ಕನ್ನಡಿಗರ ಎದೆಯಲ್ಲಿ ರೋಷಾಗ್ನಿ ಹೆಚ್ಚಿಸಿದ್ದರು. ಕಂಗನಾ ಕೂಡ ಅಜಯ್ ದೇವಗನ್ ಮಾತಿಗೆ ಅನುಮೋದನೆ ನೀಡುವುದಷ್ಟೇ ಅಲ್ಲ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇದನ್ನೂ ಓದಿ : ಕಂಗನಾ ರಣಾವತ್ ಏನಿದು ಅವತಾರ ಎಂದ ನೆಟ್ಟಿಗರು
ಹಿಂದಿ ರಾಷ್ಟ್ರ ಭಾಷೆ ಎಂದು ಅಜಯ್ ದೇವಗನ್ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ನಾವು ಇನ್ನೂ ಆಳವಾಗಿ ಯೋಚಿಸಬೇಕಿದೆ. ಹಿಂದಿ, ಫ್ರೆಂಚ್ ಸೇರಿದಂತೆ ಹಲವು ಭಾಷೆಗಳ ಉಗಮಕ್ಕೆ ಸಂಸ್ಕೃತ ಕಾರಣ. ಹಾಗಾಗಿ ಸಂಸ್ಕೃತ ಭಾಷೆಯನ್ನೇ ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕು. ಕಡ್ಡಾಯವಾಗಿ ಅದನ್ನು ಶಾಲೆಯಲ್ಲಿ ಕಲಿಸಬೇಕು ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ. ಇದನ್ನೂ ಓದಿ : ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ
ಇಂಗ್ಲಿಷ್ ಅನ್ನು ಸಂಪರ್ಕ ಭಾಷೆಯನ್ನಾಗಿ ಪರಿಗಣಿಸಬೇಕು ಎಂದು ಹೇಳುತ್ತಾರೆ. ಅದರ ಅಗತ್ಯವಿಲ್ಲ. ಪ್ರಾದೇಶಿಕ ಭಾಷೆಗಳನ್ನೇಕೆ ಸಂಪರ್ಕ ಭಾಷೆಯನ್ನಾಗಿ ಇಟ್ಟುಕೊಳ್ಳುಬಾರದು ಎಂದು ಹೇಳುವ ಮೂಲಕ ಪ್ರಾದೇಶಿಕ ಭಾಷೆಗಳು ರಾಷ್ಟ್ರ ಭಾಷೆಯಾಗಲು ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್
ತಮ್ಮ ಮಾತುಗಳ ಮೂಲಕ ಅಜಯ್ ದೇವಗನ್ ಅವರ ಮಾತನ್ನು ಸಮರ್ಥಿಸಿಕೊಂಡಿರುವ ಕಂಗನಾ ವಿರುದ್ಧ ಕನ್ನಡಿಗರು ಕೆರಳಿದ್ದಾರೆ. ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಅವರು ಮಾತುಗಳಿಗೆ ಕಾಮೆಂಟ್ ಮಾಡಿದ್ದಾರೆ.
ಲಕ್ನೋ: ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯೊಬ್ಬಳು ಲಕ್ನೋ ವಿಶ್ವವಿದ್ಯಾನಿಲಯದ (ಎಲ್‍ಸಿ) ಸ್ನಾತಕೋತ್ತರ ಪದವಿಯ (ಎಂಎ) ಸಂಸ್ಕೃತ ವಿಷಯದಲ್ಲಿ ಐದು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಲಕ್ನೋ ವಿಶ್ವವಿದ್ಯಾನಿಲಯದ (ಎಲ್‍ಸಿ) ವಿದ್ಯಾರ್ಥಿನಿ ಗಜಲ ಅವರಿಗೆ ಪ್ರೋ. ಶಶಿ ಶುಕ್ಲಾ ಪದಕಗಳನ್ನು ಪ್ರದಾನ ಮಾಡಿದರು. ಕಳೆದ ವರ್ಷ ನವೆಂಬರ್‍ನಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಈ ಕುರಿತು ಘೋಷಣೆ ಮಾಡಲಾಗಿತ್ತು. ಕೋವಿಡ್ ಕಾರಣದಿಂದ ಎಲ್ಲ ವಿದ್ಯಾರ್ಥಿಗಳಿಗೆ ಪದಕ ನೀಡಲು ಸಾಧ್ಯವಾಗಿರಲಿಲ್ಲ.
ದಿನಗೂಲಿ ಕಾರ್ಮಿಕನ ಮಗಳಾಗಿರುವ ಗಜಲ, 5 ಭಾಷೆಯನ್ನು (ಇಂಗ್ಲಿಷ್, ಹಿಂದಿ, ಉರ್ದು, ಅರೆಬೀಕ್, ಸಂಸ್ಕೃತ) ಬಲ್ಲವಳಾಗಿದ್ದಾಳೆ. 10ನೇ ತರಗತಿಯಲ್ಲಿದ್ದಾಗ ಆಕೆಯ ತಂದೆ ನಿಧನರಾದರು. ಬಳಿಕ ಶಿಕ್ಷಣ ಮುಂದುವರಿಸಲು ತೊಂದರೆ ಎದುರಾಗಿತ್ತು. ಆದರೆ ಇಬ್ಬರು ಸಹೋದರರ ಬೆಂಬಲದಿಂದ ಶಿಕ್ಷಣ ಮುಂದುವರಿಸಲು ಗಜಲಳಿಗೆ ಸಾಧ್ಯವಾಯಿತು. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?
ಸಂಸ್ಕೃತ ವಿಷಯವನ್ನು ಏಕೆ ಆರಿಸಿದ್ದೀರಿ ಎಂದು ಕೇಳಿದಾಗ, ದೇವರ ಸ್ವಂತ ಭಾಷೆಯಾಗಿರುವ ಸಂಸ್ಕೃತ ಎಲ್ಲ ಭಾಷೆಗಳಿಗೆ ತಾಯಿ. ಇದು ದೈವಿಕವಾಗಿದ್ದು, ಸಾಹಿತ್ಯವಾಗಿದೆ. ಸಂಸ್ಕೃತ ಕಾವ್ಯವು ಹೆಚ್ಚು ಮಧುರವಾಗಿದೆ. ಈ ಪದಕಗಳನ್ನು ನನ್ನಿಂದಾಗಿ ಅಲ್ಲ, ನನ್ನ ಸಹೋದರಾದ ಶದಾಬ್ ಹಾಗೂ ನಬಾವ್ ಅವರ ಸಹಾಯದಿಂದ ಗಳಿಸಲು ಸಾಧ್ಯವಾಗಿದೆ. ಅವರಿಬ್ಬರು ಸಣ್ಣ ವಯಸ್ಸಿನಲ್ಲಿಯೇ ಗ್ಯಾರೇಜ್‍ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಇದರಿಂದಾಗಿ ನನಗೆ ಅಧ್ಯಯನ ಮುಂದುವರಿಸಲು ಸಾಧ್ಯವಾಯಿತು. ಗಜಲಗೆ ತಾಯಿ ನಸ್ರೀನ್ ಬಾನು ಹಾಗೂ ಸಹೋದರಿ ಯಾಸ್ಮೀನ್ ಕೂಡಾ ಇದ್ದಾರೆ. ಅಲ್ಲದೆ ಭವಿಷ್ಯದಲ್ಲಿ ಸಂಸ್ಕೃತ ಪ್ರಾಧ್ಯಾಪಕಿಯಾಗುವ ಗುರಿ ಎಂದಿದ್ದಾರೆ.