Tag: ಸಂಸದ ಮುನಿಸ್ವಾಮಿ

  • ಶಾಸಕ ನಾರಾಯಣಸ್ವಾಮಿ ಒಬ್ಬ ಭೂಗಳ್ಳ: ಮುನಿಸ್ವಾಮಿ ಆರೋಪ

    ಶಾಸಕ ನಾರಾಯಣಸ್ವಾಮಿ ಒಬ್ಬ ಭೂಗಳ್ಳ: ಮುನಿಸ್ವಾಮಿ ಆರೋಪ

    ಕೋಲಾರ: ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣ (S N Narayanaswamy) ಸ್ವಾಮಿಯೇ ಭೂ ಗಳ್ಳ ಎಂದು ಕೋಲಾರ ಸಂಸದ ಮುನಿಸ್ವಾಮಿ ಗಂಭೀರ ಆರೋಪ ಮಾಡಿದರು.

    ಕೊಲಾರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಂಚಾಳ ಬಳಿ ಗಾಲ್ಫ್ ಕೋರ್ಸ್ ನಲ್ಲಿ ಅಂದಿನ ದಿವಂಗತ ಜಿಲ್ಲಾಧಿಕಾರಿ ಡಿ.ಕೆ.ರವಿ ಇದ್ದಾಗ 50 ಎಕರೆ ಕಾಂಪೌಂಡ್ ಹಾಕಿದ್ರು. ಎಸ್.ಎನ್.ಸಿಟಿ ಯಲ್ಲಿ ತಾಯಿ ಹೆಸರಲ್ಲಿ ಭೂ ಮಂಜೂರಾತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೇನಾ ಸಿಬ್ಬಂದಿಯ ಕೈಗಳನ್ನು ಕಟ್ಟಿ ಹಾಕಿ ಥಳಿಸಿ, ಬೆನ್ನಿನಲ್ಲಿ PFI ಅಂತಾ ಬರೆದ ಕಿಡಿಗೇಡಿಗಳು

    ಸರ್ಕಾರಿ ಜಮೀನುಗಳನ್ನ ಅವರ ಸಂಬಂಧಿಕರ ಹೆಸರಲ್ಲಿ ಮಂಜೂರು ಮಾಡಿಸಿಕೊಂಡಿದ್ದಾರೆ. ಅಕ್ರಮ ಮಂಜೂರಾತಿ ಸೇರಿದಂತೆ ಹಲವು ಪ್ರಕರಣಗಳು ಅವರ ವಿರುದ್ಧ ಇದೆ. ಯಾರಾದರೂ ಒಬ್ಬ ಶಾಸಕನ ಮೇಲೆ ಹೆಚ್ಚು ಪ್ರಕರಣ ಇದ್ರೆ ಅದು ಎಸ್.ಎನ್.ನಾರಾಯಣಸ್ವಾಮಿ ಮೇಲೆ. ಶಾಸಕ ನಾರಾಯಣಸ್ವಾಮಿ ಒಡೆತನದ ಎಸ್.ಎನ್.ಸಿಟಿಗೆ ದಾರಿ ಮಾಡಿಕೊಂಡಿರುವ ಸರ್ಕಾರಿ ಗುಂಡಿ ತೋಪು ತೆರವುಗೊಳಿಸಿದಾಗ ಸರ್ಕಾರದ ಮೇಲೆ ವಿಶ್ವಾಸ ಬರಲಿದೆ.

    ನಮ್ಮದೇ ಸರ್ಕಾರ ಇದ್ದಾಗ ಅವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ವಾಚ್ ಮೆನ್ ಆಗಿ ಅವರು ಯಾವತ್ತೋ ಕೆಲಸ ಮಾಡಬೇಕಿತ್ತು. ಅವರಪ್ಪನ ಆಸ್ತಿಗೆ ನಾನು ಯಾವತ್ತೂ ಹೋಗಿಲ್ಲ ವಾಚ್‍ಮೆನ್ ಕೆಲಸ ನನಗೆ ಅಲ್ಲ. ಸರ್ಕಾರಿ ಜಮೀನು ಉಳಿಸಿ ಸರ್ಕಾರಕ್ಕೆ ವಾಚ್‍ಮೆನ್ ಆಗಿ ಎಂದು ಸಲಹೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಲಾಕೆ ಹಿಡಿದು ಕಲ್ಯಾಣಿ ಕ್ಲೀನ್ ಮಾಡಲು ನಿಂತ ಸಂಸದ ಮುನಿಸ್ವಾಮಿ

    ಸಲಾಕೆ ಹಿಡಿದು ಕಲ್ಯಾಣಿ ಕ್ಲೀನ್ ಮಾಡಲು ನಿಂತ ಸಂಸದ ಮುನಿಸ್ವಾಮಿ

    – ಎರಡೇ ದಿನದಲ್ಲಿ ಪುರಾತನ ಕಲ್ಯಾಣಿಗೆ ಕಾಯಕಲ್ಪ

    ಕೋಲಾರ: ಕೆರೆ-ಕುಂಟೆಗಳ ಅಭಿವೃದ್ದಿಗೆ ಒತ್ತು ನೀಡಿದ್ದ ಸಂಸದ ಮುನಿಸ್ವಾಮಿ, ಇದೀಗ ಕಲ್ಯಾಣಿಗಳ ಸ್ವಚ್ಛತೆಗೆ ಮುಂದಾಗಿದ್ದಾರೆ. ಜಿಲ್ಲೆಯ ಜಲ ಮೂಲಗಳ ಸಂರಕ್ಷಣೆಗೆ ಸ್ವಚ್ಛ ಭಾರತ ಅಭಿಯಾನದಡಿ ಅಂತರ್ಜಲ ವೃದ್ಧಿಸುವ ಕಲ್ಯಾಣಿಗಳಂತಹ ಜಲಮೂಲಗಳ ಅಭಿವೃದ್ದಿ, ಸ್ವಚ್ಛತೆಗೆ ಪಣ ತೊಟ್ಟಿದ್ದಾರೆ.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದಲ್ಲಿನ ಕಲ್ಯಾಣಿ ಸ್ವಚ್ಛತೆಗೆ ಪಣ ತೊಟ್ಟಿದ್ದು, ಸ್ವತಃ ಸಂಸದ ಮುನಿಸ್ವಾಮಿಯವರು ಸ್ವಚ್ಛತಾ ಕಾರ್ಯದದಲ್ಲಿ ತೊಡಗಿದ್ದಾರೆ. ಸಾಂಘಿಕ ಪ್ರಯತ್ನದ ಮೂಲಕ ಕಲ್ಯಾಣಿ ಅಭಿವೃದ್ದಿಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಾಥ್ ನೀಡುತ್ತಿದ್ದಾರೆ. ಕೋಲಾರ ಜಿಲ್ಲೆಯನ್ನು ಕೆರೆಗಳ ತವರು ಎನ್ನಲಾಗುತ್ತದೆ. ನದಿ ನಾಲೆಗಳಿಲ್ಲದ ಬಯಲು ಸೀಮೆ ಕೋಲಾರದಲ್ಲಿ 3 ಸಾವಿರಕ್ಕೂ ಹೆಚ್ಚು ಕೆರೆ-ಕುಂಟೆಗಳಿವೆ.

    ಮಳೆ ಇಲ್ಲದೆ ಜಲಮೂಲಗಳೆಲ್ಲ ನಾಪತ್ತೆಯಾಗಿದ್ದು, ಇದನ್ನರಿತ ಸಂಸದರು ತಿಂಗಳಿಗೆ ಕನಿಷ್ಟ ಒಂದು ಕಲ್ಯಾಣಿಯನ್ನಾದರೂ ಅಭಿವೃದ್ಧಿಪಡಿಸಬೇಕು ಎಂದು ಪಣ ತೊಟ್ಟಿದ್ದಾರೆ. ಸಂಸದ ಮುನಿಸ್ವಾಮಿ ತಮ್ಮ ತಂಡದೊಂದಿಗೆ ಕಲ್ಯಾಣಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಹಿಂದೆ ಕೆರೆ-ಕುಂಟೆಗಳ ಸ್ವಚ್ಛತೆ ಹಾಗೂ ಅಭಿವೃದ್ದಿಗೆ ಒತ್ತು ನೀಡಿದ್ದ ಸಂಸದ ಮುನಿಸ್ವಾಮಿ, ಇದೀಗ ಅಂತರ್ಜಲ ವೃದ್ಧಿಸುವ ಕಲ್ಯಾಣಿಗಳ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಸ್ವಚ್ಛ ಭಾರತ ಅಭಿಯಾನದ ಮೂಲಕ ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಚಾಲನೆ ನೀಡಿದ್ದಾರೆ.

    ಯಲ್ದೂರು ಗ್ರಾಮದ ಹೃದಯ ಭಾಗದಲ್ಲಿರುವ ಚೋಳರ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಲ್ಯಾಣಿಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಎಂಪಿ ಆ್ಯಂಡ್ ಟೀಮ್ ಮುಂದಾಗಿದೆ. ಸುಮಾರು ಒಂದು ಎಕರೆ ವಿಸ್ತೀರ್ಣ ಹಾಗೂ ವಿಶಾಲವಾಗಿರುವ ಕಲ್ಯಾಣಿ ಸಂರಕ್ಷಣೆ ಮಾಡುವುದು, ಸ್ವಚ್ಛತೆ ದೃಷ್ಟಿಯಿಂದ ಮಾಲಿನ್ಯ ತಡೆಯಲು ಸುತ್ತ ಮುಳ್ಳು ತಂತಿ ಬೇಲಿ ನಿರ್ಮಿಸಲಾಗುತ್ತಿದೆ.

    ಸ್ವಚ್ಛ ಭಾರತ ಅಭಿಯನದಡಿ ಕಲ್ಯಾಣಿ ಸ್ವಚ್ಛ ಮಾಡಿ ಜಲ ಮೂಲ ರಕ್ಷಣೆಗೆ ಒತ್ತು ನೀಡಲಾಗುತ್ತಿದೆ. ಸಂಸದ ಮುನಿಸ್ವಾಮಿ ಈ ಹಿಂದೆ ಜಿಲ್ಲೆಯ ವಿವಿಧ ಕೆರೆಗಳ ಅಭಿವೃದ್ಧಿ ಮಾಡಿದ್ದರು. ಸದ್ಯ ಜಿಲ್ಲೆಯಲ್ಲಿರುವ ಕಲ್ಯಾಣಿಗಳ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ತಿಂಗಳಿಗೆ ಒಂದರಂತೆ ಸ್ವಚ್ಛ ಮಾಡಲು ಮುಂದಾಗಿರುವುದು ಸ್ಥಳೀಯರಿಗೂ ಖುಷಿ ಕೊಟ್ಟಿದೆ.

  • ಸಚಿವ ಮಾಧುಸ್ವಾಮಿ ಎದುರೇ ಬಿಜೆಪಿ ಕಾರ್ಯಕರ್ತರ ಫೈಟ್

    ಸಚಿವ ಮಾಧುಸ್ವಾಮಿ ಎದುರೇ ಬಿಜೆಪಿ ಕಾರ್ಯಕರ್ತರ ಫೈಟ್

    – ಸಾಮಾಜಿಕ ಅಂತರವನ್ನೇ ಮರೆತ ಸಚಿವರು, ಶಾಸಕರು, ಸಂಸದರು.
    – ಚಿಂತಾಮಣಿಯಲ್ಲಿ ಕೆ.ಸಿ.ವ್ಯಾಲಿ ನೀರಿನ ವಿಚಾರದಲ್ಲಿ ಮಾಜಿ, ಹಾಲಿ ಶಾಸಕರ ನಡ್ವೆ ಫೈಟ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಟಹಳ್ಳಿ ಕೆರೆಗೆ ಕೆಸಿ ವ್ಯಾಲಿ ನೀರು ಹರಿಯುತ್ತಿರುವ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಚಿವರಿಗೆ ಕೋಲಾರ ಸಂಸದ ಮುನಿಸ್ವಾಮಿ, ಚಿಂತಾಮಣಿ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಸಾಥ್ ನೀಡಿದ್ದರು.

    ಭೇಟಿ ವೇಳೆ ಸಚಿವರು, ಶಾಸಕರು ಹಾಗೂ ಸಂಸದರು ಸಾಮಾಜಿಕ ಅಂತರವನ್ನು ಮರೆತಿದ್ದರು. ಸಂಸದ ಮುನಿಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ್ದರೆ, ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕೂಡ ತಮ್ಮ ಬೆಂಬಲಿಗರೊಂದಿಗೆ ಗುಂಪು ಗುಂಪಾಗಿ ಆಗಮಿಸಿದ್ದು, ಸಾಮಾಜಿಕ ಅಂತರ ಪಾಲನೆ ಮಾಡಲಿಲ್ಲ.

    ಸಚಿವರ ಎದುರೇ ಬಿಜೆಪಿ ಕಾರ್ಯಕರ್ತರ ಫೈಟ್: ಇದೇ ವೇಳೆ ಬಿಜೆಪಿ ಕಾರ್ಯಕರ್ತ ಸಂಸದ ಮುನಿಸ್ವಾಮಿ, ಸಚಿವರು ತಮ್ಮ ತಾಲೂಕಿಗೆ ಬರುವ ಮಾಹಿತಿಯನ್ನೇ ಕೊಟಿಲ್ಲ. ನಾವು ನಿಮಗೆ ಮತ ಹಾಕಿದ್ದು, ನೀವೇ ಹೀಗೆ ಮಾಡಿದರೇ ಹೇಗೆ ಎಂದು ಆಕ್ರೋಶ ಹೊರಹಾಕಿದ್ದರು. ಈ ವೇಳೆ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ, ಶಿವು ಪ್ರದೀಪ್ ವಿರುದ್ಧ ತಿರುಗಿಬಿದ್ದು ಮಾತಿನ ಚಕಮಕಿ ಆರಂಭಿಸಿದ್ದರು. ಅಲ್ಲದೇ ಅಂತಿಮವಾಗಿ ಎಂಪಿ ಆದವನಿಗೆ ಮಾನ ಇಲ್ಲ. ಯಾರ್ಯಾರನ್ನೋ ಜೊತೆಯಲ್ಲಿ ಇಟ್ಟುಕೊಂಡು ಬರ್ತಾನೆ ಎಂದು ಬಿಜೆಪಿ ಕಾರ್ಯಕರ್ತ ಪ್ರದೀಪ್ ಏಕವಚನದಲ್ಲೇ ತಮ್ಮದೇ ಪಕ್ಷದ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದ.

    ಮಾಧುಸ್ವಾಮಿ ಗರಂ: ಕುರುಟಹಳ್ಳಿ ಕೆರೆಗೆ ಭೇಟಿ ನೀಡಿದ್ದ ಸಚಿವ ಮಾಧುಸ್ವಾಮಿಗೆ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬೆಂಬಲಿತೆ ಹಾಗೂ ನೀರಾವರಿ ಹೋರಾಟಗಾರ್ತಿ ಆಯಿಷಾ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಸಚಿವರ ಉತ್ತರಿಸುತ್ತಿದ್ದರೂ ಮರು ಪ್ರಶ್ನೆ ಮಾಡುತ್ತಿದ್ದ ವೇಳೆ ಗರಂ ಆದ ಸಚಿವ ಮಾಧುಸ್ವಾಮಿ ಅವರು, ‘ನಾನು ನೀನು ಹೇಳಿದ ಹಾಗೆ ಕೇಳಲು ಮಂತ್ರಿ ಆಗಿಲ್ಲ’ ಎಂದು ತಿರುಗೇಟು ನೀಡಿದರು. ಇತ್ತ ಮಾಧ್ಯಮದವರಿಗೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡುವ ವೇಳೆ, ಆಯಿಷಾರನ್ನು ಉದ್ದೇಶಿಸಿ ಮಾತು ಸ್ವಲ್ಪ ಸಾಕು ಮಾಡಮ್ಮ ಎಂದು ಸಂಸದ ಮುನಿಸ್ವಾಮಿ ಹೇಳಿದರು. ಇದರಿಂದ ಮತ್ತಷ್ಟು ಕೆರಳಿದ ಆಯಿಷಾ ಸಚಿವರು ಹಾಗೂ ಸಂಸದರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.

    ನೀರಿಗಾಗಿ ಮಾಜಿ, ಹಾಲಿ ಶಾಸಕರ ರಾಜಕಾರಣ: ಚಿಕ್ಕಬಳ್ಳಾಪುರ ಜಿಲ್ಲೆಗೆ ಎಚ್.ಎನ್.ವ್ಯಾಲಿ ಹಾಗೂ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಹೆಬ್ಬಾಳ ನಾಗವಾರ ಕೆರೆಯ ನೀರನ್ನು ಶುದ್ಧೀಕರಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಕೋಲಾರ ಜಿಲ್ಲೆಯ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲಾಗುತ್ತಿದೆ. ಆದರೆ ಚಿಂತಾಮಣಿ ತಾಲೂಕಿನ 5 ಕೆರೆಗಳಿಗೆ ಕೆ.ಸಿ.ವ್ಯಾಲಿಯ ನೀರನ್ನು ಹರಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಈಗಾಗಲೇ ಕುರುಟಹಳ್ಳಿ ಕೆರೆಗೆ ಕಳೆದ ಒಂದು ವಾರದಿಂದ ನೀರು ಹರಿಸಲಾಗುತ್ತಿದೆ.

    ಆದರೆ ಈ ನಡುವೆ ಕೆರೆಗೆ ಭೇಟಿ ನೀಡಿದ್ದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರು, ಕೆರೆಯಲ್ಲಿನ ಜಾಲಿ ಮರಗಳನ್ನು ಸ್ವಚ್ಚಗೊಳಿಸದೆ ನೀರು ಹರಿಸೋದು ಸರಿಯಲ್ಲ ಎಂದು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು. ಪರಿಣಾಮ ನೀರಿನ ಹರಿಯುವಿಕೆ ನಿಲ್ಲಿಸಿಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಈಗಾಗಲೇ ಬಿಜೆಪಿಯವರ ಜೊತೆ ಗುರುತಿಸಿಕೊಂಡಿರುವ ಮಾಜಿ ಶಾಸಕ ಎಂ.ಸಿ.ಸುಧಾಕರ್ ರೆಡ್ಡಿ ಬೆಂಬಲಿಗರೊಂದಿಗೆ ಕುರುಟಹಳ್ಳಿ ಕೆರೆ ಬಳಿ ಪ್ರತಿಭಟನಾ ಧರಣಿ ನಡೆಸಿದರು. ಸದ್ಯ ಈ ವಿಚಾರದಲ್ಲಿ ಹಾಲಿ, ಮಾಜಿ ಶಾಸಕರ ರಾಜಕಾರಣದ ಫೈಟ್ ಜೋರಾಗಿ ನಡೆಯುತ್ತಿದೆ. ಹೀಗಾಗಿ ಇಂದು ಸಚಿವ ಮಾಧುಸ್ವಾಮಿ ಕುರುಟಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮಾತನಾಡಿದ ಸಚಿವರು, ಕೆರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೀವಿ. ಸಂಸದರು, ಶಾಸಕರು ಎಲ್ಲಾ ಸೇರಿ ಏನು ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದು ಹೇಳಿ ಸ್ಥಳದಿಂದ ಹೊರಟರು.