Tag: ಸಂಸದ ಉಗ್ರಪ್ಪ

  • ಉಗ್ರಪ್ಪ ಭಾಷಣದ ವೇಳೆ ಮೋದಿ ಮೋದಿ ಎಂದು ಘೋಷಣೆ ಕೂಗಿದ ಪೇಕ್ಷಕರು..!

    ಉಗ್ರಪ್ಪ ಭಾಷಣದ ವೇಳೆ ಮೋದಿ ಮೋದಿ ಎಂದು ಘೋಷಣೆ ಕೂಗಿದ ಪೇಕ್ಷಕರು..!

    ಬಳ್ಳಾರಿ: ಕಾಂಗ್ರೆಸ್ ಸಂಸದ ಉಗ್ರಪ್ಪ ಭಾಷಣದ ವೇಳೆ ನೂರಾರು ಪೇಕ್ಷಕರು ಮೋದಿ ಮೋದಿ ಎಂದು ಘೋಷಣೆ ಕೂಗಿದ ಘಟನೆ ಹಂಪಿ ಉತ್ಸವದಲ್ಲಿ ನಡೆಯಿತು.

    ಹಂಪಿ ಉತ್ಸವ ಉದ್ಘಾಟನಾ ಸಮಾರಂಭದ ವೇಳೆ ಭಾಷಣ ಮಾಡಲು ಸಂಸದ ಉಗ್ರಪ್ಪ ಆಗಮಿಸಿದ್ದರು. ಸಂಸದರು ಭಾಷಣ ಆರಂಭಿಸುತ್ತಿದ್ದಂತೆ ಉತ್ಸವ ನೋಡಲು ಬಂದ ಪೇಕ್ಷಕರು ಮೋದಿ ಮೋದಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಜಯಘೋಷ ಮೊಳಗಿಸಿದರು. ಹೀಗಾಗಿ ಹಂಪಿ ಉತ್ಸವದಲ್ಲಿಯೂ ಮೋದಿ ಮೋದಿ ಎನ್ನುವ ಜೈಕಾರ ಕೇಳಿದ್ದು ವಿಶೇಷವಾಗಿತ್ತು. ಇದನ್ನು ಓದಿ: ಹಂಪಿ ಶಿಲ್ಪಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಿಳಿಸಿ: ನಟ ದರ್ಶನ್

    ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಚಾಲೆಂಜಿಂಗ್ ದರ್ಶನ್ ಆಗಮಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಸಚಿವರಾದ ತುಕಾರಾಂ, ಪಿ.ಟಿ.ಪರಮೇಶ್ವರ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಗೋಪಾಲಸ್ವಾಮಿ, ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಸೋಮಶೇಖರ್ ರೆಡ್ಡಿ, ಮುನಿರತ್ನ ಅವರು ಭಾಗಿಯಾಗಿದ್ದರು. ಇದನ್ನು ಓದಿ: ಶ್ರೀಕೃಷ್ಣ ದೇವರಾಯನ ಅವತಾರ ಎತ್ತಲಿದ್ದಾರೆ ದರ್ಶನ್!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ವೈ ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ: ಉಗ್ರಪ್ಪ ಕಿಡಿ

    ಬಿಎಸ್‍ವೈ ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ: ಉಗ್ರಪ್ಪ ಕಿಡಿ

    ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ. ಹೀಗಾಗಿ ಭಾರತೀಯ ಯೋಧರ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದು ಸಂಸದ ಉಗ್ರಪ್ಪ ಕಿಡಿಕಾಡಿದ್ದಾರೆ.

    ಹಂಪಿಯಲ್ಲಿ ಮಾತನಾಡಿದ ಸಂಸದರು, ಭಾರತ ಪಾಕಿಸ್ತಾನದ ಮಧ್ಯೆ ಇರುವ ಕಲಹ ನಿನ್ನೆ ಮೊನ್ನೆಯದಲ್ಲ. ಈ ಹಿಂದೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ. ಆದರೆ ಆ ಸಂದರ್ಭವನ್ನು ಯಾವುದೇ ರಾಜಕೀಯ ಪಕ್ಷ ತನ್ನ ಪ್ರಚಾರಕ್ಕೆ ಬಳಸಿಕೊಳ್ಳಿಲ್ಲ. ಆದರೆ ಏರ್ ಸ್ಟ್ರೈಕ್ ಅನ್ನು ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ : ಏರ್​ಸ್ಟ್ರೈಕ್​​ನಿಂದ 22 ಸೀಟ್ ಗೆಲ್ತೇವೆ – ಪಾಕಿಸ್ತಾನದಲ್ಲೂ ಡಿಬೇಟ್ ಆಯ್ತು ಬಿಎಸ್‍ವೈ ಹೇಳಿಕೆ

    ಯೋಧರು ಜೀವದ ಹಂಗು ತೊರೆದು ನಮ್ಮನ್ನ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಅವರ ತ್ಯಾಗ, ಬಲಿದಾನವನ್ನು ರಾಜಕೀಯಕ್ಕೆ ಬಳಸಿಕೊಳ್ಳವುದು ಯಾವುದೇ ರಾಜಕೀಯ ಪಕ್ಷಕ್ಕೆ ಶೋಭೆ ತರುವುದಿಲ್ಲ. ಈ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪನವರ ಹೇಳಿಕೆ ಅವರಲ್ಲಿರುವ ಸಣ್ಣತನವನ್ನ ತೋರುತ್ತದೆ ಎಂದು ಹೇಳಿದರು.

    https://youtu.be/-HDTIgjGwJg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv