Tag: ಸಂಸದ ಬಸವರಾಜು

  • ಪ್ರಧಾನಿ ಅಭ್ಯರ್ಥಿ ಹುಚ್ಚನಾಗಿರಬಾರದು – ರಾಹುಲ್ ಗಾಂಧಿಗೆ ಸಂಸದ ಬಸವರಾಜು ಟಾಂಗ್

    ಪ್ರಧಾನಿ ಅಭ್ಯರ್ಥಿ ಹುಚ್ಚನಾಗಿರಬಾರದು – ರಾಹುಲ್ ಗಾಂಧಿಗೆ ಸಂಸದ ಬಸವರಾಜು ಟಾಂಗ್

    ತುಮಕೂರು: ಪ್ರಧಾನಿ ಅಭ್ಯರ್ಥಿ ಭಾರತೀಯ ಪ್ರಜೆಯಾಗಿರಬೇಕು, ಹುಚ್ಚನಾಗಿರಬಾರದು ಎಂದು ಬಿಜೆಪಿ ಸಂಸದ ಜಿ.ಎಸ್ ಬಸವರಾಜು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಪುಲ್ವಾಮಾ ದಾಳಿಯಿಂದ ಯಾರಿಗೆ ಲಾಭವಾಯ್ತು ಎಂಬ ರಾಹುಲ್ ಗಾಂಧಿ ಟ್ವೀಟ್ ಅನ್ನು ಜಿ.ಎಸ್ ಬಸವರಾಜು ಖಂಡಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರು ಮುಂದಿನ ಪ್ರಧಾನಿ ಅಭ್ಯರ್ಥಿ ಈ ರೀತಿಯ ಹೇಳಿಕೆ ಕೊಟ್ಟಿದ್ದಾರಲ್ಲ ಎಂದು ಜಿ.ಎಸ್ ಬಸವರಾಜು ಅವರನ್ನು ಪ್ರಶ್ನಿಸಿದರು.  ಇದನ್ನೂ ಓದಿ: ಪುಲ್ವಾಮಾ ದಾಳಿಯಿಂದ ಲಾಭ ಆಗಿದ್ದು ಯಾರಿಗೆ: ರಾಹುಲ್ ಗಾಂಧಿ ಪ್ರಶ್ನೆ

    ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿ.ಎಸ್ ಬಸವರಾಜು, ಪ್ರಧಾನಿ ಆಗುವವರಿಗೂ ಅರ್ಹತಾ ಮಟ್ಟ ಇದೆ. ನನಗೂ ಪ್ರಧಾನಿ ಆಗಬೇಕೆಂಬ ಚಟ ಇದೆ. ಪ್ರಧಾನಿ ಅಭ್ಯರ್ಥಿ ಭಾರತೀಯನಾಗಿರಬೇಕು ಹೊರತು ಹುಚ್ಚನಾಗಿರಬಾರದು ಎಂದು ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ ಪುಲ್ವಾಮಾ ದಾಳಿ ರಾಹುಲ್ ಗಾಂಧಿಯೇ ಮಾಡಿಸಿರಬೇಕು ಸೈದ್ಧಾಂತಿಕ ಬದ್ಧತೆ, ಸೈದಾಂತಿಕ ಅರಿವು ಇದ್ದವರಿಗೆ ಏನಾದರೂ ಹೇಳಬಹುದು, ಆದರೆ ರಾಹುಲ್ ಗಾಂಧಿಗೆ ಅದ್ಯಾವುದೂ ಇಲ್ಲ ಎಂದರು.

    ನಾನು ಕಾಂಗ್ರೆಸ್ಸಿನಲ್ಲಿ ಇದ್ದವನು. ಒಳ್ಳೆಯವರು ಯಾರು ಈಗ ಕಾಂಗ್ರೆಸ್ಸಿನಲ್ಲಿ ಇಲ್ಲ. ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳುವಂತೆ ಈಗ ಕಾಂಗ್ರೆಸ್ಸಿನಲ್ಲಿ ಕೇವಲ ಕಳ್ಳರೇ ತುಂಬಿಕೊಂಡಿದ್ದಾರೆ ಎಂದು ಆರೋಪಿಸಿದರು.

  • ಮದ್ಯ ನಿಷೇಧಕ್ಕೆ ಸಿಎಂ ಬಿಎಸ್‍ವೈ ಚಿಂತನೆ – ಸಂಸದ ಬಸವರಾಜು

    ಮದ್ಯ ನಿಷೇಧಕ್ಕೆ ಸಿಎಂ ಬಿಎಸ್‍ವೈ ಚಿಂತನೆ – ಸಂಸದ ಬಸವರಾಜು

    ತುಮಕೂರು: ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಂತನೆ ಮಾಡಿದ್ದಾರೆ ಎಂದು ಸಂಸದ ಜಿ.ಎಸ್.ಬಸವರಾಜು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಗಾಂಧಿ ಸಂಕಲ್ಪ ಯಾತ್ರೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಕಾಲದಲ್ಲಿ ಏನಾದರೂ ಮಾಡಿ ಮದ್ಯವನ್ನು ನಿಷೇಧಿಸಬೇಕು ಎಂಬುದು ನನ್ನ ಬಯಕೆಯಾಗಿದೆ ಎಂದು ಯಡಿಯೂರಪ್ಪನವರು ನನ್ನ ಬಳಿ ಮಾತನಾಡುವಾಗ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದರು.

    ಈ ಬಗ್ಗೆ ಸಿಎಂ ನನ್ನ ಜೊತೆ ಕೂಡ ಮಾತನಾಡಿದ್ದು, ಬ್ಯಾನ್ ಮಾಡಿದ ನಂತರ ಉಂಟಾಗುವ ಬೊಕ್ಕಸದ ಹೊರೆಯನ್ನು ಭರಿಸುವ ಬಗ್ಗೆಯೂ ತುಂಬಾ ಚಿಂತನೆ ನಡೆಸಿದ್ದಾರೆ. ಮದ್ಯ ನಿಷೇಧದ ಬಗ್ಗೆ ನಾವೂ ಕೂಡ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇವೆ. ಪ್ರಧಾನಿ ಮೋದಿ ನಿರ್ದೇಶನ ನೀಡಿ ಮದ್ಯವನ್ನು ನಿಷೇಧಿಸಬಹುದು ಎಂದು ತಿಳಿಸಿದರು.

    ಈಗಾಗಲೇ ಗುಜರಾತ್ ಮತ್ತು ಬಿಹಾರದಲ್ಲಿ ಮದ್ಯ ನಿಷೇಧವಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಸಹ ಮದ್ಯ ನಿಷೇಧವಾಗಬೇಕಿದೆ. ಈ ಕುರಿತು ಮುಖ್ಯಮಂತ್ರಿ ಬಳಿ ಇನ್ನಷ್ಟು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.