Tag: ಸಂಸದ ವೀರಪ್ಪ ಮೊಯ್ಲಿ

  • ಸಂಸದ ವೀರಪ್ಪ ಮೊಯ್ಲಿಯಿಂದ ನೀತಿ ಸಂಹಿತೆ ಉಲ್ಲಂಘನೆ

    ಸಂಸದ ವೀರಪ್ಪ ಮೊಯ್ಲಿಯಿಂದ ನೀತಿ ಸಂಹಿತೆ ಉಲ್ಲಂಘನೆ

    ಚಿಕ್ಕಬಳ್ಳಾಪುರ: ಸಂಸದ ವೀರಪ್ಪ ಮೊಯ್ಲಿ ಮೂರು ಕಾರಿಗೆ ಅನುಮತಿ ಪಡೆದು ಮೂವತ್ತು ವಾಹನದಲ್ಲಿ ಆಗಮಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಚುನಾವಣಾ ಅಧಿಕಾರಿಗಳು ಚುನಾವಣಾ ಪ್ರಚಾರಕ್ಕೆ ಮೂರು ವಾಹನಗಳಿಗೆ ಮಾತ್ರ ಅನುಮತಿ ನೀಡಿ ಪತ್ರ ಬರೆದಿತ್ತು. ಆದರೆ ವೀರಪ್ಪಮೊಯ್ಲಿ ವಾಹನದ ಹಿಂದೆ ಮೂವತ್ತಕ್ಕೂ ಹೆಚ್ಚು ವಾಹನಗಳ ಓಡಾಟ ನಡೆಸುತ್ತಿದೆ.

    ಇಂದು ವೀರಪ್ಪ ಮೊಯ್ಲಿ ನಾಮಪತ್ರ ಸಲ್ಲಿಸುವ ಮುನ್ನ ಚಿಕ್ಕಬಳ್ಳಾಪುರ ತಾಲೂಕಿನ ನಂದಿಯಲ್ಲಿರುವ ಭೋಗನಂಧೀಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಶಾಸಕ ಎಂಟಿಬಿ ನಾಗರಾಜ್ ಆರತಿ ತಟ್ಟೆಗೆ 1 ಸಾವಿರ ರೂ. ಹಾಕಿದರೆ, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣ್ಣಯ್ಯ ಅವರು 200 ರೂ. ಹಾಕಿದ್ದಾರೆ.

    ನಾಮಪತ್ರ ಸಲ್ಲಿಕೆಗೂ ಮುನ್ನ ವೀರಪ್ಪ ಮೊಯ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದ್ದಾರೆ. ವೀರಪ್ಪ ಮೊಯ್ಲಿಗೆ ಸಚಿವ ಎಂಟಿಬಿ ನಾಗರಾಜ್, ಶಿವಶಂಕರರೆಡ್ಡಿ, ಶಾಸಕ ಸುಧಾಕರ್ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದ್ದಾರೆ.

    ದೇವಸ್ಥಾನ ನಂತರ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದಲ್ಲಿರುವ ದರ್ಗಾಗೆ ಭೇಟಿ ನೀಡಿದ್ದಾರೆ. ಶ್ರೀ ಭೋಗನಂಧೀಶ್ವರ ದೇವಾಲಯದ ಹಿಂಭಾಗದಲ್ಲೇ ದರ್ಗಾ ಇರುವುದರಿಂದ ಮೊಯ್ಲಿ ಅಲ್ಲಿಗೂ ಭೇಟಿ ನೀಡಿದ್ದಾರೆ. ವೀರಪ್ಪಮೊಯ್ಲಿ ಟೆಂಪಲ್ ರನ್ ಗೆ ಶಾಸಕರು ಬೆಂಬಲಿಗರು ಸಾಥ್ ನೀಡಿದ್ದಾರೆ.

  • ಕಾಂಗ್ರೆಸ್ ಪಕ್ಷ ದೊಡ್ಡ ಆಲದ ಮರವಿದ್ದಂತೆ: ವೀರಪ್ಪ ಮೊಯ್ಲಿ

    ಕಾಂಗ್ರೆಸ್ ಪಕ್ಷ ದೊಡ್ಡ ಆಲದ ಮರವಿದ್ದಂತೆ: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸವಿದ್ದು, ದೊಡ್ಡ ಆಲದ ಮರವಿದ್ದಂತೆ ಬೆಳೆದಿದೆ. ಪಕ್ಷವು ಎಲ್ಲರಿಗೂ ಆಶ್ರಯ ನೀಡುತ್ತದೆ ಎಂದು ಸಂಸದ ವೀರಪ್ಪ ಮೊಯ್ಲಿ ಹೇಳಿದ್ದಾರೆ.

    ಕ್ರಿಸ್ಮಸ್ ನಿಮಿತ್ತ ನಗರದ ಚರ್ಚ್‍ಗಳಿಗೆ ಭೇಟಿ ನೀಡಿ ಬಳಿಕ ಮಾತನಾಡಿದ ಸಂಸದರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಹೀಗಾಗಿ ಪಕ್ಷದ ಎಲ್ಲರಿಗೂ ಸ್ಥಾನ-ಮಾನ, ಮಂತ್ರಿಗಿರಿ ಸಿಗುವುದಿಲ್ಲ. ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುತ್ತೇವೆ, ರಾಜೀನಾಮೆ ಕೊಡುತ್ತೇವೆ ಎನ್ನುವುದು ಸರಿಯಲ್ಲ. ಈ ಹಿಂದೆ ಕಾಂಗ್ರೆಸ್ ಬಿಟ್ಟು ಹೋದವರು ಮರಳಿ ಪಕ್ಷಕ್ಕೆ ಬಂದ ಪ್ರಸಂಗಗಳಿವೆ ಎಂದು ಅತೃಪ್ತ ಶಾಸಕರಿಗೆ ಎಚ್ಚರಿಕೆ ನೀಡಿದರು.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಲು ಅಸಮಾಧಾನಿತರು ತಮ್ಮ ವೈಯುಕ್ತಿಕ ಆಸೆ-ಆಕಾಂಕ್ಷೆಗಳನ್ನು ಮರೆಯಬೇಕು ಎಂದ ಮೊಯ್ಲಿ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಗ ಎಲ್ಲರಿಗೂ ಸ್ಥಾನಮಾನ ಸಿಗುತ್ತದೆ ಎಂದು ವಿಶ್ವಾಸ ಹೊರಹಾಕಿದರು.

    ಲೋಕಸಭಾ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಸಂಸದರು, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಈ ಬಾರಿಯೂ ನಾನೇ ಸ್ಫರ್ಧಿಸಲಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv