Tag: ಸಂವಿಧಾನ ಪೀಠಿಕೆ

  • ಸಂವಿಧಾನದ ಪೀಠಿಕೆ ರಾಷ್ಟ್ರದ ಆತ್ಮ, ತಿದ್ದುಪಡಿಯಿಂದ ಸಂವಿಧಾನದ ಆಶಯಕ್ಕೆ ಧಕ್ಕೆಯಾಗಿದೆ: ಜಗದೀಪ್ ಧನ್ಕರ್ ಕಳವಳ

    ಸಂವಿಧಾನದ ಪೀಠಿಕೆ ರಾಷ್ಟ್ರದ ಆತ್ಮ, ತಿದ್ದುಪಡಿಯಿಂದ ಸಂವಿಧಾನದ ಆಶಯಕ್ಕೆ ಧಕ್ಕೆಯಾಗಿದೆ: ಜಗದೀಪ್ ಧನ್ಕರ್ ಕಳವಳ

    ನವದೆಹಲಿ: ಭಾರತದ ಸಂವಿಧಾನದ ಪೀಠಿಕೆ (Preamble) ರಾಷ್ಟ್ರದ ಆತ್ಮವಾಗಿದ್ದು, ಇದನ್ನು ಬದಲಾಯಿಸುವುದು ಅಥವಾ ತಿದ್ದುಪಡಿ ಮಾಡುವುದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದಂತೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ತೀವ್ರವಾಗಿ ಹೇಳಿದ್ದಾರೆ.

    ಕರ್ನಾಟಕದ ಮಾಜಿ ಪರಿಷತ್ ಸದಸ್ಯ ಡಿ.ಎಸ್ ವೀರಯ್ಯ ಅವರು ಸಂಕಲಿಸಿದ ‘ಅಂಬೇಡ್ಕರ್‌ರ ಸಂದೇಶಗಳು’ ಎಂಬ ಪುಸ್ತಕದ ಮೊದಲ ಪ್ರತಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ S-400 ಯಶಸ್ವಿ ಕಾರ್ಯಾಚರಣೆ; S-500 ರಕ್ಷಣಾ ವ್ಯವಸ್ಥೆ ಖರೀದಿಗೂ ಆಸಕ್ತಿ ತೋರಿದ ಭಾರತ

    ಬಳಿಕ ಮಾತನಾಡಿದ ಅವರು, 1976ರ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಪೀಠಿಕೆಗೆ ‘ಸಮಾಜವಾದ’, ‘ಜಾತ್ಯತೀತ’ ಮತ್ತು ‘ಸಮಗ್ರತೆ’ ಎಂಬ ಪದಗಳನ್ನು ಸೇರಿಸಿದ್ದನ್ನು ತೀವ್ರವಾಗಿ ವಿರೋಧಿಸಿದರು. ಪೀಠಿಕೆಯು ಸಂವಿಧಾನದ ಬೀಜವಾಗಿದ್ದು, ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ, 1975ರ ಜೂನ್ 25ರಂದು ಘೋಷಿತವಾದ ತುರ್ತು ಪರಿಸ್ಥಿತಿಯ ಶಾಸನಬಾಹಿರ ಕಾಲದಲ್ಲಿ, ಜನತೆಯ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು, ಜನರನ್ನು ಸೆರೆಯಲ್ಲಿಟ್ಟು, ಈ ಬದಲಾವಣೆಯನ್ನು ಮಾಡಲಾಗಿದೆ. ಇದು ಸಂವಿಧಾನದ ಆತ್ಮಕ್ಕೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಆರ್‌ಎಸ್‌ಎಸ್ ಪ್ರ.ಕಾರ್ಯದರ್ಶಿ ಹೊಸಬಾಳೆ ಹೇಳಿಕೆ ಸಮಂಜಸವಲ್ಲ: ಪರಂ

    ಭಾರತವನ್ನು ಹೊರತುಪಡಿಸಿ, ವಿಶ್ವದ ಯಾವುದೇ ರಾಷ್ಟ್ರದ ಸಂವಿಧಾನದ ಪೀಠಿಕೆಯನ್ನು ಬದಲಾಯಿಸಿಲ್ಲ. ಆದರೆ, ಭಾರತದಲ್ಲಿ ಇದನ್ನು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಮಾಡಲಾಗಿದೆ. ಇದು ಸನಾತನ ಸಂಸ್ಕೃತಿಯ ಸ್ಫೂರ್ತಿಗೆ ಮಾಡಿದ ದ್ರೋಹವಾಗಿದೆ. ಈ ಪದಗಳ ಸೇರ್ಪಡೆ ಮೂಲಕ ಸಂವಿಧಾನದ ರಚನಾಕಾರರ ಚಿಂತನೆಯನ್ನು ಅವಮಾನಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: 5 ಹುಲಿಗಳ ಸಾವು ಕೇಸ್ – ಮೃತ ಹಸು ಮಾಲೀಕ ಸೇರಿ ಮೂವರ ಬಂಧನ

    ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ (1973) ಮತ್ತು ಐಸಿ ಗೋಲಕ್‌ನಾಥ್ ವರ್ಸಸ್ ಪಂಜಾಬ್ ರಾಜ್ಯ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ನ 13 ಮತ್ತು 11 ನ್ಯಾಯಾಧೀಶರ ತೀರ್ಪುಗಾರರ ಸಂಯೋಜನೆಯ ತೀರ್ಪುಗಳನ್ನು ಉಲ್ಲೇಖಿಸಿದ ಧನ್ಕರ್, ನ್ಯಾಯಮೂರ್ತಿ ಹೆಚ್‌ಆರ್ ಖನ್ನಾ, ನ್ಯಾಯಮೂರ್ತಿ ಸಿಕ್ರಿ, ನ್ಯಾಯಮೂರ್ತಿ ಹಿದಾಯತುಲ್ಲಾ, ನ್ಯಾಯಮೂರ್ತಿ ಹೆಗ್ಡೆ, ನ್ಯಾಯಮೂರ್ತಿ ಮುಖರ್ಜಿ, ನ್ಯಾಯಮೂರ್ತಿ ಶೆಲತ್ ಮತ್ತು ನ್ಯಾಯಮೂರ್ತಿ ಗ್ರೋವರ್ ಅವರಂತಹ ದಿಗ್ಗಜರು ಪೀಠಿಕೆಯು ಸಂವಿಧಾನದ ಆತ್ಮವಾಗಿದ್ದು, ಇದು ಬದಲಾಯಿಸಲಾಗದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಇಲ್ಲದಿದ್ರೆ ರಾಜಕೀಯ ಬಿಡ್ತೀನಿ: ರಾಜಣ್ಣ

    ಡಾ.ಬಿಆರ್ ಅಂಬೇಡ್ಕರ್ ಅವರನ್ನು ಸ್ಮರಿಸಿದ ಉಪರಾಷ್ಟ್ರಪತಿಗಳು, ಅಂಬೇಡ್ಕರ್ ಅವರು ರಾಷ್ಟ್ರದ ಹೃದಯದಲ್ಲಿ, ಮನಸ್ಸಿನಲ್ಲಿ ಮತ್ತು ಆತ್ಮದಲ್ಲಿ ಜೀವಂತವಾಗಿದ್ದಾರೆ. ಅವರ ಸಂದೇಶಗಳು ಇಂದಿಗೂ ಸಮಕಾಲೀನ ಪ್ರಸ್ತುತತೆಯನ್ನು ಹೊಂದಿವೆ. ಈ ಸಂದೇಶಗಳನ್ನು ಪ್ರತಿಯೊಬ್ಬ ಭಾರತೀಯನೂ, ವಿಶೇಷವಾಗಿ ಸಂಸದೀಯರು ಮತ್ತು ಶಾಸಕರು ಗೌರವಿಸಬೇಕು ಎಂದು ಕರೆ ನೀಡಿದರು. ಅಂಬೇಡ್ಕರ್ ಅವರ ಕೊನೆಯ ಭಾಷಣವನ್ನು ಉಲ್ಲೇಖಿಸಿ, ದೇಶವನ್ನು ಧರ್ಮ, ಸಂಸ್ಕೃತಿ ಅಥವಾ ಭಾಷೆಯ ಆಧಾರದಲ್ಲಿ ವಿಭಜಿಸದೆ, ಎಲ್ಲರೂ ಭಾರತೀಯರಾಗಿ ಒಗ್ಗೂಡಬೇಕು. ಒಡಕುಗಳಿಂದ ದೇಶದ ಸ್ವಾತಂತ್ರ‍್ಯಕ್ಕೆ ಧಕ್ಕೆ ಬರಬಹುದು ಎಂದು ಎಚ್ಚರಿಕೆಯನ್ನು ನೆನಪಿಸಿದರು. ಇದನ್ನೂ ಓದಿ: ಬಾಲಿವುಡ್ ನಟಿ ಶೆಫಾಲಿ ಸಾವು – ಮುಂಬೈ ಪೊಲೀಸರು ಹೇಳಿದ್ದೇನು?

    ನಾವು ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಕೊನೆಯ ಹನಿ ರಕ್ತದವರೆಗೂ ಹೋರಾಡಬೇಕು ಎಂದು ಡಾ. ಅಂಬೇಡ್ಕರ್‌ರ ಮಾತುಗಳನ್ನು ಉಲ್ಲೇಖಿಸಿದ ಧನ್ಕರ್, ಈ ಸಂದೇಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕೋಡಿಮಠ ಸ್ವಾಮೀಜಿ ಚಿನ್ನಾಭರಣ ಕಳ್ಳತನ; 7 ವರ್ಷಗಳ ಬಳಿಕ ಆರೋಪಿ ಬಂಧನ

  • ಏಕಕಾಲದಲ್ಲಿ ವಿಶ್ವಾದ್ಯಂತ ಸಂವಿಧಾನ ಪೀಠಿಕೆ ವಾಚನ

    ಏಕಕಾಲದಲ್ಲಿ ವಿಶ್ವಾದ್ಯಂತ ಸಂವಿಧಾನ ಪೀಠಿಕೆ ವಾಚನ

    ಬೆಂಗಳೂರು: ರಾಜ್ಯ ಸರ್ಕಾರದಿಂದ ವಿಧಾನಸೌಧದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ (International Constitution Day) ದಿನ ಆಚರಿಸಲಾಯಿತು. ಪ್ರಜಾಪ್ರಭುತ್ವ ದಿನದ ಅಂಗವಾಗಿ ಏಕಕಾಲದಲ್ಲಿ ವಿಶ್ವಾದ್ಯಂತ ಭಾರತದ ಸಂವಿಧಾನ ಪೀಠಿಕೆ (Constitution Preamble) ವಾಚನ ಮಾಡಲಾಯಿತು.

    ಸಂವಿಧಾನ ಪೀಠಿಕೆ ವಾಚನ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕಾರ್ಯಕ್ರಮ ಉದ್ಘಾಟಿಸಲಾಯಿತು. ಬೃಹತ್‌ ಎಲ್‌ಇಡಿ ಪರದೆಯಲ್ಲಿ ಪೀಠಿಕೆ ವಾಚನವನ್ನು ಪ್ರಸಾರ ಮಾಡಲಾಯಿತು. ಇದಕ್ಕೂ ಮುನ್ನ ಗಿಡಕ್ಕೆ ನೀರು ಹಾಕುವ ಮೂಲಕ ಸಮಾರಂಭಕ್ಕೆ ಸಾಂಪ್ರದಾಯಿಕ ಚಾಲನೆ ನೀಡಲಾಯಿತು. ನಂತರ ವೇದಿಕೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್‌ ರಾಮ್‌ ಹಾಗೂ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಇದನ್ನೂ ಓದಿ: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಸೂತ್ರಧಾರ ದೆಹಲಿಯಲ್ಲಿ ಅರೆಸ್ಟ್‌

    ಸಚಿವ ಸಂಪುಟ ಕೊಠಡಿಗೆ ಸಂವಿಧಾನ ಪೀಠಿಕೆಯನ್ನು ಸಚಿವ ಹೆಚ್‌.ಸಿ.ಮಹದೇವಪ್ಪ ಹಸ್ತಾಂತರ ಮಾಡಿದರು. ನಂತರ ಸಮತೆಗೆ ಸಮಾನತೆ ತಂತ್ರಾಂಶವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದರು. ಕರ್ನಾಟಕ ವಸತಿ ಶಾಲೆಗಳಲ್ಲಿ ಮಕ್ಕಳ ಸಂವಿಧಾನ ಕ್ಲಬ್‌ನ್ನು ಸಚಿವ ಹೆಚ್.ಸಿ.ಮಹದೇವಪ್ಪ ಉದ್ಘಾಟಿಸಿದರು.

    ನಂತರ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಕಾರ್ಯಕ್ರಮ. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಸಂವಿಧಾನ ಪೀಠಿಕೆ ವಾಚನವಾಗಿದೆ. ಸಂವಿಧಾನ ಪೀಠಿಕೆ ಬೋಧನೆ ಮಾಡುವ ಮೂಲಕ ಪ್ರಪಂಚದಾದ್ಯಂತ ಕಾರ್ಯಕ್ರಮ ವೀಕ್ಷಣೆ ಮಾಡಿದ್ದಾರೆ ಎಂದು ಸಚಿವರು ಬಣ್ಣಿಸಿದರು. ಇದನ್ನೂ ಓದಿ: ನಾನು ಹಣವನ್ನ ಲೋನ್ ಪಡೆದು ಕೊಟ್ಟಿದ್ದೇನೆ: ಗೋವಿಂದ ಬಾಬು ಪೂಜಾರಿ

    ಕರ್ನಾಟಕ ರಾಜ್ಯ ಇವತ್ತು ಹೊಸ ಇತಿಹಾಸ ಬರೆದಿದೆ. ಪ್ರಜಾಸತ್ತಾತ್ಮಕ ಒಕ್ಕೂಟಗಳು ಸೇರಿ ಪ್ರಜಾಪ್ರಭುತ್ವ ದಿನ ಮಾಡುವ ನಿರ್ಣಯ ಆಯ್ತು. 2007 ರಲ್ಲಿ ಈ ನಿರ್ಣಯವನ್ನು ವಿಶ್ವಸಂಸ್ಥೆ ಅಂಗೀಕಾರ ಮಾಡಿತ್ತು. 2008 ರಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಮಾಡುತ್ತಿದ್ದೇವೆ. ಸಮಾನತೆ, ಒಕ್ಕೂಟವನ್ನ ವಿಶ್ವ ಬಯಸುತ್ತಿದೆ. ಭಾರತವು ಪ್ರಜಾಪ್ರಭುತ್ವದ ಹಿರಿಯ ಅಣ್ಣನಾಗಿ ಕೆಲಸ ಮಾಡುತ್ತಿದೆ. ಈ ಮೂಲಕ ವಿಶ್ವಸಂಸ್ಥೆಯ ನಿರ್ಣಯವನ್ನ ಭಾರತ ಪಾಲಿಸುತ್ತಿದೆ. ಅಸಮಾನತೆ ನಿರ್ನಾಮ ಮಾಡಿ ಸಮಾನತೆ ಜಾರಿ ಮಾಡುವ ಆಶಯ ಇದಾಗಿದೆ. ನ್ಯಾಯ, ಹಕ್ಕು, ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಪತ್ರಿಕಾ ಸ್ವಾತಂತ್ರ್ಯ, ಕೋಮು ಸೌಹಾರ್ದಗಳನ್ನ ಉಳಿಸಿಕೊಳ್ಳುವ ಆಶಯ ಆಗಿದೆ ಎಂದು ತಿಳಿಸಿದರು.

    ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾಡಿನ ಜನರಿಗೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಶುಭಾಶಯ. ಇವತ್ತು ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ದಿನ ಆಚರಣೆ ಮಾಡಲಾಗ್ತಿದೆ. ಜಗತ್ತಿನ ಅನೇಕ ರಾಷ್ಟ್ರಗಳು ಪ್ರಜಾಪ್ರಭುತ್ವ ಒಪ್ಪಿವೆ. ಪ್ರಜಾಪ್ರಭುತ್ವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ಭಾರತದಲ್ಲಿ ಪ್ರಾಚೀನ ಕಾಲದಲ್ಲೂ ಅಸ್ತಿತ್ವದಲ್ಲಿ ಇತ್ತು ಎಂದು ಹೇಳಿದರು. ಇದನ್ನೂ ಓದಿ: ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌ – ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

    ಸಿಂಧು ನಾಗರಿಕತೆ, ಬಸವಣ್ಣ ಕಾಲದಲ್ಲಿ ಪ್ರಜಾಪ್ರಭುತ್ವ ಇತ್ತು ಅಂತ ತಿಳಿಯುತ್ತದೆ. ಬಸವಣ್ಣ ಕಾಲದಲ್ಲಿ ಅನುಭವ ಮಂಟಪ ರಚನೆ ಮಾಡಿ, ಅದರ ಅಧ್ಯಕ್ಷತೆಯನ್ನ ಅಲ್ಲಮಪ್ರಭುಗೆ ವಹಿಸಿದ್ದರು. ಬಸವಾದಿ ಶರಣರು ಅದರಲ್ಲಿ ಭಾಗವಹಿಸಿ ಸಮಸ್ಯೆ ಪರಿಹಾರ ಮಾಡುತ್ತಿದ್ದರು. ಬೌದ್ದರ ಕಾಲದಲ್ಲಿ ಸಂಘದ ಚುನಾವಣೆ ನಡೆಯುತ್ತಿತ್ತು. ಸಿಂಧು ನಾಗರಿಕತೆಯಲ್ಲಿ ಪ್ರಜಾಪ್ರಭುತ್ವ ಇತ್ತು. ಸಂವಿಧಾನ ಬರುವ ಮುಂಚೆಯೂ ಗಣತಂತ್ರ ವ್ಯವಸ್ಥೆ ಅಂತ ಪ್ರಜಾಪ್ರಭುತ್ವವನ್ನ ಕರೆಯಲಾಗುತ್ತಿತ್ತು. ಸಂವಿಧಾನ ರಚನೆ ಆದ ಮೇಲೆ ಅಧಿಕೃತವಾಗಿ ಪ್ರಜಾಪ್ರಭುತ್ವ ಶುರುವಾಯಿತು ಎಂದು ಮಾತನಾಡಿದರು.

    ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಮುನಿಯಪ್ಪ, ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ನಾಗೇಂದ್ರ, ಶಿವರಾಜ್ ತಂಗಡಗಿ, ಸಭಾಪತಿ ಬಸವರಾಜ ಹೊರಟ್ಟಿ, ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರು, ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]